ಇಂದು ಬಳಕೆಯಲ್ಲಿರುವ ಕಂಪ್ಯೂಟರ್ ಈ ಸ್ಥಿತಿಗೆ ಬರುವುದಕ್ಕೆ ಮೊದಲು ಹಲವು ಬದಲಾವಣೆಗಳನ್ನು ಕಂಡಿದೆ. ಇದರ ಆರಂಭವನ್ನು ‘ಅಬಾಕಸ್’ ಗಣಕದಿಂದ ಆರಂಭಿಸಬಹುದಾಗಿದೆ. ಹಾಗಾಗಿ ಅಂದಿನ ಅಬಾಕಸ್ ನಿಂದ ಹಿಡಿದು ಇಂದಿನ ಡಿಜಿಟಲ್ ಕಂಪ್ಯೂಟರ್‌ವರೆಗೆ ಅನೇಕ ಅವಸ್ಥಾಂತರಗಳನ್ನು ಗುರುತಿಸಬಹುದು. ಚಾರ್ಲ್ಸ್ ಬ್ಯಾಬೇಜ್ ಎಂಬ ಕೇಂಬ್ರಿಜ್ ವಿವಿಯ ಪ್ರೊಫೆಸರ್ ಅವರು ಕಂಡ ಕನಸು ಇಂದಿನ ಡಿಜಿಟಲ್ ತಂತ್ರಜ್ಞಾನಕ್ಕ ಮೂಲವಾಗಿದೆ. ಅವರು ೧೮೩೪ರಲ್ಲಿಯೇ ಪ್ರೋಮಾಡಬಲ್ಲ ಕಂಪ್ಯೂಟರ್ ಅಭಿವೃದ್ದಿಪಡಿಸಿದರು. ಹಾಗಾಗಿ ಅವರನ್ನು ಕಂಪ್ಯೂಟರ್ ಲೋಕದ ಪಿತಾಮಹ ಎಂದು ಕರೆಯುತ್ತಾರೆ. ಕಂಪ್ಯೂಟರ್ ಚರಿತ್ರೆಯನ್ನು ಗಮನಿಸಿದರೆ ಅಬ್ಬಾಕಸ್ ನಂತರ ‘ನೇಪಿಯರ್ ಬೋನ್ಸ್’ ಎಂಬ ಗುಣಿಸುವ ಯಂತ್ರದ ಆವಿಷ್ಕಾರವಾಯಿತು. ಇದನ್ನು ೧೬೧೪ರಲ್ಲಿ ಜಾನ್ ನೇಪಿಯರ್ ಎಂಬ ಸ್ಕಾಟಿಶ್ ಗಣಿತಜ್ಞ ಲಾಗರಿದಮ್ ಸಿದ್ಧಾಂತವನ್ನು ಆಧರಿಸಿ ಸಿದ್ಧಪಡಿಸಿದ್ದ. ಮೂಳೆಗಳನ್ನು ಬಳಸಿ ತಯಾರಿಸಲಾದ ಇದರಲ್ಲಿ ಗುಣಿಸುವ ಕೋಷ್ಠಕಗಳನ್ನು ಸ್ತಂಭಗಳಲ್ಲಿ ಹುದುಗಿಸಿದ್ದು ಗುಣಾಕಾರವನ್ನು ಕೂಡುವ ಕ್ರಮ ಅನುಸರಿಸಿಯೂ ಭಾಗಾಕಾರವನ್ನು ಕಳೆಯುವ ಕ್ರಮ ಅನುಸರಿಸಿಯೂ ಮಾಡಲಾಗುತ್ತಿತ್ತು.

ನಂತರ ೧೬೩೦ರಲ್ಲಿ ಕೇಂಬ್ರಿಜ್‌ನ ವಿಲಿಯಂ ಆಟ್ರೆಡ್ ಎಂಬಾತ ಸ್ಲೈಡ್ ರೂಲ್ ಸಾಧನವನ್ನು ಕಂಡುಹಿಡಿದ. ಇದು ಎರಡು ಸ್ಕೇಲುಗಳನ್ನು ಹೊಂದಿದ್ದು ಒಂದು ಇನ್ನೊಂದರ ಮೇಲೆ ಜಾರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇದಕ್ಕೆ ನೇಪಿಯರ್ ಬೋನ್ಸ್ ನ ವಿಘಾತೀಯ(Logarithm) ಗಣಿತವೇ ಆಧಾರ. ನೇಪಿಯರ್ ಬೋನ್ಸ್‌ನ ನಂತರ ಅನಲಾಗ್ ಪ್ಯಾಕೆಟ್ ಕ್ಯಾಲ್‌ಕ್ಯುಲೇಟರ್‌ನಂತೆ ಹೆಚ್ಚು ಬಳಕೆಗೆ ಬಂದಿತು. ೧೯೪೨ರಲ್ಲಿ ಫ್ರೆಂಚ್ ಗಣಿತಜ್ಞ ಹಾಗೂ ತತ್ವಜ್ಞಾನಿ ಬ್ಲೇಸ್ ಪಾಸ್ಕಲ್ ಮೊದಲ ಅಂಕಗಣಿತ ಯಂತ್ರ ಮೆಕ್ಯಾನಿಕಲ್ ಕ್ಯಾಲ್ ಕ್ಯುಲೇಟಿಂಗ್ ಮೆಷಿನ್ ಕಂಡುಹಿಡಿದ. ಇದಕ್ಕೆ ‘ಪಾಸ್ಕಲನ ಅಂಕಗಣಿತ ಯಂತ್ರ’ (Blaise pascal’S Mechanical Calculator) ಎಂದು ಕರೆಯಲಾಗುತ್ತಿತ್ತು. ಈತನ ತಂದೆ ಟ್ಯಾಕ್ಸ್ ಸೂಪರಿಂಡೆಂಡಂಟ್ ಆಗಿದ್ದ. ಈಗಿನ ಶ್ರೀಘ್ರ ವ್ಯವಹಾರಗಳಿಗೆ ಅನುವಾಗಲೆಂದು ಈ ಯಂತ್ರ ಕಂಡುಹಿಡಿದ. ಇದು ಹಲ್ಲುಗಳಿರುವ ಚಕ್ರಗಳನ್ನು ಹೊಂದಿದ್ದು ಒಂದರಿಂದ ಒಂಭತ್ತು ಸ್ಥಾನಗಳತನಕ ತಿರುಗಿಸಿ ದಶಮಾಂಶದ ಮೌಲ್ಯಾಂಕವನ್ನು ದಾಖಲಿಸುತ್ತಿತ್ತು. ಕೂಡಿ, ಕಳೆದು, ಗುಣಿಸಿ, ಭಾಗಿಸುವ ಸಾಮರ್ಥ್ಯ ಈ ಯಂತ್ರಕ್ಕಿತ್ತು. ಕೂಡುವ ಮತ್ತು ಕಳೆಯುವ ಕ್ರಿಯೆಗಳಿಂದಲೇ ಗುಣಿಸುವ ಮತ್ತು ಭಾಗಿಸುವ ಕಾರ್ಯಗಳನ್ನು ವಹಿಸಲಾಗುತ್ತಿತ್ತು.

ಚಾರ್ಲ್ಸ್‌ಬ್ಯಾಬೇಜ್ ಎಂಬ ಆಂಗ್ಲವಿಜ್ಞಾನಿ ಮತ್ತು ಗಣಿತಜ್ಞ ೧೮೨೨ರಲ್ಲಿ ಅವಕಲನ ಎಂಜಿನನ್ನು ಕಂಡುಹಿಡಿದ. ವಿವಿಧ ರೀತಿಯ ಗಣಿತದ ಕ್ರಿಯೆಯನ್ನು ನಿರ್ವಹಿಸಲು ಸಾಧ್ಯವಾಗುವಂಥ ಯಂತ್ರ ಇದಾಗಿತ್ತು. ಸಾವಿರಾರು ಅಂಕಿಗಳನ್ನು ತಪ್ಪಿಲ್ಲದೇ ಗುಣಿಸುವ ಸಾಮರ್ಥ್ಯವನ್ನು ಇದು ಹೊಂದಿತ್ತು.

ನಂತರ ೧೮೩೪ರ ಹೊತ್ತಿಗೆ ಇದೇ ಚಾರ್ಲ್ಸ್‌ಬ್ಯಾಬೇಜ್ ಮತ್ತೊಂದು ಹೊಸ ಯಂತ್ರವನ್ನು ವಿನ್ಯಾಸಗೊಳಿಸಿದ. ಇದೇ ‘ಮೊಟ್ಟಮೊದಲ ಡಿಜಿಟಲ್ ಕಂಪ್ಯೂಟರ್’ ಎಂದು ಖ್ಯಾತಿಗೆ ಪಾತ್ರವಾಯಿತು. ಈತ ಕಂಡುಹಿಡಿದ ಡಿಫೆರೆನ್ಸಿಯಲ್ ಇಂಜಿನ್ ಅವಕಲನ ಯಂತ್ರದ ಸುಧಾರಿತ ರೂಪವೇ ವಿಶ್ಲೇಷಕ ಯಂತ್ರ. (Analyatical Engine). ಇದೇ ಇಂದಿನ ಕಂಪ್ಯೂಟರಿನ ಉಗಮಕ್ಕೆ ಕಾರಣವಾಗಿದ್ದು, ಇದರಲ್ಲಿ ಐದು ಪ್ರಮುಖ ಕ್ರಿಯಾತ್ಮಕ ಘಟ್ಟಗಳಿದ್ದವು.

೧. ದತ್ತಾಂಶ ಅಳವಡಿಕೆ ಘಟಕ

೨. ಸ್ಮೃತಿ ಘಟಕ

೩. ಸಂಸ್ಕೃರಣ ಘಟಕ

೪. ನಿಯಂತ್ರಣ ಘಟಕ

೫. ಫಲಿತಾಂಶ ಘಟಕ

ಈ ಯಂತ್ರಕ್ಕೆ ಕಾರ್ಯವಿಧಿಗಳನ್ನು(ಪ್ರೋ) ಕವಿತಾರ್ಡ್‌ಭೈರನ್ ಮಗಳು ಅಡಾಭೈರನ್ ಎಂಬ ಗಣಿತಜ್ಞೆ ಬರೆದಳು. ಈಕೆಯೇ ಕಂಪ್ಯೂಟರ್ ಲೋಕದ ‘ಪ್ರಪ್ರಥಮ ಪ್ರೋ’ ಎಂದು ಖ್ಯಾತಿ ಪಡೆದಿದ್ದಾಳೆ. ಚಾರ್ಲ್ಸ್‌ಬ್ಯಾಬೇಜ್ ಸುಮಾರು ನಲವತ್ತು ವರ್ಷಗಳ ಕಾಲ ಅನಲಿಟಿಕಲ್ ಎಂಜಿನ್ ಮೇಲೆ ಕೆಲಸ ಮಾಡಿದರೂ ಅದನ್ನು ಆತನ ಪರಿಕಲ್ಪನೆಯಂತೆ ಅಭಿವೃದ್ದಿ ಪಡಿಸಲಾಗಲಿಲ್ಲ. ಇದಕ್ಕೆ ಅಂದಿನ ತಾಂತ್ರಕ ಕೊರತೆ ಹಾಗೂ ಆರ್ಥಿಕ ಸಮಸ್ಯೆ ಮುಖ್ಯ ಕಾರಣವಾಯಿತು. ಇದು ಸಾಕ್ಷಾತ್ಕಾರಗೊಳ್ಳಲು ಒಂದು ಶತಮಾನವೇ ಕಾಯಬೇಕಾಯಿತು. ಇಂದು ಅದೇ ತಳಹದಿಯ ಮೇಲೆ ಡಿಜಿಟಲ್ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಕಾರಣಕ್ಕಾಗಿ ಚಾರ್ಲ್ಸ್‌ಬ್ಯಾಬೇಜ್ ನನ್ನು ಗಣಕಗಳ ಜನಕನೆಂದು ಕರೆಯಲಾಗುತ್ತದೆ.

ಗಣಕಗಳ ಪೀಳಿಗೆ

೧೯೪೫ರ ಬಳಿಕ ಕಾಣುವ ಇಪ್ಪತ್ತನೇ ಶತಮಾನದ ಕಂಪ್ಯೂಟರ್ ಇತಿಹಾಸವನ್ನು ಪೀಳಿಗೆ ಅಥವಾ ತಲೆಮಾರುಗಳಲ್ಲಿ ವಿಂಗಡಿಸಲಾಗುತ್ತದೆ.

