ಹರನದೊರ್ವ ತನೂಭವನ ಮುನಿ
ದುರುಹಿದುದಕತಿ ಮುಳಿದವೊಲು ಸಾ
ಸಿರ ಮನೋಜರ

[1]ನಬಲೆ ಜನಸಂಕುಲಕೆ ಪುಟ್ಟಿಸುತ
ಸ್ಮರನ ಮಂತ್ರದ[2] ದೇವ[3]ತೆಯವೊಲು
ತರುಣಿಯರಿಗೆ ಲಲಾಮವಾಗಿಯೆ
ಸರಸಿಜಾಂಬಕಿಯೆಸೆದಳವನೀಪಾಲ ಕೇಳೆಂದ            ೬೧

ಸುದತಿಯಾನನಕಂಘ್ರಿ ಮೇಲ್ಮು [4]ಡಿ
ಗಧರ ಸೋರ್ಮುಡಿಗುನ್ನ ತಸ್ತನ
ಮೃದುತನುಚ್ಛ [5]ವಿಗಳಕ ನಡುವಿಗೆ ಯಾನ ಭುಜಕಕ್ಷಿ
ರದನಗ[6]ಳಿಗುತ್ತುಂಗ ಕಟಿ ನೆಱೆ
ಹೆದಱೆದಪು[7]ವೆಂದೆನೆ ವಿಚಿತ್ರಾಂ
ಗದ ಸತಿಯ ರೂಪಾತಿಶಯವನು ಪೊ[8]ಱ್ವನಾರೆಂದ      ೬೨

ಕುಮುದಕೇಸರಿ [9]ನೇತ್ರಗಂಧಿಯ
ಸಮಳಶಶಿಬಿಂಬಾನ[10] ನೋಷ್ಠೆ[11]ಯ
ಸಮದವಾರಣ ಕುಂಭಯಾನಸ್ತನೆಯ ಹರಿನೀಲ
ವಿಮಲಮಧ್ಯಾಳಕೆ[12]ಯ ವರವಿ[13] [14]ದ್ರುಮಲತಾ[15] ಹಸ್ತಾಂಗೆ[16]ಯನು ಮೃದು
ಕಮಲನಾ[17] ಳನವಾಂಘ್ರಿ [18]ವಾಸೆ[19] ಯ ಪೊಗಱ್ವನಾ[20]ರೆಂದ       ೬೩

ಕ್ಷಿತಿಪ ಕೇಳಿಂತೆಸೆವ ವಿಜಯಾ
ವತಿಯನಾ ಸತ್ಯಂಧರನು ನವ
ಚತುರತೆಯೊಳಭಿನವಮನೋಜನ ವಿಧದೊಳನವರತ
ಕೃತಕಶೈಲಾರಾಮ ಪುಳಿನ
ಪ್ರತತಿಯಲಿ ಶಶಿಕಾಂತಗೃಹದೊಳ
ಗತಿಶಯಾನಂದ[21]ದಲಿ ರಮಿಯಿ[22]ಸುತಿರ್ದ[23]ನೊಲವಿನಲಿ           ೬೪

ತಳಿತ ಘಮ೯ಜಲಾಂಬು ಭಾಳದ
ತಿಲಕ ಗಂಧ ಸು[24]ದಂತದಕ್ಷತೆ
ಸುಲಲಿತಾನನ ಕಮಳಸೌರ[25]ಭ ಧೂಪ[26] ದೃಗ್ದೀಪ
ಪೊ[27]ಳೆವಧರ ನೈವೇಧ್ಯ ರತಿ ಸ
ತ್ಫಲಗಳಾಗೆ ನೃಪಂಗೆ ಮಾಡಿದ
ಳಿಳೆಯೊಳಷ್ಟ ವಿಧಾರ್ಚನೆಯ ತನ್ನಂಗ ಶೋಭೆಯಲಿ   ೬೫

ಕೀರ ಮೃದುಫಲರಸವ[28]ನಮಲ ಚ
ಕೋರ[29] ಚಂದ್ರಿಕೆಯನು ಮಯೂರವು[30] ಕಾರ ನವಷಟ್ಪ[31]ದ ಸುಗಂ[32]ಧವ ಚಕ್ರವಾ ದಿವವ
ಸಾರಸಾಧಿಪ ಕೊಳನ ಪಿಕ ವಿ
ಸ್ತಾರವ [33]ನವನು ಮೆ[34]ಚ್ಚಿದಂದದೆ[35] ಧಾರಿ[36]ಣೀಪತಿ ಸತಿಗೆ ಮನವೆಳಸಿರ್ದ[37]ನೊಲವಿನಲಿ     ೬೬

ಜಲಜಮುಖಿಯ ಕಟಾಕ್ಷಹತಿಯಿಂ
ದಳಿಕಿ ನಾ[38]ಭ್ಯಾವರ್ತದಲಿ ಸುಳಿ
ಸುಳಿದು ಭುಜಪಾಶದಲೊದವಿ ಲಾವಣ್ಯರಸದೊಳಗೆ
ಮುಳುಗಿ ಕುಚಪರ್ವತದ[39]ಲಿಂಬಿಸಿ[40] ಸಿಲಿಗಿ ಬಿಂಬೋಷ್ಠಾಮೃತವ ಸವಿ
ದೊಲಿದು ಸುರತಾಂಬೋ[41]ಧಿಯೊಳೋಲಾಡಿದನು ನೃಪತಿ       ೬೭*

ತನುವನಾಕೆಯ ದೇಹದಾಲಿಂ
ಗನದಿ ಕಂಗಳನಾ ಸತಿಯ ರೂ
ಪಿನಲಿ ಎರ್ಣವನಬಲೆಯಾಳಾಪದಲಿ ನಾಸಿಕವ
ತನಾವಿನಾಕ್ಷೋದದಲಿ [42]ಜಿಹ್ವೆ[43]ಯ
ನಿ[44]ನಿಯ[45]ಳಧರಾಮೃತದಿ ತೃಪ್ತಿಯ
ಜನಪ ಮಾಡುತ್ತಿ[46]ರ್ದನಿಂತವನೀಶ ಕೇಳೆಂದ ೬೮

ಇದು [47]ವಿನ[48]ಮದಮರೇಂದ್ರ ಶ್ರೀ ಜಿನ
ಪದಕಮಲಷಟ್ಚ ಕಣವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ತಾನಧಿರಾಜವರ್ಣನವರಸ ಕೇಳೆಂದ    ೬೯

[1] ನ (ಜ, ಮ)

[2] ನ (ಜ, ಮ)

[3] + ಲ (ಜ)

[4] ಲ್ನು (ಜ, ಮ)

[5] ತ್ಸ (ಜ, ಮ)

[6] ರ(ಜ)

[7] ಪದ (ಜ), ಪ (ಮ)

[8] ಹೊ (ಪ)

[9] ರ (ಜ, ಮ)

[10] x (ಜ)

[11] ಪ್ಠಿ (ಜ, ಮ)

[12] ಕಿ (ಜ)

[13] x (ಜ, ಮ)

[14] x (ಜ)

[15] x (ಜ)

[16] ಗಿ (ಜ, ಮ)

[17] ನ (ಜ)

[18] ಭಾಷೆ (ಮ)

[19] ಭಾಷೆ (ಮ)

[20] ರಾ (ಜ)

[21] x (ಜ)

[22] x (ಜ)

[23] ದ್ದ (ಜ, ಮ)

[24] ಸ (ಮ)

[25] ರು (ಜ)

[26] ಮ (ಜ, ಮ)

[27] ಹೊ (ಪ)

[28] ಮ (ಜ, ಮ)

[29] ಕ (ಜ)

[30] ವ (ಜ, ಮ)

[31] ಡ್ಪ (ಜ)

[32] ಸು (ಜ)

[33] ಬ (ಜ, ಮ)

[34] ಮ (ಮ)

[35] ದಿ (ಜ, ಮ)

[36] ರು (ಜ, ಮ)

[37] ದ್ದ (ಜ)

[38] ನ (ಜ)

[39] ರಿಂಬಲಿ (ಜ)

[40] ರಿಂಬಲಿ (ಜ)

[41] + ನಿ (ಜ)

* ಈ ಪದ್ಯ ಪ ಪ್ರತಿಯಲ್ಲಿಲ್ಲ

[42] ಜಿಂಹೆ (ಜ)

[43] ಜಿಂಹೆ (ಜ)

[44] ನೆ (ಜ)

[45] ನೆ (ಜ)

[46] ತಿ (ಜ, ಮ)

[47] x (ಜು)

[48] x (ಜು)