ರಾಜಪುರಿಯೊಳು ವಿಮಲೆಯನು ವಿ
ಭ್ರಾಜಿಸುವ ಸುರಮಂಜರಿಯ ಪಡೆ
ದಾಜಿರಂಗ ಜಯಾಂಕ ಜೀವಂಧರನು ರಂಜಿಸಿದ

ಅರಸ ಕೇಳ್ ಜೀವಂಧರನು ಪರ
ರಱಿಯದಂತಾ ರಾಜಪುರುದುರು
ತರದ ವನದಿಂ

[1]ಹೊಱಟು[2] ಗಂಧೋತ್ಕಟಗೆ ಬಂದೆಱಗೆ
ಹರಣ ಬಂದಂತಾ ಕುಮಾರನ
ಭರದಿ ತೆಗೆತೆಗೆದಪ್ಪಿ ವೃತ್ತಾಂ
ತರವ ಬೆಸಗೊಳುತಿರ್ದನತ್ಯಾನಂದಲೀಲೆಯಲಿ        ೧

ವನರುಹವನಾ ದಿನಪ ಸಾರ್ವಾಂ[3] ತನಘ ಜೀವಂಧರನು ಬಂದಾ
ವಿನುತ ವಾರ್ತೆಯ ಕೇಳಿ ಪರಮಾನಂದಲೀಲೆಯಲಿ
ಮನವೊಸೆದು ಗುಣಮಾಲೆ [4]ಗುಣ[5]ಮಂ
ಡನೆಯೆನಿಪ ಗಂಧರ್ವದತ್ತೆಯ
ರನಿಲ ವೇಗದಿ ಬಂದು ಕಂಡುಬ್ಬಿದರು ಹರ್ಷದಲಿ        ೨

ಬೞಿಕ ಗಂಧೋತ್ಕಟಗೆ ಮಿತ್ರಾ
ವಳಿ ಪದಾಂಬುಜಕೆಱಗಲಾ ಕೋ
ಮಲರನೊಲವಿಂದಪ್ಪಿ ಹರ್ಷಾಬ್ಧಿಯೊಳು ಮುೞುಗಾಡೆ
ನಲವಿನಲಿ ಜೀವಂಧರನು ತಾ
ಹೞುವಕೆಯ್ದಿದ ವಿವಿಧವಾರ್ತೆಯ
ತಿಳುಹುತಿರ್ದನು ತನ್ನ ಸತಿಯರಿಗರಸ ಕೇಳೆಂದ       ೩

ಚಾರು ಯಕ್ಷಾಧೀಶ ನೆಗೞ್ದುಪ
ಕಾರವನು ಕೌತುಕವ ಭೂಸಂ
ಚಾರತೆಯನಿನಿತುವನು ವಿಸ್ತರಿಸಲ್ಕೆ ಮನೆಯೆಲ್ಲಾ
ಹಾರಯಿಸಿ ತದ್ರಾಜಕಾರ್ಯವ
ಭೂರಮಣ ನೆನೆಯುತ್ತ ಕಾಷ್ಕಾಂ
ಗಾರನಱಿಯದ ತೆಱದಿ ವಿಹರಿಸುತಿರ್ದನೊಲವಿನಲಿ    ೪

ಭೂರಮನನಾ ನಗರದೊಳಗೆ ವಿ
ಹಾರಿಸುತ್ತಿರಲಿಲ್ಲ ವೈಶ್ಯಾ
ಧಾರ ಸಾಗರದತ್ತನಾತ್ಮಜೆ ವಿಮಲೆಯೆಂಬವಳು
ಮಾರನಿಷ್ಠಾದೇವಿಯಂದದಿ
ಚಾರು ಹರ್ಮ್ಯಾಗ್ರದಲಿ ಕುಚ ಮುಡಿ
ಹಾರವಲುಗಲು ಸೆಂ[6]ಡನಾಡುತ್ತಿರ್ದೞ್ತಿಯಲಿ  ೫

ಕುರುಳು ಭಾಗದೊಳಾಡೆ ಕರ್ಣಾ
ಭರಣ ಕದಪಿನೊಳಾಡೆ ಕಬರೀ
ಭರವು ಬೆನ್ನೊಳಗಾಡೆ ಹಾರ ಕುಚಾಗ್ರದೊ[7]ಳಗಾ[8]ಡೆ
ಗುರುಜಘನವಲುಗಾಡೆ ಸೆಳೆನಡು[9]ಭರದಿ ಬಳುಕಲು[10] [11]ಸೆಂಡನಾಡು
ತ್ತಿರೆ ಕರಗಳಿಂ[12] [13]ಸೆಂಡುರುಳಿ ಬಿರ್ದುದು ಧ[14]ರಿತ್ರಿಯಲಿ          ೬

ಧರೆಯೊಳುರುಳಿದ ಸೆಂ[15]ಡ ಜೀವಂ
ಧರನು ಕಂಡೆಲ್ಲಿಯದಿದೆಂದಂ
ಬರವನೀಕ್ಷಿಸಲಾ ಕುಮಾರಿಯ ದೃಷ್ಟಿ ತದ್ದೃಷ್ಟಿ
ಎರಡುವೊಂದಾಗಲ್ಕೆ ಸತಿ ಭೂ
ವರನ ರೂಪಿಗೆ ಮರುಳುಗೊಂಡಾ
ವಿರಹದಲಿ ಮೈಮಱೆದಳನುಪಮ ಚಿತ್ರದಂದದಲಿ       ೭

ಇಂದುಮುಖಿಯಾ ವಿರಹದಲಿ ಕರಿ
ಗಂದಿರಲು [16]ವಿರಹವನು[17] ಪಿತಗರ
ವಿಂದನೇತ್ರೆಯರಱುಹೆ ಗಂಧೋತ್ಕಟನ ಕರೆದೆಂದ
ನಂದನೆಯ ಜೀವಂಧರಗೆ ಸಾ
ನಂದದಿಂದಾನೀವೆನೆನೆ ಲೇ
ಸೆಂದು ಮದುವೆಯ ಮಾಡಿದನು ಸುತಗಧಿಕ ವಿಭವದಲಿ         ೮

ವಿಮಳಮತಿ ಜೀವಂಧರನು ನವ
ವಿಮಲೆಯನು ವೈವಾಹವಾಗಿಯೆ
ಸಮು[18]ದಿತಾ[19]ನಂದದಲಿ ತದ್ಗುಣಮಾಲೆ ಮುಂತಾದ
ರಮಣಿಯರ ರಮಿಸುತ್ತ ಜನನಿಯ
ಮಮತೆಯನು ನೆನೆಯುತ್ತ ರಾಜ್ಯಾ
ಗಮನವನು[20] ಚಿಂತಿಸಿ[21] ಪುರಾಂತದೊಳಿರ್ದನೊಲವಿನಲಿ       ೯

ಒಂದು ದಿನ ಮಿತ್ರಾಳಿಸಹ[22] ತಾ
ನೊಂ[23]ದಿ ಜೀವಕನಾ ಪುರಾಂತದ
ನಂದನದೊಳಭಿಚರಿಸಿ ನಗುತೆನ್ನಂದವನು ಕಂಡು
ಹೊಂದಿದಳು ಸತಿ ವಿಮಳೆ ಮಿಕ್ಕಿನ
ಸೌಂದರಿಯರೆನಗೆಱಗದಿಪ್ಪರೆ
ಎಂದೊಡಾತಂಗಣಕದಲಿ ಸಖನೋರ್ವನಿಂತೆಂದ      ೧೦

ಮರುಳು ಜೀವಂಧರನೆ ಬಡ ಬೇ
ಹರಿಯ ಸುತೆ ನಿನಗೊಲಿದಳೆಂದತಿ
ಬಱಿದೆ ಬೆಱೆತಿಹೆ ನಿನ್ನ ರೂಪ[24]ನು ಕಂಡ ಕಾಂತೆಯರು
ವರಿಸಿದಪರೆಂದೆಂಬೆ ಸುರಮಂ
ಜರಿ ನಿನಗೆ ಮೋಹಿಸಿದೊಡಿಳೆಯೊಳು
ಸರಿಯದಾರೆಂ[25]ದಣ[26]ಕದಲಿ ನುಡಿದನು ಕುಮಾ[27]ರಕ[28]ಗೆ         ೧೧

ಎನಲಿದೆನಿತೆನಲಾ ಸರೋಜಾ
ನನೆಯನಲ್ಲಿಗೆ ಬರಿಸುವೆನು ನೋ
ಡೆನುತ ಮಿತ್ರರ ಕಾಮದೇವನ ಗುಡಿಯೊಳಗೆ ನಿಲಿಸಿ
ಅನಿಲ ವೇಗದಿನೆಯ್ದೆ ಬಂದೊಲ
ವಿನಲಿ ನಗರವನೆಯ್ದಿ ತನ್ನಯ
ಮನದಿ ಜೀವಕ ನೆನೆಯುತಿರ್ದನು ಸತಿಯ ದರ್ಶನವ   ೧೨

ಪುರುಷಮಾತ್ರವನೀ ಸತಿಯ ಮಂ
ದಿರವ ಹುಗಬಿಡರೆನ್ನನೆಂದಾ
ಚರರಱಿದು ಹುಗಲೀಸದಿರಲಿನ್ನೆಂತು ನಾ[29]ನಾವ
ಪರಿಯೊಳೆಯ್ದುವೆನೆಂದು ಯಕ್ಷೇ
ಶ್ವರನ ನೆನೆದತಿ ವೃದ್ಧರೂಪವ[30] ಧರಿಸಿ ಸುರಮಂಜರಿಯ ಮನೆಗೆ ಕುಮಾರ ಬರುತಿರ್ದೆ ೧೩

ನರೆದಲೆಯ ನೆರೆ ಬಾಗಿದೊಡಲಿನ
ಜರಿವ ಕರ್ಣವ ಕಂಪಿಸುವ ನಿಜ[31]ಸಿರದ[32] ಸಡಲಿದ ತೊಗಲ ಬತ್ತಿದ ಗಲ್ಲದುಸಿರಿಡುವ
ಬಿರಿದ ಜಗುೞಿದ ಹಲ್ಲುಗಳ ಬೆಳು
ವರಿದ ರೋಮಾವಳಿಯೊಳೆಯ್ತರು
ತಿರಲು ಪುರಜನ ನೋಡಿತಾ ವೃದ್ಧನನು ನಸುನಗುತ   ೧೪

ಹರೆಯ ಸುಡ ಬೆಳುಪಾದ ಭಸ್ಮದ
ತೆಱದಿ ನರೆತುವು ರೋಮ ಪೂರ್ವದ
ಪರಿಗತಿಯ ನೆನೆದದ್ಭುತದಿ ತಲೆದೂಗುವಂದದಲಿ
ಶಿರ ನಡುಗೆ ತಾ ವಿಷಯ ತತಿಯೋ
ಸರಿಸೆ[33] ಸುಕ್ಕಿದ ತೆಱದಿ ತನು ಮಿಗೆ
ಜರಿದುದತಿ ವೃದ್ಧತ್ವವಾದಂತಾ ಕುಮಾರಂಗೆ  ೧೫

ಜರಿದು ಕೊಹೆ ಕೊಹೆಯೆಂದು ಗಂಟಲು
ನರ ಬಿಗಿದು ಕೆಮ್ಮುತ್ತ ಜಾಱುತ
ಕೊರಗುತೊಱಗುತೆ ಕೋಲನೂ[34]ಱುತೆ[35] ಮುಂದೆ ಸುೞಿವವರ
ಕರೆದು ಭೋಜನವಿಕ್ಕುವರ ಮಂ
ದಿರವ ಕೇಳುತಲಿಂತು ಸುರಮಂ
ಜರಿಯ ಮನೆ[36]ಗಾ ಕಪಟಿ ಬರುತಿರ್ದನು ಸರಾಗದಲಿ[37]  ೧೬

ಬಂದು ಸುರಮಂಜರಿಯ ಗೇಹವ
ನೊಂದಿ ಪುಗಲಾ ಪಡಿಯಱರು ತಡೆ
ದೆಂದರಾವೆಡೆಗೆನಲು ಕನ್ಯಾಭಿಕ್ಷೆಗೋಸುಗ ನಾಂ
ಬಂದೆನೆನೆ ನಗುತೀ ಜರಾನ್ವಿತ
ಗಿಂದು ಮುಖಿಯರ[38] ತೊಡಕು ತನಗೇ
ಕೆಂದಣಕವಾಡುತ್ತ ಪುಗಿಸಿದರಾತನನು ಮನೆಯ        ೧೭

ಕೊರಗಿ ಬೆಂಬೞಿದಳವೞಿದು ತಲೆ
ತಿರುಗಿ ಬಿದ್ದವನಂತೆ ಧರೆಯೊಳ
ಗುರುಳೆ ಮೆಲ್ಲನೆ ಕಣ್ದೆಱೆದು ಕರುಣಾನುಭಾವದಲಿ
ತರುಣಿ ಕನ್ಯಾಭಿಕ್ಷವನು ವಿ
ಸ್ತರಿಸಬೇಕೆನಗೆಂದು ಹೀನ
ಸ್ವರದಿ ನುಡಿಯೆ ದಯೋಕ್ತಿಯಿಂದಿಂತೆಂದ[39]ಳಾ ರಮಣಿ[40]       ೧೮

ಕರೆದು ಸತಿಯಾ ಕಪಟಿಯನು ಪರಿ
ಪರಿಯ ಭಕ್ಷ್ಯರಸಾನ್ನಪಾನೋ
ತ್ಕರಗಳಿಂದುಪಚರಿಸಿ ತಾನಿಂತಪ್ಪ ವೃದ್ಧನನು
ಧರಣಿಯೊಳು ಕಂಡಱಿಯೆನೆಂದ
ಚ್ಚರಿಯದಿಂದಬಲೆಯರು ನೋಡು
ತ್ತಿರೆ ದಿವಾಕರನಿತ್ತಲಪರಾಚಲಕೆ ನಡೆತಂದ   ೧೯

ತರು ತಮಾಲಗಳಂತೆ ವಿಹಗೋ
ತ್ಕರವು ಪಿಕದಂತಖಿಳ ಮೃಗತತಿ
ಕರಡಿಯಂತದ್ರಿಗಳು ನೀಲಾಚಲ[41]ಗಳಂತೆ ನಭ
ಭ[42]ರದಿ[43] ಕಾರ್ಮುಗಿಲಂತೆ ನದಿ ಸಾ
ಗರಗಳಾ ಕಾಳಿಂದಿಯೆಂಬಂ
ತಿರಲು ಘೋರ ತಮಂಧ ನೆರೆ ಮುಸುಕಿತು ಜಗತ್ರಯವ         ೨೦


[1] ಬಂದು (ಜ)

[2] ಬಂದು (ಜ)

[3] ರ್ದಂ (ಜ)

[4] x (ಜ)

[5] x (ಜ)

[6] ಚೆಂ (ಜ)

[7] ಳಾ (ಜ)

[8] ಳಾ (ಜ)

[9] ಬಳುಕೆ (ಜ)

[10] ಬಳುಕೆ (ಜ)

[11] ಕಂಕಣ ಝಣಝಣನೆ ಮೊರೆಯರರೆ ಹೊಡೆದಳು (ಜ)

[12] ಕಂಕಣ ಝಣಝಣನೆ ಮೊರೆಯರರೆ ಹೊಡೆದಳು (ಜ)

[13] ಚೆಂ (ಜ)

[14] x (ಜ)

[15] ಚೆಂ (ಜ)

[16] ತದ್ವಿರಹ (ಜ)

[17] ತದ್ವಿರಹ (ಜ)

[18] ದಾ (ಜ)

[19] ದಾ (ಜ)

[20] x (ಜ)

[21] ಸುತ (ಜ)

[22] ಹಿತೊಂ (ಜ)

[23] ಹಿತೊಂ (ಜ)

[24] +ಕ (ಜ)

[25] ದಂ (ಜ)

[26] ದಂ (ಜ)

[27] ರಂ (ಜ)

[28] ರಂ (ಜ)

[29] ತಾ (ಜ)

[30] ನು (ಜ)

[31] ಶರೀರ (ಜ)

[32] ಶರೀರ (ಜ)

[33] x (ಜ)

[34] ರಿಯೆ (ಜ)

[35] ರಿಯೆ (ಜ)

[36] ಗೆ ಸುಕುಮಾರ ಬರುತಿರ್ದೆ (ಜ)

[37] ಗೆ ಸುಕುಮಾರ ಬರುತಿರ್ದೆ (ಜ)

[38] x (ಜ)

[39] ಳಿಂದುಮುಖಿ (ಜ)

[40] ಳಿಂದುಮುಖಿ (ಜ)

[41] ಲಂ (ಜ)

[42] ರಿತ (ಜ)

[43] ರಿತ (ಜ)