ಹೊಳೆವ ವಿದ್ಯುಲ್ಲತೆಯ ಚಂದ್ರಿಕೆ
ಯೊಳಗೆ ಪುದಿದು ಸುವರ್ಣರಜವನು
ತಳಿದು ಪೊಸ ಮಣಿ ಮುತ್ತುಗಳನಳವಡಿಸಿ ಸುಧೆಯೂಡಿ
ಲಲಿತ ಪರಿಮಳವೆಸಸಿ ಮನಸಿಜ
ನಿಲಿಸಿದಾ ಪುತ್ತಳಿಗೆ ಜೀವವ
ನಲಿನಸಂಭವ ಪಡೆದನೆ

[1]ನಲೊಪ್ಪಿದಳು ಹರಿಣಾಕ್ಷಿ         ೨೧

ನಿರುಪಮ ಭ್ರೂ ಧನು ಕಾಟಕ್ಷವೆ
ಶರ ಪಯೋಧರ ಚಕ್ರ ನಖ ವಿ
ಸ್ತರದ ಸುರಗಿ ಸು[2]ಬಾಸೆಯಾಯುಧದಿಂ ಶಂಕರನ
ಹರಿಬವನು ಮರಳಿಪೆನೆನುತ ಮು
ನ್ನಿರುವ ಕೈದುವ ಕಂತು ಬಿಸುಟ[3] ಬ್ಬರಿಸುತಿರ್ದನೆನಲ್ಕೆ ಕಾಂತೆಯ ಹೊಗಱ್ವನಾರೆಂದ     ೨೨

ನುಡಿವ ಹೇಮದ ಮುಕುರವನು ಕೆಂ
ಪಡಸಿದಮೃತದ ಸಾರವನು ಸು
ಯ್ಯಿಡುವ ಪೊಸ ಸಂಪಗೆಯನುಸಿರದ ಚಕ್ರವಾಕಗಳ
ನಡೆವ ಕೆಂದಾವರೆಗಹಳನು [4]ಕ
ರ್ಪ೫ಡರ್ದ ಕಾಳೋರಗನ ತಂದಜ
ಬೆಡಗಿನಲಿ ನಿರ್ಮಿಸಿದನೆನಲೊಪ್ಪಿದಳು ಕಮಲಾಕ್ಷಿ       ೨೩

ನಾರಿಯರು ಬಱಿಕೆಸೆವ ಮಣಿ[5]ಮಯ[6] ದಾರತಿಯ ನ[7]ಲಿದೆತ್ತಿ [8]ಬಱಿಕು[9] ಪ್ಪಾರತಿಯ ಸೂಸಿದರು ಹರಸಿಯೆ ಕನಕದರ್ಪಣವ
ತೋಱಲಾಲೋಕಿಸಿ ಕರಾಗ್ರದಿ
ಧಾರಿಣೀಸುರಮಂತ್ರಿತದ ಜಂ
ಬೀರವನು ಧರಿಸಿರಲು ಸತಿಯನು [10]ಹೊಗಱ್ವನಾರೆಂದ[11]           ೨೪

ಲಲಿತ ಸುರಚಾಪದಲಿ ಮಿಂಚುಱೆ
ಹೊಳೆವವೊಲು ನವರತ್ನ ದಂದಣ
ದೊಳು ಲತಾಂಗಿ ವಿರಾಜಿಸಲು ಪುತ್ತಳಿಗಳಂದದೊಳು
ಜಲಜಮುಖಿಯರು ಹಿಂದೆ ಮುಂದಿ
ಕ್ಕೆಲದಿ ಪಾಯವಧಾರು ತೊಲಗೆಂ
ದುಲಿಯುತಿರಲರಮನೆಯ ಹೊಱ[12]ವೆಟ್ಟ[13]ಳು ಸರೋಜಾಕ್ಷಿ         ೨೫

ತನತನಗೆ ಕೃಷ್ಣೇಕ್ಷುದಂಡವ
ನನುಕರಿಸಿ ಮಣಿಮಯದ ಚಮರವ
ವನಜನೇತ್ರೆಯರಿಕ್ಕೆಲದಿ ಡಾಳಿಸೆ ಮಣಿಚ್ಭತ್ರ
ಮನಸಿಜಧ್ವಜ ಸಿಂಧ ಸೀ[14]ಗುರಿ
ಘನಪಥವನಳ್ಳಿರಿಯೆ ವಾದ್ಯ
ಧ್ವನಿ ಜಗಂಗಳ ಪುದಿಯೆ ಸಲೆ[15]ಹೊಱವಟ್ಟ[16]ಳರಮನೆಯ            ೨೬

