ರಾಜರಾಜನ ಪುರವ ನಗುತಿಹ
ರಾಜಪುರಿ

[1]ಯಲಿ[2] ಸಕಲ ಮಹಿಯನು
ರಾಜಮಣಿ ಸತ್ಯಂ[3] ಧರನು ಪಾಲಿಸಿದನೊಲವಿನಲಿ

ಅರಸ ಕೇ[4]ಳ್ ಹ[5]ರಿಮಕರಮೀನೋ
ತ್ಕರದಿ[6] ಗಗನವನೊದೆವ ಪೆರ್ದೆರೆ
ನೊರೆ ಘನಾ[7]ವರ್ತಂ[8]ಗಳಿಂ ಘುಮು ಘುಮು[9]ನಿನಾದದಲಿ
ಸ್ಫುರಿತ ಮಣಿಮೌಕ್ತಿಕದಿ[10] [11]ವಸುಧಾ[12] ತರುಣಿ ನಿಱೆವಿಡಿದುಟ್ಟ ಪ[13]ಟ್ಟಾಂ
ಬರವಿದೆನೆ ಲವಣಾಬ್ಧಿ ಮಿಗೆ ರಂಜಿಸುವುದವನಿಯಲಿ     ೧

ಇಳೆಯ ಪತಿ ಕೇಳಾ ಮಹಾಂಬುಧಿ
ಯೊಳಗೆ ಮಧ್ಯಮಲೋಕ ಲಕ್ಷ್ಮಿಯ
ಲಲಿತನಾಭಿಯಿದೆನಲು ಜಂಬೂದ್ವೀಪವಾ ನಡುವೆ
ಹೊಳೆವ[14] ಮಣಿ ವಸು ಚಂದ್ರಕಾಂತೋ
ಪಲವನಾವಳಿಯಿಂದ ಮಂದರ
ವಿಳೆಗೆ ಮೂಲಸ್ತಂಭವೆನೆ ಮು[15]ಟ್ಟಿದುದ ಘನಪಥವ        ೨

ಆ ಮಹಾಮೇರುವಿನ ದಕ್ಷಿಣ
ಸೀಮೆಯಲಿ ಸಿರಿಕಂ[16]ಡದವೊಲಭಿ
ರಾಮವಾದುದು ಲೋಕನೋತ್ಸವ ಸಂಪದವ ಪಡೆದು
ಭೂಮಿಯಖಿಳ ಕ್ಷೇತ್ರಗಳಿಗು
ದ್ದಾಮವೆಂದೆನಿಪಾರ್ಯಖಂ[17]ಡ ಮ
ಹಾಮಹಿಮೆಯಿಂದೆಸೆವುದವನೀ[18] ಮುಕುರದಂದದಲಿ   ೩

ಮು[19]ದದೊಳಂಬುಜಭವನು ಮೂಲೋ
ಕದ ಲಸತ್ಸಾರಾಯವನು ತೆಗೆ
ದೊದವಿ ರಚಿಸಿದನೆನಲ[20]ಖಿಳ ಸೌಭಾಗ್ಯಸಂಯು[21]ತದ
ಸದಮಳ ಗ್ರಾಮಗಳ ನೆರೆ ತೀ
ವಿದ ತಟಾಕಗಳಿಂದ ಹೇಮಾಂ
ಗದ[22] ವಿಷಯ ರಂಜಿಸುವುದವನೀ ಪಾಲ ಕೇಳೆಂದ       ೪

ಪರಮ ಸತ್ಯದ ಸೀಮೆ ಗುಣದಾ
ಗರ ಸುಧರ್ಮದ [23]ಪೀಠ [24]ಪಾವನ
ದಿರವ [25]ನಂಗನ ಬೀಡು ತಣ್ಣೆಲರಿ[26]ಕ್ಕೆ ರತಿಯ ಮನೆ
ಸಿರಿಯ ಮನೆ ಸುಖದೆಡೆ ಲಸ[27]ತ್ ಸಿಂ[28] ಗರದ[29] ತಾಣ ವಸಂತನೃಪನೋ
ವರಿಯಿದೆನೆ ತದ್ವಿಷಯವತಿ ರಂಜಿಸುವುದವನಿಯಲಿ     ೫

