ಧರಣಿಪಾಲಕನಿಂತು ಸಾಱಿಸು
ತಿರಲು ನಾನಾ ದೇಶದೊಳಗು
ಳ್ಳುರಗಶಾಸ್ತ್ರಪ್ರೌಢರುಗಳೆಯ್ತಂದು ತಾವಱಿದ
ಪರಿಯೊಳಾಕೆಯ ನೋಡಿ ಸತಿಗಸು
ವೆರಸದಿರೆ ಬೇಸತ್ತು ಹೋಗು
ತ್ತಿರಲು ಜೀವಂಧರನು ಕಂಡಿಂತೆಂದನಾತ್ಮದಲಿ        ೨೧

ಅಂದೆನಗೆ ಯಕ್ಷಾಧಿಪತಿ ಸಾ
ನಂದದಿಂದೆ ವಿಷಾಪಹಾರದ
ಸಂದ ಮಂತ್ರವ ತನಗನುಗ್ರಹಗೆಯ್ದನದು ತಾನು
ಇಂದು ಫಲಿಸಿದುದೆನಗೆನುತ ನಲ
ವಿಂದಲಾ ಧನಪತಿಯ ಗೇಹವ
ನೊಂದಿದನು ಸುಕುಮಾರನಾ ಕಾಮಿನಿಯ ಪುಣ್ಯದಲಿ  ೨೨

ಗರುವ ಗತಿಯಿಂದಾ ಕುಮಾರಕ
ಬರಲು ಜೀವಂಧರನ ಕಂಡಾ
ನೆರೆದ ಜನವೀ ಪುರುಷ ಭದ್ರಾಕಾರನಂಗನೆಯ
ಗರು೨ವ ಮನ

[1]ದಲಿ ಜೀವವನು ಪಡೆ
ದರೆ ಸುವರ್ಣಕೆ ದಿವ್ಯಪರಿಮಳ
ವೆರಸಿದಂತಹುದೆನುತ ಬಿಡದೀಕ್ಷಿಸಿದರೞ್ತಿ[2]ಯಲಿ        ೨೩

ಬೞಿಕ ಜೀವಕನಾ ಕುಮಾರಿಯ
ಬೞಿಗೆ ಬಂದಾ ಯಕ್ಷಪಾಲಕ
ತಿ[3]ಳಿಹಿತ[4]ಭಿಮಂತ್ರಿಸಲು ಕಗ್ಗತ್ತಲೆಯೊಳಗೆ ದಿನಪ
ಸುೞಿವವೊಲು ದುಷ್ಟೋರಗದ ವಿಷ
ತೊಲಗಲಾ ಕ್ಷಣ ನಿದ್ದೆದಿಳಿವಂ
ತಲಘಕುಚೆ ತಾನೆದ್ದು ಕಣ್ದೆರೆದಳು ಸರಾಗದಲಿ ೨೪

ನಿರುತ ನಿ[5]ನ್ನಯ ಹೆಸರು ಜೀವಂ
ಧರನು [6]ಗತಜೀವವನು[7] ಪಡೆದುದು
ಧರೆಗಿದೇನಚ್ಚರಿಯವನಿಪನ ರೂಪನಣಕಿಸುವ
ಪರಿಯಲಾತನ ರೂಪ ನಸುನಗೆ
ವೆರಸಿ ಸತಿ ನೋಡುತ್ತ ವಿರಹದೊ
ಳಿರಲು ತತ್ಪುರಜನರು ಗುಡಿಗಟ್ಟಿದರು ಹರ್ಷದಲಿ       ೨೫

ತೊಲಗಿದನು ಬಂದಂತೆ ಭೂಮೀ
ವಲಯಪತಿ ಹರ್ಷಾಂಬುನಿಧಿಯೊಳು
ಮುೞುಗಿ ಜೀವಂಧರನ ಕಂಡನುನಯದಿ ಬಿಗಿಯಪ್ಪಿ
ಬೞಿಕ ಕುಮರನ ತೆಱನನೆಲ್ಲವ
ತಿಳಿದು ಬೀೞುತ[8]ಲಂಚೆ[9]ವಾಸಿನೊ
ಳೊಱಗಿ ಬಿದ್ದಂತಾದಳಂಗನೆಯೆಂದು ರಾಗಿಸಿದ        ೨೬

ಎಂದನೇಕ ಸ್ತುತಿಸಹಸ್ರಗ
ಳಿಂದಲಾ ಧನಪಾಲ ನೃಪ ಜೀ
ವಂಧರನ ಕೊಂಡಾಡಿ ಸುತೆಸಹಿತರ್ಧ ರಾಜ್ಯವನು
ಒಂದಿ ಧಾರೆಯನೆಱೆದು ಕುಡೆ ಸಂ
ಕ್ರಂದ[10]ನಿಭ[11]ನಾ ಪದ್ಮೆಯೊಳು ಸುಖ
ದಿಂದೆ ವಿಭವದೊಳಿರ್ದನಾ ಚಂದ್ರಾಭಪುರದೊಳಗೆ     ೨೭

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲ ಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ಪದ್ಮಾಸಂಗವವನೀಪಾಲ ಕೇಳೆಂದ  ೨೮


[1] ಡಮತ (ಮ)

[2] ರ್ಥಿ (ಜ, ಮ)

[3] ಳಿಹಿದ (ಜ), ಳುಹಿದ (ಮ)

[4] ಳಿಹಿದ (ಜ), ಳುಹಿದ (ಮ)

[5] ತ (ಜ, ಮ)

[6] x (ಜ, ಮ)

[7] x (ಜ, ಮ)

[8] ಹಂಸ (ಜ.)

[9] ಹಂಸ (ಜ.)

[10] ಸಮ (ಮ)

[11] ಸಮ (ಮ)