ಸಕಲವೇದಾಂತಪಾರಂಗತನಪ್ಪ ಗೌತಮ ಮಹಾಮುನಿ ಮಹಾಟವಿಯಂ ಪೊಕ್ಕು ಉಗ್ರೋಗ್ರತಪೋನಿಯಮಾನುಷ್ಠಾನನಿಷ್ಠಿತಚಿತ್ತನಾಗಿ ಪಲವು ಕಾಲಂ ನಿರಾಹಾರನಾಗಿರ್ದ ಕಾರಣಂ ಪ್ರಾಣವಿಯೋಗಮಾಗಲಿರ್ದನನಾತಂ ಮುನ್ನ ನಡಪಿದುದೊಂದು ಗೋಲಾಂಗೂಲಂ ನಾಳಿಜಂಘನೆಂಬುದು ಕಂಡು ನಿಮ್ಮಡಿ, ನೀವೆನ್ನ ಶರೀರವನಾಹಾರಂ ಮಾಡಿದನುಕೆಲವು ಕಾಲಂತಪಂಗೆಯ್ಯಿಮೆಂದೊಡಾ ಮುನಿ ತಾಂ ನಡಪಿದ ಪ್ರಾಣಿಯಂ ತಿಂಬುದು ಧರ್ಮಮಲ್ಲೆಂದೊಡಾ ಕಪಿ ತಾಂ ತಾಪಸರ ಸಮೀಪದೊಳೆ ಬಳೆದ ಕಾರಣದಿಂ ತತ್ವವೇದಿಯಪ್ಪುದಱ*ಂ ಮತ್ತಮಿಂತೆಂದುದು; ನಿಮ್ಮಡಿ ನಿಮಗೆ ಭ್ರಾಂತಿಙನಮಿನ್ನು ಪೋದುದಿಲ್ಲ.

ಶರೀರಕ್ಕಲ್ಲದೆ ಶರೀರಿಗೆಲ್ಲಿಯುಂ ಕೇಡಿಲ್ಲ’ಪರೋಪಕಾರಾರ್ಥಮಿದಂ ಶರೀರಂ ಎಂಬುದನಱ*ವೆನಾಗಿಯುಂ ಈ ಶರೀರಮಂ ನಿಮಗಿತ್ತಪೆಂ. ನೀವಿದಂ ಕೈಕೊಂಡೆನ್ನಂ ಕೃತಾರ್ಥನಂ ಮಾಡಿಮೆಂದು ಪ್ರಾರ್ಥಿಸೆ ಪ್ರಾಣರಕ್ಷಣಾರ್ಥಂ ತಾಂ ನಡಪಿದ ಕಪಿಯಂ ತಿಂದಂ.

ಶ್ಲೋ|| ಪುನರ್ವಿತ್ತಂ ಪುನರ್ಮಿತ್ರಂ ಪುನರ್ಭಾರ‍್ಯಾ ಪುನರ್ಮಹೀ
ಪುನಶ್ಯಬ್ದಾದಯೋ ರಮ್ಯಾ ನ ಶರೀರಂ ಪುನಃ ಪುನಃ  ೧೦೩