ಮಾರನೃಪನ ಮದೇಭ ಬರುತಿದೆ
ಸಾರಿ ಸನ್ನುತ ಮುನಿತಪಃಫಲ
ಸಾರ ಬರುತಿದೆ ಸಾರಿ ದಿಟಹೃಚ್ಛೂಲ ಬರುತಲಿದೆ
ಸಾರಿ ವಿಮಳಸ್ವರ್ಗ ಸುಖಸಾ[17]ಗಾರ[18] ಬರುತಿದೆ ಸಾರಿ ನೀವೇಂ
ದೋರ[19]ಣದಿ[20] ಕೈವಾರಿಸುತ ನಡೆದುದು ಸತೀನಿವಹ   ೨೭

ಗಿರಿಶನರ್ಧಾಂಗದಲಿ ಮುರಹರ
ನುರದೊಳಜನಾಸ್ಯದಲಿ ದಿವಿಜೇ
ಶ್ವರನು ಸರ್ವಾಂಗದಲಿ ಮುದದಿಂ ಮದನಮುದ್ರೆಗಳ
ಉರುತರದಿ ಧರಿಸಿದರು ತಾವೆನೆ
ಧರಣಿಯೊಳು ಹುಲುನರರ ಪಾಡೇ
ನಿರದೆ ತೊಲಗೆಂದೊದಱಿದುವು ಮುಂಗುಡಿಯ ಕಹಳೆಗಳು        ೨೮

ಸ್ಮರ ಸಮುದ್ರವ ದಾಮಟಲುಱಿದಾ
ದರಿಗೆ ಗೋಚರವಲ್ಲ ಲಕ್ಷ್ಮೀ
ವರಗೆ ತಾನೆದೆಯುದ್ದ ವಾಯ್ತ ಜನಾಸ್ಯ ಪರಿಯಂತ
ಹರಗೆ ಶಿರ ಮುಱುಗಿದುದೆನಲು ಹುಲು
ನರರ ಪಾಡೇನೆಂದೆನುತಲಿ
ತ್ತರದೊಳೊದಱಿದುವೆಯ್ದೆ ಬಿರುದಿನ ಕಹಳೆಯೊಗ್ಗಿನಲಿ ೨೯

ಲಲಿತ ಚಮರದ ಸೀಗುರಿಯ ಕೋ
ಮಲೆಯರೊಪ್ಪುವ ಕೇಳಮೇಳದ
ಲಲನೆಯರು ಹಾವುಗೆಯ ಹಡಪದ ಗಿಂಡಿಯಬಲೆಯರು
ಹೊಳೆವ ಮುಕುರದ[21] ಗೀತ[22]ರವ[23]ಪರಿ
ಮಳದ ಕಾಂತೆಯರಾ ಮೃಗಾಕ್ಷಿಯ
ಬಳಸಿ ಬಂದುದು ಲಕ್ಷಸಂಖ್ಯೆಯ [24]ಬಹು[25] ವಿಲಾಸದಲಿ ೩೦

ಕರದ ಕಂಕಣ ಸೂಡಗಂಗಳ
ಕೊರಲ ತಿಸರದ ತೋಳ ಬಂದಿಯ
ಬೆರಲ ಮಣಿಮುದ್ರಿಕೆಯ ಕರ್ಣದ ಮುತ್ತಿನೋಲೆಗಳ
ಚರಣದಂದುಗೆಗಳ ಲಸದ್ಭಾ
ಸುರದ ಜಘನದ ಕಾಂಚಿಗಳ ಸಡ
ಗರದಿ ಮಹಿಳಾನಿಕರ ಬಂದುದು ಸತಿಯ ಬಳಸಿನಲಿ     ೩೧

ಮೆರೆವ ಕಂಕಣ ತೋಳ ಬಂದಿಯ
ತಿರುಹುತಮಲಾಪಾಂಗರುಚಿಗಳ
ನಿರದೆ ಬೀಱುತ ಬಿಡುಮುಡಿ[26]ಯನೆ[27]ಡಗಯ್ಯೊಳೊಂದಿಸುತ
ಜರಿದ ನಿಱಿಗಳನೊಡರಿಸುತ ನೂ
ಪುರದ ದನಿಗೆಯ್ಯುತ್ತಲ[28]ತಿ ಸಡ
ಗರದೊಳೆಯ್ತರುತಿರ್ದರಬಲೆಯರರಸ ಕೇಳೆಂದ          ೩೨

