ಲಲನೆಯರು ಸಹಿತಾ ನೃಪಾಲಕ
ತಿಲಕ ಬನದೊಳಗೆರಡು ಮಾಸವ
ಕಳೆದು ಮಗುಳೆಯ್ತಂದು ಹೊಕ್ಕನು ರಾಜಮಂದಿರವ

ಧರಣಿಪಾಲಕ ಕೇಳು ಜೀವಂ
ಧರನು ಲಕ್ಷ್ಮಿಣಿ ಪದ್ಮೆ ಸುರ

[1]ಮಂ
ಜರಿ ವಿಮಲೆ ಗುಣಮಾಲೆ ವಿದ್ಯಾಧರಿ ಕನಕಮಾಲೆ[2]ಸುರು[3]ಚಿರ ಶ್ರೀಯೆನಿಸುವಷ್ಟಮ
ತರುಣಿಯರೊಳೊಬ್ಬೊಬ್ಬ ಸುಕುಮಾ
ರರನು ಪಡೆದಾನಂದಲೀಲೆಯೊಳಿರ್ದನನವರತ         ೧

ಒಂದು ದಿನ ವನಪಾಲಕನು ಜೀ
ವಂಧರನ ಸಮ್ಮುಖಕೆ ಬಂದೊಲ
ವಿಂದಪೂರ್ವ ಫಲಾದಿಗಳ ಕಾಣಿಕೆಯನಿತ್ತೆಱಗಿ
ನಂದನವ ವರ್ಣಿಸಲಶಕ್ಯ ಮ
ಹೇಂದ್ರಗೆನಲೆನ್ನಳವೆ ದೇವರು
ಬಂದು ನೀವ್ ಚಿತ್ತೈಸಬೇಕೆಂದೆನುತ ಕೈಮುಗಿದ          ೨

ವಾರಿ[4]ನಿಧಿ ಪೂರ್ಣೇಂದುವನು ನೆಱೆ
ಹಾರುವಂದದಿ ನಿಮ್ಮ ಬರವನು
ಚಾರುನಂದನ ಬಯಸುತಿದೆ ಸುಕುಮಾರಕರು ಸಹಿತ
ನಾರಿಯರು ಸಹಿತೊಂದು ಮಾಸ ವಿ
ಹಾರಿಸುವುದೆನೆ ಬಹೆನೆನುತ ವಂಹಿ
ಳಾರಮಣನಾ ಹದನ ಸಾಱಿಸಿದನು ಪುರಾಂತದಲಿ      ೩

ಧಾರಿಣೀಪಾಲರಿಗೆ ಮಂತ್ರಿ ಕು
ಮಾರರಿಗೆ ನಟ ವಿಟ ಭಟಾಳಿಗೆ
ವಾರನಾರೀ ಜನಕೆ ಬಹುಧನ ರತ್ನಭೂಷಣವ
ವಾರಕವನಿತ್ತರಸಿಯರು ಸುಕು
ಮಾರಕ[5]ರು ಸಹಿತರಸ ಮಣಿಮಯ[6][ತೇರನೇಱಿ][7] ವಿಳಾಸದಲಿ ಹೊಱವಟ್ಟನರಮನೆಯ   ೪

ಸ್ಮರನ ಮಂತ್ರದ ದೇವತೆಯ[8]ರೆನೆ[9] ಪರಿಪರಿಯ ಶೃಂಗಾರದಲಿ ಕರಿ
ತುರಗರಥಗಳ ಮೇಲೆ ಪರಿಮಿತ ಕಾಮಿನೀನಿಕರ
ಬರಲು ಬೆಳ್ಗೊಡೆ ಚ[10]ಮರ ಸೀಗುರಿ
ಮೆಱೆಯೆ ಸಡಗರದಿಂದೆ ಜೀವಂ
ಧರನು ಬಂದಾ ನಂದನವ ಹೊಕ್ಕನು ವಿಲಾಸದಲಿ       ೫

ಚಾರು ಪದ್ಮಾನನದ ಲಲಿತ ಚ
ಕೋರನೇತ್ರದ ಚಕ್ರಕುಚದ ಮ
ಯೂರಕಚದ ಮರಾಳಗಮನದ ಪಾಟಲಾಧರದ
ಕೀರವಚನದ ತಳಿರಡಿಯ ರಂ
ಭೋರು[11]ಗಳ ತಳೆದೆಸೆವ ಕುಸುಮ ಶ
ರೀರದಾ ವನಲಕ್ಷ್ಮಿ ತಾನಿದಿ[12]ರಾದಳಾ ನೃಪಗೆ ೬

ಅರಸ ಕೇಳಾ ಬನವ ಜೀವಂ
ಧರನು ಪುಗೆ ವನಪಾಲಕನು ಭೂ
ವರಗೆ [13]ತೋಱಿದ[14] ವಿಮಳ ವಲ್ಲಿಯ ಹರ್ಮ್ಯಶಾಲೆಗಳ
ಮೆಱೆವ ಕೃತಕಾದ್ರಿಗಳ ತತ್ಪಲ
ಭರಿತ ಕುಜಸಂಕುಳದ ಘನ ಸಡ
ಗರವ ತೋಱುತ ಮುಂದೆ ನಡೆತರುತಿರ್ವನೊಲವಿನಲಿ ೭

ತಳಿರು ಕೆಂಪಡಸದೆ ಧರಿತ್ರಿಯ
ನಲರ ಬೆಳುಪಿಲ್ಲದಿರೆ ನಭವು
ಚ್ಚಲಿಸ[15]ದಿರೆ[16] ತರುಶಾಖೆ ಪಣ್ಗಳ ಭರದಿ ಕುಸಿಯದಿರೆ
ಫಲರಸವು ನದಿಯಾಗದಿರೆ ಗಿಳಿ
ಬಳಗ ಚುಂಬಿಸದೆಂದೆನುತ ನೃಪ
ತಿಲಕಗಾ ವನಪಾಲ ಸಹಕಾರವ[17]ನು ತೋಱಿಸಿದ        ೮

ತಳಿರಿನಗ್ನಿ ಯನಳಿಗಳಿದ್ದಿಲ
ನಳವಡಿಸಿ ಮಂದಾನಿಲನ ತಿದಿ[18] ಗೊಳಿಸಿ ಶುಕ ನೆರವಾಗೆ ಮಧುಕಮ್ಮಱನು ವನವೆಂಬ
ಕುಲುಮೆಯಿಂದಲರಸ್ತ್ರಗಳ ಮಾ
ಡಲು ಸಿಡಿದ ಕಿಡಿಯೆನೆ ಪರಾಗೋ
ದ್ಗಳಿತಶೋ[19]ಕೆಯ[20] ತರುವ ನೃಪ ನೋಡೆಂದು ತೋಱಿಸಿದ      ೯

ವನಸತಿಯ ಸೆಳ್ಳುಗುರೊ ವಿರಹಿಯ
ಮನವ ಕೊಱೆಯಲು ಚಿತ್ತಭವನಾ
ಳ್ದನುಪಮಿತ ಕರಗಸವೊ ಮಧುಪಾನವನಳಿವ್ರಾತ
ಅನುಭವಿಪ ದೋಣಿಗಳೊ ಹರರಿಪು
ವೆನುತ ಹೊಱಗಿಕ್ಕಿದ ವಸಂತಕ
ನೆನಲು ರಂಜಿಪ ಕೇತಕಿಯನವನೀಶ ನೋಡೆಂದ         ೧೦

ಧಾರಿ[21]ಣಿಗೆ ಹೊಱೆಯಾಗದಿರಲು
ನಾರನುಟ್ಟು ವನಾಂಬುವೀಂಟಿಯೆ
ಮಾರುತಾರ್ಕಪ್ರಭೆಗಳುಕದೇಕಾಂತದಲಿ ವನವ
ಸಾರಿ ತಪವಾಚರಿಪೆವೆನುತವೆ
ಚಾರು ಕಂಗಳ ಮುಚ್ಚಿ ಮೆಱೆದಿವೆ
ನಾರಿಕೇಳಗಳರಸ ನೋಡಿವು ತಪಸಿಯಂದದಲಿ         ೧೧

ಮಲಿನಪುಷ್ಪಲತಾಂಗನೆಗೆ ನೀ
ನೆಳಸುತಿಹೆ ಮಾತಂಗಜಾತಿಗ
ಳೊಳಗೆ ದಾನವ ಕೊಂಬೆ ಮೇಲಾಱಡಿಗ ಮಧುಪಾನಿ
ಚಲಹೃದಯ ನೀನೆನ್ನ ಮುಟ್ಟದೆ
ತೊಲಗೆನುತೆ ಕೈಸನ್ನೆಗೆಯ್ವಂ
ತಲುಗುವೆಲೆಗಳೊಳೆಸೆವ ಸಂಪಗೆ[22]ಯರಸ[23] ನೋಡೆಂದ          ೧೨

ವಿರಹಿಯೆಂಬ ಮದೇಭವನು ಕಾ
ತರಿಸಿ ಮನ್ಮಥನೆಂಬ ಕೇಸರಿ
ಶಿರವ ಮೆಟ್ಟಿ ಮಹೋಗ್ರದಿಂ ಸೀೞಲು ನಖಾಗ್ರದಲಿ
ಸುರಿವ ರುಧಿರದ ಧಾರೆಯೆಂದೆನ
ಲರುಣತೆಯನೊಂದಿಹ ಪಲಾಶದ
ಮರನ ನೀ ನೋಡೆಂದು [24]ಭೂಮೀಪತಿಗೆ[25] ತೋಱಿಸಿದ           ೧೩

ವದನವಾರಿಜಪರಿಮಳವ ಪೀ
ರ್ದಧರ ಬಿಂಬಾಮೃತವ ಸವಿದತಿ
ಮೃದು[26]ವಪು[27]ರ್ಲತೆಗಳಲಿ ಗಾಢಾಲಿಂಗನಂಗೈದು
ಮುದದಿ ಕೇಶಾಳಿಗಳ ಬರಸೆಳೆ
ದೊದವಿ ಕಟಿಪುಳಿನಸ್ಥಳೋದಕ
ಮದನರಸಮೆನೆ ನೆರೆದ ಮಂದಾನಿಲ ವನಾಂಗನೆಯ   ೧೪

ಗಿಳಿಗಳೊಪ್ಪದಿ ಪಾಡಿ ಪಲ ಮ
ದ್ದಳೆಯ ಬೆಡಗಿಂದನಿಲ ಲತೆಗಳ
ನಲೆದು ಬಾಜಿಸಿ ತಾಳರವ ಕೋಗಿಲೆಯೊಳೊಂದಿರಲು
ಅಳಿಬಳಗ ಕಹಳೆಗಳ ಪೂರಿಸೆ
ಲಲಿತ ವಿಭ್ರಮ ಗತಿಗಳಲಿ ವನ
ಲಲನೆ ನೃತ್ಯವನಾಡುವಳು ಭೂಪಾಲ ಕೇಳೆಂದ          ೧೫

ಆ ಲಲಿತ ನಂದನವನವನೀ
ಪಾಲಕಗೆ ವನಪಾಲ ತಾನತಿ
ಲೀಲೆಯಲಿ ತೋಱಿಸಲವಂಗಭಿಮತವನೊಲಿದಿತ್ತು
ಬಾಲೆಯರಿಗಾರಾಮದೊಳಗೆ ವಿ
ಶಾಲವನ ಮಂಟಪವನೆಡೆಗೆಡೆ
ಗೋಳಿಯಲಿ ಮಾಡಿಸಿದನಾ ಭೂಪಾಲ [28]ಕೇಳೆಂದ[29]     ೧೬

ಕೃತಕ ಶೈಲದ ಮಂಟಪದೊಳಾ
ಕ್ಷಿತಿಪನಷ್ಟಮ ಕಾಂತೆಯರು ಸಹಿ
ತತಿ ವಿಳಾಸದೊಳಿರಲು ನವ ಪುಷ್ಪಾಪಚಯ[30]ಕೊಸೆದು
ಸತಿಯರಾ ವನದೊಳಗೆ ನಯನ
ದ್ಯುತಿ ದಿಶಾವಳಿ ಮುಸುಕೆ ಕುಸುಮ
ಪ್ರತತಿಗಳ ನೆಱೆ ತಿರುಹುತಿರ್ದರು ಬಹಳ ಹರುಷದಲಿ   ೧೭

ಕ[31]ಚವಲುಗೆ ನಡು ಬಳುಕೆ ಸೋರ್ಮುಡಿ
ವಿಚಿಲಿಸಲು ದೃಗ್ವದನದಂತ
ಪ್ರಚಯಕಕ್ಷ ಕಪೋಲ ಕರ್ಣಾಭರಣ ತಳತಳಿಸೆ
ಕುಚ ಕುಣಿಯೆ ತನು ಬೆಮರೆ ನವಮಣಿ
ಖಚಿತ ಕಂಕಣ ಝಣ ಝಣೆನೆ ಶುಕ
ವಚನೆಯರು ಪೂಗೊಯ್ದರಾ ಬನದೊಳಗ ಲೀಲೆಯಲಿ   ೧೮

ಸರಸಿರುಹದಳನೇತ್ರೆ ಮಲ್ಲಿಗೆ
ಯರಲುಗಳ ಸಲೆ ಕೊಯ್ದು ಮಗುೞೆ
ಯ್ತರುತಿರಲು ನೇತ್ರಾಂಶು ಲತೆಯಲಿ ಪುದಿಯೆ ಕಂಡಲರು
ಮರಳಿ ಮೂಡಿವೆಯೆನುತ ಹಸ್ತಾಂ
ಬುರುಹವನು ಮಗೞದಕೆ ನೀಡಲು
ಬಱಿಯದಾಗಿರೆ ಮುಗ್ಧೆ ಮೊಗದಿರುಹಿದಳು ಲಜ್ಜೆಯಲಿ   ೧೯

ಗಿಲಿಕೆಗಳ ಕೊಂಬುಗಳ ಪೂಗೊಂ
ಚಲನದೊರ್ವಳು ಕೊಯ್ಯುತಿರಲರ
ಗಿಳಿ ಲಸ[32]ದ್ದಾಡಿಮದ ಫಲವೆಂದಧರವನು ತುಡುಕೆ
ಉಲುಕಿ ಬಿದ್ದುವು ಚೇತನವು ಕುಚ
ಗಳುಕಿ ಹಾಯೆನುತಾ ನೃಪಾಲಕ
ತಿಲಕಗಱುಹಲು ಸತಿಯ ಮುಗ್ಧತೆಗರಸ ಬೆಱಗಾದ       ೨೦


[1] x (ಜ)

[2] ವರ (ಜ)

[3] ವರ (ಜ)

[4] ರು (ಜ)

[5] x (ಜ)

[6] ರಥವೇರಿ (ಜ)

[7] ರಥವೇರಿ (ಜ)

[8] ನೆರೆ (ಜ)

[9] ನೆರೆ (ಜ)

[10] ಡ (ಜ)

[11] + ಹ (ಜ)

[12] x (ಜ)

[13] x (ಜ)

[14] x (ಜ)

[15] ದೆ (ಜ)

[16] ದೆ (ಜ)

[17] + ವ (ಜ)

[18] ಳಿ (ಜ)

[19] ಕಾ (ಜ)

[20] ಕಾ (ಜ)

[21] ರು (ಜ)

[22] ವನವ (ಜ)

[23] ವನವ (ಜ)

[24] x (ಜ)

[25] x (ಜ)

[26] ತನು (ಜ)

[27] ತನು (ಜ)

[28] ನೊಲವಿನಲಿ (ಜ)

[29] ನೊಲವಿನಲಿ (ಜ)

[30] x (ಜ)

[31] ಕು (ಜ)

[32] x (ಜ)