ಯಮುನಾ ನದಿಯ ದಡದಲ್ಲಿ  ತ್ರಿವಿಕ್ರಮಪುರ ಎಂಬುದೊಂದು ಊರು. ಆ ಊರಿನ ಒಂದು ಮನೆಯಲ್ಲಿ ಮಧ್ಯಾಹ್ನದ  ಊಟದ ಸಮಯ. ಒಬ್ಬ ಯುವಕ, ಆತನ ಹೆಂಡತಿ ಮತ್ತು ಕೆಲವು ಮಕ್ಕಳು ಊಟಕ್ಕೆ ಕುಳಿತಿದ್ದರು. ಬಿಸಿಬಿಸಿಯಾದ ಅಡುಗೆಯನ್ನು ಬಾಯಿಗಿಡುತ್ತಲೆ ಉಪ್ಪು ಹಾಕುವುದನ್ನು ಮನೆಯಾಕೆ ಮರೆತಿದ್ದಾಳೆ ಎಂದು ಯುವನಕನಿಗೆ ಗೊತ್ತಾಯಿತು.

“ಅತ್ತಿಗೆ, ಸ್ವಲ್ಪ ಉಪ್ಪು ಬಡಿಸಿ,ಕ ಉಪ್ಪು ತುಂಬಾ ಕಡಿಮೆ” ಯುವಕ ಕೇಳಿದ.

ಯಾವ ಕಾರಣದಿಂದಲೋ ಏನೋ ಸಿಡಿಮಿಡಿಗುಟ್ಟುತ್ತಿದ್ದ ಮನೆಯಾಕೆ ಮ್‌ಐದುನನ ಕಡೆ ಬೇಸರರದಿಂದ  ನೋಡುತ್ತ ಹೇಳಿದಳು, “ನೀನು ಮಾಡುವ ಕೆಲಸಕ್ಕೆ ಉಪ್ಪು ಬೇರೆ ದಂಡ. ಬಹಳ ಉಪ್ಪು ಸಂಪಾದಿಸಿ ತಂದಿಟ್ಟಿದ್ದೀಯಲ್ಲವೇ ಬಡಿಸುವುದಕ್ಕೆ?”

ಯುವಕ ತಲೆ ಗತ್ತಿಸಿದ. ಬಯಲ್ಲಿ ಎಟ್ಟಿದ್ದು ಗಂಟಲಲ್ಲಿ  ಇಳಿಯಲಿಲ್ಲ. ಅವನ ಹೆಂಡತಿಯ ಕಣ್ಣಲ್ಲಿ ಸಹ ಅವಮಾನದಿಂದ ನೀರು ತುಂಬಿ ಬಂತು. ಊಟ ಮಾಡದೆ ಇಬ್ಬರೂ ಹಾಗೆಯೇ ಮೇಲೆದ್ದರು.

ಸ್ವಲ್ಪ ಹೊತ್ತಿನ ಮೇಲೆ ಯುವಕ ತನ್ನ ಅತ್ತಿಗೆಯ ಬಳಿಗೆ ಬಂದ. ಆ ವೇಳೆಗಾಗಲೆ ಆಕೆಗೆ ತಾನು ದುಡುಕಿ ಮಾಡಿದ ತಪ್ಪಿನ ಬಗ್ಗೆ ಅರಿವಾಗಿತ್ತು. ಯುವಕ ಮನೆಯಾಕೆಗೆ ಹೇಳಿದ, “ಅತ್ತಿಗೆ, ನೀವು  ಇವತ್ತು ನನ್ನ ಕಣ್ಣು ತೆರೆಸಿದಿರಿ. ಆನೆಯ ಮೇಲೆ ಹೊರಿಸಿಕೊಂಡು ಬರುವಷ್ಟು ಉಪ್ಪನ್ನು ಸಂಪಾದಿಸುವಷ್ಟು ಯೋಗ್ಯನಾಗುವವರೆಗೂ ನಾನು ಮತ್ತೆ ಈ ಮನೆಯಲ್ಲಿ ಉಪ್ಪು ತಿನ್ನುವುದಿಲ್ಲ.”

ಮೈದುನನ ಮಾತಿನಿಂದ ಅತ್ತಿಗೆಗೆ ತುಂಬಾ ನೋವಾಯಿತು. ಆದರೆ ಯುವಕನ  ನಿರ್ಧಾರ ದೃಢವಾಗಿತ್ತು. ಅತ್ತಿಗೆಗೆ ನಮಸ್ಕರಿಸಿ ಮಡದಿಯನ್ನು ಸಂತೈಸಿ ಉದ್ಯೋಗವನ್ನು ಅರಸುತ್ತ ಮನೆಯಿಂದ ಹೊರಟ.

ಆ ಯುವಕನೇ ಹಿಂದಿ ಸಾಹಿತ್ಯದ ಹೆಸರಾಂತ ಕವಿ ಭೂಷಣ.

ಜನನ, ಬಾಲ್ಯ

ಯಮುನಾನದಿಯ ದಡದಲ್ಲಿದ್ದ ತ್ರಿವಿಕ್ರಮಪುರ (ಈಗ ಇದನ್ನು ತಿಕವಾಂಪುರ್‌ಎಂದು ಕರೆಯುತ್ತಾರೆ) ಎಂಬಲ್ಲಿ ೧೬೪೦ರಲ್ಲಿ ಭೂಷಣ ಹುಟ್ಟಿದ. ಸಾಮಾನ್ಯವಾಗಿ ಇತರ ಅನೇಕ ಕವಿಗಳ ಬಗ್ಗೆ ಇರುವಂತೆ ಭೂಷಣ ಹುಟ್ಟಿದ ವರ್ಷ, ಅವನ ಜೀವನದ ಬಗೆಗಿನ ವಿವರಗಳು ಹಾಗೂ ಅವನ ರಚನೆಗಳು ಇವುಗಳ ಬಗ್ಗೆ ವಿದ್ವಾಂಸರಲ್ಲಿ ಹಿಮ್ಮತವಿಲ್ಲ. ಕವಿಯ ರಚನೆಗಳಿಂದಲೇ ತಿಳಿದು ಬರುವಂತೆ ಈತ ಕಾನ್ಯಕುಬ್ಜದವನು. ತಂದೆಯ ಹೆಸರು ರತಿನಾಥ. ಅಕ್ಬರನ ಆಸ್ಥಾನದಲ್ಲಿದ್ದ ವೀರ, ಕವಿ ಮತ್ತು ಶಾಸಕನಾದ ಬೀರಬಲ್ಲನೂ ಇದೇ ತ್ರಿವಿಕ್ರಮ ಪುರದವನೇ. 

ಇವತ್ತು ನನ್ನ ಕಣ್ಣು ತೆರೆಸಿದಿರಿ

ಚಿಂತಾಮಣಿ ಮತ್ತು ಮತಿರಾಮ ಎಂಬುವವರು ಭೂಷಣನ ಸಹೋದರರು. ಇವರಿಬ್ಬರೂ ಹಿಂದಿ ಸಾಹಿತ್ಯದಲ್ಲಿ  ಹೆಸರುವಾಸಿಯಾದ ಕವಿಗಳು. ಇವರೇ ಅಲ್ಲದೆ ಭೂಷಣಿಗೆ ಜಟಾಂಶಂಕರ ಅಥವಾ ನೀಲಕಂಠ ಎಂಬ ಹೆಸರಿನ ಸಹೋದರ ಸಹ ಇದ್ದನೆಂದು  ಹೇಳುತ್ತಾರೆ. ಭೂಷಣನ ಹೆಸರಿನ ಬಗ್ಗೆ ಸಹ ವಿದ್ವಾಂಸರಲ್ಲಿ ವಿವಾದವಿದೆ. ಆತನಿಗೆ ಪತಿರಾಮ, ಮನಿರಾಮ, ಕನೌಜ, ಘನಶ್ಯಾಮ, ವಜ್ರಭೂಷಣ ಮುಂತಾದ ಹೆಸರುಗಳೂ ಇದ್ದವೆಂದೂ ಹೇಳುತ್ತಾರೆ.

ಭೂಷಣನ ಅಣ್ಣ ಚಿಂತಾಮಣಿ ಮೊಗಲ್‌ ಸಾಮ್ರಾಟ ಷಹಜಹನನ ಆಸ್ಥಾನದಲ್ಲಿ ಕವಿಯಾಗಿದ್ದ. ಆತ ಅಲ್ಲಿ ಹಣವನ್ನು ಗಳಿಸಿ ಮನೆಗೆ ಕಳುಹಿಸುತ್ತಿದ್ದ ಭೂಷಣನದು ಮೊದಲಿನಿಂದಲೂ ಸ್ವಲ್ಪ  ಹುಡುಗುತನ. ಹುಡುಗನಿಗೆ ಮದುವೆ ಮಾಡಿದರೆ ಸ್ವಲ್ಪ ಜವಾಬ್ದಾರಿ ಹೆಗಲೇರುತ್ತದೆಂದು ತಿಳಿದು ಹಿರಿಯರು ಅವನಿಗೆ ಮದುವೆ ಮಾಡಿದರ. ಆದರೆ ಅದರಿಂದ ಹೆಚ್ಚಿನದೇನೂ ಪ್ರಯೋಜನವಾಗಲಿಲ್ಲ. ಭೂಷಣ ಜವಾಬ್ದಾರಿಯ ಅರಿವಿಲ್ಲದೆ ಮೊದಲಿನಿಂತೆಯೆ ಅಣ್ಣನ ಮನೆಯಲ್ಲೆ ಹೆಂಡತಿಯೊಡನೆ ಉಳಿದುಬಿಟ್ಟ. ತಮ್ಮನ ಮೇಲಿನ ಮಮತೆಯಿಂದ ಚಿಂತಾಮಣಿ ಯಾವ ರೀತಿಯ ಆಕ್ಷೇಪವನ್ನೂ ಎತ್ತುತ್ತಿರಲಿಲ್ಲ. ಅವನ ಹೆಂಡತಿಗೆ  ಸಹ ಭೂಷಣನ ಮೇಲೆ ತುಂಬಾ ಮಮತೆ. ಆದರೆ ಅವನು ಇಷ್ಟು ದೊಡ್ಡವನಾದರೂ ಸ್ವಂತ ವ್ಯಕ್ತಿತ್ವ ಮತ್ತು ಜವಾಬ್ದಾರಿಗಳನ್ನು ಅರಿತುಕೊಳ್ಳಲಿಲ್ಲವಲ್ಲ  ಎಂಬ ಅಸಮಾಧಾನ ಇತ್ತು. ಈ ಭಾವನೆ ಅಂದು  ಊಟದ ಸಮಯದಲ್ಲಿ ಅವಳು ನಿಷ್ಠುರವಾಗಿ  ಮಾತನಾಡುವಂತೆ ಮಾಡಿತು.

ಆಶ್ರಯವನ್ನು ಆರಿಸಿ

ಮಡದಿಯನ್ನು ಮನೆಯಲ್ಲೆ ಬಿಟ್ಟು ಭೂಷಣ ಕೆಲಸವನ್ನು ಹುಡುಕುತ್ತಾ ಹೊರಟ. ತನ್ನ ಸಹೋದರರಂತೆ ಅವನೂ ಪ್ರತಿಭಾಶಾಲಿ, ಕವಿತಾಶಕ್ತಿ ಅವನ್ಲೂ ಪಿತ್ರಾರ್ಜಿತ ಸಂಪತ್ತೆಂಬಂತೆ ಮೂಡಿ ಬಂದಿತ್ತು.  ಆದರೆ ಅದರ ಕಡೆಗೆ ಅವನು ತೀವ್ರವಾದ ಗಮನವನ್ನು ಹರಿಸಿರಲಿಲ್ಲ.  ದಾರಿಯಲ್ಲಿ ಹೋಗುತ್ತಾ ಹೋಗುತ್ತಾ ಎಷ್ಟೋ ಪದ್ಯಗಳನ್ನು ರಚಿಸುತ್ತಾ ಜನರನ್ನು ರಂಜಿಸುತ್ತಾ ಹೊರಟ. ಅವನ ಪದ್ಯಗಳು ವೀರರಸಿಂದ ತುಂಬ ತುಳುಕುತ್ತಿದ್ದವು.

ಭೂಷಣನ ಕಾಲದಲ್ಲಿ ಉತ್ತರಭಾರತದಲ್ಲಿ ಮೊಗಲರ ಪ್ರಭಾವಿತ್ತು. ಔರಂಗಜೇಬ ಬಾದಶಹನಾಗಿದ್ದ. ಸಾಮ್ರಾಜ್ಯವನ್ನು ಪಡೆದುಕೊಳ್ಳುವ ದುರಾಸೆಯಿಂದ ಅವನು ಆ ವೇಳಗಾಗಲೇ  ತನ್ನ ತಂದೆಯನ್ನು ಸೆರೆಮನೆಯಲ್ಲಿಟ್ಟಿದ್ದ. ಅಣ್ಣತಮ್ಮಂದಿರಿಗೆ ವಿಶ್ವಾಸದ್ರೋಹ ಮಾಡಿದ್ದ.

