ಅನವರತ

[1] ಪಾತಾಳದಹಿಕಾ
ಮಿನಿಯರಾ ಪರಿಖೆಯಲಿ ಪೊಱಮ
ಟ್ಟನುನಯದಿ ತತ್ಪುರದ ಮಣಿಮಯ ಕೋಡು[2] [3]ಗಳನೇ [4]ಱೆ
ಮನವೊಲಿದು ಸುರನದಿಯೊಳಾಡುವ
ರೆನಲು ಪರಿಖೆಯ ಖಾ[5]ತವನು ತ
ತ್ಕನಕಕೋಟೆ[6]ಯ ಘನತೆಯನು ವರ್ಣಿಸುವರಾ[7]ರೆಂದ  ೨೧

ಸುರಪುರದ ಸಡಗರವನಳಕಾ
ಪುರದ ಸೊಬಗ[8]ನನಂತಪುರದೈ
ಶ್ವರಿಯವನು ಲಂಕಾಪುರದ ವಿಭವವನು ಕೈಲಾಸ
ಪುರದ ವಿಸ್ತಾರವನಯೋಧ್ಯಾ
ಪುರದ ಸೊಂಪ ರ[9]ಮಾವ[10]ರನ[11] ಪುರ
ಸಿ[12]ರಿಯನೊಳಕೊಂಡಿರ್ಪು[13]ದಾ ಪುರವರಸ ಕೇಳೆಂದ   ೨೨

ಲಲಿತ ಕೂಪೋದ್ಯಾನಹರ್ಮ್ಯಾ
ವಳಿಗಳಿಲ್ಲದ ವಾಸ ಮಣಿಮಯ
ಕಳಶವೆತ್ತದ ವಿಪಣಿ ನಿರ್ಜನದೆಡೆ ಕುರೂಪಾದ
ಲಲನೆ ಪೂವಲಿಗೊಡದ ಮಾರ್ಗ
ಸ್ಥಳದ ಕೋವಿದಮ[14]ನುಜರಿಲ್ಲೆನೆ
ಹೊಱಲ ಮಹದೈಶ್ವರ್ಯವನು ವರ್ಣಿಸುವರಾ[15]ರೆಂದ                ೨೩

ಧರೆಗೆ ಪುರವಿದನಂತಪಾವನ
ತರವೆನುತೆ ಚೌವೀಸತೀರ್ಥಂ[16] ಕರ[17]ರು ತಮ್ಮಯ ಸಮವ[18]ಸರಣಸಮೇತ ಬಂದೊಲಿದು
ಸುರುಚಿರದೊಳೆಸೆದಿರ್ದ[19]ರೆನ[20]ಲಂ
ಬರವ ಮುಟ್ಟಿಹ ರತ್ನಮಯ ಗೋ
ಪುರಗಳಿಂ ಚೈತ್ಯಾಲಯಗಳೊಪ್ಪಿ[21]ರ್ದುವೊ[22]ಗ್ಗಿನಲಿ      ೨೪

ಪರಮಧರ್ಮ ಪುರಾಣದರ್ಥೋ
ತ್ಕರವ ತಿಳಿಯದೆ ಕಮಲಭವನಾ
ಪುರದ ಭೂಸುರರೆಡೆಗೆ ಬಂದದನಱೆದನಾ ದ್ವಿಜರ
ಹೊರೆಯಲನುಪಮನೀತಿ ಶಾಸ್ತ್ರೋ
ತ್ಕರವನಭ್ಯಾಸಿಸುವನಾ ಸುರ
ಗುರುವೆನಲು ತತ್ಪುರದ ವಿಬುಧರ ಪೊಗಱ ನಾರೆಂದ    ೨೫

ಘನರಜೋಮಯ ಬಿಸಜ ಮಧುಭಾ
ಜನ ಸಕಂಟಕವಾಱಡಿಯ ತಾ
ಯ್ವನೆ ಜಡಾಶ್ರಯ ಕುವಲಯದ್ರೋಹಾನುರಕ್ತವದು
ವಿನುತರಾಜಾರಾ[23]ತಿಯೆಂದಾ
ವ[24]ನಜವನು ಸಿರಿಯುಱೆದು[25] ವಣಿಜರ[26]ಕನಕ ಹರ್ಮ್ಯ[27]ದೊಳಿರ್ದಳೆನೆ ವರ್ಣಿಸುವರಾ[28]ರೆಂದ  ೨೬

ಧನಕನಕ ಮೊದಲಾದಪೂರ್ವದ
ಘನತರದ ವಸ್ತುಗಳಿಗೋಸುಗ
ಧ[29]ನದ ತಾನಾ ಪುರದ ವಣಿಜಾ[30] ಪಣಕೆ ಬಂದೊಸೆದು
ವಿನುತವಸ್ತೂತ್ಕರಗಳನು ಕೊಂ
ಡನವರತ ಪುರಿಗು[31]ಯ್ವುತಿಹನೆಂ
ದೆ[32]ನಲು[33] ವಣಿಜರ ಮಹಿಮೆಯನು ತಾ ಹೊಗಱ್ವನಾರೆಂದ        ೨೭

ಒ[34]ರೆಯದಷ್ಟಾಪದದ [35]ವರ್ಣಾಂ[36] ತರವ[37]ನೀಕ್ಷಿಸಿ ಪೇಱ್ವ[38] ಘಟ್ಟಿಯ
ಭರವ[39] ಕೈತೂಕದಲಿ ತಪ್ಪದೆ ಪೇಱ್ವ[40] ಗಣಿಯಿಸದೆ
ಭರದಿ ಲೀಲಾಮಾತ್ರದಿಂದುರು
ತರದ ಮಚ್ಚವ ಕಟ್ಟುವತಿ ಚಾ
ತುರಿ[41]ಯರಿಪ್ಪರು ಚಿನ್ನವರದರು ತತ್ಪುರಾಂತ[42]ದಲಿ     ೨೮

ಲಲಿತಯಮುನೆಯೊಳುಡು[43]ನಿಕರ ಮಾ
ರ್ಪೊ[44]ಳೆವವೊಲು ನೀಲಾಂಬರದಿ ಮಣಿ
ಬಳಸಿರಲು ಮಣಿವಾಳರಂಗಡಿಯೆಸೆ[45]ದುವ[46]ಬ್ವಸಖ
ಹೊಱಲ ನೋಡುವೆ[47]ನೆಂದು[48] ಗ್ರಹಸಂ
ಕುಳಸಹಿತ ಬಂದಿರ್ದನೆನೆ ಕ
ಣ್ಣೊಳಿ[49]ಸಿ ಮೆಱೆದುವು[50] ಕಂಚುಗಾಱರ ಪಸರವೊಗ್ಗಿನಲಿ            ೨೯

ಮಕರಕೇತನನಂಕಮಾಲಾ
ಪ್ರಕಟಿತಧ್ವಜವೆತ್ತಿದುರು[51] ಮೌ
ಕ್ತಿಕದ ಹರ್ಮ್ಯಾವಳಿಯ ಶುಕಶಾರಿ[52]ಕ ಪಿಕಾ[53]ರವದ
ಸಕಲ ರಾಜಭುಜಂಗತಾಟಿತ
ನಿಕಟ ಘಂಟಾ[54]ರವದ[55] ವೈದೂ[56] ಷಿಕ ವಿಟಾನ್ವಿತ ಸೂಳೆಗೇರಿಗಳೆಸೆದುವೊಗ್ಗಿನಲಿ           ೩೦

ಆಕೃತಿ [57]ಗತಿಸ್ತಂಭಸಹಿತಾ
ಲೋಕ[58]ನವೆ [59]ಜನ[60] ವಶ್ಯವಾದವೊ[61] [62]ಲಾಕರುಷ[63] ರತಿಯ[64]ನ್ಯ ಸುರತೋಚ್ಚಾಟನ ತ್ಯಜಿತ
ಪ್ರಾಕಟದ ಮಾರಣದ ಕೃತ್ಯವ
ಚಾ[65]ಕುಶಲ ಮೋಹನ[66]ದ ಮಂತ್ರಾ
ನೀಕವೆನಿ[67]ಸುವ ಗಣಿಕೆಯರು ಮೆಱೆದಿರ್ಪ[68]ರೊಗ್ಗಿನಲಿ    ೩೧