೧. ಮೊದಲ ಪೀಳಿಗೆ – ೧೯೪೫-೧೯೫೫

೨. ಎರಡನೆ ಪೀಳಿಗೆ – ೧೯೫೬-೧೯೬೪

೩. ಮೂರನೇ ಪೀಳಿಗೆ – ೧೯೬೫-೧೯೭೪

೪. ನಾಲ್ಕನೇ ಪೀಳಿಗೆ – ೧೯೭೫-೧೯೭೯

೫. ಐದನೇ ಪೀಳಿಗೆ – ೧೯೮೦ರ ನಂತರ

. ಮೊದಲ ಪೀಳಿಗೆ

೧೯೪೬ರಲ್ಲಿ ನಿರ್ವಾತ ಕೊಳವೆ (Vacuum Tubes)ಗಳನ್ನು ಬಳಸಿ ಪೆನ್ಸಿಲ್ ವೇನಿಯಾ ವಿಶ್ವವಿದ್ಯಾಲಯದ ಜೆ.ಪಿ.ಎಕರ್ಟ್ ಮತ್ತು ಜೆ.ಡಬ್ಲು ಮೌಚಲೀ ಎನ್ನುವ ತಂತ್ರಜ್ಞರು ಈ ಯಂತ್ರವನ್ನು ತಯಾರಿಸಿದರು. ಇಂಥ ನಿರ್ವಾತ ಕೊಳವೆಗಳ ಆಧಾರದ ಮೇಲೆ ರಚಿತವಾದ ಮೊಟ್ಟ ಮೊದಲ ಕಂಪ್ಯೂಟರ್ ‘‘ಎನಿಯಾಕ್ -ವಿದ್ಯುನ್ಮಾನ ಗಣಕ ಯಂತ್ರ’’ (ENIAC-Electronic Numerical Integrator and Calculator). ಇದಕ್ಕೆ ೧೮,೦೦೦ ನಿರ್ವಾತ ಕೊಳವೆಗಳು ೭೦,೦೦೦ ರೆಸಿಸ್ಟರ್ಸ್‌ನಲ್ಲಿ, ೧೦,೦೦೦ ಕೆಪ್ಯಾಸಿಟರ್ಸ್, ೬೦,೦೦೦ ಸ್ವಿಚಸ್ , ೮೦೦ ಕಿ.ಮೀ. ತಂತಿಗಳನ್ನು ಬಳಸಲಾಗಿತ್ತು. ಇದು ೨೦x೪೦ ಚ.ಅ. ದೊಡ್ಡಕೋಣೆಯನ್ನು ಆಕ್ರಮಿಸುವಷ್ಟು ದೊಡ್ಡದಿತ್ತು. ೩೦ ಟನ್ ಭಾರವಿತ್ತು. ಈ ಹಿಂದಿನ ಕಂಪ್ಯೂಟರಿಗಿಂತ ೧೦೦೦ ಪಟ್ಟು ವೇಗ ಹೊಂದಿದ್ದು ಅಮೇರಿಕೆಯ ಭೂಸೇನೆಯಲ್ಲಿ ಇದನ್ನು ಬಳಸುತ್ತಿದ್ದರು. ಈ ಯಂತ್ರವು ಮಾಹಿತಿಗಳನ್ನು ಸಂಪೂರ್ಣ ಡಿಜಿಟಲ್ ರೂಪದಲ್ಲಿ ಸಾಗಾಟ ಮಾಡುತ್ತಿತ್ತು. ಈ ಪೀಳಿಗೆ (Assembly Language)ಯಲ್ಲಿ ಕ್ರೋಡೀಕೃತ ಭಾಷೆಯನ್ನು ಬಳಸಲಾಯಿತು. ಈ ಭಾಷೆ ಯಂತ್ರದ ಭಾಷೆಗಿಂತ ಸರಳವಾಗಿತ್ತು.

ಪೀಳಿಗೆಯ ಇತಿಮಿತಿಗಳು

೧. ನಿಧಾನಗತಿಯ ಆಪರೇಟಿಂಗ್ ಸ್ಪೀಡ್ , ಮಿತಿಯಾದ ಪ್ರೋ.

೨. ಹೆಚ್ಚು ಪ್ರಮಾಣದ ವಿದ್ಯುತ್ ಅಗತ್ಯತೆ

೩. ಗಾತ್ರದಲ್ಲಿ ಅತಿ ದೊಡ್ಡದು.

. ಎರಡನೆಯ ಪೀಳಿಗೆ

೧೯೫೫ರಲ್ಲಿ ಸಾಗಾಟ (ಟ್ರಾನ್ಸಿಸ್ಟರ್) ವಸ್ತುವನ್ನು ನಿರ್ವಾತ ನಳಿಕೆಗಳ ಬದಲಾಗಿ ಬಳಸಿ ಗಣಕಯಂತ್ರವನ್ನು ಅಭಿವೃದ್ದಿಪಡಿಸಲಾಯಿತು. ಆಫ್ ಹಾಗೂ ಆನ್ ತಂತ್ರದಲ್ಲೇ ಸೃಷ್ಟಿಗೊಳ್ಳುವಂತಹ ಬೈನರೀ ಡಿಜಿಟಲ್ಸ್ ಪ್ರಪಂಚಕ್ಕೆ ಟ್ರಾನಿಸ್ಟರ್ ಅತ್ಯಂತ ಮಹತ್ವದ ಕೊಡುಗೆ ನೀಡಿತು. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು ಕಡಿಮೆ ಬೆಲೆಯದಾಗಿದ್ದು ಕಡಿಮೆ ವಿದ್ಯುತ್ ಬಳಕೆಯನ್ನು ಅಪೇಕ್ಷಿಸುತ್ತದೆ. ವಿಶ್ವಸನೀಯ ಸಂಸ್ಕರಣಾ ಸಾಮರ್ಥ್ಯದಿಂದಾಗಿ ಹೆಚ್ಚು ವೇಗವಾಗಿ ಕೆಲಸ ನಿರ್ವಹಿಸುತ್ತದೆ. ಉತ್ತಮ ಭಾಷಾ ಸಾಮರ್ಥ್ಯವನ್ನು ಇದಕ್ಕೆ ಅಳವಡಿಸಲಾಯಿತು. ಅವುಗಳಲ್ಲಿ ಬೇಸಿಕ್, ಪೋರ್‌ಟ್ರಾನ್, ಕೋಬಾಲ್ ಮುಂತಾ ಭಾಷೆಗಳು ಹೆಸರಿಸುವಂಥವು.

. ಮೂರನೆಯ ಪೀಳಿಗೆ

ಮೂರನೇ ಜನರೇಷನ್ನಿನಲ್ಲಿ ಒಂದೇ ಸಣ್ಣ ಚಿಪ್ಪಿನಲ್ಲಿ (Integrated Circuits) ಅನೇಕ ಟ್ರಾನ್ಸಿಸ್ಟರನ ವಿದ್ಯುತ್ ಮಂಡಲಗಳು ಕ್ರೋಡೀಕರಿಸಲ್ಪಟ್ಟು ಮಿನಿಕಂಪ್ಯೂಟರ್ ಗಳು ಪ್ರಸಿದ್ದಿಗೆ ಬಂದವು. ಇದು ಗಾತ್ರದಲ್ಲಿ ಚಿಕ್ಕದು, ಬೆಲೆಯೂ ಕಡಿಮೆ, ಮೆಮೋರಿ ಸಾಮರ್ಥ್ಯ ಜಾಸ್ತಿ ಹೊಂದಿದ್ದವು.

. ನಾಲ್ಕನೆಯ ಪೀಳಿಗೆ

ಒಂದೇ ಸಿಲಿಕಾನ್ ಚಿಪ್ಪಿನಲ್ಲಿ ಮಿಲಿಯಾಂತರ ವಿದ್ಯುನ್ಮಾನ ಭಾಗಗಳನ್ನು ಅಳವಡಿಸಿ ತಯಾರಿಸಲಾಯಿತು. ಇವುಗಳಲ್ಲಿ ಸೂಕ್ಷ್ಮ ಸಂಸ್ಕಾರಕಗಳ (Micro processor)ನ್ನು ಬಳಸಲಾಯಿತು. ಇಂಥ ಕಂಪ್ಯೂಟರನ್ನು ಮೈಕ್ರೋಕಂಪ್ಯೂಟರ್ ಎಂದು ಕರೆಯಲಾಯಿತು. ಸಂಸ್ಕಾರಕಗಳನ್ನು ತಯಾರಿಸುವ ಪ್ರಥಮ ಕಂಪೆನಿ ಇಂಟೆಲ್ ೧೯೭೧ರಲ್ಲಿ ಈ ಮಾದರಿಯ Intel ೪೦೦೪ನ್ನು ಅಭಿವೃದ್ದಿಪಡಿಸಿತು. ಇವು ಹೆಚ್ಚಿನ ಸಾಮರ್ಥ್ಯ ಹೊಂದಿದ್ದವು. ಹಿಂದಿನವುಗಳಿಗಿಂತ ವೇಗದಲ್ಲಿ ೧೦೦ ಮೆಗಾ ಆಪರೇಷನ್ಸ್ ಮಾಡಬಲ್ಲವಾಗಿದ್ದವು.

. ಐದನೆಯ ಪೀಳಿಗೆ

ಈ ಪೀಳಿಗೆಯ ಕಂಪ್ಯೂಟರ್‌ಗಳು ಎಂಥ ಸೂಕ್ಷ್ಮತೆಯನ್ನು ಹೊಂದಿದ್ದವೆಂದರೆ ಗಡಿಯಾರಗಳಲ್ಲಿ, ಮೊಬೈಲುಗಳಲ್ಲಿ, ದೂರವಾಣಿಗಳಲ್ಲಿ ಅಳವಡಿಸಬಹುದಾಗಿತ್ತು. ಈ ಪೀಳಿಗೆಯಲ್ಲಿ ೧೯೯೩ Intel pentium I, II, IV, Intel celeron, AMD Athon, AMD sempron ಇತ್ಯಾದಿ ಪ್ರಮುಖವಾದಂಥವು. ಮಾನವ ಬೆಳಕಿನ ವೇಗದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ಕಾಲ. ಏಕಕಾಲದಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಲ್ಲ. ಪ್ಯಾರಲಲ್ ಪ್ರಾಸೆಸಿಂಗ್ ತಾಂತ್ರಕತೆ ಕಂಪ್ಯೂಟರ್ ಗಳಲ್ಲಿ ಅಧಿಕ ಪ್ರಮಾಣದ ಇಂಟಿಗ್ರೇಟೆಡ್ ಸರ್ಕ್ಯೂಟ್ಸ್ ಬಳಕೆಯಾಗುತ್ತಿವೆ. ಇವುಗಳ ವೇಗ ಸೆಕೆಂಡಿಗೆ ೧೦೦ ಮಿಲಿಯನ್ ನಿಂದ ಒಂದು ಬಿಲಿಯನ್ ಲಾಜಿಕಲ್ ಆಪರೇಷನ್ಸ್ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದೀಗ ವೆರೀಲಾರ್ಜ್‌ಸ್ಕೇಲ್ ಮತ್ತು ಅಲ್ಪ್ರಾಲಾರ್ಜ್‌ಸ್ಕೇಲ್ ಇಂಟಿಗ್ರೇಟೆಡ್ ಸರ್ಕ್ಯೂಟ್ಸ್ ತಾಂತ್ರಿಕತೆ ಬಂದಿದೆ. ಸಿಲಿಕಾನ್ ಬದಲಿಗೆ ಗ್ರಾಲಿಯಮ್ ಆರ್ಸೆನೈಡ್ ಬಳಸುವ ಪ್ರಯತ್ನಗಳು ನಡೆದಿವೆ. ಮುಂದೆ ಪೋಟೋನಿಕ್ ಕಂಪ್ಯೂಟರಗಳೂ ಬರಲಿವೆ. ಇವು ಎಲೆಕ್ಟ್ರಾನಿಕ್  ಕಂಪ್ಯೂಟರ್‌ಗಿಂತ ಸಾವಿರಾರು ಪಟ್ಟು ಹೆಚ್ಚು ವೇಗವನ್ನು ಹೊಂದಿರುತ್ತವೆ. ಈಗಾಗಲೇ ಜಪಾನೀಯರು ಸೂಪರ್ ಕಂಪ್ಯೂಟರ್ಸ್ ತಯಾರಿಕೆಯಲ್ಲಿ ಐದನೇ ತಲೆಮಾರಿನ ಕಂಪ್ಯೂಟರ್‌ಗಳನ್ನು ‘ನಾಲೆಡ್ಜ್ ಇನ್ ಫಾರ್ಮೇಶನ್ ಪ್ರಾಸೆಸಿಂಗ್ ಸಿಸ್ಟಮ್ಸ್’ ಎಂದು ಹೆಸರಿಸಿದ್ದು ಅವುಗಳಿಗೆ ಮಾನವನಂತೆ ಆಲೋಚನೆ ಮಾಡುವ ಶಕ್ತಿಯನ್ನು ಕೃತಿಕವಾಗಿ ಅಳವಡಿಸಿದ್ದಾರೆ. ಅವು ಮಾನವನಿಗಿಂತಲೂ ಮಿಗಿಲಾಗಿ ಕೆಲಸ ಮಾಡಿರುವುದನ್ನು ಸಾಧಿಸಿ ತೋರಿಸಿದ್ದಾರೆ.

ಕಂಪ್ಯೂಟರ್ ಮತ್ತು ಕನ್ನಡ ಬಳಕೆ

ಆರಂಭದ ಹಂತದಲ್ಲಿ ಕೀ ಬೋರ್ಡಿನಲ್ಲಿನ ಕೀಲಿಮಣೆಗಳನ್ನು ಕುಟ್ಟಿ ಕುಟ್ಟಿ ಕೆಲಸ ಮಾಡಬೇಕಾಗಿತ್ತು. ಕುಟ್ಟಿದ ಅಕ್ಷರ ಅಥವಾ ಸಂಖ್ಯೆಯನ್ನು ಕಂಪ್ಯೂಟರ್ ಅರ್ಥಮಾಡಿಕೊಂಡು ತೆರೆಯ ಮೇಲೆ ಮೂಡಿಸುತ್ತಿತ್ತು. ವಿಂಡೋಸ್ ಸಾಫ್ಟ್‌ವೇರ್ ಬಂದ ಮೇಲೆ ಈ ಕೀಲಿ ಕುಟ್ಟುವ ವಿಧಾನ ಪರಿವರ್ತನೆ ಹೊಂದಿ ನಮಗೆ ಬೇಕಾದ ಅಕ್ಷರವುಳ್ಳ ಕೀಲಿಮಣೆ ಮೇಲೆ ಮೃದುವಾಗಿ ಒತ್ತಿದರೆ ನಮಗೆ ಅಗತ್ಯವಾದ ಅಕ್ಷರ ಅಥವಾ ಸಂಖ್ಯೆ ದರ್ಶಕದ ಮೇಲೆ ಮೂಡುತ್ತದೆ. ತಂತ್ರಾಂಶ ನಿರ್ಮಿತಿಕಾರರಲ್ಲಿ ಹೆಚ್ಚಿನವರು ಕನ್ನಡಿಗರು. ಅದರಲ್ಲೂ ಬೆಂಗಳೂರಿನವರೇ ಅಧಿಕ ಪ್ರಮಾಣದಲ್ಲಿ ಕೆಲಸ ನಿರ್ವಹಿಸುತ್ತಿರುವುದರ ಒಂದು ಪ್ರಯೋಜನ ಕನ್ನಡಕ್ಕಾಗುತ್ತಿದೆ. ಇಂಥ ಕನ್ನಡ ಪ್ರಜ್ಞೆಯ ಸ್ಥಳೀಯ ತಂತ್ರಜ್ಞರ ಸೇವೆಯನ್ನು ಕರ್ನಾಟಕ ಸರ್ಕಾರ, ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಗಣಕ ಪರಿಷತ್ತುಗಳು ಬಳಸಿಕೊಂಡು, ಕನ್ನಡವನ್ನೇ ತಂತ್ರಜ್ಞಾನದ ಭಾಷೆಯನ್ನಾಗಿ ಸಶಕ್ತಗೊಳಿಸುತ್ತಿರುವುದು ಗಮನಾರ್ಹ ಸಂಗತಿ. ಕನ್ನಡ ಕೀಲಿಮಣೆಯನ್ನು ಏಕರೂಪಗೊಳಿಸುವ ಗೆಝೆುಟ್ ಪ್ರಕಟಣೆಯನ್ನು ಸರಕಾರ ಹೊರಡಿಸಿದ್ದು ಉತ್ತಮ ಬೆಳವಣಿಗೆ. ಅಲ್ಲದೆ ಇದೇ ಸಂಸ್ಥೆಗಳು ಮುಂದುವರೆದು ಕನ್ನಡ ಕೀಬೋರ್ಡ್ ಫಾರ್ಮ್ಯಾಟ್ ರೂಪಿಸಿವೆ. ಸಿಡಾಕ್ ನೆರವಿನಿಂದ ಕನ್ನಡ ಕಚೇರಿ ಎನ್ನುವ ಕನ್ನಡ ಸಾಫ್ಟ್‌ವೇರನ್ನು ಪ್ರಾಯೋಗಿಕವಾಗಿ ಹೊರತರಲಾಗಿದೆ. ಮೇಲಾಗಿ ಕಲಿತ ಸಾಫ್ಟ್‌ವೇರನ್ನು ಕಾರ್ಯಗತಗೊಳಿಸಿರುವುದು ಕನ್ನಡ ಭಾಷೆಗೆ ಕಂಪ್ಯೂಟರ್‌ನಲ್ಲಿ ಮಹತ್ವದ ಮುನ್ನಡೆ ದೊರೆತಂತಾಗಿದೆ. ಇತ್ತೀಚೆಗೆ ಆವಿಷ್ಕಾರಗೊಂಡ ‘ಕನ್ನಡ ಸೌರಭ’ ತಂತ್ರಾಂಶವೂ ಕೂಡ ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಅಲ್ಲದೆ ಲಿಪ್ಯಂತರ ಸಮಸ್ಯೆಗಳನ್ನು ಹೋಗಲಾಡಿಸುವ ದೃಷ್ಟಿಯಿಂದ ‘ಗ್ಲಿಫ್’ ಮತ್ತು ಗ್ಲಿಫ್ ಕೋಡ್ (ಅಕ್ಷರಭಾಗ ಮತ್ತು ಸಂಕೇತ ಭಾಗ)ಗಳಲ್ಲಿ ಗಣಕ ಪರಿಷತ್ತು ಏಕರೂಪತೆಯನ್ನು ಸಾಧಿಸುತ್ತಿದೆ.

ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆಗೆ ಹಲವು ಸಮಸ್ಯೆಗಳಿದ್ದರೂ ನಿಧಾನವಾಗಿ ಅದು ಕಾರ್ಯಗತವಾಗುತ್ತಿರುವುದು ಸಂತಸದ ವಿಷಯ. ‘ಶಬ್ದಸಂಸ್ಕರಣ’ (ವರ್ಡ್‌ಪ್ರೊಸಸಿಂಗ್) ‘ದತ್ತ ಸಂಸ್ಕರಣ’(ಡೇಟಾ ಪ್ರೋ) ಮತ್ತು ಇಂಟರ್ ನೆಟ್ ಹೀಗೆ ಬಹುಮುಖ್ಯವಾಗಿ ಮೂರು ಹಂತಗಳಲ್ಲಿ ಕಂಪ್ಯೂಟರ್ ಬಳಕೆಯಾಗುತ್ತದೆ. ಇದರಲ್ಲಿ ಶಬ್ದಸಂಸ್ಕರಣ ಮಾತ್ರ ಯಶಸ್ವಿಯಾಗಿ ಆಗುತ್ತದೆ. ಉಳಿದೆರಡು ಸಾಧಿಸಬೇಕಾದದ್ದು ಬಹಳಷ್ಟು ಇದೆ. ಬೇರೆ ಬೇರೆ ಕಂಪನಿಗಳು ತಮ್ಮದೇ ಆದ ಹಿನ್ನೆಲೆಯಲ್ಲಿ ಅನೇಕ ಸಾಫ್ಟ್‌ವೇರ್‌ಗಳನ್ನು ಹೊರತಂದಿದ್ದರೂ ಹೆಚ್ಚಿನವು ಶಬ್ದ ಸಂಸ್ಕರಣಕ್ಕೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಒಂದರೊಂದಿಗೆ ಇನ್ನೊಂದು ಹೊಂದಾಣಿಕೆಯಾಗುತ್ತಿಲ್ಲ. ಇದರಿಂದ ದತ್ತ ಸಂಸ್ಕರಣೆ ದುರ್ಲಭವಾಗಿದೆ. ಇದುವರೆಗೂ ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ ಎಂದರೆ ಎಲ್ಲಾ ದತ್ತಾಂಶಗಳನ್ನು ಕಂಪ್ಯೂಟರಿನಲ್ಲಿ ಕನ್ನಡದಲ್ಲಿ ಕೂಡಿಸುವುದಾಗಿತ್ತು. ಆದರೆ ಅದನ್ನು ಇನ್ನೊಂದು ವಿಭಾಗದ ಅಥವಾ ಇಲಾಖೆಯ ಕಂಪ್ಯೂಟರಿಗೆ ವರ್ಗಾಯಿಸುವುದು ಅಸಾಧ್ಯವಾಗಿತ್ತು. ಕನ್ನಡ ಗಣಕ ಪರಿಷತ್ತು ಸಾಫ್ಟ್‌ವೇರ್‌ಗಳಲ್ಲಿ ಶಿಷ್ಟತೆ ಮತ್ತು ಏಕರೂಪತೆಯನ್ನು ತರುವ ಮೂಲಕ ಇಂಥ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಪ್ರತಿ ಗಳಿಗೆಗೂ ವಿದ್ಯುನ್ಮಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಆವಿಷ್ಕಾರಗಳು, ಬಡವ ಶ್ರೀಮಂತಿಕೆಯ ಅಂತರವನ್ನು ಜಾಸ್ತಿ ಮಾಡುತ್ತಿವೆ. ಕರ್ನಾಟಕದ ಬಹು ಭಾಗಗಳಲ್ಲಿನ್ನೂ ಕಂಪ್ಯೂಟರ್ ಕೀಬೋರ್ಡ್ ಒತ್ತಲು ಪ್ರಯಾಸಪಡುವ ಹಂತದಲ್ಲೇ ಬೆಂಗಳೂರಿನಂತಹ ನಗರಗಳಲ್ಲಿ ಕೀಬೋರ್ಡ್ ಇಲ್ಲದೆ, ಟೈಪಿಂಗ್‌ನ ಅವಶ್ಯಕತೆ ಇರದೇ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಹೆಚ್ಚುತ್ತಿವೆ. ಅಷ್ಟೇ ಏಕೆ? ಕಂಪ್ಯೂಟರಿನ ಬೃಹತ್ ಜಾಲದ ಬದಲಾಗಿ ಸಣ್ಣ ಸಣ್ಣ ಕಂಪ್ಯೂಟರ್‌ಗಳು ‘ಸಿಂಪ್ಯೂಟರ್ ’ನಂತಹ ಸಂಪರ್ಕ ಸಾಧನಗಳು ಇಂದು ಬಳಕೆಗೆ ಬರುತ್ತಿವೆ. ನಮ್ಮ ದೇಶದ ದೊಡ್ಡ ನಗರಗಳಲ್ಲಿ ಮಾತ್ರ ಮಾಹಿತಿ ತಂತ್ರಜ್ಞಾನ ಸೊಂಪಾಗಿ ಹರಡುತ್ತಿದೆ. ಇಂಗ್ಲಿಶ್ ಭಾಷೆ ಬಲ್ಲ ಕೆಲವು ಪಟ್ಟಣ ವಾಸಿಗಳು ಮಾತ್ರ ಕಂಪ್ಯೂಟರ್ ಯಂತ್ರವನ್ನು ಲೀಲಾಜಾಲವಾಗಿ ಬಳಸುತ್ತಿದ್ದಾರೆ.

ಭಾರತವನ್ನು ಕಂಪ್ಯೂಟರ್ ಲಘುವರ(ಸಾಫ್ಟ್ ವೇರ್) ಉದ್ದಿಮೆಯಲ್ಲಿ ಪ್ರಬಲ ರಾಷ್ಟ್ರವೆಂದು ಗುರುತಿಸಲಾಗಿದೆ. ಅದರಲ್ಲೂ ಬೆಂಗಳೂರು ಸಾಫ್ಟ್‌ವೇರ್ ತಂತ್ರಜ್ಞಾನ ಹಾಗೂ ತಂತ್ರಜ್ಞರ ದೃಷ್ಟಿಯಿಂದ ಕನ್ನಡಕ್ಕೆ ವಿಶ್ವಮಟ್ಟದ ವ್ಯಾಪ್ತಿಯನ್ನು ತಂದುಕೊಟ್ಟಿದೆ. ಆದರೆ ಕನ್ನಡದ ದೃಷ್ಟಿಯಿಂದ ಆಗಬೇಕಾದ ಕೆಲಸ ಹಿನ್ನಡೆಯಲ್ಲಿದೆ ಎನ್ನುವುದು ಅಷ್ಟೇ ಸ್ಪಷ್ಟ.

