ಗಿರಿನಗರಮೆಂಬ ಪೊೞಲೊಳ್
ಧರೆಗನಾಥಂ ಸುಶರ್ಮನೆಂಬಂ ಲೋಕೋ
ತ್ತರಮಾಗೆ ದೇವತಾಮಂ-
ದಿರಮಂ ಮಾಡಿಸುತುಮಿರ್ಪಿನಂ ಕೆಲವುದಿನಂ ೮೦

ವ|| ಒಂದು ದಿವಸಂ ಮಧ್ಯಾಹ್ನಸಮಯಮಪ್ಪನ್ನೆಗಂ ಭರಂಬಟ್ಟು ಕೆಲ*ಸಂಗೈದಲ್ಲಿಯ ಬಿನ್ನಣಿಗರುಂ ಕರ್ಮಕಾರರುಂ ತಮ್ಮ ತಮ್ಮ ಮನೆಗುಣಲ್ಪೋಪುದುಂ: ಅದಱ ಕೆಲದ ನಂದನ ವನದೊಳ್ ವರ್ತಿಸುತಿರ್ಪ ಮರ್ಕಟಯೂಥಂ ಯಥಾ ಸ್ವೇಚ್ಛೇಯಿಂದತ್ತಮಿತ್ತಮೆತ್ತಂ ಪರಿಪರಿದು ದೇಗುಲದ ಶಿಖರಮನರ್ಡರ್ದೇಱೆ  ಒಟ್ಟಿರ್ದಿಟ್ಟಿಗೆಯಂ  ಕೆದೞೆಯುಂ ಸೇರಿರ್ದ ತಿದಿಗಳಂ ಸೀಳ್ದುಂ ಇದ್ದಿಲ ರಾಸಿಯಂ ಸೂಸಿಯಂ  ನಿಸರ್ಗಚಪಳಸ್ವಭಾವದಿಂದಾಡುತಿರ್ದು ಅವರೊಳಗತ್ಯಾಸನ್ನ ಕಾಲಮೃತ್ಯು ವಶಗತನಪ್ಪದೊಂದು ಗೋಲಾಂಗೂಲಂ ಬಂದು ಕರಗಸಿಗರೊಂದು ಭಾಗಂಬರಂ ಸೀಳ್ದು ನೂಲ ತಲೆಯೊಳ್ ಕೀಲಂ ಬೆಟ್ಟರ್ದ ಮರನಂ ಕಂದಡ ಮೇಲೆ ಕುಳ್ಳಿರ್ದು ಮುನ್ನಂ ಸೀೞುತಿರ್ದುದ ಪಲಗೆಗಳೆರಡುಮನೆಡಗಲಸಿರ್ದು ಬೆಟ್ಟಿರ್ದು ತಡೆಯದ ಕೀಲನಿರ್ಕೈಗಳಿಂದ ಪಿಡಿದು ಅರ್ಪ ಭರದಿಂದಲ್ಲಾಡಿ ಕೀೞ್ವುದುಮಾ ಪಲಗೆಗಳೆರಡುಂ ತೊಟ್ಟನೆ ಮರ್ಮಪ್ರದೇಶವನೌಂಕುವುದುಂ, ಬಲೀಮುಖಂ ಕಾಲಮುಖಮನೆಯ್ದಿತ್ತು.

ಅದು ಕಾರಣದಿಂದದಱಮಪ್ಪುದು. ಉದರಭರಣಮಾತ್ರಮಪ್ಪಂತೆ ರಾಜಾನು ಸೇವನಂಗೆಯ್ದಿರ್ಪೆವು ಎನೆ, ದವನಕನಿಂತೆಂದಂ

ಶ್ಲೋ|| ಸಹೃದಾಮುಪಕಾರ ಕಾರಣತ್ ದ್ವಿಷತಾಪ್ಯಪಕಾರಕಾರಣಾತ್
ನೃಪಸಂಶಯ ಇಷ್ಯತೇ ಬುದೈಃ ಜಠರಂ ಕೋ ನಬಿಭರ್ತಿಕೇವಲಮ್||೭||

ಟೀ|| ಮಿತ್ರರ್ಗುಪಕಾರಮಂ ಮಾೞ್ಪುದೇ ಕಾರಣಮಾಗಿ ನೃಪಸೇವೆಯಂ ಮಾಡಲ್ವೇೞ್ಕುಮೆಂದು ವಿದ್ವಾಂಸರ್ ಪೇಳ್ವರ್ ತನ್ನೊಡಲಂ ಪೊರೆಯಲಱೆಯದವನಾರುಮಿಲ್ಲಂ ಎಂಬೀ ಪುರಾತನವಾಕ್ಯಮುಂಟು ಅದರಂ ನಾವಪ್ಪೊಡೆ ಮೃಗಾರಾಜಂಗನ್ವಯಾಗತರುಂ ಹಿತರುಮಪ್ಪ ನಮಗಿನಿತು ಕುಡದಿರ್ದೊಡುಂ

ಶ್ಲೋ*|| ಪ್ರಭುರ್ಗುಣ ವಿಹೀನೋಪಿ ವಿಪತ್ತೌನ ಪರಿತ್ಯಜೇತ್         ||೮||

ಟೀ|| ಗುಣಮಿಲ್ಲದವನದೊಡೆಯುಂ ಒಡೆಯನಂ ಅಪತ್ತಿನಲ್ಲಿ ಬಿಡಲಾಗುದು ಎಂಬ ನೀತಿವಾಕ್ಯಮುಂಟದಱೆಂದಾಳ್ದಂ ಎಂತು ನಿರ್ಗುಣನಾದೊಡಂ ಗುಣವಂತನಪ್ಪ ಭೃತ್ಯನಾಳ್ದನೆಡರಂ ಕಡೆಗಣಿಸಿರ್ಪುದೊಪ್ಪದು ಅಲ್ಲದೆಯುಂ  ನಮ್ಮರಸನೀಗಳ್ ಭಯಾತುರನುಂ, ಕಾರ‍್ಯತುರನುಮಾರ್ಗಿರ್ದಪಂ:

ಗುಪ್ತ ಕಾರ‍್ಯಮನಾಪ್ತವರ್ಗಕ್ಕೆಲ್ಲದುೞೆದರ್ಗಪುವನಲ್ಲಂ* ಅದಱೆಂದರಸನನೆಯ್ದಿ ಕಾರ‍್ಯದೊಳಗನಱೆವಮೆನೆ ಕರಟಕನಿಂತೆಂದಂ: ಅರಸಂ  ಭೀತನಾದುದನೇ ತೆಱದಿಂದಱೆದೆಯೆನೆ ದವನಕನಿಂತಿಂದಂ;

ಶ್ಲೋ|| ಉದೀರಿತೋರ್ಥಃ ಪಶುನಾಪಿಗೃಹ್ಯತೇ ಹಯಾಶ್ಚಬಾಗಾಶ್ಚವಹಂತಿ ಚೋದಿತಾಃ
ಅನುಕ್ತಮಪ್ಯೂಹತಿಪಂಡಿತೋಜನಃಪರೇಂಗಿತಜ್ಞಾನಫಲಾಹಿಬುದ್ಧಂiiಃ||೯||

ಟೀ|| ನುಡಿಯಲ್ಪಟ್ಟ ಪ್ರಯೋಜನಮಂ ಪಶುವಾದೊಡಮಱೆವುದು: ಕುದುರೆಗಳುಂ ಅನೆಗಳುಂ ನೂಂಕಲೌಂಕಲುಂ ನಡೆವುವು : ವಿವೇಕಿಗಳಪ್ಪವರ್ಕಳ್ ಪೇೞದಿರ್ದರುಮರವರ್; ಪೆಱರ ಅಂತರ್ಗತಮನಱೆವುದೇ ಬುದ್ದಿಗೆ ಫಲಂ ಎಂಬುದಱೆಂದೀತನಿರ್ದರವೇ ಭೀತನಾದುದುನಱೆಪಿದಪ್ಪುದು: ಈಯವಸರದೊಳೊಳಪೊಕ್ಕು ತಿಳಿದು ಅರಸನ ಮನದೊಳೊದವಿದ ಭಯಮಂ ಕಳೆಯಲ್ ವೇೞ್ಕುಮಂತೆ ನಾವಾಪ್ತರಂ  ಹಿತರಮಪ್ಪೆವೆನೆ  ಕರಟಕನಿಂತೆಂದಂ:

