ಲಲಿತ ಭೇರಿ ಮೃದಂಗ ಹರೆ

[1]ಮ
ದ್ದಳೆ[2] ಗವಾಮುಖ ಡಕ್ಕೆ ಘನ ದಾಂ
ಬುಳಿ ಮುರಜ ನಿಸ್ಸಾಣ[3] ಡಿಂಡಿಮ ಡೌಡೆ ನಾಗಸರ
ಕೊಳಲು ತಂಬಟೆ ಶಂಖ ಕಹಳಾ
ವಳಿ ಚಮರವಾದ್ಯಖಿಳವಾದ್ಯಂ
ಗಳಲಿ ನೃಪರೆಯ್ತಂದರಾ ಪುರಿಗಧಿಕವಿಭವದಲಿ            ೪೧

ಧರಣಿಪಾಲರು ಕೆಲರೊಳೊಬ್ಬೊ
ಬ್ಬರ ಸುತೇಜೈಶ್ವರ್ಯಬಲಸೌಂ
ದರಿಯವೀ[4]ಕ್ಷಿಸಿ ನಾಚಿ ನೆಱೆ ಮನಗುಂದಿ ನಾವಿಂದು
ಮರಳಬೇಕೀ ಭೂಮಿಪಾಲಕ
ರಿರಲು ನಮ್ಮನದಾರ[5]ಱಿವರೆಂ
ದಿರದೆ ಜರಿದೊಳಸರಿಯ ಬಗೆದರು ಭೂಪ ಕೇಳೆಂದ     ೪೨

ಮರಳಲನುಗೆಯ್ದಾ ನೃಪರು ಶಂ
ಬರವಿರೋಧಿಯ ಶರದಿ ನೊಂದೆದೆ
ಜರಿದು ಮುನ್ನ ಸರೋಜಭವ ಭಾಳದಲಿ ಬರೆದುದನು
ಒರಸಲಾರಳವೀಕೆ ತಮಗನು
ಕರಿಸಿದಪಳೋ ತಮ್ಮ ಭಾಗ್ಯವ
ನಱಿವರಾರೆಂದೊಸೆದು ಮಗುಱದೆ ಬಂದರೊಗ್ಗಿನಲಿ     ೪೩

ಧರಣಿ ಪಾಲಕರಿಂತು ವಿಭವದಿ
ಬರಲು ಕಾಷ್ಠಾಂಗಾರ ಸಹಿತಾ
ಪ[6]ರದ ವಿಭವದೊಳಿದಿರುಗೊಂಡುಪಚರಿಸಿ ಮಣಿಮಯದ
ಅರಮನೆಯೊಳವರವರ ಹವಣಱಿ
ದರಸುಗಳ ನೆಱೆ ಬಿಡಿಸಿ ವಾಣಿಜ
ವರನು ನಾಂದೀಮುಖವ ಬಱಿಕೊಂದಿಸಿದನೊಲವಿನಲಿ ೪೪

ಪರಮಶಾಸ್ತ್ರಕ್ರಮದಿ ಭೂಮೀ
ಸು[7]ರರು ಮುದದಿಂ ಪೂರ್ವವೇದಿಯ
ವಿರಚಿಸಲು ಶ್ರೀದತ್ತನಾ ಮಱುದಿವಸ ದೂತರನು
ಕರೆದು ಭೂಪರ ಪಾಳೆಯದೊಳಂ
ಬುರುಹಮುಖಿಯ ಸುಭಾಗ್ಯದಬ್ಧಿಯ
ಸಿರಿಯ ಪರಿಣ[8]ಯವೆನುತ[9] ಸಾರುವುದೆಂದು ನಿಯಮಿಸಿದ         ೪೫

ವರವಣಿಗ್ವರನಾಜ್ಞೆಯಿಂದಾ
ಚರರು ಡಂಗುರವೆಸಗಿ ಕಾಂತೆಯ
ಪರಮ ಸೌಭಾಗ್ಯದ ಲ[10]ಸತ್ಪೀಯೂಷವಾರ್ಧಿಯಲಿ
ಭರದಿ ಮುಳುಗಿ ಕೃತಾರ್ಥರಹುದೆಂ
ದರಸುಗಳ ಪಾಳೆಯದೊಳತಿವಿ
ಸ್ತರದಿ ಸಾರುತ್ತಿರ್ದರಬಲಾಮಣಿಯ ಸಡಗರವ            ೪೬

ಲುಳಿತ ಮಾ[11]ಯೆಯ[12] ಗಾಹುಗತಕದ
ಬಳೆಯನಳವಡಿಸುವುದು ವಶ್ಯದ
ತಿಳಕವಿಟ್ಟು ವಶೀಕರಣವೆಸಗುವುದು ಸೊಬಗುಗಳ
ಸುಱಿಸಿ ಮೋಹನಮ[13]ದ್ದುಗಳ ತಾ
ಳ್ದೊಲಿಸುವುದು ಮನಸಿಜನ [14]ಕಾಳೆಗ[15] ಕಳುಕದಿದಿ[16]ರಹುದೆಂ[17]ದು ಸಾಱಿದರಬ್ಧಿಘೋಷದಲಿ      ೪೭

ಈತೆಱದಿ ಸಾಱಲ್ಕೆ ಕೇಳಿ ಮ
ಹೀತಳೇಶರು ಮೇಘರವವನು
ಚಾತಕಂಗಳು ಕೇಳಿದಂತಾನಂದಲೀಲೆಯಲಿ
ನೂತನಂಗೋದ್ಭವನವೊಲು ನಾ
ನಾ ತೆಱದಿ ಕೈಗೆಯ್ದು ವಿಭವದೊ
ಳಾ ತತುಕ್ಷಣ ಮಂಟಪಕೆ ಬರುತಿರ್ದರೊಲವಿನಲಿ         ೪೮

ಶರಧಿ ರತ್ನ ಸ್ತೋಮದಿಂದಂ
ಬರವು ಭಗ[18]ಣಾನೀಕದಿಂ[19] ವಿ
ಸ್ಫುರಿತಮೇರು ಸುರದ್ರುಮಾವಳಿಯಿಂದೆ ಕಾಸಾರ
ವರಮರಾಳದೊಳುರ್ವಿ ರೋಹಣ
ಗಿರಿಯೊಳೆಸೆವಂದದಲಿ ಮಂಟಪ
ಮೆಱೆದುದಖಿಳ ನೃಪಾಲರಿಂದವನೀಶ ಕೇಳೆಂದ          ೪೯

ಧರಣಿಪತಿಕೇಳಿಚೆ[20]ಯಲಿ ಪರಿ
ಪರಿಯ ಶೃಂಗಾರಾನ್ವಿತದಿ ತ
ನ್ನೆರಡು ಪಾರ್ಶ್ವದಿ ಮುದದೊಳೈನೂರ್ವರು ಕುಮಾರಕರು
ಬರೆ ಗಜೇಂದ್ರನ[21]ನಡರಿ ಜಿತಶಂ
ಬರನವೊಲು ಜೀವಂಧರನು ತ
ನ್ನರಮನೆಯ ಭರದಿಂದ ಹೊಱ೪ವಟ್ಟ[22]ನು ಸುಲೀಲೆಯಲಿ         ೫೦

ವರಮುಖೇಂದುವಿಗಳುಕಿ ಗಗನಕೆ
ಸರಿಯೆ ಕೀರ್ತಿಯನಟ್ಟಿ ಮಗುಱೊಡ
ವೆರಸುವನು ಹಗೆಸಲ್ಲದೀತನ ಕಾಂ[23]ಬುದನುವೆಂದು
ಭರದೊಳುಡುಪರಿವಾರ ಸಹಿತುರು
ತರದಿ ಶಶಿ ನಡೆತಂದನೆನಲಂ
ದರಸಗೊಪ್ಪಿತು ಮೌಕ್ತಿಕದ ಪೊಸ ಛತ್ರವೊಗ್ಗಿನಲಿ         ೫೧

ವಿಭವದಿಂದೀ ಪರಿಯೊಳಂಗಜ
ನಿಭನು [24]ಗಜ[25]ದಿಂದಿಱಿದು ಭೂಪರ
ಸಭೆಯ ಮಧ್ಯದ ಸಿಂಹಪೀಠವನಡರೆ ದೇವರೊಳು
ಅಭವ ಜಿನಪತಿ ಮೆಱೆವ ವಿಧದಿಂ
ದಭಿನವಕ್ಷಿತಿಪಾಲನಿಚಯದೆ
ಸುಭಗ ಜೀವಂಧರನು ರಂಜಿಸಿದನು ಸುತೇಜದಲಿ        ೫೨

ಸರಸಿಜಕ್ಕೆಱಗುವಳಿ ಚಂಪಕ
ಕೆಱಗುವುದೆ ನವಚೂತ ಫಲವುಱಿ
ದೆರೆದ ಪಣ್ಗೊಂದುವುದೆ ಶುಕವೀ ಸಕಲಭೂಮಿಪರು
ಬಱಿದೆ [26]ನೆರೆದ[27]ರದೇಕೆ ಜೀವಂ
ಧರನನೀಕ್ಷಿಸಿದಬಲೆ ತಮಗನು
ಕರಿಸುವಳೆ ಎಂದಾ ಕುಮಾರನ ಹೊಗಱಿತಮರಗಣ    ೫೩

ಅರಸ ಕೇಳಾ ಪರಿಯಿನಂದು
ರ್ವರೆಯ ಭೂಮಿಪರಪ್ಪ ಮಣಿವಿ
ಸ್ಪುರಿತ ಶುಭಮಂಟಪದ ಮಧ್ಯದಿ ಘೋಷವತಿಯೆಂಬ
ಮೆಱೆವ ಮಣಿಮಯವೀಣೆಯನು ತಂ
ದಿರಿಸಿ ಸುತ್ತ ವಿಪಂಚಿನಿಚಯವ
ನೆರಹಿ ಗಂಧಾಕ್ಷತೆಗಳಿಂದರ್ಚಿ[28]ಸಿದರೊಲವಿನಲಿ[29]        ೫೪

೪ಭಾಸುರದೊಳಾ ವೀಣೆಯನು ಧರ
ಣೀಸುರರಂ ನೆರೆದರ್ಚಿ[30]ಸಲು ಪರಿ
ತೋಷದಿಂದಲ್ಲಿಗೆ ಸಮಸ್ತಕಲಾವಿಶಾರದರು
ದೇಶದೇಶದ ಮಾಗಧ[31]ರು ಪರಿ
ಹಾಸಕಾಱರು ವಾದಿಗಳು ಸುವಿ
ಳಾಸದಿಂದೆಯ್ತಂದು ಮುಸುಕಿತು ಚಾರುಚಪ್ಪರವ        ೫೫

ಪರಮ ಮುನಿಗಳು ಪಂಡಿತರು ಷ
ಡ್ಡರುಶನೋತ್ತಮಕೋವಿದರು ಮ
ಲ್ಲರು ಸುಚಿ[32]ತ್ರಿಕರಕ್ಷರಜ್ಞರು[33] ಲಕ್ಷಣಾನ್ವಿತರು
ಸರಸ ವೈದಿಕ ಶ್ರೋತ್ರಿಯರು ದೀ
ನರು ಬಧಿರಮೂಕಾಂಧವಾಮನ[34]ರಿರದೆ ತಾವೈತಂದು ಮುಸುಕಿತು[35] ಚಾರುಚಪ್ಪರವ   ೫೬

ಭ[36]ಟರುಗಳು [37]ವಿದ್ವಾನು[38]ಗಳು ವಾ
ಕ್ಪಟುಯುತರು ಪಾಠಕರು ವಿಬುಧೋ
ತ್ಕಟ ವಿಶಾರದರಮಳಗುಣಯುತರೆಸೆವ ನಾಗರಿಕ
ವಿಟವಿದೂಷಕಪೀಠಮರ್ದನ
ನಟ ಗಮಕಿ ಗಾಯಕರು ಮಿಗೆ ಸಂ
ಕಟಿಸಿ ಮೆಱೆ[ದರು][39] ಚಪ್ಪರದೊಳವನೀಶ ಕೇಳೆಂದ    ೫೭

ಧರಣಿಪತಿ ಕೇಳ್ ಮೇಲೆ ಸುರಕಿ
ನ್ನರ ಗರುಡ ಗಂಧರ್ವ ವಿದ್ಯಾ
ಧರ ಖಚರ ಕಿಂಪುರುಷ ಯಕ್ಷರು ಸಿದ್ಧಸಾಧ್ಯಾಳಿ
ವರಮನುಗಣಾ[40]ಧಿಪರು ಮೇಣ್ ಗಣ
ಧರರು ತಾರಾಗ್ರಹಸುರಾಂಗನೆ
ಯರು ವಿಲಾಸದಿ ನೆರೆದರೆಸೆವ ವಿಮಾನ[41]ಪಙ್ತಿ[42]ಯಲಿ  ೫೮

ಕುಂಭಿಣೀಶರ ಸಭೆಯೊಳಗೆ ವಿ
ಜೃಂಭಿಸುವ ತೂರ್ಯತ್ರಯವನೇ
ನೆಂಬೆ ವೃಕ್ಷ[43]ನುಗ್ಗಡಣೆ ಭರತನ ಪ[44]ಟುಮ[45]ಹಾರವಕೆ
ತುಂಬುರರ ಸಂಗೀತವೂರ್ವಶಿ
ರಂಭೆಯಾಡುವ ನೃತ್ಯಕಿದು ಪ್ರತಿ
ಬಿಂಬವಾಯ್ತೆನಲಿಂತಿದನು ವರ್ಣಿಸುವನಾರೆಂದ          ೫೯

ವರದ ಸಂಸ್ಥಾಪನೆಯ ಹಸ್ತಾ
ದ್ಯುರುತರಾಕ್ಷಿಪ್ರಸರದಾ ಪರಿ
ಪರಿಯ ಚಿತ್ರದ ಸಾತ್ವಿಕಾಂಗದ ಸುಗತಿವಿಭ್ರಮದ
ಸ್ಥಿರ ವಿಷಮ ಸಮಕರಣ ಲಯ [46]ಗತಿ[47] ತಿರುಪು ಕುಸುರಿ ಕಳಾಪಗಳಲಾ
ತರುಣಿಯರು ಕೀ[48]ರ್ತಿಸಿಯೆ ಮೆಚ್ಚಿಸಿದರು ಮಹಾಸಭೆಯ          ೬೦

ಲಲಿತ ವೀಣಾವಾದ್ಯರವ ಕೋ
ಮಲಮೃದಂಗಧ್ವನಿ ನಟವ್ರ[1]ಜ
ದುಲುಹು ತಾಳದ ಘೋಷ ಕಹಳಾರಾವ ಗೀತರವ
ಸುಲಲಿತದಿ ನರ್ತಿಸುವ ಕಾಂತಾ
ವಳಿಯ ಕಂಕಣನೂಪುರಧ್ವನಿ
ಯೊಲವಿನಿಂದುಱೆ ಮುತ್ತಿ ಮುಸುಕಿತು ಚಾರುಚಪ್ಪರವ ೬೧

ಚಾರುಸ್ವರ್ಗದ ಸೌಖ್ಯವೋ ಸಂ
ಸಾರಫಲವೋ [2]ವಿತತ[3] ಕಾವ್ಯದ
ಸಾರವೋ ನೂತನಲಸತ್ಸುಧೆಯೋ ರಸಾವಳಿಯೋ
ವಾರಿಧಿಯೊ ತ್ರೈಲೋಕ್ಯ ಸಾರಾ
ಸಾರವೋ ತೂರ್ಯತ್ರಯದ ವಿ
ಸ್ತಾರಮೇಳಾಪಪ್ರಸೌಖ್ಯವ ಹೊಗಱ್ವನಾರೆಂದ            ೬೨

ಇದು ವಿನಮದಮರೇಂದ್ರ ಶ್ರೀ ಜಿನ
ಪದಕಮಲಷಟ್ಚರಣ ವಾಣೀ
ವದನದರ್ಪಣ ಭುಸುರೋತ್ತಮ ಬಸವಣಾಂಕಸುತ
ಚದುರ ಭುಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದು ಸ್ವಯಂವರ ಮಂಟಪಸ್ತುತಿಯರಸ ಕೇಳೆಂದ       ೬೩


[1] ಧ್ವ (ಮ)

[2] ಲಲಿತ (ಜ, ಮ)

[3] ಲಲಿತ (ಜ, ಮ)

[1] ಬದ್ದಣ (ಜ), ಬದಣ (ಮ)

[2] ಬದ್ದಣ (ಜ), ಬದಣ (ಮ)

[3] ಳ (ಜ, ಮ)

[4] ನುನಿರೀ (ಜ, ಮ)

[5] ವ (ಜ, ಮ)

[6] ಪು (ಜ, ಮ)

[7] ಶ್ವ (ಜ, ಮ)

[8] ತೆಯೆಂದು (ಜ, ಮ)

[9] ತೆಯೆಂದು (ಜ, ಮ)

[10] ರ (ಜ, ಮ)

[11] ಯಾ (ಜ, ಮ)

[12] ಯಾ (ಜ, ಮ)

[13] ಮು (ಜ, ಮ)

[14] ಳೆನ (ಜ, ಮ)

[15] ಳೆನ (ಜ, ಮ)

[16] ರಾಗೆಂ (ಜ, ಮ)

[17] ರಾಗೆಂ (ಜ, ಮ)

[18] ಣಾನಿಕರದಲಿ (ಜ), ಣನಿಕರದಲಿ (ಮ)

[19] ಣಾನಿಕರದಲಿ (ಜ), ಣನಿಕರದಲಿ (ಮ)

[20] ಚ್ಛೆ (ಮ)

[21] ವ (ಜ, ಮ)

[22] ಹೊಂಟ (ಜ), ವಂಟ (ಮ)

[23] ಕಾ (ಜ, ಮ)

[24] ನಭ (ಜ, ಮ)

[25] ನಭ (ಜ, ಮ)

[26] ನರವ (ಮ)

[27] ನರವ (ಮ)

[28] x (ಜ)

[29] x (ಜ)

[30] x (ಜ)

[31] ತ (ಮ)

[32] ತ್ರಿಕರಕ್ಷರಿಕರು (ಜ), ತ್ರಕರಕ್ಷರಿಕರು (ಮ)

[33] ತ್ರಿಕರಕ್ಷರಿಕರು (ಜ), ತ್ರಕರಕ್ಷರಿಕರು (ಮ)

[34] ಚವರೆಯ್ದಿಯೆ ಬಂದು ಮುತ್ತಿತು (ಜ), ಚಪಲರೆಯ್ದಿಯೆ ಬಂದು ಮುತ್ತಿತು (ಮ)

[35] ಚವರೆಯ್ದಿಯೆ ಬಂದು ಮುತ್ತಿತು (ಜ), ಚಪಲರೆಯ್ದಿಯೆ ಬಂದು ಮುತ್ತಿತು (ಮ)

[36] ವ (ಜ, ಮ)

[37] ವಿದ್ವಾಂಸ (ಜ), ವಿದ್ವಾಂಸು (ಮ)

[38] ವಿದ್ವಾಂಸ (ಜ), ವಿದ್ವಾಂಸು (ಮ)

[39] ದುದು (ಜ, ಮ, ಪ)

[40] ಳಾ (ಜ, ಮ)

[41] ಪಂಥಿ(ಜ, ಮ)

[42] ಪಂಥಿ(ಜ, ಮ)

[43] + ಭ (ಜ, ಮ)

[44] ಟ (ಜ, ಮ)

[45] ಟ (ಜ, ಮ)

[46] ತಿರು (ಜ), x (ಮ)

[47] ತಿರು (ಜ), x (ಮ)

[48] ನ (ಮ)