ವರಶುನಕಗೊಲವಿಂದೆ ಸದ್ಗತಿ
ವಿರಚಿಸಿಯೆ ನೃಪತಿಲಕ ಜೀವಂ
ಧರನು ಗುಣಮಾಲೆಯನು ಪರಿಣಯವಾದನೊಲವಿನಲಿ

ಧಾರುಣೀಪತಿ ಕೇಳು ಕಾಷ್ಠಾಂ
ಗಾರ ಚೈತ್ರದೊಳೊಂದು ದಿನ

[1]ಪರಿ[2] ವಾರ ನಾರೀಜನಸಹಿತ ಜಲಕೇಳಿಗೊಲವಿನಲಿ
ವಾರಿಜಾಕರಕೆಯ್ದೆ ಬಳಿಕ ಕು
ಮಾರಮಣಿ ಜೀವಂಧರನು ವಿ
ಸ್ತಾರದಿಂ ತಾ ಬಂದನಾ ಮಿತ್ರರು ಸಮೇತದಲಿ           ೧

ರಾಜಹಂಸಾನ್ವಿತದಿ ನಭವನು
ರಾಜಸಭೆಯನನಂತ ಪದ್ಮ[3]ವಿ
ರಾಜಿತದಲಹಿಪಾಚ್ಯುತರ ಕುಮುದೋತ್ತದಲಿ ಶಶಿಯ
ರಾಜನನು ವರಪುಂಡರೀಕ
ಭ್ರಾಜಿತದೊಳಡವಿಯನು ದಿಗ್ಗಜ
ರಾಜನನು ನೆಱೆ ಪೋಲ್ತುದಾ [4]ಕೊಳನ[5]ರಸ ಕೇಳೆಂದ   ೨

ಹರಿಸಮೇತದೊಳಿಂದಿರೆಯ ಕೇ
ಸರದಿ ಸಿಂಹವನಬ್ಚದಿಂದಂ
ಬರವ ಭುವನೌಘದೊಳಜಾಂಡವನನಿಮಿಷಾನ್ವಿತದಿ
ಸುರಪುರವ ಚಕ್ರದಿ ವರೂಥವ
ನುರು ಶಿಲೀಮುಖದಿಂ ಧನುರ್ಧರ
ವರರವೊಲು ನೆಱೆ ಮೆಱೆದುದಾ [ಕೊಳನ][6] ರಸ ಕೇಳೆಂದ         ೩

ಆ ನದಿಯ ತೀರದಲಿ ವಿವಿಧ ವಿ
ಧಾನದಲಿ ಯಜ್ಞವನು ವಿಪ್ರರು
ಸಾನುರಾಗದೊಳೆಸಗುತಿರಲು ಹವಿಸ್ಸನುರವಣಿಸಿ
ಶ್ವಾನನೊಂದೆಂಜಲಿಸೆ ಕೋ[7]ಪಕೃ[8] ಶಾ[9]ನು ಪು[10]ಟನೆಗೆಯಲ್ಕೆ ಡಾಣೆಯೊ
ಳಾ ನೆರೆದ ವಟುನಿಕರ ಹೇಸದೆ ಹೊಯ್ದರಾ ಶುನನ      ೪

ದುರುಳರಿಂದಡೆಗೆಡಹೆ ಭಷಕನು
ಧರಣಿಯೊಳು ಬಸವಳಿದು ತನು ಜ
ರ್ಜರಿತವಾಗಿಯೆ ತನಿಗರುಳ ನೆಱೆ ಕಾಱೆ ಕಣ್ ಮರಳೆ
ಹರಣವನು ಬಿಡುತಿರಲು ಜೀವಂ
ಧರನು ಕಂಡತಿ ದಯೆಯೊಳಕಟಾ
ಬಱಿದೆ ಕೊಂದರು ಪಾಪಿಗಳು ಹಾಯೆನುತ ಹರಿತಂದ  ೫

ಭರದಿ ಬಂದು ಕುಮಾರ ನಾನಾ
ಪರಿಪರಿಯಶೈತ್‌ಓಪಚಾರವ
ನಿರದೆ ಮಾಡಲ್ಕದಕೆ ಕಾಲಪ್ರಾಪ್ತಿಯಾಗಿರಲು
ಉರುತರದಿ ತಾ ತೊಡೆಗಳಲಿ ಕು
ಳ್ಳಿರಿಸಿಕೊಂಡು ಸುಪಂಚಮಂತ್ರವ
ನಱುಹುತಿರ್ದನು ಶುನಕ ಸುಗತಿಯನೆಯ್ದು ವಂದದಲಿ  ೬

ಅರಸ ಕೇಳಾ ಪಂಚಮಂತ್ರೋ
ತ್ಕರದ ತತ್ಫಲದಿಂದಲಾ ಕ್ಷಣ
ವರ ಶುನಕ ಚಂದ್ರಾಭಪುರದಲಿ ಮೂರ್ತಿಮತ್ತಾಗಿ
ಸುರುಚಿರದಿ ತಾ ಯಕ್ಷನಾಗವ
ತರಿಸಿ ಮುನ್ನಿನ ಭವವನೆಲ್ಲವ
ನಱಿತು ಜೀವಂಧರನೆಡೆಗೆ ಬರುತಿರ್ದನೊಲವಿನಲಿ      ೭

ಸುಲಲಿತದಿ ಬಂದಾತನಿದಿರಲಿ
ನಿಲಲು ಜೀವಂಧರನು ಶುನಕಂ
ಗೊಲಿದು ಮತ್ತೆಯು ಪಂಚಮಂತ್ರವನುಸಿರುತಿರೆ ಕಂಡು
ಎಲೆ ಪುರುಷ ನಿನ್ನಿಂದ ದುರ್ಭವ
ವಳಿದೆನಗೆ ಯಕ್ಷತ್ವವಾಯ್ತೆಂ
ದಳವಿಯಲಿ ತೆಗೆದಪ್ಪಿ ಹೊಗಳಿದನಾ ಕುಮಾರಕನ       ೮

ನಿರುಪಮಾತ್ಮನ ಪಂಚಮಂತ್ರದ
ಪರಮಫಲದಿಂದ ಮುಕ್ತಿಕಾಮಿನಿ
ನೆರೆವಳೆನಲಿಂದ್ರಾದಿ ಸಂಪತ್ಕರಗಳೆನಿತೆಂದು
ಧರಣಿಯೊಳಗಾ ಶಬವ ಬಿಸುಟೊಂ
ದಿರೆ ಕುಮಾರನ ಮೇಲೆ ಹೂಮಳೆ
ಗಱೆದನಾ ಯಕ್ಷೇಂದ್ರನಮರಾನಕದ ಘೋಷದಲಿ         ೯

ಈ ತೆಱದಿ ಜೀವಂಧರನ ಸು
ಪ್ರೀತಿಯಿಂದುಪಚರಿಸಿ ಕೇಳೆಲೆ
ಭೂತಲೇಶ್ವರ ನಿನಗೆ ಸಂಕಟ ಬಂದ ಸಮಯದಲಿ
ಆ ತತುಕ್ಷಣವೆನ್ನ ನೆನೆಯೆಂ
ದೋತು ಮಗಳೊಲಿದಪ್ಪಿ ಮುದದಿಂ
ದಾತನನು ಬೀಳ್ಕೊಂಡು ಮಗುಳೆಯ್ದಿದನು ಯಕ್ಷೇಂದ್ರ  ೧೦

ಅರಸ ಕೇಳ್ ಜಲಕೇಳಿಯಿತ್ತಲು
ಪುರದೊಳಗೆ ಗುಣಮಾಲೆ ಸುರಮಂ
ಜರಿಯರಿಬ್ಬರು ತಮ್ಮ ತಮ್ಮಯ ವಾಸಚೂರ್ಣಕ್ಕೆ
ಸರಿಯದಾವುದು ತನ್ನ ದುತ್ತಮ
ತರುಣಿ ನಿನ್ನದು ತೆಳ್ಳಿತೆಂದಿ
ಬ್ಬರು ಬಿಡದೆ ಸಂವಾದಿಸಿದರಾ [11]ಕೊಳನ[12] ತೀರದಲಿ   ೧೧