ಶ್ಲೋ|| ಹೇಗೆಂದರೆ ವ್ಯವಹಾರಕ್ಕೆ ಯೋಗ್ಯವಲ್ಲದಂತಹ ಸ್ಥಳದಲ್ಲಿ ಯಾರು ವ್ಯವಹರಿಸುವದಕ್ಕೆ ಇಚ್ಚಿಸುವನೊ ಅವನು ಕೀಲನ್ನು ಎಳೆದ ಕೋಡಗನಂತೆ ಕಾಲವಶನಾಗುವನು ಎಂಬ ಕಥೆಯಂತೆ ಆಗುವುದು ಎನ್ನಲು ದವನಕನು ಆ ಕಥೆ ಏನು ಎನ್ನಲು ಕರಟಕನು ಹೇಳಿತು;

೮೦. ಗಿರಿನಗರ ಎಂಬ ಪಟ್ಟಣದಲ್ಲಿ ಸುಶರ್ಮನೆಂಬ ಅರಸನು ಲೋಕೋತ್ತರವಾದ ದೇವಾಲಯವನ್ನು ಕಟ್ಟಿಸುತ್ತಿರಲು ಒಂದು ದಿವಸ ಮಧ್ಯಾಹ್ನ ಸಮಯದಲ್ಲಿ ಅವಸರ ಅವಸರವಾಗಿ ಕೆಲಸವನ್ನು ಮಾಡಿ ಅಲ್ಲಿಯ ವಿಜ್ಞಾನಿಗಳೂ ಕಮ್ಮಾರರು ತಮ್ಮ ತಮ್ಮ ಮನೆಗೆ ಉಣ್ಣಲು ಹೋದರು. ಅದರ ಸಮೀಪದ ನಂದನವನದಲ್ಲಿ ತಿರುಗಾಡುತ್ತಿದ್ದ ಮಂಗಗಳ ಗುಂಪೊಂದು ಸ್ವೇಚ್ಚೆಯಿಂದ ಅತ್ತಿತ್ತ ಎತ್ತಲೂ ಅಡ್ಡಾಡುತ್ತ ದೇಗುಲದ ಶಿಖರವನ್ನು ಏರಿ ರಾಶಿ ಹಾಕಿದ ಇಟ್ಟಿಗೆಯನ್ನು ಕೆದರಿ ಸೇರಿಸಿದ್ದ ತಿದಿಗಳನ್ನು ಸೀಳಿ ಹಾಕಿ ಇದ್ದಿಲ ರಾಶಿಯನ್ನು ಸೂಸಿ ಸಹಜವಾದ ಚಪಲ ಸ್ವಭಾವದಿಂದ ಆಡುತ್ತಿದ್ದವು. ಅವುಗಳಲ್ಲಿ ಮೃತ್ಯುವಿಗೆ ತುತ್ತಾಗುವುದಕ್ಕೆ  ಕಾಲ ಹತ್ತಿರವಾದ ಒಂದು ದೊಡ್ಡ ಬಾಲದ ಕಪಿ ಬಂದು ಕರಗಸಿಗರು ಒಂದು ಭಾಗದವರೆಗೆ ಸೀಳಿ ನೂಲಿನ ತಲೆಯಲ್ಲಿ ಕೀಲನ್ನು ನಾಟಿದ್ದ ಮರವನ್ನು ಕಂಡು ಅದರ ಮೇಲೆ ಕುಳಿತುಕೊಂಡು, ಮೊದಲೇ ಸೀಳುತ್ತಿದ್ದು ಉಳಿದ ಹಲಗೆಗಳೆರಡರನ್ನು ಬೇರೆಬೇರೆಯಾಗಿ ಮಾಡಲು ಹೊಡೆದಿದ್ದ ಕತ್ತರಿಸದ ಕೀಲನ್ನು ಎರಡೂ ಕೈಗಳಿಂದಲೂ ಹಿಡಿದು ಸಾಧ್ಯವಾದಷ್ಟು ಬಲವಾಗಿ ಅಲ್ಲಾಡಿಸಿ ಕಿತ್ತಿತು, ಆ ಹಲಗೆಗಳೆರಡೂ ತಟಕ್ಕನೆ ಮರ್ಮಪ್ರದೇಶವನ್ನು ಒತ್ತಲು ಆ ಕಪಿಯು ಮೃತ್ಯುವಿಗೆ  ತುತ್ತಾಯಿತು. ಆ ಕಾರಣದಿಂದ ಅದರಂತೆಯೇ ಆಗುತ್ತದೆ ಹೊಟ್ಟೆಪಾಡಿಗೆಂಬಂತೆ ರಾಜನ ಸೇವೆಯನ್ನು ಮಾಡುತ್ತಿರೋಣ ಎನ್ನಲು ದವನಕನು ಹೀಗೆಂದಿತು; ಶ್ಲೋ|| ಮಿತ್ತರಿಗೆ ಉಪಕಾರವನ್ನು ಶತ್ರುಗಳಿಗೆ ಅಪಕಾರವನ್ನು ಮಡುವುದಕ್ಕಾಗಿ ನೃಪಸೇವೆಯನ್ನು ಮಾಡಬೇಕೆಂದು ವಿದ್ವಾಂಸರು ಹೇಳಿದರು, ತನ್ನ ಹೊಟ್ಟೆ ಹೊರೆದು  ಕೊಳ್ಳಲು ತಿಳಿದವನೂ ಯಾರೂ ಇಲ್ಲ ಎಂಬ ಪುರಾತನ ವಾಕ್ಯವಿದೆ. ಅದರಿಂದ ಮೃಗರಾಜನಿಗೆ ಅನ್ವಯಾಗತರೂ ಹಿತರೂ ಅದ ನಮಗೆ ಏನನ್ನೂ ಕೊಡದಿದ್ದರೂ,  ಶ್ಲೋ|| ಗುಣಹೀನನಾಗಿದ್ದರೂ ಒಡೆಯನನ್ನು ಅಪತ್ತಿನಲ್ಲಿ ಕೈಬಿಡಬಾರದು ಎಂಬ ನೀತಿ ವಾಕ್ಯವುಂಟು * ಅದರಿಂದ ನಮ್ಮೊಡೆಯ  ಎಂಥ ನಿರ್ಗುಣನಾದರೂ ಗುಣವಂತನಾದ ಭೃತ್ಯನು ಒಡೆಯನ ಎಡರನ್ನು  ಕಡೆಗಣಿಸುವುದು ತರವಲ್ಲ* ಅಲ್ಲದೆ ನಮ್ಮ ಅರಸನು ಈಗ ಭಯಾತುರನೂ ಕಾರ್ಯತುರನೂ ಆಗಿರುತ್ತಾ ಗುಪ್ತಕಾರ್ಯವನ್ನು ಆಪ್ತ  ವರ್ಗಕ್ಕಲ್ಲದೆ ಉಳಿದವರಿಗೆ ಹೇಳುವವನಲ್ಲ. ಅದರಿಂದ ಅರಸನ ಬಳಿಗೆ ಹೋಗಿ ಕಾರ್ಯದ ಅಂತರಂಗವನ್ನು ಅರಿಯೋಣ. ಅದಕ್ಕೆ ಅರಸನು ಭೀತನಾಗಿರುವನು ಎಂದು ನೀನು ಹೇಗೆ ತಿಳಿದೆ ಎಂದು ಕರಟಕನು ಕೇಳಲು ದವನಕನು ಹೀಗೆಂದಿತು: ಶ್ಲೋ|| ಹೇಳಿದ ಅರ್ಥವನ್ನು ಪಶುವಾದರೂ ಅರಿಯಬಲ್ಲುದು. ಕುದುರೆಗಳೂ ಆನೆಗಳು ನೂಕಲು ಅವುಕಲು ನಡೆಯುವುವು.  ವಿವೇಕಿಗಳಾದವರೂ ಹೇಳದಿದ್ದರೂ ತಿಳಿಯಬಲ್ಲರು. ಪರರ ಇಂಗಿತವನ್ನು ಅರಿಯುವುದೇ ಬುದ್ದಿಯ ಫಲ. ಈತನಿದ್ದ ರೀತಿಯೇ ಭೀತನಾಗಿರುವುದನ್ನು ತಿಳಿಸುವುದು. ಈ ಸಂದರ್ಭದಲ್ಲಿ ಒಳಹೊಕ್ಕು ತಿಳಿದು ಅರಸನ ಮನಸ್ಸಿನಲ್ಲಿ ಸಂಭವಿಸಿದ ಭಯವನ್ನು ನಿವಾರಿಸಬೇಕು.  ಅದಕ್ಕೆ ಕರಟಕ ಹೀಗೆಂದಿತು:

ಸುರತಾಸಕ್ತನನನ್ಯಕಾರ‍್ಯಪರನಂ ನಿದ್ರಾಳುವಂ ಕೋಪಭೀ-
ಕರನಂ ವಾದಿತ ನೃತ್ಯ ಗೀತ ಮಧುರಾಳಾಪೇಷ್ಟ ಗೋಷ್ಟೀಮನೋ
ಹರನಂ ಕುಕ್ಕುಟ ಮಲ್ಲಮೇಷ ಮಹಿಷೇಭ ದ್ವಂದ್ವಯುದ್ದಕ್ರಿಯಾ
ಪರನಂ ಭೂಪನನೆಯ್ದಿ ಬಿನ್ನವಿಸಬೇಡೇನಾದೊಡಂ ಸೇವಕಂ  ೮೧

ಅರಿನೃಪರುತ್ಸವಮಂ ಕೇ
ಲ್ದರೆಯುಂ ಸೆಂಡಾಡುತಿರೆಯುಮಾನೆಯನೇಱು-
ತ್ತಿರೆಯುಂ  ಮಂತಣದೂಳ್ ಕು-
ಳ್ಳಿರೆಯುಂ ಬಿನ್ನವಿಸಲಾಗದೆಂತುಂ ಭೃತ್ಯಂ  ೮೨

ಭೀತನ ನಲಸಿದನಂ ಕಾ-
ರ‍್ಯಾತುರನಂ ಪಸಿದನಂ ತೃಷಾಪೀಡಿತನಂ
ದ್ಯೂತಮೃಗವ್ಯಸನ ಜನೋ-
ಪೇತನನಱೆದು ಬಿನ್ನವಿಪ್ಪಂ ಗಾಂಪಂ  ೮೩

೮೧. ಕಾಮಸಕ್ತನೂ ಅನ್ಯಕಾರ್ಯಪರನೂ ನಿದ್ರಾಳುವೂ ಕೋಪ ಭಯಂಕರನೂ ವಾದ್ಯ ನೃತ್ಯ ಗೀತ ಮಧುರಾಳಾಪಗಳಲ್ಲಿ ಇಷ್ಟಗೊಷ್ಠಿ ಮನೋಹರನೂ ಕೋಳಿ, ಮಲ್ಲ, ಕುರಿ, ಕೋಣ ಆನೆಗಳ ದ್ವಂದ್ವ ಯುದ್ದದಲ್ಲಿ ತತ್ಪರನಾದವನೂ ಆದ ರಾಜನನ್ನು ಸೇವಕನಾದವನು ಎನಾದರೂ ಕೇಳಿಕೊಳ್ಳಬಾರದು. ೮೨. ಶತ್ರು ರಾಜರ ಉತ್ಸವವನ್ನು ಕೇಳಿದಾಗಲೂ ಚೆಂಡಾಡುತ್ತಿರುವಾಗಲೂ ಆನೆಯನ್ನು ಏರುತ್ತಿರುವಾಗಲೂ ಮಂತ್ರಾಲೋಚನೆಯಲ್ಲಿ ಕುಳಿತುಕೊಳ್ಳುವಾಗಲೂ  ಭೃತ್ಯನಾದವನು ಏನಾದರೂ ವಿಜ್ಞಾಪಿಸಿ ಕೊಳ್ಳಲಾಗದು. ೮೩. ಭೀ*ತನೂ ಅಲಸಿಯೂ ಕಾರ್ಯತುರನೂ ಹಸಿದವನೂ ತೃಷಾಪೀಡಿತನೂ ದ್ಯೂತ ಬೇಟೆಯ ಜನರಿಂದ ಕೂಡಿದವನೂ ಅದವನನ್ನು ವಿಜ್ಞಾಪಿಸಿಕೊಳ್ಳುವನೂ ದಡ್ಡನು.

ವ|| ಇಂತೀ ಸೇವಾಧರ್ಮಮುಂ ನಾವಱೆದುಮಱೆಯದರಂತೆ ಪೊಕ್ಕು ನುಡಿವುದು ತಕ್ಕುದಲ್ಲೆನೆ ದವನಕನಿತೆಂದಂ: ನೀನೆಂದಂತೆ ನೀತಿವಿದನಪ್ಪರಸನನೇ ತಱದಿಂ ಸೇವಿಸುವುದೇ ನೀತಿಯಪ್ಪದು ಅವಿನೀತನುಂ ಅಪ್ರತಿಷ್ಟನುಂ ಸ್ವಪರಾಂತಸ್ಥವಿದನುಮಲ್ಲದರಸನನಱೆದಿಂ ಬಳಿಕ್ಕೆ ಸಮೀಪಕ್ಕೆ ಪೋಗಿ ದುರಭಿಮಾನದಿಂ ನುಡಿವುದು ತಕ್ಕುದಲ್ಲಂ ಅದೆಂತೆನೆ ;

ಶ್ಲೋ|| ಆಸನ್ನಮೇವ ನೃಪತಿರ್ಭಜತೇ ಮನುಷ್ಯಂ ವಿದ್ಯಾವಿಹೀನಮಕುಲೀನಮಪಚಿಡಿತಂ ವಾ ಪ್ರಾಯೇಣ ಭೂಮಿಪತಯಃ ಪ್ರಮದಾಲತಾಶ್ಚಯಃ ಪಾರ್ಶ್ವತೋ ವಸತಿ ತಂ ಪರಿವೇಷ್ಟಯಂತಿ ||೧೦||

ಟೀ|| ಅರಸುಗಳ್ ತಮ್ಮ ಪೊರೆಯೊಳಿರ್ದೋಲೈಸುವ ಮನುಜಂ ವಿದ್ಯೆಯಿಲ್ಲದವನಾದೊಡಂ ಅಕುಲೀನನಾದೊಡಂ ಅಯೋಗ್ಯನಾದೊಡಂ ಸ್ವೀಕರಸಿವವರ್ ಸ್ತ್ರೀಯರ್ಕಳ್ ಅವನೊರ್ವಂ ಕೆಲದೊಳಿರ್ದಪನವನನೇ ಪಿಡಿವರ್. ಲತೆಗಳ್ ಸಮೀಪದಲಾವ ಮರನಿರ್ದಪುದದೆನೇ ಪಿಡಿವುವು ಎಂಬ ಪುರಾತನನೀತಿಗಳೊಳವೆಂಬುದುಂ ಕರಟಕನಿಂತೆದಂ:

ವಾಕ್ಯಂ|| ಬುದ್ದೇ ಫಲಮನಾಗ್ರಹಃ

ಟೀ|| ಬುದ್ದಿಗೆ ಫಲವು ಅಗ್ರಹವಿಲ್ಲದಿರುವುದು ಎಂಬ ನೀತಿಯಿಂದನ್ನ ಅಗ್ರಹಮಂ ಮಾಣ್ದೆಂ; ನಿನ್ನ ದುರಾಗ್ರಹದಿಂದೇನಾನುಮೊಂದು ದುರ್ಣಯಮಾಗದಿರದು; ಅದುಮಂ ಕಾಣಲಕ್ಕುಂ ನಿನಗಿದುವೇ ಕರ್ತವ್ಯವಪ್ಪೊಡೆ  ಪೋಗೆಂಬುದುಂ ದವನಕಂ ಬಂದು ಮಹಾಪ್ರತೀಹಾರನಪ್ಪ ಸುಭದ್ರನೆಂಬುದೊಂದು ವನಮಹಿಷನ ಸಾರೆವಂದು, ಅರಸನವಸರಮಾವುದೆಂದೊಂಡೆ ಅರಸನೆನಸುಂ ವಿರಸನಾಗಿರ್ದಪಂ ನಿಲ್ಲೆಂಬುದುಂ : ಕಟ್ಟಿದಿರೊಳ್ ನಿಂದನಂ ಪಿಂಗಳಕಂ ಕಂಡು ಅರಸುಗಳ್ ತಮಗೆನಿತುಂ ಸಮಚಿತ್ತಮಿಲ್ಲದಿರ್ದೊಡಂ ಸಮ್ಮುಖಕ್ಕೆ ಬಂದ ಪ್ರಾಣಿ ಮಾತ್ರಕ್ಕೆ ಪರಾಙ್ಮುಖರಾಗಲಾರದು. ದಾಕ್ಷಿಣ್ಯಂ  ಬೇಱ್ಕುಮೆಂಬ  ನೀತಿಯುಂಟು, ಈತನನ್ವಯಾಗತನುಮಾಪ್ತನುಂ ಕಾರ‍್ಯಸಹಾಯನು ಮಾರ್ಗಿರ್ಪಂ ಈಂiiವಸರದೊಳಿತನಂ ಬರಿಸಿ ಎನ್ನ ಮನೋಗತಕಾರ‍್ಯಮಂ ಪೇೞಲ್ವೇೞ್ಕುಮೆಂಬುದಂ ಬಗೆದು, ಬರವೇೞೆಂಬುದುಂ ವಿನೀತವೇಷಂ ಮೆಲ್ಲಮೆಲ್ಲನಾಸ್ಥಾನಮಂ ಪೊಕ್ಕು ಮೃಗಾರಾಜನನೆಯ್ದೆವಂದು ಸಾಷ್ಟಾಂಗಮೆಱಗಿ ಪೊಡೆವಟ್ಟೊಡೆ ಇತ್ತ ಬಾಯೆಂಬುದುಂ ಮಹಾಪ್ರಸಾದಮೆಂದು ಯಥೋಚಿತ ಪ್ರದೇಶದಳ್ ಕುಳಿರ್ದ ದವನಕನ ಮೊಗಮಂ ಪಿಂಗಳಕನಾದರಂಬೆರಸು ನೀಡುಂ ಭಾವಿಸಿ ನೋಡಿ,

ವ|| ಹೀಗೆ ಈ ಸೇವಾಧರ್ಮವನ್ನು ನಾವು ತಿಳಿದೂ ತಿಳಿಯದವರಂತೆ ಹೊಕ್ಕು ನುಡಿಯುವುದು ತಕ್ಕುದಲ್ಲ ಎನ್ನಲು ದವನಕನೂ ಹೀಗೆಂದನು ನೀನು ಹೇಳಿದಂತೆ ನೀತಿಜ್ಞನಾದ ಅರಸನನ್ನು ಹೇಗಾದರೂ ಸೇವಿಸುವುದೇ ನೀತಿಯೆನಿಸುವುದು. ಅವಿನೀತನೂ, ಅಪ್ರತಿಷ್ಟನೂ ತನ್ನನೂ ಇತರರನ್ನು ತಿಳಿಯಲಾರದು ಅರಸನನ್ನು ತಿಳಿದ ಮೇಲೆ ಸಮೀಪಕ್ಕೆ ಹೋಗಿ ದುರಭಿಮಾನದಿಂದ ನುಡಿಯುವುದು ಯೋಗ್ಯವಲ್ಲ. ಅದು ಹೇಗೆಂದರೆ, ಶ್ಲೋ|| ಅರಸರು ತಮ್ಮ ಹತ್ತಿರದಲ್ಲಿ ಇದ್ದು ಒಲೈಸುವ  ಮನುಜನು ವಿದ್ಯೆಯಿಲ್ಲದವನಾದರೂ ಕುಲೀನನಲ್ಲದಿದ್ದರೂ ಅಯೋಗ್ಯನಾದರೂ ಸ್ವೀಕರಿಸುವರು. ಸ್ತ್ರೀಯರು ಯಾವನಾದರೂ ಪಕ್ಕದಲ್ಲಿರುವನನ್ನೆ ಹಿಡಿದುಕೊಳ್ಳುವರು ಲತೆಗಳು ಸಮೀಪದಲ್ಲಿ ಯಾವ ಮರ ಇರುವದೋ ಅದನ್ನೆ ಅಪ್ಪುವುವು ಎಂಬ ಪುರಾತನ ನೀತಿಗಳಿವೆ ಎನ್ನಲು ಕರಟಕನು ಹೇಗೆಂದಿತು. ಶ್ಲೋ||  ಅಗ್ರಹವಿಲ್ಲದಿರುವುದೆ ಬುದ್ದಿಗೆ ಫಲ ಎಂಬ ನೀತಿಯಿಂದ ನನ್ನ ಅಗ್ರಹವನ್ನು ಬಿಟ್ಟೆನು. ನಿನ್ನ ಕೆಟ್ಟ ಹಟದಿಂದ ಎನಾದರೊಂದು ದುರ್ನೀತಿಯಾಗದೆ ಇರದು, ಅದನ್ನೂ ಕಾಣಬಹುದು. ನಿನಗೆ ಇದೇ ಕರ್ತವ್ಯವಾದರೆ ಹೋಗು ಎಂದಿತು. ದವನಕನು ಬಂದು ಮಹಾಪ್ರತೀಹಾರನಾದ ಸುಭದ್ರನೆಂಬ ಕಾಡುಕೋಣನ ಹತ್ತರ ಬಂದು ಅರಸನ ಸಂದರ್ಭವೇನು ಎನ್ನಲು ಅರಸನು ಏಕೋ ವಿರಸನಾಗಿದ್ದಾನೆ. ನಿಲ್ಲು ಎಂದಿತು. ಎದುರು ನಿಂದವನನ್ನು ಪಿಂಗಳಕನು ಕಂಡು ಅರಸರು ತಮಗೆ ಎಷ್ಟು ಸಮಾಧಾನವಿಲ್ಲದಿದ್ದರೂ ಎದುರಿಗೆ ಬಂದ ಪ್ರಾಣಿ ಮಾತ್ರಕ್ಕೆ ಪರಾಙ್ಞುಖರಾಗಬಾರದು: ದಾಕ್ಷಿಣ್ಯ ಬೇಕು ಎಂಬ ನೀತಿಯುಂಟು. ಈತನು ಅನ್ವಯಾಗತನೂ ಅಪ್ತನೂ ಕಾರ್ಯಸಹಾಯನೂ ಅಗಿರುವನು. ಈ ಸಂದರ್ಭದಲ್ಲಿ ಈತನನ್ನು ಬರಿಸಿಕೊಂಡ ನನ್ನ ಮನೋಗತ ಕಾರ್ಯವನನ್ನು ಹೇಳಬೇಕು. ಎಂದು ಯೋಚಿಸಿ ಬರಹೇಳು ಎನ್ನಲು ವಿನೀತ ವೇಷನು ಮೆಲ್ಲಮೆಲ್ಲನೆ ಅಸ್ಥಾನವನ್ನು ಪ್ರವೇಶಿಸಿ ಮೃಗಾರಾಜನನ್ನು ಸಮೀಪಿಸಿ ಸಾಷ್ಟಾಂಗ ನಮಸ್ಕರಿಸಲು ಇತ್ತ ಬಾ ಎನ್ನಲು ಮಹಾ  ಪ್ರಸಾದ ಎಂದು ಯಥೋಚಿತ ಪ್ರದೇಶದಲ್ಲಿ ಕುಳಿತುಕೊಂಡ ದವನಕನ ಮುಖವನ್ನು ಪಿಂಗಳಕನು ಅದರದಿಂದ *ರ್ಘಾಲೋಚಿಸಿ ನೋಡಿ ಹೀಗೆಂದಿತು:

