ಸಾಲಗ್ರಾಮವೆಂಬ ಮಹಾಗ್ರಹಾರದೊಳ್ ಗ್ರಾಮಾಪತಿಯ ಸತಿ ಕುಮತಿಯೆಂಬಳಾಕೆಯೊಂದು ದಿವಸಂ ತನ್ನ ಸೊಸೆಯಪ್ಪ ಸೌಮಿತ್ರಿಗಿಂತೆಂದಳ್: *ಆಂ ನೆರೆಯೂರ್ಗೆ ಪೋಗಿ ಬಂದಪೆಂ ನೀಂ ಮನೆಯಂ ಸುಯ್ದಾನಂ ಮಾಡಿಕೊಂಡಿರೆಂದು ಪೇೞ್ದು ಪೋದಳ್ ಅನ್ನೆಗಂ ಸೌಮಿತ್ರಿಯಲ್ಲಿಗೊರ್ವ ಪಾರ್ವಂ ಬಂದು ಮಗಳೆ! ನೀನಿಂದು ಪನ್ನಿರ್ವರ್ ಪಾರ‍್ವರ್ಗೆ ಸಾರಮಪ್ಪ ಕ್ಷೀರಭೋಜನಮಂ ಮಾಡಿಸಿದೆಯಪ್ಪೊಡೆ ನಿನಗೆ ಕನಕಲಾಭಮುಂ ಪುತ್ರಲಾಭಮುಂ ಮನೋರಥ ಸಿದ್ಧಿಯುಮಕ್ಕುಮೆನೆ ಸೌಮಿತ್ರಿ ಸುಮತಿಯಪ್ಪುದಱ*ಂ ತನ್ನ ಮನದೊಳಿಂತೆಂದಳ್ :

ಶ್ಲೋ|| ಬ್ರಾಹ್ಮಣಾನ್ನಾವಮನ್ನೇತ ನಾವಮನ್ಯೇತ ದೇವತಾಃ
ಸರ್ವದೇವಮಯೋ ವಿಪ್ರೋ ನ ತದ್ವಚನಮನ್ಯಥಾ    ||೧೦೯||

ಟೀ|| ಬ್ರಾಹ್ಮಣರನ್ನೂ ದೇವರನ್ನೂ ಅವಜ್ಞೆಯಂ ಮಾಡಲಾಗದು. ಸರ‍್ವದೇವತಾಸ್ವರೂಪರಹ ಬ್ರಾಹ್ಮಣರುಗಳ ವಾಕ್ಯಮೆಂದುಂ ಹುಸಿಯಲ್ಲ ಎಂಬುದು ಶಾಸ್ತ್ರಾರ್ಥಮುಂಟು. ಬ್ರಾಹ್ಮಣವಚನಂ ನಿಶ್ಚಯಮಕ್ಕುಮಿದಂ ನೋೞ್ಪೆನೆಚಿದು,

ವಸುಧಾದೇವರನಾಮಂ
ತ್ರಿಸಿ ಪಿರಿದುಂ ಭಕ್ತಿಪೂವರ್ಕಂ ವಿಯಿಂ ಪೂ
ಜಿಸಿ ಮುದದೆ ಮಾಡಿದಳ್ ಪಾ
ಯಸಮಂ ನವಘೃತಸಮನ್ವಿತಂ ಸಿತಸಹಿತಂ  ೨೧೬

