ಭಾಷಾವಾರು ಪ್ರಾಂತ ರಚನೆಯ ನಂತರ ಎಲ್ಲ ರಾಜ್ಯಗಳೂ ಭಾಷಾ ಅಭಿವೃದ್ದಿಯ ವಿಷಯದಲ್ಲಿ ತೊಡಗಿಸಿಕೊಂಡಿವೆ. ಆಯಾ ಪ್ರಾಂತೀಯ ಭಾಷೆಗಳನ್ನು ಆಡಳಿತ, ಶಿಕ್ಷಣ, ಸಮೂಹ ಮಾಧ್ಯಮ ಮುಂತಾದ ವಲಯಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದು ಅದರ ಬೆಳವಣಿಗೆಗೆ ಕಾರಣವಾಗುತ್ತಿವೆ. ಕನ್ನಡವೂ ಈ ದಿಸೆಯಲ್ಲಿ ಹಿಂದೆ ಬಿದ್ದಿಲ್ಲ. ಆಡಳಿತದಲ್ಲಿ. ಶಿಕ್ಷಣ, ನ್ಯಾಯಾಲಯ, ಸಮೂಹ ಸಂವಹನ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ. ಆಡಳಿತಕ್ಕೆ ಅಗತ್ಯವಾದ ಸಾಹಿತ್ಯ ಇಂದು ಕನ್ನಡದಲ್ಲಿ ಸಿಗುತ್ತಿದೆ. ಬಳಕೆಗೆ ಅಗತ್ಯವಾದ ತರಬೇತಿಯನ್ನು ಸರ್ಕಾರ ನೀಡುತ್ತಿದೆ. ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಗೆ ಪ್ರೋನೀಡುತ್ತಿದೆ. ಕನ್ನಡ ತೀರ್ಪುಗಳನ್ನು ಬರೆಯುವ ನ್ಯಾಯಾಧೀಶರಿಗೆ ಪ್ರೋನೀಡುತ್ತಿದೆ. ಅಂತಹ ತೀರ್ಪುಗಳನ್ನು ಪ್ರಕಟಿಸಿ ಕನ್ನಡದ ಪ್ರಸಾರ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ಕನ್ನಡದಲ್ಲಿ ದಿನಪತ್ರಿಕೆಗಳು, ವಾರಪತ್ರಿಕೆಗಳು, ಟಿವಿ ವಾಹಿನಿಗಳು ಸಾಕಷ್ಟಿವೆ. ಸಿನಿಮಾರಂಗವೂ ಹಿಂದೆ ಬಿದ್ದಿಲ್ಲ. ಅಂದರೆ ಸಮೂಹ ಮಾಧ್ಯಮ ವಲಯದಲ್ಲೂ ಕನ್ನಡದ ಬಳಕೆ ಇದೆ.

ಕನ್ನಡ ಬಳಕೆ ಕುರಿತಂತೆ ಅಥವಾ ಕನ್ನಡದ ಪರ ಕಾಳಜಿವಹಿಸಲು ಅನೇಕ ಸಂಸ್ಥೆಗಳೂ ಇವೆ. ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಚಳುವಳಿಗಾರರು ಇದ್ದಾರೆ. ಈ ಎಲ್ಲರ ಕಣ್ಣಾವಲಿನಿಂದಾಗಿ ಇಂದು ಕನ್ನಡಕ್ಕೆ ಎಲ್ಲ ರಂಗಗಳಲ್ಲೂ ಪ್ರಾಶಸ್ತ್ಯ ಸಿಗುತ್ತಿರುವುದನ್ನು ಕಾಣಬಹುದು.

ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಆಧುನೀಕರಣದ ಪಾತ್ರ ಬಹಳ ಹಿರಿದು. ಎಲ್ಲ ಕಡೆಯೂ ಸ್ವಯಂ ಚಾಲಿತ ವ್ಯವಸ್ಥೆ, ಕಂಪ್ಯೂಟರ್ ಬಳಕೆ ಹೀಗೆ ಆಧುನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತ ಜನರ ನಿರೀಕ್ಷೆಯೇ ಬದಲಾಗುತ್ತಿವೆ. ಎಲ್ಲೆಡೆಯೂ ದಿಢೀರ್ ಬೆಳವಣಿಗೆ ಕಾಣುವ ತನಕವಿದೆ. ಅಂದರೆ ಮಾಹಿತಿ ತಂತ್ರಜ್ಞಾನದ ಮೂಲಕ ಕೆಲಸಗಳನ್ನು ಬೇಗ ಸಾಧಿಸಬೇಕೆಂಬ ಆತುರವಿದೆ. ಆದರೆ ಕನ್ನಡ ಮಾಹಿತಿ ತಂತ್ರಜ್ಞಾನದ ಪ್ರಗತಿ ಅಷ್ಟಾಗಿ ತೃಪ್ತಿದಾಯಕವಾಗಿಲ್ಲ. ಪ್ರಯತ್ನಗಳು ನಡೆಯುತ್ತಿವೆ. ಕನ್ನಡದಲ್ಲಿ ತಂತ್ರಜ್ಞರಿದ್ದಾರೆ. ಗಣಕ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳಿವೆ. ಆದರೂ ಕಂಪ್ಯೂಟರ್‌ನಲ್ಲಿ ಕನ್ನಡ ಬಳಸಲು ಅನೇಕ ತೊಂದರೆಗಳಿವೆ. ಇಂಗ್ಲಿಶಿನಲ್ಲಿ ಸುಲಭವಾಗಿರುವ ಈ ವ್ಯವಸ್ಥೆಯಲ್ಲಿ ಕನ್ನಡದ ಬಳಕೆ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕನ್ನಡ ಬಳಕೆ ಕೇವಲ ಬೆರಳಚ್ಚು ಯಂತ್ರದ ಮಾದರಿಯಲ್ಲಿ ಬೆರಳಚ್ಚು ಮಾಡಿ ಪ್ರತಿ ತೆಗೆಯುವುದಾಗಿದೆ. ಬೇರೆ ಕೆಲಸಗಳು ತಂತ್ರಾಂಶಗಳ ಕೊರತೆಯಿಂದಾಗಿ ಅಥವಾ ಈ ತಂತ್ರಾಂಶಗಳಲ್ಲಿ ಏಕರೂಪತೆ ಇಲ್ಲದಿರುವ ಕಾರಣದಿಂದಾಗಿ ಒಂದು ತಂತ್ರಾಂಶದಲ್ಲಿನ ಕಡತಗಳನ್ನು ಬೇರೊಂದು ತಂತ್ರಾಂಶದಲ್ಲಿ ಪಡೆಯುವುದು ಸಾಧ್ಯವಾಗುತ್ತಿಲ್ಲ. ಕನ್ನಡ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವಂತೆ ಇರುವ ಅಡೆತಡೆಗಳನ್ನು ನಿವಾರಿಸುವಂತ ಕೆಲಸ ಆಗಬೇಕಾಗಿದೆ. ಇದಕ್ಕೆ ಆಗಬೇಕಾಗಿರುವುು ಕನ್ನಡ ತಂತ್ರಾಂಶ ರೂಪಿಸುವವರೆಲ್ಲರೂ ಯುನಿಕೋಡ್ ಬಳಸುವುದು. ಅಲ್ಲದೆ ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ಕೆಲಸ ಮಾಡುತ್ತಿರುವವರು, ತಜ್ಞರು ಆಗಿಂದಾಗ್ಗೆ ಒಂದೆಡೆ ಸೇರಿ ಕನ್ನಡದಲ್ಲಿ ಆಗಿರುವ, ಆಗಬೇಕಾಗಿರುವ ಕೆಲಸಗಳ ಬಗೆಗೆ ಚರ್ಚೆಗಳನ್ನು ಮಾಡುವ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕೆಲಸ ಆಗಬೇಕಾಗಿದೆ. ಕಂಪ್ಯೂಟರ್ ಬಳಸುತ್ತಿರುವವರ ಕನ್ನಡದ ಬಗೆಗಿನ ಸಮಸ್ಯೆಗಳಿಗೆ ಉತ್ತರ ಸಿಗಬಹುದಾದ ಜಾಲತಾಣವೊಂದು ಅವಶ್ಯವಾಗಿದೆ. ಒಟ್ಟಾರೆಯಾಗಿ ತಂತ್ರಜ್ಞಾನದ ವಲಯದಲ್ಲೂ ಕನ್ನಡಕ್ಕೆ ಪ್ರೋನೀಡುವುದು ಇಂದಿನ ಅಗತ್ಯ ಇದರಿಂದ ಕನ್ನಡದ ಪ್ರಸಾರ ಮತ್ತಷ್ಟು ಹೆಚ್ಚಲಿದೆ.