ಚಾರುರವಿಶಶಿವೀಧಿಗಳ ವಿ
ಸ್ತಾರಗಳ ತರತರದ ಮಣಿದವ
ಳಾರಗಳಲೆಸೆಯಿತ್ತು ತತ್ಪುರವಧಿಕ ವಿಭವದಲಿ
ತೋರಣದ ಸುಪತಾಕೆಗಳ ಶೃಂ
ಗಾರಿಸಿದ ರಥತತಿಯ ರಮ್ಯಾ
ಗಾರಗಳಲೆಸೆಯಿತ್ತು ತತ್ಪುರವಧಿಕವಿಭವದಲಿ*            ೨೧

ಸಾರಕಸ್ತೂರಿಯ ಸುಗಂಧದ
ಸಾರಣೆಯ ಕುಂಕುಮಜವಾಜಿ

[1]ಯ
ಕಾರಣೆಯ [2]ಮಣಿಮಯದ[3] ನೆಲೆಗಟ್ಟುಗಳ ರಚನೆಗಳ
ಕೇರಿಕೇರಿಯ ಬೀದಿಗಳ ಘನ
ಸಾರಧೂಳಿಯ ಹರವುಗಳ ಪ
ನ್ನೀರ ಚ[4]ಳೆಯದೊಳೆಸೆದುದಾ ಪುರವರಸ ಕೇಳೆಂದ    ೨೨

ನಿಳಯ ನಿಳಯದೊಳೆಸೆವ ಹೊಸಹೊಂ
ಗಳಸಗಳ ಚೈತನ್ಯ ಚಿತ್ರಾ
ವಳಿಯ ಬೆಸುಗೆಯ ಭಿತ್ತಿಗಳ ಮಣಿಖಚಿತ ಲೋವೆಗಳ
ಹೊಳೆವ ಮೇಲ್ಕಟ್ಟುಗಳ ನಭವು
ಚ್ಚ[5]ಳಿಪ ಹರ್ಮ್ಯಾಳಿಗಳ ಹೊಸಹೊಂ
ಬಱಯಿ[6]ಗೆಯ ರಚನೆಯಲಿ ಮಿಗೆ ರಂಜಿಸಿತು ರಾಜಪುರಿ ೨೩

ವರಕನಕನವರತ್ನ ಮಯ ವಿ
ಸ್ಪುರಿತವಜ್ರಸ್ತಂಭಗಳ ಕಂ
ಡರಣೆಗಳಲೊಪ್ಪಿರ್ದ ರಸುಮಿಪ ವಜ್ರಧಾರೆಗಳ
ಮೆಱೆವ ಭೃಂಗಾವಳಿಯ ಮುಕುರೋ[7] ತ್ಕರದ ಘಂಟಿ ವಿಚಿತ್ರ ಭಿತ್ತಿಯ
ಸುರುಚಿರದ ವೈವಾಹಮಂಟಪವೆಸೆದುದೊಗ್ಗಿನಲಿ        ೨೪

ಹೊಳೆವ ಚಿತ್ರವಿ[8]ಜತಾನ[9]ಗಳೊಳು
ಜ್ಜಳಿಪ ಮಣಿಮಯಮಕರ ಮುಕುರಾ
ವಳಿಯ ತೋರಣ ಪಂಚರತ್ನದಳಪ್ರಯುಕ್ತದಲಿ
ಬಳಸಿದಡೆ ಮಂಟಪಗಳಲಿ ಪು
ತ್ತಳಿಗಳಿ ಮಣಿಖಚಿತಬಾಸಿಗ
ಗಳಲಿ ತದ್ವೈವಾಹಮಂಟಪವೆಸೆದುದೊಗ್ಗಿನಲಿ            ೨೫

ಬಿಗಿದ ರತ್ನದ ಸೂಸಕದ ಲೋ
ವೆಗಳ ಲೋಳಿಯೊಳೆಸೆವ ಹೊಂಗೆ
ಜ್ಜೆಗಳಲಿಱುಹಿದ ಕುಸು[10]ಶರ[11]ಸಂಕುಳದ ರಚನೆಯಲಿ
ನೆಗಹಿದಮಳಧ್ವಜತತಿಯ ಸಾ
ಲುಗಳಲಾ ನೇ[12]ಪಾಳಚವರಾ
ದಿಗಳಲಾ ವೈವಾಹಮಂಟಪವೆಸೆದುದೊಗ್ಗಿನಲಿ           ೨೬

ಹೊಳೆವೆ ರೋಹಣಗಿರಿಯೊ ಭೂತಲ
ಕಿಱಿದ [13]ಪುಷ್ಪಕವೋ[14] ರತೀಂದ್ರನ
ನಿಳಯವೋ ದಿನಕರನ ರಥವೋ ಮೇಘದೊಡ್ಡುಗಳೋ
ತಳಿರ[15] ಸುರಚಾಪವೊ ಸುವರ್ಣಾ
ಚಲವೊ ತಾರಾಮಂಡಲವೊ ತಾ
ನಿಳೆಗಿದೆನೆ ವೈವಾಹಮಂಟಪವೆಸೆದುದೊಗ್ಗಿನಲಿ          ೨೭

[16]ಸೌರಭಾನ್ವಿತದಾ[17]ಮ್ರನವ ಮಂ
ದಾರ ಕದಳೀಸ್ತಂಭಗಳ ಕ
ರ್ಫೂರಪೂಗದ ತೊಲೆಯಶೋಕಾದಿಗಳ ಪಟ್ಟಿಗಳ
ವಾರಿಜೋತ್ಪಲದರಲ ಹೊದಕೆಯ
ಸೇರಿಸಿದ ಬಲ್ಲಾಳದಡ್ಡಿ[18]ಗ
ಳೋರಣದಿ ಮೆಱೆದಿರಲು ಚಪ್ಪರವೆಸೆದುದೊಗ್ಗಿನಲಿ      ೨೮

ಬಲಿದ ಸೊದೆಗಳ ಕೂಪದಲಿ ಪರಿ
ಮಳದ ಪನ್ನೀರುಗಳು ಮೆಱೆದುವು
ಹೊಳೆವ ಹೊಂಗೊಪ್ಪರಿಗೆಯಲಿ ಶ್ರೀಗಂಧವಿಡಿದಿರಲು
ಲುಳಿತ ಮಣಿರಂಜಣಿ[19]ಗೆಯೊಳಗು
ಜ್ಜ್ವಳಿಪ ಸಾದುಜವಾದಿಕರ್ದಮ
ಬಳಸಿತೆನಲಿನ್ನುಱಿದುವನು ವರ್ಣಿಸುವನಾರೆಂದ         ೨೯

[20]ಸೌರ[21]ಭಾನ್ವಿತ ಭರಣಿಗಳ ಮದ
ವಾರಣಂಗಳು ಹೇಱಿದುವು ಮಂ
ದಾರವಾದಿ ಸುಪುಷ್ಪಗಳ ನಡಕಿದುವು ಭಂಡಿಗಳು
ಚಾರುವಸ್ತ್ರಾಭರಣಗಳನಾ
ನಾರಿರತ್ನಾಭರಣಧಾನ್ಯವ
ನಾರುಹೊಗಱಲು ಬಲ್ಲರವನೀಪಾಲ ಕೇಳೆಂದ ೩೦

ವರಸುಗಂಧಾದ್ಯಖಿಳವಸ್ತೂ
ತ್ಕರದ ಸೀಮಾವಳಯದಲಿ ವಿ
ಸ್ತರದಿ ನಿಲಿಸಿದ ಯಂತ್ರದಲಿ ಮಾಡಿಸಿದ ಪುತ್ತಳಿಕೆ
ಭರದಿ ಬೇಡುವ ಜನಕೆ ಬೇಡಿದ
ಪರಮವಸ್ತುವನವರವರ ಸ
ತ್ಕರದಿ ನೀಡುತ್ತಿಹವೆನಲು ವರ್ಣಿಸುವನಾ[22]ರೆಂದ         ೩೧

ಪುರದ ಬಹಿರುದ್ಯಾನವನದಲಿ
ಪರಿಪರಿಯ ಮಣಿಮಂದಿರದ[23] ಉ
ಪ್ಪರಿಗೆಗಳನೊಲವಿನಲಿ ಸಕಲನೃಪಾಲಸಂಕುಲಕೆ
ತರತರದಿ ವಿರಚಿಸುವ ಮಂಗಳ
ಕರದ ವಿವಿಧದ್ರವ್ಯಗಳ ವಿ
ಸ್ತರದೊಳಾ ಶ್ರೀದತ್ತನೆಸಗುತ್ತಿರ್ದನೊಲವಿನಲಿ            ೩೨

ಧರಣಿಪತಿ ಕೇಳಿತ್ತ ನಗರಾಂ
ತರಗಳಲಿ ಗಂಧರ್ವದತ್ತೆಯ
ವರಸ್ವಯಂವರಕವನಿಪಾಲರು ರಾಜಪುರವರಕೆ
ಭರವಸದಿ ಬಹುದೆಂದು ಚರರು
ಬ್ಬರಿಸಿ ಸಾರುತ್ತಿರಲು ಕೇಳ್ದತಿ
ಹರುಷದಲಿ ಭೂಮಿಪರು ತೆರಳುತ್ತಿರ್ದರೊಲವಿನಲಿ       ೩೩

ಧರೆಯೊಳಬ್ಧಿಯ ಘೋಷವಖಿಳಾಂ
ಬರದಿ ಮೇಘನಿನಾದ ವಿಪಿನಾಂ
ತರದಿ ಸಿಂಹಾರಾವ ದಿಗ್ವಲಯದಲಿ ದಿಗಿ[24]ಭರವ
ಗಿರಿಗಳಲಿ ನಿರ್ಝರನಿನದ ವಿ
ಸ್ತರದೊಳುದಿಸಿತೆನಲ್ಕೆ ಭೂಮೀ
ಶ್ವರರ ಪಯಣದ ಭೇರಿಭಾಂ[25]ಕೃತಿ ತುಂಬಿದುದು ಜಗವ            ೩೪

ಧರಣಿಯೆಲ್ಲ ರಥಾ[26]ಶ್ವಭಟಕುಂ
ಜರದ ಮಯವಂಬರ ಚಳಚ್ಚಾ
ಮರಪತಾಕಾಛತ್ರ ಸೀಗುರಿ ಸಿಂಧ ವಸ್ತ್ರಮಯ
ವರದಿಶಾವಳಿಯಶ್ವಹೇಷಾ
ಸ್ವ[27]ರದ ಬೃಂಹಿತಪಂಚಾವಾದ್ಯೋ
ತ್ಕರದ ಮಯ ತಾನಾಗೆ ನಡೆದರು[28] ಸಕಲ ಭೂಮಿಪರು            ೩೫

ತ್ವರಿತದಲಿ ಬರ್ಪಖಿಳಭೂಮೀ
ಶ್ವರರ ಚಾತುರ್ಬಲದ ಭಾರಕೆ
ಧರೆ ರಸಾತಲ[29]ಕದ್ದು [30]ದಾಶಾಕರಿಗಳೊಱಗಿದುವು
ಉರಗಪತಿ ತಲೆವಾಗಿದನು ತ
ದ್ಬರದೊಳಾ ಕಮಠೇಂದ್ರನೆ[31]ದೆ ನೆಱೆ[32] ಬಿಱುದುದೆನಲುಗ್ಗಡದಿ ನಡೆದುದು ಸಕಲನೃಪಕಟಕ      ೩೬

ವರಮಹೀಪಾಲಕರು[33] ಘನ ಸೀ
ಗುರಿ ಚಮರ ವಿವಿಧಾತಪತ್ರೋ
ತ್ಕರದಿ ನೆಗಪಿದ ಶಸ್ತ್ರಸಮಿತಿಯ ಸಂದಣಿಗಳಿಂದ
ತರಣಿ ಚಂದ್ರ ಸಮೀರ ವಿದ್ಯಾ
ಧರ ಸುರಾವಳಿ ಪಕ್ಷಿ ಜಾತಿಗೆ
ಚರಿಸಲೆಡೆಯಿಲ್ಲಂಬರದೊಳವನೀಶ ಕೇಳೆಂದ ೩೭

ಧರಣಿ ಹೇಷಾರವವು ಗಜವಿ
ಸ್ತರದ ಬೃಂಹಿತನಾದ ಭಟರ
ಬ್ಬರಣೆ ರಥಚೀತ್ಕಾರ ವರವಾದ್ಯಗಳ ಭಾಂಕೃತಿಯು
ವರಸುವಸ್ತ್ರಾಭರಣರವವಾ
ವರಿಸೆ ವಾರಿಧಿ ಮೇರದಪ್ಪಿದ
ಪರಿಯೊಳಖಿಳ ನೃಪಾಲಕರು ಬರುತಿರ್ದರೊಗ್ಗಿನಲಿ     ೩೮

ತೆಱಹ ಬಿಡು [34]ಸಮ್ಮುಖಮು[35]ಖಾ ಎಂ
ದುಱುಬಿ ಹೊಯ್ಯುತ ಕನಕದಂಡೋ
ದ್ಧರರುಲಿಯೆ ಕವಿಗಮಕಿವಾಗ್ಮಿಗಳೆಯ್ದೆ ಕೊಂಡಾಡೆ
ಅರರೆ ಭಲರೇ ಧಿರುಧಿರೆಂದ
ಬ್ಬರಿಸೆ ಭಟ್ಟರು ಬೂಸುರಾವಳಿ
ನೆರೆಯೆ ಮಂತ್ರಾಕ್ಷತೆಗಳಿಂದೆಯ್ತಂದರವನಿಪರು          ೩೯

ಭರವಶದಿ ಗಂಧರ್ವದತ್ತೆಯ
ವರಸ್ವಯಂವರಕೂರ್ಧ್ವಲೋಕೇ
ಶ್ವರರು ದಿಕ್ಪಾಲಕರು ಬಹುದೆಂದಾಯಿಳಾಕಾಂತೆ
ಕರೆಯೆ ಹೋದಳೆನಲ್ಕೆ ಧರಣೀ
ಶ್ವರೆರ ಘನ ಚತುರಂಗಪದ[36]ಹಯತ[37] [38]ದುರು[39]ತರದ ರಜ ಮುಸುಕಿತಬ್ಜಭವಾಂಡಮಂಡಲವ    ೪೦


* ಈ ಮೂರು ಚರಣಗಳು ಮ ಪ್ರತಿಯಲ್ಲಿಲ್ಲ

[1] ದಿ (ಜ, ಮ)

[2] ಲೊಪ್ಪಿರ್ದ (ಜ, ಮ)

[3] ಲೊಪ್ಪಿರ್ದ (ಜ, ಮ)

[4] ಥ (ಮ)

[5] ತ್ಸ (ಜ, ಮ)

[6] ವಿ (ಜ, ಮ)

[7] ಲೋ (ಜ)

[8] ರಾಗ (ಮ)

[9] ರಾಗ (ಮ)

[10] ರಸ (ಜ, ಮ)

[11] ರಸ (ಜ, ಮ)

[12] ನೆಯ (ಮ)

[13] ಪುಷ (ಮ)

[14] ಪುಷ (ಮ)

[15] ತ (ಮ)

[16] ಸಾರಭಾವಂನಾ (ಜ, ಮ)

[17] ಸಾರಭಾವಂನಾ (ಜ, ಮ)

[18] ಟ್ಟಿ (ಜ), ಟ್ಟೆ (ಮ)

[19] ಳಿ (ಜ, ಮ)

[20] ಸಾರು(ಜ)

[21] ಸಾರು(ಜ)

[22] ರಾ (ಜ)

[23] + ನೆಲೆ (ಜ, ಮ)

[24] ನಿ (ಮ)

[25] ಹೂಂ (ಜ, ಮ)

[26] x (ಮ)

[27] ದ್ವ (ಜ, ಮ)

[28] ದುದು (ಜ, ಮ, ಪ)

[29] ಕರ್ಧ (ಮ)

[30] ಕರ್ಧ (ಮ)

[31] ಲೆದೆರೆ (ಮ)

[32] ಲೆದೆರೆ (ಮ)

[33] ರ (ಜ, ಮ)

[34] ಸಾಸಂಮು (ಮ)

[35] ಸಾಸಂಮು (ಮ)

[36] ಮಾ (ಮ)

[37] ಮಾ (ಮ)

[38] ತರ (ಮ)

[39] ತರ (ಮ)