ತಿ

[1]ಳಿಯುದಕವೆಂದಂಗಕಾಂತಿಯ
ತುೞುಕುವರು ಕಣು ಹೊಳೆಯೆ ಮೀನೆಂ
ದಳುಕುತಳಿಕುಳವೆಂದು ಹೆಱೆ ನೂಕುವರು ಕುಂತಳವ
ತಳಿರೆನುತ್ತಡಿವಿಡಿವ ವದನವ
ಜಲಜವೆಂದಾನನವ ಸೋಕುತ
ನಲಿದು ಮುಗ್ಧೆಯರಾಡಿದರು ಜಲ ಕೇಳಿಯೊಲವಿನಲಿ    ೪೧

ಅರಸ ಕೇಳೈ ಬೞಿಕ ಜೀವಂ
ಧರನು ನಾನಾ ಪರಿಮಳೋದಕ
ಭರಿತ ಖೇಡಾಕುಳಿಗೆ ಬಂದಬಲೆಯರಿಗೊಲವಿನಲಿ
ಮೆಱೆವ ಮಣಿಮಯ ಯಂ[2]ತ್ರಗಳ ಕೊ
ಟ್ಟರಸಿಯರು ಸಹಿತೋಕುೞಿಯ ವಿ
ಸ್ತರದೊಳಾಡಿದನರಸನಭಿನವ ಕಾಮನಂದದಲಿ          ೪೨

ಲಾಲಿತದಿ ರತಿ ಮದನಗೊಲಿದು ವಿ
ಶಾಲತರ[3] ಮಲ್ಲಿಗೆಯ ಹೂವಿನ
ಮಾಲೆಯಿಕ್ಕಿದಳೆನಲು ಯಂತ್ರದಿ ಗಂಧವನು ಮೊಗೆದು
ಲೋಲ ಕಕ್ಷ ಕಟಾಕ್ಷರುಚಿಗಳು
ಸಾಲಿಡಲು ನೆಗೆದಬ್ಬರಿಸಿ ಗುಣ
ಮಾಲೆ ಜೀವಂಧರನ ಮೇಲೊಂದಿದಳು ತವಕ[4]ದಲಿ      ೪೩

ಮುಳಿದು ಮನ್ಮಥನಿಕ್ಷುಚಾಪವ
ನಲಘು ಶಶಿ ತಿಮಿರಾಗ್ನಿ ಶರಗಳ
ನಳವಡಿಸಿ ಕವಿದೆಚ್ಚನೆನೆ ನೃಪನಂಗನೆಯ ಮೇಲೆ
ಮಲಯಜೋದಕ ಮೃಗಮದಾನ್ವಿತ
ಸಲಿಲ ಕುಂಕುಮ ವಾರಿಗಳ ಜೀ
ರ್ಕೊಳವಿಯಲಿ ಮೊಗೆದೆತ್ತಿ ಸುರಿಯುತ್ತಿರ್ದಳೊಲವಿನಲಿ            ೪೪

ಭರದಿ ಯಂತ್ರದೆ[5] ನೀರ ಮೊಗೆಯು
ತ್ತಿರಲು ಸಡಿಲಿದ ಮುಡಿಯ ಗೋಣಿನೊ
ಳಿಱುಕಿ ಜಾಱಿದ ನಱಿಯನೆಡಗೆಯ್ಯಿಂದ ತಾಳ್ದಲೆವ
ಕುರುಳ ತಡವುತ ಜ[6]ಘನಕುಚಗಳ
ಭರಕೆ ಬಳುಕುತ ಬಂದು ಸೂಸಿದ
ಳುರವಣಿಸಿ ಗಂಧರ್ವದತ್ತೆ ನೃಪಾಲನಂಗದಲಿ ೪೫

ಮಾರನಿಭ ಕುಂಭಸ್ಥಲದ ಮದ
ಧಾರೆಯೆನೆ ಗಂಧರ್ವದತ್ತೆಯ
ಚಾರು ಕುಚಗಳ ಮೇಲೆ ನವಕತ್ತುರಿಯ ವಾರಿಯನು
ಧಾರಿಣೀಪತಿ ಯಂತ್ರದಲಿ ಮೊಗೆ
ದಾಱಿ ಸೂಸಲು ಕನಕಮಾಲೆ ವಿ
ಶಾರದನ ಮೇಲೊಂದಿದಳು ಪನ್ನೀರ ಮುಳಿಸಿನಲಿ       ೪೬

ವದನದಿಂ ಮೆಲ್ನಗೆಯ ಚೆಲ್ಲುತ
ಲಧರದಿಂದಮೃತವನು ಸುರಿಯುತೆ
ರದನದಿಂ ಮಿಂಚೊಂದಿಸುತೆ ಕಣ್ಣಿಂದ ಬಾಷ್ಪಗಳ
ಒದವಿಸುತೆ ತನುವಿಂದೆ ಲಾವ
ಣ್ಯದ ರಸವ ಸೂಸುತ್ತೆ ಯಂತ್ರದೊ
ಳುದಕವನು ಸುರಿದಳು ನಿಜೇಶನ ಮೇಲೆ ಹರಿಣಾಕ್ಷಿ      ೪೭

ತರುಣಿಯರ ಮೇಲವನಿಪತಿ ಕ
ತ್ತುರಿಯ ವಾರಿಯ ಸೂಸೆ ಮುಖಪಂ
ಕರುಹವಳಿಮಾಲೆಯನು ಕರ್ಣೋತ್ಪಲವು ನಾಳವನು
ಕೊರಲು ನೀಲದ ಸರವ ಭ್ರೂ[7]ರ್ಧನು
ತಿರುವನುನ್ನತ [ಜಘನ] ನೀಲಾಂ
ಬರವ ಪಡೆದುದೆನಲ್ಕಿೞಿದುವಸಿತಾಂಬುಧಾರೆಗಳು      ೪೮

ಧರಣಿಪಾಲನ ಮೇಲೆ ಶತಸಾ
ಸಿ[8]ರ ನಿತಂಬಿನಿಯರು ಸುಯಂತ್ರೋ
ತ್ಕರದಿ ಮಲಯಜವಾರಿಗಳ ಸುರಿದೊಡನೆ ಕತ್ತುರಿಯ
ಪರಿಮಳಾಂಬುವ ಮೊಗೆದು ಸೂಸು
ತ್ತಿರಲೆಸೆದುದಾ ನೃಪನ ತನುವಂ
ಬರ[9]ನದಿ[10]ಯ ಮೇಲಿೞಿದ ನವ ಕಾಳಿಂದಿಯಂದದಲಿ    ೪೯

ಮೊಲೆಯಲುಗೆ ದೋರ್ಮೂಲ ನೆರೆ ತಳ
ತಳಿಸೆ ತನುಲತೆ ಕೊಂಕೆ ತೆ[11]ಗೆದು
ಜ್ವಲಿಪ ಯಂತ್ರವ ನೆಗಪಿ ಹೊಯ್ದಾಡುವ ಕುಮಾರಕನ
ಮುಳಿದು ಕರೆದೊಡ್ಡೊಡ್ಡೆನುತ ಮಂ
ಡಳಿಸಿ ಸತಿಯೊಡ್ಡಿಸಿದ ಭಾವಂ
ಗಳಲಿ ಭಾವಜನಾದನಂಗಜನಂದು ಧರಣಿಯಲಿ          ೫೦

ಸಾದು ಕತ್ತುರಿಯುದಕದಿಂ ಕಱಿ
ದಾದ[12]ಕುಂಕುಮರಸದಿ ನೆಱೆ[13] ಕೆಂ
ಪಾದ ನೆರೆಸುತ್ತಿದ ತಳಿರ್ಗಳ ಗಂಧವಾರಿಯಲಿ[14]ತೋದು[15] ಬಿಳುಪಾದಧರ ಮೌಕ್ತಿಕ[16]ವೈದೆ[17]ತುಱುಬಿದ ನವಿಲ ಗರಿಯೋ
ಪಾದಿಯಂತಿರೆ ಶಬರಿಯಂತಿರ್ದಳು ಸರೋಜಾಕ್ಷಿ        ೫೧

ಮುತ್ತಿದುವು ಶತಪತ್ರಗಳನಳಿ
ಮೊತ್ತವೆನಲಾ ಚಂದ್ರಮುಖಿಯರ
ನೇತ್ರದಲಿ ಕತ್ತುರಿಯ ವಾರಿಯನಮಳ ಯಂತ್ರದಲಿ
ವಿಸ್ತರದಿ ಮೊಗೆದಂಗರುಚಿ ದಿಗು
ಭಿತ್ತಿಗಳ ನೆಱೆ ಮುಸುಕಲಾ ಭೂ
ಪೋತ್ತಮನು ನಗುತೆತ್ತಿ ಸುರಿದನು ಬಹಳ ಹರ್ಷದಲಿ    ೫೨

ಹೆಱೆಯ ರಾಹು ಪಯೋಜವನು ಮಧು
ಕರವು ತಳಿರ ಪಿಕಾಳಿ ಗಿರಿಗಳ
ನುರುವ ಕಾರ್ಮುಗಿಲಿಳೆಯ (ಮಿಂಚನು) ರಾತ್ರಿ ಪುಳಿನಗಳ
ವರ ಯಮುನೆ ಮುಸುಕಿ[18]ರ್ದುದೆ[19]ನೆ ಕ
ತ್ತುರಿ ಲಲಾಟ[20]ದೆ ನಾಡೆ[21] ನಯನಾ
ಧರ ಕುಚಾಂಗ ನಿತಂಬಗಳಲೆಸೆದುವು ಲತಾಂಗಿಯರ  ೫೩

ಫುಲ್ಲ ಶರನರಲಂಬ ತೊಡಚಿದ
ಬಿಲ್ಲೊಳೆನೆ ಮುನಿದೊರ್ವ ಸತಿ ತನು
ವ[22]ಲ್ಲಿ ಕೊಂಕಲು [23]ಹಿಗ್ಗಿ[24] ಕರಯಂತ್ರದಲಿ ನೀರ್ಮೊಗೆದು
ಚೆಲ್ಲೆಗಂಗಳ ಕಕ್ಷಪುಟದಲಿ
ಹಲ್ಲುಗಳು ತಳತಾಳಿಸಲೆತ್ತಿ ಮ
ಹೋಲ್ಲಸದಿ ಚೆಲ್ಲಿದಳು ಭೂಪನ ಮೇಲೆ ತವಕದಲಿ        ೫೪

ನಿಲ್ಲು ನಿಲ್ಲೋಡದಿರು [25]ಹೊಯ್ಯುವ[26] ನಲ್ಲ ಬೆನ್ನೊಡ್ಡಿದನು ಕುಚಧ
ಮ್ಮಿಲ್ಲ ಕರ್ಣಾಭರಣ ಹಾರಾವಳಿಗಳಲುಗಾಡೆ
ತಲ್ಲಣದಿ ಬಂದುದಕವನು ಮೊಗೆ
ದುಲ್ಲಸದಿ ಭೂವರನ ಮೇಲುಱೆ
ಚೆಲ್ಲಿದಳು ಸತಿಯೊರ್ವಳೆಯ್ತಂದಮಳ ಯಂತ್ರದಲಿ      ೫೫

ಅಳಿಗಳಳಿಗಳವಟ್ಟುವಂದದ
ಲಳಕವಳಕವು ಮೀನ ಮೀಂಗಳು
ಹಳಚುವಂದದೊಳಕ್ಷಿ ಯ[27]ಕ್ಷಿ ಯ[28] ಶಶಿಯ ವರಶಶಿಯ
ನಿಲುಕುವಂದದಿ ಮುಖವ ಮುಖವಂ[29] ಡಲಿಸೆ ಗಿಳಿ ಗಿಳಿ ಸಾರ್ವವೊಲ್ ನುಡಿ[30] ಬಳಸಿ ಕಾಂತೆಯರೊಬ್ಬರು ತುೞುಕಿದರು ಜಲವ          ೫೬

ಆ ಲಲನೆಯರಿಗನಿತು ರೂಪನು
ತಾಳಿದಂತೆನ್ನಡಿಯಲಿದೆನೆ ನೃ
ಪಾಲ ಹುಸಿಯಿದು ನಡೆಯಲಿಹನೆ ಸುಜಾಣನೆಂದೆನುತ
ಬಾಲೆಯರು ಕಡು ಬೆಱಗ ತಾಳಿರ
ಲಾಳವಾಡುತ ವಹಿಲದಲಿ ಸ
ಮ್ಮೇಳದಲಿ ಜೀವಂಧರನು ನೀರಾಟವಂಡಿಸಿದ ೫೭*

ಜಲವನಂಗನೆ ಮೊಗೆದು ನಾಡಿಗೆ
ಸಿಲುಕೆ ವಿರಹದೊಳರಸನುದಕವ
ತುೞುಕೆ ಮಱೆದವಳಿಡುವ ಜಲಹರಿಗಳುಕಿ ನಿಲುವಂತೆ
ಮುೞುಗಿರಲು ಸತಿ ಮತ್ತೆ ತಣ್ಣೀ
ರ್ಗಳಿಗೆ ಬಾಗಿರೆ ಹೊಯ್ದಧರವನು
ನಿಲುಕಿ ಚುಂಬಿಸಿ ಮುಳುಗಿ ಮೂಡಿದನೊಂದು ಠಾವಿನಲಿ            ೫೮*

ಕಂಬುಕಂಠೆಯ ತುಱುಬು ಸಡಿಲೆ ಮು
ಖಾಂಬುಜದೊಳಿರೆ ನೀರೊಳದು ಪ್ರತಿ
ಬಿಂಬಿಸಲು ಕಂಡೀ ಸತಿಯನಾ ರಾಹು ನೆಱೆ ನುಂಗಿ
ಇಂಬಿನಲಿ ನೆಲಕೆಳೆಯುತಿದನೇ
ನೆಂಬ ಕಾಂತೆಯ ತಳದ ಮ
ದಾಂಬುವನು ನಗುತರಸ ಸುರಮಂಜರಿಗೆ ತೋಱಿಸಿದ            ೫೯*

ಎಳಸಿ ಸವತಿಯ ಗಾಡಿಗಿನಿಯನು
ನಿಲುಕಿ ಸಲಿಲಕ್ರೀಡೆಯೊಂದಿಸಿ
ಮುಳಿದು ಸತಿಯಾಡುವ ನೆವದೊಳವನಕ್ಷಿ[31]ಗಳ[32] ಜಲವ
ಲಲನೆಗಿಕ್ಕಿದನೆಂದೆನಲು ಮುಂ
ದಲೆಯೊಳಗೆ ಭರದಿಂದ ಸುರಿದನು ಗಂಧವಾರಿಯನು  ೬೦


[1] ತ (ಜ)

[2] ಮಂ (ಜ)

[3] ರು (ಜ)

[4] x (ಜ)

[5] ದ (ಜ)

[6] x (ಜ)

[7] ದೋ (ಜ)

[8] ವಿ (ಜ)

[9] ನಿಧಿ (ಜ)

[10] ನಿಧಿ (ಜ)

[11] ನೆ (ಜ)

[12] + ತಮ (ಜ)

[13] x (ಜ)

[14] ತೊಳೆದು (ಜ)

[15] ತೊಳೆದು (ಜ)

[16] ತೋದು (ಜ)

[17] ತೋದು (ಜ)

[18] ದ್ದವೆ (ಜ)

[19] ದ್ದವೆ (ಜ)

[20] x (ಜ)

[21] x (ಜ)

[22] ವಿ (ಜ)

[23] ಬಾಗಿ (ಜ)

[24] ಬಾಗಿ (ಜ)

[25] ಹುಯ್ಯೋ (ಜ)

[26] ಹುಯ್ಯೋ (ಜ)

[27] x (ಜ)

[28] x (ಜ)

[29] ಮಂ (ಜ)

[30] + ನುಡಿ (ಜ)

* ಈ ಪದ್ಮಗಳು ಜ ಪ್ರತಿಯಲ್ಲಿಲ್ಲ.

* ಈ ಪದ್ಮಗಳು ಜ ಪ್ರತಿಯಲ್ಲಿಲ್ಲ.

* ಈ ಪದ್ಮಗಳು ಜ ಪ್ರತಿಯಲ್ಲಿಲ್ಲ.

[31] x (ಜ)

[32] x (ಜ)