ಎನ್ನ ದುರಾಗ್ರಹದಿಂದ ಮ-
ದನ್ನಯಮೇನಾನುಮಕ್ಕುಮೆಂಬುದನಱೆದಂ-
ದೆನ್ನಂ ನೀ ಬಾರಿಸಿದುದು
ಸನ್ನಿದಮಾಯ್ತಿನ್ನಿದರ್ಕೆ ಪೇೞೇಗೆಯ್ವೆಂ  ೧೧೭

ಮುನ್ನಂ ನೀಂ ಬಾರಿಸೆಯುಮ
ದನ್ನಯಮಪ್ಪೆನ್ನ ಮಾಡಿದೞೆಗಜ್ಜಂ ಪೇ-
ೞೆನ್ನೆಂತು ಮಾಡಲಕ್ಕುಮಿ-
ದನ್ನಯದೊಳ್ ಕೂಡುವಂತನಾಗತವೇದೀ  ೧೧೮

ಕರಟಕನಿಂತೆಂದು ನೀನಾಗಿಯುಮನಾಗತಕಾರ‍್ಯಸಿದ್ಧಿ ಅತ್ಯದ್ಭುತಬುದ್ಧಿ ನಿನಗುಳ್ಳನಿತೆನಗಿಲ್ಲ ಅದರ್ಕೆ ತಕ್ಕುದಂ ನೀನೆ ಬಲ್ಲೆಯೆಂಬುದುಂ ದವನಕನಿಂತೆಂದಂ:

ಕರಟಕ ಕೇಳ್ ಕರಟೀಘಟ
ಕರಟಕನೆನೆ ನೆಗೞ್ದ ಪಂಚವದನಂಗಂ ಶಾ-
ಕ್ವರ ಪರಿಬೃಢನೆನಿಪಂಗಂ
ವಿರಕ್ತಿಯಪ್ಪಂತು ಮಾೞ್ಪುದಿಂತಿದು ಕಜ್ಜಂ  ೧೧೯

ಎಂದು ಮತ್ತಮಿಂತೆಂದಂ: ನೀನೆಂದಂತೀ ಕಜ್ಜಮೆನ್ನಿಂದಮೆ ಸಾಧ್ಯಮಕ್ಕುಮಾದೊಡಿದೆಲ್ಲಂ ವಾಕ್ಯ|| ‘ತ್ರಯೋನರ್ಥಾ ಸ್ವಯಂಕೃತಾಃ ಎಂದು ದೇವಶರ್ಮಂ ಪೇೞ್ದ  ಕಥೆಯೆಮಗಾದುದೆಂಬುದುಂ ಕರಟಕನದೆಂತೆನೆ ದವನಕಂ ಪೇೞ್ಗುಂ:

