ಮಹಾನದಿಯ ಮಡುವಿನೊಳನಾಗತಮತಿಯುಮುತ್ಪನ್ನಮತಿಯಂ ಯದ್ಭವಿಷ್ಯನುಮೆಂಬ ಪೆಸರ ಮೂರು ಮತ್ಸ್ಯಂಗಳ್ ಮತ್ಸ್ಯಪ್ರಧಾನರಾಗಿರ್ಪುವು. ಅಲ್ಲಿಗೊಂದು ದಿವಸಂ ಜಾಲಗಾಱರ್ ಬಂದು ಆ ಮಡುವಿನೊಳ್ ಪಲವು ಮತ್ಸ್ಯಂಗಳೊಳವಿಲ್ಲಿಗೆ ನಾಳೆ ಬಂದು ಜಾಲಮಂ ಬೀಸಿ ಮತ್ಸ್ಯಂಗಳಂ ಪಿಡಿವಮೆಂದು ನುಡಿದ ಮಾತನನಾಗತಮತಿ ಕೇಳ್ದು ಮತ್ತಿನ ಮತ್ಸ್ಯದ್ವಯದಲ್ಲಿಗೆ ಬಂದು ತತ್ಪ್ರಪಂಚಮನೆಲ್ಲಮಂ ಪೇೞ್ದು ನಮಗಿಲ್ಲಿರಲ್ಬಾರದು ಪೆಳತೊಂಡು ಮಡುವಿಗೆ ಪೋಪಂ ಬನ್ನಿಮೆಂದೊಡುತ್ಪನ್ನಮತಿ ಮುನ್ನಮೆ ಪೋಗುದೊಡೆಂ ಅವರ್ಬಂದಾಗಳೇ ಬಗೆದುಕೊಳಲ್ಬರ್ಕು ಮೆಂಬುದುಂ ಯುದ್ಭವಿಷ್ಯಂ ಇಂತುಟಪ್ಪೆಡೆಯನ್ನೆಲಿಯಂ ಪಡೆಯಲ್ಬಾರದು ತನ್ನಪ್ಪುದಕ್ಕೆ ಇಲ್ಲಿಂದಂ ಪೋಗಲ್ಬೇಡೆಂದೊಡೆ ಅವರನೊಡಂಬಡಿಸಲಾಱದನಾಗತಮತಿ ತನ್ನ ಸಮೂಹಂಬೆರಸು ಪೆಱತೊಂದೆಡೆಗೆ ಪೋಪುದುಂ ಮರುದಿವಸಮಾ ಜಾಲಗಾಱರ್ ಬಂದು ಜಾಲಮಂ ಬೀಸುವುದುಂ ಆ ಬಲೆಯೊಳುತ್ಪನ್ನಮತಿ ತೊಡರ್ದು ತನ್ನ ಪೆಸರಂ ನೆನೆದುಸಿರನೊಳತೆಗೆದಸು ಪೋದಂತೆ ಮಿಸುಕುದಿರ್ಪುದುಂ ಮೀಂಗುಲಿಗರ್ ಬಲೆಯಂ ತೆಗೆದು ನೋಡಿ ಮುನ್ನಮೆ ಸತ್ತಂತಿರ್ದುತ್ಪನ್ನಮತಿಯಂ ಕಂಡು ಬಲೆಯಿಂ ತೆಗೆದು ನೆಲದೊಳಿರಿಸುವುದಮದು ಪೊಳೆದು ಜಳದೊಳ್ ಮುೞುಂಗಿ ಪೋದುದು. ಯುದ್ಭವಿಷ್ಯಂ ಮತ್ತೊಂದು ಬಲೆಯೊಳ್ ಸಿಲ್ಕಿ ತಲೆಯಂ ಬಡಿಯಿತ್ತಿರ್ದುದಂ ಮೀಂಗುಲಿಗಂ ಕಂಡು ನೆಲದೊಳಪ್ಪಳಿಸಿ ಕೊಂದಂ ಅದಱ*ಂ

ಶ್ಲೋ || ಅನಾಗತ ವಿಧಾತ ಚ ಪ್ರತ್ಯುನ್ನಮತಿಸ್ತಥಾ
ದ್ವಾವಿಮೌ ಸುಖಮೇಧೇತೇ ಯುದ್ಭವಿಷ್ಟೋ ವಿನಶ್ಯತಿ ||೧೧೧||

ಟೀ|| ಮುಂದೆ ಬಹುದನಱ*ವವನುಂ ಬಂದುದರ್ಕೆ ತಕ್ಕುದಂ ನಿಶ್ಚೈಸಬಲ್ಲವನುಂ ಈಯಿರ್ಬರೇ ಸುಖಂಬಡುವರ್; ಬಂದುದಂ ಬರಲಿಯೆಂದಿರ್ದವಂ ಕಿಡುವಂ. ಎಂಬೀ ಕಥೆಯಂತೆನ್ನ ಮಾತಂ ಕೇಳದೆ ನೀನುಂ ಯುದ್ಭವಿಷ್ಯನಾದೆ ಎಂದು ನುಡಿಯೆ ಚಂಡಪರಾಕ್ರಮನಿಂತೆಂದಂ :

ಪೆಂಡಿರ ಮಾತಂ ಸಲೆ ಕೈ
ಕೊಂಡವರಭಿಮತದೆ ನಡೆವನಪ್ಪೊಡೆ ಗಂಡಂ
ಗಂಡನಣಮಾಗಲಱ*ಯಂ
ಭಂಡಂ ಮೇಣ್ ಷಂಡನಕ್ಕುಮಾ ಚಂಡಾಲಂ  ೨೨೧