ಅರಸ ಕೇಳಾ ವಿಷಯದನುಪಮ
ಪುರಗಳಮರಾವತಿಯನಬ್ಜಾ
ಕರಗಳಬ್ಧಿಯನುಪವನಗಳ ಚೈತ್ರ ರಥವನಿಭ
ಸುರಕರಿಯನಶ್ವಾ [30]ಳಿ ಸೂರ್ಯನ
ತುರಗವನು ಗೋಸಂಕುಲಗಳಾರು
ತರದಿ ಸುರಭಿಯ ನಗುವು[31]ವೆನೆ ವರ್ಣಿಸುವನಾರೆಂದ   ೬

ಹಸ್ತಿ ಹಯ ಜನ್ಮಿ[32] ಸದ ಮ[33]ಲೆ ಬಿಲ
ನರ್ತನದಿನು[34] ಚ್ಚೈಸದಿಳೆ ಜಲ
ಮುತ್ತಾ ಮಣಿ ಜನಿಯಿಸದ ರೋಹಾಚಳ ಮರಾಳ ಹರಿ[35]ಪೆತ್ತಿ [36]ರದ ಕೊಳನಟ[37] ವಿಕ[38]ಯದೊ
ಳೊತ್ತಿ [39]ರದ ಮರ[40]ಬಳ್ಳಿ ಮದ[41]ಮೊಸ
ರ್ವೊತ್ತೊ[42]ಗೆಯಳಿನಿವಹ ವನವಿಲ್ಲಾ ಪ್ರದೇಶದಲಿ         ೭

ನಾ[43]ರಿಕೇಳ[44]ಫಲೋದಕವು ಸಹ
ಕಾರಕಿ[45]ಱೆಯಲು ಚೂತಫಲದಾ
ಸಾರ ದಾಡಿಮಕಡರೆ ತದ್ರಸ ಕದಳಿಗಳ ಮೇಲೆ
ದಾರಿಡಲು ತತ್ಸಾರವಿ[46]ಕ್ಷುವ[47] [48]ಪೇಱೆ[49] ತದ್ರಸದಿಂದ ಬೆಳೆವು[50]ವು
ಚಾರುಧಾನ್ಯಾವಳಿಗಳೊಲವಿಂದಾ ಪ್ರದೇಶದಲಿ          ೮

ಲಲನೆಯರನುರುನಗರ ತತ್ಪುರ
ಗಳಲಿ ಮಣಿಮಯಕೋಟೆ[51] ಕೋ[52]ಟಾ
ವಳ[53]ಯ[54]ವನ ಪರಿಖೆಗಳು[55] ಪರಿಖೆಯನೊದವಿ ಬನಬನವಾ[56] ಬಳಸಿ ಕೆಱೆಯಾ ಕೆಱೆಯ ವೇಷ್ಟಿಸಿ
ಬೆಳೆವ[57] [58]ಹೊಲನಾ[59] ಹೊಲನ ಸುತ್ತಿಯೆ
ತೊಱಲುತಿರ್ಪು[60]ದು ಪಾಮರೀ[61] ಜನವರಸ ಕೇಳೆಂದ   ೯

ಶಾಲಿಗೆಱಗಿದ ಗಿಳಿಯನಬಲೆಯ
ರಾಲಿವ[62]ರಲಿಂದಿಡಲು ತಪ್ಪಿ ವಿ
ಶಾಲಪುಂಡ್ರೇಕ್ಷುಗಳ ಕೊಳೆ ಗಂಟೊಡೆದು ರಸವಿಱೆಯೆ
ಮೇಳ[63]ವದಿ[64] ಪಥಿಕರ್ಕಳೀಂ[65] ಟಿ ವಿ
ಲೋಲ ಪಾಮರಿಯರ ಕಟಾಕ್ಷದ
ಜಾಲದಲಿ ಸಿ[66]ಲುಕಿರ್ಪ[67]ರಂದಿಂದಾ ಪ್ರದೇಶದಲಿ         ೧೦

ಕುಂದು ಹೆಚ್ಚುಂಟೆಂಬುದಬ್ಧಿಯೊ
ಳಿಂದುವಿನೊಳಱೆಯಾಸೆ[68] [69]ನವ[70]ಮಕ
ರಂದದಲಿ [71]ಕೌಟಿಲ್ಯ[72] ಕಠಿನತೆ ಮುಳಿಸತಿಕ್ಷಾಮ
ಮಾಂ[73] ದ್ಯವ[74] ಬಲೆಯರಳಕ ಘನಕುಚ
ಬಂಧುರ ಭ್ರೂಮಧ್ಯಯಾನಗ
ಳಿಂ[75]ದಲ[76]ಲ್ಲದೆ ನಾಡೊಳಿಲ್ಲವನೀಶ ಕೇಳೆಂದ ೧೧

ಭಂಗ ವೀಚಿಯೊಳುನ್ಮದವು ಮಾ
ತಂಗದೊಳು ಧರ್ಮಚ್ಯುತವು ಬಾ
ಣಂಗಳೊಳಗಹಿತತ್ವ ಗಾರುಡದಲ್ಲಿ ವಿಭ್ರಾಂತಿ
ಭೃಂಗನಿವಹದಿ ವಕ್ರಗತಿ ಭಗ
ಣಂಗಳೊಳಗೆ ಮಹಾಲಯವು ಗೇ
ಹಂಗಳೊಳಗಲ್ಲದೆ ಮಗುಱ್ದಾ ನಾಡೊಳಿಲ್ಲೆಂದ            ೧೨

ಹಿಡಿತ ಚಾ[77]ಮರ ಛ[78]ತ್ರದಲಿ ಸಂ[79]ಗಡಿತ[80] ಕುಚ[81]ಗ ಮಧ್ಯದಲಿ ಮಿಗೆ
ಬಿಡದಿ[82]ಹಣ ಸತ್ಯದಲಿ ಗೋತ್ರವಿರೋಧವಿಂದ್ರನಲಿ
ಜಡತೆ ವಾರಿಯೊಳುಗ್ರವೀಶನೊ
ಳು[83]ಡಿತ ರಂಭಾವನದಿ ಸಂತತ
ಹೊ[84]ಡೆಹು ವಾದ್ಯದ ರವದೊಳ[85]ಲ್ಲದೆ ನಾಡೊಳಿಲ್ಲೆಂದ ೧೩

ಭುವನಕಂಟಕವಬ್ಜ[86]ನಾಳದೊ
ಳವನಿಕಂಟಕ ಕೇತಕಿಯೊಳ
ಧ್ರು[87]ವಮ[88]ಘದಿ ಸಂಚಳ [89]ಸಮೀ[90] ರಣನಲ್ಲಿ [91]ಮಧು[92]ವಿಕೃತಿ
ನವರ[93] ಸಾಲದಿ[94] ನಿಗಳ ಮ[95]ದಗಜ
ನಿವಹ[96]ದೊಳು[97] ವಂಶಕ್ಷಯವು ಸಂ
ಭವಿಸುವುದು ಮೇದರೊಳಗಲ್ಲದೆ ನಾಡೊಳಿಲ್ಲೆಂದ        ೧೪

ಆ ವಿಷಯ[98]ದವ[99]ನಿಯೊಳು ಸಂತತ
ದೇವನದಿ ಮಾತೃಕದಲಿಕ್ಷುರ
ಸಾವಳಿಯ ಮಾತೃಕ[100]ಗಳಲಿ[101] ರಂಭಾಮ್ರಫಳರಸವು
ತೀವಿ[102]ದನುಪಮ[103] ಮಾತೃಕದಿ ವಿ
ದ್ರಾವಿಸುವ ಶಶಿಕಾಂತಮಾತೃಕ
ದಾ ವಿಳಾಸದಿ ಬೆಳೆಯಲಭಿರಾಜಿಸುವುದೊಲ[104] ವಿನಲಿ[105]

ಹೃದಯದಲಿ ರತಿ[106]ಬೀ[107]ಜವನು ತಳಿ
ದುದಕವೆಱೆದಪರೆನಲು ಕುಚಕ
ಕ್ಷದ ಹೊಗರು ತೋರ್ಪಂ[108]ತೆ ಕಳಸವನೆತ್ತಿ ನೀರೆಱೆಯೆ
ಇದುವೆ[109] ಬಱೆಗಿರಿಕೆಗೆನೆ ತಾ[110]ಕುಡಿ
ದೊದವಿ ಲಾವಣ್ಯಾಂಬುವನು ನೇ
ತ್ರದಲಿ ಕುಡಿ[111]ವರ್‌[112] ಪಥಿಕರಾ ವಿಷಯಪ್ರಪಾ[113]ಳಿಯಲಿ           ೧೬

ಚಂದ್ರಕಾಂತದ ಘಟದೊ[114]ಳಧ್ವಗ
ವೃಂ[115]ದ[116]ಕುದಕವನ[117] ಬಲೆಯರು ನೆಲ
ಮಿದೆಱೆಯ ತದ್ವಾರಿ ತೀರಲು ತಂದು ಮುಖಶಶಿಯ
ಚಂದ್ರಿಕೆ[118] ಯಲಾ ಕಲಶವನು ಸಾ
ನಂದದಿಂದವೆ ತೀವಿ[119] ಪಥಿಕರಿ
ಗೊಂದಿ ನೀರೆಱೆದೆಸೆವರಾ ವಿಷಯಪ್ರಪಾ[120]ಳಿಯಲಿ      ೧೭

ಇಂತೆಸೆವ ವಿಷಯದೊಳು ಶೋಭಿಪ
ನಂತಪುರ ಮಾಲಾನ್ವಿತದಿ ಚೆ
ಲ್ವಂ ತಳೆದು ನಡುವೆಸೆವ ನಾಯಕರತ್ನದಂಡದಲಿ
ಸಂತತ ಮಹಾಲಕ್ಷ್ಮಿಗಿರಲು ನಿ
ಶಾಂತವಾಗಿಯೆ ಭೂಸತಿಯ ಮುಖ
ದಂತೆ ಮೆಱೆವುದು ರಾಜಪುರಿ ಮಧ್ಯಪ್ರದೇಶದಲಿ          ೧೮

ವಿನುತ ಪು[121]ರಲಕ್ಷ್ಮಿಯನು ದಿಕ್ಕಾ
ಮಿನಿಯರೀ[122]ಕ್ಷಿಸೆ[123] ದೃಷ್ಟಿಯಹುದೆಂ
ದೆನುತ ಭೂಸತಿ ಸುತ್ತ ಪಚ್ಚೆಯ ಜವನಿಕೆಯನೊಸೆದು
ಅನವರತ ಪಿಡಿದಿ[124]ರ್ದಳೆನಲು ಪ
ವನಸ[125]ಸಹಸ್ರ[126]ದ ಶೋಭೆಗಿದೆ ತಾ
ಯ್ವ[127]ನೆಯೆನಿಸಿ ತತ್ಪು[128]ರ ವಿರಾಜಿಸಿ[129] ತರಸ ಕೇಳೆಂದ           ೧೯

ಕುಲಗಿರಿ[130]ಗಳಂ ತಂದು ಸುತ್ತಲು
ನಿಲಿಸಿ ಹೊಂದಗಡುಗಳ ಮೇಲಳ
ವಳಿ[131]ಸಿದಂತೆ ಸುವರ್ಣಕೋಟಿ ನಭಸ್ಥಳವನಡರೆ
ಹೊಳೆವ ಕನಕಾಗ್ರದಲಿ [132]ಮಿಗೆ[133] ಬೆಳೆ[134] ದೆಳಲತೆಯವೊಲು ಪದ್ಮರಾಗಾ
ವಳಿಯ ತೆನೆಯಟ್ಟಳೆ[135]ಗಳಿಂ[136]ದೆಸೆದಿರ್ದುದೊಲವಿನಲಿ            ೨೦

[1] x (ಮ)

[2] x (ಮ)

[3] ತ್ಯ (ಮ)

[4] ಳ (ಮ)

[5] ಳ (ಮ)

[6] ದ (ಜ, ಮ)

[7] ವತ್ತಂ (ಜ), ವೃತ್ತಂ (ಮ)

[8] ವತ್ತಂ (ಜ), ವೃತ್ತಂ (ಮ)

[9] x (ಜ)

[10] x (ಮ)

[11] ವಸೆದಾ (ಜ), ವಸೆವದಾ (ಮ)

[12] ವಸೆದಾ (ಜ), ವಸೆವದಾ (ಮ)

[13] ಬ (ಜ, ಮ)

[14] x (ಜ), (ವ) – (ಮ)

[15] ಪು (ಜ)

[16] ಗಂ (ಮ), ಖಂ (ಜ)

[17] ಖಾಂ (ಜ, ಮ)

[18] ನಿಯ (ಮ)

[19] ಮ (ಜ, ಮ)

[20] x (ಜ)

[21] ಯ (ಜ)

[22] x (ಜ)

[23] ಪೇಟೆ (ಪ), ಪೇಠೆ (ಜ)

[24] ಪೇಟೆ (ಪ), ಪೇಠೆ (ಜ)

[25] ವು (ಜ)

[26] ತಿ (ಜ, ಮ)

[27] ಸೃಂ (ಜ), ತ್‌ ಸೃ (ಮ)

[28] ಸೃಂ (ಜ), ತ್‌ ಸೃ (ಮ)

[29] ದೆ (ಜ)

[30] ಲ್ವಾ (ಮ)

[31] ವ (ಜ, ಮ)

[32] ನಿ (ಮ)

[33] ಮೇ (ಜ)

[34] ವು (ಜ, ಮ)

[35] ಪಿರ್ತಿ (ಜ, ಮ)

[36] ಪಿರ್ತಿ (ಜ, ಮ)

[37] ಡ (ಜ, ಮ)

[38] ಯರಳ್ತಿ (ಜ), ಯಾರಳ್ತಿ (ಮ)

[39] ಯರಳ್ತಿ (ಜ), ಯಾರಳ್ತಿ (ಮ)

[40] ವ (ಜ, ಮ)

[41] ಸರ್ವೋರ್ತೊ (ಜ), ಸರ್ವೋತ್ತೊ (ಮ).

[42] ಸರ್ವೋರ್ತೊ (ಜ), ಸರ್ವೋತ್ತೊ (ಮ).

[43] ಳಿ ಕೇರ (ಜ, ಮ)

[44] ಳಿ ಕೇರ (ಜ, ಮ)

[45] ಕ (ಜ)

[46] ಕ್ಷದ (ಮ)

[47] ಕ್ಷದ (ಮ)

[48] ಮೇಲೆ (ಜ, ಮ)

[49] ಮೇಲೆ (ಜ, ಮ)

[50] ವ (ಜ), ದ (ಮ)

[51] ಟಿ (ಜ, ಮ)

[52] ಕು (ಜ)

[53] ಳೆ (ಜ)

[54] ವನುಪರಿಖಾನು (ಜ), ದಮ ಪರ ಭಾನು (ಮ)

[55] ವನುಪರಿಖಾನು (ಜ), ದಮ ಪರ ಭಾನು (ಮ)

[56] ದ (ಜ, ಮ)

[57] ದ (ಜ, ಮ)

[58] x (ಜ)

[59] x (ಜ)

[60] ಪ್ಪು (ಮ)

[61] ರಿಯ (ಜ)

[62] ಪ (ಮ)

[63] ದಧಿ (ಮ)

[64] ದಧಿ (ಮ)

[65] x (ಮ)

[66] ಲಿಕಿಪ್ಪ (ಮ), ಲಿಕಿಪ್ಪ (ಜ)

[67] ಲಿಕಿಪ್ಪ (ಮ), ಲಿಕಿಪ್ಪ (ಜ)

[68] ಸಿ (ಮ)

[69] ವನ (ಮ)

[70] ವನ (ಮ)

[71] ಕಾಠಿಣ್ಯ (ಜ, ಮ)

[72] ಕಾಠಿಣ್ಯ (ಜ, ಮ)

[73] ಮಂ (ಜ, ಮ)

[74] ರ (ಜ, ಮ)

[75] ದದ (ಮ), ಲ (ಜ)

[76] ದದ (ಮ), ಲ (ಜ)

[77] ಚ (ಪ)

[78] ಚ್ಛ (ಪ)

[79] ಕಟ (ಜ, ಮ)

[80] ಕಟ (ಜ, ಮ)

[81] ಚಂ (ಜ, ಮ)

[82] ವಿ (ಜ, ಮ)

[83] ಳ್ಕು (ಮ)

[84] ಡಗುಳಾ ವಾದ್ಯದೊಳಗ (ಜ, ಮ)

[85] ಡಗುಳಾ ವಾದ್ಯದೊಳಗ (ಜ, ಮ)

[86] x (ಜ, ಮ)

[87] ದ್ರ (ಮ)

[88] ವ (ಜ, ಮ)

[89] ಸಂಮಿ (ಜ)

[90] ಸಂಮಿ (ಜ)

[91] ಮೃದು (ಮ)

[92] ಮೃದು (ಮ)

[93] + ಸ (ಜ)

[94] ದೆ (ಜ, ಮ)

[95] ಮಂ (ಜ)

[96] x (ಮ)

[97] x (ಮ)

[98] ದವಿ (ಜ), ವವ (ಮ)

[99] ದವಿ (ಜ), ವವ (ಮ)

[100] x (ಜ, ಮ)

[101] ಲ್ಲಿ (ಮ)

[102] ಪದು (ಮ)

[103] ಪದು (ಮ)

[104] ದ (ಜ)

[105] ದ (ಜ)

[106] ತ (ಜ, ಮ)

[107] ಭೀ (ಪ)

[108] ಪ್ಪಂ (ಜ, ಮ)

[109] ವಿ (ಮ)

[110] x (ಜ, ಮ)

[111] (ಯು) ವ-(ಮ)

[112] (ಯು) ವ-(ಮ)

[113] ವಾ (ಜ, ಮ)

[114] ಗ (ಜ, ಮ)

[115] ಹೃಂ (ಜ, ಮ)

[116] ಕುಚದ (ಮ)

[117] ಕುಚದ (ಮ)

[118] x (ಮ)

[119] x (ಜ)

[120] ವಾ (ಮ)

[121] ಸು (ಮ)

[122] ನೀ (ಮ)

[123] ಸಿ (ಜ, ಮ)

[124] x (ಜ)

[125] ಮಸ್ರ (ಜ), ಮಸ್ತ (ಮ)

[126] ಮಸ್ರ (ಜ), ಮಸ್ತ (ಮ)

[127] ಯ್‌ಮ (ಜ, ಮ)

[128] ಪ್ಪು (ಜ)

[129] ಸ (ಜ)

[130] ರ (ಪ)

[131] ಡಿ (ಜ, ಮ)

[132] x (ಜ, ಮ)

[133] x (ಜ, ಮ)

[134] + ದೆಳ (ಮ)

[135] ಳಿ (ಮ)

[136] ಳಿ (ಜ)