Categories
ಅಂಕಣಗಳು ಪ್ರೊ. ಸಿ. ಡಿ. ಪಾಟೀಲ್ ಅಂಕಣ

ಭೂಮಿಯ ಮೇಲಿನ ಬೃಹದಾಕಾರದ ವೃಕ್ಷ: ಬೆವೋಬಾಬ್

ಸಸ್ಯ ಒಂದು ಅದ್ಭುತವಾದ ಜೀವಿ, ಅದು ಭೂಮಿಯ ಮೇಲೆ ನೆಲೆ ನಿಂತಿರುವ ಎಲ್ಲ ಜೀವಿಗಳಿಗೂ ಆಶ್ರಯ, ಆಹಾರ, ಸುಹೋಷ್ಣ ಹಾಗೂ ರಕ್ಷಣೆಯನ್ನು ನೀಡುತ್ತದೆ. ಅಷ್ಟೇ ಏಕೆ ತನ್ನನ್ನು ಕಡಿಯಲು ಕೋವಿ ತಂದವನಿಗೂ ನೆರಳು ನೀಡುತ್ತದೆ.ಭಗವಾನ್ ಬುದ್ಧ

“ದೇವನೊಬ್ಬ ನಾಮ ಹಲವು” ಎಂಬ ಮಾತು ಜನಜನಿತ. ಒಬ್ಬ ದೇವನಿಗೆ ವಿವಿಧ ಭಾಷೆಯ ವಿವಿಧ ಜನ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಹಾಗೆಯೇ ಇಲ್ಲೊಂದು ಸಸ್ಯಕ್ಕೆ ಬೆವೊಬಾಬ್, ಸತ್ತ ಇಲಿ ಸಸ್ಯ, ಜೀವ ಸಸ್ಯ, ರಸಾಯನ ವಿಜ್ಞಾನಿ ಸಸ್ಯ, ಕೋತಿ ರೊಟ್ಟಿ ಸಸ್ಯ, ಗೊಡ್ಡು ಹುಣಸೆ ಮರ, ಗೋರಖ ಚಿಂಚ, ತಲೆ ಕೆಳಗಾಗಿ ಬೆಳೆವ ಮರ ಎಂಬೆಲ್ಲ ಹೆಸರುಗಳಿಂದ ಕರೆಯುತ್ತಾರೆ.

ಇದರ ಕಾಯಿಗಳನ್ನು ಕೋತಿಗಳು ಇಷ್ಟಪಟ್ಟು ತಿನ್ನುವುದರಿಂದ “ಕೋತಿ ರೊಟ್ಟಿ ಸಸ್ಯ” (Monkey bread tree) ಎಂದೂ, ನೀತಿ ತಪ್ಪಿದ ಬೆವೋಬಾಬ್ ದೇವರ ಅವಕೃಪೆಗೆ ಒಳಗಾಗಿ, ದೇವರು ಅದನ್ನು ತಲೆಕೆಳಗೆ ಮಾಡಿ ಭೂಮಿಯಲ್ಲಿ ಗುದ್ದಿದ್ದರಿಂದ ಅಂದರೆ ಈ ಸಸ್ಯದ ಎಲೆಗಳೆಲ್ಲ ಉದುರಿದಾಗ ರೆಂಬೆ-ಕೊಂಬೆಗಳು ಬೇರುಗಳಂತೆ ಕಾಣುವುದರಿಂದ “ತಲೆ ಕೆಳಗಾಗಿ ಬೆಳೆದ ಮರ” (Upside down tree) ಎಂದೂ, ಈ ಮರವು ಬೇಸಿಯಲ್ಲಿ ಅಘಾದ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿ, ಗ್ರಾಮಾಂತರ ಜನರ ಜೀವ ರಕ್ಷಿಸುವುದರಿಂದ “ಜೀವ ವೃಕ್ಷ“ (Life tree) ಎಂದೂ, ಇದರ ಕಾಯಿಗಳು ಒಣಗಿದಾಗ ಸತ್ತ ಇಲಿಯಂತೆ ಕಾಣುವುದರಿಂದ “ಸತ್ತ ಇಲಿ ಸಸ್ಯ” (Dead rat tree) ಎಂದೂ, ಇದರ ಕಾಯಿಗಳು ನಾವು ಬೆಳೆಯುವ ಹುಣಸೆ ಕಾಯಿಗಳಂತೆ ಗೊಚರಿಸಿದರೂ ಬೀಜಗಳು ಚಿಕ್ಕವಿರುವುದರಿಂದ “ಗೊಡ್ಡು ಹುಣಸೆ ಮರ” ಎಂದೂ, ಗೊರಖನಾಥರು ಈ ಸಸ್ಯವನ್ನು ಬೇರೆ ಬೇರೆ ಸ್ಥಳಗಳಲ್ಲಿ ನಟ್ಟಿದ್ದರಿಂದ “ಗೋರಖ ಚಿಂಚ” ಎಂದೂ ಕರೆಯುತ್ತಾರೆ.

ಸಸ್ಯ ಸಾಮ್ರಾಜ್ಯದಲ್ಲಿ “ಬಂಬಕೇಸಿ” (Bombacaceae) (ಹಳೆ ಹೆಸರು: ಮಾಲ್ವೇಸಿ) ಎಂಬ ಕುಟುಂಬವೊಂದಿದೆ. ಅದರಲ್ಲಿ “ಅಡನ್ಸೊನಿಯಾ” (Adansonia) ಎಂಬ ಕುಲದಲ್ಲಿ ೮ ಪ್ರಭೇದಗಳಿವೆ.

೧) ಅಡನ್ಸೋನಿಯಾ ಡಿಜಿಟೇಟಾ

ಎಲೆ ಉದುರಿದ ಸಸ್ಯ

೨) ಅಡನ್ಸೋನಿಯಾ ಗ್ರಾಂಡಿಡೈಯರ್ (ಮಡಗಾಸ್ಕರ್)

೩) ಅಡನ್ಸೋನಿಯ ಗ್ರೆಗೋರಿ (ಆಸ್ಟ್ರೇಲಿಯಾ)

೪) ಅಡನ್ಸೋನಿಯಾ ಮಡಗಾಸ್ಕಾರಿಯನ್ಸಿಸ್ (ಮಡಗಾಸ್ಕರ್)

೫) ಅಡನ್ಸೋನಿಯಾ ಪೆರಿರ್ರಿ (ಉತ್ತರ ಮಡಗಾಸ್ಕರ್)

೬) ಅಡನ್ಸೋನಿಯಾ ರುಬ್ರೊಸ್ತಿಪ (ಮಡಗಾಸ್ಕರ್)

೬) ಅಡನ್ಸೋನಿಯಾ ಸುರೆಝೆನ್ಸಿಸ್ (ಡಿಗೊ ಸುರೆಝ್, ಮಡಗಾಸ್ಕರ್)

೭) ಅಡನ್ಸೋನಿಯಾ ಝಾ (ಮಡಗಾಸ್ಕರ್)

ಅವುಗಳ ಪೈಕಿ ಅಡನ್ಸೋನಿಯಾ ಡಿಜಿಟೇಟಾ  (Adansonia digitata) ಮಧ್ಯ, ಉತ್ತರ, ಪಶ್ಚಿಮ, ದಕ್ಷಿಣಾಫ್ರಿಕ, ಒಮೆನ್, ಯೆಮೆನ್, ಹಾಗೂ ಏಸಿಯಾ ಖಂಡದಲ್ಲಿ ಬೆಳೆಯುತ್ತದೆ. ಫ್ರೆಂಚ್ ವಿಜ್ಞಾನಿ ಮೈಕೆಲ್ ಅಡನ್ಸೋನ್ ಅವರು ಅಡನ್ಸೋನಿಯಾ ಡಿಜಿಟೇಟಾಸಸ್ಯದ ವಿವರಣೆಯನ್ನು ನೀಡಿದ್ದಕ್ಕಾಗಿ , ಅವರ ನೆನಪಿಗೆ ಕುಲೀಯ (Generic name) ಹೆಸರನ್ನು ಕೊಡಲಾಗಿದೆ.

ಬೆವೋಬಾಬ್ ಸಸ್ಯವು ಸಂಪೂರ್ಣ ಹಿಮರಹಿತ ಉಷ್ಣವಲಯದ ಸ್ಥಳಗಳಲ್ಲಿ ಅಂದರೆ ಬಿಸಿ ಹಾಗೂ ಶುಷ್ಕ ಪ್ರದೇಶದ ಮರಳುಗಾಡಿನಲ್ಲಿ ಬೆಳೆಯುತ್ತದೆ. ಮರದ ತೊಗಟೆಯ ಬಣ್ಣ ತಿಳಿಗೆಂಪು ಮಿಶ್ರಿತ ಬೂದು. ತೊಗಟೆಯಲ್ಲಿ ಗೋಂದು ಇರುವುದರಿಂದ ಅದು ಕಹಿಯಾಗಿರುತ್ತದೆ. ಆದರೂ ಕೂಡ ಸ್ಥಳೀಯರು ಅದನ್ನು ಆಹಾರವಾಗಿ ಬಳಸುತ್ತಾರೆ. ಸುಮಾರು ೫೦೦೦ ದಿಂದ ೬೦೦೦ ವರ್ಷಗಳಷ್ಟು ಅವಧಿಯವರೆಗೆ ಜೀವಿಸಬಲ್ಲ ಬೆವೋಬಾಬ್ ಸಸ್ಯದ ಎತ್ತರ ಸುಮಾರು ೫-೨೮ ಮೀಟರುಗಳಷ್ಟು ಹಾಗೂ ಕಾಂಡದ ವ್ಯಾಸ ಸುಮಾರು ೭-೧೫ ಮೀಟರ್‌ಗಳಷ್ಟು ಬೆವೋಬಾಬ್ ಸಸ್ಯದ ಕಾಂಡಗಳು ಉಬ್ಬಿದ ಡೊಳ್ಳಿನಂತೆ, ಬ್ಯಾರಲ್ ನಂತೆ ಹಾಗೂ ದಪ್ಪವಾದ ಕೊಳವೆಯಂತಿವೆ. ಇದರ ಡೊಳ್ಳಿನಂತಹ ಕಾಂಡವು ಬೇಸಿಗೆಯಲ್ಲಿ ಸುಮಾರು ೧,೨೦,೦೦೦ ಲೀಟರ್‌ಗಳಷ್ಟು ನೀರನ್ನು ಶೇಖರಿಸಬಲ್ಲದು. ಸ್ಥಳೀಯರು ಕಾಂಡದಲ್ಲಿ ರಂದ್ರ ಕೊರೆದು ಅದಕ್ಕೆ ಬಿರಡೆ ಹಾಕಿ ನಾವು ನಲ್ಲಿಯಿಂದ ನೀರನ್ನು ಹೊರತೆಗೆದಂತೆ ಹೊರತೆಗೆಯುತ್ತಾರೆ. ಟೊಳ್ಳಾದ ಕಾಂಡದಲ್ಲಿ ಜನ ವಾಸಿಸುತ್ತಾರೆ. ಟೊಳ್ಳು ಮಾಡಿದ ಕಾಡದಲ್ಲಿ ಪಬ್ ಗಳನ್ನೂಮಾಡಿದ್ದಾರೆ. ಕಾಂಡವನ್ನು ಟೊಳ್ಳುಮಾಡಿ ನೀರು ತುಂಬಿಡಲು ಬಳಸುತ್ತಾರೆ. ಹಾಗೆ ಟೊಳ್ಳುಮಾಡಿದ ಕಾಂಡದಲ್ಲಿ ಸುಮಾರು ೯೦೦೦ ಲೀಟರ್‌ನಷ್ಟು ನಿರನ್ನು ಸಂಗ್ರಹಿಸಬಹುದು. ಇದು ಸಾಮಾನ್ಯ ಸಸ್ಯದಂತೆ ಬೆಳೆಯುತ್ತದೆ. ಆದರೆ ಅದು ಸುಂದರ ಬೆವೋಬಾಬ್ ಎಂದು ಗೊತ್ತಾಗಬೇಕಾದರೆ ಸುಮಾರು ೮೦೦ ವರ್ಷಗಳು ಬೇಕು.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಶ್ವೇತ ಪುಷ್ಟ

ಸುಮಾರು ೧೫ ಸೆಂಟಿ ಮೀಟರ್‌ಗಳಷ್ಟು ಉದ್ದವಾಗಿ ಬೆಳೆಯುವ ಅಚ್ಚ ಶ್ವೇತ ಹೂವುಗಳು ನೋಡಲು ಅತಿ ಸುಂದರ. ಆದರೆ ವಾಸನೆಯನ್ನು ಸಹಿಸಲು ಅಸಾಧ್ಯ. ಬಾವಲಿಗಳು ಕೀಟಗಳನ್ನು ಹಿಡಿದು ತಿನ್ನಲು ಬೆನ್ನಟ್ಟಿದಾಗ ಹೂವುಗಳಿಗೆ ಡಿಕ್ಕಿ ಹೊಡೆದು ಪರಾಗ ಸ್ಪರ್ಶಮಾಡುತ್ತವೆ.

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಫಲ

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಬೀಜಗಳು

ಬೆವೋಬಾಬ್‌ದ ಫಲ ಸುಮಾರು ೧೦-೪೫ ಸೆಂಟಿ ಮೀಟರ್‌ನಷ್ಟು. ಫಲದ ಮೇಲೆ ಅತ್ಯಂತ ನಾಜೂಕಿನ ರೇಷ್ಮೆಯಂತಹ ಕೂದಲುಗಳಿವೆ. ಮೂತ್ರಪಿಂಡದಾಕಾರದ ಕಪ್ಪು ಹಾಗೂ ಕಠಿಣವಾದ ಬೀಜಗಳಿವೆ.

ದ್ವಿದಳ ಸಸ್ಯದ ಕಾಂಡದಲ್ಲಿಯ ವಾರ್ಷಿಕ ಉಂಗುರಗಳ (Annual rings)ನ್ನು ಎಣಿಸಿ ಆ ಸಸ್ಯದ ವಯಸ್ಸನ್ನು ಗೊತ್ತುಮಾಡಿಕೊಳ್ಳುತ್ತಾರೆ. ಆದರೆ ಬೆವೋಬಾಬ್ ಸಸ್ಯದಲ್ಲಿ ವಾರ್ಷಿಕ ಉಂಗುರಗಳು ಉತ್ಪತ್ತಿಯಾಗದೇ ಇರುವುದರಿಂದ ಈ ಸಸ್ಯದ ವಯಸ್ಸನ್ನು “ವಿಕಿರಣಶೀಲ ಕಾರ್ಬನ್ ಕಾಲಗಣನೆ” (Radioactive carbon dating)  ಬಳಸಿ ಇದು ಸುಮಾರು ೬೦೦೦ ವರ್ಷಗಳಷ್ಟು ಅವಧಿಯವರೆಗೆ ಬದುಕಬಲ್ಲದು ಎಂದು ವಿಜ್ಞಾನಿಗಳ ಅಭಿಪ್ರಾಯಪಟ್ಟಿದ್ದಾರೆ. ಜೀಸಸ್ ಕ್ರಿಸ್ತ ಜನಿಸುವುದಕ್ಕೆ ಸಾವಿರಾರು ವರ್ಷ ಮೊದಲೇ ಈ ಸಸ್ಯ ಜನ್ಮ ತಳೆದಿತ್ತು.

ಆರ್ಥಿಕ ಉಪಯೋಗಗಳು:

೧) ಕಾಂಡವನು  ನೀರಿನ ಸಂಗ್ರಹ ಣೆಗಾಗಿ ಬಳಸುತ್ತಾರೆ.

೨) ಹಣ್ಣುಗಳಲ್ಲಿ ಸಿಟ್ರಿಕ್ ಆಮ್ಲ ಹಾಗೂ ಟಾರ್ಟರಿಕ್ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ತರಕಾರಿ, ಸಾಂಬರ್ ಮಾಡಲು ಉಪಯೋಗಿಸುತ್ತಾರೆ.

೩) ಆಫ್ರಿಕೆಯ ಗ್ರಾಮೀಣ ಜನರು ಕಾಂಡದ ತೊಗಟೆಯಿಂದ ಹಗ್ಗ, ಜಾಳೀಗೆ, ನೀರಿನಲ್ಲಿ ವದ್ದೆಯಾಗದ ಟೋಪಿ, ಕಾಗದ, ಬೀರ್, ಟೀ ಹಾಗೂ ಬಟ್ಟೆಗಳನ್ನು ತಯಾರಿಸುತ್ತಾರೆ.

೪) ಹಣ್ಣಿನ ತಿರುಳನ್ನು ನೀರಿನ ಜೊತೆ ಸೇರಿಸಿ ಪೇಯವನ್ನು ಹಾಗೂ ಬೀರನ್ನು ತಯಾರಿಸುತ್ತಾರೆ.

೫) ಬೀಜಗಳಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ತೈಲ, ಫಾಸ್ಫೇಟುಗಳುಇದ್ದು, ಆಹಾರದಂತೆ ಬಳಸುತ್ತಾರೆ. ಹಾಗೂ ಕಾಫೀ ಬೀಜದಂತೆ ಹುರಿದೂ ತಿನ್ನಬಹುದು.

೬) ಎಲೆಯನ್ನು ಸಲಡ ಆಗಿ ಹಾಗೂ ಸೂಪ್ ಮಾಡಲು ಬಳಸುತ್ತಾರೆ.

೭) ಆಫ್ರಿಕಾ ಸರಕಾರವು ಬೆವೋಬಾಬ್ ಫಲದ ಪುಡಿಯನ್ನು ಆರೋಗ್ಯಕರವಾದ ಆಹಾರವೆಂದು ಯುರೋಪ ದೇಶಗಳಿಗೆ ಮಾರಾಟ ಪ್ರಾರಂಭಿಸಿದೆ. ಇದರ ಫಲದಲ್ಲಿ ಕಿತ್ತಳೆ ಹಣಣ್ಣಿನಲ್ಲಿಯ ಮೂರುಪಟ್ಟು ಹೆಚ್ಚು ವಿಟ್ಯಾಮಿನ್ ಸಿ, ಒಂದು ಗ್ಲಾಸಿನಷ್ಟು ಹಾಲಿನಲ್ಲಿರುವ ಎರಡು ಪಟ್ಟು ಕ್ಯಾಲ್ಸಿಯಂ ಇದೆ. ಜೊತೆಗೆ ವಿಟಮಿನ್ ಬಿ೧, ವಿಟಮಿನ್ ಬಿ೨ ಹಾಗೂ ತಿ ಆಕ್ಸಿಡಂಟ್ ಕೂಡ ಹೆಚ್ಚಿನ ಪ್ರಮಾಣದಲ್ಲಿವೆ.

೮) ಸ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ.

ಔಷಧೀಯ ಉಪಯೋಗಗಳು:

೧) ತೊಗಟೆಯನ್ನು ಜ್ವರ ಹಾಗೂ ಮಲೇರಿಯಾ ಕಾಯಿಲೆಗೆ ಬಳಸುತ್ತಾರೆ.

೨) ಎಲೆಗಳನ್ನು ನೀರನಲ್ಲಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಅಸ್ತಮಾ, ಕೆಮ್ಮು ಹಾಗೂ ಪುಪ್ಪುಸದ ಕಾಯಿಲೆಗಳು ಗುಣವಾಗುತ್ತವೆ.

೩) ಫಲದಿಂದ ತೆಗೆದ ನೀರಿನಿಂದ ಹೊಟ್ಟೆನೊವು, ಭೇದಿ, ಅತಿ ಭೇದಿಯನ್ನು ನಿವಾರಣೆ ಮಾಡಬಹುದು.

ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ೧೨.೨ ಮೀ. ಎತ್ತರವುಳ್ಳ ಹಾಗೂ ೧೩.೭ ಮೀ. ಕಾಂಡದ ಸುತ್ತಳತೆಯುಳ್ಳ ಸುಮಾರು ೪೦೦ ವರ್ಷಗಳ ಅಡನ್ಸೊನಿಯಾ ಡಿಜಿಟೇಟ ಸಸ್ಯವಿದೆ. ಹೀಗೆಯೇ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಮೂರು ಡೊಳ್ಳು ಹೊಟ್ಟೆಯ, ಯಾದಗಿರಿ ಜಿಲ್ಲೆಯ ದೇವರ ಗೋನಾಳದಲ್ಲಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಹಾಗೂ ಬೆಂಗಳೂರಿನ ಲಾಲ್ಬಾಗಿನಲ್ಲಿ ಈ ಅಪರೂಪದ ಸಸ್ಯಗಳನ್ನು ನೋಡಬಹುದು.

ಬೆವೋಬಾಬ್ ಸಸ್ಯದ ಕೆಲವು ಪ್ರಭೇದಗಳು ಅಳಿವಿನಂಚಿನಲ್ಲಿವೆ .[/fusion_builder_column][/fusion_builder_row][/fusion_builder_container]