ಹರೆದ ಕುರುಳೊಂದಿಸುತ ನುಣ್ದೊಡೆ
ಯರೆನಖವನೊಱಸುತ್ತಲುಸಿರೊಳ
ಸರಿಯುತುಬ್ಬಿಸ ತುಟಿಯ ಕು

[1]ಡಿನಾಲಿಗೆಯೊಳೊಂದಿಸುತ
ನಿಱಿಯನಾನುತ ಸೋರ್ಮುಡಿಯ ಪೂ[2]ಡಿರು[3]ತ ನಿಡು ಮುಸುಕಿಕ್ಕುತಾಗಲೆ
ಸರಿವ ಸುರತ ಮ[4]ನೋಭಿಜಾರೆಯನರಸನೀಕ್ಷಿಸಿದ      ೨೧

ಹರಿಗೆ ಕಣ್ಣಜಗಾಸ್ಪದವು ಸಿರಿ
ಗಿರವು ತನಗೆ ನಿಜಾಪ್ತವಹ ಪಂ
ಕರುಹಕೀ ಚಂದ್ರಮನು ಕಾರಣ ಮುಗಿದುವೆಂದು ರವಿ
ಕೆರಳಿ ಚಕ್ರದೊಳಿಡಲು ಗಗನಾಂ
ತರದಿ ಕಡಿದರ್ಧಾಂಗ ಸೂಸಿದ
ತೆಱದಿ ತಾರಾಪರಿವೃತದೊಳರ್ಧೇಂದು ರಂಜಿಸಿದ       ೨೨

ಚಿತ್ತಜಂಗೆತ್ತಿದ ತಳಿರ್ಗಳ
ಸತ್ತಿಗೆಯೊ[5] ದಿವಿಜೇಭಕುಂಭದಿ
ತೆತ್ತಿಸಿದ ಸಿಂದೂರವೋ ವಿರಹಿಗಳಿಗಂಗಜನು
ಎತ್ತಿದಾ ಚಕ್ರವೊ ರಥಾಂಗಕೆ
ಹೊತ್ತಿದತಿ ವಿರಹಾಗ್ನಿಯೆನಲೆ೬ಸೆ
ಯಿ[6]ತ್ತು ರಾಗದಲಿಂದುಮಂಡಲ ಪೂರ್ವ ಶೈಲದಲಿ       ೨೩

ಸ್ಮರನ ಚಕ್ರದ ಬಾ…ಷ್ವವೋ
……ನೊಂದ ತನು ಚೈತ್ರಗೆ
ಬರಸಿದೋಲೆಯ ಲಾಕ್ಷಮುದ್ರೆಯೊ ಪೂರ್ವ ದಿಕ್ಸತಿಯ
ಗುರುಕುಚದ ಚೂಚಕವೊ ರೋಹಿಣಿ
ಯುರದೊಳನುಲೇಪಿಸಿದ [7]ವರ[8] ಕ
ಕತ್ತುರಿಯಿದೆನಲು ಕಳಂಕ ಮೆಱೆದುದು ಚಂದ್ರಮಂಡಲದ           ೨೪

ಸ್ಮರನಿಗದ್ಭುತ ವೀ[9]ರ ಚಂದ್ರಂ
ಗುರು ವಿಕೃತ……… ನಕ್ತಂ
ಚರ ರುಧಿರಪಾನಕ್ಕೆ ಜಾರಗೆ ಭಯವು ವಿಟಗುಗ್ರ
ವರಚಕೋರಕೆ ಶಾಂತ ಕುಮುದೋ
ತ್ಕರಕೆ ಸಹಶೃಂಗಾರವನ್ನೆಯ
ಮೆಱೆದಿರಲು ನವರಸವ ಬೀಱಿದನಾ ಸುಧಾಕಿರಣ        ೨೫

