ರಾಯ ಮಗಧ ನೃಪೇಂದ್ರಚಂದ್ರನ
ಜೇಯನೆನಿಪ ಸುಧರ್ಮ ಮುನಿಪನು
ವಾಯಿಯಿಂದಱುಹಿದನು ಜೀವಂಧರನ ಸುಚರಿತೆಯ

ಶ್ರೀಮದಖಿಳೇಂದ್ರೋತ್ತಮಾಂಗ
ಸ್ತೋಮಮಣಿಮಕುಟಾಂಶು ಚಂಚ

[1] ತ್ಕೋಮಲಾಂಘ್ರಿದ್ವಯನಚಿಂತ್ಯ[2]ನಜಾತನದ್ವಿತ[3]ಯ
ಕಾಮಮದಹರನಮಳಮುಕ್ತಿ
ಶ್ರೀಮುಖಾಬ್ಜದಿನೇಶನರ್ಹ
ತ್ಸ್ವಾಮಿ ಮುದದಿಂದೀಗೆ[4]ಮಗೆ[5] ಕೈವಲ್ಯಸಂಪದವ       ೧

ದುರಿತ ಸಂತಾನಾಷ್ಟಕವನಪ
ಹರಿಸಿ ನಿಜಗುಣವೆಂಟು[6] ಮೆ[7]ಯ್ದೋ
ಱೆರಲು ಲೋಕಾಗ್ರದಲಿ ನಿತ್ಯಾನಂದಚಿದ್ರೂಪ
ಸ್ಥಿರದಲಿರೆ ಸುಜ್ಞಾನ ಪಸರಿಸಿ
ಪರಮ ಮುಕ್ತಿಶ್ರೀಗೆ ಪತಿಯಾ
ದುರುತರ ಶ್ರೀಸಿದ್ಧರೆಮ[8]ಗೀಗೊಲಿದು[9] ಸುಖಪದವ        ೨

ಮನಮನಮಳಗುಣಾವಳಿಗಳಿಂ
ದನುವರದೊಳೊಡೆ[10]ಬಿಗಿದು ಹೃಜ್ಜಾ
ತನ ಭುಜೋನ್ನತಿ ಫಲವ[11] ಪಂಚಾಚಾರದಿಂ ತುಱೆದು
ಜಿನಮತವ ಭವ್ಯಾಳಿಗೊಲವಿಂ[12] ದನುಕರಿಸಿದಾಚಾರ್ಯರಚಲಿತ
ರನಘರಕ್ಷಯರೀಗೆ ವಿಮಳಾಚಾರಸಂಪದವ   ೩

ಪರಮ ಭವ್ಯಾವ[13]ಳಿಗೆ ಸಮ್ಯ
ಗ್ದ[14]ರುಶ[15]ನ ಜ್ಞಾನ ಪ್ರವಿಮಳಾ[16] ಚರಿತಗಳು[17] ಸುಖಪದವನ[18]ನುರಾಗಾದಿಗಳು ಜ[19]ನನ
ಮರಣಭಯಗಳನೀವುವೆಂದುರು
ತರದಿ ಸದ್ಭೇದಗಳ [20]ಮಿಗೆ[21] ವಿ
ಸ್ತರದಿ ಪೇಱುವುಪಾಧ್ಯರೀಗೆಮಗಮಳಸುಖ[22]ಪದ[23]ವ    ೪

ಶ[24]ಮತಪಶ್ಶೀ[25]ಲಾದಿಗಳ ತಾ
ಳ್ದಮಿತ ಕರಣಗ್ರಾಮಗಳನಾ
ಕ್ರಮಿಸಿ ಕರುಣಾರಸ[26]ವನಾ[27] ತಿಥಿ ಮಾಡಿ ಹೃತ್ಪದಕೆ
ವಿಮಲ ತತ್ತ್ವಜ್ಞಾನವನು ಪಡೆ
ದಮಳ ಗುಣಯುತರಪ್ಪ [28]ಸಾಧುಗ
ಳೆಮಗೆ ಮುದದಿಂ ಸಾಧುಪದಗಳನೀವುದೊಲವಿನಲಿ    ೫