ಹೊಳೆವ ನಯನೋಷ್ಠಾಂಶುಗಳಲು
ತ್ಪಳದೆಸ[69]ಱು ರಕ್ತಾಂಬುರುಹವೆಂ
ದೆಳಸಿ ಕೊಂಡೆಯ್ದಲ್ಕೆ ಮಲ್ಲಿಗೆಯಾಗೆ ಮಗುಱ್ದವರ
ಮುಳಿದು ಸಲುವು[70]ದೆ ಠೌ[71]ಳಿಕದ ಮಾ
ಱೆಳೆ[72]ಯೊಳೆನೆ ಕೈವೊಯ್ದು[73] ನಗುತು
ಜ್ವಳಿಸುತಿರ್ಪ[74]ರು ಮಾಲೆ[75]ಗಾರ್ತಿಯರಾ ಪುರಾಂತದಲಿ           ೩೨

[76]ಬಳಸಿದಳಿ[77] ನೀಲಾಭ್ರವಕ್ಷಿಯ
ಹೊಳಹು ಮಿಂಚು ವಿಭೂಷಣಾ[78]ರವ[79] ಮೊಱಗು ಮ[80]ಣಿಮೇಖಲೆಯೆ[81] ಸುರಧನು ಘರ್ಮಜಳಕರಕ
ಚಳಿತಕಚ[82] ನವಿಲಾಟ ಕುಸುಮಾ
ವಳಿಯ ರಸಮಱೆಯಾ[83]ಗೆ ಮೆಱೆದಿಹ
ರೊಲಿದು ಘನ ಕಾರ್ಗಾಲದಂದದಿ ಮಾಲೆಗಾರ್ತಿಯರು  ೩೩

ಚಾರು ಚಂದ್ರಿಕೆಯೊಳು ಕಳಂಕವ[84] ಸೇರಿಸುವವೊಲು ಕ[85]ಪ್ಪುರದಿ[86]ಕ
ಸ್ತೂರಿಯನು [87]ಮೇಳೈಸಿ[88] ತನುಸೌರಭವನಳವಡಿಸಿ
ಹಾರಕುಚ ಕುಣಿದಾಡಲಳಿ ಝೇಂ
ಕಾರಕಗಿಯುತ ಗಂಧವನು ವಿ
ಸ್ತಾ[89]ರದಿಂ[90] [91]ತೆಗೆದೆ[92] ಸೆವರಲ್ಲಿಯ ಘಟ್ಟಿವ[93]ಳ್ತಿಯರು  ೩೪

[94]ಪದ[95] ನಖಾಂಶುಗಳಿಂದ ಶಶಿಕಾಂ
ತದವೊಲಿರಲಳಕದಲಿ ಹರಿನೀ
ಲದವೊಲಿರಲಂಗಪ್ರಭೆಯೊಳದು ಗೌರದಂತಿರಲು
ಅಧರ ದೀಪ್ತಿಯೊಳಬ್ಜರಾಗದ
ವಿಧದೊಳಿರೆ ಕಂಡಗಿದು ಮಾಯಾ
ಸ್ಪದದಿ ಚೆಂಡೆಂದುಱೆವರತಿ ಮುಗ್ಧೆಯರು ನಗರದಲಿ     ೩೫

ವಿನುತ ವಸ್ತ್ರಾಭರಣವನು ಲೇ
ಪನ ಕುಸುಮಸಂಕುಳದಿ ಕೆಯ್ಗೆ
ಯ್ದನುನಯದಿ ಗಿಳಿಗೋದಿಸುತ ಮೃದುಗದ್ಯಪದ್ಯಗಳ
ಮನುಮಥನ ಪರದೇವತೆಯರೆಂ
ದೆನಲಖಿಳ ಸೊಬಗಿಂದ ಪುರದಂ
ಗನೆಯರೆಸೆದಿಹ[96]ರೆತ್ತ ನೋಡಿ[97] ದೊಡ[98]ರಸ ಕೇಳೆಂದ  ೩೬

ಧರಣಿಯಮರರ ಶಾಸ್ತ್ರ ಘೋಷೋ
ತ್ಕರ ವಿಜೃಂಭಿತ ಪಂಚವಾದ್ಯ
ಸ್ವರವು ಹಯಹೇಷಾರವವು ಗಜಬೃಂಹಿತಧ್ವಾನ
ಸರಸ ಗಾನನಿ[99]ನಾದ[100] ಪಿಕಮಧು
ಕರಗಳಾರವವಬಲೆಯರ ನೂ
ಪುರದ ರವವಲ್ಲದೆ ಪುರದೊ[101]ಳಪಶಬ್ದವಿಲ್ಲೆಂದ            ೩೭

ದಾನಿಗಳನಚಲಿತರ ವಿಮಲ
ಜ್ಞಾನಿಗಳನುತ್ತಮರ ನಯಸ
ನ್ಮಾನಿಗಳ ಮದನಾನುರೂಪರ ಸರಸಕೋವಿದರ
ಭೂನುತರನುಜ್ವಲರನಮಲಗು
ಣಾನುರಕ್ತರ ಧಾರ್ಮಿಕ[102]ರನವ
ಧಾನಿಗಳನಲ್ಲದೆ ಪುರಾಂತದಿ ಕಾಣೆ ನಾನೆಂದೆ ೩೮

ವ[103]ರಸಮುದ್ರದ ನಡು[104]ವೆ ಮೆಱೆವುರು
ತರದ ವಜ್ರದ ವೇದಿಕೆಯವೊಲು
ಪುರದ ಮಧ್ಯದ ಮಣಿಮಯದ ಹೊಂಗೋಂ[105]ಟೆ ರಂಜಿಸಲು
ಸುರಗಿರಿಯ ಮೇಲತುಳಗಿರಿ[106]ಗಳ[107] [108]ನಿರಿಸಿದಂದದಿ[109] ಕನಕಮಯದು
ಪ್ಪರಿಗೆಗಳು[110] ರಂಜಿಸಿತು ಗೋಪುರವರಸ ಕೇಳೆಂದ     ೩೯

ಕನಕದಲಿ ಸಮೆ[111]ದಖಿಳಸಚಿವರ
ಮನೆಗಳಿರೆ ಶಸ್ತ್ರೇಭಶಾಲಾ
ವಿನುತ ಹಯ ಮಂದಿರಗಳಿಂದರಸಿಯರ ಮಣಿಮಯದ
ಘನವೆನಿಪ ಹರ್ಮ್ಯಾಳಿ ದೇವಾ
ರ್ಚನೆಯ ಗೃಹ ಮಣಿಮಂಟ[112] ಪೋದ್ಯ[113] [114]ದ್ವನಗಳಿಂದರಮನೆ ವಿರಾಜಿಸಿತಖಿಳವಿಭವದಲಿ[115]     ೪೦

[1] + ದಾ (ಜ)

[2] ಟೆ (ಜ, ಮ)

[3] ಳೇ (ಜ)

[4] ಳೇ (ಜ)

[5] ಘಾ (ಜ, ಮ)

[6] ಟಿ (ಪ)

[7] ನಾ (ಮ)

[8] ಗಿ (ಮ)

[9] ನು (ಜ, ಮ)

[10] x (ಜ), ರ (ಮ)

[11] x (ಜ), ರ (ಮ)

[12] ಸ (ಮ)

[13] ಪ್ಪು (ಜ, ಮ)

[14] ವ (ಜ)

[15] ನಾ (ಮ)

[16] ರ್ಥ (ಜ)

[17] x (ಜ)

[18] ದ (ಮ)

[19] ನೆರೆ (ಮ), ರೆನೆ (ಜ)

[20] ನೆರೆ (ಮ), ರೆನೆ (ಜ)

[21] ದವುದೊಲ (ಜ), ದವುವೊ (ಮ)

[22] ದವುದೊಲ (ಜ), ದವುವೊ (ಮ)

[23] x (ಜ)

[24] + ವ (ಜ)

[25] ದ (ಜ, ಮ)

[26] x (ಮ)

[27] x (ಮ)

[28] ನಾ (ಮ)

[29] x (ಮ)

[30] ಜೋ (ಜ)

[31] ಗೊ (ಜ, ಮ)

[32] ನುಲ (ಜ)

[33] ನುಲ (ಜ)

[34] ದೊ (ಜ)

[35] ಬಣ್ಣಾಂ (ಜ, ಮ)

[36] ಬಣ್ಣಾಂ (ಜ, ಮ)

[37] x (ಜ)

[38] ಱ್ದ (ಜ, ಮ)

[39] x (ಜ)

[40] ಱ್ವೆ (ಜ)

[41] ಳಿ (ಜ)

[42] + ರ (ಜ)

[43] x (ಜ)

[44] ಪೊ (ಮ)

[45] ದವ (ಜ), ದುದ (ಮ)

[46] ದವ (ಜ), ದುದ (ಮ)

[47] ನೆನುತ (ಮ)

[48] ನೆನುತ (ಮ)

[49] ಸುತಿದ್ದು (ದು) – (ಮ)

[50] ಸುತಿದ್ದು (ದು) – (ಮ)

[51] ದು (ಮ)

[52] ರ (ಜ)

[53] ಕ (ಮ)

[54] ರಾವ (ಜ, ಮ)

[55] ರಾವ (ಜ, ಮ)

[56] ಯಾ (ಜ)

[57] x (ಜ)

[58] ಜನ (ಜ), ಸ, (ಮ)

[59] x (ಜ)

[60] x (ಜ)

[61] ವ (ಜ, ಮ)

[62] ಳೋಕರುಷಿ (ಜ), ಲೋಕರುಷಿ (ಮ)

[63] ಳೋಕರುಷಿ (ಜ), ಲೋಕರುಷಿ (ಮ)

[64] ಅ (ಜ, ಮ)

[65] ಚೋ (ಮ)

[66] ರ (ಜ, ಮ)

[67] x (ಜ)

[68] ಪ್ಪ (ಜ), ರ್ದ (ಮ)

[69] ಸೆ (ಪ)

[70] ವ (ಮ)

[71] ರೌ (ಮ)

[72] x (ಮ)

[73] ಯ್ವ (ಜ, ಮ)

[74] ಪ್ಪ (ಜ)

[75] ತೆ (ಜ)

[76] x (ಜ), ಬಳಸಿ (ಮ)

[77] x (ಜ), ಬಳಸಿ (ಮ)

[78] ವರ (ಜ)

[79] ವರ (ಜ)

[80] ವ (ಜ)

[81] ಯ (ಜ, ಮ)

[82] ಖ (ಮ)

[83] ಯೊಳ (ಜ)

[84] x (ಜ)

[85] ರ್ಪುರದಿ (ಜ), ರ್ಫುರದಿ (ಮ)

[86] ರ್ಪುರದಿ (ಜ), ರ್ಫುರದಿ (ಮ)

[87] ಮಳೈಸಿ (ಜ)

[88] ಮಳೈಸಿ (ಜ)

[89] ರಿಸಿ (ಮ)

[90] ರಿಸಿ (ಮ)

[91] x (ಮ)

[92] x (ಮ)

[93] ವಾ (ಜ)

[94] ಮೃದು (ಮ), ಮೃದುಪದ (ಜ)

[95] ಮೃದು (ಮ), ಮೃದುಪದ (ಜ)

[96] ರೆ (ಜ)

[97] ದರ (ಜ, ಮ)

[98] ದರ (ಜ, ಮ)

[99] ದಾನ (ಜ, ಮ)

[100] ದಾನ (ಜ, ಮ)

[101] ದ (ಜ)

[102] x (ಜ)

[103] ನ (ಜ, ಮ)

[104] ಡ (ಮ)

[105] ಗೋ (ಜ, ಮ)

[106] x (ಜ)

[107] x (ಜ)

[108] ಸಿ ಗಂಧದಿ (ಜ)

[109] ಸಿ ಗಂಧದಿ (ಜ)

[110] ಳ (ಜ, ಮ)

[111] ವೆ (ಜ, ಮ)

[112] ಪೋದ್ಯಾ (ಜ), ಪಾದ್ಯಾ (ಮ)

[113] ಪೋದ್ಯಾ (ಜ), ಪಾದ್ಯಾ (ಮ)

[114] ನಿಗಳಲಿಂದರಮನೆ ವಿರಾಜಿಸಿತಿದರ ವಿಭವದಲಿ (ಜ), ವನಗಳಿಮದರಮನೆ ವಿರಾಜಿಸಿತಿದರ ರವದಲಿ (ಮ)

[115] ದಿಲ (ಜ), ದಲ (ಮ)