ಏಂ ಗಳ ದವನಕ ಪಲವು ದಿ-
ನಂಗಳ್ ಕಂಡಱೆಯೆವಯ್ದೆ ಬಾರದುದುಂ ಕ —
ಜ್ಜಂಗಳನಱೆಪದುದಂ ಸಚಿ-
ವಂಗಂ ಕೂರ್ಪಂಗಮೆಂದುಮಿವು ಗುಣದೊಳಗೇ  ೮೪

ಎಂದಿನ ಮಾೞ್ಪ ಮನ್ನಣೆಯನೇಂ ಮಱೆದಿರ್ದೆನೊ ನಿನ್ನ ಪೇೞ್ದುದೊಂ
ದಂದಮನೊಲ್ಲದನ್ನಿಗರ ಪೇೞ್ದುದುಗೆಯ್ದೆನೊ ಮೂಲವೃತ್ತಿಯಿಂ
ದೊಂದಿ ನಿರಂತರಂ ನಡೆವ ಸಾಮ್ಯವನಾಂ ಪೆರರ್ಗಿತ್ತೆನೋ ಮನಂ
ನೊಂದವೊಲೆನ್ನ ಕಾರ್ಯಮನುಪೇಕ್ಷಿಸಿ ಮಾಣ್ದುದಿದಾವ ಕಾರಣಂ  ೮೫

೮೪, ಏನಯ್ಯ ದವನಕ! ಅನೇಕ ದಿನಗಳಿಂದ ಕಾಣಲಿಕ್ಕಿಲವಲ್ಲ. ನೀನು ಬಾರದುದೂ ಕಾರ್ಯಗಳನ್ನು ತಿಳಿಸದಿರುವದೂ ಸಚಿವರಿಗೂ  ಮಿತ್ರರಿಗೂ  ಭೂಷಣವೇ? ೮೫. ನಿನಗೆ ಯಾವಾಗಲೂ ಸಲ್ಲಬೇಕಾದ ಮನ್ನಣೆಯಲ್ಲಿ ಏನಾದರೂ ಕೊರತೆಯಾಯೀತೆ ? ನೀನು ಹೇಳಿದುದನ್ನು ಮಾಡದೆ ಬೇರೆಯವರೆಂದಂತೆ ನಡೆದುಕೊಂಡನೆ? ನಿನಗೆ ಕೊಡಬೇಕಾದ ಕಾರ್ಯವನ್ನು ಬೇರೆಯವರಿಗೆ ಒಪ್ಪಿಸಿದನೇ ಮನಸ್ಸು  ನೊಂದವರಂತೆ ನಿನ್ನ ಕಾರ್ಯವನ್ನು  ಉಪೇಕ್ಷಿಸಿರಲು ಕಾರಣವೇನು ?

ವ|| ಎಂಬುದುಂ ದವನಕಂ ಈತಂ ಕಾರ‍್ಯಾತುರನಪ್ಪುದು ತಪ್ಪದು ಎನ್ನಂ ಕರಂ ಮನ್ನಿಸಿ ಮಾತಾಡಿದಪಂ: ಎನಗಂ ಮನೋರಥ ಸಿದ್ದಿಯಾಗೆ ಬಗೆದೋರ್ಪುದು: ಅದರೆಂದೀತನ ಬುದ್ದಿಯಂ ನಿಶ್ಚ ಯಮಾಗರೆದು ಬೞೆಕದರ್ಕೆ ತಕ್ಕುದಂ ನೆಗೆೞ್ವೆನೆಂಬುದಂ ಮನದೊಳ್ ಬಗೆದು ಪಿಂಗಳಕಂಗಿತೆಂದಂ: ದೇವರ ಶ್ರೀ ಪಾದಸೇವಕರೊಳ್ ನಾನಾವ ದೊರೆ ? ಅರಸುಗೆಯ್ವಾತಂಗೆಂತಪ್ಪನುಂ ಬಾಳ್ತೆಯಾಗದನಿಲ್ಲಂ ಅದೆಂತೆನೆ:

ಶ್ಲೋ|| ದಂತಸ್ಥ ನಿರ್ಘರ್ಷಣ ಕೇನ ರಾಜನ್ ಕರ್ಣಸ್ಯ ಕಂಡೂಯಕೇನ ವಾಪಿ
ತೃಣೇನ ಕಾರ‍್ಯಂ ಭವತೀಶ್ವರಾಣಾಂಕಿಮಂಗವಾಕ್ಪಾಣಿಮತಾನರೇಣ||೧೧||

ಟೀ|| ಪಲ್ಲಂ ಸುಲಿವೊಡಂ ಕಿವಿ ತೀಂಬೊಡೆ ತುೞೆಸುವೊಡಂ ಪುಲ್ಲಿಂದೆನಿತುಂ ಪ್ರಯೋಜನಮುಂಟು. ಕೈಕಾಲ್ ನಡೆನುಡಿಯಳ್ಳ ಮನುಷ್ಯನಿಂದೆಂತುಂ ಕಾರ‍್ಯಮುಂಟು ಎಂಬ ರಾಜನೀತಿಯನಱೆ ವಿರಪ್ಪುದರಂ ಎನ್ನನಾದೊಡಂ ಮನ್ನಿಸವೇೞ್ಪುದು ‘ವೃಂದಂ ನರೇಂದ್ರಾಯತೇ ಎಂಬ ನೀತಿಯಂತೆ ಪೞೆಯರ ಮಕ್ಕಳನೆಂತುಂ ಪೊರೆಯಲೇವೇೞ್ಕುಂ. ಏತದರ್ಥಮಾಗಿ ದೇವರ್ ದಯೆವೆರಸು ಬೆಸಸಿದರ್.. ಎಮ್ಮಂತಪ್ಪ ಪ್ರಾಣಿಮಾತ್ರಗಳಿಲದೊಡೆ ಅಪ್ರತಿಮಾಪರಾಕ್ರಮನಪ್ಪ ನಿಮಗೆ ತೀರದ ಕಜ್ಜಮಾವುದಾನುಮಿಲ್ಲ. ಇನಿತುದಿವಸಮೆಯ್ದೆ ಬಾರದುದೆಲ್ಲಂ ನೀಮೆನ್ನನೆನ್ನವನೆನ್ನದ ಕಾರಣದಿಂ ದೂರದೊಳಿರ್ದು ನಿಮ್ಮಭ್ಯುದಯದೊಳ್ ಸುಖಂಬಾೞ್ದನ್ವಯಾಗತನಪ್ಪುದಱೆಂ ನಿಮ್ಮ ಸಿರಿಯಂ ಕಣ್ತೀವಿ ನೋಡಿಯಂ ನಿಮಗಪ್ಪ ಯೋಗಕ್ಷೇಮಂಗಳನಾರೈದುಂ ಸುಖದೊಳಿರ್ಪೆಂ  ಇಂದು ನಿಮ್ಮ ಮನಸ್ಸಿನೊಳಿನಿಸಾನುಂ ಶಂಕೆವೆರಸಿದ ಚಿಂತೆಯಂ ಕಂಡು ಇದರ ಕಾರಣಮಂ ನಿಮ್ಮಡಿಯಂ ಬೆಸಗೊಂಡು ತಿಳಿದು ಬೞೆಕ್ಕಿದರ್ಕೆ ತಕ್ಕ ಬುದ್ದಿ ಪ್ರತೀಕಾರಮಂ ಮಾಡಲುಂ ನಿಮ್ಮ ಸಂತೋಷದೊಳ್ ಕೊಡಲುಮೆಂದು ಬಂದೆಂ. ಎನಗಿನಿಸಾನುಂ ಏಕಾಂತಮಂ ದೇವರ್ ದಯೆಗೆಯ್ವುದೆಂದನಲ್; ಮೃಗಾರಾಜಂ ಶ್ವಾಪದಯೂಧಮಂ ಪೋಗಲ್ ವೇೞ್ವುದುಂ ದವನಿಕನಿಂತೆಂದಂ :

