ಕರಿಯೆ ಕರಿಪತಿಯಾನ
ಹರಿ ಸಹಸ್ರಬಲಾನ್ವಿತನ[2] ಪಿಕ
ವರಪಿಕಾಳಾಪನನು ಚಕ್ರವೆ ಚಕ್ರಧರನಿಭನ
ಹರಿಣ ಹರಿಣಾಂಕಾಸ್ಯನನು ಭಾ
ಸುರಶುಕವೆ ಶುಕವಾ[3]ಣಿಯ[4]ನು ವಿ
ಸ್ತರದಿ ತೋಱೆನಗೆಂದು ಸತಿ ಕೇಳಿದಳು ಪಕ್ಷಿಗಳ ೨೧
ಚಾರುಚೂ[5] ತವೆ ಚೂ[6]ತಬಾಣಾ
ಕಾರನನು ಮಂದಾ[7]ರ ಬುಧಮಂ
ದಾರನನು ಚಂದನವೆ ಚಂದನ ಲೇಪಿತಾಂಗನ[8]ನು
ನಾರಿಕೇಳವೆ ಲಲಿತಕೀರ್ತಿಯ[9]
ನಾರಿಯಧಿಪ ಕಾಣಿರೇ ಎಂ
ದಾ ರಮಣಿ ಬೆಸಗೊಂ[10]ಡಳ[11]ವನೀಶ್ವರನ ವಿಕಳದಲಿ ೨೨
ತಿಲಕ ನೀ ತೋಱಖಿಲಭೂಮಿಪ
ತಿಲಕನನು ವಿಮಲಾರ್ಜುನವೆ[12] ದೋ
ರ್ಬಲಜಿತಾರ್ಜುನನನು ಸುಕೇತಕಿ ವಿಜಯಕೇತನನ[13]
ಲಲಿತಕಂಕೆಲಿದ್ರುಮವೆ ನೀ[14]ತೋ
ಱೊಲಿದು ಕಂಕಲಿಪ್ರಿಯನನೆಂದಾ[15]
[16]ಅಳಿಕುಳಾಳಕೆ[17]ತರುಗಳನು ಬೆಸಗೊಂಡಳವನಿಪನ ೨೩
ಕಮ[18]ಲವೇ[19] ಕಮಲಾನುರಕ್ತನ
ಕುಮುದ ಕು[20]ಮುದೋದ್ಭಾಸಿಯನು ವಿ
ದ್ರುಮವೆ ವಿಲಸದ್ವಿದ್ರುಮೋಷ್ಠನ ರಾಜಹಂಸಗಳೇ[21]
ವಿಮ[22]ಲಗುಣಯುತ ರಾಜಹಂಸನ
ಸುಮನ[23]ವೇ ಸುಮನೋನಿ[24]ಭನ ಸು[25]ಭ್ರಮರವೇ[26] ಭ್ರಮರಾಳಕನ ತೋಱೆಂದ[27]ಳಿಂದು[28]ಮುಖಿ ೨೪
ಜಾಣನನು ಸಂತತ ಲಸತ್ಕ
ಲ್ಯಾಣನನು ಸುಜನ[29]ನನು ಭುವನ
ತ್ರಾಣನನು ವೀಣಾಪ್ರವೀಣನ[30] ಗುಣವಿಭೂಷಣನ
ಕ್ಷೋಣಿಪಾಲಶ್ರಣಿ ನುತಗೀ
ರ್ವಾಣನಾ[31]ದನಮಾನ[32]ನನು ನೀವ್[33]
ಕಾಣಿರೇ ಎಂದಬಲೆ ಬೆಸಗೊಂಡಳು ತರುವ್ರಜವ ೨೫
ತರುಣಿಯಿಂತಿನಿ[34]ಯನ ವಿಯೋಗಾಂ[35]
ತರದಿ ನೆಱೆ ಕಳವಳಿಸಿ ತಾ ಕಂ