ಅದಱ*ನ್ನಾವುದಮಂ ನಾನೆ ಬಲ್ಲೆಂ: ನೀನುಸಿರದಿರೆಂದು ವಲ್ಲಬೆಯಂ ಕಲ್ಲಸರದಿಂ ನುಡಿದು ಮಾಣಿಸುವುದಂ ಮಧುರಲಾಪೆ ಮಱುದಿವಸಂ ತತ್ತಿಗಳಂ ಪೆತ್ತು ಬೞ*ಕ್ಕೆ ನಿಜಪ್ರಾಣೇಶ್ವರನುಂ ತಾನುಂ ಕುಡುಕಂ ಕೊಳಲಡವಿಗೆ ಪೊಪುದಮನ್ನೆಗೆಯಾ ಸಮುದ್ರಂ ವೇಲೆಯೆತ್ತಿ ತತ್ತಿಗಳಂ ತನ್ನ ತೆರಗೈಗಳಿಂ ಮೆಲ್ಲನೆ ತೆಗೆದು ತಂದಾಗಳ್ ಮತ್ತೊಂದುತ್ತಮಮಪ್ಪೆಡೆಗೆ ಸಾರ್ಚಲನ್ನೆಗಂ ಟಟ್ಟಿಭ ಮಿಥುನಂ ಕಿರಿದಾನುಂ ಬೇಗದಿಂ ಬಂದು ತಮ್ಮಿರ್ಕೆಗೆ ಪೋಗಲಲ್ಲಿ ತತ್ತಿಗಳಂ ಕಾಣದೆ ಬೆಕ್ಕಸಂಬಟ್ಟು ಮರುಗಿ ಮಧುರಲಾಪೆ ವಿಪ್ರಲಾಪಂಗೆಯ್ಯೆ ಚಂಡಪರಾಕ್ರಮನಿಂತೆಂದಂ:

ಮಹಾನದಿಯ ಮಡುವಿನಲ್ಲಿ ಅನಾಗತಮತಿ, ಉತ್ಪನ್ನಮತಿ, ಯುದ್ಭವಿಷ್ಯ ಎಂಬ ಮೂರು ಮತ್ಸ್ಯಗಳು ಪ್ರಧಾನರಾಗಿದ್ದವು. ಅಲ್ಲಿಗೊಂದು ದಿನ ಜಾಲಗಾರರು ಬಂದು ಈ ಮಡುವಿನಲ್ಲಿ ಹಲವು ಮತ್ಯ್ಸಗಳಿವೆ. ಇಲ್ಲಿಗೆ  ನಾಳೆ ಬಂದು ಜಾಲವನ್ನು ಬೀಸಿ ಮೀನುಗಳನ್ನು ಹಿಡಿಯೋಣ ಎಂದು ನುಡಿದ ಮಾತನ್ನು ಅನಾಗತಮತಿ ಕೇಳಿ ಮತ್ತೆರಡು ಮತ್ಸ್ಯಪ್ರಧಾನರಲ್ಲಿಗೆ ಬಂದು ಆ ವೃತ್ತಾಂತವನ್ನೆಲ್ಲ ಹೇಳಿ ನಾವಿಲ್ಲಿರುವುದು ತರವಲ್ಲ ಬೇರೊಂದು ಮಡುವಿಗೆ  ಹೋಗೊಣ ಬನ್ನಿ ಎಂದಿತು. ಅದಕ್ಕೆ ಉತ್ಪನ್ನಮತಿ ಮೊದಲೇ ಯಾಕೆ ಹೋಗಬೇಕು: ಅವರು ಬಂದಾಗಲೇ ಯೋಚಿಸಿಕೊಂಡರಾಯಿತು ಎಂದಿತು. ಯುದ್ಬವಿಷ್ಯವು ಇಂಥ ಸುರಕ್ಷಿತವಾದ ಸ್ಥಳ ಎಲ್ಲಿಯೂ ಸಿಕ್ಕದು: ಆಗುವುದಾಗಲಿ  ಇಲ್ಲಿಂದ ಹೋಗುವುದು ಬೇಡ ಎನ್ನಲು ಅವರಿಬ್ಬರನ್ನು ಒಡಂಬಡಿಸುವುದು ಅಸಾಧ್ಯವೆಂದು ಅನಾಗತಮತಿ ತನ್ನ ಗುಂಪನ್ನು ಕರೆದುಕೊಂಡು ಬೇರೊಂದು ಕಡೆಗೆ ಹೋಯಿತು. ಮರುದಿನ  ಆ ಜಾಲಗಾರರು ಬಂದು ಬಲೆ ಬೀಸಲು ಆ ಬಲೆಯಲ್ಲಿ ಉತ್ಪನ್ನಮತಿ ಸಿಕ್ಕಿಬಿದ್ದು ತನ್ನ ಹೆಸರನ್ನು ನೆನೆದು ಶ್ವಾಸ ಕಟ್ಟಿ ಪ್ರಾಣಹೋದಂತೆ ಅಲ್ಲಾಡದಿರಲು ಮೀಂಗುಲಿಗರು ಬಲೆಯನ್ನು ತೆಗೆದು ನೋಡಿ ಮೊದಲೇ ಸತ್ತಂತಿದ್ದ ಉತ್ಪನ್ನಮತಿಯನ್ನು ಕಂಡು ಬಲೆಯಿಂದ ತೆಗೆದು ನೆಲದ ಮೇಲೆ ಹಾಕಲು ಅದು ಹೊಳೆದು ಜಲದಲ್ಲಿ ಮುಳುಗಿಹೋಯಿತು. ಯುದ್ಭವಿಷ್ಯವು ಮತ್ತೊಂದು ಬಲೆಯಲ್ಲಿ ಸಿಕ್ಕಿ ತಲೆ ಬಡಿಯುತ್ತಿರುವುದನ್ನು ಬೆಸ್ತನು ಕಂಡು ನೆಲಕ್ಕೆ ಅಪ್ಪಳಿಸಿ ಕೊಂದನು. ಅದರಿಂದ ಶ್ಲೋ || ಮುಂದಾಗುವುದನ್ನು ಅರಿಯುವವನೂ ಬಂದುದಕ್ಕೆ ತಕ್ಕ ಉಪಾಯವನ್ನೂ ನಿಶ್ಚಯಿಸುವವನೂ ಈ ಇಬ್ಬರೆ ಸುಖಪಡುವವರೂ ಬಂದುದು ಬರಲಿ ಎಂದು ಸುಮ್ಮನಿರುವವನು ಕೆಡುವವನು ವ|| ಎಂಬ ಕಥೆಯಂತೆ ನನ್ನ ಮಾತನ್ನು ಕೇಳದೆ ನೀನೂ ಯುದ್ಭವಿಷ್ಯನಾದೆ ಎಂದು ನುಡಿಯಲು ಚಂಡಾಪರಾಕ್ರಮನು ಹೀಗೆಂದನು: ೨೨೧: ಹೆಂಡಿರ ಮಾತನ್ನು ಕೇಳಿ ಅವರ ಅಭಿಪ್ರಾಯದಂತೆ ನಡೆಯುವ ಗಂಡ ಗಂಡನಲ್ಲ: ಅವನು ಭಂಡ ಷಂಡ ಚಂಡಾಲ ವ|| ಅದರಿಂದ ಯಾವುದನ್ನು ನಾನೇ ಬಲ್ಲೆ: ನೀನು ಸುಮ್ಮನಿರು ಎಂದು ವಲ್ಲಭೆಯನ್ನು ಕಠೋರ ಸ್ವರದಿಂದ ಪ್ರತಿಭಟಿಸಿದನು. ಮಧುರಲಾಪೆ ಮರುದಿನ ತತ್ತಿಗಳನ್ನು ಹೆತ್ತು ಬಳಿಕ ತಾನೂ ತನ್ನ ಗಂಡನೂ ಗುಟುಕನ್ನು ಕೊಡಲು ಅಡವಿಗೆ ಹೋದಾಗ ಸಮುದ್ರವು ದಡ ಮೀರಿ ಬಂದು ತನ್ನ  ತೆರೆಗೈಗಳಿಂದ ಮೆಲ್ಲಗೆ ತೆಗೆದುಕೊಂಡು ಬಂದು ಮತ್ತೊಂದು ಉತ್ತಮನಾದ ಸ್ಥಳದಲ್ಲಿಟ್ಟಿತು ಅಷ್ಟರಲ್ಲಿ ಟಟ್ಟಭಗಳು ಬಂದು ತಮ್ಮ ಗೂಡಿಗೆ ಹೋಗಿ ಅಲ್ಲಿ ತತ್ತಿಗಳನ್ನು ಕಾಣದೆ ಮರುಗಿ ಮಧುರಲಾಪೆ ಪ್ರಲಾಪಿಸಲು ಚಂಡಪರಾಕ್ರಮನು ಹೀಗೆಂದನು.

