ಮಹಾದ್ರುಮನೆಂಬರಸಂಗೆ ಕಚದ್ರುಮನೆಂಬ ಮಗಂ ಪುಟ್ಟಿ ಬಾಲಕಾಲದಿಂ ತೊಟ್ಟು ವೃದ್ದೋಪಾಸ್ತಿಯಂ ಬಿಟ್ಟು ಸಪ್ತವ್ಯಸನವಶಗತನಾಗಿಯ ಖಲಜನಸಂಗತನುಮಾಗಿಯುಖೌಇ ನಡೆಯುತ್ತಮಿರೆ ಕೆಲವುಕಾಲದಿನಾತನ ತಂದೆ ಮಹಾದ್ರುಮಂ ದೀರ್ಘನಿದ್ರಿಕನುಮಪ್ಪುದುಂ ಕಚದ್ರುಮಂ ರಾಜ್ಯ ಪದವಿಯೊಳ್ ನಿಂದಂ ಅತಂ ನೀತಿಬ್ರಾಹನಪ್ಪುದಱೆಂ ಪೂರ‍್ವಾಪರ ವಿಚಾರವಿಕಳನಾಗಿ ಹಿತಪುರೋಹಿತ ಮಂತ್ರಿ ಮಹಾಸಮಾಂತಾರ್ವಂಶಿಕ ಮಹಾ ಪ್ರಧಾನ ಶ್ರೀಕರಣ ಸೇನಾನಾಯಕದ್ಯನೇಕರ ವೃತ್ತಿಪ್ರಪತ್ತಿಗಳಂ ಕಳೆದುಕೊಂಡು ತನ್ನೊಡನಾಡಿಗಳಪ್ಪ ಭಂಡಮಂಡಲಿಯನೆ ಪ್ರಧಾನ ಸಾಮಾಮತಾ  ಶಿಷ್ಟರ್ಕಳಂ ಮಾಡಿ ತಾಂ ಪಿತೃವಿತ್ತಮದೋನ್ಮತ್ತನಾಗಿ ಧರ್ಮದೊಳ್ ಬಹಿರ್ಮುಖನುಂ ಅರ್ಥದೊಳ್ನ್ಯಾಯಪಾರ್ಜಿತಾರ್ಥಂ ಕಾಮದೊಳತಿಕಾಮಿಯಂ ಮೋಕ್ಷದ ನಿರಪಕ್ಷಕನುಮಾಗಿ ರಾಮಾದ್ಯನೇಕ ರಾಜದತ್ತಿಗಳಪ್ಪನೇಕ ಭೂದೇವ ಭೋಗಾಗ್ರಹಾರಂಗಳನ ಗ್ರಹದಿಂದಳೆದು ಕರಭರಕ್ಷಮಮಪ್ಪ ನಾಡಂ ಬೇಡರಂತೆ ಪರಿಪರಿದು ನಿರವೇಶದಿಂ ಕಿಡಿಸಿಯುಂ  ಶಿಷ್ಟರ್ಗನಿಷ್ಟಮಂ ಮಾಡಿಯುಂ ದುಷ್ಟಕಷ್ಟರ್ಗಿಮಂ ಮಾಡಿಯಂ ಕುಳವರ್ಗ ತಳವರ್ಗಮುಮುಂ ಪರೆಯ ನಿಯೋಗಿಗಳುಮಂ ನಾನಾ ದೇಶಿಗಳುಮಪ್ಪ ವ್ಯವಹಾರಿಗಳುಮಂ ನೆವಮಿಟ್ಟು ಕವರ್ದುಕೊಂಡು ಸಮಸ್ತವಸ್ತುವಾಹನಂಗಳಂ ತನ್ನೊಡನಾಡಿಗಳಪ್ಪ ಭಂಡಮಂಡಲಿಗೆ ಸೂಱೆಗೊಟ್ಟು, ಇಂತು  ಸಪ್ತಾಂಗದೊ  ಳೇಕಾಂಗಮುೞೆಯೆ ಕಚದ್ರುಮನ ರಾಜ್ಯಂ ಕಳಕುಳಮಾಗಿರ್ದುದನಾತನ ದಾಯಾದಂ ಸಿಂಹಬಳನಱೆದು ಮೇಲೆತ್ತಿ ಬರೆ; ಮೂಲಭೃತ್ಯ ಸುಹೃತ್ಸೇನಾಟವಿಕರೆಲ್ಲರುಂ   ಮುನ್ನಮೇ ಭೀತರುಮಪಮಾನಿತರು ಮಪ್ಪುದಱೆಂದುಪೇಕ್ಷಿತರುಂ ಆತನ ಭಂಡಮಂಡಲಿ ಯೊಳ್ ಕೆಲರೋಡಿಯಂ ಕೆಲರಹಿತರೊಳ್ ಕೂಡಿಯುಂ ಇಂತೆಲ್ಲಂ ಯಥಾಯಥಮಾಗೆ; ಕಚದ್ರುಮಂ ನಿರ್ಬುದ್ಧಿಯೊರ್ವನೆ ಕರುಮಾಡದೊಳ್ ಶ್ವೇತಕಪೋತನಂತಿರ್ದು ಶತ್ರುಸಂಗ್ರಹಣಕ್ಕೊಳಗಾದಂ ಇಂತೀ ಪಿಂಗಳಕನೇಗೆಯ್ದುಮಾಗದರಿಂ ಏನೊಂದು ಕಾರ್ಯಮುಮಂ ನಾಂ ಪೋಗಿರ್ದು ನೋಡುತಿರ್ಪುದೆ ಸಾಲ್ಗುಂ ನಾವೀ ರಾಜಕಾರ‍್ಯದೊಳ್ ತೊಡೆರ್ದು ಪರ‍್ಯಾಲೊಚನಾ ಪರಿವೃತ್ತಯೋಳೇನಪ್ಪುದು ಎಂತುಂ ಅವ್ಯಾಪಾರವೃತ್ತಿ ಯಾವುದುಂ ಪೊಲ್ಲದು; ಎಂತೆನೆ,

ಶ್ಲೋ|| ಅವ್ಯಾಪಾರೇಷು ವ್ಯಾಪರಂ ಯೋ ನರಃ ಕರ್ತುಮಿಚ್ಚತಿ
ಸ ಏವ ನಿಧನಂ ಯಾತಿ ಕೀಲೋತ್ಪಾಟೀವ ವಾನರಃ    ||೬||

ಟೀ|| ವ್ಯಾಪರಿಸುವದಕ್ಕೆ ಯೋಗ್ಯವಲ್ಲದಂತಪ್ಪ ಠಾವಿನೊಳ್ ಅವನೊರ್ವಂ ವ್ಯವಹರಿಸಲಿಚ್ಛೈಸಿಹಂ ಅತಂ ಕೀಲನುರ್ಚಿದ ಕೋಡಗನಂತೆ ಕೇಡನೈದುವಂ ಎಂಬ ಕಥೆಯಂತಕ್ಕು ಮೆನೆ, ದವನಕನಾ ಕಥೆಯೆಂತನೆ ಕರಟಕಂ ಪೇೞ್ಗುಂ :

ಶ್ಲೋ|| ಹೇಗೆಂದರೆ ಅರಸರು ಒಳಗಿರುವವರನ್ನು ಹೊರಗೆ ಹಾಕಬಾರದು. ಹೊರಗಿರುವವರನ್ನು ಒಳಕ್ಕೆ ಸೇರಿಸಕೂಡದು. ಹಾಗೆ ಮಾಡಿದವನು ಕಚದ್ರುಮನೆಂಬ ಅರಸನಂತೆ ಕೆಡುವನು ಎಂದು ಹೇಳಲು ದವನಕನು ಅದು ಹೇಗೆ ಎನ್ನಲು ಕರಟಕನು ಹೇಳತೊಡಗಿದನು: ವ|| ಮಹಾದ್ರುಮನೆಂಬ ಅರಸನಿಗೆ ಕಚದ್ರುಮನೆಂಬ ಮಗನು ಹುಟ್ಟಿ ಬಾಲ್ಯದಿಂದ ವೃದ್ದೋಪಾಸ್ತಿಯನ್ನೂ ಬಿಟ್ಟು ಸಪ್ತವ್ಯಸನವಶಗತನಾಗಿ ಖಳಜನ ಸಂಗತನಾಗಿರಲು ಕೆಲವು ಕಾಲದ ಮೇಲೆ ತಂದೆ ಮಹಾದ್ರವನು ತೀರಿಹೋದನು ಅಗ ಕಚದ್ರುಮನು ರಾಜ ಪದವಿಯನ್ನು ಸ್ವೀಕರಿಸಿದನು. ಆತನು ನೀತಿ ಬಾಹಿರನಾದುದರಿಂದ ಪೂರ್ವಾಪರವಿಚಾರಹೀನನಾಗಿ ಹಿತಪುರೋಹಿತ ಮಂತ್ತಿ ಸಾಮಂತರನ್ನು ಕಳೆದುಕೊಂಡು ತನ್ನ ಒಡನಾಡಿಗಳಾಗಿದ್ದ ಭಂಡಮಂಢಲಿಯನ್ನೇ ಪ್ರಧಾನ ಸಾಮಂತಾದಿ ಶಿಷ್ಟರನ್ನು ಮಾಡಿ ತಾನು ಪಿತೃ ವಿತ್ತ ಮದೋನ್ಮತ್ತನಾಗಿ ಧರ್ಮದಲ್ಲಿ ಬಹಿರ್ಮುಖನೂ, ಅರ್ಥದಲ್ಲಿ ಅನ್ಯಾಯೋಪಾರ್ಜಿತನೂ , ಕಾಮದಲ್ಲಿ ಅತಿಕಾಮಿಯೂ ಮೋಕ್ಷದಲ್ಲಿ ನಿರಪೇಕ್ಚನೂ ಅಗಿ ರಾಮಾದಿ ಅನೇಕ ರಾಜದತ್ತಿಗಳಾದ ಅನೇಕ ಬ್ರಾಹ್ಮಣರ ಭೋಗಾಗ್ರಹಾರಗಳನ್ನು ನಾಶ ಮಾಡಿ ಹೊರಲಾರದಷ್ಟು ತೆರಿಗೆಯನ್ನುಳ್ಳ ನಾಡನ್ನು  ಬೇಡರಂತೆ ಹರಿಹರಿದು ಸಂಪೂರ್ಣವಾಗಿ ನಾಶಮಾಡಿಯೂ, ಶಿಷ್ಟರಿಗೆ  ಅನಿಷ್ಟವನ್ನು  ಮಾಡಿಯೂ ದುಷ್ಟರಿಗೂ ಕೇಡಿಗರಿಗೂ ಒಳ್ಳೆಯದನ್ನು ಮಾಡಿಯೂ, ಕುಳವರ್ಗ, ತಳವರ್ಗವನ್ನು ಹಳೆಯ ನಯೋಗಿಗಳನ್ನು ನಾನಾ ದೇಶದಲ್ಲಿ ವ್ಯವಹಾರ ಮಾಡುವವರನ್ನು ನೆವ ಹೇಳಿ ಬಲಾತ್ಕಾರದಿಂದ ತೆಗೆದುಕೊಂಡು, ಸಮಸ್ತ ವಸ್ತುವಾಹನಗಳನ್ನು ತನ್ನ ಒಡನಾಡಿಗಳಾದ ಭಂಡಮಂಡಲಿಗೆ ಸೂರೆಗೊಟ್ಟು ಹೀಗೆ ಸಪ್ತಾಂಗಗಳಲ್ಲಿ ಏಕಾಂಗ ಉಳಿಯಿತು. ಕಚದ್ರುಮನ ರಾಜ್ಯವು ಅಸ್ತವ್ಯಸ್ತವಾಗಿರುವುದನ್ನು ಆತನ ದಾಯಾದಿಯಾದ ಸಿಂಹಬಲನು ತಿಳಿದು ಆಕ್ರಮಿಸಲು ಮೂಲ ಭೃತ್ಯ ಮಿತ್ತ ಸೇನಾಟವಿಕರೆಲ್ಲರೂ ಮೊದಲೇ ಭೀತರೂ ಅಪಮಾನಿತರೂ ಆದುದರಿಂದ ತಿರಸ್ಕತರೂ ಆತನ ಭಂಡಮಂಡಲಿಯಲ್ಲಿ ಕೆಲವರು ಓಡಿಯೂ ಕೆಲವರೂ ಅಹಿತರೊಡನೆ ಕೂಡಿಯೂ ಹೀಗೆ ಎಲ್ಲರೂ ಅಲ್ಲಲ್ಲಿಯಾಗಲು ಕಚದ್ರುಮನು ಬುದ್ದಿಹೀನಾವಾಗಿ ಏಕಾಂಗಿಯಾಗಿ ಉಪ್ಪರಿಗೆಯಲ್ಲಿ ಬೆಳ್ಳಕ್ಕಿಯಂತೆ ಶತ್ರುವಿಗೆವಶಗತನಾದನು. ಹೀಗೆಯೇ ಈ ಪಿಂಗಳಕನೂ ಏನು ಮಾಡಿದರೂ ಆಗದಿರನು. ಯಾವ ಕಾರ್ಯವನ್ನು ನಾವು ಹೊರಗಿದ್ದು ನೋಡುತ್ತಿರುವುದೇ ಸಾಕು. ನಾವು ಈ ರಾಜ  ಕಾರ್ಯದಲ್ಲಿ ಸಿಲುಕಿ ಪರ್ಯಾಲೋಚನೆ ಮಾಡುವ ಸ್ಥಿತಿಯಲ್ಲಿ ಏನಾಗುವುದು? ಹೇಗೂ ವ್ಯವಹರಿಸುವದಕ್ಕೆ  ಅಯೋಗ್ಯವಾದ ಯಾವುದು ನೀಚವಾದುದು.