ವ|| ದವನಕನು ಈತ ಕಾರ್ಯತುರನಾಗಿರುವುದು ಸುಳ್ಳಲ್ಲ. ನನ್ನನ್ನು ಚೆನ್ನಾಗಿ ಮನ್ನಿಸಿ ಮಾತಾಡಿಸುತ್ತಿದ್ದಾನೆ ನನಗೂ ಮನೋರಥ ಸಿದ್ದಿಯಾಗುವಂತೆ ತೋರುವುದು. ಅದರಿಂದ ಇವನ ಬುದ್ದಿಯನ್ನು ನಿಶ್ಚಯಪಡಿಸಿಕೊಂಡು ಬಳಿಕ ಅದಕ್ಕೆ ತಕ್ಕುದಾದುದನ್ನು ಮಾಡುವೆ ಎಂದು ಅಲೋಚಿಸಿ ಪಿಂಗಳಕನಿಗೆ ಹೇಗೆಂದಿತು; ದೇವರ  ಶ್ರೀ ಪಾದಸೇವಕರಲ್ಲಿ ನಾನು ಯಾವ ಮಹಾ? ರಾಜ್ಯವಾಳುವವನಿಗೆ ಎಂಥವನೂ ಪ್ರಯೋಜನವಾಗದವನಿಲ್ಲ. ಹೇಗೆಂದರೆ, ಶ್ಲೋ|| ಹಲ್ಲನ್ನು ಉಜ್ಜಲು, ಕಿವಿಯನ್ನೂ ತುರಿಸಲು ಹುಲ್ಲಿನಿಂದಲೂ ಪ್ರಯೋಜನವುಂಟು. ಕೈಕಾಲು ನಡೆನುಡಿಯುಳ್ಳ ಮನುಷ್ಯನಿಂದ ಅಗದ ಕಾರ್ಯವುಂಟೇ ಎಂಬ ರಾಜ ನೀತಿಯನ್ನು ಅರಿತವರಾದುದರಿಂದ ನನ್ನನ್ನಾದರೂ ಮನ್ನಿಸಬೇಕು ‘ವೃಂದಂ ನರೇಂದ್ರಾಯತೇ- ಗುಂಪು ರಾಜನನ್ನಾಗಿಸುತ್ತದೆ ಎಂಬ ನೀತಿಯಂತೆ ವೃದ್ದ ಮಂತ್ರಿಗಳ ಮಕ್ಕಳನ್ನು ಹೇಗಿದ್ದರೂ ಕಾಪಾಡಲೇ ಬೇಕು. ನಮ್ಮಂತಹ ಪ್ರಾಣಿ ಮಾತ್ರಗಳಿಲ್ಲದಿದ್ದರೆ ಅಪ್ರತಿಮ ಪರಾಕ್ರಮಿಗಳಾದ ನಿಮಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ. ಇಷ್ಟು ದಿನ ಬಾರದಿರುವುದೆಲ್ಲ ನೀವು  ನನ್ನನ್ನು ಎಂದು ಹೇಳದುದರಿಂದ ಅಷ್ಟೇ ನಾನು ದೂರದಲ್ಲಿದ್ದು ನಿಮ್ಮ ದಯದಿಂದ ಅನ್ವಯಾಗತನಾಗಿರುವುದರಿಂದ  ನಿಮ್ಮ ಸಂಪತ್ತನ್ನು ಕಣ್ತುಂಬ ನೋಡಿ ನಿಮ್ಮ ಯೋಗಕ್ಷೇಮವನ್ನು ವಿಚಾರಿಸುತ್ತ ಸುಖದಿಂದಿದ್ದೆ. ಇಂದು ನಿಮ್ಮ ಮನಸ್ಸಿನಲ್ಲಿ ಸ್ವಲ್ಪ ಸಂದೇಹಗ್ರಸ್ತವಾದ ಚಿಂತೆಯನ್ನು ಕಂಡು ಇದರ ಕಾರಣವನ್ನು ನಿಮ್ಮಿಂದ ಕೇಳಿ ತಿಳಿದುಕೊಂಡು ಅನಂತರ ಅದಕ್ಕೆ ತಕ್ಕ ಬುದ್ದಿ ಪ್ರತಿಕಾರವನ್ನು ಮಾಡಲೂ ನಿಮ್ಮ ಸಂತೋಷದಲ್ಲಿ ಕೂಡಲೂ ಮನಸ್ಸಾಗಿ ಬಂದೆ, ನನಗೆ ಸ್ವಲ್ಪ ಏಕಾಂತವನ್ನು ದೇವರು ದಯಪಾಲಿಸಬೇಕು, ಎನ್ನಲು ಮೃಗಾರಾಜನು ಮೃಗಸಮೂಹವನ್ನು ಅಲ್ಲಿಂದ ಹೋಗಹೇಳಲು ದವನಕನು ಹೀಗೆಂದನು :

ನೀರನುಣಲ್ಕೆ ಪೋಗಿ ಯಮುನಾನದಿಗೊರ್ಮೆಯೆ  ಬೆರ್ಚಿದಂತೆ ನಿ*
ಷ್ಕಾರಣಮೇಕೆ ನೀಂ ಮಗುಳ್ದು ನಿನ್ನೊಳೆ ಚಿಂತಿಸುತಿರ್ದೆ ಪೇೞ*ದಂ
ಪಾರದೆ ಬೇರದೊಂದು ಮನನೂನ ಮದಾವಿಲ ಕುಂಭಿ ಕುಂಭ ನಿ-
ರ್ದಾರಣ ದಾರುಣಾಯತ ನಖಪ್ರಕರೋದ್ಗತ ದಂಷ್ಟ್ರಭೂಷಣಾ ೮೫

ವ|| ಎಂಬುದುಂ, ಪಿಂಗಳಕನತಿವಿಸ್ಮಯಂಬಟ್ಟು ಧಾತರುಕ್ತಾಶೋಕ ಕಿಸಲಯವಿಭಾಸಿಭಾಸುರ ಸಟಾಕಲಾಪಮಲ್ಲಾಡೆ ತಲೆಯಂ ತೂಗಿ ಪರೇಂಗಿತಜ್ಞಾನಮೀತಂಗಳುಳ್ಳದಾರ್ಗಮಿಲ್ಲ. ಈಗಳೆನ್ನ ಮನದೊಳೊದವಿದ ಮಹಾಭಯಮಪ್ಪ ಕಜ್ಜಕ್ಕೆ ಪ್ರತೀಕಾರಮನೇಕಾಕಿಯಾಗಿ ಚಿಂತಿಸಲ್ಬಾರದು. ಎಂತುಂ . ಸಹಾಯಾನ್ಮಂತ್ರನಿಶ್ಚಯಃ ಎಂಬ ವಾಕ್ಯಾರ್ಥಮುಂಟು. ಈತನಂ ಸಹಾಯಗುಣಸಂಪನ್ನ ಭೃತ್ಯಗುಣಸಂಪೂರ್ಣನುಮಪ್ಪುದಱೆಂ,

ಶ್ಲೋ|| ಸ್ವಾಮಿನಿ ಗುಣಾಂತರಜ್ಞೇ ಗುಣವತಿ ಭೃತ್ಯೇನುಕೂಲಿನಿ  ಕಳತ್ರೇ
ಮಿತ್ರೇಚಾವ್ಯಭಿಚಾರಿಣಿ ನಿವೇದ್ಯ ದುಃಖಂ ಸುಖೀ ಭವತಿ        ||೧೨||

ಟೀ|| ಗುಣಂಗಳಱೆವ ಒಡೆಯನಲ್ಲಿ ಗುಣವಂತನಪ್ಪ ಭೃತ್ಯನಲ್ಲಿ ಅನುಕೂಲೆಯಪ್ಪ ಸ್ತ್ರೀಯಲ್ಲಿ ತಪ್ಪದಿಹ ಮಿತ್ರನಲ್ಲಿ ತನ್ನ ದುಃಖವನಱೆಪಿ ಸುಖಿಯಾಗಿಹುದು ಎಂಬುದು ಈತಂಗಱೆಪದ ಕಜ್ಜಮುಂ ವೈದ್ಯಂಗಱೆಪದ ಕುತ್ತಮುಂ ತೀರಲಱೆಯದೆಂದು ನಿಷ್ಕಪಟಚಿತ್ತಂ ಮೃಗಾರಾಜಂ ಕಪಟಪಟುವಪ್ಪ ದವನಕಂಗಿಂತೆಂದಂ :

೮೫.ಅನೂನಮದಾವಿಲಕುಂಭಿಕುಂಭನಿರ್ದಾರಣದಾರುಣಾಯತನಖಪ್ರಕರೋದ್ಗತದಂ ಷ್ಟ್ರ ಭೂಷಣಾ! ನೀರು ಕುಡಿಯಬೇಕೆಂದು ಯಮುನಾನದಿಗೆ ಹೋಗಿ ಒಮ್ಮೆಯೇ ಹೆದರಿದವನಂತೆ ನಿಷ್ಕಾರಣವಾಗಿ ನೀನೇಕೆ ಚಿಂತಿಸುತ್ತಿರುವೆ ಎನ್ನಲು,

ವ||ಪಿಂಗಳಕನು ಅತ್ಯಂತ ವಿಸ್ಮಿತನಾಗಿ ಧಾತರುಕ್ತ ಶೋಕ ಕಿಸಲಯ ವಿಭಾಸಿ ಭಾಸುರ ಸಟಾಕಲಾಪವು ಅಲ್ಲಾಡುವಂತೆ ತಲೆಯನ್ನು ತೂಗಿ ಇವನಿಗಿರುವ  ಪರೇಂಗಿತಜ್ಞಾನ ಯಾರಿಗೂ ಇಲ್ಲ ಎಂದು ಮೆಚ್ಚಿಕೊಂಡನು.

ಶ್ಲೋ|| ಗುಣಗಳನ್ನು ತಿಳಿಯಬಲ್ಲ ಒಡೆಯನಲ್ಲಿಯೂ ಗುಣವಂತನಾದ ಸೇವಕನಲ್ಲಿಯೂ ಅನುಕೂಲೆಯಾದ ಹೆಂಡತಿಯಲ್ಲಿಯೂ ತಪ್ಪದ ಮಿತ್ರನಲ್ಲಿಯೂ ತನ್ನ ದುಖಃವನ್ನು ತಿಳಿಸಿ ಸುಖಿಯಾಗಿರಬೇಕು. ಇವನಿಗೆ ತಿಳಿಸದ ಕಾರ್ಯವು ವೈದ್ಯನಿಗೆ ಹೇಳದ ರೋಗದಂತಾಗುವುದು ಎಂದು ನಿಷ್ಕಪಟ ಚಿತ್ತನಾದ ಮೃಗಾದಿರಾಜನು ಕಪಟಪಟುವಾದ ದವನಕನಿಗೆ ಹೀಗೆಂದನು.

ನೋಡೆ ನವಜಲದ ರವದೊಳ್
ಕೂಡಿದುದಂತಪ್ಪುದೊಂದು ಶಬ್ಬಂ ಕಿವಿಯೊಳ್
ತೀಡೆ ಕರಮುಗಿದು ಮನಮ-
ಲ್ಲಾಡೆ ಭಯಂಗೊಂಡು ಪೋಗಲೊಲ್ಲದೆ ಮಗುೞ್ದೆಂ ೮೬

ಅವುದದೆಂದೊಡೆ ರೌದ್ರಾ-
ರಾವಂ ತಾನೊರ್ಮೆಗೊರ್ಮೆಗೀ ಬನವನಿತುಂ
ತೀವುವಿನಂ ಪೊಣ್ಮಿದಪುದು
ಭಾವಿಸಿ ನೀಂ ಕೇಳ  ಕೇಳಲಪ್ಪುದದಿನ್ನುಂ ೮೭

ಎನೆ, ದವನಕನೇಕಾಗ್ರಮನನಾಗಿ ಕರಿದು ಬೇಗಮದನಾಲಿಸಿ ಕೇಳ್ದೆಗಮಿನಿಸಾನುಂ ಭಯಂಕರರವಂ ಕೇಳಾಲಾದವುದೆಂಬುದುಂ, ಪಿಂಗಳಕನಿಂತೆಂದಂ: ಈ ಬನಮಪುರ್ವಸತ್ತ್ವಾವಿಷ್ಟಮಾದುದಿನ್ನಲ್ಲಿ ನಿಲ್ಲದೆ ಪೋಪುದೇ ಕಜ್ಜಮೆಂದಳ್ಕಿ ನ್ಮಡಿಯೆ, ದವನಕನಿಂತೆಂದಂ:

ಭೇರಿಮೃದಂಗ ಘಂಟಾ-
ನೀರದ ಶಂಖಾದಿಜನಿತ ಶಬ್ದಮನೇಕಾ-
ಕಾರಂ ಕೂಡುಗಮೆಯ್ದೆ ವಿ-
ಚಾರಿಸಿದನಂತೆ ಕೇಳ್ದು ನೀಂ ಬೆರ್ಚುವುದೇ ೮೮

ವ|| ಅದು ಕಾರಣದಿಂ ನೀವಿದೇನೆಂದಾರಯ್ಯದೆಯಂ ಮುನ್ನಮೆ ಪಶುವಿನಂತೆ ದೆಸೆದೆಸೆಗೆ ಬೆರ್ಚುವುದುಂ ಪಿತೃಪರ‍್ಯಾಗತಮಪ್ಪ್ ಬನಮಂ ಪತ್ತುವಿಡವ್ಯದಂ ತಕ್ಕುದಲ್ತೆನೆ : ಮೃಗಾರಾಜನಿಂತೆಂದಂ : ಈ ಮಹಾ ಗಂಭೀರ ಘೋರ ನಿರ್ಘೋಷಮುಂ ನೀಮ ಶಬ್ದ ಮಾತ್ರಮೆಂದೇಕೆ ನಿರಾಕರಸುವೆ? ವಿಚಾರಿಸುವಾಗಳಾ ಮಹಾ ಶಬ್ದಕ್ಕೆ ತಕ್ಕಂತುಟೇ ದೇಹಮಕ್ಕುಂ ಆ ದೇಹಕ್ಕ ತಕ್ಕ ಸತ್ವಂ ಸಮನಿಸುಗಂ ಆ ಸತ್ತ್ವಕ್ಕೆ ತಕ್ಕ ದರ್ಪಂ ದೊರೆಕೊಳ್ಗುಂ ಆ ದರ್ಪಕ್ಕೆ ತಕ್ಕ ಕಲಿತನಮಾಗದಿರದು ಅಂತಪ್ಪ ನಿಚ್ಚಟಗಲಿ ಕಲಹಮನೇ ಬಯಸಿ ತನಗೆ ಅಕನನರಸುವಂ ಅದರನಿಂತಪ್ಪತುಲಬಲ ಪರಾಕ್ರಮ ವಿಕ್ರಮದೊಳೆನಗಕನುಂ ಸಮಾನಬಲನುಮಲ್ಲದೆ ಹೀನನಾಗಲರಯನಪ್ಪುದನರೆದು, ನಿನ್ನ ಪೇಳ್ದಿ ಕಜ್ಜದ ಬಲಮಂ ಸಾಧಾರಣಂ ಮಾೞ್ಪೆನ್ನ ಬಲಮಂ ನಚ್ಚಿ ನಿಂದು  ವಿಗ್ರಹಮನೊಡರ್ಚಿದೆನಪ್ಪೋಡೆ ಇರ್ವರುಂ  ಸಮಾನಬಲರಾದಂದು ‘ಮಹಿಷಾಶ್ವಮಾಮೇಳನೇ ಸಹ ವಿನಶ್ಯತಿ ಎಂಬುದಕ್ಕುಂ ಅಕಬಲನಾದೊಡೆ ’ಹಸ್ತಿನಾ ಪದಾತಿಯುದ್ಧಮಿವ ಬಲವದ್ವಿಗ್ರಹಃ ಎಂಬ ನೀತಿಯಂತಕ್ಕುಂ ನೇತಿವಿರುದ್ದಂಗಳಪ್ಪ ಮಾತುಗಳಂ ನುಡಿದೆಯಾದೊಡೆ ಯಿಂತೀಯವಸರಕ್ಕೆ ತಕ್ಕುದೊಂದು ಕಥೆಯುಂಟೆಂಬುದಂ ದವನಕನದೆಂತೆನೆ. ಪಿಂಗಳಕಂ ಪೇಳ್ಗುಂ:

೮೬, ಗುಡುಗಿನ ಆರ್ಭಟದಂತೆ ಕೇಳಿಬಂದ  ಶಬ್ದವೊಂದು ಕಿವಿಯಲ್ಲಿ ಬಡಿಯಲು ಬೆದರಿ ಮುಂದರಿಯಲಾರದೆ ಹಿಂದಿರುಗಿದೆ, ೮೭, ಆ ರೌದ್ರ ಶಬ್ದ ಆಗೊಮ್ಮೆ ಇಗೊಮ್ಮೆ ಈ ವನವನ್ನೆಲ್ಲ ತುಂಬುವಂತೆ ಕೇಳಿಬರುವುದು ಅದನ್ನು ನೀನೂ ಇನ್ನೂ ಕೇಳಬಹುದು. ವ|| ದವನಕನು ಏಕಾಗ್ರಮನನಿಂದ ಸ್ವಲ್ಪ ಹೊತ್ತಿನಲ್ಲಿಯೇ ಅದನ್ನು ಆಲಿಸಿ ಕೇಳಿ ನನಗೂ ಭಯಂಕರವಾದ ಶಬ್ದ ಕೀಳಿಬರುವುದು ಎಂದನು. ಅದಕ್ಕೆ ಪಿಂಗಳಕನು ‘ ಈ ವನವು ಅಪೂರ್ವವಾದ ಪ್ರಾಣಿಯನ್ನೊಳಗೊಂಡಿದೆ. ಇನ್ನು ಇಲ್ಲಿ ನಿಲ್ಲದೆ ಬೇರೆಕಡೆಗೆ ಹೋಗುವುದೇ ಲೇಸು ಎನ್ನಲು ದವನಕನು ಹೀಗೆಂದನು. ೮೮. ಭೇರಿ, ಮೃದಂಗ, ಘಂಟೆ, ಗುಡುಗು, ಶಂಖ,  ಇವುಗಳ ಸ್ವರಗಳು ಈ ರೀತಿಯಲ್ಲಿ ಕೇಳಿಸುವುದುಂಟು. ಇದನ್ನು ವಿಚಾರಿಸದ ಹೆದರುವುದೇ? ವ|| ಅದರಿಂದ ನೀನು ಇದು ಏನು ಎಂದು ಮೊದಲೇ ಪಶುವಿನಂತೆ ದಿಕ್ಕುದಿಕ್ಕಿಗೆ ಹೆದರುವುದೂ ವಂಶಾನುಗತವಾಗಿ ಬಂದ ವನವನ್ನು ಬಿಡುವುದೂ ತಕ್ಕುದಲ್ಲ ಎನ್ನಲು ಪಿಂಗಳಕನು  ಹೀಗೆಂದನು : ಈ ಮಹಾ ಗಂಭೀರ ಘೋರ ನಿರ್ಘೋಷವನ್ನು ನೀನು ಶಬ್ದ ಮಾತ್ರವೆಂದು ಏಕೆ ನಿರಾಕರಿಸುವೆ? ವಿಚಾರಿಸಿ ನೋಡಿದರೆ ಆ ಮಹಾಶಬ್ದಕ್ಕೆ ತಕ್ಕುದಾದ ದೇಹವಿದ್ದೀತು: ಆ ದೇಹಕ್ಕೆ ತಕ್ಕ  ಸಾಮರ್ಥ್ಯವಿದ್ದೀತು: ಆ ಸಾಮಾರ್ಥ್ಯಕ್ಕೆ ತಕ್ಕ ದರ್ಪವೂ ಸೇರಿದ್ದಿತು: ದರ್ಪಕ್ಕೆ ತಕ್ಕ ಪರಾಕ್ರಮವೂ ಕೂಡಿದಿದ್ದರಬೇಕು. ಅಂತಹ ನಿಶ್ಚಲ ಪರಾಕ್ರಮಿಯೂ ಕಲಹವನ್ನೇ ಬಯಸಿ ತನಗಿಂತ ಅಕನಾದವನನ್ನು ಅರಸುವನು. ಅದರಿಂದ ಅತುಲಬಲ ಪರಾಕ್ರಮದಲ್ಲಿ ನನಗೆ ಅಕನೂ ಸಮಾನಬಲನೂ ಅಗಿರುವನೆ ಹೊರತು  ಹೀನಬಲನಲ್ಲ. ಅವನೊಡನೆ ನಾನು ಯುದ್ದ ಮಾಡಿದೆನಾದರೆ ಇಬ್ಬರೂ ಸಮಾನಬಲ್ಲರಾಗಿದ್ದರೆ, ‘ಮಹಿಷಾಶ್ವ ಮಾಮೇಳನೆ ಸಹ ವಿನಶ್ಯತಿ ಮಹಿಷಾಶ್ವಗಳಿಗೆ ಯುದ್ದವಾದರೆ ಎರಡೂ ಒಮ್ಮಲೇ ಸಾಯುವುವು- ಎಂಬಂತೆ ಅಗುವುದು.  ಅಕ ಬಲನಾದರೆ, ಹಸ್ತಿನಾ ಪದಾತಿಯುದ್ದಮಿವ ಬಲವದ್ವಿಗ್ರಹಃ- ಆನೆಯೊಡನ ಕಾಲಾಳಿನ ಕಾಳಗದಂತೆ ಎಂಬ ನೀತಿಯಂತಾಗುವುದು . ಅದರಿಂದ ಪೂರ್ವಪುರುಷರಿಂದ ಮಹಾಟವಿಯನ್ನ ಬಿಡಬಾರದು ನೀತಿವಿರುದ್ದವಾದ ಮಾತುಗಳನ್ನು ನುಡಿವೆಯಾದರೆ ಅದಕ್ಕೆ ತಕ್ಕ ಒಂದು ಕಥೆಯುಂಟು ದವನಕನು ಅದೇನೆಂದು ಕೇಳಲು ಪಿಂಗಳಕನು ಹೇಳತೊಡಗಿದನು;