ಡ[36]ರನಿರದೆ[37] ಕೇಳುತ್ತ[38] ಧೈರ್ಯವ ತಳೆ[39]ದು ತತ್ಕಾಂತೆ[40]
ದುರುಳ ಕಾಷ್ಟಾಂಗಾರನಿಂ ಸುರ
ಪುರಕೆ ಸರಿದನೊ ತಿಳಿಯದೆಂದಾ
ತರುಣಿ ತತ್ಪ್ರೇತಾವನಿಗೆ ತಿರುಗಿದಳು ಶೋಕದಲಿ ೨೬
ವರಚಿತ್ರವಿತಾನಮಯ[41]ಮಂ
ದಿರದೊ[42]ಳಬಲೆಯರಂಘ್ರಿಗಳ ವಿ
ಸ್ತರ[43]ದೊಳೊ[44]ತ್ತಲು [45]ಅಂಚೆ[46]ವಾಸಿನ ಮೇಲೆ ಪವಡಿಸುವ
ಪುರಷ ನೀ ನೆಣ ನೆತ್ತರೊಳು ಭೂ
ತರುಣಿಯನು ನೆಱೆ ಮೆಚ್ಚಿ ಬಿಡದಾ
ಧ[47]ರೆಯನಪ್ಪಿದೆಯಂ[48]ದು ಮನದೊಳು ಮಱುಗಿದಳು ರಮಣಿ ೨೭
ಅಂಬುಜಾನನೆ ಭೂಮಿಪನ ಚಿಂ
ತಾಂಬುಧಿಯೊಳೋಲಾಡುತಿ[49]ರೆನೆಱೆ
ತುಂಬಿದು[50]ದು ನವಮಾಸ ವರಶುಭಲಗ್ನ ಸಮಯದಲಿ
ಕಂಬುಕಂಧರೆ ಸೂರ್ಯಗೆಣೆಯಂ
ದೆಂಬ ಸುಕುಮಾರನ ಪ[51]ಡೆದುಱೆ[52]
ಹಂಬಲಿಸುತಿರ್ದಳು ಮಹೀಶನ ನೆನೆ[53]ದು ಶೋಕದ[54]ಲಿ ೨೮
ಸಾರಚಂದ್ರೋಪಲದ ರಮ್ಯಾ
ಗಾ[55]ದಲಿ[56] ಸುಕುಮಾರ ನೀನವ[57]ತಾರಿಸ[58]ದೆ ಸುಡುಗಾಡಿ[59]ನಲಿ[60] ಬಂದುದಿಸುವರೆ ಕಂದ
ಚಾರುಪುಣ್ಯಾತ್ಮಕರ ಬಸಿ[61]ಱಲಿ
ಬಾರದತಿ[62] ಪಾಪಾನ್ವಿತೆಗೆ ಸುಕು
ಮಾರ ನೀನುದಿಸುವರೆ ಹೇಱೆಂದಱಲಿದಳು ರಮಣಿ ೨೯
ಬಾಲಕನೆ ನಾ ನಿನ್ನ ಜಠರಕೆ
ಹಾಲು ಬೆಣ್ಣೆಯನೆಲ್ಲಿ ತರುವೆನು
ಗೋ[63] ಱನೀಕ್ಷಿಸಲಾಱೆ ನಾವಂದದಲಿ ನಾ ನಿನ್ನ
ಪಾಲಿಸುವೆನೆಲ್ಲಿರಿಸುವೆನು ಬಿಱು
ಗಾ[64]ಳಿಗಳಿಗಾ[65]ನೆಲ್ಲಿಗು[66]ಯ್ವೆನು
ಪೇಱು ಕಂದಯೆ[67]ನುತ್ತ ಮುಂಡಾಡಿದಳು ನಂದನನಾ ೩೦
ಸರಸಿಜಾಂಬಕಿಯಿಂತು ಮಱುಗು[68]
ತ್ತಿರೆ ಕುಮಾರನ ಪುಣ್ಯದೇವತೆ
ಯುರುತರದಿ ತದ್ಧಾತ್ರಿ ವೇಷದಿ ಬರಲು ಕಂಡಬಲೆ
ಹರಣ ಬಂದಂತಿಲ್ಲಿಗೆಂತೆಲೆ
ತರುಣಿ ಬಂದೆಯೆನುತ್ತ ಶೋಕಿಸು
ತಿರಲು ದೇವತೆ ನುಡಿದಳಾಕೆಗೆ ದಾದಿಯಂದದಲಿ ೩೧
ಬಾಲೆ ನೀನಿನ್ನ ಱಲಬೇಡೀ
ಬಾಲಕಗೆ ಶುಭಲಕ್ಷಣದ ರೇ
ಖಾಳಿಯಿವೆ ನೀ ನೋಡು ತಾನಿವನಖಿಳ ಶತ್ರುಗಳ
ಸೀಱೆ ತನ್ನ ಸಮಸ್ತರಾಜ್ಯವ
ಪಾಲಿಸುವನಿದು ತಪ್ಪದೆಂದಾ
ನೀಲಕುಂತಲೆಗಱುಹಿ ನುಡಿದಳು ಮತ್ತೆ ವಿನ[69]ಯದಲಿ ೩೨
ತರುಣಿಯೇಱಿಂತಿಲ್ಲಿ ನಾವಿ
ನ್ನಿ[70]ರಲ[71]ದೋರ್ವ ಮಹಾತ್ಮ ಬಂಧಿ
ತರುಣನನು ಕೊಂಡು[72]ಯ್ದು ಸಲಹುವನಾತನಿಂದಿಳೆಗೆ
ಅರಸಹನು ನೀನಾತನೆಯ್ದು
ತ್ತಿರಲು ಬೇಡೆನಬೇಡವೆಂದೀ
ಪರಿಯಲಾಕೆಯ ತಿಳುಹೆ[73] ಹಾ[74] ಯೆಂದಱಲಿದಳು ರಮಣಿ ೩೩
ತರುಣ ನಿನ್ನನು ಸಾಕಲಾಱದೆ
ಪರರಿಗೀವಂತಾಯ್ತೆ ಹಾಯೆಂ
ದರಸಿ ಗೋ[75]ಱಿಟ್ಟಱಲಿ ತದ್ಬಾಲಕನ ಹಣೆಹಣೆಯ[76]ಹೊಱಿ[77]ಸಿ ನೆಱೆ ಮುಂಡಾಡಿ ತನ್ನಯ
ಬೆರಲ ಮಣಿಮುದ್ರಿಕೆಯ ತೆಗೆದಂ
ಬುರುಹಮುಖಿ ಸುತಗಿಟ್ಟು ತೊಲಗಿದಳೊಂದು ಬಾಹೆಯಲಿ ೩೪
ಅರಸ ಕೇಳಾ ಪುರದ ವೈಶ್ಯರಿ
ಗರಸೆನಿಪ ಗಂಧೋತ್ಕಟಂಗವ
ತರಿಸಿದಾತ್ಮಜನಱೆಯ[78]ಲಾ ನೃಪಸು[79] ವ್ರತಾಖ್ಯಮುನಿ
ಬರಲೆಱಗಿ ತನಗುದಯಿಸಿದ ಪು
ತ್ರರು ನಿರಾಯುಷರೇಕೆ[80] ತನಗೀ
ತೆಱನ ಹೇಱೆನೆ[81] [82]ಕರ್ಮವಶ ತಾ[83]ನೆಂದನಾ ಮುನಿಪ ೩೫
ಅಱಲಬೇಡೆಲೆ ವೈಶ್ಯ ನೀನಿದ
ತಳೆ[84]ದು ಕಾಡೊಳು ಬಿಸುಟಿ ಬಱಿಕಾ
