ವರತನುಜೆ ಸ್ವ

[1]ಯಂಬ[2]ರಕೆ ಸಕ
ಲರಸುಗಳು ಬಹುದೆಂದು ವಾಣಿಜ
ವರನು ಸಾರಿಸಿ ರಚಿಸಿ ನೆರಹಿದನಖಿಳನೃಪವರರ

ಅರಸ ಕೇಳಾ ಪುರದಿ ವಾಣಿಜ
ವರನೆನಿಪ ಶ್ರೀದತ್ತ ವಿಭವದಿ
ಹರನ ಸಖಗೆಣೆಯೆನಿಪ ತಜ್ಜಾತಿ ಪ್ರವರ್ತನೆಯ
ಮಱೆದು ತಾ ಬಱಿಕೊಂದು ದಿನ ವಿ
ಸ್ತರದೊಳಾಯವಿಹೀನದ ವ್ರ[3]ಯ
ನರರಿಗನುಚಿತವೆಂದು ತನ್ನಯ ಮನದಿ ಚಿಂತಿಸಿದ       ೧

ಅನಿಯಲಿ ತಾ ಗಳಿಸಿದುದನುಂ
ಬವ ಮಹೋತ್ತಮ ಪಿತೃಧನದಿ ಬಾ
ಱುವನು ಮಧ್ಯಮ ತಾಯೊಡವೆಯುಂಡಿಹನು ತಾನಧಮ
ಯುವತಿಯರ್ಥದೊಳೊಂದಿ ಬದುಕುವ
ನವನಿಯೊಳಗತ್ಯಧಮನದಱಿಂ
ದವೆ ಧನವ ಗಳಿಸದವಗಿಹಪರ[4]ವೊಂದುಮಿಲ್ಲೆಂದ೪     ೨

ತನಯರುಗಳತಿ ದಟ್ಟಿಸುವರಂ
ಗನೆಯರುಲ್ಲಂಘಿಸುವರಿಷ್ಟರು
ಮುನಿವರೊಡಹುಟ್ಟಿದರು ತಸ್ಕರನೆಂ[5]ಬರೀ[6] ಲೋಕ
ಜನ ಹಗೆಯ ಕಂಡಂತೆ ತೊಲಗುವ
ರನುಪಮಾಸ್ಥಾನದೊಳ ಶೋಭಿತ
ನೆನಲು ತಿಳಿಯೆ ದರಿದ್ರನಿಂದತಿಕಷ್ಟರಿಲ್ಲೆಂದ   ೩

ಸ್ವರವಿಹೀನನ ಗಾನ ಸದ್ಗುರು
ವೊರೆಯದನು ಪಮಮಂತ್ರ ಪರುಷನೊ
ಳೆಱಕವಿಲ್ಲದ ರಮಣಿ ನಂದನರಿಲ್ಲದನ ಬಾಱು
ಸರಸವಿಲ್ಲದ ಕವಿ ಮರಾಳೋ
ತ್ಕರಗಳಿಲ್ಲದ ಸರಸಿ ವಿಮಲೈ
ಶ್ವರಿಯವಿಲ್ಲದ [7]ನರ[8]ರ ಸಂಸಾರವನು ಸುಡಲೆಂದ       ೪

ಶೂರನಲ್ಲದ ಸುಭಟ ರಿಪುವ ವಿ
ದಾ[9]ರಿಸದ ನೃಪ ಶಾಸ್ತ್ರಗಳನು ವಿ
ಚಾರಿಸದ ಬುಧ ಸುಗತಿಯನು ಚಿಂತಿಸದ ಯೋಗೀಂದ್ರ
ಕ್ರೂರಕರ್ಮವ ಸುಡದ ಗುರುವಾ
ಚಾರವುಱಿದಾಚಾರ್ಯ ಸತ್ಯ ವ್ಯವ
ಹಾರಿಸದ ವಾಣಿಜನಿರವು ನಿರರ್ಥವವನಿಯಲಿ ೫

ಪುರುಷ ಸಕಲೈಶ್ವರ್ಯ ಸಂಪದ
ದೊರೆಕೊಳಲು ಸರ್ವಜ್ಞನವ ಸು
ಸ್ಥಿರ ಸುಭಗ ಕುಲ ಶೀಲ ಸತ್ಯಾಚಾರಗುಣಯುತನು[10] ಸಿರಿ ತೊಲಗಲಪ್ರೌಢನವನ
ಸ್ಥಿರನಶುಚಿ ಕಡುಮೂರ್ಖ ಜನ[11]ಬಾ
ಹಿರನವನು ದಾರಿದ್ರ‍್ಯದಿಂದತಿ ಕಷ್ಟವಿಲ್ಲೆಂದ  ೬

ಎಂದು ಧನವನುಪಾರ್ಜಿಸಲು ಬೇ
ಕೆಂದಪೂರ್ವದ ವಸ್ತುವನು ವೈ
ಶ್ಯೇಂದ್ರ ಹಡಗ[12]ಲಿ ತುಂಬಿಕೊಂಡಬ್ದಿಯೊಳಗೆಯ್ತಂದು
ಒಂದು ವಿಮಳದ್ವೀಪದಲಿ ತಾ
ತಂದ ವಸ್ತುವ ಮಾಱಿ ಲಾಭದೊ
ಳೊಂದಿ ಮುಗುಱಿ[13]ಪುರಕ್ಕೆ ಬರುತಿರ್ದನು ಸರಾಗದಲಿ  ೭

[14]ಜಡಧಿ[15]ಮಧ್ಯದಿ ಬರುತಿರಲು ಹಡ
ಗೊಡೆದ ತೆಱದಿಂ ನೀರೊಳಗೆ ಬಂ
ದಿಡಿಯುತಿರೆ ಕಂಡಾ ಜನವು ಕಂಗೆಡೆ ವಣಿಗ್ವರನು
ನಡುಗುವರೆ ನೀವಕಟ ಹಡ[16]ಗೋ
ರ್ಗು[17]ಡಿಸದದಱಿಂ ಮುನ್ನ ನೀವೆಂ
ದೊಡಬಡಿಸಿ ನಯದಿಂದ ತಿಳುಹುತ್ತಿರ್ದ[18]ನೊಲವಿನಲಿ[19]            ೮

ವರವಣಿಗ್ವರನಿಂತು ಬೋಧಿಸು
ತಿರಲು ಹಡಗೊಡೆದಬ್ದಿ ಮಧ್ಯದೊ
ಳಿರದೆ ಮುಱುಗಲು ಮುಱಿದ ಕೂ[20]ಪಸ್ತಂ[21]ಭವನು ಸಾರಿ
ಭರದೊಳಾ ಶ್ರೀದತ್ತ ದ್ವೀಪಾಂ
ತರವನೆಯ್ದಿರಲಾ ಪ್ರದೇಶದಿ
ನರನದೊರ್ವನು ಬಂದಿರಲು ಕಂಗೆಟ್ಟು ತಾ ನುಡಿದ      ೯

ಅರಸ ಕೇಳ್ ಶ್ರೀದತ್ತ ತನ್ನಯ
ತೆಱನನಾತಂಗಱುಹಿ ಶೋಕಿಸು
ತಿರಲವನು [22]ಮಾತಾಡಿಸುತಲಾ ಬಱಿಕ ವಿಜಯಾರ್ಧ[23] ಗಿರಿಗೆ ಕೊಂಡುಯ್ದೊಂದು ಠಾವಿನೊ
ಳುರುತರದಿ ಕುಳ್ಳಿರಿಸಿ ಸುಪ್ರಿಯ
ತರದೊಳಾತಗೆ ಕಥೆಯ ಪೇಱುತ್ತಿರ್ದುನೊಲವಿನಲಿ      ೧೦

ಪ್ರಣುತ ವಿಜಯಾಚಳದಿ [24]ವರ[25]ದ
ಕ್ಷಿಣದೊಳುರು ಗಾಂಧಾರ ವಿಷಯಾಂ
ಗಣದಿ ನಿತ್ಯಾಲೋಕ ಪುರವುಂಟಲ್ಲಿ ಭೂಪಾಲ
ಮಣಿ ಗರುಡವೇಗಾಖ್ಯನೃಪ ಧಾ
ರಿಣಿಯೆನಿಪ ಸತಿಸಹಿತಲಿಹನಾ
ರೆಣೆ ಧರಿತ್ರಿಯೊಳಾ ನೃಪಗೆ ವೈಶ್ಯೇಂದ್ರ ಕೇಳೆಂದ      ೧೧

ಉರ್ವರೆಯೊಳನುನಯದೊಳಿರಲವ
ರಿರ್ವರಿಗೆ ಜನಿಸಿದ ಲಸದ್ಗಂ
ಧರ್ವದತ್ತೆಯೆನಿಪ್ಪ ಸುತೆಗೆ ವಿಲೋಲಯೌವನವು
ಪಾರ್ವರೀಕ್ಷಿಸಿ ಕೋಮಲೆಯ ನೀ
ನೋರ್ವಗೀಯದೊಡಕ್ಕು ಪರಛಿ[26]ವೆನ[27] ಲು[28]ರ್ವಿಪತಿ ತನ್ನರಸಿ ಧಾರಿಣಿಗೆಂದನೊಲವಿನಲಿ         ೧೨

ವರಕುಮಾರಿಗೆ ರಾಜಪುರಿಯೊಳು
ಮೆಱೆವ ವೀಣೆಯೊಳೊಲಿಸಿದಾತನು
ಪುರುಷನೆನೆ ಮೌಹೂರ್ತಿಕರು ಬೆಸಸಿರಲು ತಾನಾವ
ಪರಿಯೊಳದು ಘಟಿಸುವುದು ನಾವಾ[29]ಪುರಿ[30]ಗೆ ಹೋಹುದದಲ್ಲವೆಂದೆದೆ
ಜರಿದು ನೃಪ ಬಱಿಕೊಂದುಪಾಯ ಕಂಡು ಸತಿಗೆಂದ    ೧೩

ರಾಜಪುರಿಯೊಳು ರಾಜರಾಜಸ
ಭಾ[31]ಜನಾ ಶ್ರೀದತ್ತ ನೆಱೆ ವಿ
ಭ್ರಾಜಿಸುತ್ತಿಹನಾತನೆಮ್ಮ ಸುಮಿತ್ರನಾತನನು
ತೇಜಮನ್ನಣೆಯಿಂದ ವಣಿಗ್ವರ
ರಾಜನನು ನಾಂ ಕರೆಸಿ ಮುದದಿ ತ
ನೂಜೆಯನು ಕೈಗೊಟ್ಟೊಡಭಿಮತಸಿದ್ಧಿಯಹುದೆಂದ     ೧೪

ಅರಸಿ ಸಹಿತಾ ಸ್ಥಿತಿಯ ನೃಪ ನಿ
ರ್ಧರಿಸಿ ಬಱಿಕೊಲವಿಂದಲೆನ್ನನು
ಕರೆಸಿ ನಮ್ಮ ಸ್ನೇಹಿತನನೊಡಗೊಂಡು ಬಾಯೆನಲು
ಅರಸಿನಾಜ್ಞೆಯೊಳಬ್ಧಿಯೊಳು ನೀ
ಬರಲು ಹಡಗೊಡೆದಂತೆ ವಿದ್ಯೋ
ತ್ಕರದಿ ಮಾಡಿದೆ ನಿನ್ನನಿಲ್ಲಿಗೆ ತಂದೆ ನಾನೆಂದ ೧೫

ಹಡಗೊಡೆದುದಿಲ್ಲೊಡವೆ ಸಹಿತೀ[32]ತಡಿಯೊಳಿದೆ[33] ನೋಡೆಂದು [34]ಚರ[35]ತಾ
ನುಡಿಯೆ ಸಂತಸಬಟ್ಟು ನಿತ್ಯಾಲೋಕಪುರಿಗಾಗಿ
ನಡೆಯೆನುತಲಾ ವೈಶ್ಯಪತಿಯವ
ನೊಡನೆ ಬಂದಾ ಭೂಮಿಪಾಲಕ
ನಡಿಗೆಱಗಲಾ ಸಖನ ಬಿಗಿಯಪ್ಪಿದನು ಲೀಲೆಯಲಿ        ೧೬

ಅರಸನಾ ಶ್ರೀದತ್ತನನು ಸ
ತ್ಕರಿಸಿ ತನುಜೆಯ ಕೈಯೊಳಿತ್ತೆಲೆ
ಪರಮ ಸಖ [36]ನಿನಗೆ[37]ನಗೆ ಭೇದಗಳುಂಟೆ ಮ[38]ತ್ಸುತೆಗೆ
ಪುರುಷರತ್ನವನಾ ಪುರದೊಳನು
ಕರಿಸೆನುತಲಾ ಸುತೆಯ ವೃತ್ತಾಂತ
ತರವನೊರೆದತಿತರದಿ ಬಿಗಿಯಪ್ಪಿದನು ಕೋಮಲೆಯ   ೧೭

ವರಕುಮಾರಿಗೆ ವಿವಿಧ ರತ್ನಾ
ಭರಣವಸ್ತ್ರಾದಿಗಳ ಮೇಳದ
ತರುಣಿಯರ ಸಾಸಿ[39]ರವನಿತ್ತೆಲೆ ಮಗಳೆ ನಿನ್ನ ಪಿತ
ವರವಣಿಗ್ವರನೀತನೆಂದಾ
ದರದೊಳೊಪ್ಪಿಸಿ ಕೊಟ್ಟು ಮಂಗಳ
ತರದಪೂರ್ವದ ವಸ್ತುಗಳನೊಲಿದಿತ್ತು ಕಳುಹಿದನು       ೧೮