ಚಂಡಪರಾಕ್ರಮವೆಸರಂ
ಕೊಂಡಿರ್ದೆನ್ನಳವನಱ*ದುಮಱ*ಯದೆ ವೈರಂ
ಗೊಂಡೀ ಕಡಲುಂ ತವೆ ಪೀ
ರ್ದಂಡಂಗಳನಱಸಿ ತಂದು ನಿನಗಾನೀವೆಂ  ೨೨೨

ಬಗೆಯದಿರಾ ನಿನ್ನಯ ತ
ತ್ತಿಗಳಂ ಸಾಗರಮನೊತ್ತಿ ತಂದಾನೀವೆಂ
ಪಗೆಗೊಂಡು ಕುಡದೆ ತಡೆದಂ
ದಗಸ್ತ್ಯನುಱೆ ಪೀರ್ದ ತೆಱದೆ ಕಡಲಂ ಪೀರ್ವೆಂ  ೨೨೩

ಎಂದು ಮಾಣದೆ ಬಕ ಕಾಕ ಕೋಕಿಲ ಶುಕ ಚಕ್ರವಾಕ ಚಕೋರ ಕರ್ಕರ ಶ್ಯೇನ ಕಪೋತ ಹಂಸ ಕಾರಂಡ ಬೇರುಂಡಾದಿ ಸಮಸ್ತ ವಿಹಂಗಮ ಜಾತಿಗಳೆಲ್ಲಮಂ ನೆರಪಿ ತನ್ನ ತತ್ತಿಗಳಂ ಸಮುದ್ರನೆತ್ತಿಕೊಂಡುಯ್ದನೆಂದು ಪುಯ್ಯಲಿಡುವುದಂ ಪಕ್ಷಿಗಣಂಗಳಿದನುಪೇಕ್ಷಿಸಲಾಗದು ಎಮಗೆ ಕುಲಸ್ವಾಮಿಯಪ್ಪ ಗರುಡಂಗಱಪಲ್‌ವ್ವೇೞ್ಕುಮೆಂದೆಲ್ಲಮೊಂದಾಗಿ ಪೋಗಿ,

ಕನಕನಿಭಪ್ರಭಾಂಘ್ರಿಯುಗನಂ ತುಹಿನಾಚಲವರ್ಣಮಧ್ಯದೇ
ಹನನುದಿತಾರುಣರಪ್ರತಿಮಕಂಠನನಂಜನಮೇಚಕೋರುಮೂ
ರ್ಧನನತುಲಪ್ರತಾಪವಿಜಿತೋದ್ಧತ ವಿಶ್ವಮರನ್ನಿಕಾಯನಂ
ವಿನಿಹತಕಾದ್ರವೇಯನನಜೇಯನನೂರ್ಜಿತವೈನತೇಯನಂ  ೨೨೪