ಸ್ಥಳದೊಳಱಸೆ[85] ಕುಮಾರ ಕೈವಶನ[86]ಪ್ಪನೆಂದು ಮುನಿ
ತಿಳು[87]ಹೆ ತತ್ಪ್ರೇತಾವನಿಗೆ ದೋ
ರ್ವಲನು ಮೃತಶಿಶು ಸಹಿತ ಬರೆ ಕಂ
ಡೊಲಿದು ವಿಜಯಾವತಿಗೆ ಸತಿ ತೋಱಿದಳು ಬೆರಳಿ[88]ನಲಿ[89] ೩೬
ಆ ವಣಿಗ್ವರನದನು ತತ್ಪ್ರೇ
ತಾವನಿಯೊಳಿಟ್ಟ[90]ಲ್ಲಿ ಮುನಿ ಪೇ
ಱ್ದೀವಿಧದಿ ನೋಡಲ್ಕೆ ನಿರ್ಧನ ಮಣಿಯ ಪಡೆದಂತೆ[91]ಕಾವು ಕಾವಿಂ[92]ದಱುತ[93]ಲಖಿಳ ದಿ
ಶಾವಳಿಯ ನೋಡುತ್ತ ಶಿಶುಗಳ
ದೇವನಂತಿಹ ರಾಜ[94]ಶಿಶುವನು[95] ಕಂಡು ಮಱುಗಿದನು. ೩೭
ಪರುಷವೋ ಕೌಸ್ತುಭವೊ ನವ ಕಡ
ವರವೊ ಬಿಂಬದ ಮಱಿಯೊ ನವ ಕಂ
ಡರಣೆಯೋ ಶಿಶು[96]ಗಳ ಲಲಾಮವೊ ಸಕಲ ಲಕ್ಷಣದ
ತರುಣಮನಸಿಜ ಬಾಲಕಾಕೃತಿ
ಧರಿಸಿ ಬಂದವನಲ್ಲ[97]ದಿರೆ ಮ
ರ್ತ್ಯರಿ[98]ಗಿನಿ[99]ತು ಸೊಬಗಿಲ್ಲೆನುತ ತಲೆದೂಗಿದನು ವೈಶ್ಯ ೩೮
ಮನದಣಿಯಲಾ ಶಿಶುವನಾಲೋ
ಕನವೆಸಗಿ ಬಿಗಿ[100]ಯಪ್ಪಿಕೊಂಡಿ[101]
ನ್ನೆ[102]ನಗೆ ತೃಣ ತ್ರೈಲೋಕ್ಯ ರಾಜ್ಯವದೇಕೆ ಸಿರಿಯೇಕೆ[103]ತನಯಗೆನ್ನೊಳು[104]ಋಣ ವಿಶೇಷ ವಿ
ದೆನುತ ಮುನಿ[105]ರೂಪಿಸಿದ ಮಾತುಗ
ಳೆನಗೆ ಸಾಮ್ಯವದಾಯ್ತೆನುತಲುಬ್ಬಿದನು ಹರುಷದ[106]ಲಿ ೩೯
ತರುಣನನು ಕಂಡಿಂತು ಹರುಷದೊ
ಳಿರಲು ವಿಜಯಾವತಿ ನಿರೀಕ್ಷಿಸಿ[107]
ಕರ[108]ಗಿ ಶಿಶು ಸೀ[109]ನಲು ಮಹಾಸ್ಥಿರ[110]ಜೀವಿಯಾಗೆಂದು
ಹರಸಲಾಱಿಂದೀಕ್ಷಿಸಿ ವಣಿ
ಗ್ವರನು ಕಾಣದೆ ಬಱಿಕ ಜೀವಂ
ಧರನು[111] ಹೆಸರೆಂದಿಟ್ಟು ಮನೆ[112]ಗೆಯ್ತಂ[113]ದ ಹರುಷದಲಿ ೪೦
Leave A Comment