ನಿರುಪಮ ನಿರಾಪೇಕ್ಷ ನಿರ್ಭಯ
ನಿರತಿಶಯ ನಿರ್ಮಾಯ ನಿಸ್ಪೃ
ನಿರಜ
ನಿರತ ನಿತ್ಯಾನಂದ ನಿರ್ಮದ
ನಿರಘ ನಿಷ್ಕಳ ನಿರ್ಮಲಾತ್ಮಕ
ನಿರಜ ನಿಜ ನಿಷ್ಕಾಮ ನಿಶ್ಚಲ ಕರುಣಿಸೆನಗೆಂದ ೪೧
ಸರ್ವಗತ ಸರ್ವ[3]ಜ್ಞ ಸದ[4]ಮಲ
ಸರ್ವಮಯ ಸರ್ವಾಮರಾರ್ಚಿತ
ಸರ್ವಲೋಕೇಶ್ವರ ಸಮಾಹಿತ ಸರ್ವಗುಣ[5]ನಿಲಯ[6]
ಸರ್ವಭೂತಾತ್ಮಕ ಭ[7]ವಾಂತಕ
ಸರ್ವಸಂಗವಿಮುಕ್ತ ಸನ್ನುತ
ಸರ್ವದುರಿತವಿದೂರ ಸನ್ಮತಿ ಕರುಣಿಸೆನಗೆಂದ ೪೨
ವಿಶ್ವಮಯ ವಿಶ್ವೇಶ ವಿಶ್ವಗ[8]
ವಿಶ್ವತೋಮುಖ ವಿಶ್ವಪೂಜಿತ
ವಿಶ್ವಲೋಚನ ವಿಶ್ವಪೂರಿತ ವಿಶ್ವದಾತಾರ
ವಿಶ್ವರೂಪ ಮಹೀಶ್ವರೇಶ್ವರ
ವಿಶ್ವಗತ ವಿಶ್ವಾತ್ಮ ವಿಶ್ರುತ
ವಿಶ್ವಮೂರ್ತಿ ವಿಶುದ್ಧ ಸನ್ಮತಿ ಕರುಣಿಸೆನಗೆಂದ ೪೩*
ಪರಿಣತಾಂತಃಕರಣ ಸುಗುಣಾ
ಭರಣ ಸುರಮಣಿ ಮಕುಟ[9]
ಚರಣ ಧರ್ಮೋದ್ಧರಣ ಭಯಸಂಹರಣ ಸಾಕಾರಾ
ಶರಣಜನ ಶತಪತ್ರದಶಶತ
ಕಿರಣ ಮರಣವಿದೂರ ಕರುಣಾ
ಕರ ಪರಾತ್ಮಕ ಭವನಿವಾರಣ ಕರುಣಿಸೆನಗೆಂದ ೪೪**
ಶ್ರೀಮದಪವರ್ಗಾಂಗನಾಸಂ
ಪ್ರೇಮ ನಿರ್ಜಿತಕಾಮ ಸುಗುಣಾ
ರಾಮ ಧರ್ಮೋದ್ಧಾಮ ನುತಸುತ್ರಾಮ ನಿಸ್ಸೀಮ
ಸೋಮರವಿಶತಕೋಟಿ ತೇಜಸ
ನಾಮ ವಿಮಲಗುಣಾಭಿರಾಮ ಮ
ಹಾಮಹಿಮ ಭವಭೀಮ ಶಂಕರ ಕರುಣಿಸೆನಗೆಂದ ೪೫
ಧರಣಿಪತಿ ಜಿ[10]ನಪತಿಯನಿಂತೀ
ಪರಿಯ [11]ಸನ್ನುತಿ[12]ಗೈದು ಬಱೆಕಿ
ತ್ತೆ[13]ಱದೊಳಿರ್ದ ಸುಧರ್ಮಜಂಬೂಗೌತಮಪ್ರಮುಖ
ಪರಮಗಣಧರ ಸಂಕುಲಕೆ ಭಯ
ಭರಿತ ಭಕ್ತಿಯೊಳೆಱಗಿ ಹರುಷದೊ
ಳರಸನಿರ್ದನು ಧರ್ಮಪಾರಾಯಣ ಪ್ರಸಂಗದಲಿ ೪೬
ಅರುಹನನು ಹೃತ್ಪದ್ಮದಲಿ ತಂ
ದಿರಿಸಿ ರವಿಮಂಡಲಕೆ ದೃಷ್ಟಿಯ
ಹರಿಸಿ ಬಹಿರಿಂ[14] ದ್ರಿಯದ ಬಱಲಿಕೆಯು[15]ಱೆದು ಸಾಕ್ಷಾತ
ನಿರು[16]ಪಮಾ[17]ನಂದೈಕತೇಜ
ಸ್ಫು[18]ರಿತಮಯ ತಾನಾಗಿ ತಪಮಾ
ಚರಿಪ ಮುನಿಪನ ಕಂಡು ಗೌತಮಗರಸನಿಂತೆಂದ ೪೭
ಧರಣಿಯೊಳು ಮನುಜರಿಗೆ ತಪಮಾ
ಚರಿಸುವುದು ಕರ್ತವ್ಯಮಮರೋ
ತ್ಕರಕೆ ಸಲ್ಲದಿ[19]ದೇನು ವಿಸ್ಮಯವೀಗಳೀ ದೇವ
ಸುರುಚಿರದೊಳುಗ್ರೋಗ್ರತಪವನು
ವಿರಚಿಸುತ ಚಿದ್ರೂಪನಾದೀ
ಪರಿಯಿದೇನೆನೆ ಭೂಮಿಪತಿಗೆ ಸುಧರ್ಮನಿಂತೆಂದ ೪೮
ಈತ ಮರ್ತ್ಯನು ದೇವನಲ್ಲ ಮ
ಹಾತಿಶಯದ ತಪೋಗ್ನಿಯಿಂದಿದಿ
ರಾತ ಕರ್ಮಾರಣ್ಯವನು ಖಂಡಿಸಿ ಭವಾಟವಿಗೆ
ಜ್ಯೋತಿಮಯ ತಾನಾಗಿ ಭುವನ
ಖ್ಯಾತಿವೆತ್ತನು ತಪದ ಮಹಿಮೆಗಿ
ದೇತಱತಿಶಯವೆಂದು ಭೂಮಿಪಗಱುಹಿದನು ಮುನಿಪ ೪೯
ಎನಲು ಭೂಮಿಪನೀತ ಮುನ್ನಾ
ರನುಪಮ[20] ದ್ವಿಜನ ಮಹೀಪಾ
ಲನೊ ವಣಿಗ್ವಂಶಜನೊ ರೌಪ್ಯಾಚಲದ[21] ಖೇಚರನೊ
ಎ[22]ನಗೆ ಪೇಱೇತನ ಲಸದ್ವ
ರ್ತನೆಯನನಿತುಮ[23]ನೆನಲು ಕೇಳೆಲೆ
ಜನಪ ಎಂದು ಸುಧರ್ಮ ಮುನಿಪತಿ ಪೇಱಲನುಗೆಯ್ದ ೫೦
ಇದು ವಿನಮದಮರೇಂದ್ರ ಶ್ರೀ ಜಿನ
ಪದ ಕಮಲಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರ ರಚಿತ ಧರ್ಮ
ಪ್ರದನ[24] ಜೀವಂಧರನ ಚರಿತೆಯೊ
ಳಿದುವೆ ಪೂರ್ವಪ್ರಸಂಗವವನೀಪಾಲ ಕೇಳೆಂದ ೫೧
* * *
* ೪೩ನೆಯ ಪದ್ಯದ ನಂತರ ಜ ಪ್ರತಿಯಲ್ಲಿ ಮಾತ್ರ ಕೆಳಗಿನ ಪದ್ಯವಿದೆ :
ಪರಮ ತತ್ತ್ವ ಪರಮೇಶ್ವರ ಪರ
ಪರ ಪರಂಜ್ಯೋತಿ ಸ್ವರೂಪಕ
ಪರಮ ಪರತತ್ತ್ವಾಧಾರ ಪರಬ್ರಹ್ಮ ಪಾಪಹರ
ಪರತರ ಪರಾನಂದ ಪಾವನ
ಪರಮ ಪುರುಷ ಪರಾತ್ಮ ಪರಮೇ
ಶ್ವರ ಪರೋತ್ತಮ ಪಾಲಿತಾಮರ ಕರುಣಿಸೆನಗೆಂದ
** ಈ ಪದ್ಯವು ಪ ಪ್ರತಿಯಲ್ಲಿಲ್ಲ
Leave A Comment