ಆ ಮಹಾಮಂದಿರ೪ದೊಳ

[1]ವನೀ
ಭಾಮಿನೀ ಸುಪ್ರೇಮ ರಾಜಲ
ಲಾಮ ವಿದ್ಯಾಸೀಮ [2]ವರ[3]ವಿತರಣಗುಣಾರಾಮ
ಕಾಮರೂಪ ಕಳಾಭಿರಾಮ ಮ
ಹಾಮಹಿಮ ಗುಣಧಾಮ ಜಯ ಸಂ
ಗ್ರಾಮನೊಲವಿಂದಿರ್ದ ಸತ್ಯಂಧರ ಮಹೀಪಾಲ           ೪೧

ತನುರುಚಿಯ ಮುಂದಿನ[4]ನ ರುಚಿ ಕ
ಪ್ಪನುಪಮಾಕಾರದಲಿ ಹೃಜ್ಜಾ
ತನು ಕುರೂಪನು ಶಾಂತದಲಿ ಶಶಿ [5]ಬಿಸಿ[6] ಗಭೀರದಲಿ
ವನಧಿ [7]ತೆಳ್ಳ[8]ನೆ ಸತ್ಯದಲಿ ಧ
ರ್ಮನು ಹುಸಿಕನತಿರೋಷದಲಿ ತ
ಣ್ಣನೆ ದವಾನಳನೆಂದೂ[9]ಡರಸನ ಪೊಗಱ್ವನಾ[10]ರೆಂದ    ೪೨

ಸ್ಮರನನಂಗ ಮೃಗಾಂಕ ದೋಷಾ
ಕರ ದಿನಾಧಿಪನುಷ್ಣಕರ ಶಂ[11] ಕರ ಕಪಾಲಿ ರಮೇಶ ಪುಣ್ಯಜನಾರಿ[12] ಧಾತ ವಿ[13]ಧಿ
ಸುರಪಪಾರದ್ವಾ[14]ರ ನ[15]ಳ ಕೂ
ಬರ ಹಯಾ[16]ಸ್ಯನು ಗಂಧವಹನತಿ
ತರಳ ನಿನ್ನಾರೆಣೆ ನೃಪಾಲಂಗರಸ ಕೇಳೆಂದ   ೪೩

ಅರಸನಾಶ್ರಿತಜನವ ತನ್ನಯ[17]ಪರಿಯ[18] ಮಾಡಲು ನಾಚಿ ಮಲಯಜ
ವಿರದೆ ಮರನಾಗಿರ್ದು[19]ದಾ ಸುರಧೇನು ಮೌ[20]ನವನು
ಧರಿಸಿತಮರದ್ರುಮವು ಸ್ವರ್ಗಾಂ
ತರಕೆ ಸರಿದುದು ಸಿದ್ಧರಸ ನೆಱೆ
ಕರಗಿತೆನಲಾ ಭೂಮಿಪನ ವರ್ಣಿಸುವನಾ[21]ರೆಂದ         ೪೪

ಧರಗೆ [22]ವನ[23]ವಿಧಿ ಜಸಕೆ ದೆಸೆಯೈ[24] ಶ್ವರಿಯಕಿಂದ್ರನುದಾರತೆಗೆ ಭೂ
ಸುರರ ದಣಿಸುವುದರ್ಹಭಕ್ತಿಗೆ ಮುಕ್ತಿ ಚೆಲ್ವಿ[25]ಕೆಗೆ
ಸ್ಮರಜಯವು ಭುಜಬಲಕೆ ರಿಪುಸಂ
ಹರತೆ ವಿದ್ಯದಲಖಿಳಕಳೆಗಳ
ಪರಿಣತತ್ವವದವಧಿಯಾ ನೃಪಗರಸ ಕೇಳೆಂದ            ೪೫

ಅರುಹ ಭಕ್ತಿಯೊಳಾ [ಪ್ತ[26]] ವಿಬುಧೋ
ಶ್ಕರರ ಕಾಂಕ್ಷೆಯ ಹತಿ[27]ಸುವಲಿ ನಿ
ಷ್ಠುರ[28]ನು ಪಾಪದಿ [29]ಹೇಡಿ ನಿಂ[30]ದ್ಯಾಳಾಪದಲಿ ಬಧಿರ
ಪರಸತಿಯರೆಡೆಗಂಧನ[31] ತಿ ದು
ಶ್ಚರಿ[32]ತದೆ[33]ಡೆಯಲಿ ಮಂದನಾಗಿಹ
ನರಸ[34]ನೆನಲಾ ಭೂಮಿಪಾಲನ ಪೊಗಱ್ವನಾ[35]ರೆಂದ     ೪೬

ಸದಮಳನ ಪೂರ್ಣೇಂದು ಸನ್ನಿಭ
ವದನನನು ಕೀರ್ತ್ಯಂಗನಾನಿಜ
ಸದನ[36]ನನು ಮುಕ್ತಾಳಿರದನನ ನವ್ಯರೂಪಜಿತ
ಮದನ[37]ನನು ಪೌರಾಣನಯ ಕೋ
ವಿದನು ರತ್ನಚ್ಛದನನು ಜಯ
ಕದನನನು ವರ್ಣಿಸುವನಾರವನೀಶ ಕೇಳೆಂದ ೪೭

ಲಲಿತಧರ್ಮೋತ್ಸಾ[38]ಹ ವಿತರಣ[39] ಗಳಲಿ ರವಿನಂದನನ ತೇಜೋ
ಬಲ ಮನೋಜಯದಲ್ಲಿ[40] ಮರುತಾತ್ಮಜರ ಸಾ[41]ಕಾರ
ಬಲ[42] ಪರಾಕ್ರಮ ಚಾಪಕುಶಲತೆ
ಗಳಲಿ ಶಕ್ರನ ತನಯರನು ಗೆಲಿ
ದಿಳೆಯೊಳೆಣೆಯಿಲ್ಲೆನಿಸಿ ಮಿಗೆ ರಂಜಿಸಿದನವನಿಯಲಿ    ೪೮

ಧರೆಯ ಪಾತಾಳ[43]ಕ್ಕೊಗೆ[44]ದು ಕುಲ
ಗಿರಿಯ ಕಿತ್ತೀ[45]ಡಾಡಿ ಘನದಿ
ಕ್ಕರಿಯ ಶಿರಗಳ ಮೆಟ್ಟಿ ಕುಡು[46]ದಾಡೆಗಳ ನೆಱೆ ಕೀಱ್ವ
ಶರನಿಧಿಯ ಪೀರ್ವತುಳ ಮೃತ್ಯುವ
ನುರುತರದೊಳ[47]ಱೆಯ[48]ಟ್ಟುವ[49] ಭಟೋ
ತ್ಕ[50]ರದ ಸಂಖ್ಯೆಯನಾರು ಬಲ್ಲರು ಭೂಪ ಕೇಳೆಂದ      ೪೯

ಓಲಗದ ದಂತಿಗಳ ಮದಧಾ
ರಾಳಿಯಲಿ ನದಿಯಾಗೆ ಬಹು ಭೂ
ಪಾಳಕರ [51]ಭೂಷಾಳಿರುಕ್ಪೀ[52]ಡಿತದಿ ಕಾಂಚನದ
ಧೂ[53]ಳಿಯು[54]ದಿರಲು ತನ್ಮಹಾನದಿ
ಹೂಱೆದಪುದೆನಲೆಸೆವ ಕರಿಗಳ
ಜಾಲವನು ಭೂಮಿಪರ ಸಂಖ್ಯೆಯನಱೆವನಾರೆಂದ       ೫೦

ಭರದೊಳೋಡಿ[55] ಸಮೀರಣನ ವಿ
ಸ್ತರದಿ[56] ಝಳಕಿಸಿ ತಿರುಗುತಿಹ ಬಂ
ಧುರದ ಬೀಸ[57]ಣಿಗೆ[58]ಯನು ಭಂಜಣಿಗೆಯಲಿ ಮೆಲ್ನಡೆಯ
ವರಮರಾಳನ ಪೋಲ್ತುದಾ[59]ಯೆನೆ
ಚ[60]ರಿಸಿ ಹೋ[61]ಯೆನೆ ನಿಂದು ಸಿಂಹೋ
ತ್ಕರಗಳೆನೆ ಜಾತ್ಯಶ್ವಸಂಕುಳವೆಸೆ[62]ದುವೊ[63]ಗ್ಗಿನಲಿ      ೫೧

ಹುಸಿ ಕಳವು ದುಷ್ಕೃತ ಪರಸ್ತ್ರೀ
ವ್ಯಸನವಾರಡಿ [64]ಬಂದಿ ದಳದು[65]ಳ
ನುಸುಳು ಹಿಂಸೆ ವಿವಾದ ಕಲುಷೋನ್ಮಾದವಜ್ಞಾನ
ಪಿಸುಣ[66]ತನ[67] [68]ಕೊಲೆ [69]ಕೊಂಕು ಮದಕ
ರ್ಕಶ ವಚನ ವಾ[70]ಸೋದ[71]ದೋಷ
ಪ್ರಸರವಿಲ್ಲಾ ನೃಪನ ಕಾಲದೊಳರಸ ಕೇಳೆಂದ            ೫೨

ಕ್ಷೋಣಿಪತಿ ಕೇಳಾ ಮಹೀಶನ
ರಾಣಿಯನು [72]ಪ್ರೊತ್ತುಂಗ[73] ಪುಳಿನ
ಶ್ರೋಣಿಯನು ರಕ್ತಾಬ್ಜಪಲ್ಲವಪಾಣಿಯನು ಬರ್ಹಿ[74] ವೇಣಿಯನು ಜಾಣೆಯನು ವೀಣಾ
ವಾಣಿಯನು ಸೌಭಾಗ್ಯ ವಿಜಿತೇಂ
ದ್ರಾಣಿಯನು ವರ್ಣಿಸುವ೮ನಾರವನೀಶ ಕೇಳೆಂದ[75]      ೫೩

ನುತ ಸೊಬಗು ಸುಪತಿವ್ರತಾಗುಣ
ದ[76]ತಿಶಯದಲಾಕಾರದಲಿ ಸು
ವ್ರತದಿ ಸೌಭಾಗ್ಯದ ಸು[77] ಲಕ್ಷಣದಲಿ ಸುಶೀಲದಲಿ
ಚತುರತೆಯೊಳನುನಯದಿ ಲೋಕದ
ಸತಿಯರನು ಗೆಲಿದುದಱೆ[78] ವಿಜಯಾ
ವತಿಯೆನಿಪ ಪೆಸರಾದುದಾ ಸತಿಗರಸ ಕೇಳೆಂದ          ೫೪

ಗುಣಿಯನಬಲಾಮಣಿಯ ಮುನಿಪ
ಸೃಣಿಯನಂಗಜ ಕುಣಿಸುತಿರ್ಪ[79]ರ
ಗಿಣಿಯ ಕುಮುದೇಕ್ಷಣೆಯ ಶುಭಲಕ್ಷಣೆಯ ರೂಪಕದ
ಕಣಿಯ ಸಕಲಜನರ[80] ಮನೋಹಾ
ರಿಣಿಯ ಪಲ್ಲವಪಾ[81]ಣಿಯ [82]ವಿಚಾ
ರಿಣಿಯ ಚಿಂತಾಮಣಿಯ ರೂಪನು ಪೊಗಱ್ವನಾ[83]ರೆಂದ ೫೫

ಬಾಲೆಯನು ಮನಸಿಜನ ಶಸ್ತ್ರದ
ಶಾಲೆಯನು ಚಾರಿತ್ರ ಗುಣಮಣಿ
ಮಾಲೆಯನು ಶೃಂಗಾರರಸಪೂರಿತಮಹಾಬುಂಧಿಯ
ಮೇಲೆಯನು ರತಿಪತಿಯ ಮಂಗಳ
ಲೀಲೆಯನು ಖಂಡೇಂದು ಸನ್ನಿಭ
ಭಾಳೆಯನು ನುತಶೀಲೆಯನು ವರ್ಣಿಸುವನಾರೆಂದ     ೫೬*

ನಾರಿಯನು ಸತ್ಯಂಧರಮನೋ
ಹಾರಿಯನು ನಾಕಪ್ರಸುಖ[84]ಸಾ
ಕಾ[85]ರೆಯನು ಧೀರೆಯನು ನವಲಾವಣ್ಯವಾರಿಧಿಯ
ಏಱೆಯನು ಮುನಿನಿಕರ[86]ಧೀರ[87]ಪ
ಹಾರಿಯನುದಾರೆಯನು ವಿಗತ ವಿ
ಕಾರೆಯನು ವರ್ಣಿಸುವನಾರವನೀಶ ಕೇಳಿಂದ ೪೭*

ಕುಶಲತೆಯೊಳಂಭೋಜಭವ ಚಿ
ತ್ರಿಸಿ ಸಜೀವವ ಪಡೆದನೋ ಮೇ
ಣೆಸೆವ ವಸ್ತುಸಮೂಹಗಳ ರೂಪಾಗಿ ಮಾಡಿದನೋ
ಕುಸುಮಶರನು ಜಗಜ್ಜಯಕೆ ಮಾ
ಡಿಸಿದ ನಿಶಿತಾಯುಧವೊ ತಾನೆನ
ಲಿಸತಕುಂತಳೆಯೆಸೆದಳವನೀಪಾಲ ಕೇಳೆಂದ            ೫೮*

ಸರಸಿಜಾಕ್ಷಿಯ ರೂಪ ನೋಡಲು
ಸುರಪ ಸಾಸಿರ ಕಣ್ಗಳನು ವಿ
ಸ್ತರದಿ ಪಡೆದನೊ ತನ್ಮೃಗಾಕ್ಷಿಯ ವಿಪ್ರಲಂಭದಲಿ
ಸ್ಮರನು ದೇಹವನುಱೆದನೋ[88] ಹಿಮ
ಕರನು ನೆಱೆ ಕುಂದಿದನೆನಲ್ಕಾ
ತರುಣಿಯನು ವರ್ಣಿಸುವನಾರವನೀಶ ಕೇಳೆಂದ          ೫೯*

ಅರಳ ಸರಳೈ[89]ದೊಂದು ಬಿಲ್ಲೆಂ[90] ದಱೆದು ಲೋಕವ ಜ[91]ಯಿಸಲೆ[92]ನಗೀ
ತರುಣಿ೪ಯಕ್ಷಿಯು[93]ಗಾಸ್ತ್ರದಿಂದೇಱಂಬು ಭ್ರೂಚಾಪ
ಬೆರಸಿದನು ಮೂಱಾದುವೆನಗೆಂ
ದರಸಿಯೊಳು ಕೈವೊ[94]ಯ್ದು ನಗುತು[95] ಬ್ಬರಿ[96]ಸುತಿರ್ದನು ಕಂತುವೆನೆ ವರ್ಣಿಸುವನಾರೆಂದ      ೬೦


[1] x (ಮ)

[2] ವ (ಮ)

[3] ವ (ಮ)

[4] x (ಜ)

[5] ತ್ಯಳ (ಜ), ತ್ಯಳ್ಳ (ಮ)

[6] ತ್ಯಳ (ಜ), ತ್ಯಳ್ಳ (ಮ)

[7] ದ (ಜ, ಮ)

[8] ದ (ಜ, ಮ)

[9] ರಾ (ಜ)

[10] x (ಜ, ಮ)

[11] ತ (ಮ)

[12] ಪ (ಮ)

[13] ರಿ ಗ (ಮ)

[14] ಯ (ಜ)

[15] ಯ (ಜ)

[16] ರಿ (ಜ, ಮ)

[17] x (ಜ)

[18] x (ಜ)

[19] ರ್ದ (ಜ)

[20] ಮೋ (ಮ)

[21] ರಾ (ಜ)

[22] ನವ (ಮ)

[23] ನವ (ಮ)

[24] ಗೈ (ಜ, ಮ)

[25] ಲುವಿ (ಜ, ಮ)

[26] ತ್ಮ (ಜ, ಮ)

[27] x (ಜ, ಮ)