ಅಂತು ಪಾರ್ವರ್ಗೂಡಿ ಪರಕೆಯನಾಂತು ಸೌಮಿತ್ರಿ ಸಂತೋಷದಿನಿರ್ಮುದುಂ ಕಿಱ*ದಾನುಂ ಬೇಗಕ್ಕೆಯಾ ಸೌಮಿತ್ರಿಯತ್ತೆ ಕುಮತಿಯೆಂಬಳ್ ಬಂದೆಲ್ಲಮಂ ಕಂಡೆಲೆ ತೊತ್ತೆ ! ನಿನಗಿನಿತು ಸಾಮರ್ಥ್ಯವನಾರ್ಮಾಡಿದರ್ ನೀನಿನಿತು ಪೊೞ್ತು ಮನೆಯೊಳಗಾನಿಲ್ಲದನಿತಱೊಳೆ ಎಡೆವೊತ್ತುವೊಲೆಯಂ ಕಲೆಮುಟ್ಟಲ್ವೆತ್ತಂತೆ ಮನೆಯೊಳುಳ್ವುದೆಲ್ಲಮಂ ಕಾಕಬೋಜನಂಮಾಡಿ ಕಿಡಿಸಿದೆಯೆಂದು ಸೊಸೆಯಂ ನೋಯೆ ನುಡಿದು ಜಡಿದು ಮನೆಯಂ ಪೊಱಮಡಿಸೆ ಕೞ್ತಲೆಯೊಳಾಕೆ ಭಯಾಕುಲೆಯಾಗಿ ದೂರಂ ಪೋಗಲಣ್ಮದೂರ ಮುಂದಿರ್ದ ಪುಣಿಸೆಯ ಮರದ ಪಿರಿದಪ್ಪ ಪೊೞಲೊಳಡಂಗಿರ್ದಳ್. ಅನ್ನೆಗಮಲ್ಲಿಗೆಣ್ಬರ್ ಮಾಯಾರೂಪಿಗಳಪ್ಪ ಶಾಕಿನಿಯರ್ ಬಂದು ಮರನನೇಱ*ರ್ದು ಸುವರ್ಣದ್ವೀಪಕ್ಕೆ ಪೋಗೆಂದಬಿಮತ್ರಿಸುವುದುಮದು ಮನದಿಂ ಮುನ್ನಮೆಯ್ದಲೊಡಂ ರಕ್ಕಸಿಯರ್ ಮಾಂಸಭಕ್ಷಣಕ್ಕೆ ಪೋಪುದುಂ ದೆಸೆಯಂ ನೋಡಿ ಸೌಮಿತ್ರಿ ಧರ್ಮಮೇ ಗತಿಯೆಂದು ಪೊಱಮಟ್ಟು ದೆಸೆಯಂ ನೋೞ್ಪಾಗಳ್.

ಇಲಿಯ ಬಿಲದ್ವಾರಂಗಳ
ಕೆಲದೊಳ್ ಕೆಂಪೆಸೆದು ಮಿಸುಪ ಕನಕದ ರಜಮಂ
ಲಲಿತಾಂಗಿ ಕಂಡುಕೊಂಡಾ
ಕುಲವಧು ವಿಪ್ರಪ್ರಸಾದಮಾಯ್ತೆಂದಾಗಳ್  ೨೧೭

ಅಂತು ಪೊನ್ನಂ ಪೊಱೆಗಟ್ಟಿಕೊಂಡು ಮತ್ತಮಾ ಪುಣಿಸೆಯ ಮರದೊಳ್ ಪೊಕ್ಕಡಂಗಿರ್ಪುದುಂ ಕಿಱ*ದಾನುಂ ಬೇಗಕ್ಕೆ ರಕ್ಕಸಿಯರ್ ಬಂದಾ ಮರನನೇಱ*ರ್ದಭಿಮಂತ್ರಿಸಲೊಡಂ ಅದು ಪೞೆಯಂತೆ ಮುನ್ನಿನ ಸ್ಥಾನಕ್ಕೆ ಬಂದಿರೆ ಶಾಕಿನಿಯರ್ ತಮ್ಮ ತಮ್ಮ ಮನಗೆಗಳ್ಗೆ ಪೋದರ್ ಇತ್ತಲ್ ಸೌಮಿತ್ರಿಯುಂ ತನ್ನ ಮನೆಗೆ ಬಂದು ಪೊನ್ನಪುಡಿಯನತ್ತೆವಿರ ಮುಂದಿಟ್ಟು ಪೊಡಮಟ್ಟೊಡತ್ತೆವಿರ್ ಸಂತೋಷಂಬಟ್ಟು ಬೞ*ಕೆ ತತ್ಪ್ರಪ್ರಂಚಮೆಲ್ಲಮಂ ಕೇಳ್ದು ಸೌಮಿತ್ರಿಗಿಂತೆಂದಳ್: ಇಂದಾಂ ಪೋಗಿ ಸಂಪೂರ್ಣಮಾಗಿ ಪೊನ್ನಂ ತಂದಪೆನೆಂದು ನೇಸಱ್ ಪದಲೋಡಂ ಮರದ ಪೊೞಲಂ ಪುಗಲೆಂದು ಪೋಪಳ್ಗೆ ಸೌಮಿತ್ರಿಯಿಂತೆದೆಳ್; ರಕ್ಕಸಿಯರುಕ್ಕೆವಮನಮನಱ*ಯಲ್ಬಾರದು ಅತ್ತೆವಿರೇ ! ನೀಂ ಪೋದಲದಿರೆವೆಂಬಿರಪ್ಪೊಡೆ ಅವರೇನೆಂದೊಡಮೇಗಯ್ದೊಡಮುಸಿರದಿರಲಾರ್ಪಿರಪ್ಪೊಡೆ ಪೋಗಿಮಲ್ಲದಾಗಳ್ ಪೋಗುಲ್ವೇಡೆಂದೊಡಾ ಪ್ರಚಂಡೆ ಇಂತೆಂದಳ್:

ನೀನೆನಗೆ ಬುದ್ಧಿವೇೞದೊ
ಡಾನಱ*ಯೆನೆ  ವಾಮೆಯರ್ಕಳುಕ್ಕೆವಮಂ ನೀ
ನೆನುಮ ನೆನ್ನದಿ ರೆಂದಪ
ಮಾನಿಸಿ ಪೊಱಮಟ್ಟಳತ್ತೆ ಮನೆಯಿಂದಾಗಳ್  ೨೧೮

ಅಂತಾಕೆ ಸೊಸೆ ಬಾರಿಸೆ ಮಾಣದೈತಂದು ಚೌವಟದೊಳಿರ್ದ ಮರಣನೆಯ್ದಿ

ಒಗೆದೊದವಿದ ಕಳ್ತಲೆಚಿiಳ್
ಮಿಗೆ ಕುವ್ಮತಿಗೆ ಪೊನ್ನ ಮೊಹಮಾಗಲ್ ಸಾವಂ
ಬಗೆಯದೆ ಮಿಳ್ತುವ ಬಾಯೆಂಬ
ಪುಗುವಂತ ಮರದ ಪೊಟಲೊಳೆಚಿತು ಪೊಕ್ಕಳ್  ೨೧೯

ಪೊನ್ನೆಂದೊಡೆ ಸುವ್ರತಸಂ
ಪನ್ನರ ಮನೆಮಂ ಮರಂಗಳುಂ ಸೋಡರ್ಗಡಿಯುಂ
ತಾನಿರುತ ಮೆಳಗುಗುಂಪೇ
ಚಿನ್ಮ್ನಚಿದ ಚಿಮನದ ಮನುಜರೆಳಗದರೊಳರೆ  ೨೨೦

ಅನ್ನೆಗಮರ್ಧರಾತ್ರಿಯಾಗಲೊಡಂ ಶಾಕಿನಿಯರ್ ಬಂದು ಮರುನನಡರ್ದಿಂದುಂ ನಾವು ಕಡಾರದ್ವೀಪಕ್ಕೆ ಪೋಪಮೆಂದಾಳೋಚಿಸುವುದಂ ಕುಮತಿ ಕೇಳ್ದಿನ್ನುಸಿರದಿರ್ದೊಡೆನ್ನ ಬಗೆ ಕೂಡದು ತನ್ನಪ್ಪುದಕ್ಕೆಂದು ಶಾಕಿನಿಯಾರ್ಗಆಕೆಯಿಂದೆಂಳ್: ಕಡಾರದ್ವೀಪದ ಮಾನಸರ ಮಾಂಸಂ ಕ್ಷಾರಮುಂ ನಿಸ್ಸಾರಮುಂ ಅಲ್ಲಿಗೆ ಪೋಗಿಮೆಂದು ಪೇಳಲೊಡಮದಂ ಕೇಳ್ದು ರಕ್ಕಸಿಯರ್ ಅಕ್ಕಟ ! ಸಗ್ಗಮಿದಿರಂ ಬಂದುದು ಎಮಗೆ ಅರಸುವ ಬಳ್ಳಿ ಕಾಲ್ತೊಡರ್ದುದು ಎಂಬ ನಾಣ್ಣುಡಿ ಪ್ರತ್ಯಕ್ಷಮಾದುದೆಂದು ರಾಗಿಸಿ ಬಿಳದೊಳಗಿರ್ದ ಇಲಿಯಂ  ತೆಗೆವಂತೆ ಪೊಳಲೊಳಗಿರ್ದ ಕುಮತ್ತಿಯಂ ಕಾಲಂ ಪಿಡಿದು ತೆಗೆದು ಇರ್ಬಗಿ ಮಾಡಿ ಕೊಂದು ತಿಂದರ್.

