ಭರತ-ಖಂಡದಲ್ಲಿ ಅನೇಕ ಮತ, ಧರ್ಮಗಳು ಜನಿಸಿವೆ, ಬೆಳೆದಿವೆ; ಅಂತೆಯೆ, ಇಲ್ಲಿನ ಸಂಸ್ಕೃತಿಯ ವೈಶಿಷ್ಟ್ಯ, ವೈವಿಧ್ಯ, ಅಚ್ಚರಿಗೊಳಿಸುವಂತವು. ಅವುಗಳಲ್ಲಿ, ಬೌದ್ಧದರ್ಮ ಸಹ ಪ್ರಚೀನ ಆದದ್ದು. ಗೌತಮ ಬುದ್ಧನೇ ಸಂಸ್ಥಾಪಕ.

ಬುದ್ಧ ಭಗವಾನನ ಹೆಸರನ್ನು ಇಡಿಯ ಜಗತ್ತೇ ಬಲ್ಲದು. ರಾಜಕುಮಾರನಾದ ಸಿದ್ಧಾರ್ಥ ರಾಜ್ಯ, ಭೋಗ, ತಂದೆ-ತಾಯಿ, ಸಂಸಾರ, ಎಲ್ಲವನ್ನು ತ್ಯಜಿಸಿದ. ಆಸೆ, ಮೋಹ,ಎಲ್ಲವನ್ನೂ ತೊರೆದ. ಚಂಚಲ ಆದ ಮನಸ್ಸನ್ನು ಸ್ಥಿರ ಆಗಿಸಿದ. “ಈ ಲೋಕದಲ್ಲಿ ಎಷ್ಟೆಷ್ಟೋ ಜನರು, ಹುಟ್ಟು-ಸಾವು, ರೋಗ-ರುಜಿನ, ಆಸೆ-ದುಃಖ, ಇವುಗಳ ಪಾಶದಲ್ಲಿ ಸಿಲುಕಿ ನರಳುವರಲ್ಲ” ಎಂದು ಮರುಗಿದ. ಇದಕ್ಕೆ ಸೂಕ್ತವಾದ ಹಾದಿಯನ್ನು ಕಂಡುಹಿದಿಯುವ ಮನಸ್ಸು ಅವನಿಗೆ ಬಂದಿತು. ತಪಸ್ಸನ್ನು ದೃಢವಾಗಿ ಆಚರಿಸಿದ, ಜ್ಞಾನ ಪಡೆದ. ಅವತಾರ ಪುರುಷನೂ ಆಗಿ ಪ್ರಸಿದ್ಧನಾಗಿದ್ದಾನೆ.

ಬೌದ್ಧಧರ್ಮ ಬುದ್ಧನಿಂದ ಪ್ರಸಾರಗೂಂಡು, ಖ್ಯಾತಿ ಪಡೆಯಿತು. ಜಗತ್ತಿಗೆ ಬೌದ್ಧ ಧರ್ಮದ ದರ್ಶನದ ಪರಿಚಯ ಆಯಿತು. ಬುದ್ಧನಿಗೆ ಶಿಷ್ಯರು ಅಪಾರ. ಅವರಲ್ಲಿ ಆನಂದ, ಉಪಗುಪ್ತ, ಸಮುದ್ರ ಮುಂತದವರು ಆಪ್ತರು. ಅವರ್ ಹಗೆಯೇ ಹತೋಂಬತ್ತನಯ ಶತಮಾನದಲ್ಲಿಯೂ ಬುದ್ಧ ಭಗವಾನನ ಮತ ಹಾಗೂ ದರ್ಮವನ್ನು ಪ್ರಸಾರ ಮಾಡಿದ ಸನ್ಯಾಸಿಗಳಿಗೆ, ಭಿಕ್ಷುಗಳೆಂದು ಕರೆಯುತ್ತಾರೆ. ಉತ್ತಮ, ಸನ್ಯಾಸಿ ಮಾತ್ರ ಅಲ್ಲ, ರಾಷ್ಟ್ರಪ್ರೇಮಿ ಕೂಡ. ಧ್ಯಾನದಲ್ಲಿ ಮಗ್ನರಾಗಿ ಮಠದಲ್ಲಿ ಮೂಗು ಹಿಡಿದು ಕೂಡಲಿಲ್ಲ ಅವರು.

ಮತ-ಧರ್ಮ ಪ್ರಸಾರದ ಜೂತೆಗೆ ತಾಯಿ ಭಾರತಿಯ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಿಕ್ಷು ಉತ್ತಮ ಮಟ್ಟದ ಪಾತ್ರವನ್ನು ವಹಿಸಿದರು. ವಿಶ್ವಸಂಚಾರಿ. ತಾನು ನಂಬಿದ ದರ್ಮದಲ್ಲಿ ಅಚಲ ಶೃದ್ಧೆ ಇರಿಸಿಕೂಂಡಾತ. ವಿಶಾಲ ಮನೋಭಾವ. ಕಾಲಿಡದ ದೇಶವಿಲ್ಲ, ಕಲಿಯದ ಭಾಷೆ ಇಲ್ಲ. ಭಾರತೀಯ ಸಂಸ್ಕೃತಿಯ ಉತ್ತಮ ಪ್ರತಿನಿಧಿ, ಹೆಸರೂ ಉತ್ತಮ ಎಂದು, ಬದುಕೂ ಉತ್ತಮವೆ.

ವಿಧ್ಯಾಭ್ಯಾಸ-ಉದ್ಯೋಗ

ಉತ್ತಮ, ಬರ್ಮಾದೇಶದವರು. ಹುಟ್ಟಿದ್ದು, ಅಕ್ ಯಾಬ್ ಎಂಬಲ್ಲಿ. ಕ್ರೈಸ್ತ ಧರ್ಮದ ಅನುಯಾಯಿ ಆಗಿದ್ದ ಕುಟುಂಬದಲ್ಲಿ ಆತ ಜನಿಸಿದ್ದು. ಎಳೆಯ ವನಸ್ಸಿನಲ್ಲಿಯೇ ತಂದೆಯನ್ನು ಕಳಿದುಕೂಂಡರು. ಇದರಿಂದ ವಿದ್ಯಾಭ್ಯಾಸ ಮೂದಲಾದ ಎಲ್ಲ ಹೊಣೆಯನ್ನು ಅವರ್ ತಾಯಿಯೇ ಹೋತ್ತಳು. ಮಗುವನ್ನು ಓದಲು ಪ್ರಾಥಮಿಕ ಶಾಲೆಗೆ ಸೇರಿಸಿದ್ದೂ ಆಯಿರು. ಚುರುಕು ಬುದ್ಧಿಯವ, ಉತ್ತಮ. ಮೊದಲ ತರಗತಿಗಳಲ್ಲಿ ಓದಿ, ಮಾಧ್ಯಮಿಕ ಶಾಲೆಯಲ್ಲಿ ಅಭ್ಯಾಸ ನಡೆಸಿದ ನಂತರ ಬರ್ಮಾದಲ್ಲೆ ಇದ್ದ “ನಾರ್ಮಲ್ ಸ್ಕೂಲ್” ನಲ್ಲಿ ತರಬೇತಿ ಪಡೆದರು.

ಇಲ್ಲಿಗೆ ವಿದ್ಯಾಭ್ಯಾಸ, ಒಂದು ಘಟ್ಟ ಮುಟ್ಟಿತು. ಮುಂದೆ ಓದು? ಕೈಲಿ ಕಾಸಿಲ್ಲ, ಸರಿ, ಕೆಲಸದ ಹುಡುಕಟ! ಅದು ಸಿಗುವುದು ಅಷ್ಟೇನು ಕಷ್ಟ ಆಗಲಿಲ್ಲ. ಬರ್ಮಾದ ಹೆಣ್ಣು ಮಕ್ಕಳ ಶಾಲೆಯೂಂದರಲ್ಲಿ ಉತ್ತಮ, ಉಪಾಧ್ಯಾಯ ಆದರು. ಹರೆಯದ ವಯಸ್ಸು. ಆರೋಗ್ಯದಿಂದ ಕೂಡಿದ ಶರೀರ-ಮನಸ್ಸು. ವಿಶ್ವಕ್ಕೇ ಸ್ಪರ್ಧಿಸುವ ಉತ್ಸಾಹ,ದೈರ್ಯ! ವೇಳೆಗೆ ಸರಿಯಾಗಿ ಶಾಲೆಗೆ ಹೋಗಬೇಕು, ಪಾಠ ಹೇಳುವುದು, ವಾಪಸ್ಸು ಆಗುವುದು.. ಈ ಸಪ್ಪೆ, ಪರಧಿನ ಬದುಕು ಆ ಧೀರ ಜೀವಕ್ಕೆ ಹೇಗೆ ಒಗ್ಗೀತು? ಕೆಲಸಕ್ಕೆ ರಾಜೀನಾಮೆ ಕೂಟ್ಟರು., ಉತ್ತಮ. ಹರೆಯದ ಮುಂಜವಿನ ಬೆಳಕಿನಲ್ಲಿ ಪ್ರಪಂಚ ನೋಡೋಣ ಸುತ್ತೋಣ, ಅನುಭವವೂ ಬಂದೀತು. ಲೋಕಾನುಭವ ಕೂಡ ವಿದ್ಯೆಯ ಒಂದು ಭಾಗ ತಾನೆ? ವಯಸ್ಸು ಆಗಿ ಹೋದ ಮೇಲೆ ಸುತ್ತಲು ಆದೀತೆ? ಇದು ಅವರ ಅನಿಸಿಕೆ, ಹಂಬಲ.

ಬರಿಗೈ ಪ್ರವಾಸಿ

ಹೇಳದೆ, ಕೇಳದೆ, ಬರ್ಮಾದ ಉತ್ತಮ ಬಂಗಾಲದ ಕಲ್ಕತ್ತೆಗೆ ಬಂದು ಬಿಟ್ಟರು! ಬರಿಗೈ, ತಿಳಿಯದ ಊರು, ಜನ, ಭಾಷೆ, ಬದುಕಿನ ರೀತೆ, ಎಲ್ಲವೂ ಹೊಸದು. ಊರೆಲ್ಲ ಅಲೆದರು. ಹಾಗೂ ಹೀಗೂ ಕೊನೆಗೆ, ಒಂದು ಅಂಗಡಿಯಲ್ಲಿ ಲೆಕ್ಕ ಬರೆಯುವ ಕೆಲಸ ಸಿಕ್ಕಿತು. ಸದ್ಯ, ಹೊಟ್ಟೆಪಡು ಕಳೆಯಿತಲ್ಲ! ಬದುಕಲು ಹಾದಿ ಆಯಿತು ಎಂದುಕೊಂಡರು. ಕಲ್ಕತ್ತೆ ವಿದ್ಯಾಕೇಂದ್ರ ಕೂಡ. ಇದರಿಂದಗಿ ಸ್ವಲ್ಪಕ್ಕೇ ಕೈಬುಟ್ಟ ಓದು ಮುಂದುವರೆಸಲು ಅವಕಾಶ ದೊರೆಯಿತು. ಉತ್ತಮ ಅವರು ಮುಂದಿನ ವಿದ್ಯಾಭ್ಯಾಸಕ್ಕೆ ಡಫ್ ಕಲೇಜಿಗೆ ಸೇರಿದರು. ಅಲ್ಲಿ ಪಾಠ ಪ್ರವಚನ ನಡೆಯುತ್ತಿದ್ದುದು ಬಂಗಾಲಿಯಾಲ್ಲಿ. ಬಂಗಾಲಿ ಭಾಷೆಯಲ್ಲಿ ಚೆನ್ನಾಗಿ ಕಲಿತುಕೊಂಡರು. ಅದರಲ್ಲೇ ಪರೀಕ್ಷೆಗೆ ಕುಳಿತು, ತೇರ್ಗಡೆ ಹೊಂದಿದರು.

ಅಷ್ಟೇ ಉತ್ತಮ ಓದಿದ್ದು. ಅವ್ಅರು ಪದವೀಧರ ಆಗಲಿಲ್ಲ. ಅವರು ಮುಂದಣ ಬದುಕಲ್ಲಿ ಪಂದಿತ್ಯ ಪಡೆದಿದ್ದರೆ, ಅದು ಲೋಕಾನುಭವದಲ್ಲಿ ಮಾತ್ರ. ಕಲ್ಕತ್ತೆಯಲ್ಲಿ ಓದನ್ನು ಕೈಬಿಟ್ಟ ಅವರು, ಪುನಃ ಬರ್ಮಾಕ್ಕೆ ಮರಳಿದರು. ತಾನು ಪರಿಚಯ ಮಾಡಿಕೊಂಡ ಇತಿಹಾಸವನ್ನು ವಿಶದವಾಗಿ ಅಧ್ಯಯನ ಮಾಡಿದರು.

ಬುದ್ಧನ ಬೆಳಕು

ಹಾಗೆ ಅಭ್ಯಾಸ ನಡೆಸುವಾಗ, ಅಲ್ಲಿನ ಬೌದ್ಧಯುಗದ ಕತೆ ಉತ್ತಮರ ಮನಸ್ಸನ್ನು ಸೆಳೆಯಿತು. ಅದು ಒಂದು ಸುವರ್ಣ ಯುಗ! ಹಿಂದೂಸ್ಠಾನದ ಬಾವುಟ ಇತರ ಖಂಡಗಳಲ್ಲಿ ಕೊಡ ತನ್ನ ವಿಜಯ ಮೆರೆಸುತ್ತಿದ್ದ ಕಾಲ! ಅದೆಂತಹ ಸಮಯ! ಭಾರತವೆಲ್ಲ ಒಂದೇ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಮೌರ್ಯರ ರಾಜ್ಯಭಾರ! ಒಂದೇ ನಾಡು, ಒಂದೇ ರಾಜ್ಯ, ಒಂದೇ ಸಂಸ್ಕೃತಿ.

ಬುದ್ಧನ ಜೀವನ ಉತ್ತಮರನ್ನು ಆಕರ್ಷಿಸಿತು. ರಾಜ ಮನೆತನದಲ್ಲಿ ಹುಟ್ಟಿ, ಸ್ರ್ವಸಂಗ ಪರಿತ್ಯಾಗಿ ಆದ ಸಿದ್ಧಾರ್ಥ! ಅವನ ತಪಸ್ಸು, ಬುದ್ಧನಾದ ಮೇಲೆ ಅವನು ನಡೆಸಿದ ಧರ್ಮದ ಪ್ರಸಾರ, ಉತ್ತಮರಿಗೆ ತುಂಬ ಪ್ರಿಯಆಗಿ ಕಂಡಿತು. “ಆಸೆಯೇ ದುಃಖಕ್ಕೆ ಮೂಲ” ಮುಂತಾದ ನೇರ, ಸರಳ ಆದ ಮಾತುಗಳಲ್ಲಿ ಅಡಕ ಆಗಿದ್ದ ವಿಶಾಲ ಅರ್ಥ ಅವರಿಗೆ ಗೋಚರ ಆಯಿತು! ನಿಷ್ಕಾಮ ಕರ್ಮ ಅದೇ ತಾನೆ ಎಲ್ಲರಿಗೂ ಬೇಕಾದದ್ದು? “ಅಹಿಂಸೆಯೆ ಶ್ರೇಷ್ಠವಾದ ಧರ್ಮ. ಸರ್ವರೂ ಸುಖ-ಶಾಂತೆಗಳಿಂದ ನೆಮ್ಮದಿಯಿಂದಿರಲಿ” ಮುಂತಾದ ಸೂತ್ರಗಳು ಅವರ ಮನಸ್ಸಿಗೆ ಮೆಚ್ಚಿಕೆ ಆಯಿತು. ಬೌದ್ಧ ಧರ್ಮ ಅವಲಂಬಿಸಿದ ಅಶೋಕ ಮೌರ್ಯ, ಅವನು ಧರ್ಮ ಪ್ರಸಾರ ಮಾಡಿದ ಬಗೆ ಮುಂತಾದ ಐತಿಹಾಸಿಕ ಘಟನೆಗಳು ಅವರ ಮನಸ್ಸಿನಲ್ಲಿ ಸಂಚರಿಸಿದಂತೆ ಆಯಿತು. ಅಶೋಕ ಅಹಿಂಸೆಯನ್ನು ವ್ರತ ಆಗಿ ಆಚರಿಸಿದ ಮಹಾನುಭಾವ. ಜೊತೆಗೆ ಕ್ಷಮೆ, ದಯೆ, ದಮೆ, ಶಮೆ, ತಪಸ್ಸು, ಗುರು-ಹಿರಿಯರಲ್ಲಿ ಗೌರವ, ಶುಶ್ರೂಷೆ, ಎಲ್ಲರನ್ನೂ ಪ್ರೀತಿಯಿಂದ ನೋಡುವಿಕೆ ಇವುಗಳು ಸರ್ವಧರ್ಮಕ್ಕೂ ಸರಿಹೊಣ್ದುವ ಅಂಶಗಳೇ ಅಲ್ಲವೆ ಎಂದೆನ್ನಿಸಿತು.

ಆಗಿನ ಕಾಲಕ್ಕೆ ಭಾರತದ ಸಂಸ್ಕೃತಿ ಚೀನಾ-ಜಪಾನುಗಳ್ಳಿ ಹರಡಿತ್ತು. ಅಲ್ಲಿನ ಜನಕ್ಕೆ ನಮ್ಮಧರ್ಮ ಹೊಸ ಮಾರ್ಗ ತೋರಿಸುತ್ತು. ಬುದ್ಧ ಗುರುವಿನ ಸಂದೇಶ ಭಾರತಕ್ಕೆ ಒಂದು ಹೊಸ ಚೇತನ ನೀಡಿತ್ತು. ಈಗಲೂ ಆ ವಿಶಾಲ ಭಾರತದ ಕುರುಹು ಅಲ್ಲಲ್ಲಿ ಕಾಣುತ್ತಿದೆ. ಆಗ್ಗೆ ಸಾಹಿತ್ಯ, ಕಲೆ, ರಾಜಕೀಯ, ವ್ಯವಹಾರ, ಎಲ್ಲ್ದರಲ್ಲೂ ಒಂದು ನವೀನತೆ ಕಂಡು ಬಂದಿತ್ತು. ಆ ದಿನಗಳು ಮರಳಿ ಬಾರವೆ? “ಅಜ್ಞಾನದ ಮಬ್ಬು ಮತ್ತೆ ಕವಿಯುತ್ತಿದೆ ಎಂದು ಅನಿಸುತ್ತದೆ. ಬುದ್ಧನ ದಿವ್ಯವಾಣಿ ಮತ್ತೆ ಪ್ರಸಾರ ಮಡುವುದನ್ನೆ, ನಾನೇಕೆ ನನ್ನ ಬಾಳಿನ ಧ್ಯೇಯ ಆಗಿ ಇರಿಸಿಕೊಳ್ಳಬಾರದು? ಇದರಿಂದ ಭಾರತ ಮತ್ತೆ ಬೆಳಗುವುದಲ್ಲವೆ?” ಎಂಬ ಆಲೋಚನೆ ಬಂದಿತು ಉತ್ತಮರಿಗೆ.

ಬಿಕ್ಷು ಉತ್ತಮ

ಮನಸ್ಸಿಗೆ ತೋಚಿದ್ದು ಸರಿ ಎಂದು ಅನ್ನಿಸಿದರೆ ಅದನ್ನು ಮಾಡಿಯೇ ತೀರುವುದು ಉತ್ತಮರ ಸಂಕಲ್ಪ. ಅದರಲ್ಲಿ ದೃಢತೆ ನೆಲಸಿತ್ತು. ಚಂಚಲತೆ ಇಲ್ಲ. ಹಿಂದೂಸ್ಠಾನದ ಚೈತನ್ಯ ಪುನರುಜ್ಜೀವಿಸಲು ಬೌದ್ಧ ಧರ್ಮ ಪ್ರಸಾರ ಸಹ ಒಂದು ಮಾರ್ಗವೆ! ಇದು ಅವರ ಹಂಬಲ. ಹಿಡಿದ ಪಟ್ಟು ಸಾಧಿಸಬೇಕು ತಾನೆ? ಸರಿ, ತನ್ನ ತಾಯ್ನಾಡು ಆದ ಬರ್ಮಾ ದೇಶದಲ್ಲಿಯೇ ಉತ್ತಮ, ಬೌದ್ಧ ಧರ್ಮ ದೀಕ್ಷೆ ಸ್ವೀಕರಿಸಿದರು. ಸಿರಿವಂತರಿಗೇನೂ ಕಡಿಮೆ ಇಲ್ಲ ಆ ದೇಶದಲ್ಲಿ. ಆದರೆ ಅಲ್ಲಿ ನಿಷ್ಕಾಮ ಕರ್ಮ ಆಚರಿಸಲು ಹಂಬಲಿಸಿದ ಕರ್ಮಯೋಗಿ ಉತ್ತಮ “ಕ್ರಿಶ್ಚಿಯನ್ ಪಾದ್ರಿ”  (ರೆವರೆಂಡ) ಆಗಿದ್ದ ಉತ್ತಮ, “ಭಿಕ್ಷು ಉತ್ತಮ” ರಾದರು! “ಬುದ್ಧನಿಗೆ ಶರಣು, ಧರ್ಮಕ್ಕೆ ಶರಣು, ಸಂಘಕ್ಕೆ ಶರಣುಹೋಗುತ್ತೇನೆ” ಎಂದು ಪ್ರತಿಜ್ಞೆ ಮಾಡಿದರು. ತನ್ನ ಸಂಕಲ್ಪ ಸಾಧಿಸಲು ಮನೆ, ಮದುವೆ, ಹೆಂಡತಿ, ಮಕ್ಕಳೂ ಯಾವ ಬಂಧನವೂ ಬೇಡ ಎಂದು ಎಲ್ಲವನ್ನೂ ತೊರೆದರು. ಬೌದ್ಧ ಧರ್ಮದ ಸಹಿತ್ಯ ಬಹುಮಟ್ಟಿಗೆ ಇದ್ದುದು ಪಾಲಿ ಭಾಷೆಯಲ್ಲಿಯೆ. ಉತ್ತಮ ಅವರು ಛಲಗಾರರು. ನಾಲ್ಕು ವರ್ಷ ಸತತವಾಗಿ ಪಾಲಿಯನ್ನು ಅಧ್ಯಯನ ಮಾಡಿದರು. ಜೊತೆಗೆ ದರ್ಶನವನ್ನೂ ಅಭ್ಯಾಸ ಮಾಡಿದರು. ಅದರಲ್ಲೊ “ಇದಮಿತ್ಥಂ” ಎಂದು ಖಚಿತವಾಗಿ ತಿಳಿಸಿಕೊಡುವ ಮಟ್ಟಿಗೆ ಪಾಂಡಿತ್ಯ ಕೂಡ ಪಡೆದರು. ಇದೆಲ್ಲ ಆದನಂತರ ಮತ್ತೆ ಭಾರತಕ್ಕೆ ವಾಪಸಾದರು.

"ಭೌದ್ಧ ಭಿಕ್ಷು ಆದರೂ!"

ಭಿಕ್ಷು ಉತ್ತಮ, ಭಾರತ ಪೂರ್ತಿ ಸಂಚರಿಸಿದರು. ಹೋದಕಡೆಯೆಲ್ಲ ಬುದ್ಧನ ದಿವ್ಯ ಸಂದೇಶ ಪ್ರಸಾರ, ಧರ್ಮ ಪ್ರವಚನ. ಇದೂಂದೆ ಅಲ್ಲ! ಜೊತೆಗೆ ಅಖಂಡ ಭಾರತ ನಿರ್ಮಾಣದ ಹಂಬಲ, ಕಳಕಳೀ, ತುಂಬು ದೇಶಾಭಿಮಾನ ಅವರ ಮಾತುಗಳಲ್ಲಿ ಸ್ಪಷ್ಟ ಆಗಿ ಗೋಚರಿಸುತ್ತಿತ್ತು. ಅದೂ ಮಿಂಚು ಫಳಾರನೆ ಹೊಳೆದ ಹಾಗೆ! ನಿಧಾನವೇ ಇಲ್ಲ. ಆದರೆ ಸ್ಪಷ್ಟ! ಜನರಿಗೆ ಒಂದು ಹೊಸದಾದ, ಪ್ರೀತಿಯ ಮಾತು ಕೇಳಿದ ಭಾವನೆ ಮೊಡುತಿತ್ತು.

ಇಷ್ಟಾದರೂ, ಇದು ಬೌದ್ಧ ಸನ್ಯಾಸಿಯ ಮಾತು, “ಹಿಂದೂ ಧರ್ಮಕ್ಕೆ, ಭಿಕ್ಷುವಿನ ಮಾತು ಸರಿ ಹೊಂದುವುದಿಲ್ಲ ಎನಿಸಿತು. “ಸಂಸ್ಕೃತ ಭಾಷೆ, ದೇವಭಾಷೆ, ವೇದ ಭಾಷೆ ಕೂಡ. ಅದೇ ಹಿಂದೂ ಧರ್ಮದ ತಿರುಳು, ಅದು ಬಳಕೆ ಆಗದ ಭಾಷೆ ಎಂಥದು?” ಎಂದು, ಪಂದಿತರೆಲ್ಲ ಭಿಕ್ಷುವಿನ ವಿರುದ್ಧ ರೊಚ್ಚಿಗೆದ್ದರು.

ಈ ಗೊಡ್ಡು ಬೆದರಿಕೆಗೆ ಉತ್ತಮ ಜಗ್ಗಲ್ಲಿಲ್ಲ. ಸಂಸ್ಕೃತ ಅವರಿಗೆ ಬರದೆ ಇದ್ದುದೂ ನಿಜವೆ. ಆದರೆ ಪ್ಂದಿತರಿಗೇಕೆ ಹೆದರಬೇಕು? ಮರುದಿನವೇ ಆಗ ಸಂಸ್ಕೃತದ ವಿದ್ಯಪೀಠ ಆಗಿದ್ದ ಕಾಶಿಗೆ ಪ್ರಾಯಾಣ ಮಾಡಿದರು. ಅಲ್ಲಿ ಕ್ವೀನ್ಸ್ ಕಲೇಜಿಗೆ ಸೇರಿದರು. ಮೂರು ವರ್ಷ ಕಾಲ ಸಂಸ್ಕೃತ, ಹಿಂದೀ ಭಾಷೆಗಳನ್ನು ಅಭ್ಯಾಸ ಮಾಡಿದರು.

ಇಲ್ಲಿಗೆ ಮುಗಿಯಿತೆ? ಹಿಂದೂ ಸಂಸ್ಕೃತಿಯ ಸಂಪೂರ್ಣ ಪರಿಚಯ ಮಾಡಿಕೊಳ್ಳುವ ಬಯಕೆ ಉತ್ತಮರದು. ಅಂತೆಯೇ ಇಡೀ ಭಾರತ ಸಂಚಾರ ಮಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಪಂಜಾಬಿನಿಂದ ಬಂಗಾಲದವರೆಗೆ. ಒಂದು ವರ್ಷ ಪೂರ ಓಡಾಟ.

ಭಾರತ ಪ್ರವಾಸದ ತುಚಿ, ಭಿಕ್ಷುವನ್ನು ಅಷ್ಟಕ್ಕೇ ಬಿಡಗೊಡಲಿಲ್ಲ. ಪರದೇಶಗಳಿಗೆ ಕರೆದೊಯ್ದಿತು. ಆಕ್ಸ್‌ಫರ್ಡ, ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಿಗು ಹೋದರು. ಸ್ವಲ್ಪ ಕಾಲ ಅಲ್ಲಿ ಇದ್ದು ಅನಂತರ ಲಂಡನ್ನಿಗೆ ಬಂದು, ಅಲ್ಲಿ ಬ್ಯಾರಿಸ್ಟರ ಆಗಲು ಬಯಸಿದರು. ಯಾರೋ ಪರಿಚಯದವರ ಪತ್ರದ ಮುಲಕ ಉತ್ತಮರ ತಾಯಿಗೆ ಮಗನ ಉದ್ದೇಶ ತಿಳಿಯಿತು. ತಕ್ಷಣವೇ ಆಕೆ ಬರೆದದ್ದು ಹೀಗೆ: “ನೀನು ಎಲ್ಲ ತ್ಯಾಗ ಮಾಡಿದ ಸಂನ್ಯಾಸಿ. ವಕೀಲಿ ಕೆಲಸ್ ಸುಳ್ಳು, ಮೋಸ, ಹಠ, ದ್ವೇಷ ತರಬಹುದು. ಅದು ನಿನಗೆ ಸಲ್ಲದು, ಅಲ್ಲವೆ?” ತಾಯಿಯ ಮಾತು, ಭಿಕ್ಷುವನ್ನು ಎಚ್ಚರಿಸಿತು. ಇಂಗ್ಲೆಂಡಿನಿಂದ ಆತ ಭಾರತಕ್ಕೇ ಮರಳಿದರು.

ಹೋರಾಟದಲ್ಲಿ

ಆಗ ೧೯೦೫ ರ ಸಮಯ “ಬಂಗಾಳ ಭಂಗ” ಚಳವಳಿ ಉಗ್ರವಾಗಿ ನಡೆಯುತ್ತಿತ್ತು. ಬಂಗಾಳವನ್ನು ಎರಡು ಭಾಗವಾಗಿ ವಿಭಜಿಸಲು ಬ್ರಿಟಿಷರು ಹೂಡಿದ ಸಂಚಿನ ವಿರುದ್ಧ ನಡೆಯುತ್ತಿದ್ದ ಚಳವಳಿ ಅದು. ಲಾಲಾಲಜಪತ್ ರಾಯ್, ಲೋಕಮಾನ್ಯ ತಿಲಕ, “ಅಮೃತಬಜಾರ” ಪತ್ರಿಕಾದ ಸಂಪಾದಕ ಮೋತೀಲಾಲ ಘೋಷ್ ಮೊದಲಾದ ಮಹನೀಯರೆಲ್ಲ ಕೊಡಿಕೊಂಡು ಭಾರತ ಸ್ವಾತಂತ್ರ್ಯ ಚಳವಳಿ ನಡೆಯಿಸುತ್ತಿದ್ದ ಪರ್ವ ಕಾಲ ಅದು! ಇನ್ನೊಂದೆಡೆ, ಖುದೀರಾಮಬೋಸ, ಚಂದ್ರಶೇಖರ ಆಜಾದ್ ಮೊದಲಾದ ತರುಣ ಕ್ರಾಂತಿಕಾರಿಗಳ ಕ್ರಾಂತಿ ಹೋರಾಟ! ಬಂಕಿಮಚಂದ್ರರ “ವಂದೇ ಮಾತರಂ”  ಭಾರತೀಯರ ಮನಸ್ಸಿನಲ್ಲಿ ಅಚ್ಚೊತ್ತಿ, ಸ್ವಾತಂತ್ರ್ಯದ ದಾಹವನ್ನು ಉಂಟು ಮಾಡಿದ್ದ ಕಾಲ್ ಅದು! ಅದನ್ನು ಸಹಿಸದ ಬ್ರಿಟಿಷ್ ಸರಕಾರ “ವಂದೇ ಮಾತರಂ” ಅನ್ನು ಬಹಿಷ್ಕರಿಸಿ, ಭೂಗತ ಮಾಡಲು ಪ್ರಯತ್ನಿಸುತ್ತ, ಭಾರತವನ್ನೇ ಛಿದ್ರ ಛಿದ್ರ ಮಾಡಿ ಆಳುತ್ತಿದ್ದ ಸಮಯ ಅದು!

ಆಗ್ಗೆ ಒಂದು ನರಪಿಳ್ಳೆಯೂ ಶಾಲೆಗೆ ಹೋಗುತ್ತಿರಲ್ಲಿಲ್ಲ. ವಿದ್ಯಾರ್ಥಿಗಳೆಲ್ಲ ಶಾಲೆ-ಕಾಲೇಜುಗಳಿಗೆ “ಬಹಿಷ್ಕಾರ” ಹಾಕಿದ್ದರು. ಈ ಹುಡುಗರೆಗೆಲ್ಲ ಒಂದು ವಿದ್ಯಾಪೀಠ ತೆರೆಯುವ ಏರ್ಪಾಡು ಮಾಡಿದರು, ಉತ್ತಮ. ಅದೊಂದು ರಾಷ್ಟ್ರದ ಮೇಲಣ ಪ್ರೇಮ, ಅಭಿಮಾನ ಇವುಗಳನ್ನು ಗುರುತಿಸುವ ವಿದ್ಯಾಲಯ. ಭಾರತೀಯ ಸಂಸ್ಕೃತಿ ಬೋಧಿಸುವ ಸಂಸ್ಕೃತಿ ಕೇಂದ್ರ. ಅರವಿಂದ ಘೋಷರೇ ಅದರ ಪ್ರಿನ್ಸಿಪಾಲರು. ಭಾರತಕ್ಕೆ ಬಂದಿದ್ದ ಭಿಕ್ಷು, ಆ ವಿದ್ಯಾಪೀಠದಲ್ಲಿ ಪಾಲಿ ಪ್ರೋಫೆಸರ್ ಆದರು.

ಬರ್ಮಾಕ್ಕೆ ಹೋರಾಟವನ್ನು ಕೊಂಡೊಯ್ದರು

ಒಂದು ವರ್ಷ ಕಳೆಯಿತಷ್ಟೆ, ಭಿಕ್ಷು ಮತ್ತೆ ಹುಟ್ಟುರಿಗೆ ತೆರಳಿದರು. ಆಗ್ಗೆ ಆಗಲೇ ಧೀರ ಸ್ವಭಾವ ಪುಟಗೊಟ್ಟಿತು ಅವರಲ್ಲಿ! ಬಂಗಾಲದಲ್ಲಿ ಕಂಡು, ಪರಚಯ ಆಗಿ, ಬೆಳೆದ ರಾಷ್ಟ್ರಾಭಿಮಾನ, ಉತ್ತಮರಿಗೆ ತಾಯಿ ನಾಡಿನ ಅಭಿಮಾನಕ್ಕೆ ಇಂಬುಗೊಟ್ಟಿತು.ಅಂತಹ ಬಿಸಿ ತಕ್ತದ ಹವೆ ಬರ್ಮಾ ದೇಶದಲ್ಲಿ ಇರಲಿಲ್ಲ! ತನ್ನ ಹುಟ್ಟೂರಿನ ಮೇಲೆ ಪ್ರೀತಿ, ನಿಷ್ಠೆ ಇರದ, ರಾಷ್ಟ್ರೀಯತೆ ಇರದ ಸಪ್ಪೆ ಬದುಕನ್ನು ಕಂಡ ಭಿಕ್ಷು ಮರುಗಿದರು. ಕೆರಳಿದರು ಕೂಡ. “ಎದ್ದೇಳಿ, ಸ್ವಾತಂತ್ರ್ಯಕ್ಕಗೆ ಹೋರಾಡಿ” ಎಂದು ಗಿಡುಗಿದರು. ಸ್ವದೇಶೀ ಚಳವಳಿ, ಸಮಾಜ ಸುಧಾರಣೆಗಳ ಕಾರ್ಯಕ್ರಮಗಳು, ರಾಷ್ಟ್ರ ನಿಷ್ಠೆ ಇವುಗಳನ್ನು ತನ್ನ ಉಪನ್ಯಾಸಗಳಲ್ಲಿ ಮೊಳಗಿಸಿದರು ಭಿಕ್ಷು. ಇಡೀ ಬರ್ಮಾ ಪ್ರವಾಸ ಮಾಡಿದರು. ದೇಶವೇ ಹೊಸ ಹುರುಪನ್ನು ಪಡೆಯಿತು. ಸಂನ್ಯಾಸಿಯ ಚೂಪು ಮಾತಿನಲ್ಲಿನ ಶಕ್ತಿ ನಚೈತನ್ಯವನ್ನು ನಾಡಿಗೆ ನೀಡಿತು.

ಸನ್ಯಾಸಿಯ ಈ ಚಟುವಟಿಕೆ, ಪೋಲಿಸರಿಗೂ ಕಣ್ಣು ಕೆಂಪು ಆಗುವಂತೆ ಮಾಡಿತು. “ಬಂಗಾಳದಲ್ಲಿ ಸುರೇಂದ್ರನಥ ಬ್ಯಾನರ್ಜಿ, ಅರವಿಂದ್ ಘೋಷ್ ಮೊದಲಾದ “ದೇಶದ್ರೋಹಿ ಕ್ರಾಂತಿಕಾರಿ” ಗಳ ಗುಂಪಿನ ಜೂತೆ ಇದ್ದರು ಎಂಬ ರಹಸ್ಯ ವರದಿಯೂ ಪೋಲಿಸರಿಗೆ ಬಂದಿತ್ತು! ಆಗ್ಗೆ ಸುರೇಂದ್ರನಾಥ್ ಬ್ಯಾನರ್ಜಿಯ ಹೆಸರು ಸಾಕಷ್ಟು ಪ್ರಸಿದ್ಧ್. ಅರವಿಂದರಂತೂ ಸ್ವಾತಂತ್ರ್ಯ ಯೋಧರೆ!

ಇದಲ್ಲದೆ, ಬಂಗಲದಲೋ, ಸಂನ್ಯಾಸಿಗಳು ಎಂದರೆ, ಬ್ರಿಟಿಷ ಸರ್ಕಾರಕ್ಕೆ ಗಬರಿ! ಒಮ್ಮೆ ಅವರ ಒಂದು ಗುಂಪೇ ದಂಗೆಯೆದ್ದು ಸರ್ಕಾರವೇ ತತ್ತರಿಸುವ ಹಾಗೆ ಮಾಡಿತ್ತು! ಭಿಕ್ಷು, ಇಲ್ಲಿಯೂ ಬಂದು ಚಳವಳಿ ಹೂಡಲು ಸಂಚು ಮಾಡಿದನಲ್ಲಾ ಎನ್ನಿಸಿತು ಪೋಲಿಸರಿಗೆ. ಪೊಲೀಸರ ಕಣ್ಣು ಭಿಕ್ಷುವಿನ ಮೇಲೆ ಬಿದ್ದಿರುವ ಸಮಾಚಾರ ಜನಕ್ಕೂ ಗೊತ್ತಾಯಿತು. ಅವರು ಉತ್ತಮರೊಂದಿಗೆ ಕಲೆತು ಮಾತನಾಡಲೂ ಹೆದರಿದರು. ಸ್ನೇಹಿತರು, ನೆಂತರು, ಎಲ್ಲರೂ ದೂರ ಆದರು. ಈ ಸನ್ನಿವೇಸವೇನೂ ಭಿಕ್ಷುವನ್ನು ಎದೆಗುಂದಿಸಲಿಲ್ಲ. ನಿರ್ಭೀತರಗಿ ಅವ್ಅರು ತಮ್ಮ ಕಾರ್ಯ ಚಟುವಟಿಕೆಗಳನ್ನು, ಮುಂದುವರೆಸಿದರು. ಒಂದು ವರ್ಷ ಪರ್ಯಂತ ಪ್ರಚಾರ, ಪ್ರವಚನಗಳನ್ನು ನಡೆಸಿದರು.

ಜಗತ್ತಿನ ದರ್ಶನ

ಈ ವೇಳೆಗೆ ಜಪಾನಿಗೆ ಹೋಗುವ ಇಚ್ಛೆ ಉಂಟಾಗಿತ್ತು ಉತ್ತಮರಿಗೆ. ಜಪಾನು, ಚೀನ, ಸಯಾಂ, ಕಾಂಬೋಡಿಯ ಇವುಗಳೆಲ್ಲ ಬೌದ್ಧ ಧರ್ಮ ಅನುಸರಿಸುತ್ತಿದ್ದ ದೇಶಗಳು. ಜಪನಿನಲ್ಲಿ ಬೌದ್ಧ ಧರ್ಮದ ಈಗಿನ ಸ್ವರೂಪ ತಿಳಿಯುವ ಬಯಕೆ ಭಿಕ್ಷುವಿಗೆ. ಅಂತಹ ಅವಕಾಶವೂ ಒದಗಿ ಬಂತು. ಜಪಾನಿಗೆ ವಿಶ್ವವಿದ್ಯಾನಿಲಯದಲ್ಲಿ ಪಾಲಿ ಪ್ರೂಫೆಸರ್ ಆಗ ನೇಮಿತರದರು. ಅದೂ, ಕೇವಲ ಮೂರು ವರ್ಷದ ಕರಾರಿನ ಮೇರೆಗೆ ಮಾತ್ರ! ಅಷ್ಟೇ ಅಲ್ಲ, ತಮ್ಮ ಭಾವನೆಗಳನ್ನೂ ಬೌದ್ಧ ದರ್ಶನವನ್ನೂ ಮನಮುಟ್ಟುವ ಹಾಗೆ ಹೇಳಲು ಅನುಕೂಲ ಆಗುವಂತೆ ಜಪನೀ ಭಾಷೆಅಯನ್ನು ಚೆನ್ನಾಗಿ ಕಲಿತರು! ಹಾಗೂ, ಅದರಲ್ಲಿಯೇ ಬೌದ್ದದರ್ಶನದ ಪ್ರವಚನ ಕೂಡ ನಡೆಸಿದರು! ಆಗಿನ ಕಾಲಕ್ಕೆ, ಚೀನಾದೇಶದ ಸರ್ವತೋಮುಖ ಏಳಿಗೆಗೆ ಕಾರಣ ಪುರುಷನಾದ ಸನ್-ಯಾಟ್-ಸೇನ್ ಒಬ್ಬ. ಅವನ ಪರಿಚಯ ನಿಕಟವಾಗಿ ಆಯಿತು. ಗೆಳೆತನ, ಗಢವಾಗಿಯೇ ಬೆಳೆಯಿತು.

ಎದ್ದೇಳಿ ಸ್ವಾತಂತ್ರ್ಯಕ್ಕಗಿ ಹೋರಾಡಿ

ಮುರು ವರ್ಷದ ಕರಾರು ಮುಗಿಯಿತು. ಕೂಡಲೆ, ಕೈಯಲ್ಲಿ ಇದ್ದ ಸಂಬಳದಲ್ಲಿ ಕೂಡಿಟ್ಟ ಹಣದ ನೆರವಿನಿಂದ ಭಿಕ್ಷು ಪುನಃ ಪರ್ಯಟನೆಗೆ ಆರಂಬಿಸಿದರು! ಚೀನ, ಕೊರಿಯ, ಮಂಗೋಲಿಯ, ಮಂಚೂರಿಯ, ಸೈಬೀರಿಯ ಹೀಗೆ ಸುತ್ತಿದ್ದೇ ಸುತ್ತಿದ್ದು. ಕಂಡ ಊರುಗಳಲ್ಲೆಲ್ಲ ಮೊದಲು ಬೌದ್ಧಮರ ಹಾಗೂ ಧರ್ಮ ಸಂದೇಶ ಪ್ರಸಾರ, ರಾಷ್ಟ್ರಪ್ರೇಮ ಕುರಿತ ಉಪನ್ಯಾಸ. ಅಲ್ಲಿಂದ, ಯುರೋಪು, ಅಮೇರಿಕ, ಕೆನಡ, ಆಸ್ಟ್ರೇಲಿಯ, ಆಪ್ರೀಕಾ ಪ್ರವಾಸ. ಇಟ್ಟಾರೆ, ವಿಶ್ವ ಪರ್ಯಟನೆ ಮಾಡಿದ ಉತ್ತಮ, ಬರ್ಮಾಕ್ಕೆ ವಾಪಸ್ಸು ಆದದ್ದು.

ಕಲಿತದ್ದು ಕಾರ್ಯರೂಪಕ್ಕೆ

ವಿದೇಶ ಪ್ರವಾಸದಿಂದ ಭಿಕ್ಷುವೆಗೆ ಅನೇಕ ರೀತಿಯ ಅನುಭವ ಆಯಿತು. ಆ ಹೊತ್ತಿಗೆ ಪಾಶ್ಚಾತ್ಯ ದೇಶಗಳಲ್ಲಿನ ಉದ್ಯೋಗ, ತಾಂತ್ರಿಕ ಕುಶಲತೆ, ಪ್ರಗತಿ ಕಂಡ ಅವರಿಗೆ ಅದನ್ನು ಹಿಂದೂಸ್ಠಾನದ ಜನತೆ ಅಳವದಿಸಿಕೊಳ್ಳಲು ಏಕೆ ಶ್ರಮಿಸಬಾರದು  ಅನ್ನಿಸಿತು. ತಾಂತ್ರಿಕ ಅಭಿವೃದ್ಧಿ, ಉದ್ಯೋಗ ಕುಶಲತೆ, ಬೆಳೆಯುವ ದೇಶಕ್ಕೆ ಅತಿ ಅವಶ್ಯ. ಇದರಿಂದ ಸ್ವಾವಲ್ಂಬನೆ ಸಾಧಿಸಲೂ ಸಾಧ್ಯ. ಪರದೇಸಗಳಿಗೆ ಹೋಗಿ, ಕಲಿತು, ಅಲ್ಲೇ ಏಕೆ ಬೇರೂರುವುದು? ಆ ಪಾರತಂತ್ರುಅ ಭಿಕ್ಶುವಗೆ ಸರಿ ಎನಿಸಲಿಲ್ಲ. ಅದರ ಬದಲು, ಅಲ್ಲಿನ ಕರ್ಮ ಕೌಶಲ್ಯ ಕಲಿತು, ತರಬೇತಿ ಪಡೆದು, ಅದನ್ನು ತನ್ನ ದೇಶದ ಇತರ ಸೋದರ ಬಾಂಧವರಿಗೆ ಹೇಳಿಕೂಡಲಿ. ಅಲ್ಲಿಗೆ ಉದ್ದೇಶವೂ ಈಡೇರಿದಂತೆ. ರಾಷ್ಟ್ರಸೇವೆ ಕೂಡ ಮಾಡಿದ ಹಾಗೆ, ಅಲ್ಲವೆ?

ಹೀಗೆಂದುಕೂಂಡ ಉತ್ತಮ, ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದರು. ಬರ್ಮ್ರಾದಿಂದ ಹನ್ನೆರಡು ಜನ ವಿದ್ಯಾರ್ಥಿಗಳ ಒಂದು ತಂಡವನ್ನು ತಮ್ಮ ಸಂಗಡ ಕರೆದುಕೂಂಡು ವಿದೇಶಗಳಿಗೆ ಹೋದರು. ಆ ಗುಂಪಿನಲ್ಲಿ ಅವರ ತಂಗಿಯೂ ಇದ್ದಳು.

“ರಾಷ್ಟ್ರ ನಿರ್ಮಾಣದಲ್ಲಿ ಆಕೆಯ ಅಗತ್ಯವೂ ಇದೆ. ಹೆಣ್ಣು ನಮ್ಮ ಭಾರತ ಸಂಸ್ಕೃತಿಯ ಕಣ್ಣು. ಹಾಗೆಯೇ ಅವಳಿಗೂ ಇದೊಂದು ಪವಿತ್ರ ಕರ್ತವ್ಯ” ಎನ್ನುತ್ತಿದ್ದರು ಭಿಕ್ಷು. ಅವರ ಮನಸ್ಸು ಹೀಗೆ. ಎಲ್ಲರೂ ಬೇಕು ಅವರ ಏನಾದರೊಂದು ರೀತಿಯ ಸೇವೆ ನಾಡಿಗೆ ಸಲ್ಲುವಂತಾಗಬೇಕು. ಇದು ಅವರ ಹಂಬಲ. ಹನ್ನೆರಡು ವಿದ್ಯಾರ್ಥಿಗಳ ಪೈಕಿ, ಆರು ಜನ ಜಪಾನಿನಲ್ಲಿ, ಉಳಿದವರು ಅಮೇರಿಕದಲ್ಲಿ. ಹೀಗೆ ಅವರನ್ನು ತರಬೇತಿಗೆ ನಿಯಮಿಸಿ, ತವು ಜಪಾನಿಗೆ ಬಂದು, ಅಲ್ಲಿಂಡ ಪುನಃ ಆಸ್ಟ್ರೇಲಿಯ, ವೆಸ್ಟ್ ಇಂಡೀಸ್ ದ್ವೀಪಗಳೂ, ಜಾವಾ-ಸುಮಾತ್ರಾ, ಇಂಡೋಚೀನಾ, ಕಾಂಬೋಡಿಯಾ, ಸಯಾಂ ಮುಂತಾದ ದೇಶಗಳಿಲ್ಲಿ ಪ್ರವಾಸ ಮಾಡಿ, ಭಾರತಕ್ಕ ಹಿಂತಿರುಗಿದರು.

ಚೆನ್ನು ಆಯಿತು”

ಉತ್ತಮರ ಮನಸ್ಸು, ವ್ಯಕ್ತಿತ್ವದ ಮಟ್ಟ ಅರಿತುಕೊಳ್ಳಲು ಒಂದು ಘಟನೆ ಉಲ್ಲೇಖಾರ್ಹ ಆದದ್ದು. ಅವರು ಇಳಿದುಕೊಂಡ ಜಪಾನೀ ಮಂದಿರದಲ್ಲಿ ಕಳ್ಳತನ ಆಯಿತು. ಯಾವುದೋ ಕೆಲಸಕ್ಕ ಎಂದು ೨೫೦ ರೂಪಾಯಿ ಕೂಡಿಸಿಟ್ಟಿದರು, ಭಿಕ್ಷು, ಟೈಪರೈಟರು, ಕಾಗದ-ಪತ್ರಗಳು ಇದ್ದ ಪೆಟ್ಟಿಗೆ, ಬಟ್ಟೆ, ಪಾತ್ರೆಗಳು,ಎಲ್ಲವನ್ನು ಕಳ್ಳರು ಕದ್ದೊಯ್ದರು. ಉಳಿದದ್ದು, ಮೈಮೇಲಿನ ಬಟ್ಟೇ ಒಂದೇ! ಭಿಕ್ಷು, ಮರುದಿನವೇ ಬರ್ಮಾ ಪತ್ರಿಕೆಗಳಲ್ಲಿ ಪ್ರಕಟ ಮಾಡಿದ್ದು ಹೀಗೆ ” ಕದ್ದವರೇನೊ ಉಪಕಾರವೇ ಮಾಡಿದ್ದಾರೆ. ಎಲ್ಲ ಸಾಮಗ್ರಿಯೂ ಆತನಿಗೆ ಉಪಯೋಗ ಆಗುವಂತದೆ. ಆದರೆ, ಪೆಟ್ಟಿಗೆಯಲ್ಲಿ ಇರುವ ಕಾಗದ ಪತ್ರ ಮಾತ್ರ ಅವನಿಗೆ ಅಗತ್ಯ ಇಲ್ಲದವು. ಅದನ್ನು ಆತ ಹಿಂದಿರುಗಿಸಿದರೆ, ಸಾಕು. ನಾನು ಕೃತಜ್ಞನಾಗಿರುತ್ತೇನೆ. ಪೋಲಿಸಿನವರಿಗೂ ದೂರು ಕೊಡುವುದಿಲ್ಲ. ಆ ಮಹಾನುಭಾವ ಈ ವಿಳಾಸಕ್ಕೆ ಬಂದು ನನ್ನನ್ನು ಕಂಡರೆ ಸಾಕಷ್ಟೆ” ಯಾರೋ ಕೇಳಿದರು, “ಭಿಕ್ಷು, ಇದೇನು ಹೀಗೆ ಪ್ರಕಟ ಮಾಡಿದಿರಿ?” ಎಂದು. ಅದಕ್ಕೆ ಉತ್ತಮ ಉತ್ತರಿಸಿದರು: “ಎಲ್ಲವೂ ಒಳ್ಳೆಯದೆ ಆಯಿತು. ಎಲ್ಲ ಬಿಟ್ಟ ಸನ್ಯಾಸಿಗೆ ಏಕೆ ದುಡ್ಡು, ವೈಭವ, ಮೆರೆದಾಟ? ಚೆನ್ನು ಆಯಿತು ಬಿಡಿ”.

ಜಪಾನಿನಿಂದ ಉತ್ತಮ, ಮರಳಿ ಬರುವ ವೇಳೆಗೆ ಒಂದನೆಯ ಮಹಾಯುದ್ಧ ಆರಂಭ್ ಆಗಿತ್ತು. ಬರುವ ಮಾರ್ಗದಲ್ಲಿ ರಹದಾರಿಯ ಅದಿಕಾರಿ ಭಿಕ್ಷುವಿಗೆ ಹೇಳಿದ: ಆಸ್ಟ್ರೇಲಿಯಕ್ಕೆ ಏಕೆ ಹೋಗುತ್ತಿ? ಜರ್ಮನಿಯ ನಾಜಿಯನು ಎಲ್ಲಾದರು ಮುಳುಗಿಸಿ ಬಿಟ್ಟಾನು, ಗ್ರಹಚಾರ! ಉತ್ತಮರಿ ಮೃದುವಾಗಿ ನಕ್ಕು, “ಸನ್ಯಸಿಗೆ ಸಾವಿನ ಹೆದರಿಕೆಯೆ? ಅಂಗುಲಿಮಾಲ ಎಂಬ ದರೋಡೆಕೋರ, ಬುದ್ಧ ಗುರುವಿನ ದಿವ್ಯ ತೇಜಸ್ಸಿಗೆ ಬಾಗಲಿಲ್ಲಲ್ಲೇನು? ಇಷ್ಟಕ್ಕೂ ಒಂದೇ ಸಲ ತಾನೆ ಸಾಯುವುದು? ಇದರ ಮೇಲೆ, ಸಾಯುವವನು ನಾನು, ನಿನಗೇಕೆ ಅದರ ಹೆದರಿಕೆ?” ಎಂದು ಕಡ್ದಿ ಮುರಿದ ಹಾಗೆ ಉತ್ತರಿಸಿದರು. ಅಧಿಕಾರಿ, ಖಾವಿಯ ಬಟ್ಟೆ ತೊಟ್ಟ ಭಿಕ್ಷುವಿನ ದೈರ್ಯ ಕಂಡು, ನಾಚಿ ನೀರಾದ.

ಇಡೀ ಪ್ರಂಪಚದ ಪ್ರವಾಸ ಮಾಡಿದರುಉ ಉತ್ತಮ. ಆದರೆ ಆ ಯಾತ್ರೆ ವಿಲಾಸಕ್ಕಾಗಿ ಅಲ್ಲ. ಎಲ್ಲಿ ಹೋದರೂ ಆ ದೇಶದಲ್ಲಿ ಭಾರತದ ಸಂಸ್ಕೃತಿ, ವೇದಾಂತ, ಅದರ ವೈಶಿಷ್ಟ್ಯ. ರಾಷ್ಟ್ರಪ್ರೇಮ, ಬೌದ್ಧಮತದ ಬಗ್ಗೆ ಇರುವ ನಿಷ್ಠೆ ಇವುಗಳೆಲ್ಲ ಭಿಕ್ಷುವಿನ ಮಾತುಗಳಲ್ಲಿ ಪ್ರತಿಧ್ವನಿಸುತ್ತಿದ್ದವು! ಜನರೂ ಆದರದಿಂದ ಕೇಳುತ್ತಿದ್ದರು, ಮೆಚ್ಚುತ್ತಿದ್ದರು.

ರಾಷ್ಟ್ರೀಯ ಕಾಂಗ್ರೆಸ್-ಸೆರೆಮನೆ

ಆದರೇನಂತೆ? ಉಪನ್ಯಾಸ ಮುಗಿದ ನಂತರ, ಅವರು ಆಡುತ್ತಿದ್ದ ಮಾತು ಮನಸ್ಸು ಚುಚ್ಚುವ ರೀತಿಯವೆ, ” ಎಲ್ಲ ಸರಿಯೆ. ನೀವು ಹೇಳಿದ್ದೆಲ್ಲ ಚೆನ್ನಾಗಿಯೆ ಇದೆ. ಆದರೆ, ಇದಕ್ಕೆ ನಾವು ಏಕೆ ಮಾನ್ಯತೆ ಕೊಡಬೇಕು ಹೇಳಿ? ಇದು ಕೇವಲ ಗುಲಾಮರ ಧರ್ಮ. ಸ್ವತಂತ್ರ ದೇಶದ್ದಲ್ಲ ಈ ಧರ್ಮ. ಅಲ್ಲವೆ? ” ಎಂದುಬಿಡುತ್ತಿದ್ದರು.

ಈ ಮಾತುಗಳಲ್ಲಿ ಅಡಗಿದ್ದ ಕಹಿ, ಭಿಕ್ಷುವಿಗೆ ಮನವರಿಕೆ ಆಗದೆ ಇರಲಿಲ್ಲ. “ಸ್ವಾತಂತ್ರ್ಯ ಇರದ ದೇಶ ಅಲ್ಲಿನ ಧರ್ಮ, ಜನತೆಯ ಸಂಸ್ಕೃತಿ, ಎಷ್ಟೇ ಉತ್ತಮ ಮಟ್ಟದಲ್ಲಿ ಇದ್ದರೂ, ಅದಕ್ಕಿ ಬೆಲೆಯೇ ಇಲ್ಲ, ಪಂಜರದೊಳಗೆ ಹಕ್ಕಿ ಇದ್ದ ಹಾಗೆ ನಮ್ಮ ಭಾರತ” ಎಂಡು ಅನ್ನಿಸಿತು. “ನಾವು ಸ್ವತಂತ್ರ ಆಗುವ ತನಕ ಧರ್ಮ ಪ್ರಚಾರ ಎಷ್ಟೇ ನಡೆಸಿದರೂ ಯಾವ ಪ್ರಯೋಜನವೂ ಇಲ್ಲ: ಎಂಭ ನಿರ್ಧಾರಕ್ಕೂ ಭಿಕ್ಷು ಬಂದರು. ಬೌದ್ಧ ಸನ್ಯಾಸಿ, ಈ ವಿಚಾರವನ್ನು ಪುನಃ ಮನಸ್ಸಿನಲ್ಲೇ ಮೆಲುಕು ಹಾಕುತ್ತ, ಮಠ- ಮಂದಿರ, ಪ್ರವಚನ-ಪ್ರಸಾರ ಈಗ ಬೇಡ ಎಂದೂ ಆಲೋಚಿಸಿದರು. ಅಷ್ಟೇ! ಸನ್ಯಾಸಿ ಉತ್ತಮ, ಸ್ವಾತಂತ್ರ್ಯ ಸಮರದ ಸಿಪಾಯಿ ಆದರು. ಸಾರ್ವಜನಿಕ ಸೇವೆಯ ಕರ್ಮಯೋಗಿ ಆದರು.

ಕೆಲವಾರು ದಿನ ಉತ್ತಮ, ತನಗೆ ತೋಚಿದ ಏನಾದರೂ ಒಂದು ರಚನಾತ್ಮಕ ಕಾರ್ಯಕ್ರಮ ನಡೆಸುತ್ತಲೇ ಇದ್ದರು. ೧೯೨೦ನೆ ಇಸವಿ ಮಹತ್ಮಾ ಗಾಂಧೀಜಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ನೇತಾರರಾದೌ. ಕಾಂಗ್ರೆಸ್ಸಿಗೆ ಕಾರ್ಯದ, ಉತ್ಸಾಹದ ಚೈತನ್ಯ ನೀಡಿದರು. ಆಗ್ಗೆ ಭಿಕ್ಷುವೂ ಕಾಂಗ್ರೆಸ್ಸಿನ ಸೇವಕರಾದರು. ಒಂದು ವರ್ಷ ಜೈಲೂ ಕಂಡರು.

ಸೆರೆಮನೆಯಿಂದ ಹೊರಬಂದ ಭಿಕ್ಷು, ಆ ವೇಳೆಗೆ ನಡೆದ ಗಯಾ ಕಂಗ್ರೆಸ್ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕೇಸರಿ ಬಣ್ಣದ ಬಟ್ಟೆ. ಬೋಳು ಮಂಡೆ, ಮರದ ಮೆಟ್ಟು , ಕೈಲಿ ಬರ್ಮಾ ಛತ್ರಿ, ಮೋರೆಯಲ್ಲಿ ಒಂದು ತೆರನಾದ ತೇಜಸ್ಸು! ಕಾಂಗ್ರೆಸ್ಸಿಗೆ ಹೋದ ಜನ ಅಧಿವೇಸನದಲ್ಲಿ ಲಗುಬಗೆಯಿಂದ ಓಡಾಡುತ್ತಲಿದ್ದ ಈ ಸಂನ್ಯಾಸಿಯನ್ನು ಮೊದಲ ಬಾರಿ ನೋಡಿದರು. ಅವರೊಡನೆ ಮನಸ್ಸು ಬಿಚ್ಚಿ ಮಾತಾನಾಡಿದರು. ಹುಟ್ಟಿದ್ದು ಬರ್ಮಾ ಆದರೂ, ಭಾರತದ ಪ್ರೇಮಿ ಆಗಿದ್ದಾರಲ್ಲಾ, ಆದೂ ಸ್ವಾತಂತ್ರ್ಯಅ ಚಳವಳಿಯಲ್ಲಿ ಕೂಡ ಸೇರಿಕೊಂಡಿದ್ದರಲ್ಲ ಎಂಬ ಸಂತೋಷ ಕೊಡ ಜನಕ್ಕೆ ಉಂಟಾಯಿತು. ಅದೂ ಬುದ್ಧ ತಯೆಯ ಪವಿತ್ರ ಪರಿಸರದಲ್ಲಿ! ಮುಂದೆ ೨-೩ ವರ್ಷದ ಒಳಗೇ ಬರ್ಮಾದಲ್ಲೂ ರಾಜಕೀಯ ಚಳವಳಿ ಬಹು ಬಿರುಸಾಗಿಯೇ ನಡೆಯಿತು. ಅದರಲ್ಲಿ ಭಾಗಿ ಆದ ಭಿಕ್ಷುವಿಗೆ ಮೂರು ವರ್ಷ ಜೈಲು! ಅದನ್ನು ಮುಗಿಸಿಕೊಂಡು ಬಂದಾಗ, ಮದರಾಸ್ ಕಾಂಗ್ರೆಸ್ಸು. ಅಲ್ಲಿನ ಜನಕ್ಕೂ ಈತ ವಿಶಿಷ್ಟ ಸಂಸ್ಯಾಸಿ ಆಗಿಯೆ ತೋರಿಬಂದರು.

ಅಪಮಾನ ಸಹಿಸದ ಕೆಚ್ಚು

ಗಯಾ ಕಾಂಗ್ರೆಸ್ ಅದಿವೇಶನ ಮುಗಿದ ಮೇಲೆ ಯುದ್ಧವೂ ಆಗಿ ಹೋದ ನಂತರ, ಯುರೋಪಿನ ಆಗಿನ ಪರಿಸ್ಥಿತಿ ತಿಳಿದುಕೊಳ್ಳಲು,ಉತ್ತಮರವರು ಪ್ರವಾಸ ಮಾಡಿ ಬಂದಿದ್ದರು, ಈಗ ಪುನಃ ಬೌದ್ಧ ಧರ್ಮದ ನೆಲೆವೀಡು ಆದ ಜಪಾನ ಪ್ರವಾಸ, ಹಾಗೆಯೇ ಚೀನಾ ದೇಶಕ್ಕೂಭೇಟಿ. ಚೀನಾದಲ್ಲಿ ಅಲ್ಲಿನ ಅಭಿವೃದ್ಧಿಗೆ ಕಾರಣಪುರುಷರಾದ ಡಾಕ್ಟರ್ ಸನ್-ಯಾಟ್-ಸೇನ್ ನಿಧನರಾದರು. ಆ ಸಂದರ್ಭದಲ್ಲಿ, ಭಾರತ ಕಾಂಗ್ರೆಸ್ ಪ್ರತಿನಿಧಿಯಾಗಿ ಪುಷ್ಪಾಂಜಲಿಯ ಉತ್ಸವಕ್ಕೆ ಉತ್ತವರನ್ನೇ ಕಳಿಸಿಕೊಡಲಾಯಿತು. ತೀರಿಕೊಂಡ ಸನ್-ಯಾಟ್-ಸೇನ್ ಭುಕ್ಷುವಿನ ಆಪ್ತ ಮಿತ್ರನೂ ಆಗಿದ್ದರು.

ಭಿಕ್ಷು ಚೀನದೇಶಕ್ಕೆ ಇತ್ತ ಈ ಭೇಟಿ ಸಂಸ್ಮರಣೀಯ. ಅಲ್ಲಿನ ಜನ್ತೆ, ತಾಮ್ ನಾಡಿನ ಪುನರುತ್ಥಾನಕ್ಕೆ ಪ್ರಮುಖ ಶಿಲ್ಪಿಯಾಗಿ ಕಾರ್ಯನುರ್ವಹಿಸಿದ ಸನ್-ಯಾಟ್-ಸೇನ್ ರಿಗೆ ಗೌರವ ಸೂಚಿಸಲು ಏರ್ಪಡಿಸಿದ್ದ ಶೋಕ ಸಂದರ್ಭ ಅದು. ವಿಶ್ವದ ಎಲ್ಲ ಮೂಲೆಗಳಿಂದ ಪ್ರಾತಿನಿಧಿಗಳು ಬಂದಿದ್ದರು. ಆಗ್ಗೆ, ಭಾರತ ಕಾಂಗ್ರೆಸ್ ಅಧ್ಯಕ್ಷರು ಮೂತೀಲಾಲ್ ನೆಹರೂರವರು. ಅವರು ಭಿಕ್ಷು ಉತ್ತಮರನ್ನೇ ಭಾರತವನ್ನು ಪ್ರತಿನಿಧಿಸಲು ಕೋರಿ ಕಳಿಸಿಕೊಟ್ಟಿದ್ದಲು. ಚೀನಾಕ್ಕೆ ಬಂದ ನಂತರವೇ ಉತ್ತಮ ಅವರಿಗೆ ಅಲ್ಲಿಯ ಪರಿಸ್ಥಿತಿ ತಿಳಿದದ್ದು. ಯಾರು ಎಲ್ಲಿ ನಿಲ್ಲಬೇಕು, ಸಮಾಧಿಗೆ ಮೊದಲು ಪುಷ್ಪಹುಚ್ಚವನ್ನು ಯರು ಅರ್ಪಿಸಬೇಕು ಇದೆಲ್ಲ ಮೊದಲೇ ಗೋತ್ತಾಗಿತ್ತು. ಭಾರತ ಆಗ್ಗೆ ಪರಕೀಯರ ಆಳ್ವಿಕೆಗೆ ಒಳಪಟ್ಟ ದೇಷ್, ಅಲ್ಲವೆ? ಗುಲಮರ ರಾಜ್ಯ ಅದು! ಅದರಿಂದ, ಅದಕ್ಕೆ ಕೊನೆಯ ಸ್ಥಾನ.

ಉತ್ತಮರಿಗೆ, ಈ ಅವಮಾನ್ ಸಹಿಸಲಾಗಲ್ಲಿಲ್ಲ. ಈ ಸಂದರ್ಭದಲ್ಲಿ ಮೇಳು-ಕೀಳು ಎಲ್ಲಿ ಬಂದೀತು? ಸರಿ, ಚೀನಾದ ಮಂತ್ರಿಗಳೊಡನೆ ಮಾತಿನ ಯುದ್ಧವೇ ಆಯಿತು! ತಮ್ಮ ನಾಡಿಗೆ ಮೊದಲ ಸ್ಥಾನ ಕೊಡಬೇಕು ಎಂದು ವಾದಿಸಿದರು ಭಿಕ್ಷು. “ಭಾರತ ಪ್ರಪಂಚದಲ್ಲೇ ಇರುವ ದೊಡ್ಡ ದೇಶಗಲ್ಲಿ ಒಂದು. ಚೀನಕ್ಕೂ ಅದಕ್ಕೂ ಬಹಳ ಹಿಂದಿನ ಕಾಲದ ನಂಟು ಉಂಟು. ಇದೂ ಅಲ್ಲದೆ, ಭಾರತ ಚೀನ ದೇಶಕ್ಕೆ ಧರ್ಮ ಗುರು ಇದ್ದ ಹಾಗೆ. ಈ ಕಾರಣ ಸಾಲದೆ? ಈಗಿನ ಸ್ಥಿತಿಯಲ್ಲಿ ಭಾರತ ದಾಸ್ಯಕ್ಕೆ ಒಳಗಾಗಿದೆ, ನಿಜ. ಅದರಿಂದಲೇ ಚೀನಾದ ಸಹನುಭೂತಿ ಭಾರತಕ್ಕೆ ಅಗತ್ಯ ಇದೆ. ಸಾಲದ್ದಕ್ಕೆ ತಾವು, ಚೀನಾದ ಧರ್ಮ ಸೋದರ ಬೌದ್ಧ ಧರ್ಮ ಅನುಸರಿಸುವವರು. ಭೌದ್ಧರಲ್ಲೂ ಭಿಕ್ಷು. ಈ ಎಲ್ಲ ಕಾರಣಗಳಿಂದ ಭಾರತದ ಕಾಂಗ್ರೆಸ್ ಪ್ರತಿನಿಧಿಗೆ ಮೊದಲ ಮರ್ಯ್ಯಾದೆ ಸಿಗಲೇಬೇಕು. ಅದು ದೇಶಕ್ಕೆ ತೋರುವ ಗೌರವ ವಿನಾ ವ್ಯಕ್ತಿಗಲ್ಲ”

‘ಇಲ್ಲಿ, ಇಗೋ ಇಲ್ಲಿ ಇವೆ’

ಉತ್ತಮರ ಮಾತಿನ ಚುರುಕು ಮಂತ್ರಿಗಳಿಗೆ ಮುಟ್ಟದಿರಲಿಲ್ಲ. ಒಳ್ಳೆ ಪೇಚಿಗೆ ಸಿಕ್ಕ ಹಾಗಾಯಿತಲ್ಲ ಎಂದುಕೊಂಡರು.ಭಿಕ್ಷುವಿನ ಪ್ರಭಾವದಿಂದ, ಹಿಂದೂಸ್ಥಾನಕ್ಕೆ ಎರಡನೆಯಸ್ಥಾನ ದೊರೆಯಿತು. ಮೂದಲಿನದು, ರೋಮಿನ ಪೋಪ್ ಪ್ರತಿನಿಧಿಗೆ. ಏಕೆಂದರೆ, ಸನ್-ಯಾಟ್-ಸೇನ್ ಕ್ರಿಶ್ಚಿಯನ್ನರೆಂದು!

ಹೂ ಅರ್ಪಿಸುವ ದೃಶ್ಯ ತುಂಬಾ ಗಾಂಬೀರ್ಯದಿಂದ ಕೂಡಿತ್ತು. ಎಲ್ಲರೂ ಸಿದ್ಧರಾಗಿ ನಿಂತಿದ್ದರು. ಶೋಕ ಸೂಚಕ ಕಪ್ಪು ಉಡುಗೆ. ನಡುವೆ ಕೇಸರಿ ಬಣ್ಣದ ಖಾವಿ ತೊಡಿಗೆ ಎದ್ದು ಕಾಣುತ್ತಿತ್ತು. ಮೊದಲು ಪೋಪ್ ಸಮಧಿಗೆ ಹೂ ಏರಿಸಿ ಬಂದ. ಆ ಮೇಲೆ ಉತ್ತಮರ ಸರದಿ. ನಿಧಾನವಾಗಿ ಹೆಜ್ಜೆ ಇರಿಸಿದರು. ಆನೆ ನಡೆದ ಹಾಗೆ. ಜೊತೆಗೆ ನಾಲ್ಕು ಜನ ಶಿಷ್ಯರು. ಅಕಸ್ಮಾತ, ಇವರ ನಡಿಗೆ ಸರಿಹೂಂದುವ ಹಾಗೆ, ಚೀನಾದ ರಾಷ್ಟೀಯ ಬ್ಯಾಂಡ ಬಾರಿಸಿತು! ಆ ಗಾಂಭೀರ್ಯ ಇನ್ನೂ ಹೆಚ್ಚಿತು! ಸಮಾಧಿಯ ಬಳಿ ಸಾರಿದರು. ಮೂರು ಸಲ ಪ್ರದಕ್ಷಿಣೆ ಮಾಡಿದರು. ನಮಿಸಿ ಬೊಗಸೆ ಹೂ ಅರ್ಪಿಸಿದರು. ಭಾರತದ ಪ್ರತಿನಿಧಿಯ ಈ ಹೂಸತನ ಜನರನ್ನು ಬೆರಗು ಮಾಡಿತು. ಬ್ಯಾಂಡು ನಿಂತಿತು! ಪರವಶರಾದ ಜನ ಸಮೂಹ, “ನಾಲ್ಕು ಹಿತವಚನ ಆಡಿ” ಎಂದು ಕೂಗಿದರು. ಕಣ್ಣಿನಲ್ಲಿ ಕಂಬನಿ ಉತ್ತಮರಿಗೆ! “ಭಾರತದ ಸಂಪೂರ್ಣ ಸಹಭೂತಿ ಚೀನಾಕ್ಕೆ ಇದೆ” ಎಂದು ನುಡಿದರಷ್ಟೆ!  ಉತ್ತಮರ ಮಾತುಗಳಲ್ಲಿ ಪ್ರಂಪಚದ ಎಲ್ಲ ರಾಷ್ಟ್ರಗಳ ಪ್ರಸ್ತಾಪ ಬರುತ್ತಿತ್ತು. ಅಲ್ಲಲ್ಲಿ ಇರುವ ಸಂಪ್ರದಾಯ ನಡೆನುಡಿ, ಉದ್ಯೋಗ, ಅನೇಕ ವಿಧ! ಇದಕ್ಕೆ ಕಾರಣ, ಅವರ ಪರ್ಯಟನ, ಲೋಕಾನುಭವ, ಅವರ ಜೊತೆ ಕುಳಿತು ಎಷ್ಟು ಹೊತ್ತು ಮಾತನಾಡಿದರೂ ಬೇಸರಬಾರದು. ಅಂತಹ ಸರಸಿ ಮಾತಿನಲ್ಲಿ.

ಇಗೋ ಇಲ್ಲಿದೆ

ಅವರ ಮಾತಿನ ಸರಸತೆಗಿಂತ, ಅವರ ಸ್ವಭಾವ, ಅವರ ಉತ್ಸಾಹ ದೊಡ್ಡದು! ಮಾನವೀಯತೆ, ಅವರ ರಕ್ತದಲ್ಲಿ ಹರಿದು ಬಂದಿದ್ದ ಗುಣ. ಯಾವಾಗಲೂ ನಿಶ್ಚಿಂತರೇ, ಪ್ರಸನ್ನರೆ! ಅದಕ್ಕೆ ಅಗತ್ಯ ಆದ ನಿಸ್ಪೃಹತೆ, ಪ್ರಾಮಾಣಿಕತೆ ಅವರಲ್ಲಿ ಮನೆ ಮಾಡಿದ್ದವು. ಯಾವುದೇ ಕೆಲಸ ಮಾಡಲಿ, ಅದರ ಫಲ ಬಯಸುವ ಕಾಮನೆ ಇಲ್ಲ! ಅಂದ ಮೇಲೆಮ್ ಚಿತ್ತ ಪ್ರಸನ್ನತೆ ತಾನಗಿಯೇ ಬರುತ್ತದೆ. ಅಲ್ಲವೆ? ಭಿಕ್ಷುವಿನದು ಹಾಗೇ ಕಡಲ ಗಂಭೀರ, ತುಂಬಿದ ಕೊಡ ತುಳುಕುವುದಿಲ್ಲ. ಅವರಲ್ಲಿ ಕಡಿಮೆ ಮಟ್ಟದ ಹುಳೀ ಹಿಂಡುವ ಸ್ವಭಾವದ ಸುಳಿವೇ ಇಲ್ಲ! ಅಂತಹ ನಿಷ್ಕಳಂಕ ಮನೋಭಾವ.

ಶಾಂಘಾಯ್ ಪಟ್ಟಣದ ಸಿಖ್ ಗುರುದ್ವಾರ. ಅಲ್ಲಿ ಉತ್ತವ ಅವರು ಒಮ್ಮೆ ಉಪನ್ಯಾಸ ಮಾಡಿದರು. ಅದರ ಪರಿಣಾಮ ಏನೆಂದರೆ, ಇವರು ಇಳಿದಿಕೊಂಡ ಮನೆಯ ತಪಾಸಣೆ ಮಾಡಲು ಬ್ರಿಟಿಷ ಪೋಲಿಸರ ಆಗಮನ! ಶಾಂಘಾಯಿಯ ಜಪಾನೀ ಭಾಗದಲ್ಲಿ ಭಿಕ್ಷು ಇದ್ದದ್ದು. ಅದು ಅಂತರರಾಷ್ಟ್ರೀಯ ನಗರ. ಅನೇಕ ರೀತಿಯ ಅಧಿಕಾರ ಅಲ್ಲಿ. ಬ್ರಿಟಿಷ ಅಧಿಕಾರಿ ಗದ್ದರಿಸಿದ, “ಏಯ್, ಸನ್ಯಾಸಿ, ನಿಮ್ಮಲ್ಲಿ ರಾಜದ್ರೋಹ ಬಿತ್ತರಿಸಿರುವ, ಬಂಡಾಯ ಎಬ್ಬಿಸುವ ಪುಸ್ತಕ, ಕರಪತ್ರ ಇದೆಯೇನು?” ಆ ಮನೆಯ ಯಜಮಾನನಿಗೇ ಗಾಬರಿ! ಭಿಕ್ಷು “ಅದಕ್ಕೇನು ಬರ, ಬೇಕಾದಷ್ಟು ಇವೆ”. ಅಧಿಕಾರಿಗೆ ರೇಗಿತು. ಕೆರಳಿ ಕೇಳಿದ “ಎಲ್ಲಿ ಹಾಗಾದರೆ ತೋರಿಸು ಮತ್ತೆ?” ಸಂನ್ಯಾಸಿ, ತನ್ನ ಎದೆ ಮುಟ್ಟಿ ತೋರಿಸಿದರು, ಇಲ್ಲಿ, ಇಗೋ ಇಲ್ಲಿ ಇವೆ. ನೋಡುತ್ತೀರೇನು?” ಅಧಿಕಾರಿಗೆ ಇಂಗು ತಿಂದ ಮುಖ ಆಯಿತು. ತೆಪ್ಪಗೆ ತನ್ನ ದಾರಿ ತಾನು ಹಿಡಿದು ಹೋದ!.

ಚೀನಾ ದೇಶಕ್ಕೆ ಹೋಗಿ ಬಂದ ನಂತರ, ಲಾಹೋರ ಕಾಗ್ರೆಸ್ಸು, ಅಲ್ಲೂ ಭಿಕ್ಷು ಮುಂದಾಳುವೆ! ಅಲ್ಲಿಯೆ ಕಲ್ಕತ್ತೆಯ ಪೋಲಿಸರು ಉತ್ತಮರನ್ನು ಬಂಧಿಸಿದರು! ಅವರ ಬಳಿ ಇದ್ದ ವಿದೇಶೀ ರಹದಾರಿಯನ್ನಿ ಕಿತ್ತುಕೊಂಡುಬಿಟ್ಟರು. ಮತ್ತೆ ಕೊಡಲೇ ಇಲ್ಲ! ಭಿಕ್ಷುವಿನ ದೇಶ ಪರ್ಯಟನ ಪೂರ್ಣವಾದಿ ನಿಂತು ಹೋಯಿತು. ವಿದೇಶಗಳ ಕರೆ ಬಂದರೂ ಹೋಗಲು ಅನುಮತಿ ದೊರೆಯಲಿಲ್ಲ. ಪಾಸಪೋರ್ಟ ಪುನಃ ಸಿಗಲೂ ಇಲ್ಲ!.

ಹಿಂದೂ ಮಹಾಸಭೆ

ಇಷ್ಟೆಲ್ಲ ಆದರೂ, ಭಿಕ್ಷುವಿಗೆ ಧರ್ಮವೇ ತನ್ನ ಸರ್ವಸ್ವ ಎಂಬ ವಿಶ್ವಾಸ. ಹಾಗಿರುವಲ್ಲಿ, ರಾಜಕೀಯ ಅವರಿಗೆ ಒಗ್ಗಲು ಸಾಧ್ಯವೆ? ಕಾಂಗ್ರೆಸ್ಸಿನಲ್ಲಿ ನಿಲ್ಲುವುದು ಅವರಿಗೆ ಸಾಧ್ಯ ಆಗಲಿಲ್ಲ. ಪಂಡಿತ ಮದನ ಮೋಹನ ಮಾಳವೀಯರ ಆಗ್ಗೆ ಹಿಂದೂ ಮಹಾಸಭೆಯ ಅಧ್ಯಕ್ಷರು! ಉತ್ತಮರಿಗೂ ಆ ಸಂಸ್ಥೆ ಕಂಡರೆ ಪ್ರೀತಿ. ಆ ಸೆಳೆತವೇ ಅವರನ್ನು ಹಿಂದೂ ಮಹಾಸಭೆಗೊಯ್ದಿತು, ಅಧ್ಯಕ್ಷರನ್ನಾಗಿಯೂ ಮಾಡಿತು!. ಭಿಕ್ಷು, ಇಡೀ ಭಾರತ ಪ್ರವಾಸ ಮಾಡಿ, ಧಾರ್ಮಿಕ, ರಾಷ್ಟ್ರೀಯ ಅಭಿಮಾನ ಪ್ರಕಟಿಸಿ, ಹೆಚ್ಚಿಸುವ ಸಂದೇಶ ಪ್ರಸಾರ ಮಾಡಿದರು. ಬತ್ತದೆ ಇರುವ ಉತ್ಸಾಹ, ಸರಳ ಮನೋಧರ್ಮ, ಉಜ್ವಲ ದೇಶಾಭಿಮಾನ, ಇವುಗಳ ಮೂರ್ತಿಯೇ ಗಾಳಿ ಕಾಲಲ್ಲಿ ಸಂಚರಿಸಿದ ಹಾಗೆ ಆಯಿತು.

ಇಲ್ಲಿಯೂ ಶಾಂತಿ, ಅಹಿಂಸೆ, ಇವುಗಳ ಪಾಲನೆಯೆ. ಅಹಿಂಸೆ, ಸತ್ಯ, ಶಾಂತಿ, ಬ್ರಹ್ಮಚರ್ಯ, ಶರೀರಶ್ರಮಮ್ ನಿರ್ಭಿತ ಮನೋಭಾವ ಇವುಗಳು ಬಾಪು ಗುರುತಿಸಿದ ದಿನ ನಿತ್ಯದ ಮೌಲ್ಯಗಳು. ಭಿಕ್ಷು ಇವುಗಳನ್ನು ತಮ್ಮ ಬದುಕಿಗೆ ಅಳವಡಿಸಿಕೊಳ್ಳಲು ಅಷ್ಟೀನೂ ಕಷ್ಟ ಆಗಲಿಲ್ಲ! ತಾಯಿಯೇ ಮೊದಲದೈವ, ಹಾಗೂ ಗುರು ಕೂಡ! ಭಾರತ ಮಾತೆಯ ಪರಾಧೀನತೆ, ದಾಸ್ಯದ ಸಂಕೋಲೆ ಕಿತ್ತು ಬಿಸುಡುವ ಮಹಾಯುದ್ಧದಲ್ಲಿ ತನ್ನ ಅಳಿಲ ಸೇವೆ ಸಂದರೆ ತನ್ನ ಬದುಕು ಸಾರ್ಥಕ ಆದ ಹಾಗೇ ಎಂಬುದೇ ಅವರಿಗೆ ಬಲವಾಗಿದ್ದುದು.

ಹಾಸ್ಯ ಪ್ರವೃತ್ತಿ

ಇಷ್ಟೆಲ್ಲ ಆದರೂ ಉತ್ತಮರಲ್ಲಿ ಗಡಸು ಸ್ವಭಾವ ಇರಲಿಲ್ಲ.ಅಹಂಕಾರ ಕೂಡ ಇಲ್ಲ. ಗಾಂಧೀಜಿಗೆ ಇದ್ದ ತಿಳಿಹಾಸ್ಯ ಪ್ರವೃತ್ತಿ ಇವರೂ ಮೈಗೂಡಿಸಿಕೊಂಡಿದ್ದರು. ಆದರೆ ಹಾಸ್ಯದಲ್ಲಿ ಕಳಂಕ ಇಲ್ಲ, ವ್ಯಂಗ್ಯವಿಲ್ಲ. ಇದಕ್ಕೆ ಒಂದು ನಡೆದ ಪ್ರಸಂಗ ಇಲ್ಲಿ ತಿಳಿಸಬಹುದು. ಭಿಕ್ಷುವಿನ ನಾನಾ ರೀತಿಯ ಚಟುವಟಿಕೆಗಳನ್ನು ಮೂದಲಿನಿಂದಲೂ ಗಮನಿಸುತ್ತಿದ್ದ ಒಬ್ಬ ಮಹನೀಯರು ಕೇಳಿದರಂತೆ, “ಅಂತೂ, ನಿಮಗೆ ಸ್ವಲ್ಪವೂ ಬಿಡುವೇ ಇರುವುದಿಲ್ಲ. ಅಲ್ಲವೆ ಉತ್ತಮ?”. ಭಿಕ್ಷು ಸುಮ್ಮನಿದ್ದರು. ಮತ್ತೆ ಆತ ಕೇಳಿದರು, “ನೀವು ಇಷ್ಟೊಂದು ದೇಶ ಸುತ್ತಿದ್ದೀರಲ್ಲ? ಯಾವುದಾದರೂ ನೀವು ನೋಡದೆ, ಹೋಗದ ಇರುವಂತಹ ಪ್ರಾಂತ ಏನಾದರೂ ಇದೆಯೇನು ಜಗತ್ತಿನಲ್ಲಿ?” ಕೂಡಲೆ ನಕ್ಕು ಉತ್ತಮ ಹೇಳಿದರು “ಎರಡೇ ಎರಡು ಪ್ರದೇಶವನ್ನು ಮಾತ್ರ ಹೋಗಿ ಕಂಡಿಲ್ಲ ಸ್ವಾಮಿ ಉಳಿದ ಎಲ್ಲ ದೇಶವನ್ನು ಸುತ್ತಿದ್ದೇನೆ.” ಸಂನ್ಯಾಸಿಯ ಈ ಮಾತು ಆ ಮಹನೀಯರಿಗೆ ಆಚ್ಚರಿ ಉಂಟು ಮಾಡಿತು!. “” ಯಾವುದು ಅಂಥ ದೇಶ, ನೀವು ನೋಡದೆ ಇರುವುದು?” ಭಿಕ್ಷು ಮತ್ತೆ ಮೆಲುನಕ್ಕು ಉತ್ತರಿಸಿದರು: “ಒಂದು ಸ್ವರ್ಗ, ಇನ್ನೂಂದು ನರಕ” ಉತ್ತಮರ ಮಾತನ್ನು ಕೇಳೀ, ಅಲ್ಲಿ ಸೇರಿದ್ದವರೆಲ್ಲ ನಕ್ಕರು.

ಅವರ ಕಾಲದ ಎಲ್ಲ ಕಾಂಗ್ರೆಸ್ ಅಧಿವೇಶನದಲ್ಲೂ ಉತ್ತಮರ ಪಾತ್ರ ಇದ್ದೇ ಇರುತ್ತಿತ್ತು. ಒಂದು ಜಾಗಟೆ ಬೇರೆ ಕೈಯಲ್ಲಿ. “ಬುದ್ಧಂ ಶರಣಂ ಗಚ್ಚಾಮಿ” ಎಂದು ಹೇಳಿಕೂಂಡು, ಜಾಗಟೆ ಬಾರಿಸುತ್ತ ಜನರನ್ನು ಸೆಳೆಯುವುದು. ಧರ್ಮದ ಪ್ರಸಾರವೂ ಆಯಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲುಗೊಂಡಿದ್ದೂ ಆಯಿತು. ಆ ವೇಳೆಗಗಲೇ ಕಾಂಗ್ರಸ್ಸಿನ ಧುರೀಣರಿಗೆಲ್ಲ ಭಿಕ್ಷು ಚಿರಪರಿಚಿತ ಆಗಿದ್ದರು.

ಧರ್ಮ, ಸಂಸ್ಕೃತಿಗಳ ರಾಯಭಾರಿ

ಆಗಿನ ಕಾಲಕ್ಕೆ, ಬರ್ಮಾದ ಜನತೆಗೆ ಭಾರತೀಯರ ಬಗ್ಗೆ ಇದ್ದ ಸೋದರ ವಾತ್ಸಲ್ಯ, ಗೌರವ ಅಳಿಸಿ ಹೋಗುವ ಹಾಗೆ ಮಾಡುವುದೇ ಬ್ರಿಟಿಷರ ಮುಖ್ಯ ಉದ್ದೇಶವಾಗಿತ್ತು. ದ್ವೇಷ ಬಿತ್ತುವುದು, ಒಡಕು ಹುಟ್ಟಿಸುವುದು. ಒಡಕನ್ನು ಹೆಚ್ಚಿಸಿ, ಇಬ್ಬರನ್ನೂ ತುಳಿದು ಮೆಟ್ಟಿ, ಎರಡು ರಾಜ್ಯಗಳನ್ನು ತಾವು ಕಬಳಿಸುವುದು ಇದು ಬ್ರಿಟಿಷರ ಮನೋಪ್ರವೃತ್ತಿ.

ಈ ರಾಜಕೀಯ, ಉತ್ತಮರಿಗೆ ತಿಳಿಯದೆ ಇರಲಿಲ್ಲ. ಆದ್ದರಿಂದಲೇ ಅವರು ಭಾರತದ ಧರ್ಮ, ಇತಿಹಾಸ, ರಾಜಕೀಯಗಳಲ್ಲೂ ಅರಿವು, ಪರಿಣತಿ ಪಡೆವುದರ ಜೊತೆಗೆ ತಮ್ಮ ಜನ್ಮ ಭೂಮಿ ಆದ ಬರ್ಮಾ ದೇಶಕ್ಕೆ ಇವುಗಳನ್ನು ತಲಿಪಿಸುವ ಸಾಂಸ್ಕೃತಿಕ ರಾಯಭಾರಿ ಕೂಡ ಆದರು. ಬರ್ಮಾದ ಜನತೆಯ ಬಗ್ಗೆ ಮೂಡಿಸಬಹುದಾದ ತಪ್ಪು ಅಭಿಪ್ರಾಯಗಳನ್ನು ತೊಡೆದು ಹಾಕಲು ತಮ್ಮ ಬಾಳೆಲ್ಲ ಶ್ರಮಿಸಿದರು. ಈ ದಿಸೆಯಲ್ಲಿ ಉತ್ತಮ ಎರಡೂ ದೇಶಗಳ ಬಾಂಧವ್ಯ ಬೆಳೆಸುವ ಸೇತುವೆ ಆದರು.

ಭಿಕ್ಷು ಪಾದರಸ ಇದ್ದ ಹಾಗೆ. ಆ ಚಟುವಟಿಕೆಗೆ ಪಾರ, ಮಿತಿ ಇಲ್ಲ! ಹಿಂದೂ ಮಹಾಸಭೆಯ ಕಾರ್ಯ, ಪ್ರವಾಸ ಅವರನ್ನು ಹಣ್ಣು ಮಾಡಿತು. ಎಷ್ಟೇ ಗಟ್ಟಿ ಆದರೂ ಮನುಷ್ಯ ಶರೀರ ಅಲ್ಲವೆ? ಅದು ಎಷ್ಟೆಂದು ತಡೆದೀತು? ಜನ್ಮತಃ ಕ್ರಿಶ್ಚಿಯನರ ಪಾದ್ರಿ ಆಗಿ ಅನಂತರ ಬೌದ್ಧ ಭಿಕ್ಷು ಆಗಿ, ಹಿಂದೂ ಮಹಾಸಭೆಯ ಆಧ್ವರ್ಯ ಆದ ಉತ್ತಮ, ಆ ಸಂಘದಲ್ಲಿ ರಾಷ್ಟ್ರೀಯ ಭಾವನೆಯನ್ನು ದೃಢವಾಗಿ ನಿಲ್ಲಿಸಲು ತುಂಬ ಶ್ರಮಿಸಿದರು. ಆ ಶ್ರಮದಲ್ಲೇ ಅವರು ಇಹಲೋಕ ತೊರೆದು, ಅಮರರಾದರು!

ಅವರ ಪ್ರಾಮಾಣಿಕತೆ, ನಿಸ್ಪೃಹತೆ, ಕಳಂಕರಹಿತ ಮನಸ್ಸು, ರಾಜಕೀಯ ಪರಿಶುದ್ಧಿ, ಧರ್ಮದಲ್ಲಿ ಒಲವು, ತಾಯ್ನಾಡಿನ ನಿಷ್ಠೆ, ಇವೆಲ್ಲ ಗುಣಗಳೂ ಪ್ರತಿಯೂಬ್ಬ ವ್ಯಕ್ತಿಗೂ ಅನುಸರಣೀಯ ಎನಿಸುತ್ತದೆ ಅಲ್ಲವೆ? ಅವರು ಸೇವೆ ಮಾಡಿದ ಕಾರ್ಯರಂಗಗಳೊ? ಒಂದೇ, ಎರಡೇ? ಧರ್ಮ ಪ್ರಸಾರ, ಸ್ವಾತಂತ್ರ್ಯ ಹೋರಾಟ್ ಹಿಂದೂ ಮಹಾಸಭೆಯ ಮುಂದಾಳು, ಸಂಸ್ಕೃತಿಯ ಪ್ರತಿನಿಧಿ! ಇವೆಲ್ಲ ತಂತಿಗಳು ಮಿಡಿವ ಒಂದೇ ನಾದ, ಉತ್ತಮ. ಅಲ್ಲಿ ಅಪಸ್ವರ ಮಿಡಿಯಲು ಅವರು ಅವಕಾಶ ಕೊಡಲಿಲ್ಲ. ಅಂತೆಯೇ ಅವರು ಅಳಿಯದ ಒಂದು ನಕ್ಷತ್ರ ಇದ್ದ ಹಾಗೆ.