ಅಂತು ಕಂಡು ಪೊಡೆಮಟ್ಟು ಸಮುದ್ರನ ದೆಸೆಯಿಂ ತಮಗಾದುಪದ್ರವಮನಱ * ಪೆ,ತದುಪದ್ರವಪ್ರತೀಕಾರವಿಧಾನಸಮರ್ಥನಖಿಳಕಾದ್ರವೇಯ ವಿದ್ರಾವಣಂ ಸಕಲ ಶಕುನಿಗಣಸಮೇತಂ ಕ್ಷೀರಪಾರಾವಾರಭಿಮುಖನಾಗಿ ಭಾಸುರಸುರಾಸುರಶಿರೋಮಣಿ ಮರೀಚಿಮಾಲಾಲಂಕೃತ ಚಾರುಚರಣಾರವಿಂದನನ ಲಕ್ಷ್ಮೀಕುಚುಕುಂಭಕುಂಕುಮಪಂಕಾರುಣೀಭೂತವಿಶಾಲವೃಕ್ಷಃಸ್ಥಳನಂ ಮಧುಮುಖ್ಯಾಸುರವದೂಜನಾಕ್ರಂದನ ನಯನ ವಾರಿಧಾರಾಪೂರ ಪರಿಪೂತ ನಿರಾಖ್ರತ ಕಲುಷ ಶಿಖಿಶಿಖಾಕಲಾಪನಂ ಭೌಮ ಭಾಮಾಭರಣಭಂಜನ ವಿಧಾನ ಸಮರ್ಥನಂ ಹಿರಣ್ಯಕಶಿಪು ಮಹಾದಾನವ ವಕ್ಷಃಸ್ಥಳಸ್ಥಿತ ವಜ್ರಾಯಿತ ನಖರಶಾಲಿಯಂ ವಜ್ರಪಾಷಣ ವಿಷಮಿತ ಶಂಖಚಕ್ರಧರನಂ ಪಿತಾಮಹಾದಿಮುನಿಗಣಸ್ತೂಯಮಾನಶುಭಚರಿತನಂ ನಿಜಪ್ರತಾಪ ಸಂತೋಷಿತದನುಜವೃಂದಲತಾ ಕಂದನಂ ಮುಕುಂದನಂ ಕಂಡು ಕೈಗಳಂ ಮುಗಿದು

(ಪದ್ದಳಿ)

ಜಯ ದಿವಿಜಗರ್ಣಾರ್ಚಿತ ಚಾರುಚರಣ
ದುರಿತೋಗ್ರತಮಃಪಟಲೋಷ್ಣಕಿರಣ
ತಾಷಿಂಛಸಮಚ್ಚವಿ ನೀಲವರ್ಣ
ವಿದ್ಯಾಧರ ಕಾಂತಾ ಗೀತವರ್ಣ

ರಾಮಾವದನಾಂಬುಜಮತ್ತಭೃಂಗ
ವರಕೌಸ್ತುಭೂಷಣಭೂಷಿತಾಂಗ
ಮಧುಕೈಟಭಪಾದಪ ಘನಕುಠಾರ

ಲಕ್ಷ್ಮೀಕುಚಮಂಡನತಾರಹಾರ
ನರಕಾಸುರಮದಕರಿ ಪಂಚವದನ
ಕುಸುಮಾಯುಧಮಂಗಳ ಜನ್ಮಸದನ
ಕಂಸಾಸುರಹಂಸಪಯೋದಕಾಲ

ಶಕಟಾಸುರಪ್ರಕಟ ವಿಲಯಕಾಲ
ಕೃತಬಾಣಭಯಂಕರ ದರ್ಪಭಂಗ
ಚಾಭೂರ ಸರೋರುಹ ಮದಮಾತಂಗ
ನಖಭಿನ್ನ ಹಿರಣ್ಯಕಶಿಪು ಶರೀರ
ಜಠರಾಂತರ್ವಿನಿಹಿತಭುವನಭಾರ

ಖಳಧೇನುಕಕಾನನ ಕೃಷ್ಣಮಾರ್ಗ
ವಿತ್ರಸ್ತಸಮಸ್ತ ನಿಶಾಟವರ್ಗ
ಕೋಪಾನಲಮಗ್ನ ಸುರಾರಿಶಲಭ
ಘನಭಕ್ತಿ ಸಮನ್ವಿತಯೋಗಿಸುಲಭ

ಉತ್ಪಾಟಿತ ಕಾಳೀಯ ಭುಜಗದಂತ
ದಿತಿಜೋತ್ತಮ ಸಮದತನುಕೃತಾಂತ
ಮಂದಾರಜೋಂಚಿತ ಮಣಿಕಿರೀಟ
ಬಳಭೀಕರ ಮುಷ್ಟಿಕ ಕಾಳಕೂಟ

ವರಶೌರ‍್ಯವಿನಿರ್ಜಿತ ಕಾರ್ತವೀರ‍್ಯ
ಚಲಿತೋನ್ನತ ಮಂದರ ಕುಧುರಧೈರ‍್ಯ
ಸರ್ವೇಶ್ವರ ಸರ‍್ವಗ ದೇವದೇವ
ಸರ‍್ವಜ್ಞ ನಮಸ್ತೇ ವಾಸುದೇವ  ೨೨೫

ಎಂದು ದೇವದೇವನನನೇಕಪ್ರಕಾರದಿಂ ಸ್ತುತ್ತಿಸಿ ಸಾಷ್ಟಂಗವೆರಗಿ ಪೊಡೆಮಟ್ಟು ಮುಂದೆ ನಿಂತ ಪತತ್ರಿಗೋತ್ರಾಪತಿಯ ಮೊಗಮಂ ದಾಮೋದರನಾದರಂಬೆರಸು ನೋಡಿ ನೀನೆಂದಿನಂದಮಲ್ಲಿಂದು ನಿನ್ನ ಗೋತ್ರಸಮೇತಂ ಬಂದ ಕಾರಣಮಾವುದೆನೆ ವಿನತಾನಂದನಿಂತೆಂದು ಬಿನ್ನಪಂಗೆಯ್ದುಂ : ಈ ಟಟ್ಟಿಭನ ತತ್ತಿಗಳಂ ವಾರಿ ಮೇರೆದಪ್ಪಿ ಕೊಂಡುಯ್ದೊಡೆ ಪುಯ್ಯಲಿಡಲ್ಬಂದೆವೆಂಬುದುಂ ಮುಕುಂದಂ ಮುಗುಳ್ನಗೆ ನಗುತ್ತುಂ ಇದಾವ ಕಾರ‍್ಯಮೆಂದಿತಪಹಾಸ್ಯಂಗೆಯ್ಯೆ ವಿನುತಾನಂದನಂ ಮತ್ತಮಿಂತೆಂದು ಬಿನ್ನಪಂಗೆಯ್ದಂ:

