ಕುಸುಮಕಾಲದೊಳಲು ಕೊಯ್ದೊಂ
ದಿಸದೆ ಫಲಕಾಲದಲಿ ಪುಷ್ಪ
ಪ್ರಸರವಱೆಯಲ್ಕಾಂಟೆ ಮಾಡುವ ಕೆಲವು ಕಾರ್ಯಗಳ
ಎಸಗಿ ತತ್ಕಾಲದಲಿ ನಿರ್ವ
ರ್ತಿಸದೆ ಬಱೆಕೊಂದಿಸುವೆನೆನಲದು
೪ಬಸವ

[1]ಹುದೆ ತನಗೆಂದು ಮನದೊಳಗ[2]ಱಲಿದನು ಭೂಪ         ೪೧

ಅಱಲಿದೊಡೆ ಫಲವೇನು ವಂಶ[3]ವ
ನುಱುಹಬೇಕೆಂದೆನುತಲತಿ ಕೌ
ಶಳದಿ ಕೇಕೀಯಂತ್ರ[4]ದಲಿ[5] ಗಗನಸ್ಥಳಕೆ ನೆಗೆದು
ಸುಳಳಿತಾರಾಮದಲಿ ನಿಂದಾ
ಹೊಱಲಿಗೊಡ[6]ನೆ ಮಗುಱ್ದು ಬರ್ಪಂ[7] ತಿಳೆಯ ಪತಿ ಮಾಡಿಸಿದನವನೀಪಾಲ ಕೇಳೆಂದ          ೪೨

ಆ ಮಯೂರದ ಯಂತ್ರದಲಿ ಕಾಂ
ತಾಮಣಿಯನೇಱೆಸಲ[8]ದೆದ್ದಾಂ[9] ರಾಮಕಂಬರಗತಿ[10]ಯೊಳುಯ್ಯೆ[11] ಗಜಾಶ್ವಯಾನದಲಿ
ಕಾಮಿನೀ ಜನಸಹಿತ ಭೂಪ ಲ
ಲಾಮ[12]ನೆಯ್ತಂ[13]ದಲ್ಲಿ ಸತಿಗಭಿ
ರಾಮಪುಂಸ[14]ವನಾ[15]ದಿ ಶೋಭನಗಳನು ಮಾಡಿಸಿದ    ೪೩

ಸತಿಯನಿಂತು ದಿನಂಪ್ರತಿ[16]ಯೊಳಾ[17] ಕ್ಷಿತಿ[18]ಪನಾರಾಮಕ್ಕೆ ಕೇಕೀ[19]ವಿತತ ಯಂತ್ರದೊಳು[20]ಯ್ದು ವನಜಲ[21]ಕೇಳಿಯಲಿ ಸತಿಯ
ಅತಿಶಯದ ದುಃಖಾತುರವ ನೆಱೆ
ಹತಿಸಿ ಪರಮೋತ್ಸಾಹದಲಿ ಭೂ
ಸತಿಯ ಕಾಷ್ಠಾಮಗಾರಗಿತ್ತಿರ್ದನು ಮಹೀಪಾಲ           ೪೪

ಧರೆಯೊಳುತ್ತಮ[22]ರಿಂಗಿತದೊಳುರು
ತರದೊಳಱೆವರು ಮಧ್ಯಮರು ಕೇ
ಳ್ದಱೆವರಧಮರು ಕಂಡಱೆವರತ್ಯಧಮರಾದವರು
ದರುಶನ ಶ್ರವಣೇಂ[23]ಗಿತದೊಳಱೆ
ಯರು[24] ಸುನಿಶ್ಚಯವಖಿಳ ಕಳೆಯಲಿ
ಪರಿಣತನು ನೃಪನಱೆಯದಿಹುದಿದು ಕ[25]ರ್ಮವಶವೆಂದ ೪೫

