ಹರಿಣನೇತ್ರದ ಶಶಿಮುಖದ

[1] ಮಧು
ಕರದಳಕ ಹರಿಮಧ್ಯ ಬಿಂಬಾ
ಧರದ ಹಂಸಸ್ವರದ ನವತಿಲಪುಷ್ಪನಾಸಿಕದ
ಗುರುಕುಚದ ತಳಿರಡಿಯ ಪಂಕಜ
ಪರಿಮಳದ ಸಿತವಾಸ ಧರ್ಮ
ಸ್ಫುರಿತ ಚಿತ್ತದೊಳೆಸೆವ ಪದ್ಮಿನಿಯರ ನಿರೀಕ್ಷಿಸಿದ        ೪೧

ಹೊಳೆವ ಕಂಗಳ ದೀರ್ಘ ಕೇಶವ
ತೆಳುವಸಿಱ ಕಠಿನಾಂಕಪದ ಕರ
ತಳದ ಲಘು ಜಘನದ ಲತಾಂಗದ ನೀಳ್ದ ಘನಕುಚದ
ಕುಲಿಶದಶನ ಕ್ಷಾರ ಪರಿಮಳ
ದಲಘುನಾಸಿಕ ರಕ್ತವಸನದ
ಮಲಿನ ಚಿತ್ತದ ಶಂಖಿನಿಯರ ನೃಪಾಲನೀಕ್ಷಿಸಿದ           ೪೨

ಅಲಘುವದನದ ಚಪಲಹೃದಯದ
ಹೊಳೆವ ಕದಪು ಕೃಶಾಂಗ ಸೆಳೆನಡು
ಕಲಶಕುಚಗಳ ಕಂಬುಕಂಠದ ಕಾಕಜಂಘೆಗಳ
ಗಿರಿವದನ ಬಾಣುಮೆಯ ಮದಪರಿ
ಮಳದ ಜಘನ ಘನಾಧರದ ಕೆಂ
ದಳದ ಪೀತಾಂಬರದ ಚಿತ್ತಿನಿಯರ ನಿರೀಕ್ಷಿಸಿದ            ೪೩

ಘನ ಮುಖಾಂಗುಳಿ ಕಪಿಲಕಚವಾ
ಮನ ಚರಣಹಸ್ತಗಳ ನಸುಲೋ
ಚನದ ದೀರ್ಘಾಧರದ ಬದ್ಧಭ್ರೂ ನತಶ್ರುತಿಯ
ವಿನುತ ಗಜಮದಗಂಧ ಕರ್ಕಶ
ಮ[2]ನದ[3]ತೃಪ್ತಿಯ ಚಿತ್ರಪಡಮಂ
ಡನದೊಳೊಪ್ಪುವ ಹಸ್ತಿನಿಯರ ನೃಪಾಲನೀಕ್ಷಿಸಿದ        ೪೪

ಧೃತಗುಣಾನ್ವಿತನೇಕ ಪತ್ನೀ
ವ್ರತಸದನನನುಕೂಲ ನಾಯಕ
ನತಿ ಚತುರನತಿ ಗೀತವಾದ್ಯಪ್ರಿಯನು ದಕ್ಷಿಣನು
ಪತಿತ ಖಳ ಲಜ್ಜಾಭಿಮಾನ
ಚ್ಯುತನು ದುಷ್ಟನು [4]ಧೂರ್ತ[5] ವಂಚಕ
ಕೃತಕನಪಯಶ ಕುಟಿಲ ನಾಯಕನೆಂದು ವಿಟ ನುಡಿದ   ೪೫

ಮೞ[6]ಲ ಸರವಿಯ ಹೊಸೆವ ಕೊರಡಿನೊ
ಳಿಳೆಯ ಕೋವ ಮರೀಚಿಕಂಗಳ
ತಳೆವ ಧರೆ ಗಗನವನು ತಾಳವ ಮಾಡಿ ಬಾಜಿಸುವ
ಶಿಲೆಯೊಳಗೆ ಮುೞುಗುವ ತುಷಾರವ
ನಳೆವ ನೀರೊಳು ಬೆಣ್ಣೆಗಳೆವ
ಗ್ಗಳದ ವೇಶ್ಯಾಮಾತೆಯರನವನೀಶನೀಕ್ಷಿಸಿದ ೪೬

ವರ ನಿರೀಕ್ಷಣವೊಂದು ಚಿಂತೆಯ
ದೆರಡು ಸುಯ್ಲದು ಮೂಱು ಜ್ವರ ನಾ
ಲ್ಕರೆಯ ಹಣವೈದೂಟವ[7] ಬಿಡುವುದಾಱು ಮರುಳತನ
ಬೆರಸಲೇೞತಿ ಮೋಹವೆಂಟಾ
ಮಱವೆಯೊಂಬತ್ತೞಿವು ಹತ್ತಿವ
ನಱು ದಶಾವಸ್ಥೆಗಳ ನೀನೆಂದಱುಹಿದಳು ಸುತೆಗೆ         ೪೭

ನಡೆಗೆ ಹಂಸೆಯು ಸರಕೆ ಪಿಕ ಮೆ
ಲ್ನುಡಿಗೆ ಗಿಳಿ ಕಂಗಳಿಗೆ ಮಿ[8]ಗ ಸೆಳೆ
ನಡುವಿನೊಪ್ಪಕೆ ಸಿಂಹ ಕುಚಕೆ ರಥಾಂಗ ಮುಖಕೆ ಶಶಿ
ಮುಡಿಗೆ ನವಿಲಳಕಕ್ಕೆ ತುಂಬಿಗ
ಳಡಸಿ ಕಾಡುವುವಲ್ಲಿಗೊಂದಡಿ
ಯಿಡಲು ಬೇಡೆಂದೊರ್ವ ಸತಿ ಕೊಂಡಾಡಿದಳು ಮಗಳ ೪೮

ಸ್ಮರಸಮಾನಾಕಾರನಾಗಲಿ
ಸರಸ ಸು[9]ಕಲಾಪ್ರೌಢನಾಗಲಿ
ಕರೆಯದಿರು ಕ[10]ದಲದಿರು[11] ನಿರ್ಧನಿಕರನು ಧನವುಳ್ಳ
ನರ ಮೃಗಾಧಮನಾಗಲವನೊಳು
ನೆರೆದು ನೇಹವ ಮಾಡಿ ವಸ್ತುವ[12]ಹೆಱು[13]ವುದೇ ಕುಲಧರ್ಮವೆಮಗೆಂದೊರ್ವಳಱುಹಿದಳು           ೪೯

ಮರಳು ಮಗಳೇ ರೂಪ ಗುಣವದು
ಸರಕೆ ವಸ್ತುವೆ ಬಾತೆ ಜವ್ವನ
ಜರಿಯದಂದೇ ಗಳಿಸಬೇಕೀ ಪ್ರಾಯವದು ಹೋಗಿ
ಮರೞಿ ಬರಲುಯ್ಯಾಲೆಯಲ್ಲೀ
ಹರೆಯದಲ್ಲಿಯೆ ಧನವನಾರ್ಜಿಸು
ನರೆತ ಬೞಿಕಾರ್ಗೇನು ಫಲ ನೀನೆಂದಳಿಂದುಮುಖಿ      ೫೦

ಪರಿಮಳವನುೞಿದಳಿ ಕುಗಂಧ
ಕ್ಕೆಱಗುವುದೆ ಹಾಲಿರೆ ಮರಾಳನು
ಸುರೆಗೆ ಮನವೆಳಸುವುದೆ ಚೂತಫಲಕ್ಕೆ ತೊಲಗಿ [14][ಗಿಳಿ][15] ಎರೆದ [16][ಪಣ್ಗಡಸುವುದೆ][17] ಕೂರ್ಪನ
ತೊಱೆದು ಧನದಳುಪಿಂದ ಕುವಿಟನ
ನೆರೆವೆನೆಂತೆಲೆ ತಾಯೆ ನೀ ಹೇೞೆಂದು ಮಱುಗಿದಳು    ೫೧*

ಕೆಂದಳಿರ ಕುಟುಕಿತ್ತು ಪಿಕವರ
ವಿಂದಶೋಕದ್ವಯವ ಗಿಳಿ ಚಂ
ಚಿಂದ ಸೀೞಿತೆನುತ್ತ ಬೆಡಗಿಂದೊರ್ವ ವಿಟನೆನಲು
ಮಂದಹಾಸದೊಳಧರವನು ಕರ
ದಿಂದ ಮುಚ್ಚಿಯೆ ಮೊಲೆಗೆ ಮೇಲುದ
ನೊಂದಿಸುವ ಭಾಮಿನಿಯ ಜಾಣುಮೆಗರಸ ಬೆಱಗಾದ   ೫೨

ಶಶಿವದನೆ ಹರಿಮಧ್ಯೆ ನವಪವಿ
ದಶನೆ ಕೈರವನೇತ್ರೆಯೊತ್ತೆಯ
ನುಸಿರೆನಲು ಕಂಜಾಕ್ಷ ಗಜಪತಿಗಮನ ಗಿರಿಧೈರ್ಯ
ದಶಶತಾಂಶು ಸುತೇಜ ಕುಳ್ಳಿರು
ಬೆಸಸು ನೀನೆನೆ ತಲೆಯ ತೂಗುತ
ರಸಿಕ ಮಗುೞಿದ ಕಾರಣಕೆ ನಗುತರಸ ನಡೆತಂದ       ೫೩

ವಿವಿಧಗುಣಜಾಲಾಂಕಗೀತೋ
ತ್ಸವ ಮಹಾಬಲ ಜೀವಿತೇಶ್ವರ
ಭುವನರಕ್ಷ ವಿಶಾಲತರ ಪಶುಪತಿ ಸಮಾಕಾರ
ಯುವತಿ ನಿವಹಾವಲೋಕ…
ಭುವನ ಶೃಂಗಾರಾನ್ವಿತನೆಯೆಂ
ದವನಿಪತಿ ನಗುತಿರಲು ಕಾಡಿದಳೊರ್ವ ಸತಿ ವಿಟನ     ೫೪

ಅಳಿ ಸಕಲ ಪುಷ್ಪಗಳ ನವಪರಿ
ಮಳವ ಕೊಂಬಂದದಲಿ ಧನಿಕರಿ
ಗೊಲುಮೆಗಳನಳವಡಿಸಿ ತನುಹೊಱತೆಲ್ಲವನು ಸೆಳೆದು
ಜಲಜ ಪತ್ರೋದಕವೊಲು ಮನ
ನಿಲುಕಿ ನಿಲುಕದ ತೆಱದಿ ನಿಲಬೇ
ಕೆಲೆ ರಮಣಿ ಗಣಿಕೆಯರಿಗಿದು ಕುಲಧರ್ಮವವನಿಯಲಿ   ೫೫

ಮರವನೇಱುವ ಕೆಲೆವ ಸುರಗಿಯ
ತಿರುಹುವನು ನರ್ತಿಸುವ ಪಾಡುವ
ಹರಿವ ಭಂಡಿಯನೆತ್ತುವನು ಬಾವಿಗಳ ಲಂಘಿಸುವ
ಬರಿದೆ ನಗುವನು ತನ್ನ ತಾನೇ
ಬೆಱತುಕೊಂಡಿಹ[18]ನೆನಿಪ[19] ವಿಟರನು
ಕರೆಯದಿರಲರ್ಥಹತವೆಂದಱುಹಿದಳು ಸುತೆ[20]ಗೊರ್ವೆ[21] ೫೬

ಧರೆಯ ಹೊಯ್ದರೆ ನುಂಗುವುದೆ ದೇ
ದೇವರ ನಿಲುಕೆ ಹತ್ತುವುದೆ ಕರತಳ
ನಿಱಿಯ ದಾಂಟಲು ಕಚ್ಚುವುದೆ ಬೞಿ ನೀರ್ಗುಡಿಯಲೀಯುದರ
ಉರಿವುದೇ ತಾಯೞಿ[22]ದಳೆನಲ[23]ಸು
ಕರಗುವುದೆ ನೀನಿಂತು ಸೂರುಳ
ಸೊರಹಿ ತೆಗೆಯರ್ಥವನು ನೀನೆಂದೋರ್ವಳಱುಹಿದಳು            ೫೭

ಹರಿಯ ನಿಖಿಳೋಪಾಯದಲಿ ವಾ
ಗ್ವರನ ವಿದ್ಯದೊಳಂಗಜನ ಸೌಂ
ದರಿಯದಲಿ ನೂತನ ಜಯಂತನನಖಿಳ ಕಲೆಗಳಲಿ
ಸುರಪತಿಯ ಭೋಗದಲಿ ದಾನದೊ
ಳುರುವ ಕಲ್ಪದ್ರುಮವನೇೞಿಪ
ನೆರೆದ ಚತುರ ವಿಟಾವಳಿಯನವನೀಶನೀಕ್ಷಿಸಿದ           ೫೮

ಧನವಿಹೀನಂಗೊಲಿದಳಿವಳಕ
ಟೆನುತ ಸಾವಿಲ್ಲದೆ ವಿಶೋಕಿಸಿ
ಕನಲಿ ಬಱುಸಾಲಕ್ಕೆ ಹುಸಿದನವಿತ್ತು ದಾಸಿಯರ
ಅನುಚಿತದಿ ಜಡಿದರ್ಥ ಹೋದಂ
ತೊಣಗಿ ನೋಯದೆ ನರಳಿ[24]…
……ಹೊಱಡಿಸುವ ಮುದುಗುಂಟಣಿಯನೀಕ್ಷಿಸಿದ          ೫೯

ತರುಣಿ ನೆರೆಯದೊಡೇನು ನುಡಿಗಳು
ಬಱನೆ ನುಡಿ ಬರನಾದೊಡೀಕ್ಷಿಪು
ದರಿದೆ ನೋಡ[25]ದೊಡೇನು ನುಡಿದೊಡೆ ಕುಂದೆ ನುಡಿಯದಿರೆ
ಮರದ ಕೈಯಿಂದೆನ್ನೞಲ ಪರಿ
ಹರಿಸಲಾಗದೆಯೆಂದು ವಿರಹದಿ
ಹೊರೞಿ ಬಾಗಿಲೊಳಿಪ್ಪ ವಿಟನ[26] ನೃಪಾಲನೀಕ್ಷಿಸಿದ     ೬೦


[1] x (ಜ)

[2] ದನ (ಜ)

[3] ದನ (ಜ)

[4] [ಧೂರ್ತ] (ಜ)

[5] [ಧೂರ್ತ] (ಜ)

[6] x (ಜ)

[7] ಮಂ. (ಜ)

[8] ಮೃ (ಜ)

[9] x (ಜ)

[10] ನಲು (ಜ)

[11] ನಲು (ಜ)

[12] ಪಡೆ (ಜ)

[13] ಪಡೆ (ಜ)

[14] ಸುತ (ಜ)

[15] ಸುತ (ಜ)

[16] ಪಣ್ಗಳದೆ (ಜ)

[17] ಪಣ್ಗಳದೆ (ಜ)

* ಜ ಪ್ರತಿಯಲ್ಲಿ ಕ್ರಮಾಂಕ ೫೨ ಇದೆ.

[18] ನಿಂತೆನಿಪ ಕು (ಜ)

[19] ನಿಂತೆನಿಪ ಕು (ಜ)

[20] ೨ ಗೆ (ಜ)

[21] ೨ ಗೆ (ಜ)

[22] ದೆನಲು (ಜ)

[23] ದೆನಲು (ಜ)

[24] + ಮಪನನು (ಜ)

[25] ಡಿ (ಜ)

[26] ರ (ಜ)