[1]ಲರ[2] ಕೊಯ್ಯುತ್ತಿರಲು ಮೃದುಕರ
ತಲರುಚಿಯಿನೆಳದಳಿರಿನಂತಿರ
ಲುೞಿದಶೋಕೆಯ ಪಲ್ಲವಕೆ ಕೈನೀಡೆ ಲೋಚನದ
ಬೆಳಗಿನಿಂದಲರಾ[3]ಗಿರಲು ಕಂ
ಡಳುಕಿ ಮಾಯದ ಮರವಿದೆಂದು
ತ್ಪಲನಯನೆ ಮೊಗದಿರುಹೆ ನಗುತಿರ್ದನು ಮಹೀಪಾಲ            ೨೧

ಒದೆಯೆ ದುಷ್ಟನ ತೆಱದಿ ಪಲ್ಲವಿ
ಸಿದುದಶೋಕವು ಬಕುಳ ನನೆದೋ
ಱಿದುದು ಶಠನಂತುಗುೞಿದೊಡೆ ಕುರವಕವು ಬಿಗಿಯಪ್ಪೆ
ಮುದದಿ [4]ದಕ್ಷಿಣಂ[ತಲರೆ] ನೋ
ಡಿದೊಡೆ[5] ಧವನನುಕೂಲನಂತುರು[6] ಗಿದುದು ತಿಲಕಕ್ಕಭಯರುಚಿ ಬೆಱಗಾಗೆ ಬನದೊಳಗೆ     ೨೨

ಇಂದುಮುಖಿಯರು ಕುಸುಮಗಳನಾ
ನಂದದಲಿ ಕೊಯ್ದವನಿಪಾಲನ
ಮುಂದಿರಿಸಿ ದೇವಾರ್ಚನೆಯ ಮಾಡುತ್ತ ಸೊಬ[7]ಗಿನಲಿ
ಸಂದ ವಿವಿಧ ವಿನೋದದಲಿ ಜೀ
ವಂಧರನು ಮಾಸವನು ಕಳಿದಿರೆ
ಬಂದುದೆಸೆವ ವಸಂತ ಜನಕಾನಂದದಂದದಲಿ           ೨೩

ವಿರಹಿಗೆತ್ತಿದ ಸಬಳ ಯೋಗಿಗ
ಳುರದ ಶೂಲ ವಿಯೋಗಿ ಕೌಂಗಿದ
ಸುರಗಿ ಸನ್ನೊಸೆಗೆದೆದಲ್ಲಣ [8]ವರ[9] ತಪಸ್ವಿಗಳ[10]ಶರದಲುಡಿದತಿ ಸತಿಯರಿಗೆ ದ
ಳ್ಳುರಿ ಸುಭೋಗಿಗಳಾಶ್ರಯವು ಶಂ
ಬರವಿರೋಧಿಯ ಸೈನ್ಯವೆನೆ ವನವೆಸೆದುದೊಗ್ಗಿನಲಿ     ೨೪

ಅಳಿ ಮೊರೆಯೆ ಪಿಕ ನಯ ಸರಂದೋ
ಱಲು ಮದನನುಚ್ಚಲಿಸೆ ಮಂದಾ
ನಿಲ ಮಹೋತ್ಸ[11]ವವೆಸಗೆ[12] ಸಕಲ ಕುಜಾಳಿಯಂಕುರಿಸೆ
ಗಿಳಿ ಮರಾಳ ಚಕೋರ ಚಕ್ರಾ
ವಳಿಗಳಿಗೆ ನಲವೇಱೆ ಸೊಬಗಿಂ
ಮೊಳೆತುದೆಸೆವ ವಸಂತ ಜನಕನುರಾಗದಂದದಲಿ      ೨೫

ತಳಿರ ಸತ್ತಿಗೆಗಳ ವಿಡಾಯಿಯ
ಲಳಿಯ ಕಹಳಾವಳಿಯ ಪೂಗೊಂ
ಚಲಿನ ಚಮರದ ಹಂಸೆ ಕೇಕಿ ಪಿಕಾದಿಗಳ ಬಲದ
ಗಿಳಿಯ ಪಾಠಕರೆಸೆವ[13] ಮಂದಾ
ನಿಲನ ಹಯಗಳ ಚೂತದಿಭಸಂ
ಕುಲದಿ ಚತುರ ವಸಂತನೃಪನಿದಿರಾದನವನಿಪಗೆ         ೨೬

ಜಲರುಹಾಮೋದವನು ಸವಿದು
ತ್ಪಲಗೊಳದೊಳೋಲಾಡಿ ಪೂಗೊಂ
ಚಲಲಿ ಸಿಲುಕಿ ವಧೂಕ[14]ಪೋಲದ ಕುರುಳುಗಳ[15] ಕಲಕಿ
ಕುಲಶಕುಚಕರ್ದಮದ ಸೌರಭ
ದೊಳಗೊದವಿ ಕೃತಕಾದ್ರಿಯಲಿ ಸುೞಿ
ಸುೞಿದು ಬಹನಾ ದಕ್ಷಿಣಾ[16]ನಿಲ ವಿಟನರಿತಿಯಲಿ[17]        ೨೭

ಕುಡಿಯ ಕಟ್ಟಿಯೆ ತಾಳಿ ಮೌನವ
ಬಿಡಿಸಿ ಘನಶೋ[18]ಕದಲಿ[19] ರಾಗಿಸು
ತೊಡಚು ಶರವನನಂಗ ಕೈದೋಱಾಮ್ರ ಜಡಕೀರ
ನಡೆ ಮರುತ ಸೊಂಪೇಱು ಶಶಿಯೋಂ
ದೊಡರಿ ಮಧುನೃಪ ಬಂದನಿದೆಯೆಂ
ದಡರಿ ಸಾಱುವ ವಿಧದೊಳಳಿ ದನಿಗೈದುವೊಗ್ಗಿನಲಿ       ೨೮

ನಾಳೆ ಮನ್ಮಥ ಬಂದಪನು ವನ
ಕೇಳಿಗರಗಿಳಿ ನಿಮ್ಮ ವಶವಾ
ಮ್ರಾಳಿ ಷಟ್ಪದ ಕುಸುಮ ನಿಮ್ಮಯ ಕಾಹು ಹಂಸಾಳಿ
ಮೇಳವಿಸಿ ಸರಸಿಗಳಲೆ[20]ಲೆ ತಂ
ಗಾಳಿ ನೀ ತೊೞಲೆಂದು ಮಧುವನ
ಪಾಲ ಸಾಱುವ ತೆಱದಿ ಪಿಕ ದನಿಗೆಯ್ದುವೊಗ್ಗಿನಲಿ         ೨೯

ಸ್ಮರನಿಭದ ಮದಲೇಖೆ ಜಿತಶಂ
ಬರನಸಿಯ ಹೊಗರತನುಕೋಪ
ಸ್ಫುರ ಮಹಾನಲಧೂಮ್ರ ಘನ ಕಾಮಾಂಧದುತ್ಪಟಲ
ಪುರಹರಾರಾತಿ ಪ್ರಶಸ್ತಾ
ಕ್ಷರ ಮನೋಜನ ಕೊರಲ ನೀಲದ
ಸರಗಳೆನಲಾ ಬನದಿ ಸಂಚಾರಿಸಿದುವಳಿನಿಕರ            ೩೦

ಕಾಹು ಮಿತ್ರನೊಳಾಯ್ತು ಜಾತಿಸ
ಮೂಹಕಗಲಿತು ಸಿರಿ ಕುಜಾತಿಗೆ
ಮೋಹಿದುದು ಮಧು ಪೆರ್ಚಿತಾಱಡಿ ರಾಜಕರ ಜಡಕೆ
ಸ್ನೇಹಿಸಿತು ಜನಕೆಯ್ದೆ ಮನ್ಮಥ
ದಾಹ ಮಿಕ್ಕುದು ಕುಸುಮಶರವು
ದ್ಗಾಹಿಸಿತು ಕಲಿಕಾಲದಂತೆ ವಸಂತವವನಿಯಲಿ          ೩೧

ಆ ವಸಂತಾಗ[21]ಮದೊಳಾ ಭೂ
ದೇವನೊಸೆದು ವಸಂತಪೂಜೆಯ
ನೋವಿ ಮಾಡಿಯೆ ಬೞಿಕ ನೀರಾಟಕ್ಕೆ ಮನದಂದು
ಹೂವಿನಖಿಳಾಭರಣಗಳ ಕಾಂ
ತಾವಳಿಗೆ ಕೊಟ್ಟೆಸೆವ ಸರಸಿಗೆ
ಭಾವಜಾಕಾರನು ವಿಳಾಸದಿ ಬಂದನೊಲವಿನಲಿ          ೩೨

ರಾಜಹಂಸಾನ್ವಿತದಿನಭವನ[22] ರಾಜಸಭೆಯನನಂತ ಪದ್ಮ ವಿ
ರಾಜಿತದೊಳಹಿಪಾಚ್ಯುತರ ಕುಮುದೋತ್ತದಲಿ ಶಶಿಯ
ರಾಜನನು ವರಪುಂಡರೀಕ
ಭ್ರಾಜಿತದೊಳಡವಿಯನು ದಿಗ್ಗಜ
ರಾಜನನು[23] ಪೋಲ್ತಂದುದಾ ಕೊಳನಧಿಕ ವಿಭವದಲಿ    ೩೩

ಹರಿಸಮೇತದೊಳಿಂದಿರೆಯ ಕೇ
ಸರದಿ ಸಿಂಹವನಬ್ಜದಿಂದಂ
ಬರವ ನೇತೃವಲಜಾಂಡವನನಿಮಿಷಾನ್ವಿತದಿ
ಸುರಪುರದ ಚಕ್ರದಿ ವರೂಥವ
ನು[24]ರು ಶಿಳೀಮುಖದಿಂ ಧನುರ್ಧರ
ವರರ ಪೋಲ್ತುದು ಪೂಗೊಳನು ಭೂಪಾಲ ಕೇಳೆಂದ     ೩೪

ಹೊಳೆಹೊಳೆವ [25]ನವ[26]ರತ್ನಗಳ ಕೇ
ವಳಿಸಿ ತೆರೆಯ ಪಳಿಕಿನವನಿಯ……
ಕೆಲದಲತಿ ಸೌರಭದ ಪಲ್ಲವತತಿಯ ಸೂಸಕದ
ತಳದೊಳೆಳ ಮುತ್ತುಗಳ ಮೞಲಿನ
ಲಳಿವ[27] ನಿರ್ಮಲ ಜಲದಿ ಮೇಲುರಿ
ಬಳೆದ ಕಮಲೋತ್ಪಲಗಳಿಂ ಕೊಳನೆಸೆದುದನವರತ    ೩೫

[28]ಬೇಱೆ ಬೇಱತಿ ಸೌರಭದ ಪೊಸ
ವಾರಿ[29]ಜಾಕರ ಕೋಟಿ ಸಂಖ್ಯಗ
ಳೋರಣದಿನೊಪ್ಪಿದುವು ನವರತ್ನಗಳ ರಚನೆಯಲಿ
ಧಾರಿಣೀಶರು ಸಚಿವರಾಪ್ತ ಕು
ಮಾರ ವಿಟರು[30] ವಿನೋದಿಗಳು ಪುರ
ವಾರನಾರಿಯರೆಯ್ದೆ ಮೆಱೆದರು ವಾರಿಕೇಳಿಯಲಿ         ೩೬

ಲಲನೆಯರು ಪೂಗೊಳನನತಿ ಸ
ಲ್ಲಲಿತದಿಂ ಪೊಕ್ಕಾಡುತಿರೆ ಕೋ
ಮಲೆಯರೆನಗೊಳಗಾದರೆಂದುಬ್ಬೇಱಿ ನ[31]ಲವೆ[32]ಚ್ಚಿ
ನಲಿದು ರಾಗಿಸಿ ತನ್ನ ತೆರೆಗಳೊ
ಳೊಲವಿನಿಂ ನೀರೆಱೆದುದಾ ಮನ
ವೆಳಸಿ ಕಾಮುಕನಂತೆ ತತ್ಕೊಳನಧಿಕ [33]ವಿಭವದಲಿ[34]   ೩೭

ಸುಲಲಿತಾಂಘ್ರಿಯಲೆಱಗಿ ಜಂಘೆಯೊ
ಳೆಳಸಿ ನುಣ್ದೊಡೆಯಡರಿ ಜಘನಕೆ
ನಿಲುಕಿ ನಾಭಿಯೊಳಲಸಿ ತನುವಾಲಿಂಗಿಸಿಯೆ ವಳಿಯ
ಹೞಚಿ ಕುಚಗಳ ಸೋಂಕಿ [35]ಕಕ್ಷ[36]ದೊ
ಳೊಲಿದು ಮುಖಕಡರುತ್ತ ವಿಟನಂ
ತೆಳಸಿ ತರಳತರಂಗ ಸಂಕುಳ ನೆರೆದುವಬಲೆಯರ      ೩೮

ಅಳಕವಳಿ ಕುಚ ಚಕ್ರವಾನನ
ಜಲಜ ಲಾವಣ್ಯಾಂಬು ನಿರ್ಮಲ
ಜಲ ನಿತಂಬವೆ ಪುೞಿನ ಗಮನ ಮರಾಳ ವಚನ ಶುಕ
ಲಲಿತಲೋಚನ ಕುಮುದ ನಾಭಿಯೆ
ಸುೞಿಗಳಾಗಲು ಸರಸಿ ಸರಗಳೊ
ಳೊಲಿದು ನರ್ತಿಪ ತೆಱದಿ ಕೊಳನೊಳಗೆಸೆದರಬಲೆಯರು          ೩೯

ಕರದ ತೆಪ್ಪದೊಳೊಸೆದು ಸುರಮಂ
ಜರಿಯನೀ ಸುತ [37]ಜಾಱಿ[38]ದಂತವ
ನಿರದೆ ಲಕ್ಷ್ಮಿಯ ಪಡೆದು ಪದ್ಮಿಯನಪ್ಪಿ ವಿಮಲೆಯೊಳು
ಬೆರಸಿ ನೀರೊಳು ಮುೞುಗಿ ವಿದ್ಯಾ
ಧರಿಯ ಚುಂಬಿಸಿ ಕನಕಮಾಲೆಯ[39]ನರಸ[40]ನೊದೆದತಿ ಚಾತುರದಿ ನೀರಾಟವಂಡಿಸಿದ     ೪೦


[1] ರ ಲ (ಜ)

[2] ರ ಲ (ಜ)

[3] ವಾ (ಜ)

[4] ದಾಕ್ಷಿನೋತರುಣಿ ನೋಡಿದರಮಳ (ಜ)

[5] ದಾಕ್ಷಿನೋತರುಣಿ ನೋಡಿದರಮಳ (ಜ)

[6] x (ಜ)

[7] x (ಜ)

[8] x (ಜ)

[9] x (ಜ)

[10] x (ಜ)

[11] ವೆ (ಜ)

[12] ವೆ (ಜ)

[13] x (ಜ)

[14] ಪಾಲದಲಿ (ಜ)

[15] ಪಾಲದಲಿ (ಜ)

[16] ಲನನಾಂ ವನಾಂತದಲಿ (ಜ)

[17] ಲನನಾಂ ವನಾಂತದಲಿ (ಜ)

[18] ಕಿ (ಜ)

[19] ಕಿ (ಜ)

[20] ನೆ (ಜ)

[21] ದ (ಜ)

[22] ನು (ಜ)

[23] + ನೆಱೆ (ಜ)

[24] ದು (ಜ)

[25] x (ಜ)

[26] x (ಜ)

[27] x (ಜ)

[28] x (ಜ)

[29] x (ಜ)

[30] ಪುರುಷ (ಜ)

[31] ಲಿಮೆ (ಜ)

[32] ಲಿಮೆ (ಜ)

[33] ರಾಗ (ಜ)

[34] ರಾಗ (ಜ)

[35] ಕ್ಷಣ. (ಜ)

[36] ಕ್ಷಣ. (ಜ)

[37] ಚಾರಿತ (ಜ)

[38] ಚಾರಿತ (ಜ)

[39] x (ಜ)

[40] x (ಜ)