ಧಾರಿ[26]ಣೀಪತಿ ಕೇಳು ಕಾಷ್ಠಾಂ
ಗಾರನಾ ವಿಷಯದ ಸಮಸ್ತ ಮ
ಹೀರಮಣರನು ಮಕುಟವರ್ಧನ[27]ಮಂಡಳೀಕರನು
ಶೂರ ಸುಭಟಾಮಾತ್ಯಕುಲಪರಿ
ಚಾರ ಮನ್ನೆಯನಾಯಕ[28]ರ ಸುವಿ
ಚಾರದಿಂದೊಳಹೊಯ್ದು ಕೊಂಡನುಪಾಯಕುಶಲದಲಿ  ೪೬

ದುರುಳ ಕಾಷ್ಠಾಂಗಾರನೊಂದಿನ
ದಿರುಳು ರಾಜದ್ರೋಹವನು ನೆನೆ[29] ದುರುತರದೊಳಿಂತೆಂ[30]ದನನ್ಯಾ[31] ಧೀನವಾಗಿರ್ದ
ಧರಣಿಯೊಡೆತನವೇಕೆ ಸಕಲೈ
ಶ್ವರಿಯವೇಕದಱೆಂದಲಾತಗೆ
ಮರಣ ಲೇಸೆಂದೆನುತ ಚಿಂತಿಸುತಿರ್ದನಾತ್ಮದಲಿ        ೪೭

ಮೌನವಿಲ್ಲದ ಬ್ರಹ್ಮಚರ್ಯ ಸು
ದಾನವಿಲ್ಲದ ವಸ್ತುಚಯವ[32]ಭಿ
ಮಾನವಿಲ್ಲದ ನಾರಿ ಸಜ್ಜ[33]ನರಿಲ್ಲದಾಸ್ಥಾನ
ಮಾನಿತ ಪ್ರಿಯವಿಲ್ಲದೋಲಗ
ಗಾನವಿಲ್ಲದ[34] ನೃತ್ಯ[35]ತನ್ನಾ
ಧೀನವಿಲ್ಲದ ಸಂಪದವ ಸುಡಲೆಂದು ಬಿಸುಸು[36]ಯ್ದು      ೪೮

ಧರೆಯೊಳನ್ಯಾಧೀನವಾಗಿಹ
ನರಗೆ ತನ್ನಯ ಬಂಧುಬಳಗವ
ಹೊರೆಯ[37]ಲಿಲ್ಲಭಿಮತವ[38] ವಿಬುಧರಿಗೀಯಲಿಲ್ಲೆಸೆವ
ಕರಿ ತುರಗ ಮಹಿಳಾಜನವ[39] ವಿ
ಸ್ತರದಿ[40] ಜೋಡಿಸಲಿಲ್ಲವನು ಪಾ
ಮರನು ಸೇವಾಪರನ ಬಾಱು ನಿರರ್ಥವವನಿಯಲಿ       ೪೯

ಉರಗನಾಥಗಹಿತ್ವ[41]ವನು ಕೇ
ಸರಿಗೆ ಮೃಗರಾಜತ್ವ [42]ವನು[43] [44]ಮಿಗೆ[45] ಗರುಡಗೆ[46] ಖಗೇಂದ್ರತ್ವ [47]ವಿತ್ತ[48] ವರಾರು ತಂ[49]ತಮ್ಮ
ಉರುಭುಜದ ಬಲದಿಂದಲಂತವ
ಕರಸುತನವಾಯ್ತಂತೆ ಸತ್ಯಂ
ಧರನ ತಱೆದೀ ರಾಜ್ಯಕಧಿಪತಿಯಹೆನು ತಾನೆಂದ        ೫೦

ಎಂದು ರಾಜಘ್ನವನು ನೆನೆದದ
ಕೊಂದು ಕಪಟೋಪಾಯವನು ಕಂ
ಡೊಂ[50]ದಿ ಮಂತ್ರಿ ಪಸಾಯಿ[51]ತರ ತಾ ಕರೆಸಿ ಸಭೆಯೊಳಗೆ
ಒಂದ[52]ದು ರಾಜದ್ರೋಹದೇವತೆ
ಬಂದಿರುಳು ತನ್ನದೆಯ ಮೆಟ್ಟಿಯೆ
ಬಂದಿಸುವಳದನೇನ ಪೇಂ[53]ಱವೆನೆಂದು ಖಳ ನುಡಿದ   ೫೧

ನುಡಿವುದನುಚಿತ ನುಡಿದೆನಾದೊಡೆ
ತೊಡರುವುದು ಪಾತಕವು ಮೇಣದ
ನುಡಿದೆನಾದೊಡೆ ಜಗಕೆ ಹುಸಿಯಾಗಿಪ್ಪುದದಱೆಂದೆ
ನುಡಿಯದಿರೆ ತಾ ಹಿತವ ರಾಷ್ಟವು
ಕೆಡುವುದದು ಸಿದ್ಧಾಂತವದಱೆಂ
ನುಡಿಯಬೇಕೆಂದಾ ದುರಾತ್ಮನು ನುಡಿದನೊಲವಿನಲಿ   ೫೨

ಜನಪ ಕೇಳ್ ಲೋಕದಲಿ[54] ದುಷ್ಟರ
ನೆನಹದೊಂದಾಗಿಹುದವರ ಮಾ
ತಿನಲಿ ಬೇಱೊಂದವರು ಮಾಡುವ ಕೃತ್ಯ ತಾನೊಂದು
ಇನಿಸು[55] ಗುಣ ದುರ್ಜನರಿಗದು ಮಂ
ಡನವದಾ[56]ಹುದಾಗಿ ಕಪಟದ
ನೆನಕಿ ನಿಂದಾ *ಖಳನು ನುಡಿದನು ಸಭೆಯೊಳಾ ಹದನ*          ೫೩

*ಅನುದಿನವು ಬಂದಾ ಕುದೇವತೆ
ಜನಪನನು ನೀ ವಧಿಸದಿರೆ ನಿ
ನ್ನನುಪಮಾ[57]ನ್ವಯ ಸಹಿತ ಸವಱುವೆನೆಂದೊ[58]ಡೀಸುದಿನ*
ನೆನೆವುದನುಚಿತವೆಂದು ತಾನೇ
ಮುನಿಸಿನಿಂದಿರುಳೆದೆಯ ಮೆಟ್ಟಿದ
ಳೆನಗುಪಾಯವನಿದಕೆ ಪೇ[59]ಱುವು[60]ದೆಂದು ಖಳ ನುಡಿದ           ೫೪

ಮುನಿಪ ಹಿಂಸೆಯ ಹಂಸೆ ಮೇಘ
ಧ್ವನಿಯನಹಿ [61]ತಾರ್ಕ್ಷ್ಯಾಗಮವ[62] ನಿ
ರ್ಧಿನಿಕ ದುರ್ಭೀಕ್ಷವನು ಗ[63]ಜಪತಿ ಕೇಸರಿಯ ಬರವ
ಜನನಿ ತನಯನ ಮರಣವನು ಧವ
ನಿನಿಯಳೊಲ್ಲದ ವಾರ್ತೆಯನು[64] ಕೇ
ಳ್ದನಿತು ಮನದಲಿ ಹೆದಱೆತಾ ಸಭೆ ಖಳನ ವಚನದಲಿ    ೫೫

ಖಳ ನುಡಿಯಲಾಸ್ಥಾನ ಶೋ[65]ಕದ[66] ಜಲಧಿಯೊಳಗದ್ದಂ[67]ತೆ ಭೀತಿಯೊ
ಳಲುಗ[68]ದಿರೆ ವರಧರ್ಮದತ್ತಾಮಾತ್ಯನೊಡಲೊಳಗೆ[69]ಅಲಗು[70] ಮುರಿದಂತೀಗಳಸು ಹೋ
ಗಲಿ ನೃಪಾಲನಿಮಿತ್ತವೆಂ[71]ದತಿ[72] ಮುಳಿದು ಮನದಲಿ ನೆನೆಯುತಿರ್ದನು ಭೂಪ ಕೇಳೆಂದ ೫೬

ನಾಡೊ[73]ತಿಪಾತಕರು ಹಿಂಸೆಯ
ಮಾಡೆ ಬೇಡೆನ್ನದಿರೆ ಕಂಡುದ
ನಾಡದಿರ್ದರೆ  ಧರ್ಮವನುಪೇಕ್ಷಿಸಿ ರಣಾಗ್ರದಲಿ
ಓಡಿದರೆ ಗುರುಜನಕೆ ವಿನಯವ
ಮಾಡದಿರಲವಗಹುದಧೋಗತಿ
ರೂಢಿಯೊಳೆಂದಾತ್ಮದಲಿ ನೆನ[74]ದೆಂದನಾ ಖಳಗೆ     ೫೭

ಗುರುವಿಗಾ[75]ಚಾರ್ಯ[76]ನಿಗೆ ತನ್ನನು
ಹೊರೆದ ದಾತಾರಂಗೆ ಧರ್ಮವ
ನೊರೆ[77]ದವಗೆ[78] ದುರ್ಭಿಕ್ಷದಲಿ ಸಲಹಿದ ಕೃಪಾಳುವಿಗೆ
ಉರಗ ಜಲ ಶಿಖಿ ಶಸ್ತ್ರಭಯವನು
ಪರಿಹರಿಸಿದವರಿಗೆ ಮಹಾತ್ಮರಿ
ಗೆರಡ ನೆನೆದ ದುರಾತ್ಮನಿರೈವ[79] ಮಹಾಂಧನರಕದಲಿ  ೫೮

ಲಲಿತದೇವವ್ರಾತದೊಳು ಸ[80]ಲ್ಲಲಿ[81]ತಗುಣಸರ್ವ[82]ಜ್ಞನ[83]ದ್ರಿಗ
ಳೊಳು ಸುರಾಚಲವಿಭ[84]ದೊಳುರು ಚೌದಂತ ಚೌಷಷ್ಟಿ
ಕಲೆಗಳೊಳು ಸಾಹಿತ್ಯವ[85]ಬ್ಧಿಗ
ಳೊಳಗೆ ದು[86]ಗ್ಧ ಸಮುದ್ರ ಪಾತಕ
ದೊಳಗೆ ರಾಜದ್ರೋಹಕಿಂತ[87]ತ್ಯಧಿಕವಿಲ್ಲೆಂದ  ೫೯

ಪರಸತಿಯರಲಿ ಹಿಂಸೆಯಲಿ ಸ
ದ್ಗುರುವಿನಲಿ ತಂದೆಯಲಿ ತಾಯಲಿ
ವರತಪಸ್ವಿಗಳಲಿ [88]ಲಸತ್[89]ಶ್ರುತದಲ್ಲಿ ಪಾಪಗಳ
ಪರಿಗತಿಗಳಲಿ ದೈವದಲಿ[90]ವಿಬು
ಧರಲಿ[91] ತೀರ್ಥಂಗಳಲಿ ಭೂಪರೊ
ಳಿರಲು ಬೇಕತಿ ಭೀತಿ ಮನುಜವ್ರಾತಕವನಿಯಲಿ          ೬೦


[1] ವಸದ (ಜ), ವಸವ (ಮ)

[2] x (ಜ)

[3] ತ (ಜ, ಮ)

[4] ವನು (ಜ, ಮ)

[5] ವನು (ಜ, ಮ)

[6] ಡೆ (ಜ)

[7] ಪ್ಪಂ (ಜ, ಮ)

[8] ಉದ್ದ್ಯಾ (ಜ, ಮ)

[9] ಉದ್ದ್ಯಾ (ಜ, ಮ)

[10] ಯೆಲೊಯ್ಯೆ (ಜ), ಯಲೊಟ್ಟು (ಮ)

[11] ಯೆಲೊಯ್ಯೆ (ಜ), ಯಲೊಟ್ಟು (ಮ)

[12] ನೈತ (ಪ)

[13] ನೈತ (ಪ)

[14] ನವಾ (ಜ)

[15] ನವಾ (ಜ)

[16] ಯಲಾ (ಜ)

[17] ಯಲಾ (ಜ)

[18] x (ಜ)

[19] ಯತದೊಳೊ (ಜ, ಮ)

[20] ಯತದೊಳೊ (ಜ, ಮ)

[21] ನ (ಮ)

[22] x (ಮ)

[23] ಣೀಂ (ಜ)

[24] ನು (ಜ), ದು (ಮ)

[25] x (ಜ)

[26] ರು (ಜ, ಮ)

[27] ರ (ಜ), ನರ (ಮ)

[28] x (ಜ)

[29] ನ (ಜ, ಮ)

[30] ದು ನನ್ನೊಂ (ಜ), ದು ನನ್ನಾ (ಮ)

[31] ದು ನನ್ನೊಂ (ಜ), ದು ನನ್ನಾ (ಮ)

[32] ಲ (ಜ), ಅ (ಮ)

[33] ಜ (ಮ)

[34] x (ಜ)

[35] (ಸಭೆ)-(ಮ)

[36] ಸೂ (ಜ)

[37] x (ಜ)

[38] x (ಜ, ಮ)

[39] x (ಜ)

[40] ಸಿ (ಮ)

[41] + ತ(ಮ)

[42] x (ಮ)

[43] ವನ (ಜ)

[44] x (ಜ, ಮ)

[45] x (ಜ, ಮ)

[46] + (ವರ)-(ಮ)

[47] ವನು ನಿತ್ತ (ಜ), ವನು ಇತ್ತ (ಮ)

[48] ವನು ನಿತ್ತ (ಜ), ವನು ಇತ್ತ (ಮ)

[49] ತಮ (ಪ)

[50] ದೊಂ (ಜ, ಮ)

[51] + ನವ (ಜ, ಮ)

[52] ಬಂ (ಪ)

[53] ಹೇ (ಪ)

[54] ರಿ (ಜ)

[55] (ತು)- (ಮ)

[56] ಡಾ (ಜ)

* ತಸವರುವೆನೆಂದನೂ ಸುದಿನಾ (ಮ)

* ಇಷ್ಟು ಭಾಗವು ಮ ಪ್ರತಿಯಲಿಲ್ಲ

* ಇಷ್ಟು ಭಾಗವು ಮ ಪ್ರತಿಯಲಿಲ್ಲ

[57] ಮ (ಜ)

[58] ದ (ಜ)

* ಇಷ್ಟು ಭಾಗವು ಮ ಪ್ರತಿಯಲಿಲ್ಲ

[59] ಱೂ (ಜ)

[60] ಱೂ (ಜ)

[61] ತಾಕ್ಷಕನ ಗಮನವ (ಜ, ಮ)

[62] ತಾಕ್ಷಕನ

[63] ರ (ಜ)

[64] ನ (ಮ)

[65] ಕಾ(ಜ, ಮ)

[66] ಕಾ(ಜ, ಮ)

[67] ರ್ದಂ (ಜ, ಮ)

[68] ಕ (ಜ, ಮ)

[69] ಲಘು(ಜ)

[70] ಲಘು(ಜ)

[71] ತಳದತಿ (ಜ)

[72] ತಳದತಿ (ಜ)

[73] ಡ (ಜ)

[74] ನ (ಮ)

[75] ರಾ (ಜ)

[76] ರಿಯ(ಜ, ಮ)

[77] ವ (ವ) – (ಮ)

[78] ವ (ವ) – (ಮ)

[79] + ನು (ಜ, ಮ)

[80] ಲ್ಲಿ (ಜ)

[81] ಲ್ಲಿ (ಜ)

[82] ಜ್ಞಾ (ಜ, ಮ)

[83] ಜ್ಞಾ (ಜ, ಮ)

[84] ನಿಭವ (ಜ), ಭವ (ಮ)

[85] ಅ (ಜ)

[86] ದ (ಜ)

[87] ದ (ಜ, ಮ)

[88] ಲಸ (ಜ), ಬಸ (ಮ)

[89] ಲಸ (ಜ), ಬಸ (ಮ)

[90] x (ಜ, ಮ)

[91] x (ಜ, ಮ)