ಬಱಿಕ ಮುನಿ ಗಂಧೋತ್ಕಟನ
ನಿಳಯ[2]ಕೆಯ್ತರ[3]ಲಾತ್ಮಜರು ತಾ
ವೊಲಿದು ತಮ್ಮೈ ನೂರ್ವರೂಟಕ್ಕೆ ಡೆಗಳೊಂದಿಸಿರೆ
ಒಳಗೆ ಪುಗೆ ಕಂಡಾ ಮುನೀಶ್ವರ
ನಳಬಳವ ಕಂಡಾ ಕುಮಾರಕ[4] ತಿಲಕ ಮೊದಲಾತಂಗೆ ತಾ ಭೊಜನವನೊಂದಿಸಿದ ೬೧
ಬಡಿಸಲದಱಿಂ ಮುನ್ನಲುಂಡವ
ಗಡಿಸುತಿರೆ ಕಂಡಾ ಕುಮಾರಕ
ರೊಡಲನೊ[5]ಲೆದೊಲೆ[6]ದುಬ್ಬಿ ಮನೆಗಟ್ಟಶನವನು ತರಿಸಿ
ಒಡನೆ ತಮ್ಮೈ ನೂರ್ವರಗಲನು
ಬಡಿಸೆ ತೃಪ್ತಿಯ ನೆಯ್ದ[7]ದಿರೆ ತಾ
ಹಿಡಿದ ಕಬಳವನಿತ್ತನಾ ಮುನಿವರನ ಹಸ್ತದಲಿ ೬೨
ತರುಣ ಕೇಳಾ ಪುಣ್ಯ ಪುರುಷನು
ಕರದ ಕಬಳವ ಕೊಡಲು ತನ್ಮುನಿ
ವರನ ಕ್ಷುತ್ತೃ[8] ಷೆಹಿಂಗೆಯಾ ಕ್ಷಣ ಭಸ್ಮಕವ್ಯಾಧಿ
ಕರಗೆ ಸಂತಸಬ[9]ಟ್ಟು ಪ್ರತ್ಯುಪ
ಕರಿಸಬೇಕೆನುತಿರ್ದ[10]ದಾವುದು
ಪರಿಯೆನುತ್ತಾ ಮುನಿಪ ಪರಿಕಿಸುತಿರ್ದ[11]ನಾತ್ಮದಲಿ ೬೩
ವಿ[12]ದ್ಯವೇ ಧನ ಧಾನ್ಯ ರತ್ನ ಸು
ವಿದ್ಯವೇ ವಿಖ್ಯಾತಿ ಸತ್ಕುಲ
ವಿದ್ಯವೇ ವಿಜ್ಞಾನ ಸತ್ಯಾಚಾರ ಧರ್ಮದಯೆ[13]
ವಿದ್ಯವೇ ಸಾಮ್ರಾಜ್ಯ ಸಂಪದ
ವಿದ್ಯವೇ ಪಿತೃ ಮಾತೃ ಬಂಧು ಸು
ವಿದ್ಯದಿಂ[14]ದತ್ಯಧಿಕವಿಲ್ಲದ ತಿಳಿಯಬೇಕೆಂದ ೬೪
ಅರಸ ತನ್ನಯ ದೇಶದೊಳು ವಿ
ಸ್ತರದೊಳಧಿಕನು[15] ಮೂರ್ಖ ತನ್ಮಂ
ದಿರದೊಳಗ್ಗಳನಾ ಪ್ರ[16]ಭುವು[17] ತನ್ನೂರೊಳತ್ಯಧಿಕ
ಪರಿಕಿಸಲು ವಿದ್ವಾಂಸ[18] ವಿಶ್ವದೊ
ಳುರುತರದೊಳತಿಪೂಜ್ಯನದಱಿಂ
ದೊರೆ[19]ವೆನೀತಂಗಮಳವಿ೮ದ್ಯೆಯ[20]ನೆಂದು ಚಿಂತಿಸಿದ ೬೫
ಎಂದಖಿಳವಿ[21]ದ್ಯೆಯ[22] ವಣಿಗ್ವರ
ನುಂದನಗೆ ಮುನಿ ಕಲಿಸಿದನು ಕೇ
ಳೆಂದು ತನ್ನಯ ತೆಱದಿ ಕ[23]ಥೆಯ ಬೆಡಂಗಿನಿಂದಾರ್ಯ
ನಂದಿ ತಿಳುಹಿ[24]ದೊಡೀ[25]ತನೇ ತಾ
ನೆಂದರಿದು ಗುರುಶುದ್ಧಿ ವೆತ್ತಾ
ನಂದದಲಿ ಮುನಿಗೆಱಗಿ ಬಱಿಕ ಕುಮಾರನಿಂತೆಂದ
ವರಮುನಿಗೆ ಗುರುಶಿಷ್ಯರುಗಳಾ
ಚರಣೆಯೆಂತು ಸುಶಾಂತಿ ಜಪತಪ
ಪರಮಧರ್ಮಾಧರ್ಮ ಮೋಕ್ಷಜ್ಞಾನ ದಯವೆಂತು
ನರಕಕರ್ಮ ಶುಭಾಶುಭಂಗಳ
ತೆಱನ ಮೋಕ್ಷದಲಾ ಪ್ರಪಂಚವ
ನೊರೆಯಬೇಕೆನಗೆನಲು ಮುನಿಪ ಕುಮಾರಗಿಂತೆಂದ ೬೭[26]
ಧರ್ಮ ದಯೆ[27]ವಡೆ[28]ದಷ್ಟಮದ [29]ದು
ಷ್ಕರ್ಮಂ[30] ಗಳನಿಟ್ಟೊಱಸಿ ಮನದೊಳು
ಹಮ್ಮನುಱಿದಿಂದ್ರಿಯವನೊದೆ[31]ದೆರಡಿಲ್ಲದಘವಱಿದು
ದುರ್ಮತವನಪಹರಿಸಿ ಮಾಯದೊ[32]ಳಮ್ಮು[33]ವರಿಷಡ್ವರ್ಗವುಱಿವ[34] ಸು
ನಿರ್ಮಳಾತ್ಮಕನಾದೊ[35]ಡವ ಗುರು ಮಗನೆ ಕೇಳೆಂದ ೬೯*
ಇಳೆಯೊಳಖಿಕಳಾವಿದತೆ ನಾ
ಣ[36]ಳವು ಗುಣವಾ[37]ಭರಣ ಸುಚರಿತೆ[38]ಚೆಲುವು[39] ಧರ್ಮವೆ ಮೋಕ್ಷ ಸಂಚಲಚಿತ್ತವಂಧತ್ವ
ಮುಳಿಸು ಹೊಲೆ ಮೃಷೆ[40] ರೌದ್ರ[41]ವವುದು
ರ್ಬಲವೆ[42] ಜೀವನ್ಮೃತವು ಪಿಸುಣ[43]ತೆ
ಕೊಲೆಯದೆಲೆ ಸುಕುಮಾರ ಕೇಳೆಂದಱುಹಿದನು ಮುನಿಪ ೭೦
ಮತ್ತತನವಜ್ಞಾನ ಮಿತ್ರವಿ
ಹತ್ಯವೇ ವಿಷ ಋಣವೆ ರೋಗ ಸು
ವೃತ್ತದಲಿ ಸತ್ಕೀರ್ತಿ ಸಕಲವಿರಕ್ತಿಯಪವರ್ಗ
ಸತ್ಯವೇ ಜಪ ಶಾಂತಿ ತಪ ಸಾ
ಹಿತ್ಯವೇ ಸುಜ್ಞಾನ ನಿರ್ಮಲ[44]ಚಿತ್ತ[45]ವೇ ಯಮವ[46]ನ[47]ಘವದು ಸುಕುಮಾರ ಕೇಳೆಂದ ೭೧
ಧರ್ಮವೇ ಸ್ವಾಧ್ಯಾಯ ಜಪ ತಪ
ಧರ್ಮವೇ ಕೈವಲ್ಯ ಸಂಪದ
ಧರ್ಮವೇ ಸುಜ್ಞಾನ ಮೌ[48]ನ ಧ್ಯಾನ[49] ದಾನದಯ
ಧರ್ಮವೇ ನುತಹೋಮನೇಮ ಸು
ಧರ್ಮವೇ [50]ಸಗ್ಗಕ್ಕೆ[51] ಕಾರಣ
ಧರ್ಮವೇ ತಾನಾದಿವಸ್ತು ಕುಮಾರ ಕೇಳೆಂದ ೭೨
ಧರೆಗೆ ವಿಜಿತೇಂದ್ರಿಯನೆ ಸುಖಿ ಸ
ಚ್ಚರಿತನೇ ದುರ್ಲಭನು ಪರಧನ
ಕೆಱಗದವನೇ [52]ಶುಚಿಯ[53]ಹಿಂಸನ ಜಾತನಭಿಮಾನಿ[54]ಗರುವನದಯ[55]ನೆ ಪಾಪಿ ಕಾಮಾ
ತುರನತುಳವ[56]ಯಯುತನು ಯೋಗೀ
ಶ್ವರನು ತಿಳಿಯೆ[57] ಕೃತಘ್ನ ನಾರಕಿಯೆಂ[58]ದನಾ ಮುನಿಪ ೭೩
ಸರಸಸುಖವಿಪದಂ[59]ನ್ನತಿಗೆ ಹೇ[60]
ವರಿಸುವವನತಿಕಷ್ಟ ಕೋಮಲೆ
ಯರ ಕಟಾಕ್ಷದ [61]ಹೊಯ್ಲಿ [62]ಗಳುಕದನೇ ಮಹಾಧೀರ
ಪರಹಿತನೆ ಪುಣ್ಯಾತ್ಮ ಲೋಭಿಯೆ
ಧರೆಗೆ ಬಾಹಿರ[63] ಜ್ಞಾನಿಯೇ[64] ನೆಱೆ[65]
ಮರುಳ[66]ನವ[67] ಪರನಿಂದಿತನೆ ನಿಂದ್ಯಾತ್ಮನವನಿಯಲಿ ೭೪
ಧುರದೊಳೊಡೆಯನನೊಪ್ಪುಗೊಟ್ಟೂಳ
ಸರಿವ[68]ಭಂಡನು ಪಿಸುಣನೇ ರಿಪು
ವ[69]ರರ ದಂಡಿಸುವವನೆ ಬಳನಾತ್ಮರತ[70]ನೇ ಮುಕ್ತ
ಪರಿಣತನೆ ಸರ್ವಜ್ಞನತಿನಿ
ಷ್ಠುರನೆ ರಾಕ್ಷಸನನ್ಯಧರ್ಮದಿ
ಚರಿಸುತಿಹನವ ಕುಲವಿ[71]ಹೀನನು ಮಗನೆ ಕೇಳೆಂದ ೭೫
ಚೋರ ಸರ್ವದ್ರೋಹಿ ಶಾಸ್ತ್ರ ವಿ
ದೂರನೇ ಪಶು ಪರಧನವನಪ
ಹಾ[72]ರಿಸುವವನೇ ಅಧಮ ಜೀವದ$ಯಾಪರನೆ ಮುಕ್ತ
ಧಾರಿಣಿಯೊಳುಪಕಾರಿ ವಿನುತ ವಿ
ಚಾರಪರನುತ್ತಮನು ಸಾರೋ
ದಾರದ [73]ಯೆಯಿಂ[74] ಯುಕ್ತನೇ ಶುದ್ಧಾತ್ಮನವನೆಂದ* ೭೬
*ಕ್ರೂರನಾಗದೆ ಬಂಧುಜನಕುಪ
ಕಾರಿ೨ಯಾಗಿ ಸುವಿದ್ಯೆಗಳಲಿ ವಿ
ಶಾರದನು ತಾನಾಗಿ ಜನನೀ ಜನಕ[75]ರಾಜ್ಞೆಯನು
ಮೀಱದೆ ಕುಲಾಚಾರದಲಿ ನಡೆ
ದಾಱು ವರ್ಗವನೊಂದಿ ದುರ್ವ್ಯಾ
ಪಾರಿಸದೆ ನಡೆ[76]ದ[77]ವನು ತಾ ಸ[78]ತ್ಪುರುಷ[79]ನವನಿಯಲಿ ೭೭
ಮನವಚನಕಾಯದಲಿ ವ[80]ರಕಾಂ
ಚನಲಸದ್ದ್ರವ್ಯಂಗಳಲಿ ವಂ
ಚನೆಯ ಮಾಡದೆ ಕೊಟ್ಟುಕೊಂಡ[81] ಮಹೋಗ್ರ ಸಂಕಟವ
ಅನಿತುವನು ಪರಿಹರಿಸಿ [82]ಭೇದದ[83]
ನೆನೆ[84]ಹದಿಲ್ಲದೆ ಹಿತವ [85]ಸಂತತ[86]
ವನುಕರಿಸುತಿರ್ಪ[87]ವನು ಮಿತ್ರನು ಮಗನೆ ಕೇಳೆಂದ ೭೮
ಬೇಡಿದ[88]ರಿಗೊ[89]ಲಿದಿತ್ತು ಮದಗಳ
ನೀಡಿರಿದು ರಿಪುನೃಪರ ತಲೆ ಸೆಂ
ಡಾಡಿ [90]ಮಱುವುಗೆ[91] ಕಾಯ್ದು ಸಪ್ತ[92]ವ್ಯಸನದೊಳು ಮುಱು[93]ಗಿ
ಕೇಡನಾಗದೆ ಸರ್ವರನು ವಶ
ಮಾಡಿಕೊಂಡು ಸುನೀತಿ ಮಾರ್ಗದಿ
ನಾಡ ಪಾಲಿಸುವಾತನರಸ ಕುಮಾರ ಕೇಳೆಂದ ೭೯
ಚೋರಗ[94]ತ್ಯಾಸಾಧಿಕಜ್ಞಗೆ
ಜಾರಗತಿಕುಟಿಲಂಗೆ ಖಳಗೆ ವಿ
ಕಾರಿಗನ್ಯಾಚಾರಯುತಗಹಿತಂಗೆ ನಿರ್ದಯಗೆ
ಕ್ರೂರ ಕರ್ಮಿಗೆ ಶಠಗೆ ಪಾರ
ದ್ವಾರಿಗಾತ್ಮ ಸ್ತು[95]ತಗೆ ಕೊಂಡೆಯ[96]ಗಾರಯ[97]ಲು ತಾನವರಿಗಿಹಪರವಿಲ್ಲ ಕೇಳೆಂದ ೮೦
* ಈ ಪದ್ಯವು ಜ. ಪ್ರತಿಯಲ್ಲಿಲ್ಲ
$ ಜ. ಪ್ರತಿಯಲ್ಲಿಲ್ಲ
* ಇಷ್ಟು ಭಾಗವು ಜ. ಪ್ರತಿಯಲ್ಲಿಲ್ಲ
* ಇಷ್ಟು ಭಾಗವು ಜ. ಪ್ರತಿಯಲ್ಲಿಲ್ಲ
Leave A Comment