ಎರಡು ಚೂರ್ಣವನಱಿವ ಸುವಿದ
ಗ್ಧರಿಗೆ ತೋಱಿದೊಡವರು ಹೇಳಿಂ(?)
ದಱುಹಿ ತತ್ಕಾಮಿನಿ ಜಲಕ್ರೀಡೆಯನು ಸರಸಿಯಲಿ
ವಿರಚಿಸಲು ಬೇಡೆಂದು ತಾವಿ
ಬ್ಬರು [13]ಬಿಡದೆ[14]ಶಪಥಗಳ ಮಾಡಿ ಸಖಿಯರ
ಕರದೊಳಾ ಚೂರ್ಣವನು ಕೊಟ್ಟಟ್ಟಿದರು ತವಕದಲಿ      ೧೨

ತರುಣಿಯರು ತಚ್ಚೂರ್ಣಗಳ ಜಾ
ಣರಿಗೆ ತೊಱಿದೊಡವರು ಸುರಮಂ
ಜರಿಯ ಚೂರ್ಣವ ಹಳಿಯೆ ಜೀವಂಧರಗೆ ತೋಱಿಸಲು
ಎರಡು ಚೂರ್ಣವು ಸಮನ ಕಾಲದೆ
ವಿರಚಿಸಿದುದಿದು ಕಾಲದಲಿ ವಿ
ಸ್ತರಿಸಿತದು ಕಾರಣವಧಿಕವಿದು ಎಂದ ನೇಮಿಸಿದ         ೧೩

ಚದುರ ಗುಣಮಾಲೆಯ ಸು ಚೂರ್ಣವ
ನಧಿಕವೆನೆ ಮೊದಲೆಮ್ಮೊಡನೆ ಹೇ
ಳಿದರೊಬ್ಬರೆ ನೀವೆನುತ ಕಾಂತೆಯರು ನಗುತಿರಲು
ಇದಱ ಘನತೆಯ ನೋಡೆನುತ ಗಗ
ನದಲಿ ಚೂರ್ಣವ ಸೂಸಲಳಿ ಮ
ಧ್ಯದಲಿ ತತ್ಸೌರಭಕೆ ಕವಿದುಱೆ ಬಿರ್ದುವೊಗ್ಗಿನಲಿ          ೧೪

ಬಳಿಕ ಸುರಮಂಜರಿಯ ಚೂರ್ಣವ
ಕೆಲಕೆ ಸೂಸಿದೊಡಲ್ಲಿಗೊಂದಳಿ
ನಿಲುಕದಿರೆ ಕಂಡಬಲೆಯರು ಕುವರನ ಸುಜಾಣುಮೆಗೆ
ತಲೆಯ ತೂಗಿಯೆ ಮಗುಳ್ದು ಬಂದಾ
ಲಲನೆಯರಿಗಾ ತೆಱನನೆಲ್ಲವ
ತಿಳುಹೆ ಸುರಮಂಜರಿ ವಿಭೇದದೊಳಿರ್ದಳಾತ್ಮದಲಿ     ೧೫

ವರ ಕಲಾವಿದನಪ್ಪ ಜೀವಂ
ಧರನೆನಗೆ ಪತಿಯಲ್ಲದವನಿಯ
ಪುರುಷರೊಡಹುಟ್ಟಿದರೆನುತ ಮಗುೞ್ದಾಲಯಕೆ ಗಮಿಸೆ
ಭರದೊಳಾ ಗುಣಮಾಲೆ ಸುರಮಂ
ಜರಿಯು ನದಿಯಲಿ ಮಿಂದು [ತಾ] ಹಿಂ
ದಿರುಗಿ ನಡೆದಾನೊಲ್ಲೆನೆಂದೆಯ್ದಿ[15]ದಳು ದುಗುಡದಲಿ    ೧೬

ಲಲನೆ ತಾ ನುಡಿದುತ್ತರಕೆ ನದಿ
ಯೊಳು ಜಲವ ಕ್ರೀಡಿಸದೆ ಪೋಗಲು
ಕೆಳದಿ ಮೀಯದ ಹೋದಳೆನಗೇಕೆಂದು ಗುಣಮಾಲೆ
ಅೞಲುತೞುತಾ ಮಗುೞ್ದು ಬರಲಾ
ಹೊೞಲೊಳಗೆ ಮದಸೊ[16]ಕ್ಕುವಟ್ಟಿಹ[17] ಲುಳಿತ ಗಜ ಪುರಜನವ ಸೀಮಿತ ಬಂದುದೊಗ್ಗಿನಲಿ    ೧೭

ಅರಸ ಕೇಳಾ ಮತ್ತ ಗಜವತಿ
ಭರದಿ ಬರೆ ಗುಣಮಾಲೆಯನು ಬಿಸು
ಟಿರದೆ ಪರಿಚಾರಕರು ದೆಸೆಗೆಟ್ಟೋಡೆ ತದ್ಧಾತ್ರ
ಭರದಿ ನಾ ಮಡಿದಂತ್ಯದಲಿ ಸರ
ಸಿರುಹಲೋಚನೆ ಸಾಯಲೆಂದಾ
ತರುಣಿಯನು ಹಿಂದಿಕ್ಕಿ ಕರಿಗಿದಿರಾದಳಾ ಕಾಂತೆ       ೧೮

ಕರಿ ಮಸಗಿ ಗುಣಮಾಲೆಯನು ಕಂ
ಡುರವಣಿಸೆ ದೂರದೊಳು ಜೀವಂ
ಧರ ನಿರೀಕ್ಷಿಸಿ ಹೆಂಗೊಲೆಯ ಕಂಡುೞಿ[18]ವುದ[19]ಲ್ಲೆಂದು
ಭರದೊಳಗೆ ಸುಂಡಿಲನು ಸೆಳೆದೊಡ
ವೆರಸಿ ಕುಂಡಲದಿಂ ಕಪೋಲಾಂ
ತರವನಿಡೆ ಮದವುಡುಗಿ ತದ್ಗಜ ಮುಗುೞ್ದುದರಮನೆಗೆ  ೧೯

ಅರಮನೆಗೆ ಗಜ ಮಗುೞೆ ತನ್ನಯ
ಹರಣವನು ರಕ್ಷಿಸಿದ ಜೀವಂ
ಧರನ ಕಂಡಾತನ ಲಸದ್ರೂಪಾನುಭಾವನೆಗೆ
ಮರುಳಗೊಂಡೀ ಪುರುಷರತ್ನವ
ವರಿಸಬೀಕಿವನಾರೆನುತ ಸು
ಸ್ಥಿರದೊಳೆವೆಯಿಕ್ಕದೆ ನಿರೀಕ್ಷಿಸಿದಳು ಕುಮಾರಕನ      ೨೦


[1] ಪುರ (ಜ, ಮ)

[2] ಪುರ (ಜ, ಮ)

[3] ದದಿ (ಮ)

[4] ನದಿಯ (ಪ)

[5] ನದಿಯ (ಪ)

[6] ನದಿಯ (ಜ, ಮ, ಪ)

[7] x (ಜ, ಮ)

[8] x (ಜ, ಮ)

[9] ಪಾ (ಜ, ಮ)

[10] ಘೆ (ಜ, ಮ)

[11] ನದಿಯ (ಪ)

[12] ನದಿಯ (ಪ)

[13] x (ಜ, ಮ)

[14] x (ಜ, ಮ)

[15] ಱಗಿ (ಮ)

[16] ಕ್ಕಿಬಿಟ್ಟಿದ (ಜ, ಮ)

[17] ಕ್ಕಿಬಿಟ್ಟಿದ (ಜ, ಮ)

[18] ದುದಿ (ಜ, ಮ)

[19] ದುದಿ (ಜ, ಮ)