ಅದರೆಂದಿದನದೇನುಮಂ ನುಡಿಯದೆ ಬರ್ಪುದೆಂದು ಕಳಹಂಸೆಗಳ್ ಕಚ್ಚಮಂಗೆ ಬುದ್ಧಿವೇೞ್ದೋಂಡತೆಗೆಯ್ವೆನೆಂಬುದುಂ ಕಲಹಂಸೆಗಳ್ ಬಲ್ಲೆತಪ್ಪುದೊಂದು ದಕ್ಕಂ ತಂದದಱೆರೆದು ಕಡೆಯುಮಂ ತಾವಡಸಿ ಕರ್ಚಿ ನಡುವೆಯಾವೆಯಂ  ಕರ್ಚಿಸಿಕೊಂಡನೇಕ ಗ್ರಾಮನಗರ ಖೇಟಖರ್ವಟ ಮಡಂಬ ಪತ್ತನ ದ್ರೋಣಾಮುಖಂಗಳಂ ಜನಪದಂಗಳಂ ಕಳೆದು ಬರುತ್ತಂ ಪರಶುರಾಮನ ಬಾಣಘಾತದಿಂ ಭಿನ್ನವಾದ ಕ್ರೌಂಚಚಲದ ಶಿಖರಪ್ರದೇಶಮಂ ನೋಡುತ್ತುಮಳಕಾಪುರದ ಪೋಱವೋಳನೆಯ್ದುವುದಮಲ್ಲಿಯ ಜನಪದಂಗಳ್ ಕಂಡು ಇದೊಂದು ಭಂಡಿಯ ಗಾಲಿಯಂತುಟನೆರಡು ಕಲಹಂಸೆಗಳ್ ಕರ್ಚಿಕೊಂಡು ಪೋದಪ್ಪುವಿದೊಂದಾಶ್ಚರ‍್ಯಮೆಂದು ಬೋರೆಂದಾಱುತ್ತಂ ಬರ್ಪ ರಭಸಮಂ ಕೂರ್ಮಂ ಕೇಳ್ದೀ ಪಾಪಕರ್ಮರೆಮ್ಮಂ ವಿಚಾರಿಸುವುದು ತಮಗಾವ ಕಾರ‍್ಯಮೆಂದು ನುಡಿಯಲ್ ಬಗೆದು ಬಾಯಂ ತೆಗೆವುದಂ ಅಚ್ಚು ಮುಱ*ದ ಭಂಡಿಯಂತೆ ನುಚ್ಚುನುಱ*ಯಾಗಿ ಬಿರ್ದುದುಂ ಮಾಂಸಹಾರಿಗಳ್ ಕಂಡು ಕೊರಪುಳ್ಳಿಯೊಳ್ ಮೋದಿ ಕೊಂದರ್, ಅದಱ*ಂ

ಶ್ಲೋ || ಸ್ನಿಗ್ಧಾನಾಂ ಹಿತಕರ್ತೃಣಾಂ ವಾಕ್ಯಂ ನಾಬಿನಂದತಿ
ಸ ಕೂರ್ಮ ಇವ ದುರ್ಬುದ್ಧಿಃ ಕಾಷ್ಕಾದ್ಭ್ರಷ್ಟೋ ವಿನಶ್ಯತಿ  ||೧೧೦||

ಟೀ|| ಹಿತವಂ ಮಾಡುವ ಸ್ನೇಹಿತರ ಮಾತನಾವನೊರ್ವಂ ಕೇಳದೆ ಇರ್ಪನಾತಂ ಕಿಡುವಂ ಅದು ಹೇಗೆಂದೊಡೆ ಕಾಷ್ಠಮಂ ಬಿಟ್ಟು ಬಿರ್ದು ಸತ್ತ ಕೂರ್ಮನಹಗೆ. ಎಂಬೀ ಕಥೆಯಂ ಕೇಳ್ದು ಚಂಡಪರಾಕ್ರಮನಿಂತೆದಂ: ತತ್ತಿಗಳಂ ನೀ ಪೆತ್ತಂದು ಚಿಂತಿಸಿಕೊಳ್ವಂ ನಿನ್ನಪ್ಪ ಕಜ್ಜಕ್ಕೆ ಮುನ್ನಮೆ ಮರುಗುವುದಿದಾವ ಕಾರಣಮೆನೆ ಮಧುರಲಾಪೆ ಮತ್ತಂತೆಂದಳ್: ನಿನಗಿನಿತಪ್ಪ ದುರ್ಬುದ್ದಿ ಪುಟ್ಟತಾದೊಡಂ ಯುದ್ಭವಿಷ್ಯನೆಂಬ ಮತ್ಯ್ಸದ ಕಥೆಯಂ ಕೇಳೆಂದು ಪೇಳ್ವದು ಅದೆಂತೆನೆ :

