ಒಂದು ಸರೋವರದೊಳ್ ಸಕಟ ವಿಕಟಂಗಳೆಂಬೆರಡು ಹಂಸೆಗಲಿರ್ಪುವು ಅ ಹಂಸೆಗಳ್ಗಂ ವಾಚಾಲನೆಂಬುದೊಂದಾವೆಗಂ ಪರಮಮಿತ್ರತ್ವನಾಗಿ ಪಲಕಾಲವುಮಿರ್ಪುದುಮನಾವೃಷ್ಟಿಯಿಂದ ಕೊಳಂ ಬತ್ತವುದುಂ ಕಲಹಂಸೆಗಳ್ ಕಂಡು ಎಮಗಿಲ್ಲಿರಲ್ಬಾರದು ಮಾನಸಸರೋವರಕ್ಕೆ  ಪೋಪೆವೆಂದಾಲೋಚಿಸುವುದಂ ಕಚ್ಚಪಂ ಕೇಳ್ದು ನೀವಿಲ್ಲದಾನಿಲ್ಲಿ ನಿರ್ವಹಿಸುವೆನಲ್ಲೆನೆನ್ನು. ಮನೊಡಂಗೊಂಡು ಪೋಗಿಮನೆ ಕಳಹಂಸಗಳಿಂತೆಂದವು: ನೀನಪ್ಪೊಡೆ ಬಹುಭಾಷಿ ತುಂಬಿದ ಸಿದ್ಧಿಗೆಯಂತೆ ರಥದ ಗಾಲಿಯಂತೆ ಬೆಟ್ಟತ್ತಾಗಿರ್ಪೆ ನಿನ್ನನೆಂತುಯ್ಯಲ್ಬರ್ಕುಮೆನೆ ಪಂಚ್ಛಕ ಅಪ್ಪೊಡೆಯೀಯೆಡೆಗೊಂದು ಕಥೆಯುಂಟದಂ ಕೇಳಿಮೆಂದಿತೆಂದಂ: