ಲಲನೆಗರ್ಥವ ತಂದು ಕೊಟ್ಟಾ
ಗಳೆ ಲತಾಂಗಿಯ ನೆರೆದೆನೆನ್ನಯ
ಛ
ಸುಲಲಿತವ್ರತವಱೆಯೆ ನರಕದೊ
ಳಿಱೆವೆನೆಂದಂಗಜನ[4] ಗೆಲಿದಾ
ಲಲನೆಗೆಱಗದೆ ಮುದದಿ[5] ಮೋ[6]ನದೊಳಿದು ಪವಡಿಸಿದ ೨೧
ಎಂ[7]ದು ವೇಶಿ[8]ಯನುಱೆ[9]ದು ಪರಮಾ
ನಂದದಲಿ ಮುಸುಕಿಟ್ಟು ಮಲಗಿರ
ಲಂದು ಪದ್ಮವತಿ ಲಸಚ್ಛೃಂ[10]ಗಾರ ಶೋಭೆಯಲಿ
ಬಂದೊಡನೆ ಸೆಳೆಮಂಚವೇಱೆರೆ
ಹಿಂದು ಮುಂದವನಾಗೆ ವಿಸ್ಮಯ
ವೆಂದಿದೇನೆಂದವನ[11]ನೀಕ್ಷಿಸುತಿರ್ದ[12]ಳಾ ಕಾಂತೆ ೨೨
ನೆಟ್ಟನೆನಗೆ ಸಹಸ್ರ ಪೊಂ[13]ಗಳ[14]
[15]ಕೊಟ್ಟ ನ[16]ರನಿವ ಮರಳನೋ ಮೇಣ್
ದುಷ್ಟ[17]ನೋ [18]ಶ್ರೋಣಿತನೊ ಮನ್ಮಥನೋ[19] ನಪುಂಸಕನೋ
ಭ್ರಷ್ಟನೋ ತಾನಾಗಿ ಪುರುಷರ
ಮುಟ್ಟುವುದು ಸತಿಯರಿಗೆ ಹೀನವ
ನಿಷ್ಟವೆನಗಾಯ್ತೆಂದು ಬೆಱಗಾದಳು ಸರೋಜಾಕ್ಷಿ ೨೩
ನಿದ್ದೆ[20]ಗೆಯ್ದನೊ ಸಟೆ[21]ಯೊ[22]ಳೇವಱ[23]
ಗಿದ್ದ[24]ಪನೊ ತಾ ನೆರೆಯದಿದ್ದ[25]ರೆ
ಹೊದ್ದುವುದು ಪಾತಕವು ಕೊಟ್ಟ ಸುವರ್ಣ ಋಣವಹುದು
ಮುಗ್ಧೆಯ[26]ರೊಳತಿಹೀನನಹುದೆಂ
ದೆ[27]ದ್ದು ನೋಡುವ [28]ಮಱೆದು[29] ಮಲಗಿರೆ
ಮಧ್ಯರಾತ್ರಿ[30]ಯೊಳೆದ್ದು ಕಾಷ್ಠಾಂಗಾರ ಸೈವರಿದ ೨೪
ತರುಣಿ ಬಱೆಕೆಚ್ಚತ್ತು[31] [32]ನಲ್ಲನ[33]
ನಿರವ ಕಾಣದೆ ಕೆಟ್ಟೆನಕಟಿಂ
ದರಸ ಸತ್ಯಂಧರನೆಡೆಗೆ ಬಂದೆಱಗಿ ವಿಟನೆನ್ನ
ಇರುಳು ತಂದೆನಗೊತ್ತೆಯನು ವಿ
ಸ್ತರದಿ ಕೊಟ್ಟಿನ್ನುವನು ನೆರೆಯದೆ
ಮರಳಿ ಹೋದನಿದೇನು ವಿಸ್ಮಯವೆಂದಳಿಂದುಮುಖಿ ೨೫
ಸ್ಮರಜಯಂ[34]ತಾದ್ಯರುಗಳೆನ್ನಯ
ಹೊರೆಗೆ ಬಂದೆನ್ನುವನು ನೆರೆಯದೆ
ಮರಳ[35]ರಿವನು[36] ಮಗುಱ್ದುದಚ್ಚರಿಯೆನಲು ನೃಪ ನಗುತ
ಪುರದ ಹೆಬ್ಬಾಗಿಲುಗಳೆಲ್ಲವ
ಭರದಿ ಮುಚ್ಚಿಸಿ ಬಾಗಿಲೊಂದನು
ತೆ[37]ರೆಸಿ[38] ತತ್ಕಾಮಿನಿಗೆ ಭೂಮೀಪಾನಿಂತೆಂದ ೨೭
ತರುಣಿ ನೀನಿಂದಿರುಳು ಬಂದ[39]ನ
ಕುಱುಹ ಬಲ್ಲೊ[40]ಡೆ ಸೆಱಗೆ ಹಿಡಿಯೆಂ
ದರಸನಾ ದ್ವಾರದೊಳಗಾಕೆಯನಿರಿಸಿ ಪೊ[41]ಱಲೊಳಗೆ
ಪುರುಷರಿರ್ದೊಡೆ ದಂಡಿಸುವೆನೆಂ
ದಿರದೆ ಸಾರಿಸೆ[42] ಜನವು [43]ಪೊಱಮ[44]ಡು
ತಿರಲು ಪದ್ಮಾವ[45]ತಿ ನಿರೀಕ್ಷಿ[46]ಸುತಿರ್ದಳಾ ವಿಟನ ೨೮
ಪುರದ ಜನವಂದೆಯ್ದೆ ಪೊಱಮಡು
ತಿರಲು ಕಾಷ್ಠಾಂಗಾರ ಹೆ[47]ಗಲಲಿ[48]
ಪರಶು ಕೆಯ್ಯಲಿ[49] ನೇಣ್ಗಳನು ಶಿರದಲ್ಲಿ ಕಂಬಱೆಯ
ಧರಿಸಿ ಮುನ್ನಿನ ತೆಱದಿ ಹೋಗಲು
ತರುಣಿ ಸಿಕ್ಕಿದ ತುಂಟನೆಂದೊಡ
ವೆರಡಿ ತಂದಿಕ್ಕಿದಳು ಭೂಮೀ[50]ಪಾಲನಿದಿರಿನ[51]ಲಿ ೨೮
ಇರುಳು ಬಂದವ[52]ನಿವ[53] ವಿಚಾರಿಸು
ಧರಣಿಪತಿ ಎಂದಬಲೆಯೆನ[54]ಲಾ
ನೆರವಿ ನಗುತಿವನಾರು ಸಾಸಿರ ಹೊನ್ನು ಇವಗೆಂತು[55]
ದೊರಕುವುದು ನಾವ[56]ಱೆಯೆ ಕಾಷ್ಠವ
ಪುರದೊಳಗೆ ಮಾಱುವ[57]ನು ಮೂ[58]ರ್ಖೆಯೊ
ಮರುಳೆಯೋ [59]ನೀನೆಂ[60]ದು ಜಱೆ[61]ದು ನೃ[62]ಪಾಲಂ[63] ನಿಂತೆಂದ ೨೯
ಎಲವೊ [64]ನೀನಿರುಳೀ[65] ಸತಿಯನೇ
ಕುಱೆದೆ ರೂಪೈಶ್ವರ್ಯ[66]ದಲಿ[67] ಕೌಶಲ
ಗಳಲಿ ತನಗಿಂತಿವಱೊಳೊಂದಿಲ್ಲಿ [68]ವಳ ನಾನೆಂತು
ಎ[69]ಳಸುವೆನು ತಾನಿವಳ ನೆರೆ[70]ಯದೆ[71]
ಹಱೆವೆ[72] ತಾನ[73]ಲ್ಲಿರುಳು ಬಂ[74]ದವ
ನೆಲೆ ಮಹೀಪತಿ ಎನಲು ಬೆಱಗಿನೊಳಿದ್ದನಾ ಭೂಪ ೩೦
ಬೆಱಗಿದೇ[75]ಕವ[76]ನೀಶ ಕೇಳಿವ
ನಿ[77]ರುಳು[78] [79]ಬಂದವ[80] ನಲ್ಲದಿರೆ ಸತಿ
ಯರಿಗೆ ಹೊಱುವೆನು ನೀರನೆನೆ ನೃಪನವನ ಹತ್ತಿರಕೆ
ಕರೆ[81]ದು ತಪ್ಪ[82]ದೆ ಹೇಱು ನಿನ್ನೊಳು[83]
ಕೊಱತೆಯಿಲ್ಲೆನಲಹುದು ತಾ[84]ನಾ
ತೆಱನ ಹೇಱುವೆ[85]ನೆನುತ ಕಾಷ್ಠಾಂಗಾರ ನೃಪಗೆಂದ ೩೧
ಜನಪ ಕೇಳಾನೊಂದು ದಿನಮಿ[86]
ಧನವ ತರುತಿರಲೆನ್ನ ಕಂಡೀ
ವನಿತೆ ತನ್ನಿನಿಯನ ಸಮೀಪದಿ ಹಱೆಯೆ ತಾ[87]ನಿವಳ
ಅನುಭವಿಸಿ ಲಜ್ಜಿಸುವೆನೆಂದಾ
ಧನವ[88] ಕಾಷ್ಠವ ಮಾಱೆ ಗಳಿಯಿ[89]ಸು[90]ತಿನಿಯಳನು[91] ಪೌರ್ಣಮಿಯ ದಿನವೆಂದುಱೆದೆ ತಾನೆಂದ ೩೨
ಎನಲರಸ ಪೌರ್ಣಮಿಯ ದಿನವಂ
ಗನೆಯ ನೆರೆಯದು[92]ದೇನು ಕಾರಣ
ವೆನಲೆನಗೆ ಗುರುವಿತ್ತ ಸುವ್ರತಭಂಗವಹುದೆಂದು
ವನಜವದನೆಯನು[93]ಱೆದೆನೆನಲಾ
ತನ ಛಲೋಪಾಯಾಂತರಂಗದ
ನೆನಹು ಗುರುಭಾವನೆಗೆ ಬೆಱಗಾದನು ಮಹೀಪಾಲ ೩೩
ತರುಣಿ ನೀ ಮುನ್ನಿ[94]ವನ ಹಱೆ[95]ದುದು
ನಿರುತವೇ ಹೇಱೆಂದು ಭೂಮೀ
ಶ್ವರನು ಬೆಸಗೊಳೆ ನಾಚಿ ಸತಿಯುಂ[96]ಟೆಂದು ತಲೆವಾಗೆ
ಧರಣಿಯೊಳು ಬೆಲೆವೆಣ್ಣೆಗರ್ಥೋ
ತ್ಕರವಲ್ಲದೆ ರೂಪು ಗುಣ ಚಾ
ತುರಿಯವೇಕೆಂದವಳ ಕಾಷ್ಠಾಂಗಾರ ಲಜ್ಜಿಸಿದ ೩೪
ದೇಶ ಜನರುಚ್ಛಿ [97]ಷ್ಟ ದೋ[98]ಷನಿ
ವಾಸದನಿಬರು [99]ಮುಗು[100]ವ್ವಿ ತಂ[101]ಬುಲ
ದೋಷದೆ[102]ಡೆ ಹದಿನೆಂಟು ಜಾತಿಗಳುಂಬ ಭಾಜನವು
ಹೇಸಿಕೆಯ ರಕ್ತೇಂದ್ರಿಯಾಸ್ಪದ
ವೈಶಿಕಾ[103]ಶ್ರಯ[104] ಕುಟಿಲಕಾಗರ
ವೇಸಿ[105] ಸುಡು [106]ಛೀ ವೋಯೆ ಥೂಥೂ[107] ಎಂದು ವಿಟ ಜಱೆ[108]ದ ೩೫
ಹೊನ್ನಿನಾಸೆ[109]ಗೆ ಬಧಿರನಂಧಕ
ತೊನ್ನ[110] ಚೋರ ಕೃತಘ್ನ ಖಲರಿಗೆ
ತನ್ನನಿ[111]ತ್ತೆದೆ[112]ಗೊ[113]ಯ್ಸಿಕೊಂಡ[114]ನುಭವಿಸಿ ನಾಣ್ದೊಱೆದು
ನನ್ನಿ[115]ಗೆಟ್ಟೊಗ[116]ಡಿಸದೆ ನಾನಾ
ವರ್ಣದೆಂಜಲ ತಿಂದು ಬಾಱುವ
ಗನ್ನ[117]ಗತಕ[118]ದ ವೇಶ್ಯೆ[119]ಯರ ಸುಡಲೆಂದು ವಿಟ ಜಱೆ[120]ದ ೩೬
ಇತ್ತ ಧನ ಋಣವಹುದುಪಾತಕ
ಹೊತ್ತಪುದು ದಿಟವೆಂದಿವಳು ತಾ
ನುತ್ತ [121]ಮಳು ಎಂ[122] ದರಸ ನಿಮಗಱುಹಿದಳು ಲೋಕದಲಿ
ಕತ್ತೆ ಗಜವನು ಪಿಕ ಮರಾಳನ
ನೆತ್ತು ಸುರಭಿಯ ನೀವೊಡದುವೆ ಸು
ವೃತ್ತ ವೇಸಿ[123]ಯೊಳುಂ[124]ಟೆ ಸುಪ್ರಿಯವೆಂದು ಭಂಗಿಸಿದ ೩೭
ಇಳೆಯ ಪತಿ ಕೇಳೆನ್ನ ಹಱೆದೊ[125]ಡೆ
ಚಲನಿಮಿತ್ತದಿನಿ[126] ವಳ ನೆರೆದೆನು
ಮುಳಿವೆನೆಂದುದ್ಯೋಗಿಸ[127]ದೆ… ಕುವೇಶ್ಯರಿಗೆ[128]ನಿಲು[129]ಕಿದವ ಸರ್ವಜ್ಞನಾಗಲಿ
ಕುಲ[130]ಸುಶೀಲವು[131] ಧರ್ಮಸುಗುಣಾ
ವಳಿಗ[132]ಳಿನಿತುಱೆ[133] ಹಾನಿಯಹುದವನೀಶ ಕೇಳೆಂದ ೩೮
ಕುಟಿಲದೆಡೆ ವೈಶಿಕದ ಮನೆಯ[134]ಟ
ಮಟದ ಬೀಡನ್ಯಾಯದಾಗರ
ಸಟಿಯ ನೆಲೆ ಸಂವಾದದಿಕ್ಕೆ ಕುಮಂತ್ರ ಕು[135]ಹಕಗಳ
ಮಟ[136] ದುರಾಸೆಯ ಪೇಟೆ ಘನದು
ರ್ಘಟ ಭಯಾಸ್ಪದವ[137]ತುಳ ರೋಷೋ
ತ್ಕಟ ನಿಜಾಶ್ರಯರ[138]ಪ್ಪ ವೇಶ್ಯೆರೊಳೇನು ಫಲವೆಂದ ೩೯
ಎಂದು ಕಾಷ್ಠಾಂಗಾರಕನು ಹ[139]ಲ
ವಂದದಿಂ ವೇಶ್ಯೆ[140]ಯರ[141] ಹಱೆಯೆ ನೃ
ಪೇಂದ್ರ ಸತ್ಯಂಧರನವನ ಧೈರ್ಯ[142]ಚ್ಛಲ[143]ಕೆ ಮೆಚ್ಚಿ
ಅಂದವಗೆ ಮಂತ್ರೀಶಪಟ್ಟವ
ಮುಂದೆ[144] ಪರಿಕಿಸದೊಲಿದು ಕಟ್ಟಿದ
ನೆಂದು ಮಗದನೃಪಂ[145]ಗೆ ಮುನಿ ವಿವರಿಸಿದನಾ ತೆಱನ ೪೦
ಇದು ವಿನಮದಮರೇಂದ್ರ ಶ್ರೀ ಜಿನ
ಪದಕಮಲಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ಕಾಷ್ಠಾಂಗಾರಕನ ತೆಱನರಸ ಕೇಳೆಂದ ೪೧
* * *
[1] ಚ (ಪ) [2] ಮುದ (ಜ) [3] ಮುದ (ಜ) [4] + ತಿ (ಜ) [5] ದೆ (ಮ) [6] ಮಾ (ಜ, ಮ) [7] ವೆಂ (ಜ) [8] ಸಿ (ಪ, ಮ) [9] ಡಿ (ಜ, ಮ) [10] ಶೃಂ (ಜ), ತ್ ಶೃಂ (ಮ) [11] x (ಜ) [12] ದ್ದ (ಜ) [13] ಗೊ (ಜ) [14] ಗೊ (ಜ) [15] ಟ್ಟಸು (ಜ), ಕೊಟ್ಟಸು (ಮ) [16] ಟ್ಟಸು (ಜ), ಕೊಟ್ಟಸು (ಮ) [17] x (ಜ) [18] x (ಪ, ಜ) [19] x (ಪ, ಜ) [20] ದ್ರೆ (ಜ, ಮ) [21] ರೆ (ಜ, ಮ) [22] ಳೊಱ (ಜ, ಮ) [23] ಳೊಱ (ಜ, ಮ) [24] ರ್ದ (ಜ, ಮ) [25] ರ್ದ (ಜ, ಮ) [26] x (ಜ) [27] x (ಜ), ದಿ (ಮ) [28] ಮಱದುಂ (ಜ), (ದೆಂದು) – (ಮ) [29] ಮಱದುಂ (ಜ), (ದೆಂದು) – (ಮ) [30] ತ್ರೆ (ಜ, ಮ) [31] ತು (ಜ) [32] ಪಲ್ಲವ (ಮ) [33] ಪಲ್ಲವ (ಮ) [34] ಯಾಂ (ಜ) [35] ಲವನೆ (ಜ), ಲೀವೆನೆ (ಮ) [36] ಲವನೆ (ಜ), ಲೀವೆನೆ (ಮ) [37] ರಸು (ಜ, ಮ) [38] ರಸು (ಜ, ಮ) [39] + ವ (ಜ) [40] ಲ್ಲ (ಜ, ಮ) [41] ಹೊ (ಪ) [42] ಸಿ (ಜ, ಮ) [43] ಹೊಱವ (ಜ, ಮ) [44] ಹೊಱವ (ಜ, ಮ) [45] x (ಜ) [46] ಕ್ಷು (ಜ) [47] ಹೊ (ಮ) [48] ಲು (ಜ, ಮ) [49] ಲು (ಜ, ಮ) [50] x (ಮ) [51] ನಿ (ಜ) [52] ನೀ (ಮ) [53] ನೀ (ಮ) [54] ನ್ನ (ಜ) [55] ದು (ಜ, ಮ) [56] ನ (ಜ) [57] x (ಮ) [58] x (ಮ) [59] ನಿಂತೆಂ (ಜ) [60] ನಿಂತೆಂ (ಜ) [61] ಱ (ಜ, ಮ) [62] ಪ (ಜ) [63] ಪ (ಜ) [64] ನಿನ್ನಿರುಳ (ಜ), ನೀನೀಯಿರುಳ (ಮ) [65] ನಿನ್ನಿರುಳ (ಜ), ನೀನೀಯಿರುಳ (ಮ) [66] x (ಜ, ಮ) [67] x (ಜ, ಮ) [68] ಲ (ಜ) [69] ವೆ (ಮ) [70] ರೆಯಡೆ (ಜ), ರಹಡೆ (ಮ) [71] ರೆಯಡೆ (ಜ), ರಹಡೆ (ಮ) [72] ದೆ (ಮ) [73] ನಿ (ಜ, ಮ) [74] ನಿಂ (ಮ) [75] ತಕೆ (ಜ), ನವ (ಮ) [76] ತಕೆ (ಜ), ನವ (ಮ) [77] ರವ (ಜ) [78] ರವ (ಜ) [79] x (ಜ) [80] x (ಜ) [81] ರ (ಜ, ಮ) [82] ಪ್ಪಿ (ಜ) [83] ಳ (ಜ) [84] ನಾ (ಮ) [85] + ನು (ಜ). [86] ಇಂ (ಜ), ಯಿಂ (ಮ) [87] ನಾ (ಜ) [88] ದ (ಜ) [89] x (ಜ, ಮ) [90] ತ್ತಿನೆಳಯ (ಜ) [91] ತ್ತಿನೆಳಯ (ಜ) [92] ತ್ತಿನೆಯಳನು (ಮ) [93] ದ (ಜ), ೭ ನ (ಜ) [94] ನ್ನ (ಮ) [95] + ಯ (ಜ) [96] ವುಂ (ಜ), ಉಂ (ಮ) [97] ಚ್ಛೆ (ಜ) [98] ರೋ (ಜ, ಮ) [99] ಗ (ಜ), ಗು (ಮ) [100] ಗ (ಜ), ಗು (ಮ) [101] ತಾಂ (ಮ) [102] ದೊ (ಜ) [103] ಸ್ವದ (ಮ) [104] ಸ್ವದ (ಮ) [105] + ಯನು (ಮ) [106] ಛೀ ವೋ ಯೆಥೂ (ಜ), ವೆವೊಯೆ ಸುಡು (ಮ) [107] ಛೀ ವೋ ಯೆಥೂ (ಜ), ವೆವೊಯೆ ಸುಡು (ಮ) [108] ಱ (ಜ, ಮ) [109] x (ಜ) [110] x (ಜ) [111] ವಿ (ಜ) [112] ಡೆ (ಮ) [113] ಯ್ಸಕೊದ (ಜ) [114] ಯ್ಸಕೊದ (ಜ) [115] ಗೊಟ್ಟೊಗ (ಜ), ಗೊಟ್ಟಾ (ಮ) [116] ಗೊಟ್ಟೊಗ (ಜ), ಗೊಟ್ಟಾ (ಮ) [117] ಗ (ಜ), ಕ (ಮ) [118] ಗ (ಜ), ಕ (ಮ) [119] ಶಿ (ಜ, ಮ) [120] ಱ (ಜ, ಮ) [121] ಮೆ ಯಿಂ (ಜ), ಮಿಕೆಯಿಂ (ಮ) [122] ಮೆ ಯಿಂ (ಜ), ಮಿಕೆಯಿಂ (ಮ) [123] ಶ್ಯರಲುಂ (ಜ), ಸ್ಯರಲುಂ (ಮ) [124] ಶ್ಯರಲುಂ (ಜ), ಸ್ಯರಲುಂ (ಮ) [125] ದ (ಜ, ಮ) [126] ನ (ಜ) [127] ಸಿ (ಜ) [128] ಸಿಲು (ಮ), ನಿಲಿ (ಜ) [129] ಸಿಲು (ಮ), ನಿಲಿ (ಜ) [130] ಶಿರೋಮಣಿ (ಮ) [131] ಶಿರೋಮಣಿ (ಮ) [132] ಳಿನಿತುಱೆ (ಜ), ನಿ (ಮ) [133] ಳಿನಿತುಱೆ (ಜ), ನಿ (ಮ) [134] ಅ (ಜ), ಲ (ಮ) [135] ಕ (ಜ) [136] ಠ (ಜ, ಮ) [137] ಅ (ಜ, ಮ) [138] ವ (ಜ, ಮ). [139] ಅ (ಜ) [140] ರನು (ಜ, ಮ) [141] ರನು (ಜ, ಮ) [142] ಛಲ (ಜ, ಮ) [143] ಛಲ (ಜ, ಮ) [144] ದ (ಮ) [145] ಪಾಲ (ಜ), ಪಾಲಕ (ಮ)
Leave A Comment