ಒಬ್ಬ  ಶ್ರೋತ್ರಿಯನಪ್ಪ ಪಾರ‍್ವಂ ಯಜ್ಞ ನಿಮಿತ್ತಂ ಒಂದಾಡಂ ಬೇಱೂರಿಂ ಮಾಱುಗೊಂಡು ಪೆಗಲೊಳಿಕ್ಕಿ ಪೋಪನಂ ನಾಲ್ವರ್ ಧೂರ್ತರ್ ಕಂಡು ನಾವೀ ಬೆಳ್ಳನನಾಳವಾಡಿಕೊಂಡೀಯಾಡಂ ನಾಯಂ ಮಾಡಿ ತಿಂಬಂ ಬನ್ನಿಮೆಂದು ಮುಂದೆ ಪರಿದೋರೊರ್ವರೆ ಮಾರ್ಬಟ್ಟೆಯೊಳ್ ಬರ್ಪಂತಾಗಿ ಬರುತ್ತುಂ ಮುನ್ನಮೊರ್ವಂ ಬಂದೆಲೆ ಪಾರ್ವ! ನೀನಪ್ಪೊಡೆ ದುರ್ವಾಸನ ಸಮಾನನಪ್ಪ ಬ್ರಾಹ್ಮಣಂ ನೀನೀ ಶ್ವಾನನನೇನಿಮಿತ್ತಂ ಪೊತ್ತು ಪೋದಪೆಯೆಂದು ನುಡಿದು ಪೋದಂ ಆ ಭಟ್ಟನಿ ದುಷ್ಟಂಗೆ ಮಾಱುಮಾತುಗೊಟ್ಟೋಡೆನಪ್ಪುದೆಂದುಸಿರದೆ ನಡೆವುದಂ ಮತ್ತರ್ವೊನಿದೆರೆ ಬಂದೆಲೆ ಭಟ್ಟರೇ! ಬ್ರಾಹ್ಮಣಂ ನಾಯಂ ಮುಟ್ಟಲಾಗದೆಂಬರದು ಕೆಟ್ಟು ಪೊತ್ತುಕೊಂಡು ಪೋದಪೆ ನೀವೆತ್ತಾನುಂ ಮರುಳ್ಗೊಂಡಿರೋ ಮರುಳಿಕ್ಕಿ ಅಟ್ಟುದನುಂಡಿರೋ ಪೇೞ*ಮಲ್ಲದಾಗಳ್ ನೀನೆತ್ತಲೀ ಚಂಡಾಲಕರ್ಮದೊಳ್ ತೊಡರ್ದು ಇಂತು ಭ್ರಷ್ಟಾಚಾರನಾದೆ, ನಿನ್ನಂ ಮುಟ್ಟಲಾಗದೆಂದವಂ ಕಳಿದು ಪೋಪುದುಂ, ಭಟ್ಟಂಗೆ ಭ್ರಾಂತಿಪುಟ್ಟಿ ನಿಂದು ಪೆಗಲೊಳಿರ್ದ ಛಾಗಲಮಂ ಭೂಭಾಗದೊಳಿೞ*ಪಿ,

ಶ್ರವಣ ಶಿರಃಪುಚ್ಛಾಸ್ಯಾ
ದ್ಯವಯವಮಂ ಮುಟ್ಟಿ ನೋಡಿ ನಾಯಲ್ಲಿದು ಭೂ
ಭುವನ ಪ್ರಸಿದ್ಧಮಜಮೆಂ
ದವಧಾರಿಸಿ ಪೊತ್ತುಕೊಂಡು ಪೋದಂ ಪಾರ್ವಂ  ೨೦೮

ಅಂತು ನಡೆದ ಪಾರ್ವಂಗೆ ಮತ್ತೊರ್ವನಿದಿರಂ ಬಂದೆಲೆ ಪಾರ್ವ ! ನಿಮಗೆ ಕುಶಾಕ್ಷಮಾಲಾ ಯಜ್ಞೋಪವೀತೋತ್ತರೀಯಾದಿ ಚಿಹ್ನೆಂಗಳೆತ್ತಲೀ ನಾಯಂ ಪೊತ್ತು ಪೋಪುದೆತ್ತಲೆತ್ತಾನುಂ ನಿಮಗೆ ಮೃಗಯಾವ್ಯಸನ ವ್ಯಾಪಾರಮಾದುದುಕ್ಕುಮಲ್ಲದಾಗಳಿದು ನಿಮ್ಮ ದುಷ್ಕಮೃದ ಫಲಮೆಂದು ನುಡಿದು ಪೋಪುದುಮಾ ಪಾರ್ವಂ ಚೋದ್ಯಂಬಟ್ಟು,

ಚಿತ್ತಭ್ರಾಂತಿ ಶ್ರಾಂತಂ
ಪೊತ್ತುದುಮಂ ತಡವಿ ನೋಡುತುಂ ಛಾಗಲಮಂ
ಮತ್ತಾ ಪಾರ್ವಂ ವಿಸ್ಥಿತ
ಚಿತ್ತಂ ಚಿಂತಿಸುತೆ ಮುಂತೆಬರೆ ಮತ್ತೊರ್ವಂ  ೨೦೯

ಅಂತು ಬಂದೆಲೆ ದ್ವಿಜ! ನೀನಿನಿತು ಕಾಲಂ ಬ್ರಾಹ್ಮಣಂ ಸದಾಚಾರನುಮಾಗಿರ್ದಿಗಳೀ ಶ್ವಾನನಂ ಪೊತ್ತು ಹೀನಜಾತಿ ಸಮಾನನಾದೆ. ಇದಂ ಮಹಜನಂಗಳ್ ಕಂಡರಪ್ಪೊಡೆ ಸಭಾಜನಕ್ಕಂ ಸಹಪಙ್ತಿಗಂ ಪೊಱಗೆಂದು ಸಮಯಬಾಹ್ಯನಂ ಮಾಳ್ಪರದಱ*ಂದೀ ನಾಯನೀಡಾಡಿ ಪ್ರಾಯಶ್ಚಿತಮಂ ಕೈಕೊಳ್ಳಿಮೆಂದುಪೇಳ್ದು ಪಪೋದುಮಾ ಪಾರ್ವನಿದಂ ಕಂಡವರೆಲ್ಲಂ ನಾಯಂ ಪೊತ್ತುಕೊಂಡು ಪೋದಪನೆನುತ್ತುಮಿರ್ದರಾನೆತ್ತಾನುಂ ಮರುಳ್ಗೊಂಡೆನಕ್ಕು ಮದಲ್ಲದಾಗಳಿದು ಕಾಮರೂಪಿಯಕ್ಕುಮಿದನೆಂತಱ*ಯಲಕ್ಕುಮೆಂದು ಭಯಂಗೊಂಡಾಡಂ ಶ್ವಾನನೇಂದೀಡಾಡಿ ಮಾಳಂಗೊಂಡೋಡಿದಂ ಇತ್ತಲಾ ದೂರ್ತರೆಲ್ಲರ್ ಬಂದು ತಮ್ಮ ವಂಚನೋಪಾಯಕ್ಕೆ  ತಾವೆ ಮೆಚ್ಚಿ ನಕ್ಕು ಆಡಂ ತಿಂದರ್ ಎಂಬ  ಕಥೆಯಂತಾದುದಱ*ಂ

ಶ್ಲೋ || ಬಹವೋ ಬಲವಂತಶ್ಚ ಉಪಾಯಜ್ಞಾಶ್ಚ ದುರ್ಜನಾಃ
ಶಕ್ಯಾ ವಂಚಯಿತುಂ ಬುದ್ಧ್ಯಾ ಬ್ರಾಹ್ಮಣಂ ಛಾಗ ಕುರ್ಕುರಾತ್||೧೦೫||

ಟೀ|| ಹಲಂಬರು ಶಕ್ತವಂತರು ಉಪಾಯಮಂ ಬಲ್ಲ ದುರ್ಜನರು ಬುದ್ದಿಯಿಂದೊರ್ಬನಂ ವಂಚಿಸಲು ಸಮರ್ಥರು. ಅದೆಂತೆಂದೊಡೆ ಬ್ರಾಹ್ಮಣನ ಕೈಯಲ್ಲಿರ್ದಾಡಂ ನಾಯೆಂದು ಹಾಕಿಸಿದ ಹಗೆ ಎಂಬುದಮಲ್ಲದೆಯುಂ ಪ್ರಭಾಕರನೆಂಬ ಗುರುವಂ ಅಂಬಷ್ಟ ಛಂದೋರಗವೆಂದು ಪೇಳ್ವನಿತಱೊಳರಸನಂತಾ ಭಟ್ಟನಮಂ ಪಲಂಬರ್ ದುಷ್ಟರೊಂದಾಗಿ ಮರುಳ್ಮಾಡಿದರ್ ಮತ್ತಂ ವರರುಚಿ ಭಟ್ಟನಂ ಪಲರ್ ದುಷ್ಟರೊಂದಾಗಿ ಪೊಲೆಯನೆಂದು ಗೆಲೆ ಬಾಯಾರ್ವರೆಂದೊಡುೞ*ದರಳವಾವುದು. ಪಿಂಗಳಕನೀಗಳ್ ನಿನಗೆ ನಿರ್ನಿಮಿತ್ತಂ ಮುಳಿದನಲ್ಲದೆಯುಂ ’ಕರ‍್ತವ್ಯಂ ಚ ನಕರ‍್ತವ್ಯಂ ಯದುಕ್ತಂ ಬಹುಭಿರ್ಜನೈಃ’ ಎಂಬೀ ನಯಮಂ ಕೈಕೊಂಡತಿಕೋಪಿಯಾಗಿರ್ದಪನೀಯವರಸರಕ್ಕೆ ಕಜ್ಜಮದೆಂತನೆ:

ಶ್ಲೋ || ಯಾವದ್ಭಯಸ್ಯ ಭೇತವ್ಯಂ ತಾವದ್ಭಯಮನಾಗತಂ
ಆಗತಂ ತು ಭಯಂ ದೃಷ್ಟ್ವಾ ತತ್ಕಾಲೇಚ ಭಯಂ ತ್ಯಜೇತ್  ||೧೦೬||

ಟೀ|| ಎನ್ನೆವರಂ ಭಯಂ ಬಹುದು ಅನ್ನೆವರಮಂಜುವುದು; ಭಯಂ ಮುಟ್ಟಿ ಬಂದ ಬೞ*ಕ್ಕಂಜಲಾಗದು ಎಂಬುದನಱ*ದು ತಱ*ಸಂದಿಱ*ವುದೆ  ನಯಮಲ್ಲದೆ ಪಱತಾವ ನಯಕ್ಕುಪಾಯಮಿಲ್ಲೆನೆ ಸಂಜೀವಕನಿಂತೆಂದಂ:

ಶ್ಲೋ||ಕೋಹಂ ಕೌದೇಶಕಾಲೌ ಸಮವಿಷಮಗುಣಾಃ ಕೇದ್ವಿಷಃ ಕೇ ಸಹಾಯಾಃ
ಕಾ ಶಕ್ತಿಃ ಕೋಭ್ಯುಪಾಯಃ ಕಥಮಪಿ ಚ ಕಿಚಿiತ್ಕೀದೃಶೀ ದೈವ ಸಂಪತ್
ಸಂಪತ್ತೌ ಕೋನುಬಂಧಃ ಪ್ರತಿಹತ ವಚನಸ್ಯತ್ತರಂ ಕಿನ್ನುಮೇಸ್ಯಾತ್
ಎತ್ಯೇವಂ ಕಾರ‍್ಯಸಿದ್ಧೌ ವ್ಯವಸಿತ ಮನಸೋ ನೋಪಹಾಸ್ಯಂ ಪ್ರಯಾಂತಿ  ||೧೦೭||

ಟೀ||ನಾನಾರ್ ದೇಶಕಾಲಂಗಳಾವುವು ಸಮವಿಷಮವಹ ಹಗೆಗಳಾರ್ ಸಹಾಯರಾರ್ ತನ್ನ ಶಕ್ತಿಯಷ್ಟುಪಾಯಮಾವುದು ಅದು ಹೇಂಗೆ ದೈವಸಹಾಯವೆಷ್ಟು ಆವುದ್ಯೋಗದಿಂ ದೈವಸಹಾಯಂ ದೊರಕೊಂಬುದು ಲೋಗರಿಂ ಕಿವುಡ ನುಡಿಯುಳ್ಳವಗುತ್ತರವಾವುದಹ್ಮದೆಂತೆಂತೀ ಪ್ರಕಾರದಿಂ ತಮ್ಮ ಕಾರ‍್ಯಸಿದ್ಧಿಯಲ್ಲಿ ಉದ್ಯೋಗಚಿತ್ತವುಳ್ಳವರೆಂದುಂ ನಗಿಸಿಕೊಳ್ಳದಿಹರು.

ಶ್ಲೋ||ಗುಣವದಗುಣವದ್ವಾ ಕುರ್ವತಾ ಕಾರ‍್ಯಜಾತಂ
ಪರಿಣತಿವಧಾರ‍್ಯಾ ಯತ್ನತಃ ಪಂಡಿತೇನ
ಅತಿರಭಸಕೃತಾನಾಂ ಕರ್ಮಣಾಮಾಪಿಪತ್ತೇ
ರ್ಭವತಿ ಹೃದಯದಾಹೀ ಶಲ್ಯತುಲ್ಯೋ ವಿಪಾಕಃ  ||೧೦೮

ಟೀ|| ಗುಣಮುಳ್ಳರಾಗಲಿ ಗುಣಹೀನರಾಗಲಿ ಕಾರ‍್ಯವಂ ಮಾಡುವವರ್ಗೆ ಬುದ್ಧಿವಂತರಿಂದಾವ ಕಾರ‍್ಯವುಂ ನಿಶ್ಚಯಿಸಲ್ಪಡುವುದು. ಅತಿತ್ವರಿತದಿಂ ಮಾಡುವವರ್ಗೆ ಕಾರ‍್ಯಂಗಳಾಪತ್ಯದಲ್ಲಿ ಶಲ್ಯದೋಪಾದಿ ಹೃದಯವಂ ಸುಡುವುದುಂ. ಇಂತಪ್ಪ  ನೀತಿಗಳೊಳವು, ಆನಪ್ಪೊಡೆತ್ತು  ಎನಗೆ ಸಹಾಯಾದಿ  ಸಾಧನೋಪಾಯಂಗಳೊಂದುಮಿಲ್ಲ.  ಪಿಂಗಳಕನಪ್ಪೊಡೆ ಮತ್ತಮಾತಂಗಯೂಧವಂ ಬೆದಱೆ ಬೆಂಕೊಂಡು ಕೊಲ್ವ ಸಿಂಗಂ ಅದಱ*ಂದಸಮಾನ ವಿಗ್ರಹನೊಡನೆ ಸಮಾನವಿಗ್ರಹಮನೆಂತೆತ್ತಿಕೊಳ್ವೆನೆಂದೊಡೆ ಇಂತೇಕೆ ಮನಂಗುದಿ ನುಡಿವೆಯೆಂದು ದವನಕನಿಂತೆದಂ: * ದೈವ ಮನುಷ್ಯಬನಲಮೆಂಬೆರಡಱೊಳಂ ಮನಂಗುಂದಿ ನುಡಿವೆಯೆಂದು ಕಾರ‍್ಯ ಸಿದ್ಧಿಯಕ್ಕುಂ ಅಲ್ಲಿ ಮನುಷ್ಯಬಲಮಿಲ್ಲದವರ್ ಸತ್ವಾವಿಳಂಬಿಗಳಾಗಿ ಸಾಹಸಂಗೆಯ್ದು ದೈವಬಲದಿಂಕರಪ್ಪರಂ ಗೆಲ್ದ ಕಥೆಗಳೊಳವೆನೆ ಸಂಜೀವಕನದೆಂತೆನೆ ದವನಕಂ ಪೇೞ್ಗುಂ:

