ಧರಣಿಪಾಲಲಲಾಮ ಜೀವಂ
ಧರನು ಮುದದಲಿ ಪುರವ

[1] ರಾತ್ರಿಯ
ಚರಿಸಿ ಮರ[2]ೞಿದು[3] ಬಂದು ಹೊಕ್ಕನು ರಾಜಮಂದಿರವ

ಕ್ಷಿತಿಪ ಕೇಳೈ ಬೞಿಕ ವಿಜಯಾ
ವತಿ ಕುಮಾರಕ ರಾಜ್ಯವೊಂದಿರ
ಲತಿಶಯಾನಂದದಲಿ ಕತಿಪಯ ದಿ[4]ವಸವನು ಕಳೆದು
ನುತ ತಪಸ್ವಿಗಳೂರೊಳಿಹುದನು
ಚಿತವೆನುತ್ತದನಱಿದು ಸತಿಯಾ
ಸುತನ ಬೀೞ್ಕೊಂಡೆಯ್ದಿದಳು ಭೀಕರ ತಪೋವನವ      ೧

ಜನನಿಯಗಲಿದ ಬಹಳ ಚಿಂತಾ
ವನಧಿಯೊಳಗೋಲಾಡಿ ಬೞಿಕಾ
ಜನಪ ತನ್ನೊಳಗೆಂದ ತಾಪಸಿಗಳು ಪುರಂಗಳಲಿ
ಸನುನಯದೊಳಿಹುದುಚಿತವಲ್ಲೆಂ
ದೆನುತ ದುಗುಡವನುೞಿದು ಭೂಕಾ
ಮಿನಿಯ ರಕ್ಷಿಸುತಿರ್ದ ಸುಖದಿಂದರಸನೊಲವಿನಲಿ      ೨

ಲೀಲೆಯಲಿ ಜೀವಂಧರ ಕ್ಷಿತಿ
ಪಾಲಕನು ತಾನೊಂದು ದಿನ ಚೈ
ತ್ಯಾಲಯಕೆ ಬಂದರ್ಹನಿಗೆ ಮಾಪೂಜೆಯನು ಮಾಡಿ
ಆಲಯಕೆ ಮಗುೞೆಯ್ದಿ ಬರೆ ಭೂ
ಲೋಲ ಪುರರಾತ್ರೀ ವಿಹಾರವ
ಮೇಳವಿಸಬೇಕೆಂದು ರವಿಯಸ್ತಾದ್ರಿಗೆಯ್ತಂದ   ೩

ಪಡುವಣಂಭೋನಿಧಿಯ ವಡಬಾ
ನಳನ ಶಿಖಿಯೋ ಬುಧರು ಸಂಧ್ಯಾ
ಮಡದಿಗರ್ಘ್ಯವನೆತ್ತಿದಾಹುತಿ ಚಂದನಾಂಕಿತವೊ
ಪೊಡವಿಪತಿ [5]ಜೀವಕನ[6] ತೇಜೋ
ಗಡಣವೋ ತಾನೆನಲು ಲೋಕದೊ
ಳಿಡಿದು ಸಂಧ್ಯಾರುಣವೆಸೆಯೆ ಭೂಪಾಲ ಕೇಳೆಂದ       ೪

ಇನಿಯಂನಸ್ತಮಿಸಿದನು ಸಿರಿಯುಂ
ಟೆನುತ ಯಾಮಿನಿ ಪೇೞ್ದಳದಱಿಂ
ದೆನಗೆ ಬಪ್ಪುದು ರಾಜಬಾಧೆಯದನು ಜಯಿಪೆನೆಂದು
ನೆನೆದು ವಿಷ[7]ಘುಟಿಕೆ[8]ಗಳ ಪದ್ಮಿನಿ
ಕನಲಿ ನುಂಗಿದಳೆನಲು ಷಟ್ಪದ
ವನರುಹೋದರದೊಳಗೆ ದನಿಯುಡುಗಿದ್ದುವಿರುಳಿನಲಿ  ೫

ಭೂರಮಣನಾ ಸಂಜೆಯಲಿ ವಿ
ಸ್ತಾರದಿಂ ತಾ ಬರಲು ರಾತ್ರಿ ವಿ
ಹಾರಿಸುವೆವೀ ಪುರದೊಳೆಂದು ವಿದಗ್ಧ ನಡವಿಟರ[9]ರು
ಭೂರಿ ಪರಿಹಾಸಕರು ಮಂತ್ರಿ ಕು
ಮಾರಕರು ಸಹಿತೊಲವಿನಲಿ ಸಂ
ಚಾರಿಸುತ ನಡೆತಂದರಾ ಪುರವರದ ಮಧ್ಯದಲಿ          ೬

ಕರದ ಗಾಜಿನ ಬಳೆಯ ಮಲಿನಾಂ
ಬರದ ಶಂಖದ ಮುದ್ರೆಗಳ ನೆಱೆ
ತುಱುಗಿದವಲೋಹಗಳ ತೊಡಿಗೆಯ ಮಾಸಿದೊಡಲುಗಳ
ಬಿಱುನಗೆಯ ಬಡುಮು[10]ಡಿಯ ನಟಣೆಯ
ತಿರುಹುಗಳ[11]ಲಾ ಸಮಯದಲಿ ತ
ತ್ಪುರದ ದಾಸೀನಿಕರ ಸಂಚಾರಿಸಿದರೞ್ತಿಯಲಿ[12]           ೭*

[13]ಬಟ್ಟತಾಗಿಯೆ ಹಣೆಗೆ ಸುಣ್ಣದ
ಬೊಟ್ಟಿಸಗಿ ಬೈತಲೆಯೆಡೆಯ ಹದ
ಗೊಟ್ಟು ತಿದ್ದಿಯೆ ಕೞಿದ ಹೂಗಳ[14] ತುಱುಬಿ ಬಾಯೊಳಗೆ
ಕೆಟ್ಟಡಕೆಗಳನಡಿಸಿಕೊಂಡು ಮ
ಹಾಟ್ಟಹಾಸದೊಳೊಲಿದು ದಾಸಿಯ
ರಿಟ್ಟಣಿ[15]ಸಿದರು ಸಂಜೆಯಲಿ ಪುರವರದ ಮಧ್ಯದಲಿ       ೮

ದಾಸಿಕಾ ಚಿಪಿರಾಟ ಬಲ್ಲಿಪ
ರಾಸಿ ಬಾಚಿಯೆನುತ್ತ (?) ಮೇಳದ
ದಾಸಿಯಲೆದಾಲಯವ [16]ಮಿಗೆ[17]ಹೊಱವಟ್ಟು ಗುಡಿಗುಂಡ
ವಾಸ ಮಠ ಮಂಠೆಯ ತಟಾಕೋ
ದ್ದೇಶದಲಿ ಕಾದಿದ್ದ ವಿಟರೊಳ
ಗಾ ಸಮಯದಲಿ ರಮಿಸುತಿದ್ದರು ಬಹಳ ಹರ್ಷದಲಿ      ೯

ವಾಸ ಕನಕಾಭರಣ ಲೇಪನ
ಕಾಸೆ ಮಾಡಳು ಕೊಂಡರೊಂದರೆ
ಕಾಸು ಕರೆದೊಡೆಯಿದಳು ಬಹಳುಬ್ಬುವಳು ೪ಸುರತಕ್ಕೆ
ಬೇಸಱಳು ನಿಷ್ಕಪಟಿ ಭಯವಿ
ಲ್ಲೋಸರಿಸಳಂತಾಗೆ ವಿಟರಿಗೆ
ದಾಸಿಯರ ಸಂಭೋಗ ಲೇಸೆಂದೋರ್ವ ವಿಟ ನುಡಿದ[18] ೧೦*

೫ಹೊಡೆಯೆ ಕಂತುಕದಂತೆ ಪುಟನೆಗೆ
ದೊಡೆಯಲುಬ್ಬುವಳುಬ್ಬಲು[19] ಬೈದು
ನುಡಿದೊಡೆ ಮಹಾ ರಾಗಿಪಳು ನೂಂಕೆ [ಯುಯ್ಯಲೆಯ೬ವೊಲು][20] ತಡೆಯದಿದ್ದೆಡೆಗೆಯ್ದಿ ಬಹಳೀ
ಪೊಡವಿಯೊಳು ಬೆಲೆವೆಣ್ಣಿನಿಂದಿ
ಮ್ಮಡಿ ವಿಶೇಷವು ದಾಸಿ ದಿಟವೆಂದೊರ್ವ ವಿಟ ನುಡಿದ  ೧೧

ಜಡಿದು ಸೀರೆಯ ಕಳೆದು ಕೌಂಕುೞೊ
ಳಡಸಿ ರಾಗಿಸಿ ಸೊಕ್ಕಿ ಪಾಡುತ
ತೊಡೆಯ ಬಾಱಿಸಿಕೊಳುತ ನಗುತೊಲೆಯುತ್ತ ಮದ್ಯವನು
ಕುಡಿ[21]ದು ಢಱ್ರನೆ ತೇಗಿ ಬಾೞೆ
ನ್ನೊಡೆಯ ಜೀವಂಧರನೆಯೆಂದಂ
ಗಡಿಯವರ ನಗಿಸಿದರು ದಾಸಿಯರತಿ ದುರುಕ್ತಿಯಲಿ     ೧೨

ವಿನುತ ಸಚರಾಚರ ವನಜನಂ
ಜನದಿ ನಿರ್ಮಿಸಿಯಾ ಮೃಗೋದ್ಭವ
ವನು ಧರಿತ್ರಿಕರಂಡದಲಿ ತೀವಿದನೆನಲ್ಕಖಿಳ
ಜನಕೆ ಕಂಗಳ ತೆರೆದಿರಲು ಲೋ
ಚನವ ಮುಟ್ಟಿದೊಡೊಂದೆ ಪರಿಯಾ
ಯ್ತೆನಲು ಕತ್ತಲೆ ಸುತ್ತಿ ನೆಱೆ ಮುಸುಕಿತು ಜಗತ್ರಯ[22]ವ  ೧೩

ಶಶಿಯೆನಿಪ್ಪ ವಸಂತಕಾಲದೊ
ಳೆಸೆವ ಗಗನದ್ರುಮದಿ ಜನಿಸಿದ
ಕುಸುಮಗಳೊ ವಾರಿಧಿಯ ಮೂಷೆಯೊಳಮೃತಕರನೆಂಬ
ಮಿಸುಪ ಬೆಳ್ಳಿಯ ಗಟ್ಟಿಯನು ಕರ
ಗಿಸಲು ಸಡಲಿದ ಕಿ[23]ಡಿಗಳೆನಲಾ
ಗಸದಿ ತಾರಾವಳಿಗಳತಿ ರಾಗಿ[24]ಸಿದುವೊಗ್ಗಿನಲಿ           ೧೪

ಅಲಕಿ ಮುಂದೆಯ್ದಡರೆ ರವಿಯು
ಕ್ಕಲಿಸುವನೆ ಶಶಿರಾಜನೆಂದಾ
ನುೞುಹಿದೆನು ದೀಪಾಳಿ ಮನೆಯಾವಳಿಯ ಹೊಕ್ಕಡಗಿ
ಉೞಿದುವೆನ್ನಯ ಮಱೆಯ ಹೊಕ್ಕುಡು
ಬಳಗ ಬದುಕಿದುವೆಂಬವೊಲು ಕ
ತ್ತಲೆ ಜಗಂಗಳ ತೀವಿದುದು ಭೂಪಾಲ ಕೇಳೆಂದ          ೧೫

………………………………………..
………………………………………..
…………………………………………………….
ಜನವ ಕಂಡಳುಕುತ್ತೆ ಹೊಸಬರ
ದನಿಯನಾಲಿಸಿ ನಿಲುತ ನಿಜ ಸೂ
ಚನೆಯೆಡೆಗೆ ಗಮನಿಸುವ ಜಾರೆಯನರಸನೀಕ್ಷಿಸಿದ       ೧೬

ಕೆ[25]ಲನ ನೋಡುತ ಮುಡಿಯನಡಿಗಡಿ
ಗೊಲೆಯುತನುರಾಗಿಸುತ ನಗುತಿ
ಕ್ಕೆಲನ ನೋಡುತ ಮೊಲೆಯ ಮೇಲುದ ಸರಿಯುತವೆ ತನ್ನ
ನೆೞಲನಾರಯ್ಯುತ್ತ ನಖದಿಂ
ದಳಿಗುರುಳನೊಂದಿಸುತ ಮೋನವ
ತಳೆದು ಜಾಱುವ ಜಾರೆಯೋರ್ವಳನರಸನೀಕ್ಷಿಸಿದ      ೧೭

ಚರಿಸದಿರಿ ನೀವೆಂದು ಬಾಗಿಲ
ಹೊರೆಯೊಳೆನ್ನಯ ಪುರುಷನೂರಿಗೆ
ಸರಿದನಂಧಕ ಮಾವನತ್ತೆ ಜರಾಂಗಿ ಭಾವ ಮೃತ
ಭರದ ಯೌವನೆ ನಾನು ನಾದಿನಿ
ತರಳೆ ಮತ್ತಾ[26]ರೆಱಗ[27]ರೆನುತೊಳ
ಸರಿದು [28][ಹದಿರನು][29] ನುಡಿವ ಜಾರೆಯನರಸನೀಕ್ಷಿಸಿದ           ೧೮

ದೆಸೆಯ ನೋಡದಿರಕ್ಕ ನಿನ್ನಯ
ಮಿಸುವ[30] ಕಂಗಳ ಕಾಂತಿ ಪಸರಿಪು
ದುಸಿರಬೇ[31][ಡಿರದವಿದು] ದಂತ[32]ಪ್ರಭೆ ಮುಖೇಂದುರುಚಿ
ಮುಸುಕುವುದು ತಲೆಗುತ್ತಿ ನಡೆಯೆಂ
ದುಸಿರುತವೆ ಸೂಚನೆಯ ಮನೆಗತಿ
ಕುಶಲ ದೂತಿಯರೈದುತಿಹುದವನೀಶನೀಕ್ಷಿಸಿದ           ೧೯

ಮೆಱೆವ ಮಣಿಮೇಖಲೆಯ ಮೊರೆಯದ
ತೆಱದಿ ನಿಱಿಯೊಳಗೌಂಕಿ ಮೇಣ್ ನೂ
ಪುರಗಳುಲಿಯದ ತೆಱದೊಳಾ [33]ಕಣಕಾಲಿ[34]ಗೊತ್ತರಿಸಿ
ಜರಿದು ಜಘನವ ಮುಡಿಯ ಗೋಣಿನೊ
ಳಿಱುಕಿ ಸಡಿಲಿದ ನಿಱಿಯ ವಾಮದ
ಕರದೊಳಾಂತೆಯ್ದುವ ಲತಾಂಗಿಯನರಸನೀಕ್ಷಿಸಿದ      ೨೦


[1] ಮ (ಜ)

[2] ೞ್ದ (ಜ)

[3] ೞ್ದ (ಜ)

[4] + ನ (ಜ)

[5] ವಕನು (ಜ)

[6] ವಕನು (ಜ)

[7] ಗಳಿಗೆ (ಜ)

[8] ಗಳಿಗೆ (ಜ)

[9] ಠ (ಜ)

[10] ಮ (ಜ)

[11] x (ಜ)

[12] x (ಜ)

* ಈ ಪದ್ಯಕ್ಕೆ ಜ ಪ್ರತಿಯಲ್ಲಿ ಕ್ರಮಾಂಕವಿಲ್ಲ

[13] x (ಜ)

[14] x (ಜ)

[15] ಳಿ (ಜ)

[16] x (ಜ)

[17] x (ಜ)

[18] x (ಜ)

* ಈ ಪದ್ಯದ ಕ್ರಮಾಂಕವು ಜ ಪ್ರತಿಯಲ್ಲಿಲ್ಲ.

[19] x (ಜ)

[20] x (ಜ)

[21] + ಕುಡಿ (ಜ)

[22] x (ಜ)

[23] ಕು (ಜ)

[24] ಜಿ (ಜ)

[25] ನೆ (ಜ)

[26] x (ಜ)

[27] x (ಜ)

[28] ಬೆಡಗಿ (ಜ)

[29] ಬೆಡಗಿ (ಜ)

[30] ಪ (ಜ)

[31] ಡೆಂದೊವದು ತಂದು (ಜ)

[32] ಡೆಂದೊವದು ತಂದು (ಜ)

[33] ಗಣಕಾದಿ (ಜ)

[34] ಗಣಕಾದಿ (ಜ)