ಶ್ಲೋ|| ಆಶಾಃ ಪೂರಯಿತುಂ ಗುಣಾನ್ ಪ್ರಕಟಿತುಂ ಮಾನೋನ್ನತಿಂ ರಕ್ಷಿತುಂ
ಕಾರ‍್ಯಂ ಸಾಧಯಿತುಂ ಖಲಾನ್ ಸ್ಖಲಯಿತುಂ ಲಕ್ಷ್ಮೀಂ ಸಮಾಸೇವಿತುಂ
ಸ್ವಪ್ರಾಣೈಃ ಪರಿಕಲ್ಪಿತಾಂಜಲಿಜಲೈಃ ವಿಕ್ರೀಯ ದೇಹಸ್ಥಿತಿಂ
ಸಂತೋ ಭೂಪತಿಮಾಶ್ರಯಂತಿ ನ ಪುನರ್ದೈನ್ಯಾಯ ದುಃಖಾಯ ಚ ||೧೧೨||

ಟೀ|| ಬಯಕೆಯಂ ತೀರ್ಚಲುಂ ಗುಣಮಂ ಪ್ರಕಟಿಸಲುಂ ಅಭಿಮಾನದ ಪೆರ್ಚಂ ರಕ್ಚಿಸಲು ಕಾರ‍್ಯಮಂ ಸಾಸಲುಂ ದುರ್ಜನರಂ ಕಿಡಿಸಲುಂ ಶ್ರೀಯಂ ಲೇಸಾಗಿ ಬೋಗಿಸಲುಂ ತಮ್ಮ ಪ್ರಾಣಮಂ ಧಾರೆಯನೆಱೆದು ದೇಹಸ್ಥಿತಿಯಂ ಮಾಱ* ಸತ್ಪುರುಷರ್ ಅರಸನಾಶ್ರಯಿಸಿರ್ಪರ್. ಅದಲ್ಲದೆ ದೈನ್ಯಕ್ಕಂ ದುಃಖಕ್ಕಂ ಆಶ್ರಯಿಸುವರಲ್ಲ.

ಎಂದು ನೊಂದು ನುಡಿದ ತಾರ್ಕ್ಷ್ಯನ ಮನಃಕ್ಷತಮನಧೋಕ್ಷಜನಱ*ತು ವರುಣನಂ ನೆನೆಯಲೊಡಮಾತಂ ಬಂದು ಪೊಡೆಮಟ್ಟು ಬೆಸನಾವುದೆಂದೊಡೀ ಪಕ್ಷಿಯ ತತ್ತಿಗಳಂ ಸಮುದ್ರಂ ತನ್ನ ಮೇರೆಯಂ ಮೀಱ* ಕೊಂಡುಪೋದಂ ಅವಂ ಬೇಗಂ ತಂದೊಪ್ಪಿಸೆನಲೊಡಂ ಮಹಾಪ್ರಸಾದಮೆಂದು ತಂದಾ ತತ್ತಿಗಳಂ ಟಟ್ಟಿಭಮಿಥುನಕ್ಕೆ ಕೊಟ್ಟಂ ಅದಱ*ಂ.

ಶ್ಲೋ|| ಶತ್ರೋರ್ಬಲಮವಿಜ್ಞಾಯ ವೈರಮಾಚರತೇ ತು ಯಃ
ಸ ಪರಾಭವಮಾಪ್ನೋತಿ ಸಮುದ್ರ ಇವ ಟಟ್ಟಿಭಾತ್  ||೧೧೩||

ಟೀ|| ಅವನಾನೊರ್ವಂ ಶತ್ರುವಿನ ಬಲವನರೆಯದೆ ವಿರೋಧಂಗೊಂಬಂ ಅವಂ ಸೋಲವನೈದುವಂ. ಅದೆಹಗೆಂದೊಡೆ ಟಟ್ಟಿಭನಿಂ ಸಮುದ್ರವೆಂತಂತೆ ಎಂಬ ಶ್ಲೋಕಾರ್ಥಮುಂಟದರಂ ‘ಸಾಹಸೈಃ ಖಲು ಶ್ರೀರ್ವಸತಿ’- ಸಾಹಸಂಗಳಿಂ  ಸಿರಿ ನೆಲೆಗೊಳ್ಗುಂ ಎಂಬ ನಯಮಂ ಪಿಡಿದು ಸಾಹಸಂಗೆಯ್ವುದೆನೆ ಸಂಜೀವಕನಿಂತೆದಂ: ಸಂದಿಗ್ದೋ ’ವಿಜಯೋಯು’ ಕಾಳಗದೊಳು ಗೆಲುವಿಂತೆಂದು ನಿರ್ಣಯಿಸಲರಿದು ಎಂಬುದು: ಇನ್ನು ಪಿಂಗಳಕನಲ್ಲಿಗೆ ಪೋಗಿ ನಿನ್ನಱ*ವಂದದಿಂ ನುಡಿದೆನ್ನಂ ನೀನೋರ್ಮಿಂಗೆ ಕಾವುದೆನೆ, ದವನಕನಿಂತೆಂದಂ: ’ಆರ್ಥೀ ದೋಷಂ ನ ಪಶ್ಯತಿ’  ಪಿರಿದುಂ ಬಯಕೆಯನುಳ್ಳವಂ ಕೇಡಂ ನೋಡಂ ಎಂಬುದು ತಪ್ಪದು ಅದೆಂತನೆ,

ಬಂಧನಂಗೆಯ್ದಯ ಮೇಲೆವರಲಿರ್ಪ್ಯದಂ ರಾವಣಂ ಕೇಳ್ದು ತತ್ಕಾರ‍್ಯ ಪರ‍್ಯಾಲೋಚನೆಚಿiಳಿರ್ದಲ್ಲಿ ವಿಭೀಷಣನಿಂತೆದಂ:

೨೨೨; ಚಂಡಪರಾಕ್ರಮನೆಂಬ ಹೆಸರು ಹೊತ್ತಿರುವ ನನ್ನ ಸಾಮರ್ಥ್ಯವ್ನ ಅರಿಯದೆ ವೈರದಿಂದ ವರ್ತಿಸಿದ ಈ ಕಡಲನ್ನು ಕುಡಿದು ಅಂಡಗಳನ್ನು ಹುಡುಕಿ ತಂದುಕೊಡುವೆ. ನೀನು ಚಿಂತಿಸದೆರು: ಸಾಗರವನ್ನು ಒತ್ತಿ ನಿನ್ನ ತತ್ತಿಗಳನ್ನು ತಂದು ಕೊಡುವೆ; ಇಲ್ಲದಿದ್ದರೆ ಆ ಆಗಸ್ತ್ಯನಂತೆ ಕಡಲನ್ನು ಹೀರುವೆ! ವ || ಬಕ, ಕಾಕ, ಕೋಕಿಲ, ಶುಕ, ಚಕ್ರವಾಕ, ಚಕೋರ, ಕರ್ಕರ, ಶ್ಯೇನ, ಕಪೋತ ಹಂಸ, ಕಾರಂಡ, ಭೇರುಂಡಾದಿ ಸಮಸ್ತ ಪಕ್ಷಿಜಾತಿಗಳೆನ್ನೆಲ್ಲ ಸೇರಿಸಿ ತನ್ನ ತತ್ತಿಗಳನ್ನು ಸಮುದ್ರ ಎತ್ತಿಕೊಂಡು ಹೋಯಿತು ಎಂದು ಹುಯ್ಯಲಿಟ್ಟಿತು. ಪಕ್ಚಿಗಳು ಇದನ್ನು ಉಪೇಕ್ಚಿಸಬಾರದೆಂದು ನಮಗೆ ಕುಲಸ್ವಾಮಿಯಾದ ಗರುಡನಿಗೆ ತಿಳಿಸಬೇಕು ಎಂದು ಹೋದವು. ೨೨೪. ಚಿನ್ನದ ಕಾಂತಿಗೆ ಸಮನಾದ ಕಾಲುಗಳುಳ್ಳವನೂ ಹಿಮಾಚಲದಂತೆ ಬೆಳ್ಳಗಿರುವ ದೇಹದ ಮದ್ಯಭಾಗವಿರುವವನೂ ಅರುಣ ಕಂಠವುಳ್ಳವನೂ ಕಪ್ಪು ಮತ್ತು ಪಚ್ಚೆ ಬಣ್ಣದ ತೊಡೆ ಹಾಗು ಶರಸ್ಸುಳ್ಳವನೂ ಅಸಾಧ್ಯವಾದ ಪರಾಕ್ರಮದಿಂದ ವಾಯುವನ್ನೂ ಗೆದ್ದವನೂ ಹಾವನ್ನು ಕೊಂದವನೂ ಅದ ಗರುಡನನ್ನು ವ|| ಕಂಡು ನಮಸ್ಕರಿಸಿ ಸಮುದ್ರನ ದೆಸೆಯಿಂದ ತಮಗಾದ ಉಪದ್ರವವನ್ನು ನಿವೇದಿಸಿಕೊಂಡುವು. ಆಗ ವೈನತೇಯನು ಸಕಲ ಪಕ್ಷಿ ಸಂಕುಲದೊಂದಿಗೆ ಕ್ಷೀರಸಾಗರದ ಕಡೆಗೆ ಹಾರಿ ಹೊಳೆಯುವ ಸುರಾಸುರರ ಶಿರೋಮಣಿಯ ಕಾಂತಿಸಮೂಹದಿಂದ ಅಲಂಕೃತವಾದ ಚಾರುಚಾರಣನೂ ಲಕ್ಷ್ಮೀಕುಚಕುಂಭ ಕುಂಕುಮಪಂಕದಿಂದ ಕೆಂಪಾದ ವಿಶಾಲ ವಕ್ಷಸ್ಥಳನೂ ಮಧು ಮೊದಲಾದ ರಾಕ್ಷಸರ ಹೆಂಡಿರ ದುಃಖದ ಕಾರಣದಿಂದ ಬಂದ ಕಣ್ಣೀರ ಪ್ರವಾಹದಿಂದ ನಿವಾರಿತವಾದ ಕಲುಷವೆಂಬ ನವಿಲಿನ ಜುಟ್ಟಿನಿಂದ ಅಲಂಕರಿಸಿಕೊಂಡವನೂ ಭುಕಾಂತಾಭರಣ ಧರಿಸುವದರಲ್ಲಿ ಸಮರ್ಥನೂ ಹಿರಣ್ಯಕಶಿಪು ಎಂಬ ಮಹಾದೈತ್ಯನ ವಕ್ಷಸ್ಥಳದಲ್ಲಿ  ವಜ್ರನಖವನ್ನೂ ಇಟ್ಟವನೂ ವಜ್ರಪಾಷಾಣ ವಿಷಮಿತ ಶಂಖ ಚಕ್ರಧರನೂ ಬ್ರಹ್ಮನೇ ಮೊದಲಾದ ಮುನಿಸಮೂಹದಿಂದ ಸ್ತುತಿಸಿದ ಶುಭಚರಿತನೂ ತನ್ನ ಪ್ರತಾಪದಿಂದ ರಾಕ್ಷಸರೆಂಬ ಲತೆಯ ಬೇರನ್ನೆ ಒಣಗಿಸಿದವನೂ ಅದ ಮುಕುಂದನನ್ನು ಕಂಡು ಕೈಮುಗಿದು ಬಗೆಬಗೆಯಿಂದ ಹೀಗೆ ಸ್ತುತಿಸಿದನು: ದೇವತೆಗಳಿಂದ ಅರ್ಚಿತವಾದ ಚಾರುಚರಣನಿಗೆ ಜಯವಾಗಲಿ ಪಾಪವೆಂಬ ಅಂಧಕಾರ್ಯಕ್ಕೆ ಸೂರ‍್ಯನಾಗಿರುವವನೂ ತಮಾಲವೃಕ್ಷದ ನೀಲಬಣ್ಣದವನೂ ವಿದ್ಯಾಧರಿಯರ ಗೀತೆಗಳ ವರ್ಣವನ್ನುಳ್ಳವನೂ ಲಕ್ಷ್ಮಿಯ ಮುಖಕಮಲಕ್ಕೆರಗಿದ ಸೊಕ್ಕಿದ ತುಂಬಿಯಾಗಿರುವವನೂ ಶ್ರೇಷ್ಟಕೌಸ್ತುಭ ಎಂಬ ರತ್ನವನ್ನು ತೊಟ್ಟ ಅಂಗವುಳ್ಳವನೂ, ಮಧುಕೈಟಭರೆಂಬ ವೃಕ್ಷಕ್ಕೆ ಮಹಾ ಕುಠಾರನೆನಿಸಿದವನು ಲಕ್ಷ್ಮೀಕುಚಮಂಡನ ತಾರಹರನೂ ನರಕಾಸುರನೆಂಬ ಮದ್ದಾನೆಗೆ ಸಿಂಹಪ್ರಾಯನೂ ಮದನಜನಕನೂ ಕಂಸಾಸುರನೆಂಬ ಹಂಸಕ್ಕೆ  ಮಳೆಗಾಲವಾಗಿರುವವನೂ, ಶಕಟಾಸುರನಿಗೆ ಪ್ರಳಯಕಾಲನೂ ಬಾಣಾಸುರನ ದರ್ಪವನ್ನೂ ಮುರಿದವನೂ ಚಾಣೂರನೆಂಬ ಕಮಲಕ್ಕೆ ಮದ್ದಾನೆಯಾದವನೂ ಹಿರಣ್ಯಕಶಿಪುವಿನ ಶರೀರವನ್ನೂ ಉಗುರುಗಳಿಂದ ಭೇದಿಸಿದವನೂ ಭುವನ ಭಾರವನ್ನೆಲ್ಲ ಹೊಟ್ಟೆಯಲ್ಲಿ ಹೊತ್ತವನೂ ಧೇನುಕಾಸುರನೆಂಬ ಕಾಡಿಗೆ ಕಿಚ್ಚಾದವನು, ಸಮಸ್ತ ರಾಕ್ಷಸರನ್ನೂ ನಾಶಮಾಡಿದವನೂ ರಾಕ್ಷಸರೆಂಬ ಕೀಟಗಳನ್ನೂ ತನ್ನ ಕೋಪಾನಲಕ್ಕೆ ಬೀಳಿಸಿದವನೂ, ಘನಭಕ್ತಿಯಿಂದ ಕೂಡಿದ ಯೋಗಿ ಜನಗಳಿಗೆ ಸುಲಭನೂ, ಕಾಳೀಯನಾಗನ ಹಲ್ಲನ್ನೂ ಕಿತ್ತವನೂ ಶ್ರೇಷ್ಟ ರಾಕ್ಷಸರ ಕೊಬ್ಬಿದ ದೇಹಕ್ಕೆ ಯಮನ ಸ್ವರೂಪನೂ ಮಂದಾರ ಪರಾಗಗಳಿಂದ ಕೂಡಿದ ರತ್ನಕಿರೀಟವುಳ್ಳವನೂ ಬಲಬೀಕರನಾದ ಮುಷ್ಠಿಕನಿಗೆ ವಿಷಪ್ರಾಯನೂ ಕಾರ್ತವೀಚಿiನನ್ನು  ಶೌರ್ಯದಿಂದ ನಾಶಮಾಡಿದವನೂ ಉನ್ನತ ಮಂದರಪರ್ವತವನ್ನೂ ಚಲಿಸುವಂತೆ ಮಾಡುವ ದೈರ್ಯವುಳ್ಳವನೂ ಸರ್ವೇಶ್ವರನೂ ಸರ್ವಗಮ್ಯನೂ ದೇವದೇವನೂ ಸರ್ವಜ್ಞನೂ ಅದ ವಾಸುದೇವನಿಗೆ ನಮಸ್ಕಾರ. ವ|| ಈ ರೀತಿ ದೇವದೇವನೂ  ಅನೇಕ ಪ್ರಕಾರಗಳಿಂದ ಸ್ತುತಿಸಿ ಸಾಷ್ಟಾಂಗವೆರಗಿದವನು. ಮುಂದೆ ನಿಂತ ಪಕ್ಷಿರಾಜನನ್ನು ದಾಮೋದರನು ಪ್ರೀತಿಯಿಂದ ನೋಡಿ ನೀನು ಎಂದಿನ ಹಾಗೆ ಇಲ್ಲ. ಇಂದು ನಿನ್ನ ಪರಿವಾರದೊಂದಿಗೆ ಬಂದ ಕಾರಣವೇನು ಎಂದು ಕೇಳಿದನು. ಆಗ ವಿನತಾನಂದನನು ಈ ಟಿಟ್ಟಿಭನ ತತ್ತಿಗಳನ್ನು ವಾರಿ ಮೇರೆದಪ್ಪಿ ಕೊಂಡೊಯ್ದನು: ಅದನ್ನು ದೂರಲು ಬಂದೆನು ಎಂದನು. ಮುಕುಂದನು ಮುಗುಳ್ನಕ್ಕು