ಒಬ್ಬ ಬ್ರಾಹ್ಮಣನು ಯಜ್ಞಕ್ಕಾಗಿ ಒಂದು ಆಡನ್ನು ಬೇರೆ ಊರಿನಿಂದ ಕ್ರಯಕ್ಕೆ ಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದನು ಅವನನ್ನು ನಾಲ್ವರು ದೂರ್ತರು ನೋಡಿದರು. ನಾವು ಈ ದಡ್ಡನನ್ನು ಮೋಸಮಾಡಿ ಈ ಆಡನ್ನು ನಾಯಿಯನ್ನಾಗಿ ಮಾಡಿ ತಿನ್ನೋಣ ಬನ್ನಿರಿ ಎಂದು ಮಾತನಾಡಿಕೊಂಡು ಮುಂದುವರಿದು ಒಬ್ಬೊಬ್ಬರಾಗಿ ಬೇರೊಂದು ದಾರಿಯಿಂದ ಬಂದರು. ಮೊದಲೊಬ್ಬ ಬಂದನು : ಎಲೈ ಬ್ರಾಹ್ಮಣ ! ನೀನಾದರೋ ದುರ್ವಾಸನ ಸಮಾನನಾದ ಬ್ರಾಹ್ಮಣ. ನೀನು ಈ ಶ್ವಾನವನ್ನು ಯಾವುದಕ್ಕಾಗಿ ಹೊತ್ತುಕೊಂಡು ಹೋಗುವೆ ಎಂದು ನುಡಿದು ಹೋದನು. ಅ ಭಟ್ಟನು ಈ ದುಷ್ಟನಿಗೆ ಪ್ರತ್ಯುತ್ತರ ಕೊಟ್ಟು ಏನಾಗಬೇಕೆಂದು ಮಾತನಾಡದೆ ಮುಂದಕ್ಕೆ ನಡೆದನು. ಅಷ್ಟರಲ್ಲಿ  ಮತ್ತೊಬ್ಬನು ಎದುರುಗಡೆಯಿಂದಲೇ ಬಂದು ಎಲೈ ಭಟ್ಟರೆ ಬ್ರಾಹ್ಮಣನು ನಾಯಿಯನ್ನು ಮುಟ್ಟಬಾರದು ಎನ್ನುವರು ಅದು ಬಿಟ್ಟು ಹೊತ್ತುಕೊಂಡು ಹೋಗಿವಿರಾ. ನೀವೆಲ್ಲಿಯಾದರೂ ಹುಚ್ಚರಾದೀರೋ ಇಲ್ಲವೆ ಹುಚ್ಚು  ಹಿಡಿಯಲಿ ಎಂದು ಮಾಡಿದ ಅಡುಗೆಯನ್ನು ಉಂಡಿರೋ ಹೇಳಿರಿ ಅಲ್ಲದಿದ್ದರೆ ನೀವು ಇಂಥ ಚಂಡಾಲಕರ್ಮದಲ್ಲಿ ತೋಡಗಿ ಹೀಗೆ ಬ್ರಷ್ಟಾಚಾರರಾದಿರಿ. ನಿಮ್ಮನ್ನು ಮುಟ್ಟಬಾರದು ಎಂದು ಅವನು ಅಲ್ಲಿಂದ ಹೊರಟುಹೋದನು. ಭಟ್ಟನಿಗೆ ಭ್ರಾಂತಿ ಕವಿದು ಹೆಗಲಲ್ಲಿ ಹೊತ್ತ ಅಡನ್ನು ಕೆಳಕ್ಕಿಳಿಸಿ. ೨೦೮, ಕಿವಿ ಮಂಡೆ ಬಾಲ ಮೊದಲಾದ ಅವಯುವಗಳನ್ನೂ ಮುಟ್ಟಿ ನೋಡಿ ಇದು ನಾಯಲ್ಲ ಭುವನ ಪ್ರಸಿದ್ಧವೆಂಬಂತೆ ಇದು  ಆಡೆ ಅಗಿದೆ ಎಂದು ಅಲ್ಲಿಂದ ಮುಂದಕ್ಕೆ  ಹೋತ್ತುಕೊಂಡು ಹೋದನು. ವ|| ಹಾಗೆ ನಡೆಯುತ್ತಿದ್ದ ಬ್ರಾಹ್ಮಣನ ಎದುರು ಮತ್ತೊಬ್ಬನು ಬಂದು  ಎಲೈ ಬ್ರಾಹ್ಮಣ ನಿಮ್ಮ ದರ್ಬೆ, ಜಪಸರ, ಯಜ್ಞೋಪವೀತ, ಉತ್ತರಿಯಗಳೆಲ್ಲಿ, ಈ ನಾಯಿಯನ್ನು ಹೊತ್ತುಕೊಂಡು ಹೋಗುವ ಈ ಹೀನ ಕಾರ್ಯವೆಲ್ಲಿ ! ಎಲ್ಲಿಯಾದರೂ ನಿಮಗೆ ಬೇಟೆಯಾಡುವ ಚಟ ಹತ್ತಿರಬೇಕು ಅಲ್ಲದಿದ್ದರೆ ಇದು ನಿಮ್ಮ ದುಷ್ಕರ್ಮದ ಫಲ ಎಂದು ಹೇಳಿ ಹೋದನು ಆ ಬ್ರಾಹ್ಮಣನು ಆಶ್ಚರ್ಯಪಟ್ಟು೨೦೯. ಭ್ರಮೆಯಿಂದ ಬಳಲಿ ಹೊತ್ತುದನ್ನು ತಡವಿ ನೋಡುತ್ತ ವಿಸ್ಮಿತನಾಗಿ ಮುಂದುವರಿದನು ಇನ್ನೊಬ್ಬನು ಬಂದು ವ || ಎಲೈ ದ್ವಿಜೋತ್ತಮನೇ ನೀನು ಇಷ್ಟರವರೆಗೆ ಬ್ರಾಹ್ಮಣನು ಸದಾಚಾರನೂ ಅಗಿದ್ದು ಈಗ  ಈ ಶ್ವಾನವನ್ನು ಹೊತ್ತು ಹೀನಜಾತಿಗೆ ಸಮಾನನಾದೆ. ಇದನ್ನು ಮಹಾಜನರು ಕಂಡರಾದರೆ ಸಭಾಜನಕ್ಕೂ ಸಹಪಂಕ್ತಿಗೂ ಹೊರಗೆಂದು ಧರ್ಮಭ್ರಷ್ಟನನ್ನಾಗಿ ಮಾಡುವರು. ಅದಂಮದ ಈ ನಾಯಿಯನ್ನು ಬಿಸುಟು ಹೋಗಿ ಪ್ರಾಯಶ್ಚಿತವನ್ನೂ ಮಾಡಿಕೊಳ್ಳು ಎಂದು ಹೇಳಿ ಹೋದನು. ಆ ಬ್ರಾಹ್ಮಣನು ಇದನ್ನು ಕಂಡವರೆಲ್ಲರೂ ನಾಯಿಯನ್ನು ಹೋತ್ತುಕೊಂಡು ಹೊಗುವನು ಎಂದು ಹೇಳುತ್ತಿರುವರು. ನನಗೇನೋ ಮರಳು ಹಿಡಿದಿರಬೇಕು. ಅದಲ್ಲದೆ ಇದು ಕಾಮರೂಪಿಯಾಗಿದೆ ಎಂದು ಭಯಗೊಮಡು ಅಡನ್ನು ನಾಯಿಯೆಂದು ಬಿಸುಟು ಓಡಿದನು. ಇತ್ತ ಆ ದೂರ್ತರೆಲ್ಲರು ಬಂದು ತಮ್ಮ ವಂಚನೋಪಾಯಕ್ಕೆ ತಾವೇ ಮೆಚ್ಚಿ ನಕ್ಕು ಆಡನ್ನು ಕೊಂದು ತಿಂದರು ಅದರಿಂದ ಶ್ಲೋ || ಹಲವರು ಶಕ್ತಿವಂತರೂ ಉಪಾಯವನ್ನು ಬಲ್ಲ ದುರ್ಜನರೂ ಬ್ರಾಹ್ಮಣನ ಕೈಯಲ್ಲಿದ್ದ ಅಡನ್ನು ನಾಯಿಯೆಂದು ಹಾಕಿಸಿದಂತೆ ಬುದ್ಧಿಪೂರ್ವಕವಾಗಿ ಒಬ್ಬನ್ನನ್ನು ವಂಚಿಸಲು ಸಮರ್ಥರಾಗಿರುವವರು. ವ|| ಪಿಂಗಳಕನು ಈಗ ನಿಷ್ಕಾರಣವಾಗಿ ನಿನ್ನ ಮೇಲೆ ಮುಳಿದಿರುವನು. ಅಲ್ಲದೆ,  ಶ್ಲೋ|| ಭಯ ಬರುವವರೆಗೆ ಅದಕ್ಕಂಜಬೇಕು. ಭಯ ಹತ್ತಿರ ಬಂದ ಬಳಿಕ ಅದಕ್ಕೆ ಹೆದರಬಾರದು ಎಂಬುದನ್ನು ತಿಳಿದು ನಿಶ್ಚಯಿಸಿ ಇರಿಯುವುದು ಧರ್ಮವಲ್ಲದೆ ಬೇರೆ ಯಾವ ಉಪಾಯವೂ ಕಾಣುವುದಿಲ್ಲ ಎನ್ನಲು ಸಂಜೀವಕನು ಹೀಗೆಂದನು ಶ್ಲೋ || ನಾನು ಯಾರು ದೇಶಕಾಲಗಳು ಯಾವವು. ಸಮವಿಷಮರಾದ ಹಗೆಗಳು ಯಾರು ತನ್ನ ಶಕ್ತಿಗೆ  ಲಬ್ಯವಾದ ಉಪಾಯ ಯಾವುದು, ಅದು ಹೇಗೆ, ದೈವಸಹಾಯವೆಷ್ಟು, ಯಾವ ಉದ್ಯೋಗದಿಂದ ದೈವಸಹಾಯವು ಲಭಿಸುವುದು, ಜನರಿಂದ ಅವಮಾನಕರವಾದ ಮಾತಿಗೆ ಉತ್ತರವೇನು? ಎಂದು ಈ ಪ್ರಕಾರವಾಗಿ ತಮ್ಮ ಕಾರ್ಯಸಿದ್ಧಿಯಲ್ಲಿ ಉದ್ಯೋಗಚಿತ್ತವುಳ್ಳವರು ಯಾವಗಲಾದರೂ ನಗೆಗೀಡಾಗದೆ ಇರಲಾರರು ಶ್ಲೋ || ಗುಣವಂತರಾಗಲಿ ಗುಣಹೀನರಾಗಲಿ ಕಾರ್ಯವನ್ನು ಮಾಡುವವರಿಗೆ ಬುದ್ದಿವಂತರಿಂದ ಯಾವ ಕಾರ್ಯವಾದರೂ ನಿರ್ಧರಿತವಾಗುವುದು. ಅತಿತ್ವರಿತವಾಗಿ ಕೆಲಸ ಮಾಡುವವರಿಗೆ ಕಾರ್ಯಗಳಾದ ಮೇಲೆ ಶಲ್ಯದಂತೆ ಹೃದಯವನ್ನು ಚುಚ್ಚುವುದು. ವ|| ನಾನಾದರೋ ಎತ್ತು, ನನಗೆ ಸಹಾಯಾದಿ  ಸಾಧನೋಪಾಯಗಳೊಂದು ಇ.  ಪಿಂಗಳಕನಾದರೋ ಮದ್ದಾನೆಗಳ ಹಿಂಡುಗಳನ್ನು ದಿಂಡುಗೆಡುವ ಸಿಂಹ. ಅದರಿಂದ ಅಸಮಾನವಿಗ್ರಹನೊಡನೆ ಸಮಾನವಿಗ್ರಹವನ್ನು  ಹೇಗೆ ಕೈಕೊಳ್ಳಲಿ ಎಂದಿತು. ಹೀಗೇಕೆ ಮನಗುಂದಿ ಮಾತಾಡುವೆ ಎಂದು ದವನಕನು ಹೀಗೆಂದಿತು: ದೈವಬಲ ಮನುಷ್ಯಬಲ ಎಂಬ ಎರಡರಲ್ಲಿಯು ಕಾರ್ಯಸಿದ್ಧಿಯಾಗುವುದು ಅಲ್ಲಿ ಮನುಷ್ಯಬಲವಿಲ್ಲದವರು ಸತ್ವವಿಳಂಬಿಗಳಾಗಿ ಸಾಹಸಗೆಯ್ದು ದೈವಬಲಕ್ಕಿಂತಲೂ ಅಕರಾದವರನ್ನು ಗೆದ್ದ ಕಥೆಗಳಿವೆ.