ವದನ ಶ್ಲೇಷ್ಮಾಗಾರ ಕುಚ ಮಾಂ
ಸದ ಗೞಕೆ ಕಣ್ ಮಲದ ನೆಲೆಯಧ
ರದನವಸ್ಥಿ ನಿ
ರದನಿಕುಂಭ ಸರೋಜ ಮಣಿ ಪುಳಿ
ನದವೊಲಿದೆಯೆಂದೆಂಬ ಕವಿಗಳ
ಚದುರ ನುಡಿಯಬಲೆಯರಿಗೆಱಗಿದೊಡಿಲ್ಲ ಗತಿಯೆಂದ ೪೧
ಹರನು ನಂಬದೆ ತನು[3]ವೊಳೊ[4]ಬ್ಬಳ
ಶಿರದೊಳೊಬ್ಬಳನಿಟ್ಟನಾ ಮುರ
ಹರ[5]ನುರಸ್ಥಳದಲ್ಲಿ ತಾಳಿದನಜನು ವದನದಲಿ
ಧರಿಸಿದನು ಕಾಮಿನಿಯನೆನೆ ಹುಲು
ನರರು ಸತಿಯರ ಚಿತ್ತವೃತ್ತಿಯ
ನಱಿವರೇ ನೀನೊಲ್ಲದಂಗನೆಗೆಳಸಲೇಕೆಂದ ೪೨
ಪರಿಕಿಸಲು ಕಾಮಾತುರರು [6]ಕಾ
ಣರು[7] ಕುಲಾಚಾರವನು ಲಜ್ಜೆಯ
ತೊಱೆವರೆಂದೆನೆ ಭೂಪನೀ ಪರಿ ತಿಳುಹೆ ಖೇಚರನು
ಮರಳಿ ಕಾಂತೆಯನೊಂದಿಸೆನೆ ಮ
ತ್ಸರವ ಶೌಚಕ ಪಾಪವಪ್ಪಬ
ಲೆಯರಿಗೆಱಗದಿರೆಂದು ಬೋಧಿಸಿದನು ಕುಮಾರಕನು ೪೩
ಇಂತು ವಿದ್ಯಾಧರನ ತಿಳುಹಿ ವ
ನಾಂತರವ ಕಳೆದರಸ ನಡೆತರೆ
ಮುಂತೆಸೆವ ಹೇಮಾಭಪುರಿಯುಂಟಾ ಪುರವನಾಳ್ವ
ಕಂತುನಿಭ ದೃಢಮಿತ್ರ ಭೂಮೀ
ಕಾಂತನಾತ್ಮಜರುಪವನದೊಳ
ತ್ಯಂತ ಲೀಲೆಯಿನಾಡೆ ನೃಪ ಕಂಡಲ್ಲಿಗೆಯ್ತಂದ ೪೪
ನೆರೆದ ಸುಕುಮಾರಕರು ಮಾವಿನ
ಮರದೊಳೊಂದುತ್ತಮದ ಫಲವಂ
ಬರವ ಚುಂಬಿಸಲದನು ಕೆಡಹುವೆನೆಂದು ಕೋಲ್ಗೊಂಡು
ಸರಳಲೆಸೆಯಲು ತಪ್ಪಿ ಹಣ್ಣಿಳೆ
ಗುರುೞದಿರೆ ಬೇಸತ್ತು ಬೆಂ[8]ಬಿಡ[9]
ದಿರಲು ಜೀವಂಧರನು ಕೆಡಹಿದನೆಚ್ಚು ತತ್ಫಲವ ೪೫
ಖ್ಯಾತ ಜೀವಂಧರನ ಬಲುವಿ
ದ್ಯಾತಿಶಯ ರೂ[10]ಪಕೆ[11] ಕುಮಾರ
ವ್ರಾತವಚ್ಚರಿವಟ್ಟು ಪುರಿಗಾತನನು ಕೊಂಡುಯ್ದು
ತಾತಗಱುಹಿದೊಡಾ ಕುಮಾರ[12]ಕ
ಗೋತು[13] ತತ್ಸುತೆ ಕನಕಮಾಲೆಯ
ಭೂತಲೇಶ್ವರಗಿತ್ತು ಧಾರೆಯನೆಱೆದನೊಲವಿನಲಿ ೪೬
ಅರಸ ಕೇಳ್ ದೃಢಮಿತ್ರ ಭೂಮೀ
ಶ್ವರನು ತನ್ನ ಕುಮಾರಿಯನು ತಾ
ನುರುತರದೊಳೀಯಲ್ಕೆ ತತ್ಕಾಮಿನಿಯನನುವರಿಸಿ
ಪುರದೊಳಿಹ ನೂರ್ವರು ಕುಮಾರರು
ಬೆರಸಿ [14]ಹರ್ಷದೊಳಿಂತು[15] ಜೀವಂ
ಧರನು ಸುಖದಿಂದಿರ್ದನಾ ಹೇಮಾಭ[16]ನಗರಿಯಲಿ[17] ೪೭
ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲ ಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದು ಕನಕಮಾಲೆಯ ಸುವಿವಾಹವರಸ ಕೇಳೆಂದ ೪೮
Leave A Comment