ತಂತ್ರಾಂಶದ ಬಳಕೆ

ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರದಲ್ಲಿ ಸಂಪದ್ಭರಿತವಾಗಿದೆ. ಆದರೆ ವಿಜ್ಞಾನ ತಂತ್ರಜ್ಞಾನ, ವಾಣಿಜ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಕನ್ನಡದ ಪ್ರಾಬಲ್ಯ ಇನ್ನೂ ಗಟ್ಟಿಯಾಗಿಲ್ಲ. ಇದಕ್ಕೆ ಇಂಗ್ಲಿಶ್ ಒಂದೇ ತಂತ್ರಜ್ಞಾನದ ಭಾಷೆ ಎನ್ನುವ ಪೂರ್ವಗ್ರಹಗಳು, ಕನ್ನಡಿಗರ ಇಚ್ಛಾಶಕ್ತಿಯ ಕೊರತೆಯಂತಹ ಅಂಶಗಳೂ ಕಾರಣವಾಗಿವೆ. ಪ್ರೊ.ಚಂದ್ರಶೇಖರ ಪಾಟೀಲ ಅವರ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ. ‘ತಂತ್ರಜ್ಞಾನದ ಅನುಷ್ಠಾನಕ್ಕೆ ಭಾಷೆಯ ಬಂಧವಿಲ್ಲ. ತಂತ್ರಜ್ಞಾನವು ಒಂದು ಜೀವವಿಲ್ಲದ ಮೈಕಿನಂತೆ, ಅದರ ಮುಂದೆ ನಿಂತು ನಾವು ಯಾವ ಭಾಷೆಯಲ್ಲಿ ಮಾತನಾಡಿದರೂ ಅದು ಆ ಭಾಷೆಯನ್ನೇ ಒದರುತ್ತದೆ’. ಗಣಕವೂ ಅಷ್ಟೇ. ನಾವು ತಂತ್ರಜ್ಞಾನವನ್ನು ನಮ್ಮ ಜನರಿಗೆ ತಿಳಿಸಬೇಕಾದರೆ ನಮ್ಮ ಭಾಷೆಯನ್ನು ಉಳಿಸಲೇಬೇಕಾಗುತ್ತದೆ. ಅತಿ ವೇಗದಿಂದ ಸಾಗುತ್ತಿರುವ ಈ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳು ನಿತ್ಯವೂ ನಡೆಯುತ್ತಿವೆ. ಆ ನಿಟ್ಟಿನಲ್ಲಿ ಭಾಷೆಗಳು ಮತ್ತು ಜನ ಬದುಕು ಈ ಹೊಸತನವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನವನ್ನು ನಡೆಸಬೇಕಾಗುತ್ತದೆ. ತಮ್ಮ ನಾಡಭಾಷೆಯನ್ನು ಬಳಸಿಕೊಂಡು ತಂತ್ರಜ್ಞಾನವನ್ನು ಸಾಮಾನ್ಯರ ಆಸಕ್ತಿ ಕೆರಳಿಸುವ ಹಾಗೂ ಸ್ವ-ಭಾಷೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಆರ್ಥಿಕ ಮುನ್ನಡೆಯೊಂದಿಗೆ ಪ್ರಗತಿ ಸಾಧಿಸಿದಂತಹ ಹಲವಾರು ಉದಾಹರಣೆಗಳಿವೆ. ಕನ್ನಡದಲ್ಲಿಯೂ ಕೂಡ ಈ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಕರ್ನಾಟಕ ಸರಕಾರ, ಕನ್ನಡ ವಿಶ್ವವಿದ್ಯಾಲಯ, ಗಣಕ ಪರಿಷತ್ತು, ಕನ್ನಡ ಅಭಿವೃದ್ದಿ ಪ್ರಾಧಿಕಾರ ಮತ್ತು ಖಾಸಗಿ ವಲಯದ ವ್ಯಕ್ತಿಗಳು, ಸಂಸ್ಥೆಗಳು ಬೆಂಗಾವಲಾಗಿ ನಿಂತಿರುವುದು ಔಚಿತ್ಯಪೂರ್ಣವಾಗಿದೆ. ಬರೀ ಹತ್ತು ವರ್ಷಗಳಿಂದೀಚೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ ಶುರುವಾಗಿದ್ದು ಗಮನಾರ್ಹ.

