ಕ್ಷಿತಿಯನತಿ ವೈರಾಗ್ಯದಿಂದವೆ
ಸುತ ವಸುಂಧರಗಿತ್ತು ತಪದು
ನ್ನತದಿ ಜೀವಂಧರನು ಪಡೆದನು ಮೋಕ್ಷ ಸಂಪದವ

ಧರಣಿಪತಿ ಕೇಳಿಂತು ಜೀವಂ
ಧರನು ಸಕಲ ಮಹೀತಳವ ಸ
ಚ್ಚರಿತದಿಂ ಪಾಲಿಸುತ ಮಱೆಹೊಕ್ಕವರ ಮನ್ನಿಸುತ
ಎಱಗಿದವ

[1]ರಿಂಗ[2]ಭಿಮತವನಿ
ತ್ತರಿಗಳನು ಸಂಹರಿಸುತ ನಿರ್ಭಯ
ಕರದಿ ರಾಜ್ಯವನಾಳಿದನು ಹಲಕಾಲವೊಲವಿನಲಿ         ೧

ಖ್ಯಾತಿಯಲಿ ರಘುರಾಮನನು ನಯ
ನೀತಿಯಲಿ ಭರತನನು ಸದ್ಧ
ರ್ಮಾತಿಶಯದಲಿ ಧರ್ಮಜನ ವಿಕ್ರಮದೊಳರ್ಜುನನ
ನೂತನಾಕಾರದಲಿ ಮದನನ
ವೀತರಾಗನ ಭಕ್ತಿಯಲಿ ಪುರು
ಹೂತನನು ಪೋಲ್ತಿಂತು ಜೀವಂಧರನು ರಂಜಿಸಿದ       ೨

ಹುಸಿ ಕಪಟ ಕುಲಧರ್ಮವನು ಬಿ
ಟ್ಟೆಸಗುವಣ ಪಾದರ ಪರಸ್ತ್ರೀ
ವ್ಯಸನವತ್ಯಾಸ್ವಾದವಾತ್ಮಸ್ತುತಿ ಸುರಾಪಾನ
ನುಸುಳು ಹಿಂಸೆ ಮಹಾ ಕಲುಷ ಕ
ರ್ಕಶವಚನ ಬಕವೃತ್ತಿ ಮಧುದು
ರ್ವ್ಯಸನವಿಲ್ಲಾ ನೃಪನ ಕಾಲದೊಳರಸ ಕೇಳೆಂದ         ೩

ಒಂದು ದಿನ ಜೀವಂಧರನು ತ
ನ್ಮಂದಿರದ ದವಳಾರದಲಿ ಸಾ
ನಂದದಲಿ ತನ್ನರಸಿಯರು ಸಹಿತೆಯ್ದಿ ವಿಹರಿಸುತ
ನಂದನದೊಳಿದಿರಿನಲಿ ವನಚರ
ವೃಂದವತಿ ಬೆಡಗಿಂದಲಾಡಲು
ಮಂದಹಾಸದೊಳಿರದೆ ನೋಡುತ್ತಿರ್ದನೊಲವಿನಲಿ      ೪

ವನಚರಿಯನೊಂದನ್ಯ ವನಚರ
ನನುನಯದಿ ನೆರೆಯಲ್ಕೆ ಕಂಗನೆ
ಕನಲಿ ತದ್ವನಚರಿಯ ವಲ್ಲಭ ಬಂದು ತಾನದನು
ಹನನವೆಯ್ದಿಸಲುಭಯ ಪಕ್ಷದ
ವನಚರಾವಳಿ ಕಾದಿ ಮಡಿಯಲು
ಜನಪ ಜೀವಂಧರನು ಕಂಡೋರಂತೆ ಬೆಱಗಾದ          ೫

ಈಗ ನೋಡುತ್ತಿರಲು ಕಪಿಗಳು
ರಾಗಿಸಿದ್ದುವು ಮಗುಳೆ ತಾನಿಂ
ತೀಗಳೀಕ್ಷಿಸುತಿರಲು ಮಡಿದುವು ನರರ ಸಂಸಾರ
ಆಗದೀ ವನಚರಗಳಂತೆ ವಿ
ಯೋಗವಸ್ಥಿರವೆನುತ ನೃಪ ವೈ
ರಾ೧ಗಿಯದೊಳು[3]ದ್ಯುಕ್ತನಾದನು ತಪಕೆ ವಹಿಲದಲಿ      ೬

ಮಲ ರುಧಿರ ರೋಮಾಸ್ಥಿ ತುಂಬಿಹ
ಗೞಗೆ ಮೂತ್ರೇಂದ್ರಿಯ ವಿಳಾಸದ
ನಿಲಯ ವಾ[4]ತದ ಪಿತ್ತದ[5] ಶ್ಲೇಷ್ಮಾದಿ ರೋಗಗಳ
ನೆಲೆ ಮಹಾ ದುರ್ಗಂಧ ದೋಷಾ
ವಳಿಗೆ ಸೀಮೆಯದಾದೊಡೆಯಿಹದ
ಬೆಳವಿಗೆಯ ಸೌಖ್ಯವನು ಸುಡಸುಡಲೆಂದನಾ ಭೂಪ    ೭

ಧಾರೆಯೊಳು ಪುದಿದಿರ್ದ ಮಧುವಿಗೆ
ಸೇರುವಳೆಯಂತೋವದರ್ಕ
ಕ್ಷೀರವನು ಹಾಲೆಂದು ಸವಿವಂದದಲಿ ಲವಣವನು
ಚಾರು ಶರ್ಕರೆಯೆಂದು ಮೆಲುವಂ
ತಾರಯಲು ಲೋಕದಿ[6] ನರರ ಸಂ
ಸಾರವೀ ಪರಿಯೆಂದು ತನ್ನೊಳು ನೆನೆದನಾ ಭೂಪ      ೮

ಎಂದು ಸುರಪನ ಸಂಪದಕೆ ಸರಿ
ಯೆಂದೆನಿಪ ತದ್ರಾಜ್ಯಲಕ್ಷ್ಮಿಯ
ನಂದು ತೃಣಸಮವಾಗಿ ಕಂಡತಿ ಹೇಸಿ ಪರಿಹರಿಸಿ
ಕುಂದದೆ ತಪೋಲಕ್ಷ್ಮಿಯನು ಸಾ
ನಂದದಿಂದಿಚ್ಛೈಸಿ ನೃಪ ಜೀ
ವಂಧರನು ತನ್ನಯ ಕುಮಾರ ವಸುಂಧರಗೆ ನುಡಿದ     ೯

ಎಲೆ ಮಗನೆ ನಾ[7]ನೀಸು ದಿನ ಭೂ
ತಲವನಭಿರಕ್ಷಿಸಿದೆ ನೀನಿ
ನ್ನೆಳೆಯ ಭಾರವ ತಾಳ್ದು ಪಟ್ಟವ ಧರಿಸು ರಾಜ್ಯವನು
ತಳೆಯಲಾನಿನ್ನಾಱೆ ನೀ ಕೈ
ಕೊಳುವುದೆನೆ ಬೆಂಬೞಿದು ಮಱುಗುತ
ಲಲಿತ ದಶನಾಂಶುಗಳು ಪಸರಿಸೆ ನುಡಿದನವ ಪಿತಗೆ   ೧೦

ಗಜ ಹೊಱುವ ಭಾರವನು ಭಾವಿಸ
ಲಜನು ತಾನೇಂ ಹೊಱುವುದೇ ಭೂ
ಭುಜಶಿರೋಮಣಿ ನೀವು ಹೊಱುವೀ ರಾಜ್ಯಭಾರವನು
ನಿಜ[8]ದಿ ನಾನೆಂತಾನುವೆ[9]ನು ರಿಪು
ವಿಜಯ ನೀವ್ ಕೆಲಕಾಲವೆಲ್ಲಿಗೆ
ಬಿಜಯ ಮಾಡದೆ ರಾಜ್ಯವನು ಪಾಲಿಸಲು ಬೇಕೆಂದ      ೧೧

ಎಂದೊಡಾನಿಹುದಿಲ್ಲವೆಂದು ವ
ಸುಂಧರಗೆ ನಯನೀತಿಯಲಿ ಜೀ
ವಂಧರನು ನೆರೆ ತಿಳುಹಿ ಪಟ್ಟಕೆ ಭದ್ರಹಸ್ತಿಗಳ
ಒಂದು ತರಿಸಿಯೆ ಭೂಸುರರ ಮತ
ದಿಂದಲಾ[10] ರಾಜ್ಯಾಭಿಷೇಕವ
ನಂದು ಮಾಡಿಸಿ ಸರ್ವರನು ಕಾಣಿಸಿದನೊಲವಿನಲಿ      ೧೨

ಧುರದೊಳೋ[11]ಡದಿ[12]ರನ್ಯ ಸತಿಯರ
ನೆರೆಯದಿರು ನನ್ನಾಣೆಯಾಜ್ಞೆಯ
ಕೊಱತೆಯನು ಮಾಡದಿರು ಕಾರ್ಯವ ಬಿಡದಿರಾವನೊಳು
ಜಱೆಯದಿರು ಹಿರಿಯರನು ಧರ್ಮವ
ತೊಱೆಯದಿರು ಜಿನಪಾದ ಪದ್ಮವ
ಮಱೆಯದಿರು ಸುತಯೆಂದು ಬೋಧಿಸಿದನು ಕುಮಾರಕನ         ೧೩

ವರಕುಮಾರ ವಸುಂಧರನ[13]ನೀ
ಪರಿಯ ಬೋಧಿಸಿ ಬೞಿಕ ಜೀವಂ
ಧರನು ತನ್ಮುನಿವರರ ಕೈಯಲಿ[14] ದೀಕ್ಷೆಯನು ಕೊಂಡು
ಅರುಹ ನೆಲಸಿಹ ಸಮವಸರಣದಿ
ನಿರಶನದೊಳುಗ್ರೋಗ್ರ ತಪವನು
ವಿರಚಿಸಿಯೆ ಮೋಕ್ಷವನು ಪಡೆದನು ಭೂಪ ಕೇಳೆಂದ    ೧೪

ಪರಮ ಮೋಕ್ಷವ ಪಡೆದು ಸರ್ವೇ
ಶ್ವರನು ದಿಟ ತಾನಾದ ಜೀವಂ
ಧರ ನೃಪಾಲಕನೀತನೆಂದಾ ಶ್ರೇಣಿಕಗೆ ಮೊದಲು
ತೆಱನನಾ ಗೌತಮ ಮುನೀಶ್ವರ
ನಱುಹೆ ವಿಸ್ಮಯಬಟ್ಟು ಹರುಷದ
ಶರಧಿಯೊಳಗೋಲಾಡಿದನು ಮಗಧೇಂದ್ರನನವರತ   ೧೫

ಬೞಿಕ ಶ್ರೇಣಿಕನಾ ಮುನೀ[15]ಶರು[16] ಗಳಿಗೆಱಗಿ ಬೀೞ್ಕೊಂಡು ತನ್ನಯ
ಹೊೞಲಿಗೆಯ್ದಿಯೆ ಬಿಡದೆ ಜೀವಂಧರನ ನೆನೆನೆನೆದು
ಪುಳಕಿತಾಂಕಿತನಾಗಿ ಧರಣೀ
ತಳವನಮಳಕ್ಷಾತ್ರಧರ್ಮದೊ
ಳೊಲಿದು ಮಗಧಾಧೀಶ ಪಾಲಿಸುತಿರ್ದನೊಲವಿನಲಿ    ೧೬

ಧರಯೊಳೀ ಜೀವಂಧರನ ಭಾ
ಸುರದ [ಪಾವನದ] ಚರಿತೆಯನು[17] ಪ
ಸರಿಸಿ[18]ದರ ದಾರಿರ್ದ್ಯ ಭವದುಷ್ಕರ್ಮವಡಗುವವು
ಸಿರಿ ಸುತೇಜಾಯುಷ್ಯ ಸಂಪದ
ಪರಮ ಸದ್ಗತಿಯಹುದು ಸರ್ವೇ
ಶ್ವರನ ಮತವಿದು ನಂಬೆನುತ ಭಾಸ್ಕರನು[19] ಬೋಧಿಸಿದ           ೧೭

ಧರಣಿಯೊಳಗುಳ್ಳಖಿಳ ತೀರ್ಥಂ
ಕರರ ಸದ್ದರ್ಶನದ ಫಲ ವಿ
ಸ್ತರದಿ ಚಾತುರ್ವಿಧದ ದಾನವ ಮಾಡಿದನಿತು ಫಲ
ಸುರುಚಿರದೊಳರ್ಹತ್ಪ್ರತಿಷ್ಠೆಯ
ವಿರಚಿಸಿದ ಫಲವಹುದು ಜೀವಂ
ಧರನ ಚರಿತದೊಳೊಂದು ಪದವನು ಕೇಳ್ದ ಮನುಜರಿಗೆ            ೧೮

ಶರಗತಿತ್ರಯ ಚಂದ್ರಸಂಖ್ಯೆಯ
ವರ ಶಕಾಬ್ದ ಕ್ರೋಧಿಸಂವ
ತ್ಸರದ ಫಾಲ್ಗುಣ ಶುದ್ಧ[20] ದಶಮಿ ದಿನೇಶವಾರದಲಿ
ಮೆಱೆವ ಪೆನುಗೊಂಡೆಯ ಸುಶಾಂತೀ
ಶ್ವರನ ಜಿನವಾಸದಲಿ ಜೀವಂ
ಧರನ ಚರಿತೆಯ ರಚಿಸಿದನು ಜಾಣ್ಮೆಯಲಿ ಭಾಸ್ಕರನು  ೧೯

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲ ಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ[21] ಜೀವಂಧರ[22]ನ ಚರಿತೆಯೊ
ಳಿದುವೆ ನಿರ್ವಾಣಾದಿ ವರ್ಣನೆಯೀ ಪ್ರಬಂಧದಲಿ          ೨೦


[1] ರ್ಗ (ಜ)

[2] ರ್ಗ (ಜ)

[3] ಗ್ಯದಿಂ (ಜ)

[4] ತಾ ಪಿತ್ತ (ಜ)

[5] ತಾ ಪಿತ್ತ (ಜ)

[6] ದಲಿ (ಜ)

[7] x (ಜ)

[8] ದಿಂ ತಾದುದೆ (ಜ)

[9] ದಿಂ ತಾದುದೆ (ಜ)

[10] x (ಜ)

[11] ಡಿದ (ಪ)

[12] ಡಿದ (ಪ)

[13] x (ಜ)

[14] + ಜಿನ (ಜ)

[15] ಶ್ವರ (ಜ)

[16] ಶ್ವರ (ಜ)

[17] x (ಜ)

[18] ಸ (ಪ)

[19] ದೇವ (ಜ)

[20] x (ಜ)

[21] x (ಜ)

[22] x (ಜ)