೨೧೮: ನೀನು ನನಗೆ ಬುದ್ದಿ ಹೇಳದಿದ್ದರೆ ನನಗೆ ಗೊತ್ತಗುವುದಿಲ್ಲವೆ: ನೀನು ಸುಮ್ಮನಿರು ಎಂದು ಅವಮಾನಪಡಿಸಿ ಅತ್ತೆ ಹೊರಹೊರಟಳು ವ|| ಹಾಗೆ ಆಕೆ ಸೊಸೆ ಬೇಡವೆಂದರೂ ಕೇಳದೆ ಮರವನ್ನೂ ಸೇರಿದಳು. ೨೧೯: ಕತ್ತಲೆಯಲ್ಲಿ ಕುಮತಿಗೆ ಚಿನ್ನದ ಮೇಲೆ ವ್ಯಾಮೋಹವಾಗಲೂ ಸಾವನ್ನು ಲೆಕ್ಕಿಸದೆ ಮೃತ್ಯವಿನ ಬಾಯನ್ನು ಹೋಗುವಂತೆ ಆ ಮರದ ಪೊಟರೆಯನ್ನು ಹೊಕ್ಕಳು ೨೨೦: ಹೊನ್ನು ಎಂದರೆ ಸುವ್ರತ ಸಂಪನ್ನರ ಮನಸ್ಸೂ, ಮರಗಳೂ, ದೀಪಶಿಖೆಯೂ ಎರಗುತ್ತವೆ ಎಂದ ಮೇಲೆ ಇನ್ನು ಹೀನ ಮನಸ್ಸಿನ ಮನುಷ್ಯರು ಎರಗದಿರುವರೆ ವ|| ಅಷ್ಟರಲ್ಲಿ ಅರ್ಧ ರಾತ್ರಿಯಾಗಲೂ ಶಾಕಿನಿಯರು ಬಂದು ಮರವನ್ನೆರಿ ಹಿಂದು ನಾವು ಕಡಾರ ದ್ವೀಪಕ್ಕೆ ಹೋಗೋಣ ಎಂದು ಅಲೋಚಿಸಿದರು. ಆಗ ಕುಮತಿ ಅವರ ಮಾತನ್ನು ಕೇಳಿ ಇನ್ನು ಮಾತನಾಡದಿದ್ದಲ್ಲಿ ನನ್ನ ಅಪೇಕ್ಷೆ ನೇರವೆರದು: ತನಗಾಗುವುದು ಅಗಲಿ ಎಂದು ಶಾಕಿನಿಯರಿಗೆ ಅಕೆ ಹೀಗೆಂದಳು: ಕಡಾರ  ದ್ವೀಪದ ಮಾನವರ ಮಾಂಸವೂ ಕಾರವೂ ನಿಸ್ಸಾಹಾರವೂ ಹಾಗಿದೆ ಅಲ್ಲಿಗೆ ಹೋಗುವುದು ಬೇಡ  ಸುವರ್ಣ ದ್ವೀಪದ ಮಾನವರ ಮಾಂಸವೂ ಅಮೃತೋಪಾಯವಾಗಿದೆ ಅಲ್ಲಿಗೆ ಹೋಗಿರಿ ಎಂದು ಹೇಳಿದಳು. ಅದನ್ನು ಕೇಳಲು ರಾಕ್ಷಸಿಯರ ಅಕ್ಕಟ  ಸ್ವರ್ಗವೆ ಎದುರು ಬಂದಿತು. ನಾವೂ ಅರಸುತ್ತಿರುವ ಬಳ್ಳಿ ಕಾಲಿಗೆ ತೊಡರಿತು ಎಂದು ಸಂತ್ಕೃಷ್ಟರಾಗಿ ಬಿಲದೊಳಗಿದ್ದ ಇಲಿಯನ್ನು ಹೊರಕ್ಕೆಳೆಯುವಂತೆ ಪೊಟರೆಯಲ್ಲಿದ್ದ ಕುಮುತಿಯ ಕಾಲನ್ನು ಹಿಡಿದು ತೆಗೆದು ಎರಡು ಸೀಳುಮಾಡಿ ಕೊಂಡು ತಿಂದರೂ, ಅದರಿಂದ ಈ ಕಥೆಯನ್ನು ತಿಳಿದು ಏನ್ನು ಮಾತನಾಡದೆ ಬರಬೇಕೆಂದು ಕಲಹಂಸೆಗಳು ಆಮೆಗೆ ಬುದ್ಧಿ ಹೇಳಲು ಆಮೆಯೂ ಹಾಗೆ ಆಗಲಿ ಎಂದು ಹೇಳಿತು. ಕಲಹಂಸೆಗಳು ಬಲವಾದ ಒಂದು ದೊಣ್ಣೆಯನ್ನು ತಂದು ಅದರ ಎರಡೂ ಕಡೆಗಳನ್ನೂ ತಮ್ಮ ಕೊಕ್ಕಿನಿಂದ ಕಚ್ಚಿ ನಡುವೆ ಅಮೆಯನ್ನು ಕಚ್ಚಿಸಿಕೊಂಡು ಅನೇಕ ಗ್ರಾಮ ನಗರ ಕೇಟ ಕರ್ವಟ ಮಡಂಬ ಪತ್ತನ ದ್ರೋಣ ಮುಖಗಳನ್ನು ಜನಪದಗಳನ್ನು ದಾಟಿ ಬರುತ್ತಾ ಪರಶುರಾಮನ ಬಾಣಘಾತದಿಂದ ಬಿನ್ನವಾದ ಕ್ರೌಂಚಚಲದ ಶಿಖರ ಪ್ರದೇಶವನ್ನು ನೋಡುತ್ತಾ ಅಲಕಪುರದ ಹೊರ ಭಾಗವನ್ನು ಸೇರಿದವು. ಅಲ್ಲಿಯ ಜನರು ಕಂಡು ಇದೊಂದು ಬಂಡಿಯ ಗಾಲಿಯಂತಿರುವವನನ್ನು ಎರಡು ಕಲಹಂಸೆಗಳು ಕಚ್ಚಿಕೊಂಡು ಹೋಗುತ್ತಿವೆ ಇದು ಒಂದು ಆಶ್ಚರ್ಯ ಎನ್ನುವ ಮಾತನ್ನು ಕೊರ್ಮವು ಹೇಳಿತು ಈ ಪಾಪಕರ್ಮರು ನಮ್ಮನ್ನೇಕೆ ವಿಚಾರಿಸಬೇಕು ಎಂದು ನುಡಿಯಬೇಕೆಂದು ಬಾಯಿಯನ್ನು ತೆರೆಯಲು ಅಚ್ಚು ಮುರಿದ ಬಂಡೆಯಂತೆ ನುಚ್ಚುನುರಿಯಾಗಿ ಬಿದ್ದುದ್ದನ್ನು ಮಾಂಸಹಾರಿಗಳು ಕಂಡು  ಕಟ್ಟಿಗೆಯಿಂದ ಮೋದಿ ಕೊಂದರು, ಅದರಿಂದ ಕಾಷ್ಟವನ್ನು ಬಿಟ್ಟು ಕೆಟ್ಟ ಕೊರ್ಮನಂತೆ ಶ್ಲೋ || ಹಿತವನ್ನು ಮಾಡುವ ಸ್ನೇಹಿತರ ಮಾತನ್ನು ಯಾವನ್ನು ಕೇಳದಿರುವನು ಅವನು ಕೆಡುವನು ವ|| ಈ ಕಥೆಯನ್ನು ಕೇಳಿ ಚಂಡಾಪರಾಕ್ರಮನು ಹೀಗೆಂದನು ತತ್ತಿಗಳನ್ನು ನೀನು ಹೆತ್ತಂದು ಯೋಚಿಸೋಣ,. ಮುಂದೆ ಆಗಲಿರುವ ಕಾರ್ಯಕ್ಕೆ ಹೀಗಲೇ ಚಿಂತಿಸುವುದೇಕೆ. ಮಧುರಲಾಪೆ ಮತ್ತೆ ಹೀಗೆಂದಳು: ನಿನಗೆ ಇಂಥ ದುರ್ಬುದ್ಧಿ ಹುಟ್ಟಿದಾದರೆ ಯದ್ಭವಿಷ್ಯನೆಂಬ ಮತ್ಸ್ಯದ ಕಥೆಯನ್ನು ಕೇಳು ಎಂದು ಹೇಳಿತು: