ಪೊಡವಿಪಾಲರ ಸಭೆಗೆ ಕೋಮಲೆ
ನಡೆಗವಂದಿನಿಯನ ನಿರೀಕ್ಷಿಸಿ
ಕುಡಿತೆಗಣ್ಣಲಿ ಮೊಗೆದು ಸೂಸಿದಖಿಳ ಭೂಮಿಪರ
ಕೇಳು ಮುದದಿಂ ಮಗಧಭೂಮೀ
ಪಾಳ ವೈಶ್ಯಾಧಿಶನಿತ್ತಲು
ಮೇಳದವನೀಪಾಲಕರನುಪಚರಿಸಿ ತಾ ಬಱಿಕ
ಆಳಯಕೆ ಬಂದಬಳೆಯರ ಕರೆ
ದೇಱಿ ಲಗ್ನ ಸಮೀಪವಾಗಿದೆ
ಬಾಳಕಿಯ ಶೃಂಗಾರಿಸುವು
ವರ ವಣಿಗ್ವರನಾಜ್ಞೆಯಲಿ ಪಂ
ಕರುಹದಳನೇತ್ರೆಯರು ಕಾಂತೆಯ
ಹೊರಗೆ ನಡೆತಂದೆಸೆವ ಕುಂಕುಮರಜದೊಳವಯವವ
*ಉರುತರ[2]ದೆ ತಾಂ[3] ತಿಗುರುತತಿ ವಿ
ಸ್ತರದಿ ಮಜ್ಜನವೆಸಗಿ* ತದನಂ
ತರದೊಳಾ ಕೋಮಳೆಯ ಶೃಂಗಾರಿಸಿದರಬಲೆಯರು ೨
ಲಲಿತ ಚಂಪಕದಳಕೆ ಬೆಳುದಿಂ
ಗಳ ತಗಡ ಪುದಿದಂತೆ ಧವಳಾ [೦][4]
ಚಲವೆಸಗಿ ಚಕ್ರದ್ವಯಕೆ ಗವಸಣಿಗೆ ಬಿಗಿದಂತೆ
ಸಲಿಸಿ ಕಂಚುಳಿಕೆಯ ಮುಖಾಂಬುಜ
ಕೆಳಸಿದಳಿಯೆನೆ ಹಣೆಗೆ ಮೃಗಮದ
ತಿಲಕವನು ವಿಸ್ತರಿಸಿ ಶೃಂಗಾರಿಸಿದರಬಲೆಯರು ೩
ವರ ವಿಧುಂತುದನಿಂದು ಕಲೆಗಳ
ನಿರದೆ ನುಂಗಿಯೆ ಮಗುಱ್ದುಗುಱ್ದಾ
ತೆಱದೆ ವೇಣಿಯೊಳೆಸೆವ ಕುಸುಮವನಿರಿಸಿ ಮನಸಿಜನ
ಶರಕೆ [5]ಚಾಪ[6]ವನೂಡುವಂತುರು
ತರದ ನೇತ್ರದೊಳಂಜನವನನು
ಕರಿಸಿ ಶೃಂಗಾರಿಸಿದರಬಲೆಯರಾ ವಧೂಮ[7]ಣಿಯ ೪
ಕುಸುಮಶರನಿಭಕುಂಭಗಳಲೊಂ
ದಿಸಿದ ಜಯಕೀರಿತಿಯ ಮೊಗಮೆನ
ಲೆಸೆವ ಕುಚದಲಿ ಪತ್ರಭಂಗಂಗಳನು ಮೇಳೈಸಿ
ಸಸಿಗೆ ಶುಕ್ರನ ಸುರಿಸಿದರೆನ
ಲೆಸೆವ[8] ಮುಖಮಂಡಲಕೆ ಮೂಗುತಿ
ಯೆಸಗಿ ಕೈಗೈದರು ಮೃಗಾಕ್ಷಿಯರರಸ ಕೇಳೆಂದ ೫
ಅರಲ ಬಾಣಕೆ ಗರಿಯ ಕಟ್ಟುವ
ತೆಱದೊಳಂಗುಳಿಗಳಲಿ ಮುದ್ರೆಯ
ತುಱುಗಿ ಶಶಿ ದೋಷಾಕರನು ನಿಂದೆಡೆಯೊಳಿಹೆವೆಂದು
ಚರಣಕೆಱಗಿದು ಭಗಣ[9]ವೆನೆ ನೇ[10]
ವುರವೆಸಗಿ ಪುಳಿನವನು ಹೊಂದಾ
ವರೆಯ ಲತೆ ಬಳಸಿರ್ದುದೆನಲಿಕ್ಕಿದರು ಮೇಖಲೆಯ ೬
ಗುರುಪಯೋಧರ ಮಂಡಲದ ಬಂ
ಧೂರದ ಪರಿವೇಷವಿದೆನಲು ಕಂ
ಧರಕೆ ಹಾರವನೆಸಗಿ ಮನಸಿಜವಶ್ಯಯಂತ್ರವನು
ಬರೆವವೊಲು ಗಂಧದಲಿ ಚಿತ್ರೋ
ತ್ಕರ ಮಕರಿಕಾಪತ್ರವನು ವಿ
ಸ್ತರಿಸಿ ಶೃಂಗಾರಿಸಿದರಬಲೆಯರಾ ವಧೂಮ[11]ಣಿಯ ೭
ಚರಣಶೋಭೆಗಳಿಂದ ನೇವುರ
ಮೆಱೆಯೆ ಕದಪುಗಳಿಂದ ಕರ್ಣಾ
ಭರಣವೆಸೆಯಲು ಕಾಂಚಿ[12] ಜಘನೋನ್ನತದಿ ರಂಜಿಸಲು
ಕರದ ಚೆಲುವಿಕೆಯಿಂದ ಮಣಿ ವಿ
ಸ್ಫುರಿತ ಕಂಕಣವೆಸೆಯೆ ಸತಿಯಾ
ಭರಣಗಳಿಗಾಭರಣವಾದಳು ಚಿತ್ರವಾಯ್ತೆಂದ ೮
ತೋರ ಮೊಲೆಗಳ ಡಾಳದಲಿ ಮಣಿ
ಹಾರ ಮೆಱೆಯಲು ಬೆರಲಿನಿಂ ವಿ
ಸ್ತಾರಿಸಲು ಮಣಿಮುದ್ರೆ ಭುಜದಿಂ ತೋಳಬಂದಿಗಳು
ಚಾರು ಬಿಂಬಾಧರದೆ ಮಣಿ[13]ಹೊಳ
ಹೇಱೆ[14] ದೇಹಾಂಶುಗಳೊಳತಿ ಶೃಂ
ಗಾರಿಸಿದರಾಭರಣವೆನೆ ವರ್ಣಿಸುವನಾರೆಂದ ೯
ತರುಣಿಯರಿಗಾ[15] ಸತಿಯ ರೂಪನು
ಧರಿಸಿ ಬಱಲದು ಚಿತ್ತದೇಹದಿ
ಚರಿಸಿ ನೊಗ್ಗದು ನೋಟ ಸುಯ್ಗಂಪಲ್ಲದುಱಿದಾದ
ಪರಿಮಳಕೆ ಮೂಗೇಱದಾಕೆಯ
ಸರಸವಾಕ್ಪೀಯೂಷ ಕಿವಿಗಳಿ
ಗರುಚಿಯಲ್ಲೆನೆ ಸತಿಯ ರೂಪನು ಪೊಗಱ್ವನಾರೆಂದ ೧೦
ಲಲಿತವದನವ ನೋಡಿ ನೋಟಕೆ
ಬಱಿಕ ಸಮಯವದುಂಟೆ[16]ಕೇಶದಿ
ಸಿಲುಕೆ೪ ಬಿಡಿಸುವರಾರು ನಾಭ್ಯಾವರ್ತದೊಳಗಿಱೆಯೆ
ತಳೆವರಾರು ಕಟೀಸ್ತನಂಗಳಿ
ಗೆಳಸಿ ಜನರಾಲೋಕನವ[17]ಭ್ರಮೆ
ಗೊಳಿಸಿ ತಾನಿಲ್ಲೆನಲು ಕಾಂತೆಯ ಪೊಗಱ್ವನಾರೆಂದ ೧೧
ಚರಣ ತುಂಬಿದ ಮೃದುಗತಿಯ ಪೇ
ರುರವು ತುಂಬಿದ ಕುಚದ ಮೊ[18]ಗ ವಿ
ಸ್ತರದಿ ತುಂಬಿದ ನಯನಪರ[19]ಭಾಗಪ್ರಪೂರಿ[20]ತದ
ಗುರು ಕಟಿಯ ತನು ತೀವಿದತಿ ಸೌಂ
ದರಿಯ ಜವ್ವನದಿಂದ ಜಿತಶಂ
ಬರನು ಮುದ್ರಿಸಿದರಳ ಸರದಂತೆಸೆದಳಿಂದುಮುಖಿ ೧೨
ಮೆಱೆವ ರತ್ನಾಭರಣರುಚಿಗಳ
ಬಱೆದುದಂಗ ನಿಜಾಂಶುವದನಾ
ವರಿಸಿ ನುಂಗಿತು ದಂತಕಾಂತಿಗಳಾ ಪ್ರಭೆಯನೊದೆದು
ತುಱು[21]ಗಿತಾ೪ಸ್ಯ ನಿಜಾಂಶು ವದನಾಂ[22]
[23]ತರದೊಳೊಡೆಹಾ[24]ಯ್ದ ಮಳ ನೇತ್ರದ
ಕಿರಣವೆಸೆ[25]ದುದ[26]ದೇನನೆಂಬೆನು ರೂಪನಾ ಸತಿಯ ೧೩
ತರುಣಿಯನು ಶೃಂಗಾರದನುಪಮ[27]ಸರಣಿ[28]ಯನು ಸೌವರ್ಣಮಯ ಕಂ
ಡರಣೆಯನು ನವ ದಿವ್ಯ ಸೌಗಂಧಪ್ರಪೂರಿತದ
ಭರಣಿಯನು ರತಿಪತಿಯ ವಿಲ[29]ಸ
ತ್ಕರಣಿಯನು ಮುಗ್ಧೆಯನು ದೃಗ್ಚಿತ
ಹರಿಣಿಯನು ವರ್ಣಿಸುವನಾರವನೀಶ ಕೇಳೆಂದ ೧೪
ಗಾಣಿಯನು ಮೃದು ಪಾಣಿಯನು ಶುಕ
ವಾಣಿಯನು ಕಾಳಾಹಿಸನ್ನಿಭ
ವೇಣಿಯನು ಕಲ್ಯಾಣಿಯನು ಕಂದರ್ಪನೊಲಿದಡರ್ವ
ಏಣಿಯನು ಸೌಂದರ್ಯಜಿತ ಶ
ರ್ವಾಣಿಯನು ಘನವೃತ್ತಪುಳಿನ
ಶ್ರೋ[30]ಣಿಯನು ಸೌಜಾಣೆಯನು ವರ್ಣಿಸುವನಾರೆಂದ ೧೫
ಸ್ಥಿ[31]ರದ ವಿದ್ಯುಲ್ಲತೆಯೊ ಮು[32]ಗಿಯ[33]ದ
ಸರಸಿಜವೊ ಅಗಲದ ರಥಾಂಗವೊ
ಮೊರೆಯದಳಿಗಳೊ ಕಠಿನವಿಲ್ಲದ ಮಣಿಯೊ ಸೌಗಂಧ
ಬೆರಸಿದನುಪಮ ಚಂಪಕವೊ ನೆಱೆ
ಕರಗದಿಂದುವನಾಯು[34]ತಂಗಜ
ವಿರಚಿಸಿದನೆನಲೆಸೆದಳಾ ಸತಿಯರಸ ಕೇಳೆಂದ ೧೬
ಗಿಳಿಯೆಱಗ[35]ದೆಳ[36]ಗೊಂಬೊ ಪಿಕವೆಂ
ಜಲಿಸದೊಪ್ಪುವ ತಳಿರೊ ಷಟ್ಟದ
ನಿಲುಕದುತ್ಫುಲ್ಲಪ್ರಸೂನವೊ ಕಂತು ಮುದ್ರಿಸ[37]ದ
ಅಲಗೊ ಬಳಸದ ಸುಧೆಯೊ ಬೇಗಡೆ
ಗಳೆಯದನುಪಮ ರತ್ನವೋ ಎನ
ಲಳಿಕುಳಾಳಕಿಯೆಸೆದಳವನೀಪಾಳ ಕೇಳೆಂದ ೧೭
ಸುದತಿಯಾಸ್ಯ ಶರೀರ ದೃಕ್ಕುಚ
ವಿಧು ತಟಿಲ್ಲತೆ ಕುಮುದ ಚಕ್ರಗ
ಳೊದವಿ [38]ಬೆರ[39]ಸಲು ತಿಳಿಯಲರಿದೆಂದವಕೆ ಕುಱುಹುಗಳ
ಪದುಮಭವನು ಕಳಂಕನಚಿರಾ
ಸ್ಪದವ ಕೇಸರ ಪಕ್ಷಗಳ ಮಾ
ಡಿದನೊ ತಾನೆನಲಬಲೆಯನು ವರ್ಣಿಸುವನಾರೆಂದ ೧೮
ತರುಣಿಯಕ್ಷಿಪ್ರಭೆ ಮುಸುಕೆ ತರ
ಹರಿಸಲರಿಯದೆ ತೃಣವ ಕರ್ಚಿದು
ವೆರಲೆಗಳು ಮುಖದಂದವನು ಕಂಡಂಬರಕೆ ನಾಚಿ
ಸರಿದನಿಂದು ಕುಚದ್ವಯವ ಕಂ
ಡಿರದೆ ಚಕ್ರದ್ವಂದ್ವ ಹೊ[40]ಕ್ಕುವು[41]
ಸರವನೆನಲಾ ಸತಿಯನಭಿವರ್ಣಿಸುವನಾರೆಂದ ೧೯
ಅಳಿಗಳಾಕೆಯ ಕುಂತಲವ ಕಂ
ಡಳುಕಿ ಭ್ರಮಿಸಿದುವಾ ಸತಿಯ ಸ
ಲ್ಲಲಿತ ಯಾನವ ಕಂಡಡವಿ ಹೊಕ್ಕುವು ಮದೇಭಚಯ
ನಳಿನನೇತ್ರೆಯ ನಡುವನೀಕ್ಷಿಸಿ
ಕಳವಳಿಸಿ ಸಿಂಹಾಳಿ ಗುಹೆಯೊಳ[42]ಗಿಱಿ[43]ದುವೆನಲಾ ಸತಿಯನಭಿವರ್ಣಿಸುವನಾರೆಂದ ೨೦
* ಮ ಪ್ರತಿಯಲ್ಲಿಲ್ಲ
* ಮ ಪ್ರತಿಯಲ್ಲಿಲ್ಲ.
Leave A Comment