ನುತ ಜನಾಂತರ್ದೃ[29]ಷ್ಟಿ ಕವಿತೋ
ನ್ನತಲತಾಮೃತವೃಷ್ಟಿ ಸರಸೋ
ದಿತವಿನೂತನ ಸೃಷ್ಟಿ ಪರಮಬ್ರಹ್ಮತನುಪು[30]ಷ್ಟಿ
ಚತುರವಿಬುಧೋ[31]ತ್ಕೃಷ್ಟಿ[32]ರತ್ನ[33]ತ್ರಿತ[34]ಯಮಾಲಾಯಷ್ಟಿ ಪರಿಶೋ
ಧಿತಸರಸ್ವತಿ ಸಾರ್ಧಿ[35] ರೆನ್ನ[36]ಯ ಹೃದಯಕಮಲದಲಿ   ೬

ಅನಘ[37]ರಜ[38]ರನುಬದ್ಧ ಕೇವಲಿ
ಯೆನಿಸಿದಮಳಸುಧರ್ಮ ಗೌತಮ
ವಿನುತ ಜಂಬೂಗಣಧರರು [39]ಸಾಧ[40]ನವಿದೆಂದೆನಿಪ
ಅನುಪಮಶ್ರುತ ಪೂಜೆಯನು ಭವ
ಘನತಮವನೊಟ್ಟೈಸಿ ಬೆಳಗುವ
ನನುನಯದ ರತ್ನತ್ರಯವನೆಮಗೀವುದೊಲವಿನಲಿ       ೭

ನುತ ನವಶ್ರುತ ಕೇವಲಿಗಳೆಂ
ಬತುಳ ವಿಷ್ಣುವ್ರ[41]ತಿಪನಪರಾ
ಜಿತ ಮುನೀಶ್ವರ[42] ನಂದಿಯತಿಪತಿ ಭದ್ರಬಾಹುಮುನಿ
ವಿತತ ಗೋವರ್ಧನಮುನೀಶ್ವರ
ರತಿಶಯಾನಂದದಲಿ ನಿರ್ಮಳ
ಶ್ರುತ ಸಮಾರಾಧನೆಯನೆ[43]ಮಗೊಲಿದೀವುದೊಲವಿನಲಿ            ೮

ಭೂತಬಲಿಮುನಿ ಪುಷ್ಪದಂತ
ಖ್ಯಾತರುಜ್ವಲ ವೀರ ಜಿನಸೇ
ನಾತಿಶಯರಕಳಂಕ ಕವಿಪರಮೇಷ್ಠಿ ಸೂರಿಗಳು
ಪೂತ ಚರಿತ ಸಮಂತಭದ್ರರ
ಜಾತರೆನಿಸುವ ಕುಂ[44]ಡ ಕುಂದಾ
ದ್ಯಾತಿಶಯದಾಚಾರ್ಯರೀಗೆಮಗಮಳ ಸುಖಪದವ     ೯

ಘೋರ ಭವವಾರಾಶಿ ತೀರೋ
ತ್ತಾರರಕ್ಷಯರಚಲ ಘನ ಕಾಂ
ತಾರ ವಿಪಿನ ಕುಠಾರರನುಪಮರಮಳ [45]ಗುಣ[46]ಯುತರು
ಮಾರಹರರುರುವಾದಿಗಜಕಂ
ಠೀರವರು ತಾವೆನಿಪ ಪೂರ್ವಾ
ಚಾರಿಯರು ಕಾರುಣ್ಯದಿಂದೆಮಗೀಗೆ ಸನ್ಮತಿಯ           ೧೦

ನೆಟ್ಟು[47]ಗೊಂಡಘಕಾಷ್ಟ ಮದಗಳ
ಕಟ್ಟಿ ಪರವಾದಿಗಳ ಗೆಲಿ[48]ದೆ
ಱ್ಬಟ್ಟಿ[49] ಜಿನಧರ್ಮವನು ಸಂಸ್ಥಾಪಿಸಿ ಭವಾಟವಿಯ
ಸುಟ್ಟಘವನೊಡ[50]ಮೆಟ್ಟಿ ಕಾಮನ
ನಿಟ್ಟೆಲು[51]ವ ಮುರಿದಚಳಿತನ ಮನ
ಮುಟ್ಟಿ ನೆನೆವನು ವಿಮಳ ಪಂಡಿತದೇವ ಮುನಿವರನ[52]  ೧೧

ಸಾರ ಜೈನಾಚಾರ ಪಾರಾ
ವಾರ ವರ್ಧನಂದ್ರ[53]ನಘ[54]ಮದ
ವಾರಣೇಂದ್ರ ಮೃಗೇಂದ್ರನುರುಭವ್ಯಾಬ್ಜದಿವಸೇಂದ್ರ
ಮಾರಮಾಘಸಮೀರ ಘನಸಂ
ಸಾರವಿಪಿನಕುಠಾರ ಧೀರ ಕು
ಮಾರಸೇನ ಮುನೀಂದ್ರನೆಮಗೊಲಿದೀಗೆ ಸುಚರಿತವ   ೧೨

ದುರಿತಗಳನೊಡೆಮೆಟ್ಟಿ ಗುಣಗಳ
ಧರಿಸಿ ಕಾಮನ ಕಾರ್ಮುಕವ ಕ
ತ್ತರಿಸಿ ಪುಸ್ತ[55]ಕಕೆ[56]ಸೆವ ಕಂಪಿ[57]ಯ ರಚಿಸಿ ಸದ್ಗುಣವ
ಭರದಿ ದಾರವ ಮಾಡಿ [58]ಧರಿಸಿದ[59] ವರರತಿಯ ಜಱೆದಚಳಿತ ಸು
ಸ್ಥಿರದಿ ನೆನೆವನು ವರ್ಧಮಾನಮುನೀಂದ್ರ ಚಂದ್ರಮನ  ೧೩

ಕರ್ಮಗಳನೊಡೆದು[60]ಱೆದು[61]ಮಿಥ್ಯಾ[62] ದುರ್ಮತಂಗಳನು[63]ಱೆದು ನಿರುಪಮ
ನಿರ್ಮಳತ್ವವ ತಳೆದು ಭವಗಳನು [64]ಱೆದು ಸ್ಯಾ[65]ದ್ವಾದ
ಧ[66]ರ್ಮಶಾಸ್ತ್ರ ಜಿನಾಗಮವನತಿ
ಕೂರ್ಮೆಯಲಿ ಭವ್ಯಾಳಿಗಱುಹು[67]ವ
ಧರ್ಮಭೂಷಣ ಮುನಿಪನೊಲವಿಂದೀಗೆ ಸದ್ಗುಣವ        ೧೪

ಶಾರದೆಯ[68] ತಾಯ[69]ಮಳ ಪುರುಷಾ
ಕಾರವನು ತಾ[70]ಳ್ವಂತೆ [71]ವೀರ೪ಕು
ಮಾರಸೇನಯತೀಶ್ವರನ [72]ಕರುಣಾವ[73]ಭಾವದಲಿ
ಚಾರುವಿದ್ಯಾವಳಿಯ ಪಡೆದಾ
ಚಾರವನು ಭವ್ಯಾಳಿಗಱು[74]ಹುವ[75] ವೀರಸೇನ ಮುನೀಂದ್ರನೆ[76]ಮಗೊಲಿದೀಗೆ ಸು[77]ಚರಿತ೮ವ          ೧೫

ಗೋತ್ರಧೈರ್ಯನಕಾಂಕ್ಷನಮಳಪ
ವಿತ್ರನನುಪಮ ಭವ್ಯಜನಶತ
ಪ್ರಮಿತ್ರನೆ ಸಾ[78]ರಸಂಸಾರಾರ್ಣವೋತ್ತಾರ
ಭೈ[79]ತ್ರನುಜ್ಜ್ವಲಗಾತ್ರನುರುರ
ತ್ನತ್ರಯಾಭರಣಾಂಕ ಸಚ್ಚಾ
ರಿತ್ರ ಭೂಷಣ ಮುನಿಪನೊಲವಿಂದೀಗೆ ಸತ್ಪಥ[80]ವ        ೧೬

ಯುಕ್ತಿಯಿಲ್ಲದ ಭೂವರನು ಪತಿ
ಭಕ್ತಿಯಿಲ್ಲದ ಕಾಂತೆ ಸರ್ವವಿ
ಮುಕ್ತನಲ್ಲದ ಮುನಿಪನೋದದ ಪಾರ್ವ[81]ಸನ್ಮಂತ್ರ
ಶಕ್ತಿಯಿಲ್ಲದ ಸಚಿವ ಸದ್ಗುಣ
ಯು[82]ಕ್ತನ[83]ಲ್ಲದ ಮಿತ್ರ ನವ[84]ಚತು
ರೋಕ್ತಿಯಿಲ್ಲದ ಕಾವ್ಯರಚನೆ ನಿರರ್ಥವವನಿಯಲಿ          ೧೭

ಪ್ರಸವಕಾಲದ ವೇದನೆಯ ಸಾ
ಹಸವ ಬಲ್ಲಳೆ ಬಂಜೆ ಮಿಗೆ ರಂ
ಜಿಸುವ ರತ್ನ ಪರೀಕ್ಷೆಯ[85]ಱೆವು[86]ದೆ ಕಪಿ ನಿರಂಜನನ
ದೆಸೆಯ[87]ನಱೆವನೆ ಪಾಪಿ ಸತ್ಕವಿ
ಯೆಸಗಿದನುಪಮಕಾವ್ಯವನು ನವ
ರಸಿಕನ[88]ಲ್ಲದೆ ತಿಳಿವರೇ ಮೂಢರು ಧರಿತ್ರಿಯಲಿ           ೧೮

ಜಲವುಱೆದು ಹಾಲುಂಬ ಹಂಸನ
ವೊಲು ಮಹಾತ್ಮರು ಕಾವ್ಯದೋಷವ
ನುಱೆದು ಸ[89]ತ್ಸಾರವನೆ ಸವಿವ[90]ರು ದಿವ್ಯ ಪರಿಮಳಕೆ
ತೊಲಗಿ [91]ನೊಳ[92] ದುರ್ಗಂಧಗಳಿಗೆ
ವ್ವ[93]ಳಿಸುವಂದದಿ ಖಳರು ಗುಣಗಳ
ನುಱೆದು ದೋಷವ ಪಿಡಿವರಂತದು [94]ಸಹ[95]ಜವವನಿಯಲಿ ೧೯

ಖರ ಸುಗಂಧವ ಹೇಱಲದಱಂ
ತರವ ಬಲ್ಲುದೆ ಸೆಟ್ಟು ಪಾ[96]ಕದ[97] ಪರಿಯನಱೆ[98]ವುದ[99] ತಾಳಪತ್ರಗಳಱೆವು[100]ವೇ ಲಿಪಿಯ
ಧರೆಯೊಳಜ್ಞ[101] ಸುಶಾಸ್ತ್ರಗಳನು
ಚ್ಚರಿಸಿದೊ[102]ಡೆ ಸಾಹಿತ್ಯವಾತಗೆ
ದೊರಕುವು[103]ದೆ ಗಿಣಿಯೋದಿದಂತೆ ನಿರರ್ಥವವನಿಯಲಿ           ೨೦

[1] ಡ(ಮ)

[2] ತ (ಜ, ಮ)

[3] ತಿ (ಮ)

[4] x (ಜ)

[5] x (ಜ)

[6] ಟ (ಜ, ಮ)

[7] ವೆ(ಜ)

[8] ಗೆಗೊಲಿ (ಜ), ಗೊಲಿದು (ಮ)

[9] ಗೆಗೊಲಿ (ಜ), ಗೊಲಿದು (ಮ)

[10] ಡ (ಮ, ಜ)

[11] x (ಜ)

[12] x (ಮ)

[13] x (ಜ)

[14] ರ್ಶ (ಜ), ರು (ಮ)

[15] ರ್ಶ (ಜ) , ರು (ಮ)

[16] ಳ (ಜ)

[17] ಳ್‌(ಜ ಮ)

[18] x (ಜ),

[19] ಜಿ, (ಜ, ಮ)

[20] x (ಜ, ಮ)

[21] x (ಜ, ಮ)

[22] ಫಲ (ಮ)

[23] ಫಲ (ಮ)

[24] ಸ (ಜ.ಮ)

[25] ಸ್ಸೀ (ಜ, ಮ)

[26] ವಾ (ಜ)

[27] ವಾ (ಜ)

[28] ಪ್ತ (ಮ)

[29] ಹೃ (ಜ), ದೃ (ಮ)

[30] ಸೃ (ಮ)

[31] ತೃಷ್ಟಿ, (ಜ) ತೃಷ್ಟ, (ಮ)

[32] ತೃಷ್ಟಿ, (ಜ) ತೃಷ್ಟ, (ಮ)

[33] ತ್ರ (ಜ)

[34] ತ್ರ (ಜ)

[35] ದ್ಧಿ (ಜ)

[36] ನ್ನೆ (ಜ).

[37] x (ಮ)

[38] x (ಮ)

[39] ಸದ್ಧ (ಮ), ಸದ (ಜ)

[40] ಸದ್ಧ (ಮ), ಸದ (ಜ)

[41] ಪ್ರ (ಮ)

[42] x (ಜ)

[43] ವ (ಜ, ಮ)

[44] ಕೊಂ (ಮ)

[45] [ಗುಣ] (ಪ)

[46] [ಗುಣ] (ಪ)

[47] ಟ್ಟ (ಜ), ಟ್ಟಿ (ಮ),

[48] ದೇಬಟ್ಟ (ಮ), ದೆಬಟ್ಟಿ (ಜ)

[49] ದೇಬಟ್ಟ (ಮ), ದೆಬಟ್ಟಿ (ಜ)

[50] ಎ (ಜ, ಮ)

[51] x (ಜ)

[52] ರ (ಮ)

[53] ಘನ (ಮ)

[54] ಘನ (ಮ)

[55] ಸ್ತು (ಜ, ಮ)

[56] ವೆ (ಜ, ಮ)

[57] ಬಿ (ಜ, ಮ)

[58] x (ಜ, ಮ)

[59] x (ಜ, ಮ)

[60] ತು (ಜ, ಮ)

[61] ವಿದ್ಯಾ (ಮ)

[62] ವಿದ್ಯಾ (ಮ)

[63] ಮ (ಜ)

[64] ನಿ (ಮ)

[65] ದ (ಮ)

[66] ನ (ಮ)

[67] ಪು (ಜ, ಮ)

[68] ಯೆ (ಜ, ಮ)

[69] x (ಜ), ನ (ಮ)

[70] ನಾ (ಮ)

[71] ದೀ (ಜ), ಧೀರ (ಮ)

[72] ಕಾರುಣ್ಯ (ಮ)

[73] ಕಾರುಣ್ಯ (ಮ)

[74] ಪುವ (ಮ), ಪು (ಜ)

[75] ಪುವ (ಮ), ಪು (ಜ)

[76] ನ (ಜ, ಮ)

[77] ಖಪದ (ಮ)

[78] ಪಾ (ಜ, ಮ)

[79] ಚೈ (ಮ)

[80] ದ (ಮ)

[81] + ನ (ಜ)

[82] ಯ್ತಿಯ (ಜ)

[83] ಯ್ತಿಯ (ಜ)

[84] x (ಮ)

[85] ಲಿಡ (ಮ)

[86] ಲಿಡ (ಮ)

[87] ವ (ಮ)

[88] ರ (ಜ, ಮ)

[89] ತ (ಜ, ಮ)

[90] ದ (ಮ)

[91] x (ಮ)

[92] x (ಮ)

[93] ವ (ಜ, ಮ)

[94] ಸಾ (ಮ)

[95] ಸಾ (ಮ)

[96] ತಕ (ಮ)

[97] ತಕ (ಮ)

[98] x (ಜ)

[99] x (ಜ)

[100] ವ (ಜ, ಮ)

[101] ಜ್ಞಾ (ಮ)

[102] ದ (ಜ, ಮ)

[103] ವ (ಜ, ಮ)