ಎಂದು ನೆನೆ
ನಂದಗೋಪನ ಕರೆ[2]ಸಿ ಹೆದಱದಿ
ರೆಂದು ಮರಳಿಚಿ[3] ತರ್ಪ್ಪೆ[4] ತುಱುಗಳನೆಂದಭಯವಿತ್ತು
ನಿಂ[5]ದು ಕೈದುವ ಕೊಂಡು ರಥವ ಸು
ರೇಂದ್ರ ಸನ್ನಿಭನೇಱಿ ಬಂದನು
ಹಿಂದೆ ಸುಕುಮಾರಕರು ತಾವೈನೂರ್ವರೊಗ್ಗಿನಲಿ ೨೧
ಲಗ್ಗೆವರೆಗಳಲಾ ಕುಮಾರಕ
ರೊಗ್ಗು ಕವಿದು ಕಿರಾತಚಯವನು
ನುಗ್ಗು ನುಸಿಯಾಗರೆ[6]ದು ಕಾಷ್ಠಾಂಗಾರಕನ ಗೆಲಿದು[7]
ಮೊಗ್ಗು ನಮ್ಮೊಳು ಬೇಡ ಬೇಡೆಂ[8]
ದು[9]ಗ್ಗಡದಿ ಕೂರಂಬುಗಳ ಸುರಿ
ದಗ್ಗಳೆ[10]ಯರಿಟ್ಟಣಿಸಿ ಕಾದಿದರರಸ ಕೇಳೆಂದ ೨೨
ಸರಲ ವೃಷ್ಟಿಯನಾಕಿರಾತರು
ಸುರಿಯೆ ತದ್ಬಾಣಗಳನೆಡೆಯಲಿ
ಮುಱಿದು ಜೀವಂಧರನು ನಿಶಿತಾಸ್ತ್ರ[11]ಗಳ ಲಾಖಳರ[12]
ಶಿರಗಳನು ಕತ್ತರಿಸಿ ಹೊಕ್ಕೊಡ
ವೆರಸಿ ಗೋಸಂಕುಲದ ನಿಮಿ[13]ಷಾ
ತರಕೆ ತಿರುಹಿದನೊಂದುಱಿಯದಂತಾಜಿರಂಗದಲಿ ೨೩
ಧರಣಿಪತಿ ಕೇಳಿಂತು ಜೀವಂ
ಧರನು ತುಱುಗಳ ಮರಳಿಸಲು ಗೋ
ವರರು ಮುದದಲಿ[14] ಗೋವುಗಳನವಱವಱ ನಾಮದಲಿ
ಕರೆ[15]ದು ಹಟ್ಟೆಯ[16]ಹುಗಿಸಿ[17]ಜೀವಂ
ಧರನು ತನ್ನಯ ಮಿತ್ರರೈನೊ
ರ್ವರು ಸಹಿತ ಗೋಕುಲವ ನೋಡುತ್ತಿ[18]ರ್ದನೊಲವಿನಲಿ ೨೪
ಕಾ[19]ಲೊಳ[20]ವನಿಯನಣೆ[21]ದು ಕೋಡಲಿ
ಶೈಲಗಳ[22]ನೊಡೆ[23]ಮಗುಚಿ ದೆಸೆಗಳ
ಮೂಲೆ ಬಿ[24]ಡೆ ಗರ್ಜಿಸುತ ಮಾರ್ದನಿಗಗಿದು [25]ನಂದಿನಿ[26]ಯ
ಮೇಲಡರಿ ಬಾಲವನು ನೆಗಹಿ ಛ
ಡಾಳಿಸುತಲ[27]ವ್ವಳಿಸಿ ಮಲೆಯಂತ
ಲೀಲೆಯಲಿ ಬಹ ಗೂಳಿಯನು ಸುಕುಮಾರನೀಕ್ಷಿಸಿದ ೨೫
ಲೋಲಕರ್ಣವನೆತ್ತಿ ತಿತ್ತಿರಿ
ಗಾಳೆಗಳ ನಿಂದಾಲಿಸುತ ಕೊನೆ
ವಾಲದಿಂ ತೊಡೆದಂಗವನು ಕುಸಿ[28]ದಳು[29]ಕಿ ಕೊರಲೆತ್ತಿ
ಮೇಲನೀಕ್ಷಿಸಿ ವಕ್ಷ[30]ಗಳನುಱಿ[31]
ಪಾಲಿಸುತ ಕ[32]ಱುಗೂಡಿ ಗೋ[33]ವನ[34]
ಗಾಳಿಗೈತಹ ಗೋವುಗಳ ಸುಕುಮಾರನೀಕ್ಷಿಸಿದ ೨೬
ಕಱುವ ಕಾಣದೆ ಮಗುಱ್ದು ಹೂಂಕೆಂ
ದಱಚಿ ಬಿಡದೀಕ್ಷಿಸುತ ಕೆಚ್ಚಲ
ಭರದಿ ಬಳುಕುತ ಹೊಱೆಯನಿಱುಹಿದ ತೆಱದಿ ಮೊಲೆವಾಲ
ಬಿರಿವಿಡುತ ಪರವತ್ಸಗಳಿಗ
ಬ್ಬರಿಸಿ ಸೋಂಕುವ ಗೂಳಿಗಳಿಗೊಳ
ಸರಿಯುತಿರ್ದಾ[35] ಸುರಭಿಗಳ[36] ಸುಕುಮಾರನೀಕ್ಷಿಸಿದ ೨೭
ಅಡಿಯನವನಿಯೊಳೂಱಿ ಕಱುಗಳ
ಮಡದೊಳೊಲವಿಂದಾತು ಕಂದಲ
ತೊಡೆಯೊಳಿರುಕಿ ಕಟಾಕ್ಷದೀಧಿತಿ ದುಗ್ಧಧಾರೆಯಲಿ
ತೊಡರೆ ಸೆಳೆನಡು ಬಳುಕೆ ಸಡಿಲಿದ
ಮುಡಿಯ ಗೋಣಿನೊಳೌಂಕಿ ತನು ಬೆಮ
ರಿಡುತ ಸುರಭಿಯ ಕಱೆವಬಲೆಯರ ಕುವರನೀಕ್ಷಿಸಿದ ೨೮
ಸುಗಿ[37]ಯೆ ಕರಿಕುಂಭಕ್ಕೆ ನೇಣಂ
ತೆಗೆವಗಿ[38]ಯೆ ಬೆಮರಮರೆ ಮೇಖಳೆ
ಜಗುಱೆ ತೂಗೆ ಕುಚಂಗಳುರುಕಂಕಣಝಣತ್ಕಾರ
ನೆಗಱೆ ಸೀತ್ಕೃ[39]ತ ಲೋಳೆವಾಯೊಳ
ಗೊಗೆಯ ಬಱಲಿ ಬೆಮರ್ತ ಮಲೆದೊಲೆ
ಗೊಗೆಯ ಬಱಲಿ ಬೆಮರ್ತು ಮಲೆದೊಲೆ
ದಗಿದು ಪಾಡುತ[40]ಮೊಸಱ ಕಡೆವಂಗನೆಯನೀಕ್ಷಿಸಿದ ೨೯
ನಂದಗೋಪನು ಬಱಿಕಲಾ ಜೀ
ವಂಧರನ ಪುರಿಗುಯ್ದು ತನ್ನಯ
ಮಂದಿರದೊಳಂದೇಱು [41]ಹೇಮದ[42]ಪುತ್ಥಳಿಕೆಗಳನು
ತಂದು ನಿಲಿಸಿ ಮದೀಯಸುತೆ ಗೋ
ವಿಂದೆಯನು ನೀ ಮದುವೆಯಾಗೆನ
ಲಂದು ವೈಶ್ಯಾಗ್ರಣಿಗೆ ನಗುತ ಕುಮರನಿಂ[43]ತೆಂದ ೩೦
ಎಲೆ ವಣಿಗ್ವರ ಕಾಮಿನಿಯ ನೀ
ನೊಲಿದು ಮತ್ಸಹಜಾತನಾಸ
ಲ್ಲಲಿತಗುಣ ಪದ್ಮಾಸ್ಯ[44]ಗೆಂದವನ[45]ನುನಯೋಕ್ತಿಯಲಿ
ತಿಳುಹಿ ಸುಮುಹೂರ್ತದಲಿ ತತ್ಕೋ
ಮಲೆಯನೊಲವಿಂದಗ್ನಿಸಾಕ್ಷಿಕ
ದಲಿ ವಿವಾಹವ ಮಾಡಿದನು ಸುಕುಮಾರನೊಲವಿನಲಿ ೩೧
ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲಷಟ್ಚರಣವಾಣೀ
ವದನ ದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರ ರಚಿತ ಧರ್ಮ
ಪ್ರದನ[46] ಜೀವಂಧರನ ಚರಿತೆಯೊ
ಳಿದುವೆ ಗೋಗ್ರಹಣ ಪ್ರಶಸ್ತಿ ಮಹೀಶ ಕೇಳೆಂದ ೩೨
Leave A Comment