ಗರುಡವೇಗನ ಬೀಱುಕೊಂಡಾ
ಪರದನಾ ಸುಕುಮಾರಿಸಹಿತಾ
ಪುರಕೆ ಬಂದಂಗನೆಗೆ ತದ್ವೃತ್ತಾಂತವೆಲ್ಲವನು
ಅಱುಹಿ ಕಾಷ್ಠಾಂಗಾರನಾಜ್ಞೆಯೊ
ಳುರು[40]ಸ್ವಯಂವ[41]ರಕೆಸೆವ ಲಗ್ನವ
ಧರಣಿಯಮರರ ಕರೆಸಿ ನಿಶ್ಚೈಸಿದನು ಲೀಲೆಯಲಿ         ೧೯

ಬಱಿಕ ವಾಣಿಜವರನು ನೃಪಸಂ
ಕುಳಕೆ ಲೇ[42]ಖವ[43] ಬರೆಸಿ ಪಾವುಡೆ
ಗಳನೆಸಗಿ ಗಂಧರ್ವದತ್ತೆಯ ವರಸ್ವಯಂವರಕೆ
ಹೊಱಲಿಗೆಯ್ತಹುದೆಂದು ಸಾರಿಸ
ಲೊಲಿದು [44]ಮಣಿಹಾಱರನು[45] ಬೇಗದಿ
ಕಳುಹಿ ತದನುಜ್ಞೆಯಲಿ ಶೃಂಗಾ[46]ರಿಸಿದನಾ[47] ಪುರವ    ೨೦


[1] ಸೊ (ಪ)

[2] ವ (ಜ, ಮ)

[3] ದ್ರ (ಜ, ಮ)

[4] ಗಳಿಲ್ಲೆಂದ (ಜ, ಮ)

[5] ಬುದೀ (ಮ)

[6] ಬುದೀ (ಮ)

[7] ವವ (ಜ, ಮ) ೨

[8] ವವ (ಜ, ಮ) ೨

[9] ಚಾ (ಜ, ಮ)

[10] ರು (ಜ, ಮ)

[11] ಗ (ಜ, ಮ)

[12] ಗಿ (ಮ)

[13] ಱೆ (ಮ, ಪ)

[14] ಜಲದ (ಜ, ಮ), ಕಡಲ? (ಮ)

[15] ಜಲದ (ಜ, ಮ), ಕಡಲ? (ಮ)

[16] ಗೊಲ್ದು (ಜ, ಮ)

[17] ಗೊಲ್ದು (ಜ, ಮ)

[18] ನವನಿಯಲಿ (ಜ, ಮ)

[19] ನವನಿಯಲಿ (ಜ, ಮ)

[20] ತಂ (ಮ)

[21] ತಂ (ಮ)

[22] ಕೈವಿಡಿದು ತಾ ಮಾತಾಡಿಸುತಲಿರ್ದಾ (ಜ, ಮ)

[23] ಕೈವಿಡಿದು ತಾ ಮಾತಾಡಿಸುತಲಿರ್ದಾ (ಜ, ಮ)

[24] x (ಜ, ಮ)

[25] x (ಜ, ಮ).

[26] ೧ವೆಂ (ಜ, ಮ)

[27] ೧ವೆಂ (ಜ, ಮ)

[28] ದದೂ (ಜ), ದೂ (ಮ)

[29] ಪರಿಯೊಳ (ಜ, ಮ)

[30] ಪರಿಯೊಳ (ಜ, ಮ)

[31] ಮಾ (ಜ, ಮ)

[32] ಯೆಡೆಯಲಿದೆ (ಮ)

[33] ಯೆಡೆಯಲಿದೆ (ಮ)

[34] ದರ (ಜ, ಮ)

[35] ದರ (ಜ, ಮ)

[36] ನೀನೆ (ಜ, ಮ)

[37] ನೀನೆ (ಜ, ಮ)

[38] ತ (ಜ, ಮ)

[39] ವಿ (ಜ, ಮ)

[40] ಸೊಯಂಬ (ಪ)

[41] ಸೊಯಂಬ (ಪ)

[42] ಖೆಯ (ಜ.ಮ)

[43] ಖೆಯ (ಜ.ಮ)

[44] ಮೇಣೀಪುರರು (ಜ, ಮ)

[45] ಮೇಣೀಪುರರು (ಜ, ಮ)

[46] ಗ (ಜ)

[47] ರಾ (ಜ, ಮ)