ಸರ್ವ ಭೂಪರ ಜಱೆದುಳಿದ ಗಂ
ಧರ್ವದತ್ತೆಯ ವೀಣೆಯಲಿ ಪಡೆ
ದುರ್ವಿಪತಿ ಜೀವಂಧರನು

[1]ಗೆಲಿದನು[2]ನೃಪಾಲಕರ

ಅರಸ ಕೇಳ್ ಸತಿ ಸಕಲ ಭೂಮೀ
ಶ್ವರರ ಮೆಚ್ಚದ ಮರ[3]ಳೆ ವಾಣಿಜ
ವರನು ದೂತರ ಕರೆದು ನಿಜರೂ[4]ಪದ[5]ಲಿ ಕಾಮಿನಿಯ
ನೆರೆಯಲಾಱಿರಿ ವೀನೆಯಲಿ ವಿ
ಸ್ತರದೊಳೊಲಿಸುವೊಡೇಱಿ ಕಲೆಯಲಿ
ಪರಿಣತಾನ್ವಿತರೆಂದು ಸಾಱಿಸಿದನು ಸುಲೀಲೆಯಲಿ      ೧

ಸುರುಚಿರದೊಳಿ ತೆಱದೆ ಸಾಱಲು
ಧರಣಿಪಾಲರು ಕೇಳಿ ಹರುಷದಿ
ಭರದಿ ವೀಣಾಮಂಟಪಕೆ ಬಂದಬ್ಜಕಳಿನಿಕರ
ತುಱುಗಿದಂತೆ ವಿಪಂಚಿಗಳ ಮು[6]ಕ್ಕುಱು[7]ಕಿ ತಾವವಸರದಿ ಬಾಜಿಸೆ
ತರುಣಿಯರು ನಗುತಿರಲು ನಾಚಿಯೆ ಮಗುಱ್ದರಾ ನೃಪರು          ೨

ಭರದಿ ಬಂದು ವಿದಗ್ಧ ನೃಪಶೇ
ಖರನದೊರ್ವನು ವೀಣೆಯನು ವಿ
ಸ್ತರದಿ ತಲೆ ಕೆಳಗಾಗಿ ಧರಿಸಿಯೆ ಕಳೆಯ ಖಡ್ಡಿಗಳ
ಮುಱಿಯೆಸಕವೆಂದುರ್ಚಿ ಬಿಸುಟಪ
ಸರದಿವೊದಱುತ್ತಿರಲು ಕೈಹೊ
ಯ್ದರಸಿಯರು ನಗುತಿರಲು ನಾಚಿಯೆ ಮಗುಱ್ದನಾ ನೃಪನು[8]        ೩

ಧಾರಿಣೀಪತಿ ಕೇಳು ಕಾಷ್ಠಾಂ
ಗಾರ ಮುಖ್ಯ ನೃಪಾಲಕರು ಕಪಿ
ನಾರಿವಾಣಫಲಕ್ಕೆ ಮುತ್ತಿದ ತೆಱದೆ ವೀಣೆಗಳ
ಸಾರಿ ದುಸ್ಸ್ವರದಿಂದಲಂತ
ಸ್ಸಾರವಱಿಯದೆ ನುಡಿಸುತಿರೆ ಸತಿ
ಹಾರುತಿರ್ದಳು ಜಾಣಮಣಿ ಜೀವಂಧರನ ಬರವ          ೪

ಲಲನೆಯನು ವೀಣೆಯಲಿ ಭೂಮಿಪ
ರೊಲಿಸದಿರೆ ಜೀವಂಧರನು ನಿ
ರ್ಮಲ ತನುಚ್ಛವಿ ಮೆಱೆಯೆ ಸಿಂಹಾಸನವ[9]ತಾನಿಱಿದು
ಹೊಳೆವ ಮಣಿಮಯ ತೊಡರು ಫಲಕೆಂ
ದುಲಿಯೆ ವಾಣಿಜವರರು ಕಂಡಂ
ದೆಲೆ ಕುಮಾರಕ ನಮಗಿದನುಚಿತವೆಂದು ಸಾಱಿದರು   ೫

ವರ ಕನಕ ನವರತ್ನ ವಸ್ತ್ರೋ
ತ್ಕರ ಸುಗಂಧ ಪರೀಕ್ಷೆಯಲಿ ಕರಿ
ತುರಗ ಸ್ವರ್ಣಾದಿಗಳ ಮೌಲ್ಯವನಱಿವಭಿಜ್ಞೆಯಲಿ
ಸುರುಚಿರ ಕ್ರಯವಿಕ್ರಯ ವ್ಯವ
ಹರಣೆಯಲಿ ನಾವ್ ಕುಶಲರೆಮುಗಿದು
ಯೆರವು ವೀಣೆಯ ಗೊಡವೆ ಬೇಡೆಂದುದು ವಣಿಗ್ವ್ರಾತ    ೬

ಇ[10]ಳೆಯ ಪತಿ ಕೇಳಿಂತು ಕುವರನ
ಮುಳಿದು ಬೇಡೆಂದೊಡಱುತಿರೆ ಕೆಲ
ಕೆಲರು ತಪ್ಪೇನೆಂದು ಕೆಲರಪಹಾಸ್ಯಕರವೆಂದು
ಕೆಲರಿದೇಕೆ[11]ಮಗೆಂದು ಕೆಲರು
ಜ್ವಲ ಸುಭದ್ರಾಕಾರನಾ ಕೋ
ಮಲೆಯನೊಲಿಸುವನೀತ ವೀನೆಯೊಂದುದಖಿಳ ಜನ  ೭

ಗರುವ ಗತಿಗಳೊಳಿಂತು ಜೀವಂ
ಧರನು ಬರೆ ಕೆಳದಿಯರು ಕಂಡೀ
ಪುರುಷ ರೂಪಾನ್ವಿತರು ವೀಣಾಭಿಜ್ಞನಿವನಾಗೆ
ವರ ಸುವರ್ಣಕೆ ದಿವ್ಯ ಪರಿಮಳ
ಬೆರಸಿದವೊಲಂಗನೆಯ ಭಾಗ್ಯವ
ನಱಿವರಾರೆಂದೀಕ್ಷಿಸುತ್ತಿರ್ದುರು ಸುಲೀಲೆಯಲಿ            ೮

ನುತ ಸುವೀಣಾದ್ಯಖಿಲ ಕಲೆಯಲಿ
ಚತುರರಹ ಭೂಮೀಶ್ವರರು ತ
ತ್ಸತಿಯ ವೀಣೆಯೊಳೊಲಿಸಲಾಱದೆ ನಾಣ್ಚಿ ಮಗುಱ್ದರೆನೆ
ಮತಿವಿಕಳನೀ[12]ಪರದಗಿದುವೇ
ವಿತತಿ ಚಿನ್ನತಿಕೋಲು ತನಗೆಂ
ದತಿಶಯದಿ ನಗುತಿರ್ದುದಾ ಜನವರಸ ಕೇಳೆಂದ         ೯

ತಿರುಗಿ ಕಂಡವನಿಪರು ನಗುತೀ
ಪರದ ವಿಭ್ರಾಂತನೊ ಜಡನೊ ಬಾ
ಹಿರನೋ ಮೂರ್ಖನೊ [13]ಮೇಣು[14]ನರವೇಷದ ಸುರೇಶ್ವರನೋ
ವರ ಸುಲಕ್ಷಣನಿವನ ಭಾಗ್ಯವ
ನಱಿವರಾರಂ[15]ಗಜನ ವಿರಹದಿ
ಮರುಳಿದೇನಾಶ್ಚರ್ಯವೆಂದುಸಿರ್ದುದು ನೃಪಸ್ತೋಮ  ೧೦

ನೆರೆದ ಜನವಪಹಾಸ್ಯವಾಡು
ತ್ತಿರಲು ಸೈರಿಸಿ ನಿಮ್ಮ ಕೃಪೆಯಿಂ
ದಿರದೆ ವೀಣೆಯ ಜಯಿಸಿ ಕಾಂತೆಯ ಸೆಳೆದು ತಹೆನೆಂದು
ವರ ಕುಮಾರಲಲಾಮ ನಸುನಗೆ
ವೆರಸಿ ವೀಣಾಮಂಟಪಕೆ ಬಂ
ದರುಹಗೆಱಗಿ ಕರಾಬ್ಜದಿಂ ತುಡುಕಿದನು ವೀಣೆಗಳ         ೧೧

ಇದಕೆ ತಂತ್ರಿಯ ದೋಷವುಂ[16]ಟೆ[17] ದಿ[18]ದಕೆ ಖಡ್ಡಿಯ ದೋಷ ಹೊಂದಿಹು
ದಿದಕೆ ಕಳೆಗಳ ಕೊರತೆ ಹೊಂದಿಹುದಿದಕೆ ತಾನದಲಿ
ಪುದಿದಿಹು[19]ದಿನಿತು[20] ದೋಷವೆಂದಿರಿ
ಸಿದ ವಿಪಂಚೀವ್ರಜವನು ಱಿದಾ
ಚದುರ ಘೋಷವತಿ ಪ್ರವೀಣೆಯ ಕಂಡು ರಾಗಿಸಿದ        ೧೨

ಸಂಭ್ರಮದೊಳಾ ಘೋಷವತಿಯೆಂ
ದೆಂಬ ವೀಣೆಯ ಧರಿಸಿ ತಂತ್ರಿಯ
ನಿಂಬಿನಿಂದಳವಡಿಸಿ ಪರಿಕಿಸಿ ತಾನಮಾನಗಳ
ಬೆಂಬಱಿಯೊಳಂದೆಸೆವ ಕಲೆಗಳ
ತುಂಬಿ ನಾನಾ ರಾಗದಲಿ ಜಿತ
ಶಂಬರ ಸಮಾಕಾರ ಬಾಜಿಸಿದನು ಸುಜಾಣ್ಮೆಯಲಿ       ೧೩

ವಕ್ತ್ರ ಹೃದ್ಗಳ ನಾಭಿ ಶಿರ ದೃಕ್
ಶ್ರೋತ್ರ ದತಿ ಪಂಚಮ ವೃಷಭ[21]ತತಿ
ವಿಸ್ತರದ ಗಾಂಧಾರ ಷಡ್ಜನಿನಾದ ಧೈವತದ[22]ರಕ್ತಿಯಿಂದೆಸೆವಖಿಳ ಕಳೆಗಳ[23] ಯುಕ್ತಿಪಂಕಗಳನು ಕ್ರೌಂಚವೃ[24] [25]ಷೋಕ್ತಿಯ[26]ಸ್ವರವೆಸೆಯೆ ಬಾಜಿಸಿದನು ಸುಗಾನದಲಿ(?)          ೧೪

ಕುಶಲತೆಯೊಳಾ ವೀಣೆಯನು ನವ
ರಸಿಕ ಬಾಜಿಸಿ ಪಾಡಲಲ್ಲಿಗೆ
ಪಶು ಮೃಗಾವಳಿ ಬಂದು ಕಿವಿಗೊಟ್ಟಾಲಿಸುತ್ತಿರಲು
ಒಸೆದು ಮೇಲಣ ಸುರರು ನೆಱೆ ಕೀ
ರ್ತಿಸಲು ನೆರೆದ ಸಭಾಜನವು ಪರ
ವಶದೊಳಿರ್ದುದು ಗಾನಸೌಖ್ಯದೊಳಾ ಕುಮಾರಕನ    ೧೫

ಪರಮ ಹರ್ಷೋತ್ಕರದ ವೈಶ್ಯರು
ನೆರೆದು ಕುಣಿಕುಣಿದಾಡೆ ವಿದ್ಯಾ
ಧರರು ಪೂಮಱೆಗಱೆಯ ಸುರದುಂದುಭಿಗಳಳ್ಳಿರಿಯೆ
ಅರರೆ ಭಾಪುರೆ ಸಕಳ ವಿದ್ಯಾ
ಭರತ ಗಾನಾಭಿಜ್ಞ ಜಿತಶಂ[27] ಬ[28]ರನೆ ಮಝಭಾಪೆಂದು ಹೊಗಱ್ದುದು ವಂದಿಸಂದೋಹ          ೧೬

ವರಕುಮಾರಾಗ್ರಣಿಯನೈನೊ
ರ್ವರು [29]ಕುಮಾರರು[30] ಕಿತ್ತಡಾಯುಧ
ದುರುತರದೆ ನೆರೆಯಂಗರಕ್ಷಕರಾಗಿ ಬಳಸಿರಲು
ಪರಮ ಹರ್ಷದೊಳಿತ್ತ ಮಹಿಳಾ
ವರ ವಿಭೂಷಣವಂಗಜನ ಮದ
ಕರಿಯೆನಿಪ ಸತಿಯಲ್ಲಿಗೆಯ್ತರುತಿರ್ದಳೊಲವಿನಲಿ         ೧೭

ತಳಿತ ಚಿಂತೆಯೆ ಬಾಡಿದಾಸ್ಯದ
ಕಳಕಳದ ಕರಣದ ಕಪೋಳದ
ಲಲೆವ ಕೈಗಳ ನೆಗ್ಗಿದಂಗದ ನಟ್ಟ ದೃಷ್ಟಿಗಳ
ಬಲಿದ ಭೀತಿಯ ಕು[31]ತ್ತುದಲೆಗಳ
ಲಿಳೆಯ ಪತಿಗಳು ಸತಿಯ ಬಯ್ಯುತ
ಮುಳಿಯುತಿರ್ದರು ತತ್ಕುಮಾರನಿಗಧಿಕ ರೋಷದಲಿ    ೧೮

ಗುರುಕುಚಂಗಳ ಭರಕೆ ಸೆಳೆನಡು
ಮುಱಿವುದೆಂದಳುಕುತ್ತ ಲಜ್ಜಾ
ಭರದಿ ಕುಸಿಯುತಪಾಂಗದಲಿ ಕುವರನ ನಿರೀಕ್ಷಿಸುತ
ಹರುಷವೊಂದುತ ಪುಳಕಜಲ ಸಾ
ಗರದೊಳಾಱುತ ಮುಖದಿ ಕಿಱುನಗೆ
ವೆರಸಿ ಗರುವಾಯಿಯಲಿ ನಡೆತರುತಿರ್ದಳೊಲವಿನಲಿ   ೧೯

ಹೊಳೆವ ಮೇಲುದೆ ಕೇತು ನವ ಮೇ
ಖಳೆಯೆ ಕೋಟೆ ನಿಜಾಸ್ಯರಣಮಂ
ಡಲವತುಳ ನೈ [32]ತಂಬಟ್ಟಳೆ ನಾಭಿ ನಡುವೀಧಿ
ಕಲಶಕುಚ ಕೊತ್ತಳ ತನುಚ್ಛ ವಿ
ಜಲಕರಾಂಬುಜಯಂತ್ರಮೆನೆ ಕೋ
ಮಲೆ ನಡೆದಳಂಗಜನ ಜಂಗಮ ದುರ್ಗದಂದದಲಿ       ೨೦


[1] x (ಜ, ಮ)

[2] x (ಜ, ಮ)

[3] ಗು (ಜ, ಮ)

[4] ಪಿನ (ಜ, ಮ)

[5] ಪಿನ (ಜ, ಮ)

[6] ಕ್ಕಿಱಿ (ಜ, ಮ)

[7] ಕ್ಕಿಱಿ (ಜ, ಮ)

[8] ತಿ (ಜ, ಮ)

[9] ದಿ (ಜ)

[10]ಎ (ಜ)

[11] ವೆ (ಜ), ನ (ಮ)

[12] ಗೀ (ಮ)

[13] x (ಮ)

[14] x (ಮ)

[15] + ನೆಯ (ಮ)

[16] ಟಿಂ ತಿ (ಮ)

[17] ಟಿಂ ತಿ (ಮ)

[18] ಟಿಂ ತಿ (ಮ)

[19] ದು ನಸು (ಜ, ಮ)

[20] ದು ನಸು (ಜ, ಮ)

[21] x (ಜ, ಮ)

[22] x (ಜ, ಮ)

[23] x (ಜ, ಮ)

[24] + ಷೋತ್ಯವಜಕೆನೆ…ಹವು ಪಿಕ (ಮ), ಪೋತ್ಯವಜವಕೆ ಕಿಭಹವುಪಿಕ (ಜ)

[25] ದುತ್ತಮ (ಜ, ಮ)

[26] ದುತ್ತಮ (ಜ, ಮ)

[27] ತುಂ (ಜ, ಮ)

[28] ಬು (ಮ)

[29] ಮಿತ್ರರು (ಜ), ಸುಮಿತ್ರರು (ಮ)

[30] ಮಿತ್ರರು (ಜ), ಸುಮಿತ್ರರು (ಮ)

[31] ಕ (ಜ, ಮ)

[32] ನಿ (ಜ, ಮ)