ಮನುಷ್ಯರು ಬಗೆಬಗೆಯ ಧ್ವನಿಗಳನ್ನು ಉಚ್ಚರಿಸಬಲ್ಲರು. ಆದರೆ ಮಾತಾಡುವಾಗ ಕೆಲವು ಧ್ವನಿಗಳನ್ನು ಮಾತ್ರ ಬಳಸುತ್ತಾರೆ. ಹೀಗೆ ಮಾತಾಡು ವಾಗ ಬಳಸುವ ಧ್ವನಿಗಳನ್ನು ಭಾಷಾಧ್ವನಿಗಳೆನ್ನುತ್ತೇವೆ. ಈ ಭಾಷಾಧ್ವನಿಗಳ ಲಕ್ಷಣಗಳನ್ನು ಅರಿಯಲು ಮೂರು ವಿಧಾನಗಳನ್ನು ಅನುಸರಿಸಲು ಸಾಧ್ಯ. 1. ಧ್ವನಿಗಳ ಉತ್ಪಾದನೆಯ ವಿಧಾನಗಳನ್ನು ತಿಳಿಯುವುದು. 2. ಧ್ವನಿಗಳ ವಿವಿಧ ಪ್ರಸರಣ ಮಾಧ್ಯಮಗಳಲ್ಲಿ (ಉದಾ: ಗಾಳಿ) ಪ್ರಸಾರಗೊಳ್ಳುವ ಬಗೆಗಳನ್ನು ತಿಳಿಯುವುದು. ಮತ್ತು 3. ಧ್ವನಿಗಳನ್ನು ಶ್ರವಣಾಂಗಗಳು (ಉದಾ: ಕಿವಿ) ಗ್ರಹಿಸುವ ಕ್ರಮಗಳನ್ನು ತಿಳಿಯುವುದು. ಇವುಗಳಲ್ಲಿ ಮೊದಲು ವಿಧಾನವನ್ನು ಅನುಸರಿಸಿ ಕೆಲವು ಸಂಗತಿಗಳನ್ನು ಮುಂದೆ ವಿವರಿಸಲಾಗಿದೆ.

ಉಚ್ಚಾರಣೆ : ಭಾಷಾ ಧ್ವನಿಗಳ ಉಚ್ಚಾರಣೆಯಲ್ಲಿ ಆರು ಲಕ್ಷಣಗಳನ್ನು ಗುರುತಿಸುತ್ತಾರೆ. ಇವು ಭಾಷಾಧ್ವನಿಯೊಂದರ ಸ್ವರೂಪವನ್ನು ನಿಗದಿಗೊಳಿಸು ತ್ತದೆ. ಅದರೊಡನೆ ಅನ್ಯ ಭಾಷಾಧ್ವನಿಗಳಿಗೂ ಈ ಭಾಷಾಧ್ವನಿಗಳಿಗೂ ಇರುವ ವ್ಯತ್ಯಾಸವನ್ನು ನಿರ್ಧರಿಸುತ್ತವೆ.

ಗಾಳಿಯ ಪ್ರವಾಹ : ಸಾಮಾನ್ಯವಾಗಿ ಉಸಿರಾಟದ ಗಾಳಿಯ ಪ್ರವಾಹದ ನೆರವಿನಿಂದಲೇ ಮಾನವ ಭಾಷಾ ಧ್ವನಿಗಳು ಉತ್ಪನ್ನವಾಗುತ್ತವೆ. ಬಹುಪಾಲು ಭಾಷಾಧ್ವನಿಗಳು ಶ್ವಾಸಕೋಶದಿಂದ ಹೊರ ಹೋಗುವ ಗಾಳಿ ಪ್ರವಾಹದ ಗತಿ ನಿಯಂತ್ರಣದಲ್ಲೇ ಆಕಾರ ತಳೆಯುತ್ತವೆ. ಕೆಲವು ಭಾಷಾಧ್ವನಿಗಳು ಗಾಳಿಯನ್ನು ಒಳಗೆಳೆದುಕೊಳ್ಳುವಾಗಲೂ ಉತ್ಪನ್ನವಾಗುತ್ತವೆ. ಇಂಥವನ್ನು ಲೊಚಕು ಧ್ವನಿ(ಕ್ಲಿಕ್)ಗಳೆಂದು ಕರೆಯುತ್ತಾರೆ.

ಧ್ವನಿತಂತು : ಧ್ವನಿತಂತುಗಳು ಗಾಳಿಯ ಪ್ರವಾಹದೊಡನೆ ಕಂಪಿಸುತ್ತ ವೆಯೋ ಇಲ್ಲವೋ ಮತ್ತು ಅವುಗಳ ನಡುವೆ ಗಾಳಿ ಚಲಿಸಲು ಅವಕಾಶ ಯಾವ ಬಗೆಯಲ್ಲಿ ರೂಪುಗೊಂಡಿದೆ ಎಂಬುದು ಭಾಷಾ ಧ್ವನಿಯ ಲಕ್ಷಣವನ್ನು ನಿರ್ಧರಿಸುತ್ತದೆ. ಈ ತಂತುಗಳು ಕಂಪಿಸುತ್ತಿದ್ದರೆ ಘೋಷ ಧ್ವನಿಗಳು ಉಂಟಾಗುತ್ತವೆ. ಕಂಪಿಸದೆ ಸ್ಥಿರವಾಗಿದ್ದರೆ ಅಘೋಷಧ್ವನಿಗಳು ಉಚ್ಚಾರ ಗೊಳ್ಳುತ್ತವೆ. ತಂತುಗಳು ಕ್ಲುಪ್ತಕಾಲದವರೆಗೆ ಮುಟ್ಟಿಕೊಂಡಿದ್ದು ತಟಕ್ಕನೆ ಗಾಳಿ ಹೊರ ಹೋಗಲು ಅನುವು ಮಾಡಿಕೊಟ್ಟರೆ ಆಗ ಆ ಗಲಸ್ಪರ್ಶ ಧ್ವನಿಯುಂಟಾಗುತ್ತದೆ. ಪಿಸುದನಿಯ ಮಾತಾಡುವಾಗ ಹೊರಡುವ ಧ್ವನಿಗಳ ನಿಯಂತ್ರಣ ಕೂಡ ಧ್ವನಿತಂತುಗಳ ನೆರವಿನಿಂದಲೇ ಆಗುವಂಥದು.

ಕಿರುನಾಲಿಗೆ : ಕೆಲವರು ಇದನ್ನು ಅಲಿಜಿಹ್ವೆ, ಉಪಜಿಹ್ವೆ ಎನ್ನುವರು. ಸುಲಭವಾಗಿ ಹಿಂದೆ ಮುಂದೆ ಚಲಿಸಬಲ್ಲ ಈ ಅಂಗ ಗಾಳಿಯ ಪ್ರವಾಹ ನಾಸಾಕುಹರದ ಮೂಲಕ ಹೋಗಬೇಕೋ ಅಥವಾ ಹೋಗಬಾರದೋ ಎಂಬುದನ್ನು ನಿಯಂತ್ರಿಸಲು ನೆರವಾಗುತ್ತದೆ. ಅಂದರೆ ಅನುನಾಸಿಕ ಧ್ವನಿಗಳ ಉಚ್ಚಾರಣೆಗೆ ಅಥವಾ ನಾಸಿಕೀಕೃತ ಧ್ವನಿಗಳ ಉಚ್ಚಾರಣೆಗೆ ಈ ಅಂಗದ ನೆರವು ಅತ್ಯವಶ್ಯ. ಕೆಲವರಲ್ಲಿ ಇದು ಹಿಂಬದಿಯ ಗೋಡೆಯನ್ನು ಮುಟ್ಟ ಲಾರದು. ಅಂಥವರ ಉಚ್ಚಾರಣೆಗಳಲ್ಲಿ ವಿಕಲತೆ ಕಂಡುಬರುತ್ತದೆ. ಸಾಮಾನ್ಯ ವಾಗಿ ಅವರನ್ನು ‘ಮೂಗಿನಲ್ಲಿ ಮಾತಾಡುವವ’ರೆಂದು ನಾವು ಗುರುತಿಸುತ್ತೇವೆ.

ಉಚ್ಚಾರಣಾ ಸ್ಥಾನ : ಧ್ವನಿಪಥದಲ್ಲಿ ಕೆಲವು ನಿರ್ದಿಷ್ಟ ಸ್ಥಾನಗಳಲ್ಲಿ ಭಾಷಾಧ್ವನಿಗಳು ಉತ್ಪನ್ನವಾಗುತ್ತವೆ. ಗಾಳಿಯ ಪ್ರವಾಹಕ್ಕೆ ಇಂಥ ಸ್ಥಾನದಲ್ಲಿ ನಿಯಂತ್ರಣವನ್ನುಂಟುಮಾಡಿ ನಿರ್ದಿಷ್ಟ ಬಗೆಯ ಧ್ವನಿಗಳನ್ನು ನಾವು ಉಚ್ಚರಿಸುತ್ತೇವೆ. ಮೇಲ್ದುಟಿ, ಮೇಲ್ದಂತಸಾಲು, ವರ್ತ್ಸ, ಕಠಿಣತಾಲು, ಮೃದುತಾಲು ಮುಂತಾದವು ಉಚ್ಚಾರಣಾ ಸ್ಥಾನಗಳು.

ಉಚ್ಚಾರಣಾ ವಿಧಾನ : ಉಚ್ಚಾರಣಾ ಸ್ಥಾನದಲ್ಲಿ ಉಚ್ಚಾರಣಾಂಗಗಳ ನೆರವಿನಿಂದ ಗಾಳಿಯ ಪ್ರವಾಹಕ್ಕೆ ವಿವಿಧ ಬಗೆಯ ನಿಯಂತ್ರಣಗಳನ್ನು ಉಂಟು ಮಾಡಲು ಸಾಧ್ಯ. ಗಾಳಿಯ ಹರಿವಿಗೆ ಪೂರ್ಣವಾಗಿ ಆದರೆ ತಾತ್ಕಾಲಿಕವಾಗಿ ಆದರೆ ಅಡ್ಡಿಯನ್ನುಂಟುಮಾಡುವುದು, ಗಾಳಿ ಹೆಚ್ಚು ಒತ್ತಡದಿಂದ ಹೊರ ಹರಿಯುವಂತೆ ಮಾಡುವುದು, ಆಸ್ಯಕುಹರದಲ್ಲಿ ಯಾವುದಾದರೂ ಒಂದು ಪಕ್ಕದಲ್ಲಿ ಹರಿಯುವಂತೆ ಮಾಡುವುದು. ಹೀಗೆ ಬೇರೆ ಬೇರೆ ವಿಧಾನಗಳಿವೆ. ನಾಲಿಗೆ, ಕೆಳದುಟಿಗಳು ಮುಖ್ಯ ಉಚ್ಚಾರಣಾಂಗಗಳು.

ತುಟಿಗಳು : ಕೆಲವು ಭಾಷಾಧ್ವನಿಗಳ ಉಚ್ಚಾರಣೆಯಲ್ಲಿ (ಉದಾ: ಕನ್ನಡದ ಪ್, ಬ್ ಮ್) ತುಟಿಗಳು ನೇರವಾಗಿ ಭಾಗಿಯಾಗುತ್ತವೆ. ಆದರೆ ಮತ್ತೆ ಕೆಲವು ಭಾಷಾಧ್ವನಿಗಳ (ಉದಾ: ಸ್ವರಗಳ) ಉಚ್ಚಾರಣೆಯಲ್ಲಿ ತುಟಿಗಳ ಆಕಾರ ಹೇಗಿರುವುದೆಂಬುದು ಮುಖ್ಯ. ಗೋಳಾಕಾರವಾಗಿ, ಅರೆತೆರೆದಂತೆ, ಪೂರ್ಣ ತೆರೆದಂತೆ ಇರುವುದು ಇವೆಲ್ಲವೂ ಸ್ವರಗಳ ಲಕ್ಷಣವನ್ನು ನಿರ್ಧರಿಸುತ್ತವೆ.

ಸ್ವರ ಮತ್ತು ವ್ಯಂಜನಗಳು : ಜಗತ್ತಿನ ಬಹುಪಾಲು ಭಾಷೆಗಳಲ್ಲಿ ಭಾಷಾಧ್ವನಿಗಳನ್ನು ಸ್ವರ ಮತ್ತು ವ್ಯಂಜನಗಳೆಂದು ವಿಭಜಿಸುವ ಪ್ರವೃತ್ತಿಯಿದೆ. ಅಂದರೆ ಭಾಷಿಕರೇ ಈ  ವಿಭಜನೆಯನ್ನು ಅರಿತಿರುವರೆಂದಲ್ಲ. ಲಿಪಿಯುಳ್ಳ ಭಾಷೆಗಳಲ್ಲಿ ಮತ್ತು ವ್ಯಾಕರಣ ಪರಂಪರೆಯನ್ನು ಹೊಂದಿರುವ ಭಾಷೆಗಳಲ್ಲಿ ಈ ವಿಭಜನೆಯು ಇದ್ದೇ ಇದೆ. ಭಾಷಾಧ್ಯಯನ ಕಾರರು ಈ ವಿಭಜನೆಯನ್ನು ಎಲ್ಲ ಕಾಲದಲ್ಲೂ ಒಪ್ಪಿಬಂದಿದ್ದಾರೆ.

ಉಚ್ಚಾರಣೆಯ ದೃಷ್ಟಿಯಿಂದ ಇವೆರಡೂ ಧ್ವನಿವರ್ಗಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವುದು ಅವಶ್ಯ.

ಈ ಎರಡೂ ಈ ಧ್ವನಿವರ್ಗಗಳ ನಡುವಣ ವ್ಯತ್ಯಾಸವನ್ನೂ ಬೇರೊಂದು ರೀತಿಯಲ್ಲೂ ಹೇಳಲು ಸಾಧ್ಯ. ಪ್ರತ್ಯೇಕ ಧ್ವನಿಗಳಾಗಿ ಇವುಗಳ ವ್ಯತ್ಯಾಸವನ್ನು ಗುರುತಿಸದೆ ಒಟ್ಟು ಧ್ವನಿಸ್ಮರಣೆ ಸಾಧ್ಯ. ಪ್ರತ್ಯೇಕ ಧ್ವನಿಗಳಾಗಿ ಇವುಗಳ ವ್ಯತ್ಯಾಸವನ್ನು ಗುರುತಿಸದೆ ಒಟ್ಟು ಧ್ವನಿಸ್ಮರಣೆಯಲ್ಲಿ ಹೇಗೆ ಬೇರೆ ಬೇರೆಯಾಗಿ ನಮ್ಮ ಗ್ರಹಿಕೆಗೆ ಬರುತ್ತವೆಂದು ತಿಳಿಯುವುದು ಈ ವಿಧಾನದಲ್ಲಿ ಮುಖ್ಯ.

ಧ್ವನಿಗಳ ಉಚ್ಚಾರಣಾ ಸರಣಿಯನ್ನು ಅಕ್ಷರ (ಸಿಲೆಬಲ್ ಎಂಬ ಅರ್ಥದಲ್ಲಿ)ಗಳಾಗಿ ವಿಭಜಿಸುತ್ತೇವೆ. ಈ ಅಕ್ಷರಗಳಿಗೊಂದು ನಿರ್ದಿಷ್ಟ ರಚನೆ ಇರುತ್ತದೆ. ಅಕ್ಷರಕ್ಕೆ ಕಡ್ಡಾಯವಾಗಿ ಇರಬೇಕಾದುದು ಒಂದು ಕೇಂದ್ರ. ಅದರ ಆಚೀಚೆ ಬೇರೆ ಧ್ವನಿಗಳು ಇರುವುದು ಐಚ್ಛಿಕ. ಕೇಂದ್ರದ ಮೊದಲು ಬರುವ ಧ್ವನಿಗಳನ್ನು ಮುಂಚಾಚು (ಆನ್ ಸೆಟ್) ಎಂತಲೂ ಅನಂತರ ಬರುವ ಧ್ವನಿಗಳನ್ನು ಹಿಂಚಾಚು (ಕೋಡ) ಎಂತಲೂ ಕರೆಯುತ್ತಾರೆ. ಸ್ವರಗಳು ಮಾತ್ರ ಅಕ್ಷರದ ಕೇಂದ್ರ ಸ್ಥಾನದಲ್ಲಿ ಇರಬಲ್ಲವು. ಅಕ್ಷರಗಳಲ್ಲಿ ಬರುವ ಇತರ ಧ್ವನಿಗಳೆಲ್ಲವೂ ವ್ಯಂಜನ ಗಳಾಗಿರುತ್ತವೆ.

ಹೀಗೆ ಎರಡೂ ರೀತಿಗಳಲ್ಲಿ ಸ್ವರ ಮತ್ತು ವ್ಯಂಜನಗಳನ್ನು ವಿಭಜಿಸಿದರೂ ಎರಡೂ ವಿಭಜನೆಗಳಿಂದ ದೊರಕುವ ಧ್ವನಿವರ್ಗಗಳಲ್ಲೂ ಅವೇ ಧ್ವನಿ ಗಳಾಗಿರುತ್ತವೆ. ಅಂದರೆ ಒಂದು ರೀತಿಯಿಂದ ನೋಡಿದಾಗ ಸ್ವರ ಎನಿಸಿದ ಧ್ವನಿ ಮತ್ತೊಂದು ರೀತಿಯಿಂದ ವ್ಯಂಜನ ಎನಿಸಿಕೊಳ್ಳುವುದಿಲ್ಲ.

ಸ್ವರ ವ್ಯಂಜನ
ಗಾಳಿಯ ಪ್ರವಾಹಕ್ಕೆ ಧ್ವನ್ಯಂಗಗಳಲ್ಲಿ ಯಾವುದೇ ಬಗೆಯ ಅಡ್ಡಿಯೂ ಉಂಟಾಗುವುದಿಲ್ಲ. ಆಸ್ಯಕುಹರದಲ್ಲಿ ನಾಲಗೆ ಮತ್ತು ತಾಲುವಿನ ನಡುವೆ ಇರುವ ಅವಕಾಶವನ್ನು ಬೇಕೆನಿಸಿದಂತೆ ಬದಲಿಸಿ ಬೇರೆ ಬೇರೆ ಸ್ವರಗಳನ್ನು ಉಚ್ಚರಿಸುತ್ತೇವೆ. ಗಾಳಿಯ ಪ್ರವಾಹಕ್ಕೆ ಧ್ವನ್ಯಂಗಗಳಲ್ಲಿ ಒಂದಲ್ಲ ಒಂದು ಕಡೆ, ಒಂದಲ್ಲ ಒಂದು ವಿಧಾನದಲ್ಲಿ ತಡೆಯುಂಟಾಗುತ್ತದೆ. ಹೀಗೆ ತಡೆಯುಂಟಾಗುವುದು ಉಚ್ಚರಿಸುವವರಿಗೂ ಗೊತ್ತಾಗುತ್ತದೆ.

ಅಕ್ಷರ : ಸಿಲಬಲ್

ಮುಂಚಾಚು ಕೇಂದ್ರ ಹಿಂಚಾಚು

(ವ್ಯಂಜನ) –ಸ್ವರ – (ವ್ಯಂಜನ)

ಆವರಣವು ಧ್ವನಿಗಳು ಐಚ್ಛಿಕವೆಂದು ಸೂಚಿಸುತ್ತವೆ. ಮರಎಂಬ ಪದದಲ್ಲಿ ಮತ್ತು ಎಂಬ ಎರಡು ಅಕ್ಷರಗಳಿವೆ. ಅಕ್ಷರದಲ್ಲಿ ಕೇಂದ್ರ ಮ್ ಮುಂಚಾಚು. ಅರಎಂಬ ಪದದಲ್ಲೂ ಎರಡು ಅಕ್ಷರಗಳಿವೆ. ಮೊದಲ ಅಕ್ಷರ ಕೇಂದ್ರವೂ . ಇದಕ್ಕೆ ಮುಂಚಾಚು, ಹಿಂಚಾಚುಗಳಿಲ್ಲ. ಬಸ್ ಎಂಬ ಪದದಲ್ಲಿ ಮೂರು ಧ್ವನಿಗಳಿವೆ. ಬ್ (ಮುಂಚಾಚು), (ಕೇಂದ್ರ)ಮತ್ತು ಸ್ (ಹಿಂಚಾಚು)ಮುಂಚಾಚು ಮತ್ತು ಹಿಂಚಾಚುಗಳಲ್ಲಿ ಒಂದಕ್ಕಿಂತ ಹೆಚ್ಚು ವ್ಯಂಜನಗಳು ಬರುವುದೂ ಸಾಧ್ಯ.

ವಕಾರಗಳೆಷ್ಟು?

ಕನ್ನಡದಲ್ಲಿ ಎರಡು ಬಗೆಯ ವಕಾರಗಳಿರುವುದನ್ನು ಗಮನಿಸಿ. ಒಂದು ವಕಾರ (1)ಪೂರ್ಣ ಪ್ರಮಾಣದ ವ್ಯಂಜನ. ಎರಡೂ ತುಟಿಗಳ ನೆರವಿನಿಂದ ಉಚ್ಚರಿಸುವ ಘರ್ಷ ಘೋಷ ಧ್ವನಿ, ಸಂಸ್ಕೃತದಿಂದ ಇಂಗ್ಲೀಶಿನಿಂದ ಮತ್ತು ಅನ್ಯಭಾಷೆಗಳಿಂದ ಎರವಲು ಪಡೆದ ಪದಗಳನ್ನು ಉಚ್ಚರಿಸುವಾದ ಈಧ್ವನಿ ಹೆಚ್ಚಾಗಿ ಬಳಕೆಯಾಗುತ್ತದೆ. ವಿಧಿ, ವೇಗ, ಕಾವ್ಯಮುಂತಾದ ಪದಗಳ ವಕಾರ ಸ್ಪಷ್ಟವಾಗಿ ವ್ಯಂಜನ. ಕನ್ನಡದ ಇನ್ನೊಂದು ವಕಾರ (2)ಉಚ್ಚಾರ ವಾಗುವುದು ಮೃದುತಾಲುವಿನಲ್ಲಿ. ಪಶ್ಚ ಜಿಹ್ವೆ (ನಾಲಗೆಯ ಹಿಂಬದಿ)ಯನ್ನು ಎತ್ತರಿಸುವ ಮೂಲಕ ಈಧ್ವನಿಯನ್ನು ಉತ್ಪಾದಿಸಲು ಸಾಧ್ಯ. ಉದಾಹರಣೆ ಅಕಾರಕ್ಕೆ ಅಕಾರ ಪದವಾದಾಗ ಬರುವ ಆದೇಶ ಧ್ವನಿ ವ್ ಈ ವಕಾರ. ಉಕಾರದ ಬದಲು ಉಚ್ಚರಿಸುವ ವಕಾರವೂ ಇದೇ ಆಗಿದೆ. ಹೇಳು+ಉದು=ಹೇಳುವುದು ಇಲ್ಲಿನ ಕಾರ 2.

ಕೆಲವು ಧ್ವನಿಗಳು ಬಹುಮಟ್ಟಿಗೆ ಎಲ್ಲ ಭಾಷೆಗಳಲ್ಲೂ, ಕೆಲವೊಮ್ಮೆ ಸ್ವರಗಳಂತೆಯೂ ಮತ್ತೆ ಕೆಲವೊಮ್ಮೆ ವ್ಯಂಜನಗಳಂತೆಯೂ ವರ್ತಿಸುತ್ತವೆ. ಅವುಗಳನ್ನು ವರ್ಗೀಕರಿಸುವುದು ಕಷ್ಟ. ಹಾಗೆಂದು ಮೂರನೆಯ ವರ್ಗವನ್ನು ರೂಪಿಸುವಂತಿಲ್ಲ. ಏಕೆಂದರೆ ಈ ಧ್ವನಿಗಳು ಪ್ರದರ್ಶಿಸುವುದು ಸ್ವರ ಮತ್ತು ವ್ಯಂಜನಗಳ ಲಕ್ಷಣಗಳನ್ನೇ. ಸಾಮಾನ್ಯವಾಗಿ ಯ್ ಮತ್ತು ವ್ ಗಳನ್ನು ಕನ್ನಡದಲ್ಲಿ ಇಂಥ ಧ್ವನಿಗಳಿಗೆ ನಿದರ್ಶನಗಳನ್ನಾಗಿ ಕೊಡುವುದು ಸಾಧ್ಯ. ಅಕ್ಷರ ರಚನೆಯ ರೀತಿಯಿಂದ ಇವೆರಡೂ ಖಚಿತವಾಗಿ ವ್ಯಂಜನಗಳೇ ಸರಿ. ಏಕೆಂದರೆ ಯಾರು, ಕಾಯಿ, ಮಾವ ಮುಂತಾದ ಪದಗಳಲ್ಲಿ ಯ್ ಇಲ್ಲವೇ ವ್ ಅಕ್ಷರದ ಮುಂಚಾಚಾಗಿ ಕಂಡಿವೆ.

1. ಮೇಲ್ದುಟಿ

2. ಮೇಲ್ದಂತ

3. ವರ್ತ್ಸ

4. ತಾಲು

5.ಕಠಿಣ ತಾಲು

6. ಕಿರುನಾಲಿಗೆ

7. ಎಪಿಗ್ಲಾಟಿಸ್

8. ಕೆಳದುಟಿ

9. ತುದಿನಾಲಿಗೆ

10. ಜಿಹ್ವಾ ಫಲಕ

11. ಪೂರ್ವಜಿಹ್ವೆ

12. ಮಧ್ಯಜಿಹ್ವೆ

13. ಪಶ್ಚಜಿಹ್ವೆ

14. ಜಿಹ್ವಾಮೂಲ

ಐಪಿಎ ಬರೆದ ಒಂದು ಮಾದರಿ

British English

It is possible to transcribe phonetically any utterances, in any language, in several different ways, all of them using the alphabet and conventions of the IPA (the same thing is possible with most other Interanational Phonetic alphabets) A trancription which is made by using letters of the simplest possible shapes and in the simplest possible numbers, is called a simple phonetic trasncription.

American English

If the number of different letters is more than the mininum as defined above, the transcription will not be a phonetic, but an allophonic one. Some of the phonemes, that is to say, will be represented by more than one different symbls. In other words certain allophones of certain phonemes will be singled out for representation in the transcriptions, hence the term allophonic.

ಇಂಗ್ಲಿಷಿನಲ್ಲಿ

[l], [w], [N ] ಮತ್ತು [j] ಗಳಿಗೂ ಇದೇ ಸಮಸ್ಯೆ. ನೂರಾರು ಪದಗಳಲ್ಲಿ ಇವು ಅಕ್ಷರ ಕೇಂದ್ರದ ಆಚೀಚೆ ಬರುತ್ತವೆ. ಲಾಗ್, ವೆಟ್, ರಿಬ್, ಯೂ ಮುಂತಾದ ಪದಗಳು ಇದಕ್ಕೆ ನಿದರ್ಶನಗಳು. ಆದ್ದರಿಂದ ಇವು ವ್ಯಂಜನಗಳೇ ಸರಿ. ಆದರೆ ಈ ಧ್ವನಿಗಳ ಉಚ್ಚಾರಣೆಯನ್ನು ಗಮನಿಸಿದರೆ ಸ್ವರಗಳ ಉಚ್ಚಾರಣೆಯ ಲಕ್ಷಣವೇ ಹೆಚ್ಚಾಗಿ ಕಂಡುಬರುವ ಧ್ವನಿಗಳಿವು. ಗಾಳಿಯ ಹರಿವಿಗೆ ಅಡ್ಡಿಯುಂಟಾಗುವುದು ಈ ಧ್ವನಿಗಳ ಉಚ್ಚಾರಣೆಯಲ್ಲಿ ಗಮನಕ್ಕೆ ಬರುವುದಿಲ್ಲ. ಹಾಗಾಗಿ ಇವು ಸ್ವರಗಳಂತೆ ತೋರುತ್ತವೆ.

ಈ ಬಗೆಯ ಧ್ವನಿಗಳನ್ನು ಏನೆಂದು ವರ್ಗೀಕರಿಸುವುದು? ಎರಡು ರೀತಿಗಳಲ್ಲಿ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಬಹುದು. ಇವುಗಳನ್ನು

ಅರೆವ್ಯಂಜನಗಳೆಂದು ಕರೆಯುವುದು ಒಂದು ಬಗೆಯೆಂದರೆ ಅರೆ ಸ್ವರಗಳೆಂದು ಕರೆಯುವುದು ಇನ್ನೊಂದು ಸಾಧ್ಯತೆ. ಮತ್ತೆ ಕೆಲವರು ಉಚ್ಚಾರಣೆಯನ್ನು ಆಧರಿಸಿದ ವರ್ಗೀಕರಣದಲ್ಲಿ ಎರಡು ಬೇರೆ ಪಾರಿಭಾಷಿಕ ಪದಗಳನ್ನು ಬಳಸಲು ಸೂಚಿಸಿದರು.

ಉಚ್ಚಾರಣೆ ಧ್ವನಿಸಾತತ್ಯ
ವೊಕಾಯ್ಡುಗಳು ಸ್ವರಗಳು
ಕಾಂಟಾಯ್ಡುಗಳು ವ್ಯಂಜನಗಳು

ಎಲ್ಲ ಸ್ವರಗಳೂ ವೊಕಾಯ್ಡುಗಳು. ಅಕ್ಷರ ಕೇಂದ್ರಗಳಾಗಿ ವರ್ತಿಸುವ ವ್ಯಂಜನಗಳೂ ವೊಕಾಯ್ಡುಗಳು. ಉಳಿದವು ಕಾಂಟಾಯ್ಡುಗಳಾಗುತ್ತವೆ.

ಸ್ವರಗಳು

ಸ್ವರಗಳ ಉಚ್ಚಾರಣೆಯ ವಿಧಾನವನ್ನು ವರ್ಣಿಸಲು ನಾಲ್ಕು ಅಂಶಗಳನ್ನು ಗಮನಿಸುತ್ತೇವೆ.

. ನಾಲಗೆಯ ಭಾಗ : ನಾಲಗೆಯನ್ನು ಮುಂಭಾಗ, ಮಧ್ಯಭಾಗ ಮತ್ತು ಹಿಂಭಾಗ ಎಂದು ವಿಭಜಿಸಿಕೊಂಡು ಸ್ವರದ ಉಚ್ಚಾರಣೆಯಲ್ಲಿ ಯಾವ ಭಾಗವನ್ನು ಎತ್ತರಿಸಲಾಗುತ್ತದೆಂದು ಗಮನಿಸುವುದು.

. ನಾಲಗೆಯ ಸ್ಥಾನ : ಸ್ವರದ ಉಚ್ಚಾರಣೆಯಲ್ಲಿ ಕ್ರಿಯಾಶೀಲವಾಗುವ ನಾಲಗೆಯ ಭಾಗವನ್ನು ನಾಲ್ಕು ಬಿಂದುಗಳನ್ನು ಕಲ್ಪಿಸಿಕೊಳ್ಳುವುದು ಅವಶ್ಯಕ. ಗರಿಷ್ಟ ಎತ್ತರದ ಬಿಂದುವನ್ನು ಉನ್ನತ, ಕನಿಷ್ಟ ಎತ್ತರದ ಬಿಂದುವನ್ನು ಅವನತ, ನಡುವಣ ಅಂತರದಲ್ಲಿ ಕಲ್ಪಿಸಿಕೊಂಡು ಬಿಂದುಗಳನ್ನು ಮಧ್ಯೋನ್ನತ ಮತ್ತು ಮಧ್ಯಾವನತವೆಂದು ಕರೆಯುತ್ತಾರೆ.

. ತುಟಿಗಳ ಆಕಾರ : ತುಟಿಗಳ ಆಕಾರ ಮತ್ತು ಅವುಗಳ ನಡುವೆ ಇರುವ ತೆರಪು, ಸ್ವರಗಳ ಭೇದಕ್ಕೆ ಒಂದು ಮುಖ್ಯ ಕಾರಣ. ವಿವೃತ, ಅರೆ ವಿವೃತ, ಅರೆ ಸಂವೃತ ಮತ್ತು ಸಂವೃತವೆಂಬ ಸ್ಥಿತಿಗತಿಗಳನ್ನು ಗುರುತಿಸುತ್ತಾರೆ.

. ಕಿರುನಾಲಿಗೆಯ ಸ್ಥಾನ : ಇದು ಗಲಕುಹರದ ಹಿಂಗೋಡೆಗೆ ತಾಗಿದೆಯೇ ಅಥವಾ ಮುಂದೆ ಸರಿದು ಗಾಳಿ ಹರಿವು ನಾಸಾಕುಹರದ ಮೂಲಕ ಸಾಗಲು ಅವಕಾಶ ನೀಡಿದೆಯೇ ಎಂಬುದನ್ನು ಗಮನಿಸುವುದು ಅವಶ್ಯ. ಸ್ವರಗಳ ಉಚ್ಚಾರಣೆಯ ಸಂದರ್ಭದಲ್ಲಿ ನಾಸಾಕುಹರದ ಮೂಲಕ ಗಾಳಿ ಹರಿದರೆ ಆಗ ಆ ಸ್ವರ ಅನುನಾಸೀಕೃತವಾಗುತ್ತದೆ. ಉದಾ: ಕನ್ನಡದ ಕೆಲವು ಉಪಭಾಷೆಗಳಲ್ಲಿ ಬಾವಿ, ಹಾವು ಮುಂತಾದ ಪದಗಳನ್ನು ಉಚ್ಚರಿಸುವಾಗ ಎರಡನೆಯ ಸ್ವರವನ್ನು ಅನುನಾಸೀಕೃತಗೊಳಿಸುವುದನ್ನು ಗಮನಿಸಬಹುದು.

ವ್ಯಂಜನಗಳು

ವ್ಯಂಜನಗಳನ್ನು ವಿವರಿಸಲು ಬಳಸುವ ಉಚ್ಚಾರಣಾಂಶಗಳು

1. ವಾಯುಪ್ರವಾಹದ ಮೂಲ : ಶ್ವಾಸಕೋಶದಿಂದ ಬಂದುದೇ ಅಥವಾ ಅನ್ಯ ಮೂಲದಿಂದ ಬಂದುದೇ ಎಂಬುದನ್ನು ಗುರುತಿಸಬೇಕು.

2. ವಾಯುಪ್ರವಾಹದ ದಿಕ್ಕು : ಗಾಳಿ ಹೊರಹೋಗುವಾಗ ಧ್ವನಿಯು ಉಚ್ಚಾರಣೆಯಾಗುವುದೇ ಅಥವಾ ಒಳ ಹೋಗುವಾಗ ಉಚ್ಚಾರಣೆ ಯಾಗುವುದೇ ಎಂಬುದನ್ನು ಗಮನಿಸಬೇಕು.

ಧ್ವನಿಯ ಬಗೆಗಳು ಉಚ್ಚಾರಣ ಸ್ಥಾನ ಉಚ್ಚಾರಣಾಂಗ
ದ್ವಯೋಷ್ಠ್ಯ ಮೇಲುತುಟಿ ಕೆಳತುಟಿ
ದಂತೋಷ್ಠ್ಯ ಮೇಲು ದಂತಸಾಲು ಕೆಳತುಟಿ
ದಂತ್ಯ ಮೇಲು ದಂತಸಾಲು ನಾಲಿಗೆಯ ತುದಿ (ಜಿಹ್ವಾಗ್ರ)
ವರ್ತ್ಸ್ಯ ವರ್ತ್ಸ ನಾಲಿಗೆಯ ಪೂರ್ವ ಭಾಗ- (ಜಿಹ್ವಾ ಫಲಕ)
ಮೂರ್ಧನ್ಯ/ಪರಿವೇಷ್ಠಿತ ಮಧ್ಯತಾಲು ಜಿಹ್ವಾಗ್ರ
ತಾಲವ್ಯ – ವರ್ತ್ಸ್ಯ ವರ್ತ್ಸ ಮತ್ತು ಕಠಿಣತಾಲು ಜಿಹ್ವಾಗ್ರ / ಜಿಹ್ವಾಪಲಕ
ತಾಲವ್ಯ ಕಠಿಣತಾಲು (ಮಧ್ಯಭಾಗ) ಪೂರ್ವ ಜಿಹ್ವೆ
ಕಂಠ್ಯ ಮೃದುತಾಲು ಪಶ್ಚಜಿಹ್ವೆ
ಗಲಕುಹರೀಯ ಗಲಕುಹರದ ಮುಂಭಾಗ ಗಲಕುಹರದ ಹಿಂಭಾಗ
ಗಲೀಯ ಧ್ವನಿತಂತುಗಳು ಧ್ವನಿತಂತುಗಳು

3. ಧ್ವನಿ ತಂತುಗಳ ಕಂಪನ : ಕಂಪನವಿರುವುದು ಅಥವಾ ಇಲ್ಲದಿರುವುದು

4. ಕಿರುನಾಲಗೆ : ಮುಂಭಾಗದಲ್ಲಿರುವುದು ಅಥವಾ ಹಿಂಬದಿಯ ಗೋಡೆಗೆ ತಗುಲಿರುವುದು

5. ಉಚ್ಚಾರಣಾ ಸ್ಥಾನ

6. ಉಚ್ಚಾರಣಾ ವಿಧಾನ

ಉಚ್ಚಾರಣಾ ಸ್ಥಾನಗಳು ಮತ್ತು ಉಚ್ಚಾರಣಾಂಶಗಳು : ಧ್ವನಿ ಪಥದಲ್ಲಿ ಯಾವ ಬಿಂದುವಿನಲ್ಲಿ ಉಚ್ಚಾರಣೆಯಾಗುವುದೋ ಅದು ಉಚ್ಚಾರಣಾ ಸ್ಥಾನ. ಇವು ಬಹುಮಟ್ಟಿಗೆ ಸ್ಥಿರ, ಚಲಿಸುವುದಿಲ್ಲ. ಈ ಬಿಂದುಗಳಲ್ಲಿ ಧ್ವನಿಯ ಉಚ್ಚಾರಣೆಗೆ ನೆರವಾಗುವ ಅಂಗಗಳೇ ಉಚ್ಚಾರಣಾಂಗಗಳು. ಇವು ಚಲಿಸುತ್ತವೆ. ಉಚ್ಚಾರಣಾ ಸ್ಥಾನದ ಬಳಿಗೆ ಅವಶ್ಯವಾದಾಗ ಚಲಿಸಿ ಧ್ವನಿಯ ಉಚ್ಚಾರಣೆಗೆ ನೆರವಾಗುತ್ತವೆ. ಇವುಗಳಿಂದ ಉತ್ಪನ್ನವಾಗುವ ಧ್ವನಿಗಳ ಬಗೆಗಳು ಹೀಗಿವೆ.

ಸಹೋಚ್ಚಾರಣೆ : ಒಂದು ಧ್ವನಿಯನ್ನು ವಿವರಿಸಲು ಲಕ್ಷಣಗಳನ್ನು ಎಷ್ಟೇ ಖಚಿತವಾಗಿ ಇರಿಸಿದರೂ ಹಲವಾರು ಧ್ವನಿಗಳನ್ನು ಒಂದೇ ಸರಣಿಯಲ್ಲಿ ಉಚ್ಚರಿ ಸುವಾಗ ಆ ಲಕ್ಷಣಗಳು ಅಷ್ಟು ಖಚಿತವಾಗಿ ಉಳಿಯಲಾರವು. ಒಂದು ಧ್ವನಿಯ ಹಿಂದಿನ ಮತ್ತು ಮುಂದಿನ ಧ್ವನಿಘಟಕಗಳ ಉಚ್ಚಾರಣಾ ಲಕ್ಷಣಗಳು ಅದರ ಮೇಲೆ ಪರಿಣಾಮಬೀರುತ್ತವೆ.

ಮರ ಪದವನ್ನೇ ಗಮನಿಸೋಣ. ಮ್ ಅ ರ್ ಅ ಎಂಬ ನಾಲ್ಕು ಧ್ವನಿಗಳ ಸಾತತ್ಯವಿದು. ಒಂದು ಧ್ವನಿಯನ್ನು ಉಚ್ಚರಿಸಿ ಮುಗಿದ ಮೇಲೆ ಧ್ವನ್ಯಂಗಗಳು ಎರಡನೆಯ ಧ್ವನಿಯ ಉಚ್ಚಾರಣೆಗೆ ಸಿದ್ಧವಾಗುತ್ತವೆ ಎಂದು ತಿಳಿಯಬಾರದು. ಮೊದಲ ಧ್ವನಿಯು ಉಚ್ಚಾರಣೆ ಮುಗಿಯುತ್ತಿದ್ದಂತೆಯೇ ಎರಡನೆಯ ಧ್ವನಿಯ ಉಚ್ಚಾರಣೆ ಮೊದಲಾಗಬೇಕು. ಧ್ವನ್ಯಂಗಗಳು ಹೀಗೆ ಸ್ಥಳ ಪಲ್ಲಟಗೊಳ್ಳುವ ಕಾಲಾವಕಾಶದಲ್ಲಿ ಧ್ವನಿಗಳ ಉಚ್ಚಾರಣಾಂಶಗಳು ಒಂದರಿಂದ ಇನ್ನೊಂದಕ್ಕೆ ಬೆರೆಯುತ್ತವೆ. ಮ್ ಉಚ್ಚರಿಸುವಾಗ ಕಿರುನಾಲಗೆಯು ಗಾಳಿಯ ಹರಿವಿಗೆ ನಾಸಾಕುಹರದ ಮೂಲಕ ಹೊರಹೋಗಲು ಅವಕಾಶ ನೀಡಿರುತ್ತದೆ. ಉಚ್ಚರಿಸುವ ಹೊತ್ತಿಗೆ ಅದು ಮತ್ತೆ ಹೋಗಿ ಗಲಕುಹರದ ಹಿಂಬದಿಯ ಗೋಡೆಗೆ ಅಂಟಿಕೊಳ್ಳಬೇಕು ವಾಯ ಹರಿವು ನಾಸಾಕುಹರಗಳಿಗೆ ಹೋಗದಂತೆ ಅಡ್ಡಿಯನ್ನು ಉಂಟು ಮಾಡಬೇಕು. ಆದರೆ ಉಚ್ಚಾರ ಮೊದಲಾದರೂ ಕಿರುನಾಲಿಗೆ ಹಿಂಜರಿಯುವುದು ತಡವಾಗಿ ಕೊಂಚ ಕಾಲ ನಾಸಾಕುಹರದಲ್ಲಿ ಗಾಳಿ ಚಲಿಸುತ್ತದೆ. ಇದರಿಂದ ಕಾರಕ್ಕೆ ಅನುನಾಸಕೀಕೃತ ಲಕ್ಷಣ ಒದಗುತ್ತದೆ.

ಹೀಗೆ ಧ್ವನಿಗಳ ಉಚ್ಚಾರಣಾಂಶಗಳು ಹಿಂದಿನ ಇಲ್ಲವೇ ಮುಂದಿನ ಧ್ವನಿಗಳನ್ನು ಪ್ರಭಾವಿಸುವುದನ್ನು ಸಹೋಚ್ಚಾರಣೆ ಎನ್ನುತ್ತಾರೆ. ಇದರಲ್ಲಿ ಎರಡು ಬಗೆಗಳು.

ಹಿಂದಿನ ಧ್ವನಿಘಟಕ ಮುಂದೆ ಬರುವ ಧ್ವನಿಘಟಕದ ಉಚ್ಚಾರಣೆಯಿಂದ ಪ್ರಭಾವಿತವಾಗುವುದು ಒಂದು ಮಾದರಿ. ಇದನ್ನು ನಿರೀಕ್ಷಣ ಸಹೋಚ್ಚಾರಣೆ ಎನ್ನುತ್ತಾರೆ. ಮುಂದಿನ ಧ್ವನಿಯ ಉಚ್ಚಾರಣೆಯನ್ನು ನಿರೀಕ್ಷಿಸಿ ಹಿಂದಿನ ಧ್ವನಿಯು ತನ್ನ ಉಚ್ಚಾರಣೆಯಲ್ಲಿ ಆ ಧ್ವನಿಯ ಉಚ್ಚಾರಣಾಂಶಗಳು ಬೆರೆಯಲು ಅವಕಾಶನೀಡುತ್ತದೆ. ಹಾಗಾಗಿ ಈ ಹೆಸರು.

ಮುಂದಿನ ಧ್ವನಿ ಘಟಕದ ಉಚ್ಚಾರಣೆಯಿಂದ ಮುಂದೆ ಬರುವ ಧ್ವನಿ ಘಟಕ ಪ್ರಭಾವಿತವಾಗುವುದು ಇನ್ನೊಂದು ಮಾದರಿ. ಇದನ್ನು ಸಂಗೋಪನ ಸಹೋಚ್ಚಾರಣೆ ಎನ್ನುತ್ತಾರೆ. ಹಿಂದಿನ ಧ್ವನಿಯ ಲಕ್ಷಣಗಳು ಮುಂದಿನ ಧ್ವನಿಯಲ್ಲೂ ಸೇರುವುದರಿಂದ ಈ ಹೆಸರು.

ಕನ್ನಡದಲ್ಲಿ ‘ಸಿಟ್ಟು’ ಮತ್ತು ‘ಸುಡು’ ಎಂಬ ಪದಗಳನ್ನು ಉಚ್ಚರಿಸುವಾಗ ‘ಸ್’ ಧ್ವನಿಯ ಉಚ್ಚಾರಣಾ ಲಕ್ಷಣಗಳನ್ನು ಗಮನಿಸಿ. ‘ಸಿಟ್ಟಿ’ನಲ್ಲಿ ಸ್ ಉಚ್ಚರಿಸುವಾಗ ತುಟಿಗಳು ವಿವೃತವಾಗಿರುತ್ತವೆ. ‘ಸುಡು’ ವಿನ ‘ಸ್’ ಉಚ್ಚಾರಣೆಗೂ ಇದಕ್ಕೂ ವ್ಯತ್ಯಾಸವಿದೆ. ಈ ಉಚ್ಚಾರಣಾಂಶಗಳ ವ್ಯತ್ಯಾಸಕ್ಕೆ ಮುಂದೆ ಬರುವ ಸ್ವರಗಳೇ ಕಾರಣ. ಕ್ರಮವಾಗಿ ಅವು ‘ಇ’ ಮತ್ತು ‘ಉ’. ಈ ಸ್ವರಗಳ ಉಚ್ಚಾರಣೆಗಾಗಿ ತುಟಿಗಳು ಯಾವ ಸ್ಥಿತಿಯಲ್ಲಿ ಇರಬೇಕೋ ಆ ಸ್ಥಿತಿಗೆ ‘ಸ್’ ಕಾರದ ಉಚ್ಚಾರಣೆಯ ಸಂದರ್ಭದಲ್ಲೇ ಸಿದ್ಧವಾಗಿವೆ. ಹಾಗಾಗಿ ಇದು ನಿರೀಕ್ಷಣ ಸಹೋಚ್ಚಾರಣೆಗೆ ಒಂದು ನಿದರ್ಶನ. ಮೇಲೆ ಹೇಳಿದ ‘ಮರ’ದ ಮೊದಲ ಸ್ವರ ‘ಅ’ ಕಾರದ ಉಚ್ಚಾರ ಸಂಗೋಪನ ಸಹೋಚ್ಚಾರಣೆಗೆ ನಿದರ್ಶನ.

ಉಚ್ಚಾರಣಾ ವಿಧಾನಗಳು

1. ಸ್ವರ್ಶ : ಗಾಳಿಯ ಪ್ರವಾಹಕ್ಕೆ ಉಚ್ಚಾರಣಾ ಸ್ಥಾನದಲ್ಲಿ ತಾತ್ಕಾಲಿಕ ಮತ್ತು ಪೂರ್ಣತಡೆ. ಗಾಳಿ ಒತ್ತಡದೊಡನೆ ಹೊರಹೋಗುತ್ತದೆ. ಅದಕ್ಕೆ ಸ್ಫೋಟವೆಂದೂ ಕರೆಯುತ್ತಾರೆ.

ಕನ್ನಡದ ಕೆಲವು ಧ್ವನಿಗಳು
ಸ್ಪರ್ಶ ಪ್, ಕ್
ಘರ್ಷ ಸ್
ಅನುಘರ್ಷ ತ್ಸ್ (ಕೆಲವು ಉಪಭಾಷೆಗಳಲ್ಲಿ)
ಲೋಡಿತ ರ್
ತಾಡಿತ ಸ್ವರಗಳ ನಡುವೆ ಬರುವ ಡ್ ಕಾರ
ಪಾರ್ಶ್ವಿಕ ಳ್
ಅನುನಾಸಿಕ ನ್, ಮ್

2. ಘರ್ಷ : ಗಾಳಿಯ ಪ್ರವಾಹಕ್ಕೆ ಉಚ್ಚಾರಣಾ ಸ್ಥಾನದಲ್ಲಿ ಹೊರ ಹೋಗಲು ಕಿರಿದಾದ ಅವಕಾಶ ಕಲ್ಪಿಸುವುದು. ಸ್ಥಳೀಯ ಕಂಪನದೊಡನೆ ಗಾಳಿ ಹೊರ ಹೋಗುತ್ತದೆ.

3. ಅನುಘರ್ಷ : ಸ್ಪರ್ಶದಂತೆ ಮೊದಲಾಗಿ ಘರ್ಷದಂತೆ ಕೊನೆಗೊಳ್ಳುವ ಧ್ವನಿ. ಸ್ಪರ್ಶಘರ್ಷ ಅಥವಾ ಊಷ್ಮಧ್ವನಿಯೆಂದೂ ಕರೆಯುತ್ತಾರೆ.

4. ಲೋಡಿತ : ಗಾಳಿಯು ಪ್ರವಾಹವಿರುವಾಗ ಉಚ್ಚಾರಣಾಂಗ ಉಚ್ಚಾರಣಾ ಸ್ಥಾನಕ್ಕೆ ಒಂದೇ ಬಾರಿ ಬಡಿದು ಹಿಂದೆ ಸರಿಯುವುದು. ಈ ಕ್ರಿಯೆ ಒಂದೇ ಸಮನೆ ನಡೆಯುತ್ತದೆ. ಇದನ್ನು ಕಂಪಿತವೆಂದೂ ಕರೆಯುವರು.

ತಾಡಿತ : ಲೋಡಿತ ಧ್ವನಿಯಂತೆಯೇ ಇರುವುದು. ಆದರೆ ಬಡಿದು ಹಿಂದಿರುಗುವ ಕ್ರಿಯೆ ಒಮ್ಮೆ ಮಾತ್ರ ಸಂಭವಿಸುತ್ತದೆ.

ಪಾರ್ಶ್ವಿಕ : ಗಾಳಿಯ ಪ್ರವಾಹದ ಮಧ್ಯವರ್ತಿ ಗೆರೆಯ ಎರಡು ಬದಿಗಳಲ್ಲಿ ಒಂದೆಡೆ ಪ್ರವಾಹಕ್ಕೆ ಉಚ್ಚಾರಣಾ ಸ್ಥಾನದಲ್ಲಿ ಅಡ್ಡಿಯಾಗುವಂತೆ ಮಾಡಿ, ಅಲ್ಲಿಯೇ ಇನ್ನೊಂದು ಬದಿಯಲ್ಲಿ ಅದು ಹರಿಯಲು ಅವಕಾಶ ನೀಡಿದಾಗ ಉಂಟಾಗುವ ಧ್ವನಿ.

ಅನುನಾಸಿಕ : ಆಸ್ಯಕುಹರದಲ್ಲಿ ಸ್ಪರ್ಶ ಧ್ವನಿಯ ಉಚ್ಚಾರಣೆಗಾಗಿ ಸಿದ್ಧತೆಯಾಗಿರುವಾಗಲೇ ಕಿರುನಾಲಿಗೆಯನ್ನು ಮುಂದೆ ಸರಿಸಿ ಗಾಳಿಯ ಪ್ರವಾಹದ ಒಂದಂಶವು ನಾಸಾಕುಹರದ ಮೂಲಕವೂ ಪ್ರವಹಿಸುವಂತೆ ಮಾಡುವುದು.

ಧ್ವನಿಲಿಪಿ : ಜಗತ್ತಿನ ಬಹುಭಾಷೆಗಳಿಗೆ ಬರಹ ರೂಪವಿಲ್ಲ. ಲಿಪಿಯುಳ್ಳ ಭಾಷೆಗಳೂ ಹತ್ತಾರು ಬಗೆಯ ಲಿಪಿಗಳನ್ನು ಬಳಸುತ್ತವೆ. ಆ ಲಿಪಿವ್ಯವಸ್ಥೆಯೂ ಪರಿಪೂರ್ಣವಲ್ಲ. ಏಕೆಂದರೆ ಉಚ್ಚಾರಣೆಗೂ  ಲಿಪಿಯಲ್ಲಿ ಅವು ಪ್ರತಿನಿಧಿತ ವಾಗುವುದಕ್ಕೂ ಪೂರ್ಣ ಪ್ರಮಾಣದ ಹೊಂದಾಣಿಕೆ ಇರುವುದಿಲ್ಲ. ಭಾಷೆಗಳನ್ನು ಅಧ್ಯಯನ ಮಾಡುವವರು ಮಾಹಿತಿಯನ್ನು ಲಿಖಿತವಾಗಿ ದಾಖಲಿಸುವುದು ಅವಶ್ಯ. ಆದ್ದರಿಂದ ಭಾಷಾ ಧ್ವನಿಗಳ ಪ್ರತಿನಿಧೀಕರಣಕ್ಕಾಗಿ ಒಂದು ಲಿಪಿ ವ್ಯವಸ್ಥೆಯನ್ನು ರೂಪಿಸಲು ಭಾಷಾಶಾಸ್ತ್ರಜ್ಞರು ಯೋಜಿಸಿದ್ದಾರೆ. ಈ ಲಿಪಿ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಧ್ವನಿಲಿಪಿ ಎಂದು ಕರೆಯುವರು.

ಫ್ರಾನ್ಸ್‌ನ ಕೆಲವು ಭಾಷಾ ಶಿಕ್ಷಕರು 1886ರಲ್ಲಿ ಧ್ವನಿಶಾಸ್ತ್ರದ ಅಧ್ಯಯನ ಕ್ಕಾಗಿ ಒಂದು ಸಂಘವನ್ನು ರಚಿಸಿಕೊಂಡರು. ಮರುವರ್ಷವೇ ಅದು ಅಂತಾ ರಾಷ್ಟ್ರೀಯ ಧ್ವನಿವಿಜ್ಞಾನ ಸಂಘವೆಂದು ಹೆಸರು ಪಡೆದು ಕೊಂಡಿತು. ಯೆಸ್ಪರ್ಸನ್ ಎಂಬ ಭಾಷಾಶಾಸ್ತ್ರಜ್ಞ ಧ್ವನಿಲಿಪಿಯೊಂದರ ಅವಶ್ಯಕತೆಯನ್ನು 1886ರಲ್ಲಿ ಪ್ರತಿಪಾದಿಸಿದ್ದರು.

ಅದರಂತೆ 1888ರಲ್ಲಿ ಅಂತಾರಾಷ್ಟ್ರೀಯ ಧ್ವನಿಲಿಪಿಯೊಂದನ್ನು ಈ ಸಂಸ್ಥೆ ರೂಪಿಸಿತು.

ಈ ಧ್ವನಿಲಿಪಿಯ (IPA) ಹಿಂದಿರುವ ತಾತ್ತ್ವಿಕತೆ ಸರಳವಾದುದು.

1. ಒಂದು ಧ್ವನಿಗೆ ಒಂದು ಚಿಹ್ನೆ

2. ಎಲ್ಲ ಭಾಷೆಗೂ ಒಂದೇ ಲಿಪಿ.

ಈ ಲಿಪಿಯಲ್ಲಿ ಬಹುಪಾಲು ರೋಮನ್ ಅಕ್ಷರಗಳಿವೆ. ಕೆಲವು ಹೊಸ ಅಕ್ಷರಗಳನ್ನು ಉಪ ಚಿಹ್ನೆಗಳನ್ನು ರೂಪಿಸಿದ್ದಾರೆ.

ಹೊಸ ಹೊಸದಾಗಿ ಭಾಷೆಗಳ ದಾಖಲಾತಿ ನಡೆಯುತ್ತ ಬಂದಂತೆ ಆ ಭಾಷೆಗಳ ಧ್ವನಿಗಳನ್ನು ಬರೆಯುವಲ್ಲಿ ಈ IPAಯ ಮಿತಿಗಳು ಗೊತ್ತಾಗುತ್ತ ಬಂದಿವೆ. ಆದ್ದರಿಂದ ಅದನ್ನು ಸೂಕ್ತವಾಗಿ ಪರಿಷ್ಕರಿಸುವ ಆವಶ್ಯಕತೆ ಕಂಡಿದೆ. ಈ ಪರಿಷ್ಕರಣೆ ಎಂದರೆ ಮುಖ್ಯವಾಗಿ ಹೊಸ ಚಿಹ್ನೆಗಳನ್ನು ರೂಪಿಸುವುದು ಮತ್ತು ಹೊಸ ಉಪಚಿಹ್ನೆಗಳನ್ನು ಅಳವಡಿಸುವುದು. ಈಗಲೂ ಈ ಸಂಸ್ಥೆ ಕಾರ್ಯ ನಿರತವಾಗಿದೆ.