ಆ ಕಾಲದಲ್ಲಿ ಕವಿಗಳಿಗೆ ರಾಜಾಶ್ರಯ ದೊರಕುತ್ತಿತ್ತು. ತಮಗೆ ಆಶ್ರಯ ನೀಡಿದ ರಾಜನ ಬಗ್ಗೆ ಕವಿಗಳು ಕಾವ್ಯ ಬರೆಯುತ್ತಿದ್ದರು. ಅವರ ಗುಣಗಾನ ಮಾಡುತ್ತಿದ್ದರು. ಆಶ್ರಯವಿಲ್ಲದೆ ಪಮಡಿತರು ಶೋಭಿಸುವುದಿಲ್ಲವೆಂದು ಜನಾಭಿಪ್ರಾಯವಾಗಿತ್ತು. ಭೂಷಣ ಸಹ  ರಾಜಾಶ್ರಯವನ್ನು ಆರಿಸಿ ಹೊರಟ. ಏನಾದರೂ ಮಾಡಿ ಹಣ  ಸಂಪಾದಿಸಬೇಕು,  ಹೆಸರು  ಗಳಿಸಬೇಕು, ತನ್ನ ಅತ್ತಿಗೆಯ ಕಣ್ಣ ಮುಂದೆ ಒಬ್ಬ ಯೋಗ್ಯಮನುಷ್ಯ ಎಂದೆನ್ನಿಸಿಕೊಳ್ಳಬೇಕು ಎಂಬುದು ಅವನ ಆಪೇಕ್ಷೆಯಾಗಿತ್ತು.

ಭೂಷಣನ ಕಾವ್ಯಪ್ರತಿಭೆಯನ್ನು ಮೊದಲು ರುದ್ರಶಾಹ ಎಂಬ ಅರಸ ಗುರುತಿಸಿದ. ಅವನು ಸೋಲಂಕಿ ವಂಶದ ಚಿತ್ರಕೂಟದ ಅರಸ ಹ್‌ಋದಯರಾಮ ಎಂಬಾತನ ಮತ. ರುದ್ರಶಾಹನ ಬಳಿ  ಕೆಲವು  ಕಾಲ ಕವಿಯಘಿದ್ದ ಭೂಷಣಿಗೆ ಅರಸ ’ಕವಿ ಭೂಷಣ’ ಎಂಬ ಪ್ರಶಸ್ತಿಯನ್ನು ೧೬೬೬ರಲ್ಲಿ ನೀಡಿದ. ಕವಿ ಈ ಅರಸನ ಆಶ್ರಯದಲ್ಲಿ ಬಹಳಷ್ಟು ಶೃಂಗಾರಕ್ಕೆ ಸಂಬಂಧಪಟ್ಟ ಪದ್ಯಗಳನ್ನು  ರಚಿಸಿದ. ಅಂದಿನ ರಾಜಾಸ್ಥಾನಗಳ ಸಂಸ್ಕೃತಿಗೆ ಈ ರಚನೆಗಳು ಅನುರೂಪವಾಗಿದ್ದವು. ಆದರೆ  ಭೂಷಣ ಕವಿ ಇಷ್ಟು ಸನ್ಮಾನ ಮತ್ತು ಬಿರುದುಗಳಿಗೇ ಸಂಗೋಷಗೊಳ್ಳಲಿಲ್ಲ. ಇನ್ನೂ  ಹೆಚ್ಚಿನ ಮನ್ನಣೆ ಹಾಗೂ ಹಣವನ್ನು ಗಳಿಸುವ ಉದ್ದೇಶದಿಂದ ಪ್ರತಿಷ್ಠಿತ  ಆಶ್ಯ ದಾತರನ್ನು ಹುಡುಕಿಕೊಂಡು ಹೊರಟ.

ಔರಂಗಜೇಬನ ಅಸ್ಥಾನದತ್ತ

ತನ್ನ ಆಸೆ ಆಕಾಂಕ್ಷೆಗಳಿಗೆ ಒತ್ತಾಸೆಗಾಘಿ ನಿಲ್ಲುವಂಥ ರಾಜರನ್ನು ಕವಿ ಆರಸಲಾರಂಭಿಸಿದ. ಅಣ್ಣ ಚೀಂತಾಮಣಿಯನ್ನು ಕಾಣಲೆಂದು ಆಗ್ರಾದಲ್ಲಿದ್ದ ಔರಂಗಜೇಬನ ದರ್ಬಾರಿನತ್ತ ಪ್ರಯಾಣ ಬೆಳೆಸಿದ. ೧೯೬ ರಲ್ಲಿ ಔರಂಗಜೇಬ ತನ್ನ ಐವತ್ತಣೆಯ  ಹುಟ್ಟುಹಬ್ಬವನ್ನು ವಿಜ್‌ಋಂಭಣೆಯಿಂದ ಆಚರಿಸಿದ. ಆಗ ಚಿಂತಾಮಣಿ ತನ್ನ ತಮ್ಮನನ್ನು  ಆ ಸಮಾರಂಭಕ್ಕೆ ಕರೆದುಕೊಂಡು ಹೋದ. ಆ ವೇಳೆಗೆ ಛತ್ರಪತಿ ಶಿವಾಜಿ ಸಹ ಔರಂಗಜೇಬನ ಆಹ್ವಾನದ ಮೇಲೆ ಆಗ್ರಾಕ್ಕೆ ಬಂದಿದ್ದ. ಶಿವಾಜಿಯ ಗುಣ ಪರಾಕ್ರಮಗಳನ್ನು ಕೇಳಿ ಭೂಷಣನಿಗೆ ಅವನ ಬಗ್ಗೆ ಅಪಾರವಾದ ಗೌರವ ಹುಟ್ಟಿತ್ತು.  ಕೇಳಿ   ಭಾರತದ ಉಳಿವಿಗಾಗಿ ಮೊಗಲರ ವಿರುದ್ಧ ಶಿವಾಜಿ  ಯಾವ ರೀತಿ ಹೋರಾಡುತ್ತಿದ್ದ ಎಂಬುದು ಅವನಿಗೆ ಗೊತ್ತಾಯಿತು. ಔರಂಗಜೇಬನು ಶಿವಾಜಿಯನ್ನು ತಾನು ಮರ್ಯಾದೆಯಿಂದ ಕಾಣುವುದಾಗಿಯೂ ಆತನಿಗೆ ತೊಂದರೆ ಮಾಡುವುದಿಲ್ಲವೆಂದು ಮಾತು ಕೊಟ್ಟಿದ್ದ. ಆದರೆ ಶಿವಾಜಿ ಅವನ ಆಸ್ಥಾನಕ್ಕೆ  ಬಂದಾಗ  ಎಲ್ಲರೆದುರಿಗೆ ಅವಮಾನ ಮಾಡಿದ್ದ, ಅನಂತರ ಅವನನ್ನು ಸೆರೆಯಲ್ಲಿಟ್ಟ. ಇದೆಲ್ಲ ತಿಳಿದು  ಕೇಳಿ ಭೂಷಣನಿಗೆ  ತುಂಬಾ ದುಃಖವಾಯಿತು. ಶಿವಾಜಿ ಸೆರೆಯಲ್ಲಿದ್ದ ಕಾರಣ ಭೂಷಣಿಗೆ ತುಂಬಾ ದುಃಖವಾಯಿತು. ಶಿವಾಜಿ ಸೆರೆಯಲ್ಲಿದ್ದ ಕಾರಣ ಭೂಷನಿಗೆ ಅವನೊಡನೆ ವೈಯಕ್ತಿಕವಾಗಿ  ಭೇಟಿಯಾಗಲು ಸಾಧ್ಯವಾಗಲಿಲ್ಲ.

“ಕೆಲವು ಪದ್ಯಗಳನ್ನು ಹೇಳುತ್ತಿಯ?”

ಔರಂಗಜೇಬನ ದರ್ಬಾರಿನ ರೀತಿನೀತಿಗಳು ಭೂಷಣನಿಗೆ ಹಿಡಿಸಲಿಲ್ಲ. ಆದರೆ ಕೆಲವು ದಿನಗಳಲ್ಲೇ ಶಿವಾಜಿ ಔರಂಗಜೇಬನ ಸೆರೆಯಿಂದ ಉಪಾಯವಾಗಿ ತಪ್ಪಿಸಿಕೊಂಡು ಹೋದ ವಿಷಯ ಅವನ ಕಿವಿಗಿ ಬಿತ್ತು. ಆಗ್ರಾದಿಂದ ಶಿವಾಜಿ ಮಥುರಗೆ ಪ್ರಯಾಣ ಮಾಡಿ ಅಲ್ಲಿಂದ ರಾಯಗಢಕ್ಕೆ ಬಂದ. ಶಿವಾಜಿಯನ್ನು ಹುಡುಕಿಕೊಂಡ ಭೂಷಣ ಸಹ ಸ್ವಲ್ಪ ದಿನಗಳ ಅನಂತರ ರಾಯಗಡಕ್ಕೆ ಹೊರಟ.

ಅಲ್ಲಿ ಒಂದು ಬಾವಿಯ ಬಳಿ ದಣಿವಾರಿಕೊಳ್ಳಲು ಭೂಷಣ ಕುಳಿತಿದ್ದ. ದಾರಿಯಲ್ಲಿ ಹೋಗುತ್ತಿದ್ದ ಸೈನಿಕರಲ್ಲಿ ಒಬ್ಬ ಯಾರೋ ದಾರಿಹೋಕ ಕುಳಿತಿರುವುದನ್ನು ನೋಡಿ  ತಾನೂ ಅವನ ಬಳಿ ಬಂದು ಕುಳಿತು.

“ಏನಪ್ಪಾ, ಎಲ್ಲಿಗೆ ಹೊರಟ್ಟಿದ್ದಿಯ?” ಸೈನಿಕ ಕೇಳಿದ.

“ಶಿವಾಜಿ ಮಹಾರಾಜರನ್ನು ನೋಡುವುದಕ್ಕೆ ಹೊರಟ್ಟಿದ್ದೇನೆ. ನೀನು ಅವರ ಬಳಿ ಕೆಲಸ ಮಾಡುತ್ತಿದ್ದೀಯಾ?” ಭೂಷಣ ಕೇಳಿದ.

ಹೌದು, ಅವನ ಬಳಿ ಏತಕ್ಕಾಗಿ ಬಂದಿದ್ದೀಯೆ?”

“ನಾನೊಬ್ಬ ಕವಿ. ಶಿವಾಜಿ ಮಹಾರಾಜರ ದರ್ಬಾರಿನಲ್ಲಿ ಕವಿತೆಯನ್ನು ಓದಲು ಬಂದಿದ್ದೇನೆ. ಮಹಾರಾಜರ ಬಗ್ಗೆ ನನಗೆ ಅಪಾರ ಗೌರ, ಭಕ್ತಿ ಉಂಟು.”

“ಸರಿ, ಹಾಗಾದರೆ ನನ್ನ ಮುಂದೆಯೂ ಕೆಲವು ಪದ್ಯಗಳನ್ನು ಹೇಳುತ್ತೀಯಾ?”

ಶಿವಾಜಿಯ ಆಸ್ಥಾನ

ಭೂಷಣ ಸೈನಿಕನನ್ನು ನಿರುತ್ಸಾಹಗೊಳಿಸಲಿಲ್ಲ. ಅವನ ಕಂಠದಿಂದ ಸುಶ್ರಾವ್ಯವಾಗಿ “ಇಂದ್ರ ಜಿಮಿ ಜಂಭ ಪರ್’ ಎಂಬ ಪದ್ಯ ಹೊರಬಂತು. ಆ ಪದ್ಯದ ಭಾವ ಹೀಗಿತ್ತು. “ಮಹಿಷಾಸುರನ ತಂದೆ ಜಂಭನನ್ನು ಕೊಂದ ಇಂದ್ರನಂತೆ, ಅಹಂಕಾರಿ ರಾವಣನ ಮೇಲೆ ಶ್ರೀರಾಮನಂತೆ, ನೀರಿಗೆ  ಬಡಬಾಗ್ನಿಯಂತೆ, ಮೋಡದ ಮೇಲೆ ಗಾಳಿಯಂತೆ, ಮನ್ಮಥನ ಮೇಲೆ ಈಶ್ವರನಂತೆ, ಕಾರ್ತವೀರ್ಯಾರ್ಜುನನ ಮೇಲೆ ಪರಶುರಾಮನಂತೆ, ಕಾಡಿನ ಮರಗಳ ಮೇಲೆ ಕಾಡ್ಗಿಚ್ಚಿನಂತೆ, ಜಿಂಕೆಗಳ ಹಿಂಡಿನ ಮೇಲೆ ಚಿರತೆಯಂತೆ, ಆನೆಗಳ ಹಿಂಡಿನ ಮೇಲೆ ಸಿಂಹದಂತೆ, ಕತ್ತಲೆಯ ಮೇಲೆ ಬೆಳಕಿನಂತೆ, ಕಂಸನ ಮೇಲೆ ಶ್ರೀ ಕೃಷ್ಣನಂತೆ, ಶತ್ರುಗಳ ಮೇಲೆ ಶಿವರಾಜನಾದ ಶಿವಾಜಿ ಶೋಭಿಸುತ್ತಿದ್ದಾನೆ.” ಸೈನಿಕನಿಗೆ ಅದನ್ನು ಕೇಳಿ ತುಂಬ ಆನಂದವಾಯಿತು. ಮತ್ತೆ ಮತ್ತೆ ಅದೇ ಪದ್ಯವನ್ನು ಅವನ ಬಾಯಲ್ಲಿ ಹಾಡಿಸಿ ಕೇಳಿದ. ಕಡೆಯಲ್ಲಿ ಸೈನಿಕ ಕವಿಗೆ ಒಂದು ಪತ್ರವನ್ನು ಕೊಟ್ಟು ಮಾರನೆಯ ದಿವಸ ಸಾಧ್ಯವಾದರೆ ರಾಜಸಭೆಯಲ್ಲಿ ತನ್ನನ್ನು ಭೇಟಿಮಾಡುವಂತೆ ಹೇಳಿದ.

ಅಲ್ಲಿಯ ಒಂದು ಧರ್ಮಛತ್ರದಲ್ಲಿ ತಂಗಿದ್ದು ಮಾರನೆಯ ದಿನ ಭೂಷಣ ರಾಜಸಭಗೆ ಹೊರಟ. ಸಭೆಯನ್ನು  ಪ್ರವೇಶಿಸುತ್ತಲೇ ಅಲ್ಲಿಯ ದೃಶ್ಯವನ್ನು ನೋಡಿ ದಂಗಾದ. ಹಿಂದಿನ ದಿನ ಸಿಕ್ಕಿದ್ದ ಸೈನಿಕನೇ ಸಿಂಹಾಸನದ ಮೇಲೆ ಕುಳಿತಿದ್ದ. ಭೂಷಣ ಸಭೆಗೆ ಕಾಲಿಡುತ್ತಿದ್ದಂತೆಯೇ ತಾನೇ ಎದ್ದುನಿಂತು ಅವನನ್ನು ಬರಮಾಡಿಕೊಂಡ. ಹಿಂದಿನ ದಿನ ತನಗೆ ಬಾವಿಯ ಬಳಿ ಸಿಕ್ಕಿದ್ದ ಸೈನಿಕನೇ ಮಹಾರಾಜ ಶಿವಾಜಿ ಎಂದು ತಿಳಿಲು ಭೂಷಣನಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.

’ಕವಿಕುಲ ಸಚಿವ’

ಭೂಷನ ರಾಜಸಭೆಯಲ್ಲಿ ತಾನು ರಚಿಸಿದ್ದ ಅನೇಕ ಪದ್ಯಗಳನ್ನು ಓದಿದ. ವೀರಾವೇಶದಿಂದ ಕೂಡಿದ್ದ ಅವನ ರಚನೆಗಳನ್ನು ಕೇಳಿ ಸಭಾಸದರೆಲ್ಲಾ ರೋಮಾಂಚಗೊಂಡರು. ಶಿವಾಜಿ ತುಂಬಾ ಸಂತೋಷದಿಂದ ಅವನನ್ನು  ತನ್ನ ಆಸ್ಥಾನ ಕವಿಯಾಗಿ ನೇಮಿಸಿಕೊಂಡ. ಭೂಷಣ ತಾನ ಕೃತಕೃತ್ಯನಾದೆನೆಂದು ಕೊಂಡ. ಶಿವಾಜಿಯ ಔದಾರ್ಯ, ವಿಶ್ವಾಸ, ಸಜ್ಜನಿಕೆ ಮುಂತಾದ ಸದ್ಗುಣಗಳು ಅವನಿಗೆ ತುಂಬಾ ಹಿಡಿಸಿದವು. ಭೂಷಣನ  ಪ್ರತಿಭೆಗೆ ಮೆಚ್ಚಿ ಶಿವಾಜಿ ಅವನನ್ನು ತನ್ನ ಆಸ್ಥಾನದಲ್ಲೇ ಕವಿಯಾಗಿ ಇಟ್ಟುಕೊಂಡ. ಸಾಕಷ್ಟು ಐಶ್ವರ್ಯವನ್ನೂ ಸ್ಥಾನಮಾನಗಳನ್ನು ನೀಡಿದ. ತಾನು ಹುಡುಕುತ್ತಿದ್ದ ಒಬ್ಬ ಚತುರ ಮತ್ತು  ಗುಣಗ್ರಾಹಿಯಾದ ಆಶ್ರಯದಾತ ಸಿಕ್ಕಿದ್ದು ಭೂಷಣನಿಗೆ ತುಮಬಾ ನೆಮ್ಮದಿಯನ್ನುಂಟುಮಾಡಿತು.

ಸ್ವಲ್ಪ ಕಾಲದಲ್ಲೇ ಭೂಷಣ ಶಿವಾಜಿಗೆ ತುಂಬಾ ಅಚ್ಚುಮೆಚ್ಚಿನವನಾದ. ಅವನನ್ನು ಶಿವಾಜಿ ತನ್ನ ಆಸ್ಥಾನದ ’ಕುವಿಕುಲ ಸಚಿವ’ನಾಗಿ ನೇಮಕ ಮಾಡಿದ. ಒಮ್ಮೆ ಏಕಾಂತದಲ್ಲಿ  ಕವಿ ಅರಸನಿಗೆ ತನ್ನ ಮನೆಯ ಪರಿಸ್ಥಿತಿಯನ್ನು ವಿವರಿಸಿ, ತಾನು ಕೈಗೊಂಡ ಪ್ರತಿಜ್ಞೆಯ ಬಗ್ಗೆ ನಿವೇದಿಸಿದ. ಅನಂತರ ಅರಸನಿಂದ ನಾಲ್ಕು ಆನೆಗಳನ್ನು ಬಳುವಳಿಯಾಗಿ ಪಡೆದು ಅವುಗಳ ಮೇಲೆ ಉಪ್ಪಿನ ಮೂಟೆಗಳನ್ನು ಹೇರಿಸಿ ಅತ್ತಿಗೆಗೆ ಕಳುಹಿಸಿಕೊಟ್ಟ. ಜತೆಗೆ ಗೌರವದಿಂದ ಕೂಡಿದ ಒಂದು ಪತ್ರವನ್ನು ಬರೆದು ಒಂದು ಲಕ್ಷ ರೂಪಾಯಿಗಳನ್ನು ಕಳುಹಿಸಿದ.

ಶಿವಾಜಿಯ ಆತ್ಮಗೌರವ, ಶೌರ್ಯ, ಔದಾರ್ಯ, ದೇಶ ಪ್ರೇಮ, ಧರ್ಮದ ಬಗ್ಗೆ ಒಲವು, ಇನ್ನೊಬ್ಬರನ್ನು ಗೌರವದಿಂದ ಕಾಣುವ ಪ್ರವೃತ್ತಿ ಇವೇ ಮುಂತಾದ ಸದ್ಗುಣಗಳು ಭೂಷಣನಿಗೆ ತುಂಬ ಮೆಚ್ಚಿಗೆಯಾದವು. ಆದ್ದರಿಂದ ಶಿವಾಜಿಯ ಜೀವನಚರಿತ್ರೆಯನ್ನು ಪದ್ಯರೂಪದಲ್ಲಿ ಬರೆಯಬೇಕೆಂದು ತೀರ್ಮಾಣಿಸಿದ. ತಾನು ಬರೆದ ’ಶಿವರಾಜ ಭೂಷಣ’ ಗ್ರಂಥವನ್ನು ಶಿವಾಜಿಗೆ ನಮ್ರತೆಯೊಡನೆ ಅರ್ಪಿಸಿದ.

ಶಿವಾಜಿಯೊಡನೆ ಮನಸ್ತಾಪ

ಭೂಷಣ ಮತ್ತು ಶಿವಾಜಿಯ ನಡುವೆ ವಿಶ್ವಾಸ ದಿನೇ ದಿನೇ ಹೆಚ್ಚುತ್ತಿರುವುದು ಆಸ್ಥಾನದಲ್ಲಿದ್ದ ಅನೇಕ ಮಂದಿ ಪಂಡಿತರಿಗೆ ಹಿಡಿಸಲಿಲ್ಲ. ಅವರು ಶಿವಾಜಿಗೆ ಅವನ ಮೇಲೆ ಚಾಡಿ ಹೇಳಲಾರಂಭಿಸಿದರು. ಶಿವಾಜಿ ಮೊದಮೊದಲು ಅವರ ಚಾಡಿ ಮಾತುಗಳನ್ನು ನಂಬಲಿಲ್ಲ. ಅದರ ಕಾಕತಾಳೀಯವಾಗಿ  ನಡೆದ ಕೆಲವು ಘಟನೆಗಳು ಶಿವಾಜಿಯ ಮನಸ್ಸಿನಲ್ಲಿ ಕಹಿ ಉಂಟುಮಾಡಿದವು. ಇದರಿಂದಾಗಿ ಶಿವಾಜಿ ಮತ್ತು ಭೂಷಣ ಕವಿಯ ಮಧ್ಯೆ ದಿನೇ ದಿನೇ ಮನಸ್ತಾಪ ಹೆಚ್ಚಾಗುತ್ತಾ ಹೋಯಿತು.

ಶಿವಾಜಿಯ ಪ್ರಾಬಲ್ಯ ದಿನೇದಿನೇ ಹೆಚ್ಚುತ್ತಿರುವುದನ್ನು ಕಂಡು ಔರಂಗಜೇಬನಿಗೆ ಕಳವಳವಾಗುತ್ತಿತ್ತು. ಹೇಗಾದರೂ ಮಾಡಿ ಅವನನ್ನು ಮಟ್ಟಹಾಕಲು ಬಾದಶಹ ಯೋಚಿಸುತ್ತಿದ್ದ. ತನ್ನ ದರ್ಬಾರಿನ ಕವಿ ಚಿಂತಾಮಣಿಯ ತಮ್ಮ ಭೂಷಣ ಶಿವಾಜಿಯ ಬಳಿ ಇರುವುದು ಅವನಿಗೆ ಗೊತ್ತಾಯಿತು. ಅವನು ಹೀಗೆ ಯೋಚನೆ ಮಾಡಿದ; ಭೂಷಣಿನಿಗೆ ಶಿವಾಜಿಯ  ಏರ್ಪಾಟುಗಳು, ಯೋಜನೆಗಳು ಇವು  ಎಷ್ಟೋ ತಿಳಿದಿರುತ್ತವೆ. ಚಿಂತಾಮಣಿಯ  ಸಹಾಯದಿಂದ ಭೂಷಣನನ್ನು ಬರಮಾಡಿಕೊಂಡು ಆ ಮುಖ್ಯವಾದ ರಹಸ್ಯಗಳನ್ನೆಲ್ಲ ತಾನು ತಿಳಿದುಕೊಂಡರೆ ಶಿವಾಜಿಯನ್ನು ಮುರಿಯುವುದು ಸುಲಭವಾಗುತ್ತದೆ. ಹೀಗೆ ಯೋಚಿಸಿದ ಔರಂಗಜೇಬ್‌ ಭೂಷಣನನ್ನು ತನ್ನ ದರ್ಬಾರಿಗೆ ಕರೆತರುವಂತೆ ಚಿಂತಾಮಣಿಯನ್ನು ಮತ್ತೆ ಮತ್ತೆ  ಒತ್ತಾಯಿಸಿದ. ಚಿಂತಾಮಣಿಯೂ ಬೇರೆ ದಾರಿ ಕಾಣದೆ ಬಾದಶಹನ ಆಸ್ಥಾನಕ್ಕೆ ಬರುವಂತೆ ತಮ್ಮನಿಗೆ ಒತ್ತಾಯ ಮಾಡಿದ. ಅಣ್ಣನ ಬಲವಂತಕ್ಕೆ ಕಟ್ಟುಬಿದ್ದು ಭೂಷಣ ಔರಂಗಜೇಬನ ಬಳಿಗೆ ಹೋಗಬೇಕಾಯಿತು. ಈ ಘಟನೆಯಿಂದಲೂ ಶಿವಾಜಿಯ ಮನಸ್ಸು ಭೂಷಣನ ಬಗೆಗೆ ಇನ್ನಷ್ಟು ಕೆಟ್ಟಿತು.

ಅಗ್ನಿಪರೀಕ್ಷೆ

ಔರಂಗಜೇಬನ ದರ್ಬಾರಿನಲ್ಲಿ ಭೂಷಣನಿಗೆ ಒಳ್ಳೆಯ ಸ್ವಾಗತ ದೊರೆಯಿತು. ಬಾದಶಹ ಭೂಷಣನನ್ನು ಚೆನ್ನಾಗಿ ಮಾತನಾಡಿಸಿದ. ಅನಂತರ ಕೆಲವು ಪದ್ಯಗಳನ್ನು ಒದಲು ಹೇಳಿದ. ಆಗ ಭೂಷಣ ಬಾದಶಹನನ್ನು ಈ ರೀತಿ ಪ್ರಾರ್ಥಿಸಿದ, “ಬಾದಶಹರು ಅನ್ಯಥಾ ಭಾವಿಸಬಾರದು. ಇದುವರೆಗೆ ಶೃಂಗಾರ ಪದ್ಯಗಳನ್ನು ಕೇಳಿ ಕೇಳಿ ಖಾವಂದರಿಗೆ ಜಡ್ಡು ಹಿಡಿದಿರಬಹುದು. ಅದನ್ನು ತೊಳೆದುಕೊಂಡರೆ ನನ್ನ ಕವಿತೆಯನ್ನು ಓದುತ್ತೇನೆ.”

ಭೂಷಣನ ದೃಢವಾದ ಮಾತುಗಳನ್ನು ಕೇಳಿ ಔರಂಗಜೇಬ ಬೆರಗಾದ. ಸಿಟ್ಟು ಸಹ ಬಂತು.

“ಇದೇನು, ನೀನು ಹೀಗೆ ಹೇಳುತ್ತಿದ್ದಿ?” ಬಾದಶಹ ಗರ್ಜಿಸಿದ.

“ಹುಜೂರರು ತಪ್ಪು ತಿಳಿಯಬಾರದು, ನನ್ನ ಪದ್ಯಗಳನ್ನು ಕೇಳಿದರೆ ಹುಜೂರರ ಕೈ ಮೇಲೆಯ ಮೇಲೇರುತ್ತದೆ.”

“ನನ್ನ ಕೈ ಮೀಸೆಯ ಮೇಲೆ ಹೋಗದಿದ್ದರೆ ನಿನ್ನ ತಲೆಯನ್ನು ದಂಡವಾಗಿ ತೆರೆಬೇಕಾಗುತ್ತದೆ.”

ಭೂಷಣ ಬಾದಶಹನ  ಷರತ್ತಿಗೆ ಒಪ್ಪಿದ. ಕವಿ ಪದ್ಯಗಳನ್ನು ಸಭೆ ರೋಮಾಂಚಗೊಳ್ಳುವಂತೆ ಧೀರ ಗಂಭೀರ ಸ್ವರದಲ್ಲಿ ಒದತೊಡಗಿದ. ಬಾದಶಹನಿಗೆ ಖುಷಿಯಾಯಿತು. ಏಳನೆಯ ಪದ್ಯ ಮುಗಿಯು ಹೊತ್ತಿಗೆ ಅವನ ಕೈ ಮೀಸೆಯ ಮೇಲೆರಿತು. ಪಂದ್ಯದಲ್ಲಿ ಗೆದ್ದ ಕವಿಯನ್ನು ಔರಂಗಜೇಬ್‌ ಸನ್ಮಾನಿಸಿದ.

ಮತ್ತೊಂದು ಪರೀಕ್ಷೆ

ಮಾರನೆಯ ದಿನ ದರ್ಬಾರಿನಲ್ಲಿ ಬಾದಶಹ ಎಲ್ಲ ಕವಿಗಳಿಗೆ “ನನ್ನ ದುರ್ಗಣಗಳನ್ನು ಕುರಿತು ಪದ್ಯ ರಚಿಸಿ ಓದಿ” ಎಂದು ಆಜ್ಞೆ ಮಾಡಿದ.

ನೆರೆದಿದ್ದ ಕವಿಗಳೆಲ್ಲ ಅಪ್ರತಿಭರಾದರು. ಔರಂಗಜೇಬನ್‌ ತುಂಬ ಸ್ವಾಭಿಮಾನಿ. ಅಲ್ಲದೆ ಕೋಪ ಬಂದರೆ ಯಾರಿಗೆ ಯಾವ ಶಿಕ್ಷೆಯನ್ನು ಕೊಡಲೂ ಹಿಂಜರಿಯದವನು-ಅಂತಹ ಬಾದಶಹನ ಮುಂದೆ ಅವನ ಕೆಟ್ಟಗುಣಗಳನ್ನು ಪಟ್ಟಿ ಮಾಡುವುದುದೇ !

ಯಾವ ಕವಿಯೂ ಬಾಯಿ ಬಿಡಲಿಲ್ಲ. ಎಷ್ಟೋ ವರ್ಷಗಳಿಂದ ಔರಂಗಜೇಬನ ಆಸ್ಥನದಲ್ಲಿದ್ದ ಕವಿಗಳು ಹೆದರಿ ಕುಳಿತರು.

ಭೂಷಣ ಎದ್ದು ನಿಂತು ಹೇಳಿದ: “ನಾನು ತಮ್ಮ ಅಪ್ಪನೆಯನ್ನು ಪಾಲಿಸುತ್ತೇನೆ”

ಔರಂಗಜೇಬನಿಗೆ ಸಂತೋಷವಾಯಿತು. “ಭೇಷ್‌”ಎಂದ.

“ಆದರೆ,” ಭೂಷಣ ಮುಂದುವರಿದ,”ನನ್ನ ಪ್ರಾಣಕ್ಕೆ ವಿಪತ್ತು ಬರಬಾರದು, ನನಗೆ ಏನೂ ಕೇಡು ಮಾಡುವುದಿಲ್ಲ ಎಂದು ತಾವು ಮಾತು ಕೊಡಬೇಕು.”

ಬಾದಶಹ ಒಪ್ಪಿದ.

ಭೂಷಣ ಒಂದು ಪದ್ಯ ರಚಿಸಿದ. ಆದರೆ ಭಾವ ಹೀಗಿತ್ತು. “ತಂದೆಯಾದ ಬಾದಶಹ ಷಹಜಾಹನನ್ನು ಸೆರೆಯಲ್ಲಿಟ್ಟು, ದೊಡ್ಡ ಅಣ್ಣ ದಾರಾನನ್ನು ಹಿಡಿಸಿ ಕೊಲ್ಲಿಸಿದ, ತನ್ನ ಒಡಹುಟ್ಟಿದ ಸಹೋದರರಿಗೆ ಮೋಸಮಾಡಿದ. ತನ್ನ ತಮ್ಮ ಮುರಾದನಿಗೆ ಏನೂ ತೊಂದರೆ ಮಡುವುದಿಲ್ಲ ಎಂದು ಆಣೆ ಇಟ್ಟು ಅವನ ಸಹಾಯ ಪಡೆದು ಅವನ ವಿರುದ್ದ ಪಿತೂರಿ ನಡೆಸಿ ಕಪಟ ನಾಟಕವಾಡಿದ. ಔರಂಗಜೇಬನ ಅನೀತಿಯನ್ನು ಕುರಿತು ಏನೆಂದು ಹೇಳಲಿ?”

ಭೂಷಣ  ಈ ರೀತಿ ಸ್ಪಷ್ಟವಾಗಿ ಸಭಿಕರೆಲ್ಲರ ಮುಮದೆ ತನ್ನನ್ನು ತೆಗಳಿದ್ದು ಕೇಳಿ ಔರಂಗಜೇಬನಿಗೆ ಕೋಪ ಉಕ್ಕಿ ಬಂತು.ಕೋಪದ ಬರದಲ್ಲಿ  ಅವನ ತಲೆ ಹಾರಿಸಿಬಿಡಲು ಆಜ್ಞೆ ಮಾಡಿದ. ಆದರೆ ಮೊದಲೇ ಪ್ರಾಣಭಿಕ್ಷೆಯ ಆಶ್ವಾಸನೆ ನೀಡಿದ್ದ ಬಗ್ಗೆ ಸಭಿಕರು ಮತ್ತು ಅಧಿಕಾರಿಗಳು ನಿವೇದಿಸಿ ಕೊಂಡರು. ಭೂಷಣನ ಪ್ರಾಣ ಉಳಿಯಿತು.

ಸವಾಲು

ಅದೇ ದಿನ ಬಾದಶಹ ಮಸೀದಿಗೆ ಹೋಗಿ ನಮಾಜು ಮಾಡಿ ಹಿಂದಿರುಗುತ್ತಿದ್ದ. ದಾರಿಯಲ್ಲಿ ಭೂಷಣ ಎದುರಾದ. ಆಗ ಕವಿಯ ಬಾಯಿಂದ ಹೊರಹೊಮ್ಮಿಂದ ಪದ್ಯದ ಭಾವ  ಹೀಗಿತ್ತು. “ಕೈಯಲ್ಲಿ  ಮಾಲೆಯನ್ನು ಹಿಡಿದು ಬೆಳಗ್ಗೆ ನಮಾಜು ಮಾಡಿದರೆ ಮನಸ್ಸಿನ ಕಪಟ ದೂರವಾಗುತ್ತದೆಯೇ? ಮುದಿ ತಂದೆಯ ರಾಜ್ಯವನ್ನು  ಕಿತ್ತುಕೊಂಡು ಅವನನ್ನು  ಕೊಂದು ಆಗ್ರಾಕ್ಕೆ ಹೋಗಿ ಏನು ಮಾಡಿದರೆ ತಾನೆ ಪ್ರಯೋಜನ? ಶೂಜಾನ ವಿರುದ್ಧ ಹಲವು ತಂತ್ರಗಳನ್ನು ನಡೆಸಿ ಮುರಾದನನ್ನು ಕೊಂದು ಹೀಗೆ ಅನೇಕ ಬಂಧು-ಬಾಂಧವರನ್ನು ಸ್ವಾರ್ಥಕ್ಕಾಗಿಯೇ ಕೊಂದುಹಾಕಿ ಈಗ ಸಾಮ್ರಾಟನಾಗಿ ಸತ್ಯವಂತನಾಗಿರುವಂತೆ ನಟಿಸುವುದು ನೂರಾರು ಇಲಿಗಳನ್ನು ಕೊಂದು          ತಿಂದ ಬೆಕ್ಕು ತಪಸ್ಸಿಗೆ ಕುಳಿತಂತೆ ಕಾಣುತ್ತದೆ.”

ಶಿವಾಜಿಯ ಆಸ್ಥಾನದಲ್ಲಿ ಭೂಷಣ

ಈ ಮಾತುಗಳನ್ನು ಕೇಳಿ ಬಾದಶಹ ಕೆಂಡವಾದ. ಆದೆ ಕವಿ ಅವನ ಕಾಪಿನ ಭಟರಿಂದ ಹೇಗೋ ತಪ್ಪಿಸಿಕೊಂಡು ಹೊರಟ.

ಭೂಷಣನ ಕಾಲ, ಕತ್ತಿಯನ್ನು ಕೈಯಲ್ಲಿ  ಹಿಡಿದ ಎದುರು-ಬದುರಿಗೆ ನಿಂತು ಹೋರಾಡುವ ಕಾಲವಾಗಿತ್ತು. ಸ್ವಾಮಿಭಕ್ತಿ, ನಿಷ್ಠೆ, ಸತ್ಯವಂತಿಕೆಗಳಿಗಾಗಿ ಸಾಯಲು ಹಿಂದು ಮುಂದು ನೋಡದ ಕಾಲವಾಗಿತ್ತು. ಹಲ್ಲಿನಲ್ಲಿ ಕತ್ತಿಯನ್ನು ಕಚ್ಚಿಕೊಂಡು ಕತ್ತಲೆಯಲ್ಲಿ ಹಗ್ಗದ ಮೂಲಕ ದುರ್ಗಮವಾದ ಕೋಟೆಗಳನ್ನು ಹತ್ತುವ ಕಾಲವಗಿತ್ತು. ಅಗತ್ಯಬಿದ್ದಲ್ಲಿ ಒಂದು ಕೈಯಲ್ಲಿ  ಕತ್ತಿಯನ್ನು ಹಿಡಿದೇ ಕಾವ್ಯ ಓದುವ ಕಾಲವಾಗಿತ್ತು.

ಮತ್ತೆ ಶಿವಾಜಿಯ ಬಳಿಗೆ

ಔರಂಗಜೇಬನ ದರ್ಭಾರಿನಲ್ಲಿ ನಡೆದ ಘಟನೆಗಳ ವಿವರಗಳ ಶಿವಾಜಿಗೆ ತನ್ನ ಬೇಹುಗಾರರಿಂದ ದೊರೆಯಿತು. ಭೂಷಣನ ಬಗ್ಗೆ ತಾನು ಸ್ವಲ್ಪ ಕಟುವಾಗಿ ವರ್ತಿಸಿದ್ದು ತಪ್ಪೆನಿಸಿತು. ಕೆಲವು ಸಲ ಅವನು ಭೂಷಣನ ಕಾವ್ಯದ ಬಗ್ಗೆ ಅಸಡ್ಡ ತೋರಿಸಿದ. ಕವಿಯನ್ನು ಉದಾಸೀನದಿಂದ ನೋಡುತ್ತಿದ್ದ. ತನ್ನ ಆಸ್ಥಾನದ ಕೆಲವು ಬ್ರಾಹ್ಮಣರನ್ನು  ಸುಧಾಮನಿಗೂ ಭೂಷಣನನ್ನು ಭೃಗುವಿಗೂ ಹೋಲಿಸಿದ್ದ. (ಭೃಗು ತ್ರಿಮೂರ್ತಿಗಳನ್ನು ಪರೀಕ್ಷಿಸುವುದಕ್ಕೆ ಹೋಗಿದ್ದಾಗ ನಾರಾಯಣನ ಎದೆಗೇ ಒದ್ದಿದ್ದ). ಭೂಷಣನೂ ಅರಸನಿಗೆ ತನ್ನ ನಿಷ್ಠೆಯನ್ನು ಹೇಗೆ ತೋರುವುದೆಂದು ತುಂಬ ಚಿಂತಾಕ್ರಾಂತನಾಗಿದ್ದ. ತಾನು ಯಾವ ತಪ್ಪು ಮಾಡದೆ ತಪ್ಪಿತಸ್ಥ ಎಂದು ಒಪ್ಪಿಕೊಳ್ಳಲು ಅವನು ಸಿದ್ಧನಿರಲಿಲ್ಲ.

ಔರಂಗಜೇಬನ ದರ್ಬಾರಿನಲ್ಲಿ ನಡೆದ ಘಟನೆಯಿದ ಶಿವಜಿಯ ಮನಸ್ಸು ತಿಳಿಯಾಯಿತು. ತಾನೇ ಮತ್ತೆ ದೂತರನ್ನು ಅಟ್ಟಿ ಆಹ್ವಾನ ನೀಡಿ ಭೂಷಣನನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡ, ಭೂಷಣನಿಗೆ ಶಿವಾಜಿಯ ಆಶ್ರಯ ಮತ್ತೆ ದೊರತದ್ದಕ್ಕೆ ಅಪಾರ ಆನಂದವಾಯಿತು.

ಸಂಭಾಜಿ

೧೬೮೦ನೇ ಇಸವಿಯಲ್ಲಿ ಶಿವಾಜಿ ರೋಗಪೀಡಿತನಾಗಿ ಸಾವನ್ನಪ್ಪಿದ. ಶಿವಾಜಿ ಬದುಕಿರುವವರೆಗೆ ಭೂಷಣನಿಗೆ ಯಾವ ಯೋಚನೆಯೂ ಇರಲಿಲ್ಲ. ಅವನು ಸತ್ತ ನಂತರ ಅವನ ಮಗ ಸಂಭಾಜಿ ಗದ್ದುಗೆಯನ್ನೇರಿದ. ಸಂಭಾಜೀಯ ರಾಜ್ಯಭಾರ ಒಂಭತ್ತು ವರ್ಷಗಳ ಕಾಲ ನಡೆಯಿತು. ಆದರೆ ಭೂಷಣನಿಗೂ ಅವನಿಗೂ ಹೊಂದಾಣಿಕೆ ಆಗಲಿಲ್ಲ. ಕವಿಯ ಆದರ್ಶಗಳಲ್ಲಿ  ಮತ್ತು ರಾಜನ ವಿಚಾರಗಳಲ್ಲಿ  ಒಮ್ಮತವಿರಲಿಲ್ಲ. ಕವಿ ವೀರರಸದಿಂದ ಕೂಡಿದ ರಚನೆಗಳನ್ನು ಮಾಡಲು ಬಯಸಿದರೆ ರಾಜ ಶೃಂಗಾರ ವಿಷಯದ ಕವಿತೆಗಳನ್ನು ಇಷ್ಟಪಡುತ್ತಿದ್ದ.

ಇಷ್ಟೇ ಅಲ್ಲದೆ ಪ್ರಯಾಗದಿಂದ ಸಂಭಾಜಿಯ ಆಸ್ಥಾನಕ್ಕೆ ಕಲಶ ಎಂಬ ಕವಿ ಬಂದು ನೆಲೆಸಿದ್ದ. ಇವನ ಪ್ರಭಾವ ಸಂಭಾಜಿಯ ಮೇಲೆ ಬಹಳವಾಗಿತ್ತು. ಸಂಭಾಜಿ ಭೂಣನನ್ನು ಅಲಕ್ಷಿಸಿ ಕವಿ ಕಲಶನನ್ನು ಆಸ್ಥಾನ ಕವಿಯನ್ನಾಗಿ  ಮಾಡಿ ಬಿರುದುಬಾವಲಿಗಳನ್ನು ನೀಡಿದ. ಇದರಿಂದ ಭೂಷಣನ  ಮನಸ್ಸು ತುಂಬಾ ರೋಸಿಹೋಯಿತು. ಜೊತೆಗೆ ಇದು ಅವನ ಆತ್ಮಗೌರವದ ಪ್ರಶ್ನೆಯೂ ಅದ್ದರಿಂದ ಅವನು ಆಸ್ಥನವನ್ನು ಬಿಟ್ಟು ಹೊರಟ. ಸಂಭಾಜಿ ರಾಜನಾಗಿರುವವರೆಗೆ ಮತ್ತೆ ಮಹಾರಾಷ್ಟ್ರದ ಕಡೆಗೆ ತಲೆಹಾಕಲಿಲ್ಲ

ಛತ್ರಸಾಲ

ಶಿವಾಜಿಯನ್ನು ಬಿಟ್ಟರೆ ಭೂಷಣನಿಗೆ ಹೆಚ್ಚು ಆಶ್ರಯ ಕೊಟ್ಟವನು ಬುಂದೇಲಖಂಡದ ಛತ್ರಸಾಲ. ಛತ್ರಸಾಲ ಧೀರ, ವೀರ, ಸಾಹಸಿ ಹಾಗೂ ದೇಶಭಕ್ತನಾಗಿದ್ದ. ಅವನು ಶಿವಾಜಿಯ ಆದರ್ಶ, ಸ್ವಾಭಿಮಾನ ಮತ್ತು ಆತ್ಮಗೌರವ ಮುಂತಾದ ಗುಣಗಳಿಂದ ಪ್ರಭಾವಗೊಂಡಿದ್ದ. ಧಾರ್ಮಿಕನಾಗಿ ಉದಾರಿಯಾಗಿದ್ದ.

ಶಿವಾಜಿಯ ಆಸ್ಥಾನದಿಂದ ತನ್ನ ಊರಿಗೆ ಹೋಗಬೇಕಾದಾಗ ಭೂಷಣ ಸಾಮಾನ್ಯವಾಗಿ ತಪ್ಪದೆ ಛತ್ರ ಸಾಲನ ಆಸ್ಥಾನಕ್ಕೆ ಭೇಟಿ ನೀಡುತ್ತಿದ್ದ. ಒಂದು ಬಾರಿ ಭೂಷಣ ಛತ್ರಸಾಲನ ಬಳಿಗೆ ಹೋಗಿದ್ದಾಗ ಅರಸ ಪಲ್ಲಕ್ಕಿಯಲ್ಲಿ ಅವನನ್ನು ಕರೆಸಿಕೊಂಡ ತಾನು ಸಹ ಸ್ವಲ್ಪ ಕಾಲ ಪಲ್ಲಕ್ಕಿಗೆ ಭುಜಕೊಟ್ಟನಂತೆ. ಕವಿಯ ಬಗ್ಗೆ ಛತ್ರಸಾಲನಿಗೆ ಎಷ್ಟು ಆದರ ಗೌರವಗಳಿದ್ದವು ಎಂಬುದು ಇದರಿಂದ ಅರ್ಥವಾಗುತ್ತದೆ.

ಸಾಹೂಜಿ

೧೭೦೭ರಲ್ಲಿ ಸಂಭಾಜಿಯ ಮಗ ಸಾಹೂ ಸಿಂಹಾಸನ ಏರಿದ. ಭೂಷಣ ೧೭೦೮ ರಲ್ಲಿ ಮತ್ತು ೧೭೧೫ ರಲ್ಲಿ ಇನ್ನೊಮ್ಮೆ ಸಾಹೂಜಿಯ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದ. ತನ್ನ ತಾತನ ಆಸ್ಥಾನಕವಿಯನ್ನು ಸಹೂ ತುಂಬಾ ಆದರ ಗೌರವಗಳಿಂದ ಕಂಡ. ಆತನನ್ನು ಕೆಲವು ಕಾಲ ತನ್ನೊಡನೆ ಇರಿಸಿಕೊಂಡ ಉಚಿತ ಸನ್ಮಾನಗಳೊಡನೆ ಕಳುಹಿಸಿಕೊಟ್ಟ.

೧೭೨೭ರಲ್ಲಿ ಮಹಮ್ಮದ್ ಖಾನ್‌ಬಂಗಷ್‌ ಎಂಬಾತ ಛತ್ರಸಾಲನ ಮೇಲೆ ಆಕ್ರಮಣ ನಡೆಸಲು ಮುಂದಾದ. ಆಗ ಪೇಶ್ವೆ ಬಜೀರಾಯ ಮರಾಠರ ನಾಯಕನಾಗಿದ್ದ. ಅವನ ನೇತೃತ್ವದಲ್ಲಿ ಮರಾಠರು ಪ್ರಬಲರಾಗುತ್ತಿದ್ದರು. ಛತ್ರಸಾಲ ತನ್ನ ಎದುರಾಳಿಯೊಡನೆ ಹೋರಾಡಲು ಬೆಂಬಲ ನಿಡುವಂತೆ ಬಾಜೀರಾಯನನ್ನು ಕೋರಿದ. ಛತ್ರಸಾಲನ ಪತ್ರವನ್ನು ಭೂಷಣನೇ ಬಾಜೀರಾಯನ ಆಸ್ಥಾನಕ್ಕೆ ತೆಗೆದುಕೊಂಡು ಹೋದ. ಬಾಜೀರಾಯ ಭೂಷಣನನ್ನು ವಿಶ್ವಾಸ ಗೌರವಾದರಗಳಿಂದ ನಡೆಸಿಕೊಂಡ. ಕವಿಯ ಮಾತುಗಳಿಂದ  ಸಂತೋಷಗೊಂಡು ಛತ್ರಸಾಲನ ಕೊರಿಕೆಗೆ ಸಮ್ಮತಿ ನೀಡಿದ. ಇಬ್ಬರ ಒಟ್ಟು ಪ್ರಯತ್ನದಿಂದ  ಬಂಗಷ್‌ ಯುದ್ಧದಲ್ಲಿ ಸೋತುಹೋದ.

ಕುಮಾವೂಂ ರಾಜನ ಬಳಿಗೆ

ಶಿವಜಿ ಮೃತನಾದ ಮೇಲೆ ತನಗೆ ಸರಿಯಾದ ಆಶ್ರಯದಾತರನ್ನು ಹುಡುಕುತ್ತಾ ಕವಿ ಅನೇಕ ರಾಜರ ಆಸ್ಥಾನಕ್ಕೆ  ಹೋಗಿರಲೂ ಸಾಧ್ಯ. ಆಗ ಬೂಷಣನ ಕುಮಾವೂಂ ರಾಜನಾದ ಜ್ಞಾನಚಂದ್ರನ ಆಸ್ಥಾನಕ್ಕೆ ಸಹ ಭೇಟಿ ನಿಡಿದದ. ಅಲ್ಲಿಯೂ ಕವಿತೆಯನ್ನು ರಚಿಸಿದ್ದ.

ಜ್ಞಾನಚಂದ್ರನಿಗೆ ಶಿವಾಜಿಯ ಆಸ್ಥಾನದಲ್ಲಿದ್ದ ಭೂಷಣ ಕವಿಯ ಬಗ್ಗೆ ಗೊತ್ತಿತ್ತು. ಶಿವಾಜಿ ಕವಿಗೆ ಲಕ್ಷಾಂತರ ರೂಪಾಯಿಗಳನ್ನು ಬಳುವಳಿಗಳನ್ನು ನೀಡಿರುವನೆಂದು ಅವನು ಕೇಳಿದ್ದ. ಈಗ ಕವಿ ತನ್ನ ಆಸ್ಥಾನಕ್ಕೆ ಬಂದು ಹೊಗಳಿ ಕವಿತೆ ರಚಿಸಿದ್ದು ಅವನಿಗೆ ಆಶ್ಚರ್ಯ ಉಂಟುಮಾಡಿತು. ಶಿವಾಜಿ ಐಶ್ವರ್ಯ ನೀಡಿದ್ದು ಸುಳ್ಳೇನೊ ಎಂದು ಭಾವಿಸಿ ಜ್ಞಾನಚಂದ್ರ ಕವಿಗೆ ಆನೆ ಕುದುರೆ ಧನಧಾನ್ಯಗಳನ್ನು ಬಳುವಳಿಯಾಗಿ ನೀಡಲು ಹೋದ. ಅಹಂಭಾವದಿಂದ ಕೊಟ್ಟಿದ್ದು ತನಗೆ ಬೇಡವೆಂದು ಭೂಷಣ ತಿರಸ್ಕರಿಸಿದ. ರಾಜ ಎಷ್ಟೇ ಕೇಳಿಕೊಂಡರು ಅವನ ಆಸ್ಥಾನದಲ್ಲಿ ನಿಲ್ಲದೆ ಹೊರಟುಹೋದ.

ಭೂಷಣನ  ತಮ್ಮ ಮತಿರಾಮ ಬೂಂದಿಯ ರಾಜರಾವ್ಬುದ್ದ ಸಿಂಹ ಹಾಡಾ ಎಂಬಾತನ ಆಸ್ಥಾನದಲ್ಲಿದ್ದ. ಮತಿರಾಮ ಬೂಂದಿಗೆ ಬರಲು ಅನೇಕ ಬಾರಿ ಭೂಷಣನ್ನು ಆಹ್ವಾನಿಸಿದ್ದ. ಕಡೆಗೆ ತಮ್ಮನ ಬಲವಂತಕ್ಕೆ ಕಟ್ಟುಬಿದ್ದು ಭೂಷಣ  ಸುಮಾರು ೧೭೧೦ರಲ್ಲಿ ಬೂಂದಿಯ ಆಸ್ಥಾನಕ್ಕೆ ಬಂದ. ಬುದ್ಧ ಸಿಂಹನ ಮೇಲೆ ಒಂದೆರಡು ಕವಿತೆಗಳನ್ನು ರಚಿಸಿದ. ಆದರೆ ಬಹಳ ದಿನ ಬೂಂದಿಯಲ್ಲಿರಲು ಅವನ ಮನಸ್ಸಿಗೆ ಒಗ್ಗಲಿಲ್ಲ. ಆದ್ದರಿಂದ ಅಲ್ಲೂ ನಿಲ್ಲದೆ ಮುಂದೆ ನಡೆದ.

ಭೂಷಣನ ರಚನೆಗಳಲ್ಲಿ ಅನೇಕ ಐತಿಹಾಸಿಕದ ವ್ಯಕ್ತಿಗಳ ಬಗ್ಗೆ ವರ್ಣನೆಗಳು ಸಿಗುತ್ತವೆ. ಶಿವಾಜಿಯೇ ಅಲ್ಲದೆ ಸುಮಾರು ಹನ್ನೆರಡರಿಂದ ಹದಿನಾರು ಮಂದಿ ಅವನಿಗೆ ಆಶ್ರಯ ಕೊಟ್ಟಿದ್ದರೆಂದು ಕೆಲವರು ವಿದ್ವಾಂಸರು  ಅಭಿಪ್ರಾಯಪಡುತ್ತಾರೆ. ಆದರೆ ಇವರೆಲ್ಲಾ ಕವಿಗೆ ಆಶ್ರಯದಾತರಾಗಿದ್ದರೆಂದು ಹೇಳುವುದು ಕಷ್ಟ.

ಚಾರಿತ್ರಿಕ  ದೃಷ್ಟಿಯಿಂದ  ಭೂಷಣನ ಕಡೆಯ ರಚನೆಗಳು ಭಗವಂತರಾಯ ಖೀಚಿ ಎಂಬ ಅರಸನ ಬಗ್ಗೆ  ಬಗ್ಗೆ ದೊರಕುತ್ತವೆ. ಈತ ೧೭೩೫ರಲ್ಲಿ ಯುದ್ಧ ಮಾಡುತ್ತಲೇ ಮರಣಕ್ಕೀಡಾದ. ಆ ವೇಳೆಗಾಗಲೇ ಭೂಷಣನಿಗೂ ೯೫ ವರ್ಷಗಳಾಗಿದ್ದವು.  ಅವನೂ ಸುಮಾರು ಅದೇ ವರ್ಷ ಸ್ವರ್ಗಸ್ಥನಾಗಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಭೂಷಣನ ಕೃತಿಗಳು

ಸಾಮಾನ್ಯವಾಗಿ ಪ್ರಾಚೀನ ಕವಿಗಳು ತಮ್ಮ ಸ್ವಂತ ವಿಷಯಗಳನ್ನು ತಮ್ಮ ಕೃತಿಗಳಲ್ಲಿ ಹೇಳಿಕೊಳ್ಳುತ್ತಿರಲಿಲ್ಲ. ಎಲೆಮೆರೆಯ  ಕಾಯಿಯಂತೆ ತಮ್ಮ ಪ್ರತಿಭೆಯನ್ನು ಜನತೆಗೆ ಧಾರೆ ಎರೆಯುತ್ತಿದ್ದರು. ಭೂಷಣನಿಗೂ ಈ ಮಾತು ಅನ್ವಯಿಸುತ್ತದೆ. ಆತನು ಎಷ್ಟು ಕೃತಿಗಳನ್ನು  ರಚಿಸಿದ ಎಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.

ಶಿವರಾಜಭೂಷಣ, ಶಿವಾಬಾವನಿ, ಛತ್ರಸಾಲದಶಕ ಎಂಬ ಮೂರು ಕೃತಿಗಳಿಗೆ ನಮಗೆ ದೊರೆಯುತ್ತವೆ. ಇವೇ ಅಲ್ಲದೆ ಭೂಷಣ ಹಜಾರಾ ಎಂಬ ಕೃತಿಗಳನ್ನು ಇದುವರೆಗೂ ದೊರೆತಿಲ್ಲ. ಇವೇ ಅಲ್ಲದೆ ಭೂಷಣನ ರಚನೆಗಳನ್ನೆಲ್ಲಾ ಒಂದೆಡೆ ಸಂಪಾದಿಸಿ ’ಭೂಷಣ ಗ್ರಂಥಾವಳಿ’ ಎಂಬ ಹೆಸರಿನಲ್ಲಿ ಪ್ರಕಟಿಸುವ ಕೆಲಸವನ್ನು ಅನೇಕ ವಿದ್ವಾಂಸರು ಮಾಡಿದ್ದಾರೆ.

ಶಿವರಾಜ ಭೂಷಣ

ಭೂಷಣನ ಹೆಸರನ್ನು ಚಿರಸ್ಥಾಯಿಯಾಗಿ ಮಾಡುವ ಕೃತಿ ಇದೆ, ಛತ್ರಪತಿ ಶಿವಾಜಿಯ ಸದ್ಗುಣಗಳು ಮತ್ತು ಸಾಹಸ ಪರಾಕ್ರಮಗಳಿಂದ ಅತೀವವಾಗಿ ಸಂತೋಷಗೊಂಡು ಕವಿ. ಈ ಕಾವ್ಯವನ್ನು ತನ್ನ ಆಶ್ರಯದಾತನ ಹೆಸರಿನಲ್ಲಿ ರಚಿಸಿದ. ಇದನ್ನು  ಅವನಿಗೆ ಅರ್ಪಿಸಿದ. ಈ ಕೃತಿಯಲ್ಲಿ ಶಿವಾಜಿಯ ಜೀವನದ ಎಲ್ಲ ಮುಖಗಳು ದೊರಕುತ್ತವೆ. ಅವನ ಬಾಹುಬಲ, ಅಕ್ರೋಶ, ಅನುಕಂಪ, ಶಕ್ತಿ, ಯುದ್ಧನೀತಿ, ಶತ್ರುಗಳ ಮೇಲೆ ದಾಳಿ, ಸೈನ್ಯವ್ಯವಸ್ಥೆ, ವೈಭವ, ರಾಜ್ಯವಿಸ್ತಾರ ಮೊದಲಾದ ವರ್ಣನೆಗಳು ಸಿಗುತ್ತವೆ. ಇಷ್ಟೇ ಅಲ್ಲದೆ ಕವಿ ಶಿವಾಜಿಯನ್ನು ಅವತಾರಪುರಷನ ಮಟ್ಟಕ್ಕೇರಿಸಿದ್ದಾರೆ.

ಶಿವಾಬಾವನಿ ಮತ್ತು ಛತ್ರಸಾಲದಶಕ

’ಶಿವರಾಜಭೂಷಣ’ವನ್ನು ಬಿಟ್ಟರೆ ಭೂಷಣ ಕವಿ ತನ್ನ ಬೇರೆ ರಚನೆಗಳಿಗೆ ಯಾವ ಶೀರ್ಷಿಕೆಯನ್ನೂ ಕೊಡಲಿಲ್ಲ. ಆ ಕಾಲದ ಕಾವ್ಯರಚನೆಯ ಪದ್ದತಿಗೆ ಅನುಗುಣವಾಗಿ ಮುಕ್ತಕಗಳನ್ನು ಅಂದರೆ ಸಣ್ಣ ಸಣ್ಣ ಸ್ವತಂತ್ರ ಪದ್ಯಗಳನ್ನು ರಚಿಸಿದ, ಈಚೆಗೆ ಕೆಲವು ವಿದ್ವಾಂಸರು ಅವನ ಕೆಲವು ಪದ್ಯಗಳನ್ನು ಆಯ್ದು ’ಶಿವಾಬಾವನಿ’ ಮತ್ತು ’ಛತ್ರಸಾಲದಶಕ’ ಎಂಬ ಹೆಸರಿನಲ್ಲಿ  ಸಂಕಲಿಸಿ ಪ್ರಕಟಿಸಿದ್ದಾರೆ.

‘’ಭಾವನ್‌’ ’ಎಂದರೆ ಹಿಂದಿಯಲ್ಲಿ ೫೨ ಎಂದರ್ಥ. ಭೂಷಣನ ಬದುಕಿನಲ್ಲಿ ಈ ಸಂಖ್ಯೆಗೆ ತುಮಬಾ ಮಹತ್ವವಿತ್ತು. ಅವನಿಗೆ ಶಿವಾಜಿ ೫೨ ಲಕ್ಷ ರೂಪಾಯಿ, ೫೨ ಆನೆಗಳು ಮತ್ತು ೫೨ ಹಳ್ಳಿಗಳನ್ನು ಕೊಡುಗೆಯಾಗಿ ನೀಡಿದ್ದ ಎಂಬ  ಕಥೆಯೊಂದಿದೆ. ಈ ಆಧಾರದ ಮೇಲೆ ಶಿವಾಜಿಯನ್ನು ಕುರಿತ ೫೨ ಪದ್ಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಶಿವಾಜಿಯನ್ನು ಯುದ್ಧವೀರ, ಧರ್ಮವೀರ, ಮೊದಲಾಗಿ ವರ್ಣಿಸಲಾಗಿದೆ. ಔರಂಗಜೇಬನ್ ಮತ್ತು ಶಿವಾಜಿಯನ್ನು ಹೋಲಿಸಿ ಶಿವಜಿ ಎಷ್ಟು ಶ್ರೇಷ್ಠನೆಂದು ಬಣ್ಣಿಸಲಾಗಿದೆ. ಅವನ ಶೌರ್ಯ, ಸಾಹಸಗಳು, ಯುದ್ಧಕೌಶಲ, ಔದಾರ್ಯ ಇತ್ಯಾದಿ ಗುಣಗಳ ವರ್ಣನೆ ಇದೆ.

ಛತ್ರಸಾಲ ಪಲ್ಲಕ್ಕಿಗೆ ಹೆಗಲು ಕೊಟ್ಟ

ಭಾಷಾಶೈಲಿ

ಭಾಷೆಯ ಬಳಕೆಯ ಮೇಲೆ ಭೂಷಣಿಗೆ ತುಂಬ ಹತೋಟಿಯಿತ್ತು. ಭಾವವನ್ನು ಸ್ಫುಟವಾಗಿ ಅಭಿವ್ಯಕ್ತಿಗೊಳಿಸಿ ಹತೋಟಿಯಿತ್ತು. ಭಾವವನ್ನು ಸ್ಫುಟವಾಗಿ ಅಭಿವ್ಯಕ್ತಗೊಳಿಸಿ ಓದುಗನ ಮೇಲೆ ಒಟ್ಟಾರೆ ಪ್ರಭಾವ ಬಿರುವಂತೆ ಮಾಡುವ ಸಾಧನ ಭಾಷೆಯೆಂದು ಕವಿ ನಂಬಿದ್ದ. ಹಾಗಾಗಿ ಓಜಸ್ಸಿನಿಂದ ಕೂಡಿದ ತನ್ನ ಭಾವನೆಗಳ ಅರಿವಿಗೆ ಅನುಗುಣವಾಗಿ ಭಾಷೆಯನ್ನು ಬಳಸಿದ. ಸಂಸ್ಕೃತ, ಅರಬ್ಬಿ, ಪಾರಸಿ, ಅಪಭ್ರಂಶ, ಮರಾಠಿ, ಖಡೀಬೋಲಿ, ದೇಶಿಯ ಶಬ್ದಗಳು ಇವೆಲ್ಲಾ ಕವಿಯ ಕೃತಿಗಳಲ್ಲಿ ಸ್ಥಾನ ಪಡೆದಿದೆ. ಜನ ಬಳಕೆಯ ಅನೇಕ ನುಡಿಗಟ್ಟುಗಳನ್ನೂ ಮತ್ತು ಗಾದೆ ಮಾತುಗಳನ್ನೂ  ಸಹ ಬಳಸಿದ್ದಾನೆ. ಕೋಮಲಕಾಂತವಾಗಿದ್ದು ಭಕ್ತಿಯ ಅಭಿವ್ಯಕ್ತಿಗೆ  ಸಾಧನವಾಗಿದ್ದ ವ್ಜರಭಾಷೆಗೆ ವೀರಾಂಗನೆಯ ಉಡುಪು ತೊಡಿಸಿ ಮೆರೆಸಿದ.

ಸ್ವಾಭಿಮಾನಿ ಕವಿ

ಭೂಷಣ ಬಹಳ ಸ್ವಾಭಿಮಾನಿ ಕವಿ. ಈ ಸ್ವಾಭಿಮಾನಿ ಅವನ ಬದುಕಿನಲ್ಲಿ ಕಂಡು ಬರುವ ಅನೇಕ ಘಟನೆಗಳಿಂದ ವ್ಯಕ್ತಪಟ್ಟಿದೆ. ತನ್ನ ಅಣ್ಣನ ಮನೆಯಲ್ಲಿ ನಡೆದ ಉಪ್ಪಿನ ಪ್ರಸಂಗ, ಔರಂಗಜೇಬನ ಸಭೆಯಲ್ಲಿ ನಡೆದ ಘಟನೆ, ಕುಮಾವೂಂ ರಾಜನಿಗೆ ದಾನವನ್ನು ಹಿಂದಿರುಗಿಸಿದ್ದು- ಇವೆಲ್ಲ ಅವನ ಸ್ವಾಭಿಮಾನಕ್ಕೆ ಉದಾಹರಣೆಗಳು ನಿರ್ಭಯನಾಗಿರುವುದು ಭೂಷಣನ ಇನ್ನೊಂದು ವೈಶಿಷ್ಠ. ಕವಿ ಸತ್ಯ ಹೇಳಲಲು ಹಿಂಜರಿಯುವುದಿಲ್ಲ. ತನ್ನ ಕಾಲದಲ್ಲಿ ಕಂಡು ಬರುತ್ತಿದ್ದ ಸಮಸ್ಯೆಗಳನ್ನು ನೊಡುತ್ತಾ ಕವಿಗೆ ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ. ಎಲ್ಲವನ್ನೂ ನಿರ್ಭಯವಾಗಿಯೆ ಬಣ್ಣನೆ ಮಾಡಿದ. ಹೆದರಿಕೆ, ಸಂಕೋಚಗಳಿದ್ದರೆ ವೀರವಾಣಿ ಬಾಯಿಯಿಂದ ಹೊರಗೆ ಬರಲು ಹೇಗೆ ಸಾಧ್ಯ?

ವೀರಕಾವ್ಯ ಪರಂಪರೆ ಮತ್ತು ಭೂಷಣ

ಭಾರತೀಯ ಸಾಹಿತ್ಯದಲ್ಲಿ ವೀರಕಾವ್ಯ ಪರಂಪರೆ ವೇದಕಾಲದಿಂದ ಹಿಡಿದು ಇಂದಿನವರೆಗೆ ನಡೆದುಬಂದಿದೆ. ವೀರನೆಂದರೆ ಯಾರು? ಅವನಲ್ಲಿರಬೇಕಾದ  ಗುಣಗಳು ಯಾವುವು? ವೀರಭಾವನೆಯ ಸ್ವರೂಪ ಮತ್ತು ಆದರ್ಶಗಳು ಬೇರೆ ಬೇರೆ ಕಾಲದಗಳಲ್ಲಿ ಬೇರೆ ಬೇರೆ ರೀತಿಯಾಗಿ ಇರುತ್ತವೆ. ಆಯಾ ಕಾಲದ ವೀರಕಾವ್ಯಗಳಲ್ಲಿ ಅದರ ಸ್ವರೂಪ  ವ್ಯಕ್ತವಾಗುತ್ತಿರುತ್ತದೆ. ವೀರಕಾವ್ಯಗಳ ನಾಯಕ ಒಂದು ರೀತಿಯಲ್ಲಿ ತನ್ನ ಕಾಲದ ಸಂಸ್ಕೃತಿ ಮತ್ತು ಜನಜೀವನದ ಪ್ರತಿನಿಧಿಯಾಗಿರುತ್ತಾನೆ. ಆ ಕಾಲದಲ್ಲಿ  ಯಾವ ಗುಣಗಳಿಗೆ ಪ್ರಾಶಸ್ತ್ಯ ಕೊಡುತ್ತಿದ್ದರು, ಎಂತಹ ಮನುಷ್ಯನನ್ನು ಪರಿಪೂರ್ಣನಾದವನು, ತುಂಬಾ ಗೌರವಕ್ಕೆ  ಅರ್ಹನಾದವನು ಎಂದು ಭಾವಿಸುತ್ತಿದ್ದರು ಎಂಬುದು ವೀರಕಾವ್ಯದ ನಾಯಕನಲ್ಲಿ ಪ್ರತಿಬಿಂಬಿತವಾಗುತ್ತದೆ. ರಾಮಾಯಣ, ಮಹಾಭಾರತ, ರಘವಂಶ, ಹರ್ಷಚರಿತ, ಪೃಥ್ವೀರಾಜರಾಸೋ ಮುಮತದ ಕಾವ್ಯಗಳ ವಿರನಾಯಕರು ಭಾರತೀಯ ಸಂಸ್ಕೃತಿಯ ಪ್ರತಿನಿಧಿಗಳಾಗಿ ಕಂಡುಬರುತ್ತಾರೆ. ಭೂಷಣನ ವೀರಕಾವ್ಯಗಳನ್ನು ಬರೆದ ಕವಿಗಳು ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ ಮತ್ತು ಬೇರೆ ರೀತಿಯ  ಆಧಾರಗಳ ಮೇಲೆ ತಮ್ಮ ಕೃತಿಗಳನ್ನು ರಚಿಸಿರುವುದುಂಟು. ಆದರೆ ಭುಷಣನ ವೀರಕಾವ್ಯದ ವೈಶಿಷ್ಟ್ಯವೇನೆಂದರೆ ಅದರಲ್ಲಿ ಕಲ್ಪನೆ ಮತ್ತು ಪೌರಾಣಿಕ ಆಧಾರಗಳಿಗಿಂತ ಸಮಕಾಲೀನ ಚರಿತ್ರೆಯನ್ನೇ ಹೆಚ್ಚಾಗಿ ಅವಲಂಬಿಸಿರುವುದು ಕಂಡುಬರುತ್ತದೆ. ಎಂದರೆ ಸಾಮಾನ್ಯವಾಗಿ ವೀರಕಾವ್ಯವನ್ನು ಬರೆಯುವ ಕವಿ ಪುರಾಣಕತೆಗಳನ್ನು ಬಳಸಿಕೊಳ್ಳುತ್ತಾನೆ. ಅಥವಾ ತನಗಿಂತ ಬಹು ಹಿಂದೆ ಇದ್ದ ಮಹಾಪುರಷರ ವಿಷಯವಾಗಿ ಬರೆಯುತ್ತಾನೆ. ಆದರೆ ಭೂಷಣ ಶಿವಾಜಿಯ  ಹಾಗೆ ತನ್ನ  ಕಾಲದಲ್ಲೆ ಇದ್ದ ಶ್ರೇಷ್ಠ ನಾಯಕರನ್ನು ಕುರಿತು ಬರೆದ. ಎರಡನೆಯದಾಗಿ ಭೂಷಣನ ಕಾಲದ ಕೃತಿಗಳೆಲ್ಲಾ ಹೆಚ್ಚಾಗಿ ಶೃಂಗಾರ ಭಾವನೆಯಿಂದ ಕೂಡಿದ್ದವು. ಎಂದರೆ ಒಬ್ಬ ಗಂಡಸು, ಒಬ್ಬ ಹೆಂಗಸು ಇವರ ಪ್ರೀತಿಯನ್ನು ಕುರಿತೇ ಕವಿಗಳು ಬಹುಮಟ್ಟಿಗೆ ಬರೆದರು. ಆದರೆ ಭೂಷಣ ತನ್ನ ರಚನೆಗಳಲ್ಲಿ ಮಹತ್ವಕೊಟ್ಟಿದ್ದು ವೀರರಸ ಪ್ರತಿಪಾದನೆಗೆ ಮಾತ್ರ. ಇನ್ನೊಂದು ವಿಚಾರವೆಂದರೆ ಅವನ ಕೃತಿಗಳಲ್ಲಿ ಸಮಕಾಲಿನ ಚರಿತ್ರೆಯ ವರ್ಣನೆಯಿದ್ದರೂ ನಾಡಿನ ಸಂಸ್ಕೃತಿ ಮತ್ತು ಹಿರಿಮೆಗಳ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಟ್ಟಿದೆ. ಹಾಗಾಗಿ ಅವನ ಕೃತಿಗಳು ರಾಷ್ಟ್ರೀಯ ಕಾವ್ಯ ಹಾಗೂ ವೀರಕಾವ್ಯ  ಎಂದೆನಿಸಿಕೊಳ್ಳುತ್ತದೆ.

ರಾಷ್ಟ್ರೀಯ ಸಾಹಿತ್ಯ ಸಾಮಾನ್ಯವಾಗಿ ವೀರರಸ ಪ್ರಧಾನವಾಗಿರುತ್ತದೆ. ವೀರರಸದ ಸ್ಥಾಯಿಭಾವ ಅಥವಾ ತಿರುಳೆಂದರೆ ಉತ್ಸಾಹ. ಭೂಷಣನ ಕಾವ್ಯದಲ್ಲಿ ಉತ್ಸಾಹ ಎಲ್ಲೆಲ್ಲೂ ಚಿಮ್ಮುತ್ತಿರುತ್ತದೆ. ಅದರಲ್ಲಿ ಎಲ್ಲೂ ನಿರ್ಜೀವತೆ ಕಂಡುಬರುವುದಿಲ್ಲ. ಅವನ ಕಾವ್ಯ ಎಲ್ಲೂ ಸಪ್ಪೆಯಾಗಿಲ್ಲ.

ಭೂಷಣನ ಕಾವ್ಯದ ಸೊಬಗು

ಭೂಷಣನ ಕಾವ್ಯದ ಸೊಬಗನ್ನು ತೋರಿಸಲು ಒಂದೆರಡು ಪದ್ಯಗಳನ್ನು ಇಲ್ಲಿ ಸಂಗ್ರಹಿಸಿ ಹೇಳಬಹುದು. ಇವುಗಳ ಭಾವ ಹೀಗಿದೆ:

ಶಿವಾಜಿ ಶತ್ರುಗಳ ಮೇಲೆ ದಾಳಿ ನಡೆಸಿದಾಗ ಅವರ ಪರಿಸ್ಥಿತಿ ಹೀಗಿರುತ್ತಿತ್ತು. ಮೃಗರಾಜನಾದ ಸಿಂಹ ಮೇಲೆ ಬೀಳುತ್ತಿದ್ದಂತೆ ಪ್ರಾಣಿಗಳ ಸಮೂಹಕ್ಕೆ ಅತ್ತಿತ್ತ ಚಡಪಡಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಶಿವಾಜಿ ಮೇಲೆ ಬಿದ್ದನೆಂದರೆ ಶತ್ರುಗಳ ಅತ್ತಿತ್ತ ಚಲಿಸಲಾಗದೇ ಒಡಿಹೋಗಲಾಗದೆ ಅವನ ಕತ್ತಿಗೆ ಸಲುಕುವಂತಾಗುತ್ತಿತ್ತು. ಜಿಂಕೆಯಂತೆ ಓಡಿಹೋಗಿ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ಸೈನಿಕರೂ ಅವನ ಕತ್ತಿಯ ಏಟಿನಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಹಾಗೆಯೇ ಗಿಡುಗ ಮೇಲೆರೆಗುತ್ತಿದ್ದಂತೆಯೇ ಸಣ್ಣಪುಟ್ಟ ಪಕ್ಷಿಗಳು ಹಾರಿ ತಪ್ಪಿಸಿ ಕೊಳ್ಳುವುದನ್ನೇ ಮರೆತುಬಿಡುತ್ತವೆ. ಭಯದಿಂದ ಸುಮ್ಮನೇ ರೆಕ್ಕೆ ಅಷ್ಟೆ. ಕೆಲವು ಮಂದಿ ಶತ್ರುಗಳು ಶಿವಾಜಿಯ ಪ್ರತಾಪಾಗ್ನಿಯ ಮುಂದೆ ಹುಲ್ಲುಕಡ್ಡಿ ಉರಿದು ಹೋಗುವ ಹಾಗೆ ಭಸ್ಮವಾಗಿ ಹೋಗುತ್ತಿದ್ದರು. ಶಿವಾಜಿಯ ಪ್ರತಾಪ ದಾವಾಗ್ನಿಯಂತಿದ್ದರೆ ಶತ್ರು ಹುಲ್ಲು ಕಡ್ಡಿಯಂತಿರುತ್ತಿದ್ದ. ಶಿವಾಜಿಯ ಪ್ರತಾಪದ ಮುಂದೆ ಮೊಗಲರು, ಅರಸು ಕುಮಾರರು, ಸಾಮಂತರು, ಅಧಿಕಾರಿಗಳು ಎಲ್ಲರೂ ಆತ್ಮ ವಿಶ್ವಾಸವನ್ನು ಕಳೆದುಕೊಂಡು ತಮ್ಮನ್ನು ರಕ್ಷಿಸಿಕೊಳ್ಳುವುದರಲ್ಲಿ ಅಸಹಾಯಕತೆಯಿಂದ ಸ್ತಂಭೀಬೂತರಾಗುತ್ತಿದ್ದರು.

ಭೂಷಣ ಗ್ರಂಥಾವಳಿಯ ಐತಿಹಾಸಿಕತೆ

ಭೂಷಣ ಗ್ರಂಥಾವಳಿ ಕೇವಲ ಒಂದು ಕಾವ್ಯ ಮಾತ್ರವಲ್ಲ. ಅದು ಆ ಕಾಲದ ಇತಿಹಾಸವೂ ಹೌದು. ರಾಜಕೀಯ ವಾತಾವರಣ  ಆ ಕಾಲದಲ್ಲಿ ತುಂಬಾ ಕಲುಷಿತವಾಗಿತ್ತು. ಧರ್ಮಾಂಧನಾಗಿದ್ದ ಔರಂಗಜೇಬ್‌ಹಿಮದುಗಳ ಮೇಲೆ ನಡೆಸುತ್ತಿದ್ದ ಅತ್ಯಾಚಾರ ಹೇಳತೀರದಾಗಿತ್ತು. ಅದರ ವಿರುದ್ದ  ಶಿವಾಜಿ ಹಿಂದೂಗಳನ್ನು ಸಂರಕ್ಷಿಸಿದ ರಾಜ್ಯವನ್ನು ವಿಸ್ತರಿಸುವ ಆಸೆಯಿಂದ ಔರಂಗಜೇಬ್‌ ದಕ್ಷಿಣ ಭಾರತದೊಡನೆಯೂ ನಿರಂತರವಾಗಿ ಸೆಣಸಾಡುತ್ತಿದ್ದ. ಭೂಷಣನ ಕಾವ್ಯದಲ್ಲಿ ಆ ಕಾಲದ ಚರಿತ್ರೆ ಸ್ಪಷ್ಟವಾಗಿ ಕಂಡುಬರುತ್ತದೆ. ಆ ಕಾಲದ ಯಥಾರ್ಥ ವಿಚಾರಗಳ ವರ್ಣನೆಯ ಬಗ್ಗೆ ಕವಿಗೆ  ಹೆಚ್ಚು ಕಾಳಜಿ ಇತ್ತು ಎನಿಸುತ್ತದೆ. ರಾಜಕೀಯ  ಮತ್ತು ಸಾಮಾಜಿಕ ಘಟನೆಗಳ ಏರಿಳಿತಗಳು ಕಾವ್ಯದಲ್ಲಿ ನುಸುಳೀ ಕಾವ್ಯ ಮತ್ತು ಚರಿತ್ರೆಯ ಮೈತ್ರಿ ಅನುಪಮವಾಗಿದೆ.

ಭೂಷಣನಲ್ಲಿ ರಾಷ್ಟ್ರೀಯತೆ

ಭೂಷಣನ ಕಾವ್ಯ ರಾಷ್ಟ್ರೀಯ ಕಾವ್ಯ. ಒಂದು ನಾಡಿನ ರಾಷ್ಟ್ರೀಯ ಚೇತನದ ಬೆಳವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳೂ ಅವನ ಕೃತಿಯಲ್ಲಿ ಕಾಣದೊರೆಯುತ್ತವೆ. ಯಾವುದೇ ದೇಶದ ರಾಷ್ಟ್ರೀಯ ಏಕತೆ ಎಂದರೆ ಏನು? ಅವರೆಲ್ಲ  ಭೌಗೋಳಿಕವಾಗಿ ಒಂದೇ ಪ್ರದೇಶಕ್ಕೆ ಸೇರಿದವರು. ಅದಕ್ಕಿಂತ ಮುಖ್ಯವಾದ ಅಂಶ ಎಂದರೆ, ಸಾವಿರಾರು ವರ್ಷಗಳ ಕಾಲ ಅವರು ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾರೆ, ದೇಶದ ಸಂಪತ್ತನ್ನು  ಒಟ್ಟಿಗೆ ಅನುಭವಿಸಿದ್ದಾರೆ, ಮುತ್ತಿಗೆ, ಪ್ರವಾಹ, ಭೂಕಂಪ ಅಂಟು ರೋಗ ಮುಂತದ ವಿಪತ್ತುಗಳನ್ನು ಒಟ್ಟಿಗೆ ಎದುರಿಸಿದದಾರೆ. ಇದರಿಂದ ಅವರಿಗೆ ತಾವೆಲ್ಲ ಒಂದೇ ಎಂಬ ಆತ್ಮೀಯತೆ ಮೂಡಿದೆ. ಜೊತೆಗೆ, ಜೀವನದ ಅರ್ಥ ಏನು, ನ್ಯಾಯ ಅಂದರೆ ಏನು, ಮನುಷ್ಯ ಹೇಗೆ ಬದುಕಬೇಕು, ಏನು ಮಾಡಬಾರದು, ನಾವು ಮೆಚ್ಚಿ ಬೆಳಸಬೇಕಾದ ಗುಣಗಳು ಯಾವುವು, ದುಷ್ಟ ಗುಣಗಳು ಯಾವುವು ಇಂತಹ ಪ್ರಶ್ನೆಗಳನ್ನೆಲ್ಲ ಒಟ್ಟಿಗೆ ಯೋಚಿಸಿ ಉತ್ತರ ಕಂಡುಕೊಂಡಿದ್ದಾರೆ. ಅವರೆಲ್ಲ ಅದೇ ಗುಣಗಳನ್ನು ಮೆಚ್ಚುತ್ತಾರೆ, ಅದೇ ಮಹಾಪುರಷರನ್ನು ಮೆಚ್ಚುತ್ತಾರೆ. ಅವರ ಮನಸ್ಸಿಗೆ ಸಂತೋಷಕೊಡುವ ಕಾವ್ಯಗಳು ಸಂಗೀತ, ಚಿತ್ರಗಳು, ಶಿಲ್ಪ ಕಲಾಕೃತಿಗಳು ಒಂದೇ, ಇದರಿಂದಲೇ ಅವರಲ್ಲಿ ಸಾಂಸ್ಕೃತಿಕ ಐಕ್ಯತೆ ಇದೆ ಎನ್ನುವುದು ಭಾರತ ಬಹು ವಿಸ್ತಾರವಾದ ದೇಸ, ಇದೇ ಒಂದು ಉಪಖಂಡ. ಆದರೆ ಹಿಮಾಲಯದಿಂದ ಕನ್ಯಾಕುಮಾರಿ       ಯವರೆಗೆ ಶ್ರೀರಾಮ, ಶ್ರೀಕೃಷ್ಣ, ಶಿವ-ಪಾರ್ವತಿ, ಬುದ್ಧ, ಕಾಳಿದಾಸ, ತಾನಸೇನ್‌, ಸಂತ, ಮೀರ, ತ್ಯಾಗರಾಜರು ಇವರನ್ನು ಕುರಿತು ಒಂದೆ ಬಗೆಯ ಪ್ರೀತಿ ಮೆಚ್ಚಿಕೆಗಳು ಕಾಣುತ್ತವೆ.

ಭೂಷಣ ಹದಿನೇಳನೆಯ ಶತಮಾನದ ಉತ್ತರಾರ್ಧಕ್ಕೆ ಸೇರಿದ ಕವಿ, ಈ ಕಾಲದಲ್ಲಿ ರಾಷ್ಟ್ರೀಯ ಭಾವನೆಯ ಮೇಲೆ ನಾಡಿನ ಸಂಸ್ಕೃತಿ, ಪರಂಪರೆ ಯಾವ  ಪ್ರಭಾವವನ್ನು ಬೀರಿತ್ತು ಎಂದು ಯೋಚಿಸುವುದು ಸಹ ಅವಶ್ಯಕ. ಆ ಕಾಲದಲ್ಲಿ ಮೊಗಲ್‌ಬಾದಷಹನ ಪ್ರಾಬಲ್ಯ ಹೆಚ್ಚಾಯಿತು. ಅವನ ಅನ್ಯಾಯಗಳನ್ನು ಪ್ರತಿಭಟಿಸಲೋ ಎಂಬಂತೆ ಜನತೆಯಲ್ಲೂ ತೀವ್ರ ಪ್ರತಿಕ್ರಿಯೆ ಕಂಡುಬಂತು. ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಕ್ರಮವಾಗಿ ಜಾಗೃತಿ ಹುಟ್ಟತೊಡಗಿತು. ಈ ನಿಟ್ಟಿನಲ್ಲಿ ಕಬೀರದಾಸ, ಸೂರದಾಸ, ತುಳಸಿದಾಸ ಮುಂತಾದವರ ಕೊಡುಗೆ ಏನೆಂಬುದನ್ನು ನಾವು ಬಲ್ಲೆವು. ಗುರುಗೋವಿಂದ ಸಿಂಹ, ಸಮರ್ಥ ರಾಮದಾಸ ಮುಂತಾದವರು ರಾಜಕೀಯ ಜಾಗೃತಿಗೆ ಮಹತ್ವ ನೀಡಿದ್ದರು. ಛತ್ರಪತಿ ಶಿವಾಜಿ, ಛತ್ರಸಾಲ ಬುಂದೇಲರಂತಹ ವೀರರು ಕ್ಷಾತ್ರಬಲವನ್ನು ಮೆರೆದು ಮೊಗಲರೊಡನೆ ಸೆಣಸಾಡಿದರು. ಭಾರತದ ಚರಿತ್ರೆಯಲ್ಲಿ ಇದು ಒಂದು ಹೊಸ ತಿರುವು. ಭೂಷಣ ಈ ಸಮಗ್ರ ಹಿನ್ನೆಲೆಯನ್ನೇ ತನ್ನ ಕೃತಿಗಳ ವಸ್ತುವನ್ನಾಗಿ ಮಾಡಿಕೊಂಡ ಕಾವ್ಯ ರಾಷ್ಟ್ರೀಯ ಭಾವನೆಯ ಅಭಿವ್ಯಕ್ತಿಗೆ ಒಂದು ಸಮರ್ಥ ಮಾಧ್ಯಮವಾಗಿತ್ತಷ್ಟೆ.

ಭೂಷಣನ ನಾಯಕರು

ಭೂಷಣನ ದೃಷ್ಟಿ ಹೆಚ್ಚಾಗಿ ಕೇಂದ್ರೀಕೃತವಾದದ್ದು ತನ್ನ ನಾಯಕರ ಮೇಲೆಯೆ. ಶಿವಾಜಿ ಮತ್ತು ಛತ್ರಸಾಲ ಬುಂದೇಲರನ್ನು ವರ್ಣಿಸಬೇಕಾದರೆ ಅವನ ಕಾವ್ಯದ ಹರವಿಗೆ ದಣಿವೆಂಬುದಿಲ್ಲ. ಛತ್ರಸಾಲನಿಗಿಂತಲೂ ಎಲ್ಲೆಲ್ಲೂ ಶಿವಾಜಿಗೆ ಪಾಶಸ್ತ್ರಯ. ತನ್ನ ನಾಯಕನ ವರ್ಣನೆ ಬಂದಾಗಲಂತೂ ಸಂಬಂಧಪಟ್ಟ ಘಟನೆಗಳಲ್ಲಿ ಪ್ರಮುಖವಾಗಿ ಕಂಡುಬರುವ ಇತರರೂ ಕವಿಗೆ ದೂರವಾಗಿ ಹೋಗುತ್ತಾರೆ. ಶಿವಾಜಿಯನ್ನು ಯುದ್ಧವೀರ, ದಾನವೀರ, ದಯಾವೀರ, ಧರ್ಮವೀರನೆಂದು ಭೂಷಣ ವರ್ಣಿಸಿದ್ದಾನೆ. ಸಾಮಾನ್ಯವಾಗಿ ನಮ್ಮ ಸಾಹಿತ್ಯದಲ್ಲಿನ ವೀರಕಾವ್ಯಗಳಲ್ಲಿ ಒಂದು ಪ್ರೇಮಕಥೆ ಕಂಡು ಬರುವುದುಂಟು. ಯಾವುದೋ ಹೆಣ್ಣನ್ನೊ, ರಾಜಕುಮಾರಿಯನ್ನೊ ಗೆಲ್ಲಲು ನಡೆಯುತ್ತದೆ. ಕಾವ್ಯದಲ್ಲಿ ವೀರರಸ ಶೃಂಗಾರರಸ ಒಟ್ಟುಗೊಡಿರುತ್ತದೆ. ಆದರೆ ಭೂಷಣನ ಕಾವ್ಯ ಇದಕ್ಕೆ ಭಿನ್ನ. ಅವನ ನಾಯಕ ನಮಗೆ ಎಲ್ಲೂ ಪ್ರೇಮಿಯ ರೂಪದಲ್ಲಿ ಕಾಣಸಿಗುವುದಿಲ್ಲ. ಯಾವುದೇ ಹೆಣ್ಣಿಗಾಗಿ ಭೂಷಣನ ನಾಯಕ ಯುದ್ಧ ನಡೆಸುವುದಿಲ್ಲ. ಅವನ ಕಾವ್ಯ ಶುದ್ಧ ವೀರಕಾವ್ಯ, ಅವನ ನಾಯಕ ಯಾವಾಗಲೂ ಕರ್ಮನಿರತ. ಅನ್ಯಾಯ ಹಾಗೂ ಅತ್ಯಾಚಾರಗಳನ್ನು ಸಹಿಸಲಾರದವನು. ಅವುಗಳ ವಿರುದ್ಧ ಸಿಡಿದೇಳುವವನು.

ರಾಷ್ಟ್ರೀಯ ಕವಿ

ಶಿವಾಜಿ ಮತ್ತು ಛತ್ರಸಾಲರಂಥ ವೀರರು ಭಾರತಕ್ಕೆ ಸ್ವಾತಂತ್ರ್ಯವನ್ನು ಒದಗಿಸಿಕೊಡುವ ದಿಶೆಯಲ್ಲಿ ಮೊಗಲರ ವಿರುದ್ಧ ಸತತವಾಗಿ ಹೋರಾಡುತ್ತಿದ್ದರು. ಅವರಿಗೆ ತನ್ನ ಕೃತಿಗಳ ಮೂಲಕ ಪ್ರೇರಣೆಯನ್ನು ನೀಡುತ್ತಿದ್ದ ಭೂಷಣ ತನ್ನ ಕಾಲದ ರಾಷ್ಟ್ರೀಯ ಕವಿ, ಈತನ ಮೇಲೆ ಜಾತೀಯತೆಯನ್ನು ಯಾರೂ ಆರೋಪಿಸುವಂತಿಲ್ಲ. ಯಾವ ಸಂಪ್ರದಾಯಕ್ಕೂ ಈತ ಕಟ್ಟು ಬಿದ್ದಿಲ್ಲ, ತನ್ನ ಕಾಲದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವಿಚಾರಗಳ ಸರಿಯಾದ ನಿಲುವನ್ನು ಪ್ರತಿಪಾದನೆ ಮಾಡಿದ.

ಚಂದ್ರಗುಪ್ತ ಮೌರ್ಯ, ಪೃಥ್ವೀರಾಜ ಚೌಹಾನ ಮತ್ತು ಮಹಾರಾಣ ಪ್ರತಾಪರಂತೆ ಶಿವಾಜಿ ಸಹ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಡಿದವನು. ಅಂತಹವನ ವ್ಯಕ್ತಿತ್ವವನ್ನು ಭೂಷಣ ತನ್ನ ಕಾವ್ಯದಲ್ಲಿ ಹಿಡಿದಿಟ್ಟಿದ್ದಾನೆ. ವಿಲಾಸದ ಕೆಸರಿನಲ್ಲಿ ಸಿಲುಕಿದ್ದ ಭಾರತೀಯರ ಮುಂದೆ ಶಿವಾಜಿ, ಸ್ಪಷ್ಟವಾದ, ನಿರ್ಭೀತವಾದ, ವೀರರಸದಿಂದ ಕೂಡಿದ ರಚನೆಗಳಿಂದ ತನ್ನ ಛತ್ರಸಾಲರಂಥ ಆದರ್ಶ ವೀರರನ್ನು ಇಟ್ಟು ಅವರಲ್ಲಿ ಸ್ವಾತಂತ್ರ್ಯ ಪ್ರೇಮ ಮತ್ತು ರಾಷ್ಟ್ರೀಯ  ಜಾಗೃತಿಗಳನ್ನು ಮೂಡಿಸಿದ. ಆ ಕಾಲದಲ್ಲಿ ನಡೆದ ರಾಜಕೀಯ ಸಾಮಾಜಿಕ ಘಟನೆಗಳ ಪ್ರತ್ಯಕ್ಷದರ್ಶಿಯಾಗಿ ಪ್ರಾಮಾಣಿಕವಾದ ವರ್ಣನೆಗಳನ್ನು ಭೂಷಣ ಮಾಡಿದ್ದಾನೆ. ಅಂದು ಭಾರತೀಯರಲ್ಲಿ ಸ್ವಾತಂತ್ರ್ಯ ಭಾವನೆಯನ್ನು ಮತ್ತು ರಾಷ್ಟ್ರ ಪ್ರೇಮವನ್ನು ಉಂಟು ಮಾಡಿದ ಕವಿಗಳಲ್ಲಿ ಭೂಷಣನಿಗಿಂತ ಮಿಗಿಲಾದವರು ಬೇರೊಬ್ಬರಿಲ್ಲ. ಹಿಂದಿ ವೀರ ಕಾವ್ಯ ಪರಂಪರೆಯಲ್ಲಿ ಭೂಷಣ ಪ್ರಥಮ ಪಂಕ್ತಿಗೆ ಸೇರಿದವನು.