ಭರದಿ ಚಾಮದೊಳತುಳ ಯಂತ್ರವ
ಮುಱಿದು ಲಕ್ಷ್ಮಿಯ ಪಡೆದು ಜೀವಂ
ಧರನು ಕಾಷ್ಠಾಂಗಾರಕನ ಕೊಂದಿಳೆಯ ಪಾಲಿಸಿದ

ಭೂರಮಣ ಕೇಳಿತ್ತ ಕಾಷ್ಠಾಂ
ಗಾರ ತನ್ನನು ಕಂಡರಖಿಳ
ಕ್ಷ್ಮಾರಮಣರತಿ ಗರ್ವದಲಿ ಗೋವಿಂದರಾಜನನ
ಬಾರನಾತನ ಕರೆಯಬೇಕೆಂ
ದಾರು ಬಟಿಯಲಿ ಮಂತ್ರಿಗಳನವಿ
ಚಾರನಟ್ಟಲು ಹೊಕ್ಕರವರು ವಿದೇಹಪಟ್ಟಣವ  ೧

ಬಂದು ಮಂತ್ರಿಗಳನುನಯದಿ ಗೋ
ವಿಂದರಾಜನ ಕರೆಯಲಿಕೆ

[1] ಬಹೆ
ನೆಂದವರ ಮುಂದಟ್ಟಿ ಕಾಷ್ಠಾಂಗಾರಕನನಲ್ಲಿ
ಕೊಂದಿಳೆಯ ಪಟ್ಟವನು ಜೀವಕ
ಗೊಂದಿಸಿಯೆ ಮತ್ಸುತೆಯನಿತ್ತಪೆ
ನೆಂದು ವಿಜಯಾವತಿಸಹಿತ ನಿಶ್ಚೈಸಿದನು ಭೂಪ          ೨

ಬೞಿಕ ಗೋವಿಂದಾವನೀಶ್ವರ
ಹಲವು ಪಯಣದೊಳನುಜೆ ಸಹಿತಾ
ಹೊೞಲಿಗೆಯ್ತರಲೆದ್ದು ಕಾಷ್ಠಾಂಗಾರ ತಕ್ಕೈಸಿ
ಒಲಿದು ಮನ್ನಿಸಿ ಕಳುಹೆ ಮಾವನ
ಬೞಿಗೆ ಜೀವಂಧರನು ಬಂದಡಿ
ಗಳಿಗೆ ನಮಿಸಲು ನಲಿದು ಬಿಗಿಯಪ್ಪಿದನು ತವಕದಲಿ    ೩

ಅಳಿಯನಳವಾಕಾರಕಾ ನೃಪ
*ನೊಲಿದು ಮತ್ಸುತೆ ಲಕ್ಷ್ಮಿಯನ ಕೋ
ಮಲಗೆ ಕೊಡುವೆನು ವಿಗಡಯಂತ್ರವ ಜಯಿಸಲಿವನುೞಿಯೆ
ಗೆಲುವರಿಲ್ಲ ಸೊಯಂಬರಕೆ ನೃಪ*
ಕುಲವ ನೆರಹಿ ಕುಮಾರನಂತವ
ತಿಳುಹಬೇಕೆಂದಿಂತು ನಿಶ್ಚಯಿಸಿದನು ಗೋವಿಂದ         ೪

ಲೀಲೆಯಲಿ ಗೋವಿಂದ ಬೞಿಕರ[2] ಸಾಳ ಕರೆದು ಸತೀಸ್ವಯಂವರ
ಶಾಲೆಗಖಿಳ ನೃಪಾಲಸಂಕುಲ ರಾಜಪುರವರಕೆ+
ಲಾಲಿತದಿ ಬಹುದೆಂದು ಬೞಿಕ ವಿ
ಲೋಲ ವಿ[3]ವಿಧದ್ರವ್ಯಗಳ ನೃಪ
ಮೇಳಯಿಸಿ ರಚಿಯಿಸಿದನಾ ವೈವಾಹಮಂಟಪವx

ಅರಸ ಕೇಳ್ ಚರರಿತ್ತ ಲಕ್ಷ್ಮಿಯ
ವರ ಸ್ವಯಂವರಕಖಿಳ ಭೂಮೀ
ಶ್ವರರು ಬರ್ಪುದು ರಾಜಪುರವರಕೆಂದು ಸಾಱುತಿರೆ
ಹರುಷದಿಂದಾ ನೃಪರು ಮೂಜಗ
ಬಿಱಿಯೆ ಪಯಣದ ಭೇರಿಗಳು ವಿ
ಸ್ತರದಿ ಹೊಯ್ಸಿ ವಿಳಾಸದಲಿ ಹೊಱವಟ್ಟರರಮನೆಯ    ೬

ನೆಲನು ಬೆಸಲಾದಂತೆ ಭೂಮೀ
ವಲಯಪಾಲಕರಖಿಳ ಚಾತು
ರ್ಬಲ ಸಮೇತದಿ ಬರಲು ತದ್ಭಾರಕ್ಕೆ ದಿಗಿಭತತಿ
ಅಳುಕಿ ಮೂಗಿಲಿ ಕೈಯನಿಟ್ಟಳ
ವೞಿದುವಹಿಪತಿ ಸೆಡೆದು ತನ್ನಯ
ತಲೆಯ ಕಲ್ಲನು ಮಾಡಿಕೊಂಡಿರ್ದನು ಕುಚೇಷ್ಟೆಯಲಿ    ೭

ವಸುಧೆ ಹಯದೊಳಜಳಧಿ [4]ಮಿಗೆ[5] [?] ರಾ
ಜಿಸುವ ನದಿಯಂತಿರಲು ಖಡ್ಗ
ಪ್ರಸರದ[6]ಮಲಪ್ರಭೆಗಳಾಶಾಂತರವ[7] ನೆಱೆ ಮುಸುಕೆ
ಎಸೆವ ಬಹು ವಾದ್ಯಗಳ ರವವಾ
ಗಸವ ತೀವಲು ರಾಜಪುರವರ
ಕೆಸಗಿ ಬರುತಿರ್ದರು ಮಹೀಪಾಲಕರು ವಿಭವದಲಿ        ೮

ಮೆಱೆವ ಮಣಿಮಯ ಪಂಚರತ್ನದ
ಸರವನುರ್ವಿ ನಭೋಂಗನೆಗೆ ವಿ
ಸ್ತರದಿನಟ್ಟಿದಳೆನಲು ದೇ[8]ಶದ[9] ದೇಶದವನಿಪರ
ಉಱುವ ಚಾತುರ್ಬಲದ [10]ಪದ[11]ಹತ
ದುರುತರದ ರಜ ವಿವಿಧ ವರ್ಣೋ
ತ್ಕರಗಳಿಂ ನೆಱೆ ಮುತ್ತಿ ಮುಸುಕಿತಜಾಂಡಮಂಡಲವ   ೯

ಸಾಲ ಸತ್ತಿಗೆ ಮೇಜತತಿ ಕರ
ವಾಳರುಚಿ ಮಿಂಚಖಿಳ ವಾದ್ಯಾ
ಭೀಳರವ ಮೊೞ[12]ಗೆತ್ತಿದಾ ಧ್ವಜಯಂತ್ರ[13]ದನುಹಾರ
ಆಲಿಕಲು ಗಜಘಟೆಯ ಮದಧಾ
ರಾಳಿ ವರ್ಷಮದಾಗೆ ಪೊಸ ಮೞೆ
ಗಾಲದಂತೆ ನೃಪಾಲಕರು ಬರುತಿರ್ದ ರೊ[14]ಲವಿ[15]ನಲಿ   ೧೦

ಚಳತುರಂಗದ ತೆರೆಯ ಗಜಸಂ
ಕುಳದ ಪುಳಿನದ ಬೆಳುಗೊಡೆಯ ನೊರೆ
ಗಳ ರಥಾಂಗದ ಚಕ್ರವಾಕದ ನಯನ ಮತ್ಸ್ಯಗಳ
ತಳಿತ ಖಡ್ಗಾಂಶುಗಳ ವಡಬನ
ಲುಳಿತ ವಾದ್ಯಾರವದ ಘೋಷಣೆ
ಗಳ ಮಹಾ ನೃಪಸೈನ್ಯವಾರಿಧಿ ಬಂದುದೊಗ್ಗಿನಲಿ        ೧೧*

ಪೊಡವಿ ಕುಸಿ[16]ದುದು[17] ಕಮಠನೆದೆ ನಡ
ನಡುಗೆ ಚಮರಚ್ಛತ್ರ ಗಗನವ
ನಡರೆ ಭಟ್ಟರು ಕವಿಗಮಕಿ[18]ವಾಗ್ಮಿಗಳು ಕೊಂಡಾಡೆ
ಕಡಗಿ ಸಮ್ಮುಖ ಎಂದು ನೆರೆದು
ಗ್ಗಡದಿ ಕಟ್ಟಿಗೆಕಾಱರೆಯ್ತರೆ
ಬೆಡಗಿನಲಿ ಬಂದರು ಮಹೀಪಾಲಕರು ವಿಭವದಲಿ        ೧೨

ಭೂ[19]ಸತೀ[20]ಶ್ವರ ಕೇಳು ನಾನಾ
ದೇಶದವನೀಪಾಲಕರು ಸುವಿ
ಲಾಸದಲಿ ಪುರಿಗೆಯ್ದಿ*ಬರೆ ಗೋವಿಂದ ಮಣಿಮಯದ
ವಾಸಗಳನುಱೆ ಬಿಡಿಸಿ ಘನ ಸಂ
ತೋಷದಲಿ ನಾಂದೀಮುಖವ ಮೇ
ಳೈಸಿ ಶಾಸ್ತ್ರದಿ ಪೂರ್ವವೇದಿಯನರಸ ಮಾಡಿಸಿದ*      ೧೩

ಮಱುದಿವಸ ಲಕ್ಷ್ಮಿಯ ಮಹಾ ಭಾ
ಸುರದ ಪರಿಣತೆಗಖಿಲ [21]ಭೂಮೀ೪[22] ಶ್ವರರು ಮಂಟಪಕೆಯ್ದಿಬಹುದೆಂದರಸ ಸಾಱಿಸಲು
ಕರಿವದನನನು ಸತ್ಕರಿಸಿ ಪರಿ
ಪರಿಯ ಶೃಂಗಾರದಲಿ ಬಂದಾ
ಧರಣಿಪರು ಮಂಟಪದ ಪೀಠದೊಳೆಸೆದರೊಗ್ಗಿನಲಿ       ೧೪

ಕ್ಷಿತಿಪ ಕೇಳಾ ಪೀಠದಲಿ ನೃಪ
ರತಿಶಯದಿ ರಂಜಿಸಲು ನಟ ಮಾ
ಗಧ ಸುಕವಿ ಪರಿಹಾ[23]ಸಕರು ತಾರ್ಕಿಕರು[24] ಪಾಠಕರು
ಯತಿ ವಿಬುಧ ವಿದ್ವಾನು ಮುನಿ ಪಂ
ಡಿತರು ವಾಮನ ಮೂಕ ಬಧಿರ
ಪ್ರತತಿ ನೆನೆದುದು ಚಪ್ಪರದೊಳಾನಂದಲೀಲೆಯಲಿ      ೧೫

ಬೞಿಕ ಘನತರ ಚಾಪವನು ಸ
ಲ್ಲಲಿತ ಮಣಿಮಂಟಪದ ಮಧ್ಯ
ಸ್ಥಲದೊಳಗೆ ತಂದಿೞುಹಿ ಶಿಖಿಯಂತ್ರವನು ಗಗನದಲಿ
ಅಳವಡಿಸಿ ಹೊಗರಂಬ ಸುತ್ತಲು
ನಿಲಿಸಿ ವಿವಿಧ ಸುಗಂಧದಕ್ಷತೆ
ಗಳಲಿ ಬುಧರರ್ಚಿಸಿದರಾ ಲೌಕಿಕವಿಧಾನದಲಿ ೧೬

ತಾರೆಗಳ ಮಧ್ಯದಲಿ ಶಶಿ ವಿ
ಸ್ತಾರದಲಿ ಮೆಱೆವಂತೆ ಸಖರೈ
ನೂಱುವರು ಸಹವಾಗಿ ಜೀವಂಧರನು ಬಂದೆಸೆವ
ಚಾರುಪೀಠವ[25]ನಡರೆ ಕಾಷ್ಠಾಂ
ಗಾರನಾತನ ರೂಪ ಧೀರೋ
ದಾರ ಬಲವನು ಕಂಡು ತನ್ನಯ ಮನದೊಳಿಂತೆಂದ    ೧೭

ಇವನು ಜೀವಂಧರನ ನೆಱೆ ಹೋ
ಲುವನದೇನಚ್ಚರಿಯೊ ತಾ ಭೂ
ಭುವನವಱಿಯಲು ಮಡಿದವನು ಮತ್ತೀಗಲುದಿಸಿದನೊ
ವಿವರಿಸಿದೊಡೀ ಮರ್ತ್ಯದೇಹದಿ
ದಿವಿಜಪತಿಯೋ ಮೇಣ್ ಜಯಂತನೊ
ಇವನೆನುತ ಬೆಂಬೞಿದು ಕಾಷ್ಠಾಂಗಾರ ಬೆಱಗಾದ        ೧೮

ಭಾರಿ ಧನುವಿದನೆತ್ತಿ ಗಗನಮ
ಯೂರಯಂತ್ರವನೆಚ್ಚೊಡಾತನೆ
ನಾರಿಗಧಿಪನೆನುತ್ತ ಸಾಱಿಸಿ ಬೞಿಕ ಗೋವಿಂದ
ವಾರಿರುಹನೇತ್ರೆಯರ ಕರೆದು ಕು
ಮಾರಿಯನು ಶೃಂಗರಿಸಿಯೆನೆ ವಿ
ಸ್ತಾ೨ರದಿಂದವೆ ಕಾಂತೆಯರು ಕೈಗೈಯ್ದರಾ ಸತಿಯ[26]   ೧೯

ಬೇಱೆ ಬೇಱೆ ಚತುರ್ವಿಧದ ಶೃಂ
ಗಾರವೆಸೆಯಲು ರಮಣಿ ಪಿತನಾ
ಗಾರವನು ಹೊಱವಟ್ಟು ಮೇಳದ ಸಖಿ[27]ಯರೊಡಗೂಡಿ
ಮಾರನಿಪ್ಠಾದೇವಿಯಂತೆ ಸ
ರೋರುಹಾನನೆ ಮಟಪಕೆ ವಿ
ಸ್ತಾರದಲಿ ಬರುತಿರ್ದಳಾ ಭೂಪರ ಸ[28]ಮೀಪ[29]ದಲಿ       ೨೦


[1] x (ಜ)

* ಈ ಪಂಕ್ತಿಗಳು ಜ ಪ್ರತಿಯಲ್ಲಿಲ್ಲ.

* ಈ ಪಂಕ್ತಿಗಳು ಜ ಪ್ರತಿಯಲ್ಲಿಲ್ಲ.

[2] x (ಜ)

+ ಜ ಪ್ರತಿಯಲ್ಲಿ ಪದ್ಯದ ಕ್ರಮಾಂಕ ೪ ಇದೆ

[3] x (ಜ)

x ಪದ್ಯದ ಕ್ರಮಾಂಕವು ಜ ಪ್ರತಿಯಲ್ಲಿಲ್ಲ.

[4] x (ಜ)

[5] x (ಜ)

[6] ನು (ಜ)

[7] ನು (ಜ)

[8] ಶಾ (ಜ)

[9] ಶಾ (ಜ)

[10] x (ಜ)

[11] x (ಜ)

[12] ಗುತ್ತಿತಾ ಧಜಯಿಂದ್ರ (ಜ)

[13] ಗುತ್ತಿತಾ ಧಜಯಿಂದ್ರ (ಜ)

[14] ಗ್ಗಿ (ಜ)

[15] ಗ್ಗಿ (ಜ)

* ಈ ಪದ್ಯವು ಜ ಮ ಪ್ರತಿಗಳಲ್ಲಿಲ್ಲ

[16] ದವು (ಜ)

[17] ದವು (ಜ)

[18] + ವಾದಿ (ಜ)

[19] ತಳೇ (ಜ)

[20] ತಳೇ (ಜ)

* ಈ ಭಾಗವು ಜ ಪ್ರತಿಯಲ್ಲಿಲ್ಲ

* ಈ ಭಾಗವು ಜ ಪ್ರತಿಯಲ್ಲಿಲ್ಲ

[21] ಜಗತೀ (ಜ)

[22] ಜಗತೀ (ಜ)

[23] ಸ್ಯ ತಾರ್ಕಿಕವಾಗಿ (ಜ)

[24] ಸ್ಯ ತಾರ್ಕಿಕವಾಗಿ (ಜ)

[25] x (ಜ)

[26] x (ಜ)

[27] ತಿ (ಜ)

[28] ಮೇತ (ಜ)

[29] ಮೇತ (ಜ)