ಭಾಷೆಯ ಬಳಕೆಯಲ್ಲಿ ಕಂಪ್ಯೂಟರ್ ನಿಜಕ್ಕೂ ದಡ್ಡ ಶಿಖಾಮಣಿ. ಅದಕ್ಕೆ ಯಾವುದೇ ಭಾಷೆ ಬರುವುದಿಲ್ಲ. ನೇರ ಅರ್ಥವಾಗುವುದೂ ಇಲ್ಲ. ಅದಕ್ಕೆ ಗೊತ್ತಿರುವುದು ಎರಡೇ ಭಾಷೆ. ಒಂದು ವಿದ್ಯುಚ್ಛಕ್ತಿ ಇರುವಿಕೆ. ಮತ್ತೊಂದು ವಿದ್ಯುಚ್ಛಕ್ತಿ ಇಲ್ಲದಿರುವಿಕೆ. ಅದನ್ನು ಕಂಪ್ಯೂಟರ್ ಭಾಷೆಯಲ್ಲಿ ೧ ಮತ್ತು ‘೦’ ಎಂದು ಗುರುತಿಸುತ್ತಾರೆ. ಆಂಗ್ಲಭಾಷೆಯ ವರ್ಣಮಾಲೆಗಳನ್ನು ಬಳಸಿಕೊಂಡು ಕೀಇನ್ ಮಾಡಿದಾಗ ವರ್ಣಮಾಲೆಯ ಕ್ರಮಬದ್ಧ ಸಮೂಹಗಳಾದ ಸೂಚನೆಯ ಪದಗಳು ಹಾಗೂ ಸಂಖ್ಯೆಗಳು ಮೊದಲು ವಿದ್ಯುತ್ ಸಂಕೇತಗಳಾಗಿ ಪರಿವರ್ತಿತವಾಗುತ್ತವೆ. ಈ ರೀತಿ ಸೂಚನೆಯಲ್ಲಿನ ಎಲ್ಲಾ ಅಕ್ಷರಗಳೂ ಕಂಪ್ಯೂಟರಿಗೆ ಅರ್ಥವಾಗುವ ಬೈನರಿ ಸಂಖ್ಯಾ ಸಂಕೇತವಾಗಿ ಪರಿವರ್ತನೆಗೊಳ್ಳುತ್ತವೆ. ಬೈನರಿ ಸಂಕೇತಗಳನ್ನು ಸಿ.ಪಿ.ಯು ಸಂಸ್ಕರಿಸುತ್ತದೆ. ಹೀಗೆ ಸಂಸ್ಕರಿತ ಸೂಚನೆಗಳು ಔಟ್ ಪುಟ್ ವಿಭಾಗಕ್ಕೆ ಬಂದಾಗ ನಮಗೆ ಅರ್ಥವಾಗುವ ಭಾಷೆಗೆ ಪುನಃ ಪರಿವರ್ತನೆ ಹೊಂದುತ್ತವೆ. ಈ ವರ್ಣಮಾಲೆಯ ಅಕ್ಷರಗಳನ್ನು ಸಂಕೇತಗಳ ಮೂಲಕ ಸಂಯೋಜಿಸಿ ಕಂಪ್ಯೂಟರ್ ಗಾಗಿ ಯಂತ್ರಭಾಷೆಯೊಂದನ್ನು ಅಭಿವೃದ್ದಿಪಡಿಸಲಾಗುತ್ತಿದೆ.

ಇದೂ ಅಲ್ಲದೆ ಸಿ ಹಾಗೂ ಸಿ++, ಜಾವ ಮುಂತಾದವುಗಳು ಕಂಪ್ಯೂಟರ್ ಭಾಷೆಗಳೇ ಆಗಿವೆ. ಕಂಪ್ಯೂಟರಿನಲ್ಲಿ ಕನ್ನಡ ಪ್ರಯೋಗ ಇಸ್ಕಿ, ಅಸ್ಕಿ ಮತ್ತು ಯುನಿಕೋಡ್ ಗಳಲ್ಲಿ ನಡೆಯುತ್ತದೆ. ಆಯಾ ಕೋಡಿನಲ್ಲಿನ ಅಂಕಿ ಅಂಶಗಳ ಆಧಾರದ ಮೇಲೆ ಭಾಷಾವ್ಯಾಪಾರ ನಡೆಯುತ್ತದೆ. ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಯಾವುದೇ ಇರಲಿ (ವಿಂಡೋಸ್, ಲೈನೆಕ್ಸ್) ಇದರಲ್ಲಿ ಕನ್ನಡ ಭಾಷೆಯನ್ನು ಕಂಪ್ಯೂಟರ್ ಪರದೆಯ ಮೇಲೆ ಮೂಡಿಸಬಹುದು. ಎಡಿಟರ್ ಬಳಸಿಕೊಂಡು ಇಂಗ್ಲಿಶ್‌ನ ಕೀ ಬೋರ್ಡ್‌ನ್ನೇ ಆಧಾರವಾಗಿಟ್ಟುಕೊಂಡು ಅಕ್ಷರ (ಗ್ಲಿಫ್ ಕೋಡ್)ಗಳನ್ನು ಮಾಡಿರುತ್ತಾರೆ. ಇಂಗ್ಲಿಶಿನ ಕೀ ಬೋರ್ಡ್ ಬಳಸಿಕೊಂಡೇ ಕನ್ನಡವನ್ನು ಬರೆಯಬಹುದಾಗಿದೆ. ಕನ್ನಡವನ್ನು ಸಾಧ್ಯವಾಗಿಸಿದ ಕನ್ನಡದ ಪ್ರಮುಖ ತಂತ್ರಾಂಶಗಳು (ಸಾಫ್ಟ್ ವೇರ್) ಈ ಕೆಳಗಿನಂತಿವೆ. ಬರಹ, ಬರಹ, ಶ್ರೀಲಿಪಿ, ಐಲೀಪ್, ಆಕೃತಿ, ಕೈರಾಲಿ, ಪ್ರಕಾಶಕ್, ವಿಂಡೋಸ್ ಎಕ್ಸ್‌ಪಿ, ಬ್ರಾಹ್ಮಿ, ಕುವೆಂಪು, ಕನ್ನಡಕಛೇರಿ, ಕನ್ನಡ ಸೌರಭ, ಕಲಿತ ಇತ್ಯಾದಿ.

ಕನ್ನಡದಲ್ಲೂ ಕೂಡ ಇಂದು ಹೊಸ ತಂತ್ರಾಂಶಗಳನ್ನು ಪ್ರೋಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ನೋಂದಣಿ ತಂತ್ರಾಂಶ, ಗ್ರಂಥಾಲಯ ನಿರ್ವಹಣೆ ತಂತ್ರಾಂಶ, ಕಛೇರಿ ತಂತ್ರಾಂಶ, ಸಹಕಾರಿ ಸಂಘ ವ್ಯವಹಾರ ತಂತ್ರಾಂಶ, ಸಂಬಳದ ಬಿಲ್ಲು ತಂತ್ರಾಂಶ, ಸಾರ್ವಜನಿಕ ಉದ್ಯಮಗಳ ವಹಿವಾಟಿನ ತಂತ್ರಾಂಶ, ಕ್ಯೂಲೀಸ್ಟ್ ತಂತ್ರಾಂಶ, ಅಂತರ್‌ಜಾಲ ಪತ್ರ-ಪತ್ರಿಕೆ ತಂತ್ರಾಂಶ, ಕನ್ನಡದ ಅಂತರ್ ಜಾಲ ಪತ್ರಿಕೆ-ವಿಶ್ವಕನ್ನಡ, ಮುಂತಾದವು ಕನ್ನಡದಲ್ಲಿ ಕಾರ್ಯನಿರ್ವಹಿಸಲು ನೆರವು ನೀಡುವ ಪ್ರಮುಖ ಸಾಫ್ಟ್ ವೇರ್‌ಗಳಾಗಿವೆ.