ಇದೆಂತಹ ಮಹಾಕಾರ್ಯ ಎಂದು ತಿರಸ್ಕರಿಸಲು ಮತ್ತೆ ವಿನತಾನಂದನನು ಬಿನ್ನವಿಸಿಕೊಂಡನು. ಶ್ಲೋ|| ಬಯಕೆಗಳನ್ನೂ ತೀರಿಸಿಕೊಳ್ಳಲೂ ಗುಣಗಳನ್ನೂ ಪ್ರಕಟಿಸಲೂ ಅಭಿಮಾನವನ್ನೂ ರಕ್ಚಿಸಿಕೊಳ್ಳಲೂ ಕಾರ್ಯಸಾಧನೆಗಾಗಿ ದುರ್ಜನರನ್ನೂ ನಾಶಪಡಿಸಲು ಐಶ್ವರ್ಯವನ್ನು ಬೋಗಿಸಲು ತಮ್ಮ ಪ್ರಾಣವನ್ನೂ ಧಾರೆಯೆರದು ದೇಹಸ್ಥಿತಿಯನ್ನು ಮಾರಿ ಸತ್ಪುರುಷರು ಅರಸನನ್ನು ಆಶ್ರಯಿಸುವರು. ಅದಲ್ಲದೆ ದೈನ್ಯಕ್ಕೂ ದುಃಖಕ್ಕೂ ಆಶ್ರಯಿಸುವರಲ್ಲ ವ|| ಎಂದು ನೊಂದು ನುಡಿದ ಗರುಡನ ಮನಃಕ್ಷತವನ್ನು ವಿಷ್ಣುವು ಅರಿತನು.  ವರುಣನನ್ನು ನೆನೆದ ಕೂಡಲೇ ಅತನು ಬಂದು ವಂದಿಸಿ ಏನಪ್ಪಣೆ ಎಂದು ಕೇಳಲು ಈ ಪಕ್ಷಿಯ ತತ್ತಿಗಳನ್ನು ಸಮುದ್ರನು ತನ್ನ ಮೇರೆ ಮೀರಿ ಕೊಂಡುಹೋದನಂತೆ. ಅವುಗಳನ್ನು ಬೇಗನೆ ತಂದೊಪ್ಪಿಸು ಎನ್ನಲು ಮಹಾಪ್ರಸಾದ ಎಂದು ತತ್ತಿಗಳನ್ನು  ತಂದು ಟಟ್ಟಿಭಗಳಿಗೆ ಕೊಟ್ಟನು. ಅದರಿಂದ ಶ್ಲೋ || ಯಾವನಾದರೂ  ಶತ್ರುವಿನ ಬಲವನ್ನು ನೋಡಿ ವಿರೋಧವನ್ನು ಕಟ್ಟಿಕೊಳ್ಳುವವನು ಸೋಲನ್ನು ಹೋಂದುತ್ತಾನೆ. ಅದು ಹೇಗೆಂದರೆ ಟಟ್ಟಿಭನಿಂದ ಸಮುದ್ರ ಹೇಗೋ ಹಾಗೆ ಎಂಬ ಶ್ಲೋಕಾರ್ಥ ಉಂಟು. ವ|| ಅದರಿಂದ ’ಸಾಹಸೈ ಖಲು ಶ್ರೀರ್ವಸತಿ’- ಸಾಹಸಗಳಿಂದ ಸಿರಿ ನೆಲೆಗೊಳ್ಳುವುದು ಎಂಬ ನೀತಿಯನ್ನು ಹಿಡಿದು ಸಾಹಸ ಮಾಡಬೇಕು. ಆಗ ಸಂಜೀವಕನು ಹೀಗೆಂದನು: ’ಸಂದಿಗ್ದೋ ವಿಜಯೋಯು’- ಯುದ್ದದಲ್ಲಿ ಗೆಲುವು ಹೀಗೆ ಎಂದು ಹೇಳಲು ಬರುವುದಿಲ್ಲ ಇನ್ನು ಪಿಂಗಳಕನಲ್ಲಿಗೆ ಹೋಗಿ ನೀನು ತಿಳಿದಂತೆ ನುಡಿದು ನಿನ್ನನ್ನು  ನೀನು ಒಮ್ಮೆಗೆ ಕಾಪಾಡುವುದು. ಆಗ ದವನಕನು ಹೀಗೆಂದನು: ’ಆರ್ಥಿ ದೋಷಂ ಪಶ್ಯ್‌ತಿ’ ಹಿರೆಇದಾದ ಬಯಕೆಯುಳ್ಳವನು ಕೇಡನ್ನು ನೋಡನು ಎಂಬುದು ತಪ್ಪದು ಎಂದಿತು. ಅದು ಹೇಗೆಂದರೆ ಬ್ರಹ್ಮದೇವನ ಮೊಮ್ಮಗನೂ ಶ್ರುತಿವಿಹಿತ ಕರ್ಮಾನುಷ್ಠಾನನಿಷ್ಠನಾದ ರಾವಣನು ಕಾಮಾತುರನಾಗಿ ರಾಮನನ್ನು ವಂಚಿಸಿ ಭೂಮಿಜೆಯನ್ನು ಒಯ್ದನು. ಅವಳ ವಿಯೋಗದಿಂದ ವಿಹ್ವಲಿಚಿತ್ತನಾಗಿ ರಾಘವನು ಸೇತುಭಂಧನ ಮಾಡಿ ಅಕ್ರಮಣಕ್ಕೆ ಬರುವುದನ್ನು ರಾವಣನು ಕೇಳಿ ತತ್ಕಾರ್ಯ ಪರ್ಯಾಲೋಚನೆಯಲ್ಲಿದ್ದಾಗ ಹೀಗೆ ನುಡಿದನು: