ಶ್ರೀಧರನಿಭನೆನೆ ನೆಗೞ್ದ ಜ-
ನೋದಯನೆಂಬರಸನೊರ್ಮೆ ಬೇಂಟೆಯನಾಡಲ್
ಪೋದುದನಱೆದಾತನ ದಾ-
ಯಾದಂ ಕೊಲಲೆಂದು ಮೇಲೆ ಬರ್ಪುದುಮಾಗಳ್  ೧೮೪

ಅಂತಾತನ ಬರವಂ ದೂರದೂಳೆ ಕಂಡು ಪಗೆವನಪ್ಪುದಂ ನಿಶ್ಚಯಮಾಗಲಱೆತು ಪಗೆಗೆ ಪಕ್ಕಾಗೆ ನಿಷ್ಕಾರಣಂ ಸಾವುದಾವ ಕಾರಣಂ. ‘ಬರ್ದಬೆ ಬಂಟಂ ಎಂಬ ನಾೞ್ನುಡಿಯುಂಟು. ‘ಶರೀರಮಾದ್ಯಂ ಖಲು ಧರ್ಮಸಾಧನಂ ಎಂಬ ಪುರಾಣವಾಕ್ಯಮುಂಟಪ್ಪುದಱೆಂ, ತಾನೇಱೆದ ಜಾತ್ಯಶ್ವಮಂ ಕೀಱೆ ಬಿಟ್ಟಿಕ್ಕಲೊಡಮದು ಗಾಳಿಗೆ ಗರಿಮೂಡಿದಂತೆಯುಂ ಮನಮನೆಡಗಲಸಿದಂತೆಯು ಮಾಗಿ ಪಿರಿದಂತರಮಂ ಪೋಗಿಯೊಂದು ಶಬರಶಿಬಿರಮನೆಯ್ದುವುದುಮದಂ ಕಂಡಲ್ಲಿ ನಿಲಲ್ಬಗೆದು ಬರ್ಪ ರಾಜಪುತ್ರನಂ ಪುಳಿಂದಮಂದಿರದೊಳೊಂದು ಪಂಜರಗತನಾಗಿರ್ದ ಶುಕಪತತ್ರಿ ಕಂಡು ನಿಜಾಪನಪ್ಪ ಕಿರಾತಾಶಂಗಿಂತೆಂದುದು:

ಎಲೆ ಶಬರರಾಜ ನೋಡಿದೆ
ಪಲವುಂ ಪೊಂದುಡಿಗೆದೊಟ್ಟು ಬಂದೊರ್ವಂ ವ್ಯಾ-
ಕುಲನಾಗಿರ್ಪಂ ನೀ  ವ್ಯಾ-
ಕುಲನಲ್ಲದೆ ಬಂದು ಪಿಡಿದುಕೊಳ್ಳೀ ಧನಮಂ  ೧೮೫

ಎಂದು ಗೞಪುವರಗಿಳಿದು ಸರಮನಾಲಿಸಿ ಕೇಳ್ದಲ್ಲಿಯುಂ ನಿಲಲಣ್ಮದೆ ಮತ್ತಂ ಕಿಱೆದಂತರಮಂ ಬರ್ಪುದುಮಾ ಮಹಾಗಹನಮಧ್ಯದೊಳಂಬರವರೆಗಂ ಬೆಳೆದ ಮರದುಱುಗಲ ನಡುವೆ ನೀಳ್ದೊಪ್ಪಿ ದಿವಕ್ಕೆ ಪೋಪ ಬಟ್ಟೆಗೆ ಸೋಪಾನಂಗಟ್ಟಿದಂತೆ ತೆಱತೆಱದಿಂ ನೆಗೆದೊಗೆವ ಪೊಗೆಯಂ ಕಂಡು ಮತ್ತಮದಂ ಬೇಡರ ಪಳ್ಳಿಯೆಂದೆ  ಬಗೆದು ಭಯಂಗೊಂಡು ತನ್ನಿಷ್ಟದೈವಮಂ ಸ್ಮರಿಸಿ ತನ್ನಪ್ಪುದಕ್ಕೆ ಇನ್ನೆತ್ತಂ ಪೋಪೆಂ : ಕುದುರೆಯುಂ ಜವಂಗೆಟ್ಟುದು: ನಾಂ ಪಥಶ್ರಾಂತನಾದೆನಗೆ ದೈವಮೇ ಶರಣೆಂದು  ಕಂಠಗತಪ್ರಾಣನಾಗಿ ಮನಂಗುಂದಿ ಬರ್ಪ ಜನೋದಯನೃಪಂಗೆ ಪ್ರಾಣವಾಯು ಬರ್ಪಂತೆ ಹೋಮಧೂಮದೂಪಿತ  ದಿವ್ಯಗಂಧಾಮೃತಂ ಬೆರಸು,

ವಿದಳಿತ ಪುಷ್ಪಸೌರಭಮನಾಗಮಿರ್ಕುಳಿಗೊಂಡು ಕೊಂಡು ಷ-
ಟ್ಟದ ಪದಪದ್ಮಿನೀನಿವಹಶೈತ್ಯದೊಳೊಯ್ಯನೆ ಕೂಡಿ ಕೂಡಿ ಮಾ-
ಣದೆ ವಿವಿಧ ದ್ರುಮೋತ್ಕರದಿಱುಂಬಿನೊಳಿಂಬೆನೆ ನಿಂದು ನಿಂದು ತೀ-
ಡಿದುದಘಹಾರಣಂ ಪಥಪರಿಶ್ರಮವಾರಣನಾ ಸಮೀರಣಂ  ೧೮೬

ಅಂತು ಬಂದ ಮಂದಮಾರುತನಿಂದಾಪ್ಯಾಯಿತಶರೀರನಾಗಿ ತದ್ಧೂಪವಾಸನೆಯಿಂದಿದು ಋಷ್ಯಾಶ್ರಮಮೆಂದು ನಿಶ್ಚೈಸಿ ತದಾಶ್ರಮಾಭಿಮುಖನಾಗಿ ಬರುತ್ತುಮಾಶ್ರಮಿಗಳ ಹೋಮಕಾರ‍್ಯಕ್ಕೆ ಕಱೆವ ಕಾಮಧೇನುಗಳಂತೆ ಕರೆವ ಹೋಮಧೇನುಗಳಂ ಕಿಡಲೀಯದೆ ಕಾದು ಪಾಲಾಶಾಶ್ವತ್ಥೌದುಂಬರಾರ್ಕ ನ್ಯಗ್ರೋಧ ಶಮ್ಯಪಾಮಾರ್ಗ  ಖದಿರಾದಿ ಶುಷ್ಕ ಸಮಿತ್ತುಗಳುಮಂ ಕುಶಾಶ್ವಲಾಯನ ವಿಶ್ವಾಮಿತ್ರಾದಿ ದೂರ್ವಾಂಕುರ ಪವಿತ್ರವಸ್ತಗಳುಮಂ ಕೊಂಡು ಧೇನುಗಳಂ ಮುಂಕೊಂಡು ಬರ್ಪ ಶಿಷ್ಯಸಮೂಹಂಗಳುಮಂ, ಕುಂದ ಮುಚುಕುಂದ ಮಂದಾರೇಂದೀವರ  ನಂದ್ಯಾವರ್ತ  ತ್ರಿಸಂಧ್ಯಾ ಬಂಧೂಕ ಕದಂಬ ಕನಕ ಕರವೀರ ಕರ್ಣಿಕಾರ ಕುಮುದ ವಕುಳ ಕುರವಕ ಕಮಲ ತಿಲಕ ಚಂಪಕ ಪಾಟಲಿ ಪಾರಿಜಾತ ಜಾತಿ ಪುನ್ನಾಗ ಮಲ್ಲಿಕಾದ್ಯನೇಕ ಸುರಭಿ ಕುಸುಮಂಗಳಂ ಸಜ್ಜುಕಮಪ್ಪುವಂ ಪ್ಯುಟ್ಟಿಯೊಳ್ ತೀವಿಕೊಂಡು ದ ಮಧು ಘೃತ ಕ್ಷೀರ ಗೋಮಯ ಗೋಮೂತ್ರಂಗಳುಮಂ ಪುಣ್ಯತೀರ್ಥೋದಕಗಳುಮಂ ಕಲಶಂಗಳೊಳ್ ತೀವಿಕೊಂಡು ತಪೋಧನರ ದೇವತಾರಾಧನೆಗೆ ಕಾಲಾತಿಕ್ರಮಮಾಗಲೀಯದೆ ಧಾಳಾಧಾಳಿಯಲ್ಲಿ ಬರ್ಪ ಪರಿಚಾರಕನ ನೆರವಿಯುಮಂ ಕಂಡವರ ಪಿಂದುಪಿಂದನೆ ಬಂದು ಮುನಿವನಮೆಯ್ದುವುದುಮಾ ವನದೊಳಾ ವನಕ್ಕಿಕ್ಕಿದ ಬಾೞ್ವೇಲಿಯಂತೆ ರಸರಸಾಯನಂಗಳಂ ತೀವಿ ನೇಱೆದ ಪೋಂಗಳಸಂಗಳಂತಪ್ಪ ನವಫಲಂಗಳಿಂ ನೆಱೆದೊಪ್ಪುವ ಮಾತುಲುಂಗದ ಪೊದಱುಗಳುಮನಾ ಪೊದಱ ಮೊದಲೊಳೊದವಿ ಬೆಳೆದು ಬೀಗಿ ತಮ್ಮಿಂ ತಾವೆ ಬಿರಿದು ಬಿರಿವಟ್ಟು ಸುರಿವ ದಾಳಿಂಬದ ಪಣ್ಗಳ ತನಿರಸದ ಪರಿವೊನಲೆ ಪರಿನೀರಾಗೆಯಂಕುರವೊತ್ತಿ ಬೆಳೆಯುತ್ತಿರ್ದ ಕರ್ಬಿನ ಮಡಲ್ಗಳುಮಂ ಅಲ್ಲಿಂದೊಳಗೆ ಕಲ್ಪವೃಕ್ಚದೊಳ್ವಿಕಲ್ಪಮಿಲ್ಲೆನಿಸಿ ಬೇರಿಂತೊಟ್ಟು ತುದಿಗೊಂಬುವರಮೋರಂತೆ ನೇಱೆದುವಾಗಿರ್ದೆಲೆಯಿಂ ತುಱುಗಿ ಫಲವಾದ ಪನಸಿನ ಮರಂಗಳುಮಂ, ಭೂತಳಕೃತಿಪ್ರೀತಿಕರಮಾಗಿ ಪೂತು ಪಣ್ತೆಱಗಿದರ ನೇಱೆಲು ಇಮ್ಮಾವಿನ ತೆಂಗಿನ ನಾರಂಗದ ಮರಂಗಳ್ ಮೊದಲಾಗಿ ಫಲಂಗಳಿಂ ನೆಱೆದೊಪ್ಪುವನೇಕ ವೃಕ್ಷಂಗಳುಮಂ ಆ ಮರಂಗಳ ಶಾಖಾಗ್ರಂಗಳ  ತಳಿರ ತುಱುಗಲೊಳಿರ್ದು ಪಾಪರೂಪನಿದಂ ಪುಗಲ್ವೇಡೆಂಬಂತೆ ಪುಗಿಲ್ಟುಗಿಲೆನುತಿರ್ಪ ಪುಷ್ವಪರಪುಷ್ಪಂಗಳುಮಂ, ಮೃದುಮಧುರ  ಗಂಭೀರ ರವದಿಂ ಸಾಮವೇದವನನುವಾದಂಗೆಯ್ವಂತಿರ್ಪ ಮಧುಕರಪ್ರಕರಮುಮಂ, ವೇದಾಂತ ಸಿದ್ಧಾಂತ ಪ್ರಮಾಣ ಶಾಸ್ತ್ರಂಗಳನೋದಿ ತರ್ಕಿಸುವ ಪಂಡಿತರ್ಕಳೊಡನೆ ತೊಡರ್ದು ನುಡಿದು ಸದುತ್ತರಂಗುಡುತಿರ್ಪ ಶುಕಶಾರಿಕಾನಿಕಾಯಂಗಳುಮಂ, ಪಂಚಾಗ್ನಿತಾಪತಪ್ತಮಾನಸರಪ್ಪ ತಪೋಧನಜನಕ್ಕೆ ತಪನತಾಪಮಾನಾಗಲೀಯದೆ ತಳಿರ್ದುಱುಲಗಂ ಪೊತ್ತು ನಭದೊಳ್ ನಲಿದಾಡುವ ಸೋಗೆನವಿಲ್ಗಳ ಪಿಂಡುಗಳುಮಂ ಅಗ್ನಿಹೋತ್ರೋಪಚರಣ ಪರಿಣತಾಂತಃಕರಣರಪ್ಪ ಅಹಿತಾಗ್ನಿಗಳ ಮೆಯ್ಯೊಳೊಗೆದ ಶ್ರಮಸ್ವೇದಬಿಂದುಗಳುಮಂ ತಂತಮ್ಮಱಂಕೆಯ ಗಾಳಿಯೊಳಾಱೆಸುತ್ತಿರ್ಪ ರಾಜಹಂಸೆಗಳುಮಂ, ದೇವತಾರಾಧನಂಗೆಯ್ವ ತಪೋಧನರ್ಗಿರದೆ   ಗದ್ದುಗೆಗಳಂ ಕಟ್ಟಿ ಧೂಪದೀಪಂಗಳುಮಂ ಕೊಟ್ಟು ಪರಿಯಷ್ಟಿಗೆಯ್ವ ಪಟುತರ ಮರ್ಕಟಸಮೂಹಂಗಳುಮಂ ಕೃಚ್ಛಾ, ತ್ರಿಕಚ್ಚಾ, ಚಾಂದ್ರಾಯಣ ಸಾಂತಪನಾದಿ ಮಹಾತಪಂಗಳಿಂ ತಪ್ತರಾಗಿ ಕ್ಷೀಣಧಾತುಗಳಾಗಿಯುಂ ಮಾಣದೆ ನಡೆಪಾಡುತಿರ್ದೆಡವಿ ಕೆಡೆವ ಜರತ್ತಾಪಸರ ಕಯ್ಯಂ ಪಿಡಿದೊಯ್ಯನೆತ್ತುವ ಗೋಲಾಂಗೂಲಜಾಲಮುಮಂ, ಹೊಮಾಗ್ನಿಯಂ ನಂದಿಸಲುಂ ಕುಂದಿಸಲುಮೀಯದೆ ಶುಷ್ಟಸಾಧನಂಗಳಂ ಸಂಸುವ ಕರಿಕರೇಣುಗಳುಮಂ, ಸ್ನಾತಕವಾತ್ರಕ್ಕೆ ಶೌಚಕಾರ‍್ಯ ನಿಮಿತ್ತಂ ದರಿಯ ಮಣ್ಣಂ  ಕೋಡೊಳೆತ್ತಿ  ತಂದವರ ಮುಂದಿಕ್ಕುವ ಭದ್ರಗಜವ್ರಜಮುಮಂ, ತೀರ್ಥಸ್ನಾನಾರ್ಥಂ ಪರಸ್ಥಾನಂಗೆಯ್ವ ವಾನಪ್ರಸ್ಥಜನಂಗಳ ಧೌತವಸ್ತ್ರ ‘ಪವಿತ್ರಾಕ್ಷಸೂತ್ರಂಗಳಂ ತಮ್ಮ ಕವಲ್ಗೊಂಬುಗಳೊಳ್ ನೇಱೆಸಿಕೊಂಡಿಂಬಿನೊಳವರೊಡನೆ ನಡೆವ ಸಾರಂಗಸಮೂಹಮುಮಂ, ಭಿಕ್ಷುಗಳ ಬೈಕ್ಷಂಗಳೋಳ್ ಮಕ್ಷಕಾ ಸಂಗತಿಯಾಗಲೀಚಿiದೆ ತಮ್ಮ ಬಾಲಂಗಳೊಳ್  ಬೀಸುತ್ತಂ ಪೋಪ ಚಮರೀಮೃಗಂಗಳುಮಂ, ಕಾಂತಾರ ಭೈಕ್ಷಾಹಾರಿಗಳಪ್ಪ ಭಿಕ್ಷುಗಳ್ಗೆ ವೃಕ್ಷರೂಪದೊಳಿರ್ದು ಭಿಕ್ಷಮನಿಕ್ಕುವ ಚಮರೀಮೃಗಂಗಳುಮಂ, ಕಾಂತಾರ ಭೈಕ್ಷಾಹಾರಿಗಳಪ್ಪ ಭಿಕ್ಷುಗಳ್ಗೆ ವೃಕ್ಷರೂಪದೊಳಿರ್ದು ಭಿಕ್ಷಮನಿಕ್ಕುವ ಯಕ್ಷದೇವತೆಯರುಮಂ ಯೋಗಾಭ್ಯಾಸಂಗೆಯ್ವ ಯೋಗೀಂದ್ರಬೃಂದಕ್ಕೆ ಯೋಗಾಸನಮಾಗಿ ಸುತ್ತುಗೊಂಡು ಬಿತ್ತರಂಗೆಯ್ವಂತಿರ್ದ ಭೋಗೀಂದ್ರವೃಂದಮುಮಂ, ಬಾಲಕರಂತೆ ಕಂದಮೂಲಫಲಂಗಳಂ ಪೆಱರ್ ತಂದಿಕ್ಕೆ ತಿಂದಾನಂದಮನಸ್ಕರಾಗಿ ನಿಂದ ತಪೋಧನರುಮಂ, ಚಕ್ಷುಶ್ಯ್ರುತಿಗಳಂತೆ ವಾಯುಭಕ್ಷಕರಾಗಿರ್ದ ಮುಮುಕ್ಷನಿಕರಮುಮಂ, ನೀರ್ಮಾನಸರಂತೆ  ನೀರೊಳ್ ನೆಲೆಸಿರ್ದುದಕವಾಸಿಗಳುಮಂ, ಸಂಸಾರಸಾಗರಮನೀಯಂದದಿಂ  ದಾಂಟುವುದೆಂದು ತೋಱುವಂದದಿಂದೊಂದೆ ಕಾಲೊಳ್ ನಿಂದಿರ್ದೇಕಪಾದವ್ರತಸ್ಥರುಮಂ ಸಗ್ಗದ ಬಟ್ಟೆಯಂ ಸುಟ್ಟಿ ತೋಱುವಂತೆ ಕಯ್ಯನೆತ್ತಿ ನಿಂದೂರ್ಧ್ವಬಾಹುವ್ರತಿಗಳುಮಂ, ಪಸರಿಸಿದ ಕುಸುಮದೆಸಳ ಕಸವರಂ ದೆಸೆದೆಸೆದಗೆ ಮಸುಳೆ ಮಲಯಾನಿಳಂ ಬೀಸಿ ಕಳೆಯೆ ತ್ರಿಕಾಲದೊಳಂ ಖಲ್ವಾಯಿತನಂತೆ ಗಂಗಾಜಲಮಂ ತಂದು ತಳಿವ ಬೆಳ್ಮುಗಿಲ್ಗಳುಮಂ,  ಧರ್ಮಶಾಸ್ತ್ರ ವ್ಯಾಖ್ಯಾನಂಗೆಯ್ವ ಮುನಿಮುಖ್ಯರ ಪಕ್ಕದೊಳಾಗಳುಮಗಲದ ಕರಿ ರುರು ಹರಿಣ ಶಶಕ ಸಾರಂಗಮೆ ಮೊದಲಾದ ಮೃಗಂಗಳೊಡನೆ ಬದ್ದವೈರಮಂ ಪತ್ತುವಿಟ್ಟು ಒಂದೊಂದನವುಂಕಿ ನೂಂಕಿ ಪತ್ತಿ ಕಿವಿಯಿತ್ತೊಱಲ್ದು ಕೇಳ್ವ ಸಿಂಹ ಶರಭ ಶಾರ್ದೂಲ ವ್ಯಾಳಾದಿ ಕ್ರೂರಮೃಗನಿವಹಮುಮಂ ಕಂಡಾ ತಪೋಧನರ ತಪೋವನದ ತಪಃಪ್ರಭಾವಕ್ಕಮಲ್ಲಿಯ ಪಶುಮೃಗ ಪಕ್ಷಿಜಾತಿಗಳ್ ಮೊದಲಾದ ಚರಾಚರಂಗಳ್ಗೆ  ಪುಟ್ಟಿದುಪಶಮಾದಿ ಗುಣಕ್ಕಂ ಚೋದ್ಯಂಬಟ್ಟು ನೋಡುತಿರ್ದ ರಾಜಕುಮಾರನಂ ಅಲ್ಲಿರ್ದುದೊಂದು ರಾಜಕೀರಂ ಕಂಡು, ಎಲೈ ಮಹಾಪುರುಷ ! ನೀನುಂ ಕುದುರೆಯುಂ ಕರಂ ಬೞಲ್ದಿರ್ ಇಂದಿನ ದಿವಸಮನೀ ಋಷ್ಯಾಶ್ರಮದೊಳ್ ವಿಶ್ರಮಿಸಿ ಪೋಗಿಮೆಂಬುದುಂ ಆ ಪಕ್ಷಿಯ ಮಾತು ತನ್ನ ಮನಕ್ಕೆ ಬಂದು ಒಂದು ಪೊಗೊಳದ ತಡಿಯ ಮಾಮರದಡಿಯೊಳ್ ಹಲ್ಲಣಮಂ ಬಿಟ್ಟು ಕುದುರೆಯಂ ನೀರಂ ಕುಡಿಸಿ ತಾನುಂ ಸ್ನಾನಾದಿ ನಿತ್ಯನಿಯಮಂಗಳಂ ತೀರ್ಚಿಯಾ ಪೂಗೊಳದಿಂ ಪೊಱಮಟ್ಟು ತದಾಶ್ರಮದ ಗುರುಗಳ ಸಮೀಪಕ್ಕೆ ಬಂದವರ್ಗೆ ವೃದ್ಧಾನುಕ್ರಮದಿಂ ಪೊಡೆಮಟ್ಟು, ನಿಮ್ಮಡಿ ದೇವತಾಸ್ವರೂಪಂ ತತ್ತ್ವಂ ತಪಂ ಧರ್ಮವೆಂಬಿವೆಂತಪ್ಪುವವನೆಗಱ*ಯೆ ಬೆಸಸಿಮೆನೆ ಮುನೀಶ್ವರನಿಂತೆಂದಂ :

೧೮೪. ಶ್ರೀಮನ್ನಾರಾಯಣನಿಗೆ ಸಮನನೆಂಬಂತಿದ್ದ ಜನೋದಯ ಎಂಬ ರಾಜನು ಒಮ್ಮೆ ಬೇಟೆಯನ್ನಾಡಲು ಕಾಡಿಗೆ ಹೋದುದನ್ನು ತಿಳಿದು ಅವನ ದಾಯಾದಿ ಅವನನ್ನು ಕೊಲ್ಲಬೇಕೆಂದು ಅವನನ್ನು ಹಿಂಬಾಲಿಸಿದನು. ವ|| ಅವನ ಬರವನ್ನು ದೂರದಿಂದಲೇ ಕಂಡು ಅವನು ತನ್ನ ಹಗೆ ಎಂಬುದನ್ನು ನಿಶ್ಚಯಿಸಿ ಹಗೆಗೆ ಗುರಿಯಾಗಿ ನಿಷ್ಕಾರಣವಾಗಿ ಯಾಕೆ ಸಾಯಬೇಕು,  ‘ಬದುಕಿದವನೇ ಬಂಟ’ ಎಂಬ ನಾಣ್ನುಡಿಯುಂಟು. ‘ ಶರೀರಮಾದ್ಯಂ ಖಲುಧರ್ಮಸಾಧನಂ’ ಎಂಬ ಪುರಾಣವಾಕ್ಯ ಉಂಟು. ಅದರಿಂದ ತಾನು ಏರಿದ ಜಾತ್ಯಶ್ವವನ್ನು ಸವರಲು ಅದು ಗಾಳಿಗೆ ಗರಿಮೂಡಿದಂತೆಯೂ ಮನಸ್ಸಿನ ವೇಗಕ್ಕೂ ಮಿಗಿಲೆಂಬಂತೆಯೂ ದೂರ ಹೋಗಿ ಒಂದು ಬೇಡರ ಬಿಡಾರವನ್ನು ತಲುಪಿತು ಅದನ್ನು ಕಂಡು ಅಲ್ಲಿ ನಿಲ್ಲಬೇಕೆಂದು ಬರುತ್ತಿದ್ದ ರಾಜಕುಮಾರನನ್ನು ಬೇಡರ ಬಿಡಾರದಲ್ಲಿದ್ದ ಪಂಜರದ ಗಿಣಿ ಕಂಡು ತನ್ನ ಅಪತಿಯಾದ ಕಿರಾತಾಶನಿಗೆ ಈ ರೀತಿಯಾಗಿ ಹೇಳಿತು: ೧೮೫, ಎಲೈ ಶಬರರಾಜ ! ಬಗೆಬಗೆಯ ಚಿನ್ನದ ಆಭರಣಗಳನ್ನು ತೊಟ್ಟುಕೊಂಡು ಒಬ್ಬನು ವ್ಯಾಕುಲಗೊಂಡು ಇಲ್ಲಿಗೆ ಬರುತ್ತಿದ್ದಾನೆ. ನೀನು ನಿರ್ವ್ಯಾಕುಲನಾಗಿ ಈ ಐಶ್ವರ್ಯವನ್ನು ತೆಗೆದುಕೊಳ್ಳು  ವ || ಎಂದು ಗಳಹುವ ಅರಗಿಳಿಯ ಮಾತನ್ನು ಕೇಳಿ ಅಲ್ಲಿಯೂ ನಿಲ್ಲಲಾರದೆ ಸ್ವಲ್ಪದೂರ ಮುಂದುವರಿದನು. ಆ ಮಹಾಗಹನ ಮಧ್ಯದಲ್ಲಿ ಮುಗಿಲು ಮುದ್ದಿಡುವ ಮರಗಳ ಗುಂಪಿನ ನಡುವೆ ಸ್ವರ್ಗಕ್ಕೆ ಹೋಗಲು ಸೋಪಾನ ಕಟ್ಟಿದಂತೆ ಏರುತ್ತಿದ್ದ ಹೊಗೆಯನ್ನೂ ಕಂಡು ಅದೂ ಬೇಡರ ಹಳ್ಳಿಯೆಂದೇ ಭಾವಿಸಿ ಭಯಗೊಂಡು ತನ್ನ ಇಷ್ಟದೈವವನ್ನು  ಸ್ಮರಿಸಿದನು. ಆಗುವುದು ಆಗಲಿ, ಇನ್ನೆತ್ತ ಹೋಗಲಿ; ಕುದುರೆಗೂ ಶ್ರಮಾವಾಗಿದೆ. ಮಾರ್ಗಾಯಾಸದಿಂದ ಬಳಲಿದ ನನಗೆ ದೇವರೇ ಗತಿಯೆಂದು ಕಂಠಗತಪ್ರಾಣನಾಗಿ ಮನಗುಂದಿ ಬರುತ್ತಿದ್ದ ಜನೋದಯ ನೃಪನಿಗೆ ಪ್ರಾಣವಾಯು ಬರುವಂತೆ ಹೋಮಧೂಮದ ಕಂಪನ್ನು ಹೊತ್ತ ತಂಗಾಳಿ ತೀಡಿತು. ಆ ಮಂದಮಾರುತದಿಂದ ದೇಹದ ಬಳಲಿಕೆ ಪರಿಹಾರವಾಗಿ ಆ ಧೂಪವಾಸನೆಯಿಂದ ಇದು  ಋಷ್ಯಾಶ್ರಮವಾಗಿರಬೇಕೆಂದು ನಿಶ್ಚಯಿಸಿ ಆ ಆಶ್ರಮಕ್ಕೆ ಎದುರಾಗಿ ಬರುತ್ತಿದ್ದನು. ಆಶ್ರಮಿಗಳ ಹೋಮಕಾರ್ಯಕ್ಕೆ ಕರೆವ ಕಾಮಧೇನುಗಳಂತೆ ಕರವ ಹೋಮಧೇನುಗಳನ್ನು ಕಳೆದುಹೋಗುವಂತೆ ಕಾಯುತ್ತ ಪಲಾಶ, ಅಶ್ವತ್ಥ, ಅತ್ತಿ, ಎಕ್ಕೆ, ಆಲ ಶಮಿ, ಮೊದಲಾದ ಒಣಸೌದೆಗಳನ್ನೂ ಅಶ್ವಲಾಯನ ವಿಶ್ವಾಮಿತ್ರ ಎಂಬ ದರ್ಭೆ ದೂರ್ವಾಂಕುರ ಮೊದಲಾದ ಪವಿತ್ರವಸ್ತುಗಳನ್ನೂ ಹೊತ್ತುಕೊಂಡು ಮೊಲ್ಲೆ, ನಿತ್ಯಮಲ್ಲಿಗೆ ಮಂದಾರ, ಕನ್ನೈದಿಲೆ, ನಂದಿಬಟ್ಟಲು,    ತ್ರಿಸಂಧ್ಯಾ, ಬಂಧೂಕ ಕದಂಬ, ಹೊಂಗಣಗಿಲೆ, ಬೆಟ್ಟದಾವರೆ, ಬಿಳಿಯ ನೈದಿಲೆ ಬಕುಳ, ಕುರವಕ, ತಾವರೆ, ತಿಲಕ ಸಂಪಿಗೆ, ಪಾದರಿ, ಪಾರಿಜಾತ, ಜಾಜಿ ಸುರಹೊನ್ನೆ, ಮಲ್ಲಿಗೆಗಳನ್ನು ಕೊಂಡು ಬರುತ್ತಿದ್ದ ಶಿಷ್ಯಸಮೂಹವನ್ನೂ ಬಗೆಬಗೆಯ ಪರಿಮಳಭರಿತವಾದ ಹೂವುಗಳನ್ನೂ ಮೊಗ್ಗೆಗಳನ್ನೂ ಬುಟ್ಟಿಯಲ್ಲಿ ತುಂಬಿಕೊಂಡು ಮೊಸರು, ಜೇನುತುಪ್ಪ, ಹಾಲು ಗೋಮಯ, ಗೋಮೂತ್ರಗಳನ್ನೂ  ಪುಣ್ಯ ತೀರ್ಥೋದಕಗಳನ್ನೂ ಕಳಶಗಳಲ್ಲಿ ತುಂಬಿಕೊಂಡು ತಫೋಧನರ ದೇವತಾರಾಧನೆ ಕಾಲ ಮೀರದಂತೆ  ಧಾಳಾಧಾಳಿಯಲ್ಲಿ ಬರುತ್ತಿದ್ದ   ಪರಿಚಾರಕರ್‌ಅ ಗುಂಪನ್ನೂ ಕಂಡು ಅವರ ಹಿಂದೆಯೇ ಬಂದು ಮುನಿವನವನ್ನು ಸೇರಿದನು. ಆ ವನದಲ್ಲಿ ಆ ವನಕ್ಕೆ ಹಾಕಿದ  ಜೀವಂತವಾದ ಬೇಲಿಯಂತೆ ರಸರಸಾಯನಗಳನ್ನು ತುಂಬಿಕೊಂಡು ಚಿನ್ನದ ಕಲಶಗಳಂಥ ಹೊಸಹಣ್ಣುಗಳಿಂದ ತುಂಬಿ ಶೋಭಿಸುವ ಮಾದಳದ ಪೊದೆಗಳನ್ನೂ ಅವುಗಳ ಬುಡದಲ್ಲಿ ಬೆಳೆದು  ಬೀಗಿ ತಮ್ಮಿಂದ ತಾವೇ ಬಿರಿದು ಬಿರಿವಟ್ಟು ಸುರಿವ ದಾಳಿಂಬದ  ಹಣ್ಣುಗಳ ತಂಪಾದ ರಸದ ಪ್ರವಾಹವೇ ಕಾಲುವೆಯಾಗಲು ಮೊಳಕೆ ಬಿಟ್ಟು ಬೆಳೆಯುತ್ತಿದ್ದ ಕಬ್ಬಿನ ಸೋಗೆಗಳನ್ನೂ, ಅಲ್ಲಿಂದ ಒಳಗೆ ಕಲ್ಪವೃಕ್ಷಕ್ಕೂ ಇದಕ್ಕೂ ವ್ಯತ್ಯಾಸವಿಲ್ಲವೆಂಬಂತೆ ಬೇರಿನಿಂದ ತುದಿಕೊಂಬೆಯವರೆಗೆ ಒಂದೇ ರೀತಿಯಾಗಿ ತುಂಬಿದ ಎಲೆಗಳಿಂದ  ಕಿಕ್ಕಿರಿದು ಹಣ್ಣು ಬಿಟ್ಟ ಹಲಸಿನ ಮರಗಳನ್ನೂ ,ಭುಮಿಗೆ ಅತ್ಯಂತ  ಪ್ರೀತಿಯಾಗುವಂತೆ ಹೂಬಿಟ್ಟು  ಹಣ್ಣಾಗಿ ಎರಗಿದ ಅರನೇರಿಳೆಯ, ಇಮ್ಮಾವಿನ, ತೆಂಗಿನ ಕಿತ್ತಿಳೆಯ ಮರಗಳು ಹಣ್ಣುಗಳಿಂದ ತುಂಬಿ ಶೋಭಿಸುವ ಅನಕ ವೃಕ್ಷಗಳನ್ನೂ, ಆ ಮರಗಳು ಕೊಂಬೆಗಳ ತುದಿಯ ಚಿಗುರ ಪೊದೆಯಲ್ಲಿದ್ದು ಪಾಪರೂಪನಾದವನು ಇದನ್ನು ಪ್ರವೇಶಿಸಬೇಡ ಎಂಬಂತೆ ಪುಗಿಲ್ ಪುಗಿಲ್ ಎನ್ನುತ್ತಿರುವ ಪುಷ್ಟವಾದ  ಕೊಗಿಲೆಗಳನ್ನೂ,  ಮೃದುಮಧುರ ಗಂಭೀರ ಸ್ವರದಿಂದ ಸಾಮವೇದವನ್ನು ಅನುವಾದಿಸುವಂತಿದ್ದ ತುಂಬಿಗಲ ಹಿಂಡನ್ನೂ, ವೇದಾಂತ ಸಿದ್ಧಾಂತ ಪ್ರಮಾಣ   ಶಾಸ್ತ್ರಗಳನ್ನು ಓದಿ ತರ್ಕಿಸುವ ಪಂಡಿತರೊಡನೆ ಸೇರಿ ನುಡಿಯುತ್ತ ಸದುತ್ತರ ಕೊಡುತ್ತಿರುವ ಶುಕಸಾರಿಕಗಳ ಸಮೂಹಗಳನ್ನೂ ,ಪಂಚಾಗ್ನಿ ತಾಪತಪ್ತ ಮಾನಸರಾದ ತಪೋಧನರಿಗೆ ಬಿಸಿಲಿನ ಝಳ ತಾಗದಂತೆ ಚಿಗುರುಗಳ ಹೊರೆಯನ್ನೂ ಹೊತ್ತು ಬಾನಿನಲ್ಲಿ ನಲಿದಾಡುವ ಗಂಡು ನವಿಲುಗಳ ಹಿಂಡುಗಳನ್ನೂ, ಅಗ್ನಿಹೋತ್ರಗಳನ್ನೂ ಆಚರಿಸುವುದರಲ್ಲಿ ಪರಿಣತಾಂತಃಕರಣರಾದ ಅಹಿತಾಗ್ನಿಗಳ ಮೈಯಲ್ಲಿ ಹುಟ್ಟಿದ ಬೆವರಿನ ಹನಿಗಳನ್ನು ತಮ್ಮ ತಮ್ಮ ರೆಕ್ಕೆಯ ಗಾಳಿಯಿಂದ ಆರಿಸುತ್ತಿದ್ದ ರಾಜಹಂಸೆಗಳನ್ನೂ ,ದೇವತಾರಾಧನೆಯನ್ನೂ ಮಾಡುವ ತಪೋಧನರಿಗೆ ಪೀಠಗಳನ್ನು ಕಟ್ಟಿ ಧೂಪದೀಪಗಳನ್ನು ಕೊಟ್ಟು ಸೇವೆ ಮಾಡುವ ಚುರುಕಿನ ಮಂಗಗಳ ಸಮೂಹಗಳನ್ನೂ ,ಕೃಚ್ಛ್ರ, ಅತಿಕೃಚ್ಛ್ರ, ಚಾಂದ್ರಾಯಣ, ಸಾಂತಪನ ಮೊದಲಾದ ಮಹಾ ತಪಸ್ಸುಗಳಿಂದ ತಪ್ತರಾಗಿ ಕ್ಷೀಣಧಾತುಗಳಾದರೂ ಬಿಡದೆ ನಡೆದಾಡುತ್ತಿದ್ದು ಎಡವಿ ಬೀಳುವ ವೃದ್ಧಾತಾಪಸರ ಕಯ್ಯನ್ನು  ಹಿಡಿದು ಕೂಡಲೇ ಎತ್ತುವ ಕೋತಿಗಳ ಗುಂಪನ್ನೂ, ಹೋಮಾಗ್ನಿಯನ್ನೂ ನಂದಿಸಲೂ ಕುಂದಿಸಲೂ ಬಿಡದೆ ಒಣಗಿದ ಸಾಧನಗಳನ್ನು ಜೋಡಿಸುವ ಆನೆಯ ಮರಿಗಳನ್ನೂ ಸ್ನಾತಕವ್ರಾತಕ್ಕೆ ಶೌಚಕಾರ್ಯಕ್ಕಾಗಿ ಕಣಿವೆಯ ಮಣ್ಣನ್ನು ಕೊಂಬುಗಳಿಂದ ಎತ್ತಿ ತಂದು ಅವರ ಮುಂದೆ ಹಾಕುವ ಉತ್ತಮವಾದ ಗಜಗಳ ಗುಂಪನ್ನೂ, ತೀರ್ಥಸ್ನಾನಕ್ಕಾಗಿ ಪ್ರಯಾಣಿಸುವ ವಾನಪ್ರಸ್ಥ ಜನರ ಧೋತ್ರ, ಪವಿತ್ರ ಜಪಸರಗಳನ್ನು,ತಮ್ಮ ಕವಲುಗೊಂಬುಗಳಲ್ಲಿ ಸಿಕ್ಕಿಸಿಕೊಂಡು ಅವರೊಡನೆ ನಡೆಯುವ ಸಾರಂಗಸಮೂಹವನ್ನೂ ,ಭಿಕ್ಷುಗಳ ಭಿಕ್ಷೆಯಲ್ಲಿ ನೊಣಗಳು ಬೀಳದಂತೆ ತಮ್ಮ ಬಾಲಗಳಿಂದ ಬೀಸುತ್ತ ಹೊಗುವ ಚಮರೀಮೃಗಗಳನ್ನೂ, ಕಾಡಿನಲ್ಲಿ ಭಿಕ್ಷಾಹಾರಿಗಳಾದ ಭಿಕ್ಷುಗಳಿಗೆ ವೃಕ್ಷರೂಪದಲ್ಲಿದ್ದು ಭಿಕ್ಷೆಯನ್ನು ಹಾಕುವ ಯಕ್ಷದೇವತೆಗಳನ್ನೂ, ಯೋಗಾಭ್ಯಾಸವನ್ನು ಮಾಡುವ ಯೋಗೀಂದ್ರವೃಂದಕ್ಕೆ ಯೋಗಾಸನವಾಗಿ ಸುತ್ತಿಕೊಂಡು ವಿಸ್ತಾರಗೈಯ್ಯುವಂತಿದ್ದ  ಭೋಗೀಂದ್ರವೃಂದವನ್ನೂ, ಬಾಲಕರಂತೆ ಕಂದಮೂಲಫಲಗಳನ್ನು ಬೇರೆಯವರು ತಂದು ಹಾಕಲು ತಿಂದು ಅನಂದ ಮನಸ್ಕರಾಗಿರುವ ತಪೋಧನರನ್ನೂ ,ಹಾವುಗಳಂತೆ ವಾಯುಭಕ್ಷಕರಾಗಿದ್ದ  ಮುಮುಕ್ಷು ನಿಕರವನ್ನೂ, ನೀರ್ಮಾನಸರಂತೆ ನೀರಿನಲ್ಲಿ ನೆಲೆಸಿದ್ದ ಉದಕವಾಸಿಗಳನ್ನೂ, ಸಂಸಾರ  ಸಾಗರವನ್ನೂ  ಈ ರೀತಿಯಿಂದ ದಾಟುವುದೆಂದು ತೋರಿಸುವಂತೆ ಒಂದೇ ಕಾಲಿನಲ್ಲಿ ನಿಂತಿದ್ದ ಏಕಪಾದವ್ರತಸ್ಥರನ್ನೂ, ಸ್ವರ್ಗದ ಮಾರ್ಗವನ್ನು ನಿರ್ದೇಶಿಸಿ ತೋರುವಂತೆ ಕಯ್ಯನ್ನೆತ್ತಿ ನಿಂತ ಊರ್ಧ್ವಬಾಹುವ್ರತಿಗಳನ್ನೂ, ಹಸರಿಸಿದ ಕುಸುಮದಸೆಳ ಚಿನ್ನವನ್ನು  ದಿಕ್ಕುದಿಕ್ಕಿಗೆ ಕಂದಿರಲು ಮಲಯಾನಿಲ ಬೀಸಿ ಕಳೆಯಲು ಮೂರು ಕಾಲುಗಳಲ್ಲೂ ಖಲ್ವಾಯಿತನಂತೆ  ಗಂಗಾಜಲವನ್ನು ತಂದು ತಳಿಯುವ ಬಿಳಿಯ ಮುಗಿಲುಗಳನ್ನೂ, ಧರ್ಮ ಶಾಸ್ತ್ರ  ವ್ಯಾಖ್ಯಾನ ಮಾಡುವ ಮುನಿಮುಖ್ಯರ ಪಕ್ಕದಲ್ಲಿ ಯಾವಾಗಲೂ ಅಗಲದೆ ಇರುವ ಆನೆ, ಜಿಂಕೆ, ಹರಿಣ, ಮೊಲ, ಸಾರಂಗ ಮೊದಲಾದ ಮೃಗಗಳೊಡನೆ ಬದ್ಧವೈದ್ಯರನ್ನು ಬಿಟ್ಟು ಒಂದೊಂದನ್ನೂ ಅವುಕಿ ನೂಕಿ ಹತ್ತಿ ಕಿವಿಯಿಟ್ಟು ಪ್ರೀತಿಯಿಂದ  ಕೇಳುವ ಸಿಂಹ ಶರಭ ಶಾರ್ದೂಲ ಸರ್ಪ ಮೊದಲಾದ ಕ್ರೂರಮೃಗಸಮೂಹವನ್ನು ಕಂಡು ಆ ತಪೋಧನರ ತಪೋವನದ ತಪಃಪ್ರಭಾವಕ್ಕೆ ಅಲ್ಲಿಯ ಪಶುಪಕ್ಷಿ ಮೊದಲಾದ ಚರಾಚರಗಳಿಗೆ ಹುಟ್ಟಿದ ಉಪಶಾಂತಿ ಮೊದಲಾದ ಗುಣಕ್ಕೆ ಚೋದ್ಯ ಹೊಂದಿ ನೋಡುತ್ತಿದ್ದ ಆ ರಾಜಕುಮಾರನನ್ನು ಅಲ್ಲಿದ್ದ ಒಂದು ರಾಜಕೀರ ಕಂಡು ಎಲೆ ಮಹಾ ಪುರುಷ! ನೀನೂ ಕುದುರೆಯೂ ತುಂಬ ಬಳಲಿದ್ದೀರಿ. ಇಂದು ನೀವು ಈ ಋಷ್ಯಾಶ್ರಮದಲ್ಲಿ ವಿಶ್ರಮಿಸಿಕೊಂಡು ಹೋಗಿ ಎಂದಿತು. ಆ ಪಕ್ಷಿಯ ಮಾತನ್ನು ನಂಬಿ ಒಂದು ಹೂಗೊಳದ ದಡದ ಮಾವಿನ ಮರದ ಬುಡದಲ್ಲಿ ಹಲ್ಲಣವನ್ನು ಬಿಚ್ಚಿ ಕುದುರೆಗೆ ನೀರನ್ನು ಕುಡಿಸಿ ತಾನೂ ಸ್ನಾನಾದಿ ನಿತ್ಯ ನಿಯಮಗಳನ್ನು ಪೂರೈಸಿದನು. ಅಲ್ಲಿಯೇ ಹತ್ತಿರವಿದ್ದ ಆಶ್ರಮದ ಗುರುಗಳ ಸಮೀಪಕ್ಕೆ ಬಂದು ಅವರಿಗೆ ನಮಸ್ಕರಿಸಿ ನೀವು ದೇವತಾಸ್ವರೂಪರು. ತತ್ವ, ತಪಸ್ಸು, ಧರ್ಮ ಎಂಬಿವುಗಳು ಹೇಗಿವೆ ಎಂಬುದನ್ನು ನನಗೆ ತಿಳಿಯುವಂತೆ ಹೇಳಿರಿ ಎಂದು ಕೇಳಲು ಆ ಮುನೀಶ್ವರನು ಹೀಗೆ ಹೇಳಿದನು:

ಸಾವುಂ ಪುಟ್ಟುಮದಿಲ್ಲದ-
ನಾವನವಂ ದೇವನಾತನೆಂದುದೆ ತತ್ತ್ವಂ
ಜೀವದಯೆ ಧರ್ಮಮಿಂದ್ರಿಯ
ಸೇವನೆಯಂ ಬಟ್ಟೊಡದುವೆ ತಪಮುಪಶಮದಿಂ  ೧೮೭

ಎಂದು ಯೋಗೀಶ್ವರನಾತನಭಿಪ್ರಾಯಮಂ ಕಿಱ*ಱೊಳೆ ನೆಱೆಯೆ ಪೇೞ್ವುದುಮರಸಂ ಸಂತಸಂಬಟ್ಟು ಕುಳ್ಳಿರ್ಪನ್ನೆಗೆಮಾ ರಾಜಕೀರಂ ರಾಜಜಂಬೂ ರಂಭಾದಿ ಸ್ವಾದುಫಲಂಗಳಂ ತಂದೀಯೆ ಅವನಾಸ್ವಾದಿಸಿ ವಿಗತಶ್ರಮನಾಗಿ ಮಿತ್ರನಪ್ಪ ಶುಕಪತತ್ರಿಗಿಂತೆಂದಂ

ತನುರುಚಿ ರೂಪ ಸನ್ನುತ ವಯಃಸ್ವರ ಚೇಷ್ಟೆಗಳಿಂದಮೊಂದಿ ನಿ
ನ್ನನೆ ನೆಱೆ ಪೋಲ್ತುದೊಂದು ಗಿಳಿ ಬೇಡರ ಪಳ್ಳಿಯೊಳಿರ್ದು ಕಂಡುಮೆ
ನ್ನೆನೆ ಪಿಡಿ ಕಟ್ಟು ಕೊಲ್ಲಿವನನೆಂದುದು ದುರ್ಣಯದಿಂ ಸಮಂತು ನೀ
ನಿನಗುಪಕಾರಮಂ ವಿನಯದಿಂ ನೆಱೆ ಮಾೞ್ಪುದಿದೇಂ ಸುಮಿತ್ರ ಪೇೞ್ ೧೮೮

ಎಂಬುದುಂ: ಶ್ಲೋ || ಮಾತಾಪ್ಯೇಕಾ ಪಿತಾಪ್ಯೇಕೋ ಮಮತಸ್ಯ ಚ ಪಕ್ಷಿಣಃ
ಅಹಂ ಮುನಿಭಿರಾನಿತೋ ನೀತಸ್ಸತು ಗವಾಶನೈಃ ||೭೩||

ಟೀ|| ಎನಗಮಾ ಪಕ್ಷಿಗಂ ತಾಯುಮೊರ್ವಳ್ ತಂದೆಯುಮೊರ್ವಂ ಎನ್ನನೀ ಮುನಿಗಳ್ ಕೊಂಡುಬಂದರ್. ಆ ಪಕ್ಷಿಯುಂ ಕ್ರೂರರುಂ ಮ್ಲೇಚ್ಚರುಮಪ್ಪ ಬೇಡರ್ ಕೊಂಡು ಪೋದರ್

ಮತ್ತಮಲ್ಲದೆಯುಂ, ಶ್ಲೋ || ಅಹಂ ಮುನೀನಾಂ ವಚನಂ ಶೃಣೋಮಿ
ಶೃಣೋತ್ಯಸೌ ಕ್ರೂರ ಗವಾಶನಾನಾಂ
ಪ್ರತ್ಯಕ್ಷಮೇತದ್ಬವತಾಪಿ ದೃಷ್ಟಂ
ಸಂಸರ್ಗಜಾ ದೋಷಗುಣಾ ಭವಂತಿ  ||೭೪||

ಟೀ|| ನಾಂ ಮುನಿಗಳ ವಚನಮಂ ಕೇಳ್ವಂ. ಆ ಪಕ್ಷಿ ಕ್ರೂರರಪ್ಪ  ಮ್ಲೇಚ್ಚರ ಮಾತಂ ಕೇಳ್ವುದು. ಇದು ಪ್ರತ್ಯಕ್ಷಮಾಗಿ ನಿನ್ನಿಂದಮೆ ಕಾಣಲ್ಪಟ್ಟದು : ಸಂಸರ್ಗದಿಂ ದೋಷಗುಣಂ ಗಳಹವು-ಎಂದು ರಾಜಕೀರಂ ಪೇೞ್ದುದಱೆಂದೆಂತಪ್ಪ ಬುದ್ಧಿವಂತನುಂ ಸಂಸರ್ಗವಶದಿಂ ನಿಸರ್ಗ ಗುಣಮಂ ಪತ್ತುವಿಡುವುದು ಕಡುದಿಟಂ :* ಅನೇನಂ  ಪೆೞ್ದೊಡಂ ನೀ ಮೋನಂಗೊಂಡಿರ್ದಪೆ ಇದು ನಿನ್ನ ಮುನ್ನಿನ ಭವದ ದುಷ್ಕರ್ಮಮೆಂದು ನೊಂದು ನುಡಿದ ದವನಕಂಗೆ ಪಿಂಗಳಕ ನಿಂತೆಂದಂ : ಸಂಜೀವಕನನೆಂತುಂ ಪರಿಹರಿಸುವನಲ್ಲೆನೆಂದು ಪಲವು ತೆಱದೊಳಂ ನುಡಿದು ನಿನ್ನಂ

ಮಾಣಿಸಲಾಱದಾನುಸಿರದಿರ್ದೊಡಂ ನೀಂ ಮಾಣದಾ  ಪ್ರಾಣಿಯ ಬೆನ್ನೊಳಕಾರಣಂ ವಿರುದ್ಧಂಗಟ್ಟಿ ತಗುಳ್ದಪೆ, ನಿನ್ನಂ  ಕಯ್ಯೊಡ್ಡಿ ಬೇಡಿಕೊಂಡಪೆನಿನ್ನಾದೊಡಂ ಉಸಿರದಿರನಲೊಡಂ ದವನಕಂ  ಬೆಕ್ಕಸಂಬಟ್ಟು ಮೃಗೇಂದ್ರನಿಂದ್ರನೀಲದಂತೆ ತೃಣಾಗ್ರಾಹಿಯಪ್ಪ ವೃಷಭೇಂದ್ರನ ಬುದ್ಧಿಯೊಳೇಕಗ್ರಾಹಿಯಾಗಿರ್ದಪನೀ ಮರುಳನೆಂತು ತಿಳಿಪುವೆನೆಂದು ಮತ್ತಮಿಂತೆಂದಂ :

ಸಂಜೀವಕನಂ ಸಾಧುಸ
ಮಂಜಸನಂ ಮಾಡಿ ದುಷ್ಟನೆಂದೀಗಳೆ ಎ
ನ್ನಂ ಜಡಿದು ನುಡಿವೆ ಕೆಮ್ಮನೆ
ಕುಂಜರ ಮದಹರಣ ! ನಿನಗೆ ಮತ್ತಂ ಪೇೞ್ವಂ  ೧೮೯

೧೮೭. ಸಾವೂ ಹುಟ್ಟೂ ಇಲ್ಲದವನೇ ದೇವನು ; ಅತನ ಮಾತೇ ತತ್ವ ಜೀವದಯೆಯೇ ಧರ್ಮ; ಇಂದ್ರಿಯಸೇವೆಯನ್ನೂ ತೊರೆಯುವುದೇ ತಪಸ್ಸು ವ || ಎಂದು ಆ ಯೋಗೀಶ್ವರನು ತನ್ನ ಅಭಿಪ್ರಾಯವನ್ನು ಕಿರಿದರಲ್ಲಿ ತುಂಬುವಂತೆ ಹೇಳಲು ಅರಸನು, ಸಂತೋಷಪಟ್ಟು ಅಲ್ಲಿಯೇ ಕುಳಿತುಕೊಂಡನು. ಆಗ ಆ ರಾಜಕೀರವು ನೇರಳೆ ಬಾಳೆ ಮೊದಲಾದ ರುಚಿಕರವಾದ ಹಣ್ಣುಗಳನ್ನು ತಂದುಕೊಡಲು ಅದನ್ನು ಆಸ್ವಾದಿಸಿ ಶ್ರಮ ಪರಿಹರಿಸಿಕೊಂಡು ಮಿತ್ರನಾದ ಆ ಗಿಳಿಗೆ  ಹೀಗೆ ಹೇಳಿದನು: ೧೮೮.  ದೇಹ, ರೂಪು ವಯಸ್ಸು, ಸ್ವರ, ಚೇಷ್ಟೆಗಳಲ್ಲಿ, ನಿನಗೆ ಅನುರೂಪನಾದ ಒಂದು ಗಿಳಿ ಬೇಡರ ಹಳ್ಳಿಯಲ್ಲಿರುವುದನ್ನು ಕಂಡೆ. ಅದು ನನ್ನನ್ನು ಕಂಡು ಇವನನ್ನು  ಹಿಡಿ ಕಟು,, ಕೊಲ್ಲು ಎಂದು ದುರ್ಣಯದಿಂದ ವರ್ತಿಸಿತು. ನೀನು ಮಿತ್ರನಾಗಿ ನಡೆದುಕೊಂಡೆ ಇದಕ್ಕೆ ಕಾರಣವೇನು? ಎಂದು ಕೇಳಲು ಶ್ಲೋ || ನನಗೂ, ಆ ಪಕ್ಷಿಗೂ ತಂದೆ ತಾಯಿಗಳೊಬ್ಬರೆ. ನನ್ನನ್ನು ಈ ಮುನಿಗಳು ಕೊಂಡುಬಂದರು. ಅವನನ್ನು ಕ್ರೂರರು ಮ್ಲೇಚ್ಛರೂ ಆದ ಬೇಡರು ಕೊಂಡು ಹೋದರು. ಅಲ್ಲದೆ ಶ್ಲೋ || ನಾನು ಮುನಿಗಳ ವಚನವನ್ನು ಕೇಳುವೆನು. ಅವನು ಕ್ರೂರರಾದ ಮ್ಲೇಚ್ಛರ ಮಾತನ್ನು ಕೇಳುವನು. ಇದನ್ನು ಪ್ರತ್ಯಕ್ಷವಾಗಿ ನೀನೇ ಕಂಡಿರುವೆ. ಸಂಸರ್ಗದಿಂದ ದೋಷಗುಣಗಳುಂಟಾಗುವುವು ವ|| ಎಂದು ರಾಜಕೀರವು ಹೇಳಿದುದರಿಂದ ಎಂಥ ಬುದ್ಧಿವಂತನೂ ಸಂಗವಶದಿಂದ ಸ್ವಭಾವಗುಣವನ್ನು ಬಿಡುವುದು ಸತ್ಯ. ನಾನು ಏನನ್ನು ಹೇಳಿದರೂ ನೀನು ಮೌನವಾಗಿರುವೆ. ಇದು ನಿನ್ನ ಪೂರ್ವಜನ್ಮದ ದುಷ್ಕೃತ್ಯ ಎಂದು ನೊಂದು ನುಡಿದ ದವನಕನಿಗೆ ಪಿಂಗಳಕನು ಹೀಗೆಂದನು : ಸಂಜೀವಕನನ್ನು  ನಾನು ಓಡಿಸುವವನಲ್ಲ ಎಂದು ಹಲವು ರೀತಿಯಲ್ಲಿ ಹೇಳಿದ ನಿನ್ನನ್ನು ನಿವಾರಿಸಲಾಗದೆ ನಾನು ಮೌನದಿಂದಿದ್ದರೂ ನೀನು ಬಿಡದೆ  ಆ ಪ್ರಾಣಿಯ ಮೇಲೆ ನಿಷ್ಕಾರಣವಾಗಿ ವಿರೋಧವನ್ನು ಕಟ್ಟುವೆ. ನಿನಗೆ ಕಯ್ಯೊಡ್ಡಿ ಬೇಡಿಕೊಳ್ಳುವೆ: ಇನ್ನಾದರೂ ಉಸಿರೆತ್ತದಿರು. ಅದಕ್ಕೆ ದವನಕನು ಆಶ್ಚರ್ಯಪಟ್ಟು ಮೃಗೇಂದ್ರನು ಇಂದ್ರನೀಲದಂತಿರುವ ಹುಲ್ಲು ಮೇಯುವ ವೃಷಭೇಂದ್ರನ ಬುದ್ಧಿಯೊಳಗೆ ಏಕಗ್ರಾಹಿಯಾಗಿರುವನು. ಇನ್ನು ಈ ಮರುಳನನ್ನು ಹೇಗೆ ಒಲಿಸಿಕೊಳ್ಳಲಿ ಎಂದು ಹೀಗೆಂದನು: ೧೮೯. ಸಂಜೀವಕನನ್ನು ಸಾಧುಸಜ್ಜನನ್ನಾಗಿ ಮಾಡಿ ದುಷ್ಟನೆಂದು ಜಡಿದು. ನುಡಿದೆ ಕುಂಜರಮದನಹರಣ ! ನಿನಗೆ ಇನ್ನೂ ಒಮ್ಮೆ ಹೇಳಿನೋಡುವೆ. ವ|| ಇಷ್ಟರಾದವರೂ ನಿವಾರಿಸಿದರೂ ಕೇಲದೆ ದುಷ್ಟರನ್ನು ಒಳಕ್ಕೆ ಸೇರಿಸಿ ಕೆಟ್ಟುಹೋದವರ ಕಥೆಗಳನ್ನು ಹೇಳುವೆ ಕೇಳಿ ಎಂದು ಹೇಳತೊಡಗಿದನು; ಶ್ಲೋ || ಕುಲಶೀಲವನ್ನು ಅರಿಯದವನನ್ನು ತನ್ನ ಮನೆಗೆ ಹೊಗಿಸಬಾರದು. ಕಿಂಡುಕನೆಂಬ ತಿಗುಣೆ ಮಾಡಿದದೋಷದಿಮಂದವಿಸರ್ಪಿಣಿ ಎಂಬ ವಸ್ತ್ರಮೃಗ ಕೆಟ್ಟುಹೋಯಿತು. ಅದು ಹೇಗೆಂದು ಹೇಳುವೆನು:

ಶ್ಲೋ|| ನತ್ವ ವಿಜ್ಞಾತಶೀಲಾಯ ಗೃಹೇ ದದ್ಯಾತ್ ಪ್ರತಿಶ್ರಯಂ
ಡುಂಡುಕಸ್ಯ ಹಿ ದೋಷೇಣ ಹತಾ ಮಂದವಿಸರ್ಪಿಣೀ ||೭೫||

ಟೀ|| ಅಜ್ಞಾತಕುಲಶೀಲನಪ್ಪಾತನಂ ತನ್ನಾವಾಸಮಂ ಪುಗಿಸಲಾಗದು : ಡುಂಡುಕನೆಂಬ ತಿಗುಣೆ ಮಾಡಿದ ದೋಷದಿಂ ಮಂದವಿಸರ್ಪಿಣಿಯೆಂಬ ವಸ್ತ್ರಮೃಗಂ ಕೆಟ್ಟುದು. ಅದೆಂತೆನೆ ಪೇೞ್ಗುಂ:

೧೮೭. ಸಾವೂ ಹುಟ್ಟೂ ಇಲ್ಲದವನೇ ದೇವನು : ಅತನ ಮಾತೇ ತತ್ವ ಜೀವದಯೆಯೇ ಧರ್ಮ; ಇಂದ್ರಿಯಸೇವೆಯನ್ನೂ ತೊರೆಯುವುದೇ ತಪಸ್ಸು ವ || ಎಂದು ಯೋಗೀಶ್ವರನು ತನ್ನ ಅಭಿಪ್ರಾಯವನ್ನು ಕಿರಿದರಲ್ಲಿ ತುಂಬುವಂತೆ ಹೆಲಲು ಅರಸನು ಸಂತೋಷಪಟ್ಟು ಅಲ್ಲಯೇ ಕುಳಿತುಕೊಂಡನು. ಅಗ ಅ ರಾಜಕೀರವು ನೇರಳೆ ಬಾಳೆ ಮೊದಲಾದ ರುಚಿಕರವಾದ ಹಣ್ಣುಗಳನ್ನೂ ತಂದುಕೊಡಲು ಅದನ್ನು ಅಸ್ವಾದಿಸಿ ಶ್ರಮ ಪರಿಹರಿಸಿಕೊಂಡು ಮಿತ್ರನಾದ ಆ ಗಿಗೆ  ಹೀಗೆ ಹೇಳಿದನು: ೧೮೮:  ದೇಹ, ರೂಪು ವಯಸ್ಸು, ಸ್ವರ, ಚೇಷ್ಟೆಗಳ್ಲಿ, ನಿನಗೆ ಅನುರುಪನಾದ ಒಂದು ಗಿಳಿ ಬೇಡರ ಹಳ್ಳಿಯಲ್ಲಿರುವುದನ್ನು ಕಂಡೆ. ಅದು ನನ್ನನ್ನು ಕಂಡು ಇವನ್ನನ್ನು  ಹಿಡಿ ಕಟ್ಟು ಕೊಲ್ಲು ಎಂದು ದುರ್ಣಯದಿಂದ ವರ್ತಿಸಿತು. ನೀನು ಮಿತ್ರನಾಗಿ ನಡೆದುಕೊಂಡೆ ಇದಕ್ಕೆ ಕಾರಣವೇನು? ಎಂದು ಕೇಳಲು ಶ್ಲೋ || ನನಗೂ ಆ ಪಕ್ಷಿಗೂ ತಂದೆ ತಾಯಿಗಳೊಬ್ಬರೆ. ನನ್ನನ್ನು ಈ ಮುನಿಗಳು ಕೊಂಡುಬಂದರು. ಅವನನ್ನು ಕ್ರೂರರು ಮ್ಲೇಚ್ಚರೂ ಅದ ಬೇಡರೂ ಕೊಂಡು ಹೋದರು. ಅಲ್ಲದೆ ಶ್ಲೋ || ನಾನು ಮುನಿಗಳ ವಚನವನ್ನು ಕೇಳುವೆನು. ಅವನು ಕ್ರೂರರಾದ ಮ್ಲೇಚ್ಚರ ಮಾತನ್ನು ಕೇಳುವನು. ಇದನ್ನು ಪ್ರತ್ಯಕ್ಷವಾಗಿ ನೀನೆ ಕಂಡಿರುವೆ. ಸಂಸರ್ಗದಿಮದ ದೋಷಗುಣಗಳುಂಟಾಗುವುವು ವ|| ಎಂದು ರಾಜಕೀರವು ಹೇಳಿದುದರಿಂದ ಎಚಿಥ ಬುದ್ದವಂತನೂ ಸಂಗವಶದಿಂದ ಸ್ವಭಾವಗುಣವನ್ನು ಬಿಡುವುದು ಸತ್ಯ. ನಾನು ಏನನ್ನು ಹೇಳಿದರೂ ನೀನು ಮೌನವಾಗಿರುವೆ. ಇದು ನಿನ್ನ ಪೂರ್ವಜನ್ಮದ ದುಷ್ಕೃತ್ಯ ಎಂದು ನೊಂಡು ನುಡಿದ ದವಕನಿಗೆ ಪಿಮಗಳಕನು ಹೀಗೆಂದನು ಸಂಜೀವಕನನ್ನು  ನಾನು ಓಡಿಸುವವನಲ್ಲ ಎಂದು ಹಲವು ರೀತಿಯಲ್ಲಿ ಹೆಳಿದ ನಿನ್ನನ್ನೂ ನಿವಾರಿಸಲಾಗದೆ ನಾನು ಮೌನದಿಂದಿದ್ದರೂ ನೀನು ಬಿಡದೆ  ಆ ಪ್ರಾಣಿಯ ಮೇಲೆ ನಿಷ್ಕಾರಣವಾU ವಿರೋಧವನ್ನು ಕಟ್ಟುವೆ ನಿನಗೆ ಕಯ್ಯೊಡ್ಡಿ ಬೇಡಿಕೊಳ್ಳುವೆ: ಇನ್ನಾದರೂ ಉಸಿರೆತ್ತದಿರು. ಅದಕ್ಕೆ ದವನಕನು ಅಶ್ಚರ್ಯಪಟ್ಟು ಮೃಗೇಂದ್ರನು ಇಚಿದ್ರನೀಲದಂತಿರುವ ಹುಲ್ಲು ಮೇಯುವ ವೃಷಬೇಂದ್ರನ ಬುದ್ದಿಚಿiಳಗೆ ಏಕಗ್ರಾಹಿಯಾಗಿರುವನು. ಇನ್ನು ಈ ಮರುಳನ್ನು ಹೇಗೆ ಒಲಿಸಿಕೊಳ್ಳಲಿ ಎಂದು ಹೀಗೆಂದನು: ೧೮೯. ಸಂಜೀವಕನನ್ನು ಸಾದುಸಜ್ಜನನ್ನಾಗಿ ಮಾಡಿ ದುಷ್ಟನೆಂದು ಜಡಿದು ನುಡಿದೆ ಕುಂಜರಮದಹರಣ ! ನಿನಗೆ ಇನ್ನೂ ಒಮ್ಮೆ ಹೇಳಿನೋಡುವೆ. ವ|| ಇಷ್ಟರಾದವರೂ ನಿವಾರಿಸಿದರೂ ಕೇಲದೆ ದುಷ್ಟರನ್ನು ಒಳಕ್ಕೆ ಸೇರಿಸಿ ಕೆಟ್ಟುಹೋದವರ ಕಥೆಗಳನ್ನು ಹೇಳುವೆ ಕೇಳಿ ಎಂದು ಹೇಳತೊಡಗಿದನು; ಶ್ಲೋ || ಕುಲಶೀಲವನ್ನು ಅರಿಯದವನನ್ನು ತನ್ನ ಮನೆಗೆ ಹೊಗಿಸಬಾರದು. ಕಿಂಡುಕನೆಂಬ ತಿಗುಣೆ ಮಾಡಿದದೋಷದಿಮದ ಮಂದವಿಸರ್ಪಿಣಿ ಎಂಬ ವಸ್ತ್ರಮೃಗ ಕೆಟ್ಟುಹೋಯಿತು. ಅದು ಹೇಗೆಂದು ಹೇಳುವೆನು: