ವಿದ್ಯಾದಿಂ
ಹೊದ್ದಿ ಜನನಿಯ ತೋಱೆ ಮುದದೊಳು
ಸಾಧ್ಯ ಜೀವಂಧರನು ಮಗುೞ್ದನು ರಾಜಪುರವರ
ಧರಣಿಪತಿ ಕೇಳಿತ್ತ ಜೀವಂ
ಧರನ ಕೊಲಿಸಿದನಕಟ ಬಱಿದೇ
ದುರುಳ ಕಾಷ್ಠಾಂಗಾರನೆಂದಾ ರಾಜಪುರಿಯೊಳಗೆ
ಇರುಳು ಹಗಲನವರತಮೈ[2]ನೂ
ರ್ವರು ಸುಖರು ಗುಣಮಾಲೆ ಸಹಿತೆದೆ
ಜರಿದು ಗಂಧೋತ್ಕಟನು ಚಿಂತಿಸುತಿರ್ದನಳವೞಿದು ೧
ವೀರ ವಿದ್ಯಾಧರ ನೃಪನ ಸುಕು
ಮಾರಿ ವರಗಂಧರ್ವದತ್ತೆಗೆ
ಚಾರು ವಿದ್ಯಾವಳಿಗಳಾ ಜೀವಂಧರನ ತೆಱನ
ಆರಯಿದು ಬಂದಱುಹುತಿರೆ ನಲ
ವೇಱಿ ವನಜಲಕೇಳಿಗಳಲಿ ವಿ
ಹಾರಿಸುತ್ತಿರ್ದಳು ಲಸಚ್ಭೃಂಗಾರ ಶೋಭೆಯಲಿ ೨
ತರುಣಿ ತಾನಾ[3]ನಂದಲೀಲೆಯೊ
ಳಿರಲು ಗಂಧೋತ್ಕಟನ ಮಗ ಸ[4]
ಚ್ಚರಿತನಹನಂದಾಢ್ಯನತಿ ವಿಸ್ಮಯದೊಳತ್ತಿಗೆಯ
ಹೊರೆಗೆ ಬಂದೆಲೆ ರಮಣಿ ನಿನ್ನಯ
ಪುರುಷನಪಗತನಾದ ಬೞಿಕೀ
ಪರಿಯ ಮೆಱೆದಿಹುದುಚಿತವೇ ಹೇೞೆಂದು ಧಟ್ಟಿಸಿದ ೩
ವಾರಿಜಾನನೆ ಕೇಳು ಪತಿ ಬೇ
ರೂರಿಗೆಯ್ದಲು ಮಲಿನವಂಬರ
ಚಾರು ಭೂಷಣ ದಂತ ಕಾಷ್ಠಾಂಜನ ಸುತಾಂಬೂಲ
ಸಾರ ತೈಲಾಮೋದ ಮಾಲ್ಯವ
ನಾ ರಮಣಿ ಬಿಡಬೇಕು ಗತಭ
ರ್ತಾರೆ[5] ನೀನೀ ಪರಿಯ ಮೆಱೆದಿಹುದುಚಿತವಲ್ಲೆಂದ ೪
ಬಾಲಿಕಾಮಣಿಯೆನಿಸುವೀ ಗುಣ
ಮಾಲೆ ಸರ್ವವನುೞಿದು ಬಾಡಿದ
ಮಾಲೆಯಂತೈದಾಳೆ ನೀನಾ ವಿಧದೊಳಿರ್ಪುದೆನೆ
ಕೇಳಿಯಾ ಗಂಧರ್ವದತ್ತೆ ವಿ
ಶಾಳಮತಿ ನಂದಾಢ್ಯನೊಳು ತಾ
ಮೇಳವಾಡುತ ನುಡಿದ[6]ಳವನೊ[7]ಳು ಸಾನುರಾಗದಲಿ ೫
ಎನ್ನ ಪತಿ ಸಜ್ಜೀವದಲಿ ಛ
ಪ್ಪನ್ನ ದೇಶವ ಚರಿಸಿ ಕೆಲವರು