[28] + ವ (ಜ)

[29] ಹಿಡಿ (ಜ), x (ಮ)

[30] ಹಿಡಿ (ಜ), x (ಮ)

[31] ಲ (ಜ), ಅ (ಮ)

[32] ತೆಯೆ (ಜ, ಮ)

[33] ತೆಯೆ (ಜ, ಮ)

[34] ನ (ಜ), ರ (ಮ)

[35] ರಾ (ಜ)

[36] x (ಜ)

[37] x (ಜ)

[38] ತ್ಸ (ಜ)

[39] x (ಜ)

[40] ತ್ರಿ (ಮ)

[41] ನಾ (ಜ, ಮ)

[42] ಲು (ಜ, ಮ)

[43] ಕ್ಕಗಿ (ಜ, ಮ)

[44] ಕ್ಕಗಿ (ಜ, ಮ)

[45] ತೀ (ಮ)

[46] ಡಿ (ಜ, ಮ)

[47] ಳೆ (ಜ, ಮ)

[48] ಟ್ಟಿಸು (ಜ, ಮ)

[49] ಟ್ಟಿಸು (ಜ, ಮ)

[50] ಕ್ಕ (ಪ)

[51] ಪೀಯೂಪದುತ್ಪೀ (ಜ, ಮ)

[52] ಪೀಯೂಪದುತ್ಪೀ (ಜ, ಮ)

[53] ಳುವು (ಜ), ಳವು (ಮ)

[54] ಳುವು (ಜ), ಳವು (ಮ)

[55] ಡೆ (ಜ, ಮ)

[56] ದೆ (ಮ)

[57] ಣೆ (ಜ), ಣಿ (ಮ)

[58] ಣೆ (ಜ), ಣಿ (ಮ)

[59] ದೋ (ಮ)

[60] ಭ (ಮ)

[61] ಹಾ (ಮ)

[62] ದುದೊ (ಮ)

[63] ದುದೊ (ಮ)

[64] ದಿ (ಮ)

[65] ವು (ಮ)

[66] ತಲೆ (ಜ, ಮ)

[67] ತಲೆ (ಜ, ಮ)

[68] x (ಜ, ಮ)

[69] x (ಜ, ಮ)

[70] x (ಮ)

[71] x (ಮ)

[72] ನೃಪೋತ್ತುಂಗ (ಜ), ನೃಪತುಂಗ (ಮ)

[73] ನೃಪೋತ್ತುಂಗ (ಜ), ನೃಪತುಂಗ (ಮ)

[74] ರುಹಿ (ಜ, ಮ)

[75] ರಾರೆಂದ (ಜ), ರಾರವ ನೀಶ ಕೇಳೆಂದ (ಮ)

[76] ವ (ಮ)

[77] ಸ (ಜ, ಮ)

[78] ರಿ (ಪ)

[79] ಪ್ಪ (ಮ)

[80] x (ಜ, ಮ)

[81] ರ (ಜ, ಮ)

[82] + ಸ (ಜ, ಮ)

[83] ರಾ (ಜ)

[84] (ನ)?- (ಮ)

[85] x (ಮ)

[86] ಧೈರ್ಯ (ಮ)

[87] ಧೈರ್ಯ (ಮ)

* ಈ ಪದ್ಯವು ಜ ಪ್ರತಿಯಲ್ಲಿಲ್ಲ.

* ಈ ಪದ್ಯವು ಜ ಪ್ರತಿಯಲ್ಲಿಲ್ಲ.

[88] ನಾ (ಮ)

* ಈ ಪದ್ಯವು ಜ ಪ್ರತಿಯಲ್ಲಿಲ್ಲ.

[89] ದೈ (ಜ, ಮ)

[90] ಲ್ಲಿಂ (ಜ, ಮ)

[91] ಯಸವೆ (ಜ), ಯಿಸುವೆ (ಮ)

[92] ಯಸವೆ (ಜ), ಯಿಸುವೆ (ಮ)

[93] ಯಂ (ಜ, ಮ)

[94] x (ಜ)

[95] ತ (ಜ)

[96] ಳಿ (ಜ, ಮ)