ಗುರುಕುಚದ ಮದದಂತಿಗಳ ಘನ
ತರ ನಿತಂಬದ ತೇರುಗಳ ದೃ
ಗ್ವರ ಚಪಲಗತಿಯಶ್ವಗಳ ನಿಱಿಗುರುಳ ಜಲ್ಲರಿಯ
ಭರದ ವೇಣೀಧ್ವಜದ ತುಂಬಿಯ

[1]ರದ ಕಹಳೆಯ ನೂಪುರ ಝಣ
ತ್ಕರದ ವಾದ್ಯದಿ ನಡೆದುದಂಗಜ ಸೈನ್ಯವೊಗ್ಗಿನಲಿ        ೪೧

ಭರದಿ ಯೋಗೀಶ್ವರರ ಮೇಲು
ಬ್ಬರಿಸಿ ದೃ[2]ಗ್ಬಾಣ[3]ಗಳಲೆಸೆದಪ
ಹರಿಸಿ ತಪಸಿವ್ರಾತಕಳಕದ ಬಲೆಯನಳವಡಿಸಿ
ನೆರೆದ ವಿಟಸಂತತಿಯ ನಖಭೀ
ಕರದ ಸುರಗಿಯಲಣ[4]ರುತತಿ ವಿ
ಸ್ತರದಿ ಕಾಮನ ಸೇನೆ ನಡೆದುದು ಸತಿಯ ಬಳಸಿನಲಿ   ೪೨

ಪ್ರಿಯನ ಮುನಿಸತಿಗಿತ್ತ ಶಚಿ ಗೋ
ಪಿಯರಿಗೀಶನನಿತ್ತ ಸಿರಿ ಗಂ
ಗೆಯನು ಪತಿಯ ಶಿರಕ್ಕೆ ತಂದುಮೆ ಧವನು ಗುರುಸತಿಗೆ
ಬಯಸಲಿಕೆ[5] ರೋಹಿಣಿಯು ಪಾಟಿಯೆ[6]ದಯಿತೆ[7]ಯರಿಗೆಂದಂಗಭವನಾ
ಕೆಯ ಮಹಾ ರೂಪಾತಿಶಯವನು ಹೊಗಱುತೆಯ್ತಂದ   ೪೩

ಧರಣಿಯೊಳು ಮುನ್ನಿವಳು ತಾನವ
ತರಿಸಿದೊಡೆ ತಪಕೆಯ್ದುವನೆ ಶಂ
ಕರನು ಶಶಿ ನಿಂದ್ಯಾತ್ಮನಹನೆ ಮನೋಜನಂಗವದು
ಕರಗುವುದೆ ಬೇಱುಂಟೆ ಸ್ವರ್ಗದ
ಪರಸುಖಕ್ಕೆ ಜಿತೇಂದ್ರಿಯತ್ವವು
ಮೆಱೆವುದೇ ಹೇಱೆಂದು ಕಾಂತೆಯ ಹೊಗಱಿತಮರಗಣ            ೪೪

ಸ್ಮರನ ಮದಕರಿಯೋ ಸುಖಾಮೃತ
ದುರುಳಿಯೋ ಕಾಮುಕದ ಭಾಗ್ಯದ
ಸಿರಿಯೊ ವಶ್ಯದ ತಿಲಕವೋ ಸೌಂದರ್ಯದಾಗರವೋ
ಪರಿಮಳದ ಪುತ್ತಳಿಯೊ ರೂಪಿನ
ಕರುವಿಗೆ[8]ಱಕವಿದೆಂದೆನುತಲ
ಚ್ಚರಿ[9]ಯೊಳಗೆ[10] ಕೊಂಡಾಡಿತಮರವ್ರಾತವಾ ಸತಿಯ   ೪೫

ಲಲನೆಯರ ವದನಾಂಶುಗಳ ಹೊ
ಕ್ಕೆಳಸಿದುವು ಪಲ್ಲವದ ಮನ ಸ
ಲ್ಲಲಿತ ಕೇಶಧ್ವಾಂತದಲಿ ಕಾಮಾಂಧವುಱೆ ಕವಿಯೆ
ಲಲಿತ ವಿಭ್ರಮ ಹಾವಭಾವಂ
ಗಳಲಹಂಕೃತ ಶಿರಗಳೊಡೆದುಱೆ
ಕಲಕಿದುವು ಧೈರ್ಯಾಂಬುಧಿಯ ನೋಡಿದರ ಕಣ್ಮನಕೆ  ೪೬

ಆನನಾಬ್ಜದ ಗುಣಮಣಿಯ ದೃ
ಗ್ಮೀನ ನಾಭ್ಯಾವರ್ತಕದ[11]ನಾ
ನಾನುರಾ[12]ಗಾಮೃ[13]ತದ ತಿವಳಿ ತರಂಗರಶ್ಮಿಕದ
ಪೀನಗಳ ಕುಚಚಕ್ರಗಳ ಭಾ
ಷಾನಿನಾದದ ಘನವಿರಹವಡ
ಬಾನಳದ ವನಿತಾಜನಾಂಬುಧಿ ಮೋಹಿಸಿತು ನೃಪರ   ೪೭

ಸ್ಮರನ ಮೋಹರವಿಂತು ವಿಭವದಿ
ಧರಣಿಪರ ಸಭಗೆಯ್ದಿ[14] ಬರೆ ಭೂ
ವರರು ಕಮಲಾನನೆಯನೀಕ್ಷಿಸಿ ನಟ್ಟದಿಟ್ಟಿಗಳ
ಭರದಿ ಕೀಱಲು ಬಾರದಿರೆ ಕಂ
ಧರವನಲುಗಾಡಿಸುವವೊಲು ತಾಂ[15]?
ಶಿರರವ ತೂಗುತ ನೃಪರು ಕೊಂಡಾಡಿದರು ಕೋಮಲೆಯ         ೪೮

ಬೆರಲ ಕೊನೆಯಲಿ ಮೀಸೆಗಳನೊಡೆ
ಮುಱಿಯುತನುರಾಗದಲಿ ತತ್ಸೌಂ
ದರಿಯವನು ತೋಱಿಸುತ ದೆಸೆಗಳ ನೋಡಿಯ[16]ವ್ವಳಿಸಿ
ಬೆ[17]ಱೆಯುತೊಲೆಯುತ ನಗುತಲಿಂತೀ
ಪರಿಯೊಳಣಕಿಸಿ ಸತಿಯನೊಲಿಸುವೆ
ನುರುತರದೊಳೆಂದೋರ್ವ ನೃಪನಿರ್ದನು ಕುಚೇಷ್ಟೇಯಲಿ        ೪೯

ಲಲನೆ ಕಾದಂಬದಲಿ ತೊಡಿಗೆಯ
ನಳವಡಿಸಿಕೊಂಡೆಸೆವ ಕತ್ತುರಿ
ತಿಲಕವೆಸಗುತ ತನ್ನ ರೂಪಿಗೆ ತಾನೆ ಹಾರೈಸಿ
ಕೆಲೆಯುತಾ ಕಾಂತೆಯನು ಕಡೆಗಂ
ಗಳಲಿ ನೋಡುತ್ತೋರ್ವ ನೃಪ ಕೋ
ಮಲೆಯ[18]ನೊಲಿ[19]ಸುವೆನೆಂದು ಬಹು ರೂ[20]ಪಗಳ[21] ಕಲ್ಪಿಸಿದ       ೫೦

ಎಸೆವ ಮುತ್ತಿನ ಹಾರಗಳನೊಂ
ದಿಸುತ ಪದಕವನೊಱಗದಂದದಿ
ಸಸಿನೆ ಮಾಡುತ ವಶ್ಯ ತಿಲಕಾದಿಗನೊಂದಿಸುತ
ಮಿಸುಪ ಮೋಹನಮಂತ್ರಗಳ [22]ಬಿಡ
ದುಸಿರುತಂಗಜನಿಸುವ [23]ಬಾಣ
ಪ್ರಸರಕತಿ ಕಳವಳಿಸಿ ಪೀಠದೊಳೋರ್ವನಳವಱಿದ     ೫೧

ಲಲನೆಯತುಳ ಕಟಾಕ್ಷಪಾತದೊ
ಳಳುಕಿ ನಾಭ್ಯಾವರ್ತದಲಿ ಸುಱಿ
ದಳಕಪಾಶದಿ ತೊಡರಿ ಬಾಸೆಯಡಾಯುಧದ ಹತಿಗೆ
ಬಱಿಕ ನಖದಂ[24]ಕುಶ[25]ದ [26]ಹೊಯ್ಲಿಂ
ಗಳುಕಿ[27] ಕೇಶಧ್ವಾಂತದಲಿ ಕೆಲ
ಬಲನ ಕಾಣದ ವಿರಹದಿಂದೋರ್ವರ ಮೈಮಱೆವ         ೫೨

ಕರೆಯೇ ಕೇಳನು ಸಮ್ಮುಖದಿ ನಿಂ
ದಿರಲದಾರೆಂದಱಿಯ ಬಾಯೊಳು
ತುಱುಗಿದೆಲೆ ಬಾಯೊಳಗೆ ಮಡಿದೆಲೆ ಕೈಯೊಳಂಗನೆಯ
ಸ್ಥಿರದೊಳೆವೆ[28]ಯಿಕ್ಕದೆ[29] ನಿರೀಕ್ಷಿಸು
ತರಸನೊರ್ವನು ವಿರಹದಲಿ ಮೆ
ಯ್ಯಲೆ[30]ಯದಿರ್ದನು ಲಲಿತ ಭಿತ್ತಿಯ ಚಿತ್ರದಂದದಲಿ     ೫೩

[31]ವಿಧುಮುಖಿಯ[32] ಸೋರ್ಮುಡಿಯ ಕಂಡಿಂ
ತಿದುವೆ ಕಾಳೋರಗನೆನುತ ಭಯ
ವೊದವಿ ನಡುಸಿಂಹವೆಂದಳವಱಿದು ಸುಗ[33]ತಿಯನು
ಮದಗಜವಿದೆಂದಳುಕಿ ಸೆಳ್ಳುಗು
ರುದ[34]ಳ ಹುಲಿಯುಗುರೆಂದು ಕಳವಳಿ
ಸಿದನದೊರ್ವ ಮಹೀಶನಾ ಕಾಮಿನಿಯ ವಿರಹದಲಿ      ೫೪

ಹರಿಣನೇತ್ರೆಯ ರೂಪುಗಂಡಂ
ದುರುತರದ ನಯನವನು ಮಧುರ[35] ಸ್ವರವನಾಲಿಸಿ ಕಿವಿಯ ತತ್ಸೌರಭದೆ ನಾಸಿಕವ
ಸುರುಚಿರದಿ ಪಡೆದುದಕೆ ಫಲವಾ
ಯ್ತರಸಿ ಮೇಲೆಮಗಾದೊಡೆಮ್ಮಯ
ಸರಿಯದಾರೆಂದುಬ್ಬಿ ರಾಗಿಸಿದುದು ನೃಪಸ್ತೋಮ        ೫೫

ಧರಣಿಪಾಲಕರಿಂತು ನವ ಸೌರಿ
ದರಿಯಗಳ ತೋಱುತ್ತಲಿರೆ ತ
ತ್ತರುಣಿ ಮಣಿಮಯದಂದಳ[36]ವನಿಱಿದ ವಣಿಗ್ವರನ
ಚರಣಕೆಱಗಿದೊಡಪ್ಪಿ ತೊಡೆಗಳೊ
ಳುರುತರದಿ ಕುಳ್ಳಿರಿಸಿಕೊಂಡಳಿ
ಗುರುಳುಗಳ ನೇವರಿಸಿ ಕಮಲದಳಾಕ್ಷಿಗಿಂತೆಂದ         ೫೬

ಎಲೆ ಕುಮಾರಿ ಸಮಸ್ತ ಭೂಮೀ
ವಲಯಪತಿಗಳ ಕರೆಸಿದೆನು ಮನ
ವೆಳಸಿದಾತನ ವರಿಸು ಮೇಣ್ ವೀಣೆಯಲಿ ನಿನ್ನುವನು
ಒಲಿಸಿದಾತಂಗೆಱಗು ಹೋಗೆಂ
ದೊ[37]ಲಿದು ಪೊಸ ಮಂದಾರ ಮಾಲೆಯ
ನಳಿಕುಲಾಳಕೆಗಿತ್ತನಾ ವೈಶ್ಯೇಂದ್ರನೊಲವಿನಲಿ          ೫೭

ಮೃಗವಿಲೋಚನೆ ಮಣಿಮಯದ ಹಾ
ವುಗೆಯನೊಲವಿಂ ಮೆಟ್ಟಿ ಪಿತನಂ
ಘ್ರಿಗೆ ನಮಿಸಿ ಬಂದಬಲೆಯರು ಕೈಗುಡಲು ಚಾಮರವ
ಮುಗುದೆಯರು ದಾಳಿಸುತ ಬರೆ ಸ
ತ್ತಿಗೆಯ ನೆಱಲೊಳು ಲೋಚನದ ಕಾಂ
ತಿಗಳು [38]ದೆಸೆ[39] ದೆಸೆಗಡರೆ ನಡೆತರುತಿರ್ದಳೊಲವಿನಲಿ           ೫೮

ಸ್ಮರನ ಮದಕರಿಯಾನವೋ ಭಾ
ಸುರದಿ ಗಹನವನಡರ್ವ ಲಕ್ಕೆಯಾ[40] ಬರವೊ ಚತುರಾನನನ[41] ಹಂಸನ ಗತಿಯೊ ತಾನೆನಲು
ಗರುವ ಗತಿಯಲಿ ರಮಣಿ ತಾ ಸೌಂ
ದರಿಯಮೇ ರೂಪಾಗಿ ತಾ ಸೌಂ
ದರಿಯಮೇ ರೂಪಾಗಿ ಚರಿಸುವ
ಪರಿಯೊಳವನಿಪರೆಡೆಗೆ ಬರುತಿರ್ದಳು ಸರಾಗದಲಿ      ೫೯

ಕರದೆ ಕಂಕಣ ಸೂಡಗಂಗಳ
ತಿರುಹುತುನ್ನತ ಕುಚಕೆ ಮೇಲುದ
ಸರಿಯುತೇಕಾವಳಿಯನಳವಡಿಸುತ್ತ ಬೆರಳಿನಲಿ
ಕುರುಳುಗಳ ತಿದ್ದುತ್ತ [42]ಪದನೊ
ಪುರವ೧ದನಿಗೆಯ್ಯುತ್ತಲತಿ ಸಡ
ಗರದಿ ಭೂಪರ ಹೊರಗೆ ನಡೆತರುತಿರ್ದಳಿಂದುಮುಖಿ   ೬೦


[1] ತ (ಜ)

[2] ಗ್ಬಣ್ಣ (ಜ, ಮ)

[3] ಗ್ಬಣ್ಣ (ಜ, ಮ)

[4] ವು (ಜ, ಮ)

[5] ದು (ಜ, ಮ)

[6] ರಮಣಿ (ಜ, ಮ)

[7] ರಮಣಿ (ಜ, ಮ)

[8] ನೆ (ಜ, ಮ)

[9] ಯದಲಿ (ಜ, ಮ)

[10] ಯದಲಿ (ಜ, ಮ)

[11] ದಿ (ಜ, ಮ)

[12] ಗದಮೃ (ಜ), ಗದವೃ (ಮ)

[13] ಗದಮೃ (ಜ), ಗದವೃ (ಮ)

[14] ಯ್ದು (ಜ, ಮ)

[15] ತತ್ (ಜ, ಮ)

[16] ಹ (ಜ, ಮ)

[17] ಮೆ (ಜ, ಮ)

[18] ವರಿ (ಜ, ಮ)

[19] ವರಿ (ಜ, ಮ)

[20] ಪಿಂದ (ಜ, ಮ)

[21] ಪಿಂದ (ಜ, ಮ)

[22] x (ಜ, ಮ)

[23] x (ಜ, ಮ)

[24] ಶುಕ (ಮ)

[25] ಶುಕ (ಮ)

[26] ಹೊಯಿಲ್ಗಳವಳಿದು (ಜ, ಮ)

[27] ಹೊಯಿಲ್ಗಳವಳಿದು (ಜ, ಮ)

[28] x (ಜ, ಮ), ೪ ಱಿ (ಪ)

[29] x (ಜ, ಮ), ೪ ಱಿ (ಪ)

[30] ೪ ಱಿ (ಪ)

[31] ಇಂದುಮುಖಿ (ಜ, ಮ)

[32] ಇಂದುಮುಖಿ (ಜ, ಮ)

[33] ದ (ಪ)

[34] ಗ (ಜ, ಮ)

[35] ಪ (ಜ, ಮ)

[36] ಣ (ಜ, ಮ)

[37] ದು (ಜ, ಮ)

[38] x (ಜ, ಮ)

[39] x (ಜ, ಮ)

[40] ಯೊ (ಜ, ಮ)

[41] ದೊ (ಜ, ಮ)

[42] ಮೃದುಪದ ತಳದ ನೇವುರ (ಜ, ಮ)