ಕನ್ನೆಯರ ವೈವಾಹವಾಗಿಯೆ ಬಹಳ ಸೌಖ್ಯದಲಿ[8]ಸ್ವರ್ಣಕಾಪುರವರದೊಳಿ[9]ಹನು
ತ್ಪನ್ನಮತಿ ಕೇಳೆನಲು ಹರುಷದೊ
ಳುನ್ನತಸ್ತನೆ [10]ನೀನು[11] ತನಗಿದ ತಿಳುಹಬೇಕೆಂದ ೬
ಶುದ್ಧ ತತ್ತ್ವಾಕಾರವಾಗಿಹ
ವಿದ್ಯಗಳು ತಾವೞಿದು ಜೀವಕ
ನಿದ್ದ ತೆಱನನು ನಿಚ್ಚ ಬಂದೆನಗಱುತಿಹುವೆನಲು
ಮುಗ್ಧೆ ತಿಳುಹಲು ಹರ್ಷವಾರ್ಧಿಯೊ
ಳದ್ದು ನೀನೆಮ್ಮಣ್ಣದೇವನ
ಹೊದ್ದಿಸೆನ್ನ [12]ನೆನುತ್ತಲಾನಂದಾಢ್ಯ ಕೈಮುಗಿದ ೭
ಎನಲು ನಂದಾಢ್ಯಕನ ಕಂಗಳ
ವನಿತೆ ಕೈಯಲಿ ಮುಚ್ಚಿ ವಿದ್ಯವ
ನೆನಯಲವು ಬಂದಾತನನು ಹೇಮಾಭಪುರಿಗುಯ್ದು
ವಿನುತ ಜೀವಂಧರನ ಕಟ್ಟಿದಿ
ರಿನಲಿ ತಂದಿರಿಸಲ್ಕೆ ಬೆಱಗಿನೊ
ಳನಘನಾತನನಪ್ಪಿ [13]ಮುದದಿಂ[14]ದಾತನಿಂತೆಂದ ೮
ಇತ್ತಲಾನಿಹೆನೆಂದಡೊಂದಱಿ
ದುತ್ತಮನೆ ನೀನೆಂತು ಬಂದೆ ಸು
ಮಿತ್ರತತಿ ಗಂಧೋತ್ಕಟನು ಗುಣಮಾಲೆ ಗಂಧರ್ವ
ದತ್ತೆಯರ[15] ಸುಕ್ಷೇಮ ಕುಶಲದ
ವಾರ್ತೆಯಱುಹೆನೆ ಬೇಱೆಬೇಱೆ ಪ
ವಿತ್ರ ಜೀವಂಧರಗೆ ನಂದಾಢ್ಯನು ನಿರೂಪಿಸಿದ ೯
ಮರಳಿ ಮರಳಿದು ಸಖರ ಕುಶಲವ
ನಿರ[16]ದೆ ಕೇಳಿದು ನಲಿದು ಯಕ್ಷೇ
ಶ್ವರನ ದೆಸೆಯಲಿ ತಾನುೞಿದ ವಾರ್ತೆಯನು ಕನ್ನೆಯರ
ವರಿಸಿದುದನು ಸಮಸ್ತ ದೇಶಾ
ಚರಣೆಯಱುಹಿ ಸುಮಿತ್ರಸಹಿತುರು
ತರದೊಳಿರ್ದನು ಜೀವಕನು ಹೇಮಾಭ[17]ನಗರಿಯಲಿ[18] ೧೦
ಅರಸ[19] ಕೇಳ್ ಬೞಿಕಿತ್ತಲೈನೂ
ರ್ವರು ಸಖರು ಗಂಧರ್ವದತ್ತೆಯ
ಹೊರಗೆ ಬಂದಡಿಗೆಱಗಿ ಜೀವಂಧರನ ಬಱಿಕೆಮ್ಮ
ಭರದಿ ಕಳುಹುವುದೆನಲು ದೇಶಾಂ
ತರದ ಭೂಪರ ಬಾಧೆ ಘನವಿನಿ
ಬರನು ವಿದ್ಯೆಗಳುಯ್ವುದಘಟಿತವೆಂದಳಿಂದುಮಖಿ ೧೧
ವರನ[20]ವವ್ಯವಹಾರಿಗಳವೊಲು
ಭರದಿ ಗಮಿಸುವುದೆಂದು ಜೀವಂ
ಧರ ಕುಮರಕನಿಪ್ಪೆಡೆಯ ತಿಳುಹಲ್ಕೆ ಸತಿ ಪೇೞ್ದ
ಪರಿಯೊಳೆಯ್ದಿಯನೇಕ ದೇಶಾಂ
ತರವನೆಲ್ಲವ ಕಳೆದು ಬಂದಾ
ಪುರದ ತುಱುಗಳ ತಡೆದರಂದೈನೂರ್ವರೊಗ್ಗಿನಲಿ ೧೨
ಆ ಕುಮಾರಕರಾ ಪುರದ ಗೋ
ನೀಕವನು ತಱುಬಲ್ಕೆ ಬಹಳ
ವ್ಯಾಕುಲದಿ ಗೋ[21]ಪರು[22]ಗಳೆಯ್ತಂದಾ ನೃಪಂಗಱುಹೆ
ಆಕೆವಾಳರ ಕರೆಸಿ ಪುಣ್ಯ
ಶ್ಲೋಕ ಜೀವಕಸಹಿತ ಸೇನಾ
ನೀಕ ಸಹಿತನುವಾಗಿ ನಿಂದರು ಪುರದ ಬಾಹೆಯಲಿ ೧೩
ಬೞಿಕ ಜೀವಂಧರನು ತಾನೀ
ಬಲವ ನೆಱೆ ತಡೆಗಡಿದು ಗೋಸಂ
ಕುಲವ ತಿರುಹುವೆನೆಂದು ಮುಳಿದೀಕ್ಷಿಸಿ ಕುಮಾರಕರ[23]
ಸುಲಲಿತಾಶ್ವಧ್ವಜದ ಚಿಹ್ನಂ
ಗಳನು ಕಂಡಿವರೆ[24]ನ್ನ ಸಖರೆಂ[25]
ದೊಲವಿನಲಿ ನಸುನಗುತಲಾ ದೃಢಮಿತ್ರಗಿಂ[26]ತೆಂದ ೧೪
ಅರಸ ಕೇಳಿವರೆನ್ನ ಸಖರೀ
ಪುರಿಗೆ ತನ್ನ ನಿರೀಕ್ಷಿಸಲು ಬಂ
ದರು ಭಟಾವಳಿ ಮಾಡದಿರಿ ಕೈತಪ್ಪನೆಂದಱುಹೆ
ಬರದಿ ನೃಪಸಹಿತಿದಿರು ಬಂದನಿ
ಬರನು ತೆಗತೆಗೆದಪ್ಪಿ ಜೀವಂ
ಧರನು ಕುಶಲವ ಕೇಳಿ ಪುರಿಗುಯ್ದನು ವಿಳಾಸದಲಿ ೧೫
ಅರಸನಾ ಸತ್ಯಂಧರನು ಮ
ತ್ಪರುಷ ಕಾಷ್ಠಾಂಗಾರನಿಂ ಸುರ
ಪುರಕೆ [27]ಸಾರ್ದ[28]ನು ಜೀವಕನ ವಿಪಿನದೊಳು [29]ನಾ ಪಡೆಯೆ[30]
ನರನದೊರ್ವನು ಕೊಂಡು ಹೋದನು
ತರುಣ ತಾನೇನಾದನೋ ನೀವ್
ಬರಲು ಬಂದಂತಾಯ್ತು ಸುತನೆಂ[31]ದೊರ[32]ಲಿದಳು ರಮಣಿ ೧೬
* * *
Leave A Comment