ಟೀ|| ಧನಮಂ ಮಿತ್ರನಂ ಹೆಂಡತಿಯಂ ಭೊಮಿಯಂ ಇವೆಲ್ಲಮಂ ಮರಳಿ ಹಡೆಯಲ್ಬಹುದು ಶರೀರಮೆಂಬುದು ಮರಳಿ ಹಡೆಯಲ್ಬಾರದು ಎಂಬ ಶಾಸ್ತ್ರೋಕ್ತಮುಂಟಪ್ಪುದಱ*ಂ, ನಿಮಗಂ ಪುಣ್ಯಬೇನೆ ತಿಣ್ಣಮದಱ*ಂ ಮೇಲೆ ಕ್ಷುಧಾಪೀಡೆಯದುದಪ್ಪೊಡೆ ಶರೀರಮಂ ಸಂಹರಿಸಲ್ಬಾರದು ಕಥಕನಪ್ಪೊಡೆಲ್ಲಿಯಾನುಂ ಬಂದ ಕವಲದಂ ತಿಂದೊಡೊಂದುಂ ದೋಷಮಿಲ್ಲೆಂದೊಡಂತಾದೊಡಂ ನಿಮಗೆ ಮನೋವ್ಯಥೆಯಾಗದಂತು ನಾಲ್ವರುಂ ಬಂದೆಮ್ಮವ್ಮ್ಮಂ ನಿವೇದಿಸಿದೊಡಲ್ಲಿ ನಿಮ್ಮ ಮನಕ್ಕೆ ಬಂದರಂ  ಕಳೆದುಕೊಳ್ಳಿಮೆಂದು ಕಾಗೆ ಬಾಯ್ಗೆ ಬಂದುದಂ ಗೞಪಿದೊಡೆ ಮದೋತ್ಕಟನೊಡಬಟ್ಟಾವುದಮಂ ನೀನೆ ಬಲ್ಲೆಯೆನೆ ವಾಯಸಂ ಸೃಗಾಲ ಶಾರ್ದೂಲಂಗಳಲ್ಲಿಗೆ ಬಂದೊಟ್ಟೆಯಂ ಮೋಟ್ಟನೆ ಮಾೞ್ಪ ಕಜ್ಜಮಂ ಪೇಳ್ದೋಡಂಬಡಿಸಿ ಬಂದೆನೆಂದು ತತ್ಪ್ರಪಂಚಮೆಲ್ಲಮಂ ಪೇಳ್ದು ಬಳಿಕ್ಕೆಕಥಕನಂ ಕರೆದು ನಮ್ಮರಸು ಪಲವುದಿನಕ್ಕಮಾಹಾರಂ ಬಡೆಯದೆ ಮಱುಗುತ್ತಿರ್ದಪನಾಮುಂಪೆಱತೆಡೆಯೊಳಾಹಾರಂಬಡೆಯಲಾರ್ತೆವಿಲ್ಲೆಮ್ಮಂ ನಿವೇದಿಸಿದೊಡೇಗೆಯ್ದುಂ ತಪ್ಪುವನಲ್ಲಂ; ಸುಮ್ಮನಿರದೆ ಪಾಳಿಯಂ ಪಾಳಿಸುವಂ ಬನ್ನಿಮೆಂದಾ ಧೂರ್ತತ್ರಯಂ ಕಥಕ್ಕಂಬೆರಸು ಸಿಂಹನಲ್ಲಿಗೆ ಬಂದು ಪೊಡೆವಟ್ಟು ಬೞ*ಕ್ಕೆ ಕಾಗೆ ಇಂತೆಂದುದು;

ದೇವ ನಿಮಗಪ್ಪ ಪಿಶಿತಮ
ನಾವೆಡೆಯೊಳಮಱಸಿ ಪಡೆದೆವಿಲ್ಲಾದೊಡಮೇಂ
ನೀವುಳ್ಳೊಡೆ ಮತ್ತಂ ಪೆಱ
ತಾವುದುಮಂ ಪಡೆಯಲಕ್ಕುಮದಱ*ಂದೀಗಳ್  ೨೦೭

ಎಂದೆಂದಿನ ಬಾಣಸಕ್ಕೆನ್ನಂ ನಿವೇಸಿದೆಂ ದೇವರ್ ಕೈಕೊಳ್ಳಿಮೆನೆ ಮದೋತ್ಕಟನಿಂತೆಂದಂ; ಕಾಗೆಯಂ ತಿಂದಪೆನೆಂಬನಿತರೊಳೆ ವಿಕ್ರಮಾದಿತ್ಯದೇವನನಿನ್ನುಮೀ ಲೋಕಂ ಪೞ*ದಪುದು; ಅಂತುಮಲ್ಲದೆ ’ಕಾಗೆಯಡಗು ಬೋನಂಬುಗದು’ ಎಂಬುದು ಲೋಕಪ್ರಸಿದ್ಧಮದಱ*ಂ ನಿಷಿದ್ಧಮೆನೆ ಜಂಬುಕನಿಂತೆಂದುದು: ಅಂತಪ್ಪೊಡೆ ದೇವರೆನ್ನನಾರೋಗಿಸಿ ನಿರೋಗಿಗಳಾಗಿಮೆಂದೊಡೆ, ಉತ್ತುಂಗಮತ್ತಮಾತಂಗಮಂ ಕೊಂದು ತಿಂಬ ಸಿಂಹನೊಂದು ನರಿಯಂ ತಿಂದುದೆಂದು ಲೋಕಮಪಹಾಸ್ಯಂಗೆಯ್ಗುಮೆನೆ, ಪುಲಿ ಕಲಿಯಾಗಿ ಮುಂದೆ ನಿಂದು, ದೇವರೆನ್ನಂ ಭಕ್ಷಿಸಿ ನಿಮ್ಮ ಶರೀರಮಂ ರಕ್ಷಿಸಿಮೆಂದೊಡಾಂ ವ್ರಣಶರೀರಿ, ಎನ್ನ ಪುಣ್ಣೊಳಗೆ ನಿನ್ನ ರೋಮಂ ಪುಗೆ ಪೊಲ್ಲದಪ್ಪುದು, ನಿನ್ನ ಮಾಂಸಮನೆಂತು ತಿನಲ್ಬರ್ಕುಮೆನೆ ಇದೆಲ್ಲಮನೊಟ್ಟೆ ಕೇಳ್ದು ದುಷ್ಟರಂ ತಿನ್ನದ ಸಿಂಹಂ ತನ್ನನೆ ನಂಬಿ ಬಂದಿರ್ದೆನ್ನನೆಂತುಂ ತಿಂಬುದಿಲ್ಲಮಾದೊಡಮಾನುಂ ನುಡಿದು ಮಾತಂ ಪಲಿಸುವೆನೆಂದು ಸಿಂಹದ ಸಮೇಪಕ್ಕೆ ಬಂದೆನ್ನೊಡಲ್ ದೇವರೆಡರ್ಗಲ್ಲದೊಡೇವಾೞ್ತೆ. ಎನ್ನ ಶರೀರಮಂಕೈಕೊಳ್ಳಿಮೆನೆ ಮದೋಕ್ತಟನುಸಿರದಿರ್ಪುದುಂ ಸೃಗಾಲ ಶಾರ್ದೊಲ ಕಾಕಂಗಳ್ ಕಥಕನ ಪೃಥುಶರೀರಮಂ ಸೀೞ್ದು ಸೀಱುಂಬುಳಾಡಿ ಕೊಂದುವು.

ಶ್ಲೋ|| ಬಹವಃ ಪಂಡಿತಾಃ ಕ್ಷುದ್ರಾಃ ಸರ‍್ವೇ ಮಾಯೊಪಜೀವಿನಃ
ಕುರ‍್ಯುರ್ದೋಷಮದೋಷಂ ವಾ ಉಷ್ಟ್ರೇ ಕಾಕಾದಯೋ ಯಥಾ ||೧೦೪||

ಟೀ|| ಹಲಬರು ಪಂಡಿತರು ಕ್ಷುದ್ರರು ವಂಚನೆಯಿಂ ಜೀವಿಪ್ಪರೆಲ್ಲರು ಲೇಸನಾದೊಡಂ ಹೊಲ್ಲೆಹವಂ ಮಳ್ಪರು. ಅದು ಹೇಗೆಂದೊಡೊಟ್ಟೆಯಂ ಕಾಕಾದಿಗಳ್ ಕೊಲಿಸಿದ ಹಾಗೆ. ಎಂಬುದು ಕಾರಣಂ ದುಷ್ಟರ ನಡುವಿರ್ದ ಶಿಷ್ಟಂಗೇಗೆಯ್ದುಂ ಸುಳಮಾಗಲಱ*ಯದು ಪಿಂಗಳಕನೆನಗಿನಿತನರ್ಥಮಂ

ಬಗೆವುದೆಲ್ಲಂ ಕ್ಷುದ್ರಪರಿವಾರ ಪ್ರೇರಣೆಯಿಂದಲ್ಲದೆ  ಪೆಱತೊಂದು ಕಾರಣಮಿಲ್ಲೆನೆ ದವನಕನಿಂತೆಂದಂ: ನೀಂ ಪೇೞ್ದ ದೃಷ್ಟಾಂತಗಳ್ ಪುಸಿಯಲ್ಲಮದೆಂತೆನೆ :

ಶ್ಲೋ || ಬಹವೋ ಬಲವಂತಶ್ಚ  ಉಪಾಯಜ್ಞಾಶ್ಚ ದುರ್ಜನಾಃ
ಎಂಬ ಕಥೆಯೊಂದುಂಟೆನೆ ಸಂಜೀವಕನದೆಂತೆನೆ ದವನಕಂ ಪೇಳ್ಗುಂ :