ವಿಲಸದೇಕಾವಳಿಯನೊಲವಿಂ
ದಳವಡಿಸುತಳಕಗಳ ಸೆಳ್ಳುಗು
ರ್ಗಳಲಿ ತಿದ್ದುತ ಕಲಶಕುಚಕೊಂದಿಸುತ ಮೇಲುದನು
ಲಲಿತ ತನುಸೌರಭವ ದೆಸೆದೆಸೆ
ಗಳಲಿ ಬೀಱುತ ನೆರೆದ ವಿಟಸಂ
ಕುಳಕೆ ಸೋಲವನೀಯುತೆಯ್ತರುತಿರ್ದರಬಲೆಯರು     ೩೩

ಗುರುಕುಚಂಗಳ ಭರಕೆ ಸೆಳೆನಡು
ಮುಱಿಯೆ ಸೋರ್ಮುಡಿಯುನ್ನತಿಗೆ ನು
ಣ್ಗೊರಲು ಕುಸಿಯಲು ಘನಕಟಿಯ ಬಿಣ್ಪಿಂಗೆ ತೊಡೆಯಳುಕೆ
ಭರದಿ ಬಳುಕುತ[29] ಮಂದಗತಿಯಲಿ
ಬರಲು ಕಿಱುಬೆಮರಾಸ್ಯದಲಿ ಮೋ
ಹರಿಸೆ ನೀಱಿಯರೆಯ್ದೆ ಬರುತಿರ್ದರು ಸುಲೀಲೆಯಲಿ     ೩೪

ಚಾರು ಮಣಿಕಂಕಣ ಝಣಝಣ
ತ್ಕಾರ ಮಣಿನೂಪುರ ಕರಕ್ರೇಂ
ಕಾರ ಸುಲಲಿತ ಪಾದಮುದ್ರಿಕೆಗಳ ಠಣತ್ಕಾರ
ಆಱಡಿಯ ಝಂಕಾರ ವಾದ್ಯದ
ಭೂರಿ ಭಾಂಕೃತ ಮದ[30]ನಬಿಲು[31] ಟಂ
ಕಾರ ದೆಸೆಗಳ ಪುದಿಯೆ ವಿಭವದಿ ನಡೆದರಬಲೆಯರು    ೩೫

ಚಾರು ನಾಸಿಕದ ಚಂಪಕದ ಮೃ
ದೂರುಗಳ ಕದಳಿಗಳ ಕುಚಜಂ
ಬೀರಫಳದ ನಪೋಷ್ಠ ಪಲ್ಲವತತಿಯ ಮೆಲ್ನುಡಿಯ
ಕೀರಗಳ ವದನಾಂಬುಜದ ದೃ
ಕ್ಕೈರವದ ಬೆಡ[32]ಗಿಂದ ನಡೆದರು
ನಾರಿಯರು ಮನಸಿಜನ ನಡೆವಾರಾಮದಂದದಲಿ        ೩೬

ಅಳಕತತಿ ಕೃಷ್ಣಾಭ್ರನೂಪುರ
ದುಲುಹು ಮೊಱಗು ಕಟಾಕ್ಷರುಚಿ ಮಿಂ
ಚೊಲೆವ ಕಚ ನವಿಲಾಟ ಮಣಿಮಯಹಾರ ಸುರಚಾಪ
ಲಲಿತ ದಶನಗಳಾಲಿಕಲು ತನು
ಪುಲಕಜಲ ಮಱೆಯಾಗ ಲಾಕೋ
ಮಲೆಯ[33]ರೊಲಿದೆಯ್ದಿದರು[34] ಪೊಸ ಕಾರ್ಗಾಲದಂದದಲಿ           ೩೭

ವಿಲಸದೇಕಾವಳಿಯೊಳೊಪ್ಪುವ
ಲಲನೆಯರ ಕರ್ಣಾಭರಣ ಹೊಂ
ಬಳೆ ಲಸತ್ಕಟಿಸೂತ್ರದಿಂದೆಸೆವಂಬುಜಾಕ್ಷಿಯರ
ಹೊಳೆವ ನೇವುರ ಪಾಯವಟ್ಟಂ
ಗಳಲಿ ಮೆಱೆವತಿ ನೀಱೆಯರ ಕೋ
ಮಲ ಲತಾಂಗಿಯರುಗಳನಲ್ಲದೆ ಕಾಣೆ ನಾನೆಂದ         ೩೮

ನಡೆಗೆ ಹಂಸೆಗಳೊಂದಿದುವು ಮೆ
ಲ್ನುಡಿಗೆ ಕೀರಗಳಲುಕಿದುವು ಸರ
ಗುಡಲು ಪಿಕ ಮೋಹಿಸಿತು ಮುಖಚಂದ್ರಗೆ ಚಕೋರಗಳು
ಅಡಸಿದುವು ತಾ ಸೌರಭಕೆ ಬಂ
ದಿಡಿದ ಮಧುಪವ್ರಜದ ಘನರಾ
ಯಡಿಗೆ ಕಾಂತೆಯರಳವಱಿದು ನಡೆದರು ನವಾ[35]ಯಿಯ[36]ಲಿ       ೩೯

ಎಸೆವ ಭ್ರೂಚಾಪದ ಕಟಾಕ್ಷದ
ವಿ[37]ಶಿಖೆಗಳ ಬಾಸೆಗಳಡಾಯುಧ
ನೊಸಲ ತಿಲಕದ ಹರಿಗೆ ಹಲಗೆಯ ತೋಲ ಲೌಡಿಗಳ
ನಿಶಿತ ನಖದಲಗುಗಳ ದಂತ
ಪ್ರಸರ [38]ಮಧುರ ಎಚೋಸ್ತ್ರ[39]ನಿಚಯದಿ
ಕುಸುಮಬಾಣನ ಸೇನೆನಡೆದುದು ಸತಿಯ ಬಳಸಿನಲಿ  ೪೦


[1] ಳೆ (ಜ, ಮ)

[2] ಯ (ಜ.ಮ)

[3] ಟು (ಜ, ಮ)

[4] ಕೆಂಪ (ಮ), ಕಂಪ (ಮ)

[5] ಮಂ (ಜ, ಮ)

[6] ಮಂ (ಜ, ಮ)

[7] ನೊ (ಜ, ಮ)

[8] ತಂದು (ಜ, ಮ)

[9] ತಂದು (ಜ, ಮ)

[10] ವಾದಳೊಲವಿನಲಿ (ಜ, ಮ)

[11] ವಾದಳೊಲವಿನಲಿ (ಜ, ಮ)

[12] ವಂಟ (ಜ, ಮ)

[13] ವಂಟ (ಜ, ಮ)

[14] ಣಿ (ಜ, ಮ)

[15] ಹೊಱಹೊರಟ (ಜ), ಹೊಱವಂಟ (ಮ)

[16] ಹೊಱಹೊರಟ (ಜ), ಹೊಱವಂಟ (ಮ)

[17] ಕಾರಿ (ಪ)

[18] ಕಾರಿ (ಪ)

[19] ಣಿಸಿ (ಪ)

[20] ಣಿಸಿ (ಪ)

[21] ಸು (ಜ, ಮ)

[22] ನವ (ಜ, ಮ)

[23] ನವ (ಜ, ಮ)

[24] ಮಹಾ (ಜ, ಮ)

[25] ಮಹಾ (ಜ, ಮ)

[26] ಯೊಳೆ (ಜ, ಮ)

[27] ಯೊಳೆ (ಜ, ಮ)

[28] ಸ (ಜ, ಮ)

[29] ವ (ಜ, ಮ)

[30] ಧನು (ಜ, ಮ)

[31] ಧನು (ಜ, ಮ)

[32] ಳ (ಜ, ಮ)

[33] ರೆಯ್ದಿದರೊಲಿದು (ಜ, ಮ)

[34] ರೆಯ್ದಿದರೊಲಿದು (ಜ, ಮ)

[35] ಯದ (ಜ, ಮ)

[36] ಯದ (ಜ, ಮ)

[37] ನಿ (ಮ)

[38] ಧುರವಜ್ರಾಸ್ಯ (ಜ, ಮ)

[39] ಧುರವಜ್ರಾಸ್ಯ (ಜ, ಮ)