ಧರಣಿಯನು ಮಂತ್ರಿಗಳ ಬೇಡೆನ
ಲಿರದೆ
ದುರುಳನಿಂದೆಯ್ದಿ[2]ದನು ಸತ್ಯಂಧರನು ಸುರಪುರವ
ಧರಣಿಪತಿ ಕೇಳಿಂತು ಸತ್ಯಂ
ಧರನೃಪತಿ ರಾಜ್ಯಾಂ[3]ಗನೆಯನಪ
ಹರಿಸಿ ಸತಿಯ ಕು[4]ಚಂಗಳನು ಗಿರಿದುರ್ಗವೆಂದೆನಿಪ
ಕುರುಳುಗಲ [5]ವನ[6]ದುರ್ಗವೆಂದುರು
ತರದ ಲಾವಣ್ಯಾಂಬು ಜಲಸಂ[7]
ಸ್ಫು[8]ರಿತ ದುರ್ಗವಿ[9]ದೆಂದು ಪಾಲಿಸುತಿರ್ದನೊಲವಿನಲಿ ೧
ಧರಣಿಯೊಳಗತ್ಯಂತ ವಿಷಯಾ
ತುರರಿಗಾಯುರ್ನಷ್ಟವಖಿಳೈ
ಶ್ವರಿಯ ವೋಸರಿಸುವು[10]ದು ಕೀರ್ತ್ಯಂಗನೆಗೆ ಕೇಡಹುದು
ಗರುವತನ ಹಿಂಗುವುದು ಧೈರ್ಯದ
ಶರಧಿ ನೆಱೆ ಬತ್ತುವುದು ಕುಲ ಪೈ[11]
ಸರಿಸುವುದು ಸಂದೇಹವಿಲ್ಲದಕರಸ ಕೇಳೆಂದ ೨
ಸತತ ವಿಷಯಾಸಕ್ತನವ ಸು
ವ್ರತವನು[12]ಲ್ಲಂಘಿಸು[13]ವ ಮಾನ
ಚ್ಯುತಿಗ[14]ಳುಕ ಪರಧನಕೆ [15]ಹೇಸ[16] ನಭಿಜ್ಞ [17]ತೆಯ ಬಿಡುವ
ವಿತತ ಧರ್ಮಾಚಾರವುಱೆದು[18]
[19]ದ್ಧತಿ ಬ[20]ಡುವ ಮುಂಗಾಣನವನೀ[21]
ಕ್ಷಿತಿಯೊಳಗೆ ಹಗೆಯಾಗಿಹನು ಭೂಪಾಲ ಕೇಳೆಂದ ೩
ಭೂವರನೆ ಕೇಳ್ ವಿಷಯ ವಶದಿಂ
ರಾವಣು [22]ಹತ[23]ವಾದನಶ್ವ
ಗ್ರೀವನಪಗ[24]ತನಾದನಾ ಕೀಚಕನು ಮೃತನಾ[25]ದ
ದೇವಪತಿ ನಿಂದ್ಯಾತ್ಮನಾದುದ
ಕೋವಿ ಕಂಡೀ ವಿಷಯದೊಳಗಹು
ದೋವದ[26]ನುನಯವೀ ನೃಪಗೆ ಭೂಪಾಲ ಕೇಳೆಂದ ೪
ಅರಸ ಕೇಳ್ ವಿಷಯಾತುರನು ಕಿಂ
ಕರತೆಗಳುಕನು ತಸ್ಕರತೆಗೋ
ಸರಿಸ ನಿಂದೆಗೆ ತೊಲಗನವ[27]ಮಾನಕ್ಕೆ ಮೊಗದಿರುಹ
ಪರಿಭವಕೆ ಹೆಱಸಾರ ಮುಂದಿ[28]
ರ್ದರ[29]ನು ಕಾಣನು ಮರಣಭಯಕೆದೆ
ಜರಿಯನಾರೆಂದಱೆಯನಾ ಕಾಮುಕನು ಧರಣಿಯಲಿ ೫
ಮನವನಂಗವಿಕಾರ[30]ದಲಿ[31] ಮುನಿ
ಮುನಿಸಿನಿಂದವ[32]ಮಾನ ಮಾನದಿ
ವನಿತೆ ತನ್ನಿಚ್ಛೆಯಲಿ ಧರಣೀಶ್ವರನಶಾಸ್ತ್ರದಲಿ
ಧನಿಕನಪ[33] ನೀತಿಯಲಿ ಕುಲವ
ರ್ತನೆಯನಾಚಾರದಲಿ ವಿಷಯದಿ
ಜನ[34]ಕೆ ತಪ್ಪದು ಕೇಡು ಭೂಮೀ[35]ಪಾಲ ಕೇಳೆಂದ ೬
ಅರಸ ಕೇಳೀ ಪರಿಯ ವಿಷಯಾ
ತು[36]ರಿತನಾ[37]ದುದಱೆಂದೆ[38]ಸತ್ಯಂ
ಧರನು ವಿಧಿವಶದಿಂದೆ[39] ಕಾಷ್ಠಾಂಗಾರನೆಂಬವಗೆ
ಪರಿಣತೆಯನುಱೆದಿಳೆಯನವಗನು
ಕರಿಸಿ ಮುದದೊಳಮಾತ್ಯಪಟ್ಟವ
ಭರದಿ ಕಟ್ಟುವೆನೆಂದು ನಿಶ್ಚೈಸಿದನು ಮನದೊಳಗೆ ೭
ಎಂದು ನೃಪನೀ ಮತವ ನೆನೆ[40]ದೊಲ
ವಿಂದೆ ಕಾಷ್ಠಾಂಗಾರಕಗೆ ಸಚಿ
ವೇಂದ್ರ ಪಟ್ಟವ ಕಟ್ಟಲುದ್ಯೋಗಿಸಲು ಮಂತ್ರಿಗಳು
ಬಂದೆಱಗಿ ಕೆಯ್ಮುಗಿದಿದೇನು ನ
ರೇಂದ್ರ ತಾನಿವನಾರು ನಿ[41]ಮಗೀ[42]
ಮಂದ ಬುದ್ಧಿಯದೇನೆನುತ ಬಿನ್ನೈ[43]ಸಿದರು ನೃಪಗೆ ೮
ಸಮತೆಯಿಂದೆ ತ್ರಿವರ್ಗವನು ಸ[44]
ತ್ಕ್ರಮದಿ ಸೇವಿಸೆ ಮೋಕ್ಷವಾತಗೆ
ಸಮನಿಸುವುದಂತವಱೊಳೊಂದನೆ ಪಿಡಿಯೆ ಸರ್ವಹತ[45]
ವಿಮಳ ಧರ್ಮೋದ್ಯಮ[46]ವನು ಬಿಟ್ಟ
ಕ್ರಮದಿ ಕಾಮವನೊಂದಿ ಭೂಮೀ
ರಮಣ ನೀವಿದ [47]ನೆನೆದಿರೆಂ[48] ದುಸಿರಿದನು ಮಂತ್ರೀಶ ೯
ಮೊದಲು ಧನಹಾನಿಯನು ಬಱೆಕಾ
ತುದಿಯ ಫಲದುನ್ನತಿಯನಾಪ್ತರೊ
ಳೊದವಿ[49] ಪ[50]ರಿಕಿ[51]ಸಿ ಕಾರ್ಯವನು ತೊಡ[52]ಗುವು[53]ದು ನೀವಿವನ
ವಿದಿತ ಕುಲ ಶೀಲಾದಿಗಳನಱೆ
ಯದೆ ಸುನಿಶ್ಚೈ[54]ಸಿದಿರಿ ತನ್ನಯ
ಹೃದಯವನು ತಾ ನಂಬಬಹುದೇ ನೃಪರಿಗವನಿಯಲಿ ೧೦
ಅತಿಕುಲೀನ[55]ನ ನು[56]ಜ್ವಲನ[57]ವಿ
ಶ್ರುತನ ಚತುರೋಪಾಯ ರೂಪಾ
ನ್ವಿತನ ಧೀರೋದಾ[58]ರ ಗುಣ[59]ಯುತನನು[60] [61]ಕಳಾ[62] ವಿದನ
ವ್ರ[63]ತ ಸುಶೀಲಾಚಾರ ಬಲ ಸಂ
ಯುತನ ಸಚಿವನ ಮಾಡುವುದು ಸ
ನ್ಮತವು ಭೂಪರಿಗೆಂದು ಬಿನ್ನೈ[64]ಸಿದನು ಮಂತ್ರೀಶ ೧೧
ಕ್ಷೀರ ರೋಗಾನ್ವಿತಗೆ ಚಂದ್ರಿಕೆ[65]
ಚೋರಗೋವದ ತೆಱದೆ[66] ವಿವಿಧವಿ
ಚಾರದಿಂ ಮಂತ್ರಿಗಳು ಪೇಱುತ್ತಿರಲು ಕೆಯ್ಕೊಳದೆ
ಧಾರಿ[67]ಣೇಶ್ವರ ಧರೆಯ ಕಾಷ್ಠಾಂ
ಗಾರಗೊಂದಿಸೆ[68] ಮಗುಱ್ದು ತಮ್ಮಾ
ಗಾರಗಳಿಗೆಯ್ದಿವರು ಮಂತ್ರಿಗಳಧಿಕ ದುಗುಡದಲಿ ೧೨
ಸುರಪನನ್ಯಸ್ತ್ರೀಯ[69] ಗಮನವು
ಪರಮಪಾತಕವೆಂದು ತಾನೇ[70]
ನಱೆಯನೇ ನಳ ಜೂಜು ನಾಶನವೆಂ[71]ದು ಪರಿಕಿ[72]ಸನೆ[73]
ಧರಣಿಯೊಳು ರಾಘವನು ಹೊಮ್ಮಿ[74]ಗ
ವುರುಕಪಟವೆಂದಱೆಯನೇ ಪರಿ
ಹರಿಸಬಾರದು ಕರ್ಮವಶವನು ಭೂಪ ಕೇಳೆಂದ ೧೩
ನೆರೆದ ಪುಷ್ಪಿತ ಪದ್ಮಿನಿಯ ಮೆ
ಯ್ವೆರಸಿದೆನು ವಾರು[75]ಣಿಯ ಗೋತ್ರೋ
ತ್ಕರಕೆ ನೀಡಿದೆ ಮಂಡಲಾಗ್ರವ[76] ಕರವ ಕುವಲಯಕೆ
ತೆ[77]ರಳಿಸಿದೆ ತನಗಿಂ[78]ದಧೋಗತಿ
ನಿರುತವೆಂದು ವಿರಕ್ತದಿಂದಂ
ಬರವನು[79]ಱೆದು[80]ರುಳಿದನು ಭಾಸ್ಕರನಪರವಾರ್ಧಿಯಲಿ ೧೪
ವರುಣದಿಕ್ಸತಿಯು[81]ಟ್ಟ ರಕ್ತಾಂ
ಬರರುಚಿಯೊ ಭಾಸ್ಕರನ ರಥಹಯ
ಖುರಹತಿಯೊಳುದ್ಭವಿಸಿದಪರಾಚಳದ ಕೆಂದೂಳೋ
ವರರಥಾಂಗೌಘದ ನಿಯೋಗಾ
ವಿರಹದಾವಿ[82]ಗೆಗಿಚ್ಚೊ ಎನಲಾ
ವರಿಸಿದುದು ಸಂಧ್ಯಾರುಣವು ಧರಣಿದಿಗಂತರವ ೧೫
ನುಡಿಸಿ ತುಂಬಿಯೆನನೆಲರ ದಟ್ಟಡಿ
ಯಿಡಿಸಿ ಗೂಡಿನ ತೊಟ್ಟಿಲೊಳು ಖಗ
ವಿಡಿ[83]ದು ನಗಿಸಿಯೆ ಕುಮುದಿನಿಯ ತೂಕಡಿಸಿ ಕಮಲಿನಿಯ
ಕಡುತಮವನ[84]ಬುಬೆಂ[85]ದು ಕೋಕನ
ಬೆಡಗ[86]ನಂಜಿಸಿ ಹಲವು ಮಕ್ಕಳ
ಹಡೆದ ತಾಯಂದದಲಿ ಸಂಧ್ಯಾಮಡದಿಯೊ[87]ಪ್ಪಿದಳು ೧೭
ಧರೆ ಗಗನ ದಶದಿಕ್ಕುಗಳ ಸಾ
ಗರಗಳನು ನಿಶ್ಚಿದ್ರಮಪ್ಪಂ
ತಿರಗೆ ಪಿತಾಮಹನಿಂದ್ರನೀಲದ ಮಣಿಯ ಕಟ್ಟೆಸಗಿ
ಭರಿತವಾಗಿಯೆ ಕಜ್ಜಲವವಿ
ಸ್ತರ[88]ದೊಳೂ[89]ಡಿದನೆಂದೆನಲು ಕಾ
ರಿರುಳು ತುಂಬಿತು ಜಗವನವನೀಪಾಲ ಕೇಳೆಂದ ೧೭
ಜಲಜಸಖನಪರಾಬ್ಧಿ[90]ಯೊಳು[91] ಬೀ
ಱಲು ನೆಗೆದ ನೀರ್ವನಿಗಳೋ ನಭ
ಲಲನೆಯರ ದಂತಾವಳಿಯೊ ವಿಧುವೆಂಬ ಮೃಗರಾಜ
ಮುಲಿದು ತಿಮಿರೇಭೇಂದ್ರ ಕುಂಭ
ಸ್ಥಲವ ಸೀಱಲು ಸಿಡಿದ ಮುಕ್ತಾ
ವಳಿಗಳೆನೆ ನಕ್ಷತ್ರ ಪಙ್ತೆಗಳೆಸೆದು[92]ವಭ್ರದಲಿ ೧೮
ಸುರಪನೀಕ್ಷಿಸೆ[93] ಪೂರ್ವದಿಗ್ವಧು
ಧರಿಸಿದಮಲಸು[94]ವರ್ಣಮುಕುರವೊ
ಸ್ಮರನ[95] ಶಸ್ತ್ರವ ಮಸೆವ ರತ್ನದ ಸಾಣೆಯೋ ನಭದ
ವರಸಿತಾಂಭೋಜವೊ ಚಕೋರಗ
ಳುರುತರದಿ ನೆರೆದುಂಬ ರತ್ನದ
ಪರಿಯಣವೊ ತಾನೆನಲು ಶಶಿಯುದಯಾದ್ರಿಯಲಿ ಮೆಱೆದ ೧೯
ಜನಪ ಕೇಳಾ ಭೂಮಿಪತಿ ಸ
ದ್ವಿನುತ ಸಂಧ್ಯಾವಂದನಾದಿಯ
ನನುಕರಿಸಿ ದೇವಾ[96]ರ್ಚನೆಯನಾನಂದದಲಿ ಮಾಡಿ
ಅ[97]ನುನಯದಿ ಶಯ್ಯಾ[98]ಗೃಹಕೆ ಬಂ
ದಿನಿಯಳೊಡಗೂಡಿರ್ದು ನಿದ್ರಾ
ಗೆನೆಯೊಳೊಂ[99]ದಿದನಾ ರಮಣಿಸಹಿತರಸನೊಲವಿನಲಿ ೨೦
Leave A Comment