ಗುರು ವಿಬುಧ ಪಿತೃ ಮಾತೃಹ

[1]ತಗ[2] ಸ್ಥಿರಗೆ ಗರ್ವೋದ್ಧತಗೆ ಹಿಂಸಾ
ಪರಗೆ ವರ್ಣಾಶ್ರಮವಿದೂ[3]ರಗೆ ಜಾತಿ ಸಂಕರಗೆ
ದುರುಳ[4]ಗತಿ ಕಾಮಾತು[5]ರಗೆ ನಿ
ಷ್ಠುರಗೆ ಭುತವಿರೋಧಕಗೆ ಬಾ
ಹಿರರಿಗಿಹಪರವಿಲ್ಲವೆಲೆ ಸುಕುಮಾರ ಕೇಳೆಂದ ೮೧

ಕೂಟ ಸಾಕ್ಷಿಗೆ ಗುರುವಿನಾಜ್ಞೆಯ
ದಾಟಿದಗೆ ಪಾಷಂಡಿಗಧಮಗೆ
ತೋಟಿಗೆಳಸುವಗತಿಜಡಗೆ ಪತಿಕಾರ್ಯಘಾ[6]ತುಕ[7]ಗೆ
ಕೌಟಿಲಂಗೆ ಬಕವ್ರತಿ[8]ಗೆ ಬೂ
ತಾಟ[9]ವೆಸಗು[10] ವಗನ್ಯಮ[11]ರ್ಮೋ
ದ್ಘಾಟಕ[12]ಗೆ ಪರನಿಂದಿತಂ[13] ಗಿಹಪರಗಳಿಲ್ಲೆಂ  ೮೨

ಕಾಮುಕ[14]ಗೆ ದುರ್ವಾದಿಗಾತ್ಮವಿ
ರಾಮಕಾರಿಗೆ ವಿಬುಧ ವೈರಿಗೆ
ನಾಮಧಾರಿಗೆ ಖಲಗೆ ಮಿಥ್ಯಾದೃಷ್ಟಿಗದಯಂಗೆ
ಹೇಮ[15]ಚೋರಗೆ ಕುಜನಗತು[16]ಳ
ಗ್ರಾಮಿ[17]ಣಿಗೆ ಕುಲನಾಶಕಂಗೆ ಮ
ಹಾ[18]ಮಹೋದ್ಧತರಿಂ[19]ಗೆ ತಾನಿಹಪರಗಳಿಲ್ಲೆಂದ          ೮೩

ಮೃಷೆ ಮುಳಿಸು ಕುಲಧರ್ಮವನು ಬಿ
ಟ್ಟೆಸ[20]ಗುವಜ್ಞತೆಯಾ[21] ಪರಸ್ತ್ರೀ
ವ್ಯಸನವಾತ್ಮಸ್ತುತ್ಯವತ್ಯಾ[22]ಚಾರ[23] ಬಕವೃತ್ತಿ
ಪಿಸುಣತನ[24] ಪರನಿಂದೆ ಗರ್ವತೆ
ನುಸುಳು ಹಿಂಸೆ ವಿಷಾದ ಮದ ಕ
ರ್ಕಶವಚನವಿವು ಮಗನೆ ದೋಷಾಕರಗಳವನಿಯಲಿ     ೮೪

ಎಂದು ಧರ್ಮಾಧರ್ಮವಱುಹಿ ಮು
ನೀಂದ್ರನೇಕಾಂತದಲಿ ನೀ ಸ
ತ್ಯಂಧರನ ಸುಕುಮಾರ ಗಂಧೋತ್ಕಟನ ಮಗನಲ್ಲ
ಹಿಂದೆ ಕಾಷ್ಠಾಂಗಾರ ನಿಮ್ಮಯ
ತಂದೆಯನು ಕೊಂದಿಳೆಯ ಪಟ್ಟವ
ನೊಂದಿದನು ಕೇಳೆಂದು ಕುವರಂಗಱುಹಿದನು ಮುನಿಪ ೮೫

ಮುನಿಪನಿಂತಱುಹಲ್ಕೆ ಹರುಷದ
ವನಧಿಯೊಳಗೋಲಾಡಿ ತಜ್ಜನ
ಕನನು ಕಾಷ್ಠಾಂಗಾರ ಕೊಂದನೆನಲ್ಕೆ ಘುಡು[25]ಘುಡಿಸಿ
ಕನಲಿ ಗ[26]ರ್ಜಿಸಿ ಕಣ್ಣಿನ[27]ಲಿ ಕೆಂ
ಪನುಕರಿಸೆ[28] ಪುರವುರು[29]ಹಿದೀಶ್ವರ
ನೆನಲು ಕಿಡಿಕಿಡಿವೋ[30]ಗಿ ಮುಳಿದು ಕುಮಾರನಿಂತೆಂದ ೮೬

ಇಂದು ಕಾಷ್ಠಾಂಗಾರನೆಂಬನ
ಕೊಂದು ಭೂಕಾ[31]ಮಿನಿಗೆ ಪತಿಯ[32]ಹೆ
ನೆಂದಖಿಳ ಶಸ್ತ್ರಾಸ್ತ್ರ ಪರಿವೃತನಾಗಿ ಮುನಿಗೆಱಗಿ
ನಿಂದಿರಲು ಕುವರನ ಸುಧೈರ್ಯಕೆ
ನಂ[33]ದಿ ಮೆಚ್ಚಿಯೆ ಸೆಱಗ ಹಿಡಿದಾ
ನಂದದಲಿ ಮೆಯ್ದಡವಿ[34] ಬಱಿಕಿಂತೆಂದನಾಮುನಿಪ      ೮೭

ತರಳ ನೀನಸಹಾಯಕ[35]ನು ಹೊ
ಕ್ಕಱಿಯೆ ಮುನ್ನಾಹವವನಿಂತೀ
ಪರಿ[36]ಯೊಳು[37]ದ್ರೇಕಿಸುವುದನುಚಿತ ದೇಶಕಾಲಗಳ
ಸ್ಥಿರದೊಳಾರಯ್ದ ರಸ[38]ನಭ್ಯಂ
ತರವನೀಕ್ಷಿಸಿ ತನ್ನಳವನಱಿ
ದುರವಣಿಸಬೇಕೆಲೆ ಕುಮಾರಕ ಎಂ[39]ದನಾ ಮುನಿಪ     ೮೮

ಕೋಪವೇ ಚಾಂಡಾಲವಶು[40]ಭತೆ[41] ಕೋಪವೇ ದುಷ್ಕ[42]ರ್ಮವಜ್ಞ[43]ತೆ
ಕೋಪವೇ ಜಪತಪದಯಾನುಷ್ಠಾನದಾನಹತ
ಕೋಪವೇ ತ್ರೈವರ್ಗಭಂಜನ
ಕೋಪವೇ ಪ್ರಾಣಾಪಹಾ[44]ರಣ
ಕೋಪದಿಂದತ್ಯಧಿಕ ದುರ್ಗತಿಯಿ[45]ಲ್ಲದವವನಿಯಲಿ       ೮೯

ಅರಿಯನೊಂದಿಹನಱಿಯದುದ ತಾ
ನಱಿವೆ[46]ನೆಂಬವನೊಲ್ಲದಂಗನೆ
ಗೆಱಗುವವ ಧರ್ಮಜ್ಞ [47]ರನು ಹಗೆಗೊಂಬನಿಹಪರವ[48] ಮಱಿ[49]ವ ಕೇಳದೆ ಹೇಱ್ವ[50]ನನ್ಯರ
ಹೊರೆ[51]ವ ಮೇಲ ವಿಚಾರಿಸದೆ ಸಂ
ಗರವ ಹೊಗು[52]ವವನವನು ಮೂಢನು ಮಗನೆ ಕೇಳೆಂದ ೯೦

ಅದಱಿನೀನವನಳಬಳವನಱಿ
ಯದೆ ರಣಕ್ಕತಿಮುಳಿದು ನೀ[53]ಹೋ
ಹುದು ಮತವ[54]ದಲ್ಲೊಂ[55]ದು ವತ್ಸರ ಸೈರಿಸಿದೊ[56]ಡೆಮಗೆ
ವಿದಿತ ಗುರುದಕ್ಷಿಣೆಯದೆಂ[57]ದತಿ
ಮುದದಿ ಜೀವಂಧರನ ನಾನಾ
ವಿಧದಿ ತಿಳು[58]ಹಿದನಾರ್ಯ[59]ನಂದಿ[60]ಮುನೀಂದ್ರನೊಲವಿನಲಿ      ೯೧

ಇಳೆಯಪತಿ ಕೇಳಿಂತು ಶಿಷ್ಯನ
ಕಲುಷವನು ಕಳೆದಖಿಳ ವಿಧದಲಿ
ತಿಳು[61]ಹಿ ಬಱಿಕಾ ಕುವರನನು ಬೀಱ್ಕೊಂಡು ದೀಕ್ಷೆಯನು
ತಳೆದು ತಪದ ಮಹತ್ವದಿಂದು
ಜ್ಜ್ವಲಿಸಿ ಕರ್ಮಕ್ಷಯವ ಮಾಡಿಯೆ
ನಿಲಿಸಿದನು ಮುಕ್ತಿಯನು ತಮ್ಮನಿಯರಸ ಕೇಳೆಂದ      ೯೨

ಇದು ವಿನಮ[62]ದಮರೇಂದ್ರ ಶ್ರೀ ಜಿನ
ಪದಕಮಲಷಟ್ಚರಣವಾಣೀ
ವದನ ದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಚೀವಂಧರನ ಚರಿತೆಯೊ
ಳಿದು ಕುಮಾರೋದಯವಿವರ್ಣನೆಯರನ ಕೇಳೆಂದ     ೯೩ 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1] ತ್ಸವ (ಮ)

[2] ತ್ಸವ (ಮ)

[3] ದ (ಜ)

[4] ತಿ ಕಾಮಾತು (ಜ), (ಗ) ತಿಕುಮಾ (ಮ)

[5] ತಿ ಕಾಮಾತು (ಜ), (ಗ) ತಿಕುಮಾ (ಮ)

[6] ತ (ಜ), ತಕ (ಮ)

[7] ತ (ಜ), ತಕ (ಮ)

[8] ತ (ಪ)

[9] x (ಜ)

[10] x (ಜ, ಮ)

[11] ವ (ಜ, ಮ)

[12] ನ (ಮ)

[13] ತರಿ (ಜ, ಮ)

[14] ಖ(ಜ)

[15] ಮಾದಿ (ಜ)

[16] ಮ (ಮ)

[17] ಮ (ಮ)

[18] ಹೊತ್ಸವಥೃತಿ (ಜ), ಹೀಧ್ರರಿ(ಮ).

[19] ಹೊತ್ಸವಥೃತಿ (ಜ), ಹೀಧ್ರರಿ(ಮ).

[20] ಸು (ಮ)

[21] x (ಜ, ಮ)

[22] ದೋಷ (ಜ, ಮ)

[23] ದೋಷ (ಜ, ಮ)

[24] ರ (ಜ, ಮ)

[25] ಡಿ (ಜ)

[26] ಘ(ಜ)

[27] x (ಜ)

[28] ಸಿ (ಜ, ಮ)

[29] ರಿ (ಜ)

[30] ಯೋ (ಜ), ಯಾ (ಮ)

[31] x (ಜ)

[32] ನ (ಜ)

[33] ವಂ (ಜ, ಮ)

[34] x (ಜ).

[35] ತ(ಜ)

[36] ಯಲು (ಜ, ಮ)

[37] ಯಲು (ಜ, ಮ)

[38] ಸಿ (ಜ, ಮ)

[39] ನೆಂ (ಜ, ಮ)

[40] ಭಕೆ (ಜ), ಖಕೆ (ಮ)

[41] ಭಕೆ (ಜ), ಖಕೆ (ಮ)

[42] ಕ(ಜ)

[43] ಗ್ನ (ಮ)

[44] ಹ (ಜ)

[45] ಯ (ಜ)

[46] ಯ (ಜ, ಮ)

[47] ಗ್ನ (ಜ)

[48] ದ (ಜ, ಮ)

[49] ಱ (ಜ, ಮ)

[50] ಱ (ಜ, ಮ)

[51] ರ (ಜ, ಮ)

[52] ರು (ಮ)

[53] x (ಜ, ಮ)

[54] ಲೆಂದೊಂ (ಜ), ಲ್ಲೆಂದೊಂ(ಮ)

[55] ಲೆಂದೊಂ (ಜ), ಲ್ಲೆಂದೊಂ(ಮ)

[56] ದ (ಜ, ಮ)

[57] ಕಿಂ (ಜ, ಮ)

[58] ಳಿ (ಜ)

[59] x (ಜ)

[60] x (ಜ)

[61] ಳಿ (ಜ)

[62] ಯ (ಜ)