ಕ್ಷೀರವಾರಿಧಿ ಬಂದು ಸುರಭಾ
ಗೀರಥಿಯನಪ್ಪಿದುದೊ ಪೊಸ ಕ
ರ್ಪೂರವನು ತುಂಬಿದರೊ ಭುವನಕರಂಡಕದೊಳಿಳೆಯ
ಸಾರ ಚಂದನದಿಂದ ಸಮೆ[10]ದರೊ
ಮಾರನೃಪನತುಳ [11][ವಿಮಳ][12] ಹಾಸ[ಪೂ][13] ರವೆನೆ ಬೆಳದಿಂಗ[14]ಳುಱೆ[15] ತುಂಬಿತು ಜಗತ್ರಯವ         ೨೬

ಬೇಱೆ ಬೇಱೆ ಚತುರ್ವಿಧದ ಶೃಂ
ಗಾರ [16][ರಚನೆಯದ][17] ಮರೆ ಮೇಲಳಿ
ಹಾಱಲಱಿವುದೆನುತ್ತ ಚಂಪಕಮಾಲೆಯನು ನೆಗಹಿ
ಕ್ಷೀರದುಗ್ಧವ ಬೆರಸಿದಂದದೆ
ಚಾರುಚಂದ್ರಿಕೆಗೂಡಿ ಚರಿಸುವ
ಜಾರೆ ಮುತ್ತಿನ ಬೊಂಬೆಯಂತಿರಲರಸನೀಕ್ಷಿಸಿದ         ೨೭

ಸಿರಿಯ ಮನೆ ಜೌವನದ ನೆಲೆ ಸಿಂ
ಗರದ ಮಡು ಲಾವಣ್ಯದೆಡೆ ಚಾ
ತುರಿಯದಿಕ್ಕೆ ಕುಮಂತ್ರರೋಷಾಸ್ಥಾನ ಹುಸಿಯ ಮಠ
ಸರಸಮೋಹನವಶ್ಯ ಮಾಯಾ
ಕರುಷಣಾಶ್ರಯ ರೂಪವಿಭ್ರಮ
ದಿರವಿದೆನಿಸುವ ಸೂಳೆಗೇರಿಯೊಳರಸ ಬರುತಿರ್ದ      ೨೮

ಸ್ಮರನೃಪನ ವಿಜಯಾಂಕಮಾಲಾ
ಸ್ಫುರಿತ ಕೇತನವೆನೆ ಭುಜಂಗರು
ನೆರೆದು ತಾಟಿತ ಕನಕಘಂಟಾರಾವ ಶುಕಪಿಕದ
ವಿರಹಿಗಳ ಮದನಾಗಮವ[18]ನು
ಚ್ಚರಿಸುವಬಲಾನೀಕದಿಂದತಿ
ಮೆಱೆವ ವೇಶ್ಯಾ[19]ವಾಟವನು ಹೊಕ್ಕನು ಮಹೀಪಾಲ[20]  ೨೯

೩ನೋಟ ವಶ್ಯ ಸುಜಾಣ್ಮೆ ಮೋಹನ
ಕೂಟ ವಶ್ಯ ಸ್ತ್ರೀಯ ಸುರತೋ
ಚ್ಚಾಟವಾಕರವೇಗಸ್ತಂಭನ ನವರಸೋದ್ಭವನ
ತೋಟಿಯಾಕರ್ಷಣ ವಿಯೋಗ ವ
ಘಾಟ ಮಾರಣವೆಂಬ ವೇಶ್ಯಾ[21] ವಾಟದತುಳ ಪ್ರೌಢಿಯನು ಕಂಡನು ಮಹೀಪಾಲ         ೩೦

ಲಾ[22]ಲಿತವ[23] ಗಣಿಕಾಲಯ[24]ದೊಳೊ
ಡ್ಡೋಲಗಂಗೊಟ್ಟಂಗಜನು ಕೀ[25] ರಾಳಿಯೋದಲು ಬಂದು ಹುಗುವಜನಾಸ್ಯದಲಿ ಹರಿಯ
ಲೋಲ ವಕ್ಷದಿ ಸುರನಂಗದಿ
ಶೂಲಪಾಣಿಯ ಶಿರದಿ ಕಲೆಗಳ
ಜಾಲದಲಿ ನೋಡಿಸುವ ಶಶಿದೀಪಿಕೆಯ ಬೆಳಗಿನಲಿ       ೩೧

ಕುಸುಮಕೋದಂಡವನು ಮನ್ಮಥ
ನೆಸಗಿ ಜೇವೊಡೆದಂತೆ ಜಘನದೊ
ಳೆಸೆವ ಮಣಿಮಯ ಮೇಖಲಾಂಕಿತ ಘಂಟೆ ಘಮ್ಮೆನಲು
ಬಿಸರುಹಾನನೆಯೊ[26]ರ್ವಳೆಯ್ತಂ
ದಸಮಶರನಂಗನೆಯವೊಲು ರಂ
ಜಿಸಿ ವಿಳಾಸದಿ ನಿಂದಳೊತ್ತೆಗೆ ಮನೆಯ ಬಾಗಿಲಲಿ       ೩೨

ಇಟ್ಟ ನವ ಚಂದನದ ಬೊಟ್ಟಳ[ವಟ್ಟಿರಲು] ಪೂಣ್ದೆಣ್ಣೆಗಂಟಿನ
ತೊಟ್ಟ ಱವಕೆಯ ಮುತ್ತಿನೊಚ್ಚರಕಂದವೊಂದಿಸುತ
ಗಟ್ಟಿಕುಚ ನಸುದೋಱುವಂದದೊ
ಳುಟ್ಟ ಸಾಲೆಯ ಮೇಲುದೊಪ್ಪಿರೆ
ದಿಟ್ಟೆಯೊರ್ವಳು ನಿಂದಳಂಗಜನಲಗಿನಂದದಲಿ          ೩೩

ಕುಸುಮದೋಲೆಯನಿಟ್ಟು ಕೇದಗೆ
ಯೆಸೞ ತುಱುಬಿ ಜವಾದಿಯನು ಲೇ
ಪಿಸಿ ಕಪೋಲಂಗಳಲಿ ಚಿತ್ರವ ರಚಿಸಿ ಮಣಿಮಯದ
ತಿಸರವಿಕ್ಕೆಯೆ ಕತ್ತುರಿಯ ಬೊ
ಟ್ಟೆಸಗಿ ಹಾವುಗೆ ಮೆಟ್ಟಿ ಸೊಬಗಿಂ
ದೆಸೆದಳೊರ್ವಳು ಮದನಮೋಹನಮೂರ್ತಿಯಂದದಲಿ            ೩೪

ಚಿತ್ತಜನ ಮಾಸಾಳೊ ಮನ್ಮಥ
ಕಿತ್ತಲಗೊ ಮನಸಿಜನ ಥಟ್ಟಿನ
ಮತ್ತ ಗಜವೋ ಮದನಮುಂತ್ರಾಸ್ತ್ರವೊ ಝಷಧ್ವಜನ
ಪುತ್ತಳಿಯೋ ಕಂದರ್ಪ ರಚಿಸಿದ
ಸೂತ್ರವೋ ಮಾಸುತನ ದೞವೆನ
ಲಿತ್ತೆಱದಿ ಗಣಿಕಾನಿಕರ ಮೆಱೆದುದು ವಿಳಾಸದಲಿ          ೩೫

ನಡೆ ಸುರೇಭ ಮುಖೇಂದು ಹೃದ್ದೆಶೆ
ಮುಡಿಯು ನವಿಲೊಡಲಮರ ಹಯ ಜಾ
ಣ್ಣುಡಿ ಸರಸ್ವತಿಯಧರ ಸುಧೆ ನಳಿತೋಳು ಕಲ್ಪಕುಜ
೧ಕಡು ವಿಳಾಸಶ್ರೀಯ ತನ್ನೊಳು
ಪಡೆದು ಪಾಲ್ಗಡಲಂತೆಯೊತ್ತೆಗೆ
ಬೆಡಗಿನಲಿ ನಿಂದಬಲೆಯೊರ್ವಳನರಸನೀಕ್ಷಿಸಿದ[27]       ೩೬

[28]ನೆೞಲವೊಲು ಬೆಂಬಿಡದೆ ಕಡಲಂ
ತೊಳಗು[29]ದೋಱದೆ ಮಿಂಚಿನಂದದಿ
ಹೊಳೆದು ಸಾಮುದ್ರೀಕನಂತರ್ಥಾಂಶಗಳ ನೋಡಿ
ತಳಿರಿನಂತಡರ್ದಳಿಯವೊಲು ನೆ
ಗೞಹಿಕನದಾ[30] (?) ತೆಱದಿ ಭೋಗದಿ
ಸಲೆ ಮರುಳು ಮಾಡಿರ್ಪ ವೇಶ್ಯರನರಸನೀಕ್ಷಿಸಿದ        ೩೭

ಸಂಗತದಿ ತನ್ಮಧ್ಯ ಲಕ್ಷ್ಮಿಯ
ನಂಗರಾಜನ ದಿಗ್ವಿಜಯಕು
ತ್ತುಂಗೆ ಹೊಂಗಳಸಗಳ ಮೃದುಪಲ್ಲವವ[31] ದರ್ಪಣವ
ಮಂಗಳಾರ್ಥದಿ ಹೊತ್ತಳೆನಲು ಕು
ಚಂಗಳೋಷ್ಠವು ಸತ್ಕಪೋಲ ತ
ಲಂಗಳೊಪ್ಪಿದುವೆನುತ ನೃಪನೊರ್ವಳ ನಿರೀಕ್ಷಿಸಿದ      ೩೮

ನರೆದಲೆಯ ಮಸಿದೊಡೆದು ಮುಸುಕಿ
ಟ್ಟೊಱಸಿ ಮಸಿಯಱುವೆಯಲಿ ತುಱುಬನು
ಧರಿಸಿ ಜಠರಕೆ ಜರಿದ ಮೊಲೆಗಳ [32]ಸದೆಯ[33] ಱವಕೆಯೊಳು[34] ತುಱುಬಿ ನಸು ಸೊಡರಿಟ್ಟು ಕಣ್ಣೆವೆ
ಯುರುಳಲಂಜನವೂಡಿ ಸುೞಿವರ
ಕರೆವ ಮುದಿವೇಸಿಯರ ನಗುತವನೀಶನೀಕ್ಷಿಸಿದ          ೩೯

ಎಳಸಿ ನೋಡಿಯೆ ನೋಡಿಸುವ ಕೆಲ
ಕೊಲೆವ ನಗಿಸುವ ಕಾಣಿ ಬೇಡುವ
ಮುಳಿವ ಬಲುವನು ಜಾಣ್ಣುಡಿಯಿ[35] ಕರಗಿಸುವ ದಟ್ಟಿಸುವ
ಹೞಿವ ಹುರುಡಿಪ ಕೂರ್ತವೊಲು ಮನ
ವೆಳಸಿ ಸರ್ವವನುಗಿವ ಬುದ್ಧಿಯ
ಕಲಿಸುತಿರ್ದಳು ಮಗಳಿಗೋರ್ವ ವಿದಗ್ಧೆಯಿರುಳಿನಲಿ     ೪೦


[1] ಕ (ಜ)

[2] ಳಿಸು (ಜ)

[3] ಳಿಸು (ಜ)

[4] x (ಜ)

[5] ಯ (ಜ)

[6] ಸ (ಜ)

[7] x (ಜ)

[8] x (ಜ)

[9] ಕ (ಜ)

[10] ವ (ಜ)

[11] x (ಜ)

[12] x (ಜ)

[13] ರ್ಪ್ಪು (ಜ)

[14] ಳೆನೆ (ಜ)

[15] ಳೆನೆ (ಜ)

[16] ಶೃಚದಲ (ಜ)

[17] ಶೃಚದಲ (ಜ)

[18] x (ಜ)

[19] x (ಜ)

[20] x (ಜ)

[21] x (ಜ)

[22] ಲಕದ (ಜ)

[23] ಲಕದ (ಜ)

[24] x (ಜ)

[25] ಕಾ (ಜ)

[26] ಗೊ (ಜ)

[27] x (ಜ)

[28] x (ಜ)

[29] x (ಜ)

[30] ವಾ (ಜ)

[31] ದ (ಜ)

[32] x (ಜ)

[33] x (ಜ)

[34] + ಸುಧೆಯ (ಜ)

[35] ಯ (ಜ)