ಬಿಸಜಸಂಭವ ಷಡ್ರ

[1]ಸವ ನಿ
ರ್ಮಿಸೆ ಕವೀ[2]ಶ್ವರ[3] ಧಾತ್ರಿಯೊಳು ನವ
ರಸವ ಸೃಜಿಸಿ[4]ದೊಡಾ[5] ಚತುರ್ಮುಖನಿಂದ ಕವಿವರರು
ವಸುಧೆಯೊಳು ಸರಿಮಿಗಿ[6]ಲೆನಿಸಿ ಪಸ
ರಿಸಲು[7] ಲೋಕತ್ರಯವು[8] ಸತ್ಕವಿ
ಯೆಸಗಿದಂದ[9]ದೊಳೊಪ್ಪಿಹುದು ತಿಳಿವರೆ ಧರಿತ್ರಿಯಲಿ   ೨೧

ಇಷ್ಟವಾಗೆ[10] ಪದಾರ್ಥ ಶಬ್ದ
ಸ್ಪಷ್ಟ ಪೊಸಬಗೆಗೂಡಿ ಕೃತಿಯ ಪ್ರ
ತಿಷ್ಠಿಸದೆ ಪರರೂಹೆ[11]ಯಿಂದೋದಿಸಿದ ಕಾವ್ಯವದು
ಸೃಷ್ಟಿಯೊಳಗದು ಹೀನ ಜೈನೋ
ಚ್ಛಿ[12]ಷ್ಠವೀ ಜಗವೆಂದುದೊಂ[13]ದೇ
ಕಷ್ಟ ಸಾಲದೆ ಕವಿಯೆನಿಸಿಕೊಂಡವರಿಗವನಿಯಲಿ         ೨೨

ಮುಂದೆ ನಿನ್ನ[14]ಯ ಕವಿತೆಗೆಣೆಯಿ
ಲ್ಲೆಂದು ನಾನಾ ತೆಱದೆ[15] ಬಣ್ಣಿಸಿ
ಹಿಂದೆ ತಾಳ್ದು [16]ದಬದ್ಧವೆಂದ[17]ಜ್ಞರೊಳು[18] ತಾವೆಸಗಿ
ಸಂಧಿಸಿದ ಕೃತಿಯನ್ನು[19] ಮನೆಗಳ
ಸಂದಿಗೊ[20]ದಿಯೊಳೊದಱೆ ನರಕದೊ
ಳೊಂದುತಿಹ ದುರ್ಜನರ ಜಯಿ[21]ಸುವರಾರು ಲೋಕದ[22]ಲಿ         ೨೩

ಲಲಿತದೇವಾನ್ನವನು ನೊಣನೆಂ[23] ಜಲಿಸೆ ತೊಱೆವರೆ ಶೈವಲಕೆ ನೀ
ರುಱೆವರೇ ಜಲನಿಧಿಯ [24]ಮಣಿಗಳ[25] ನೆಗಟಿ ಭಯಕಂಜಿ
ತಳೆಯದಿಹರೆ[26] ನಿಕೇತನವ[27] ನಿಲಿ
ಗಳು[28]ಕಿ ಬಿಡುವರೆ ಖಳರು ಮೆಚ್ಚ[29]ದೆ
ಹಱೆಯೆ ಸತ್ಕವಿ ಮಾಣ್ಬ[30]ನೇ ರಚಿಸಲು ಮಹಾಕೃತಿಯ             ೨೪

ವಿನುತಕವಿತಾಂಗನೆಗೆ ಸತ್ಕವಿ
ಜನಕನನುಪಮ ಪಾಠಕರು[31]ತ
ಜ್ಜನನಿ ವಿಮಳರಸಜ್ಞ[32] ಪತಿ ಮೂಢಾವಿವೇಕಿಗಳು
ಅನುಜರಗ್ರಜರಂತು ಕಾರಣ
ಸನು[33]ನಯದೊಳೀ ಕೃತಿಯ ಕೋವಿದ
ಜನರು ತಿ[34]ದ್ದುವುದೊಲಿದು[35]ಘನತೆಯ ಮಾಳ್ಪುದವನಿಯಲಿ       ೨೫

ಪರಿಮಳವನಳಿ ಪೀರ್ವವೊಲು ಮ
ಕ್ಷುರಕ ಬಲ್ಲುದೆ ಚೈತ್ರದಲಿ ಮ
ಕ್ಷುರಕ ಬಲ್ಲುದೆ ಚೈತ್ರದಲಿ ಮಾ
ಮರನಲರ್ವಂತೊಣಮರನು ಚಿಗುರುವುದೆ ಶಶಿಕಾಂತ
ಕರಗುವಂದದೆ[36] ಚಂದ್ರಿಕೆಯೊಳ[37]ಗಱೆ[38] ಯುರುತರದಿ[39]ನೊಸರುವುದೆ ಸತ್ಕವಿ
ವರನು ಸೋಲ್ವಂತಜ್ಞ ಸೋಲುವನೇ ಧರಿತ್ರಿಯಲಿ        ೨೬

ಮಾನಿತಾ[40]ರ್ಥ ಪ್ರಾಸ ಪದಸಂ
ಧಾನ ರಚನೆ ವಿಚಿತ್ರರಸ ಭಾ
ವಾನುರಕ್ತದಿ ಸುಕವಿ ರಚಿಸಿದ ಕಾವ್ಯವೊಪ್ಪುವುದು
ಏನು ವಿಸ್ಮಯವಿಲ್ಲದರ್ಥ ವಿ
ಹೀನನಾಗಿ ಯಥಾಸ್ಥಿತಿಯೊಳ
ಜ್ಞಾನಿ ರಚಿಸಿದ ಕಾವ್ಯ ತಾನೊಪ್ಪುವುದೆ ಧರಣಿಯಲಿ      ೨೭

ಸರಸರೀ ಕಾವ್ಯ ಪ್ರದೋಷವ
ನೊರೆದು ತಿದ್ದೆ ಮದೀ(ಯ) ವಾಗ್ವಧು
ಮೆರೆವಳೆಂ[41]ತೆನೆ ಸುರತ ವೇಳೆಯೊಳಿನಿಯ ನಖದಿಂದ
ಕೆರೆ[42]ದಡಾ ಸತಿಗದುವೆ ಮಂಡನ
ಕರವದಾಗಿಹುದಾಗಿ ಕರುಣದಿ
ಪರಿಣತರು ತಿದ್ದಿದನು ಘನತೆಯ ಮಾಱ್ಪುದವನಿಯಲಿ* ೨೮

ನಡೆ[43]ವನೆಡಹುವನ[44]ಲ್ಲದುಱೆದವ
ರೆಡಹುವರೆ ಕೃತಿ ನಡೆ[45]ಸುವರೊಳೂಂ
ದೆಡೆಯಲನು ತಪ್ಪಿದರೆ ತಪ್ಪಲ್ಲಿಕ್ಷು ಸಾರದಲಿ
ತೊಡರ್ದ ದೋಷವನುಱೆಯಲದು ತಾ
ಕಡೆಗೆ ಶರ್ಕರೆಯಹುದು ತ[46]ಪ್ಪು
ಳ್ಳೆ[47]ಡೆಯ ತಿದ್ದಿ ವಿದಗ್ಧರಧಿಕವ ಮಾಱ್ಪುದವನಿಯಲಿ      ೨೯

ಸರಸಭಾವ ವಿ[48]ಚಿತ್ರದರ್ಥೋ
ತ್ಕರ ಚಮತ್ಕೃತಿ ಯಮಕ ಪದ ನಯ
ಸರಸ[49] ಜಾಣ್ಣುಡಿ ಪು[50]ಗದೆ ಬಱೆಯ ಸು[51]ಲಕ್ಷಣೋಕ್ತಿಯಲಿ
ವಿರಚಿಸಿದ ಕೃತಿ ಸರ್ವರ ಮನೋ
ಹರಮದಾಗದು ಶಾಸ್ತ್ರಯುತವಹ
ಜರಠೆ[52]ನರ್ತಿಸಿದಂತೆ ಕಣ್ಣಿಂಬಾಗದವನಿಯಲಿ ೩೦

ವಿನುತನೇಮಿಯ ರೀತಿ ಗುಣವ
ರ್ಮನ ಚಮತ್ಕೃತಿ ನಾಗವರ್ಮನ
ನೆನಹು ಹೊನ್ನನ ದೇಸಿ[53] ವಿಜಯನ ಭಾವವಗ್ಗಳನ
ಸನುನಯೋಕ್ತಿ ಗಜಾಂಕುಶನ ಬಿ
ನ್ನಣ ಯಶಶ್ಚಂದ್ರನ ಬಹುಜ್ಞತೆ
ಯನುಕರಿಸ[54]ಲೀ ಕಾವ್ಯದೊಳಗೆನಗವರ ಕರುಣದಲಿ    ೩೧

ತೊಡಗಿದಮಲ[55]ಪ್ರಾಸ[56] ಕಡೆಗದು
ನಡೆಯದಿರೆ[57] ಬೇಸತ್ತು ಮೋನವ
ಹಿಡಿದು ಕಾಣದೆ ನೋಡಿ ಪರಿಕಿಸಿ ನೆಗಱ್ದ ಪದಗಳನು
ತೊಡೆದು ಮರಳಿ ಪರೋಕ್ತಿಗಳನಳ
ವಡಿಸಿಕೊಂಡಕ್ರಮದಿ ಸದರದ
ನುಡಿಯನೊಂದಿಸಿ ಪೇಱ್ವವ[58]ನು ಕವಿಯೇ ಧರಿತ್ರಿಯಲಿ ೩೨

ಗರುಡನಭ್ರವನದರೆ ಪಿಕವಾ[59] ಪರಿಯ ನೆಗೆವಂ[60]ತನಿಲಸುತ ಸಾ
ಗರವ ದಾಂ೯ಟಲು[61] ನವಿಲು ಲಂಘಿಪ ತೆಱದಿ ಗಣಧರರು
ವಿರಚಿಸಿದ ಸತ್ಕೃತಿಯನಿದ ವಿ
ಸ್ತರಿಸಲಾನೆನಿ[62] ತಱವ[63] ಕರುಣದಿ
ಪರಮ[64]ಭಕ್ತ್ಯಂ[65]ಗನೆಯ ವಶದಿಂ ಪೇಱ್ವೆ[66]ನೀ ಕೃತಿಯ[67]            ೩೩

ಕೃತಿಗೆ ನಾಮ ವಿರುದ್ಧ ಗು[68]ಣನ[69]ಪ್ರತಿಮ ಜೀವಂಧ[70]ರನ ಕಥೆ ತ
ತ್ಸತಿಗಧಿಪ ಸರ್ವಜ್ಞನೀ ಕೃತಿರಚಿತ ಕವಿವರನು
ವಿತತ ವಿಶ್ವಾಮಿತ್ರಗೋತ್ರಾ
ನ್ವಿತ ಸರಸ ಬಸವಾಂಕಸುತ ವಿ
ಶ್ರುತನು ಭಾಸ್ಕರನೆಂದೊ[71] ಡೊಪ್ಪುವುದರಿದೆ ಧರಣಿಯಲಿ          ೩೪

ವಾದಿ ಮದಗಜ ಸಿಂಹ ಸೂರಿಗ
ಳಾದಿಯಲಿ ನವಸಂಸ್ಕೃತದೆ[72] ಸಂ
ಪಾದಿಸಿದ ಭೂವಿನುತ ಜೀವಂಧರನ ಚರಿತವನು
ವೇದಿಸುವೆನುರುಭಾಮಿನಿಯ ಷ
ಟ್ಪಾದದಿಂ ಕನ್ನಡದೊಳೊ[73]ಲಿದಿ[74]ದ
ನಾದರಿಸಿ ಕೇಳುವುದು ಭವ್ಯಸಮೂಹವೊಲವಿನಲಿ         ೩೫

ಶ್ರೀಮದನುಪಮವೀರ ಜಿನಪದ
ತಾಮರಸ ಮಧುಕರನು ಸದ್ಧ
ರ್ಮಾಮೃತಾಂಭೋರಾಶಿವರ್ಧನಚಂದ್ರನೆಂದೆನಿಪ
ಭೂಮಿಪಾಲಲಲಾಮನಭಿನವ
ಕಾಮನಮಳಗುಣಾಭಿರಾಮ ಮ
ಹಾಮಹಿಮ ಮಗಧೇಂದ್ರ ಪಾಲಿಸುತಿರ್ದನೊಲವಿನಲಿ   ೩೬

ಲೀಲೆಯಿಂದೀ ಪರಿಯಲವನಿಯ
ಪಾಲಿಸುತ್ತಿರಲೊಂದು ದಿನ ವನ
ಪಾಲನೆಯ್ತಂದೆಱಗಿ ವಿಪ್ರಳಾದ್ರಿಯಲಿ ಸನ್ಮತಿಯ
ಲಾಲಿತ ಶ್ರೀ ಸಮವಸರಣ ಸು
ಲೀಲೆಯಿಂ ನೆಲಸಿರ್ದುದೆನೆ ಭೂ
ಪಾಲ ಪೀಠದಿ[75]ನಿಱೆದು [76]ಭಯ[77] ಭಕ್ತಿಯಲಿ ವಂದಿಸಿದ  ೩೭

ಒಸಗೆದಂದಂಗಂ[78]ಗ ಚಿತ್ತವ
ನೆಸಗಿ ವಿಮಳಾನಂದ ಭೇ[79]ರಿಯ
ನೊಸೆದು ಪೊ[80]ಯ್ಸಿಯೇ[81] ಸಮವಸರಣಕೆ ಭವ್ಯಜನಸಹಿತ
ವಸುಮತೀಶ್ವರ ಬಂದು ಘನಸಂ
ತಸದಿ ಬಲಗೊಂಡಕ್ಷಯಗೆ ವಂ
ದಿಸಿ ಕರಾಬ್ಜ೮ವ ಮುಗಿದು ಸಂಸ್ತುತಿಸಿದನು ಜಿನಪತಿಯ            ೩೮

ಜಯ ಜಯ[82] ಮಹಾಮಹಿಮ ಮುಕ್ತಾ
ಶ್ರಯ ಗುಣಾನ್ವಿತ [83]ಭಕ್ತ[84]ವತ್ಸಲ
ಲಯವಿಹೀನ ಮಹೇಶ ಮಾಯಾತೀತ ಮದನಹರ
ಭಯರಹಿತ ಸರ್ವಜ್ಞ ಲೋಕ
ತ್ರಯನಮಿತ ಪದಕಮಲ ತತ್ತ್ವಾ
ಲಯ ವಿಶುದ್ಧ ಜ್ಞಾನಮೂರ್ತಿಯೆ ಕರುಣಿಸೆನಗೆಂದ        ೩೯

ದೇವದೇವ ಸುರೇಂದ್ರನುತ ಭ
ವ್ಯಾವಲೋಕನ ವಿಮಳ ಮುಕ್ತಿ
ಶ್ರೀವರ[85] ಜಗನ್ನಾಥ ಜನನವಿದೂರ ಸಾಕಾರ
ಪಾವನ ಪರಂಜ್ಯೋತಿ ಶಾಶ್ವತ
ಜೀವರೂಪ ಕೃಪಾಂಬುನಿಧಿ ರಾ
ಜೀವಲೋಚನ ಸದ್ಗುಣಾತ್ಮಕ ಕರುಣಿಸೆನಗೆಂದ                       ೪೦

[1] ಡುರ (ಜ, ಮ)

[2] ಶರು (ಮ), ಶ್ವರರು (ಜ)

[3] ಶರು (ಮ), ಶ್ವರರು (ಜ)

[4] ದರಾ (ಜ, ಮ)

[5] ದರಾ (ಜ, ಮ)

[6] ಲು ಸೇರಿ (ಯೆ) ಪಸರಿಸಲು (ಮ), ಲು…. (ಜ)

[7] ಲು ಸೇರಿ (ಯೆ) ಪಸರಿಸಲು (ಮ), ಲು…. (ಜ)

[8] ದ (ಮ)

[9] x (ಜ)

[10] ಗಿ (ಜ, ಮ)

[11] ಹಿ (ಜ, ಮ)

[12] ಚಿ (ಜ)

[13] ವೊಂ (ಜ)

[14] x (ಮ)

[15] ದಿ (ಜ, ಮ)

[16] ಳು (ಜ, ಮ)

[17] x (ಮ)

[18] x (ಮ)

[19] x (ಜ, ಮ)

[20] ಗುಂ (ಜ)

[21] ಯ (ಜರ)

[22] x (ಜ)

[23] ವೆಂ (ಜ, ಮ)

[24] x (ಜ, ಮ)

[25] x (ಜ, ಮ)

[26] + ನಿನೆ; (ಮ)

[27] ಗಿ (ಮ)

[28] ಳಿ (ಜ, ಮ)

[29] ಚ್ಚಿ (ಜ, ಮ)

[30] ಣ್ಪ (ಮ)

[31] + ನು (ಜ)

[32] ಜ್ಞಾ (ಜ)

[33] ನ (ನು)

[34] ದ್ದೂದೋದಿ (ಜ), ದ್ದುವುದೋದಿ (ಮ)

[35] ದ್ದೂದೋದಿ (ಜ), ದ್ದುವುದೋದಿ (ಮ)

[36] ದಿ (ಜ, ಮ)

[37] + ಗ (ಪ)

[38] ಱೆ (ಜ), ಅ (ಮ)

[39] x (ಜ)

[40] ತ (ಜ)

[41] ಳಂ (ಮ)

[42] ರ (ಜ)

* ಈ ಪದ್ಯವು ಪ ಪ್ರತಿಯಲ್ಲಿಲ್ಲ

[43] ಡ (ಜ, ಮ)

[44] ರ (ಜ, ಮ)

[45] ಡ (ಮ)

[46] ಪ್ಪಳೆ (ಜ)

[47] ಪ್ಪಳೆ (ಜ)

[48] (ಮ)

[49] ಸು (ಮ)

[50] ಪೊ (ಮ)

[51] ಸ (ಜ, ಮ)

[52] ತಿ (ಜ, ಮ)

[53] ಸೆ (ಪ)

[54] ಸಿ (ಮ)

[55] x (ಜ)

[56] ಸು (ಜ, ಮ)

[57] ರಿ (ಮ)

[58] x (ಜ)

[59] ಪಾ (ಮ)

[60] ದಂ (ಮ)

[61] ಟಲಿ (ಮ), ಟಿಲಿ (ಜ)

[62] ವಱ (ಜ, ಮ)

[63] ವಱ (ಜ, ಮ)

[64] ಭಕ್ತ್ಯಾಂ (ಜ), ಮುಕ್ತ್ಯಂ (ಮ)

[65] ಭಕ್ತ್ಯಾಂ (ಜ), ಮುಕ್ತ್ಯಂ (ಮ)

[66] ನಾನೆದ (ಮ)

[67] ನಾನೆದ (ಮ)

[68] ಗ (ಜ)

[69] ಪ್ರೀತಿ ವಿಜೀವಂಧಾ (ಜ)

[70] ಪ್ರೀತಿ ವಿಜೀವಂಧಾ (ಜ)

[71] x (ಜ)

[72] ದಿ (ಜ, ಮ)

[73] ರೆವು (ಮ)

[74] ರೆವು (ಮ)

[75] ವ (ಪ)

[76] x (ಮ)

[77] x (ಮ)

[78] x (ಜ), ಷ

[79] ವಾ (ಮ)

[80] ಯ್ಯಿಸಲ (ಮ)

[81] ಗ್ರ (ಪ, ಜ)

[82] + ತು(ಮ)

[83] ತತ್ತ್ವ (ಜ, ಮ)

[84] ತತ್ತ್ವ (ಜ, ಮ)

[85] + ನೆ(ಮ)