ಶ್ಲೋಕ|| ಪರಲೋಕ ಎಲ್ಲಿಯಾದರೂ ಸಿಕ್ಕಿತೋ ಇಲ್ಲವೋ ಎಂಬ ಸಂದೇಹವಿರುವುದಾದರೆ ಬುದ್ಧಿವಂತರಾದವರು ಪಾಪಕರ್ಮಗಳಲ್ಲಿ ನಿರತರಾಗಿರಬಾರದು, ಪರಲೋಕವು ಇಲ್ಲದಿದ್ದರೂ ಅಧರ್ಮವನ್ನು ತ್ಯಜಿಸುವುದರಿಂದ ಆಗುವ ಹಾನಿಯೇನು? ಏನು ಮಾಡಿದರೂ ಪರಲೋಕವೆ ಇಲ್ಲ ಎನ್ನುವ ನಾಸ್ತಿಕನು ಕೆಡುವನು: ಎಂದು ತತ್ತ್ವ ವಾಕ್ಯವಿರುವುದರಿಂದ ಪರವಿಲ್ಲ ಎಂಬುವನ ಅಪಸಿದ್ಧಾಂತವನ್ನೇ  ಪ್ರಮಾಣವೆಂದು ಪಾಪ ಪರನಾಗುವನು, ಪರವುಂಟಾದಲ್ಲಿ ನಿಷಲವಾಗಿ ಕೆಡುವುದು. ಧರ್ಮಪರನಾದವನು ಪರವಿದ್ದರೂ ಇಲ್ಲದಿದ್ದರೂ ಕೆಡನು, ಅಲ್ಲದೆ ವರರುಚಿ  ಭಟ್ಟನೆಂಬುವನು  ತೀರ್ಥಯಾತ್ರೆಗೆಂದು ದಂಡಕಾರಣ್ಯದಲ್ಲಿ ಬರುತ್ತರಲು ಅಲ್ಲೊಬ್ಬ ಬ್ರಹ್ಮ ರಾಕ್ಷಸನು ಅವನನ್ನು ಕಂಡು ತಿನ್ನಬೇಕೆಂದು ಬಗೆದು ಅವನ ಕೈಹಿಡಿದುಕೊಂಡು ವಾ|| ‘ಕಃ ಪಂಥಾ ಕಾ ವಾರ್ತಾ ಕೋಮೋದತೇಕ ಸ್ಸೇವ್ಯತೇ ವ|| ಎಂದು ಕೇಳಲು ಭಟ್ಟನು ಆತನ ಚೇಷ್ಟಾ ಭಾಷೆಗಳಿಂದ ಆತನ ಅಭಿಪ್ರಾಯವನ್ನು ತಿಳಿದು ಹೀಗೆ ಹೇಳಿದನು ಶ್ಲೋ || ಪ್ರಾಣಿಗಳನ್ನು ಕೊಲ್ಲಬಾರದು ಜನರ ವಸ್ತುಗಳನ್ನು ಕಳಬಾರದು, ಸತ್ಯವನ್ನೇ ನುಡಿಯಬೇಕು ಕಾಲೋಚಿತವಾಗಿ ತನ್ನ  ಶಕ್ತಿಯನ್ನರಿತು ದಾನಮಾಡಬೇಕು ಪರಸ್ರ್ತೀಯರನ್ನು ಕುರಿತು ಮಾತನಾಡಬಾರದು, ತೃಷ್ಣೆಯೆಂಬ ತೊರೆಯನ್ನು ಅಡ್ಡಕಟ್ಟಬೇಕು ಗುರುಗಳಲ್ಲಿ ವಿನೀತನಾಗಿರಬೇಕು ಸರ್ವಪ್ರಾಣಿಗಳಲ್ಲೂ ಅನುಕಂಪವನ್ನು ಇಡಬೇಕು. ಇವೆಲ್ಲವೂ ಸರ್ವ ಶಾಸ್ತ್ರಗಳಲ್ಲೂ ಸಾಮಾನ್ಯ. ಎಂದೆಂದೂ ಕೆಡದ ಈ ವಿಯೇ ಮಾರ್ಗ. ಶ್ಲೋ || ಬ್ರಹ್ಮಾಂಡವೆಂಬ ಕೊಪ್ಪರಿಗೆಯಲ್ಲಿ  ಸೂರ್ಯನೆಂಬ ಅಗ್ನಿಯಿಂದ ಹಗಲು ಇರುಳುಗಳೆಂಬ ಸೌದೆಗಳಿಂದ ಮಾಸ ಋತುಗಳೆಂಬ ಸಟ್ಟುಗದಿಂದ ಮಗುಚುತ್ತ ಜೀವಿಗಳನ್ನು ಯಮನು ಅಡುಗೆ ಮಾಡುತ್ತಿರುವನು ಎಂಬುದೇ ವಾರ್ತೆ, ಐದುದಿನಕ್ಕಾಗಲೀ, ಆರುದಿನಕ್ಕಾಗಲೀ ತನ್ನ ಮೆನೆಯಲ್ಲಿಯೇ ಮಧುರವಾದ ಅಡುಗೆಯನ್ನು ಮಾಡಿ ಸಾಲವಿಲ್ಲದೆ ಪರರ  ಆಳಾಗದೆ ಉಂಡು ಬದುಕುವುದೇ ಉಚಿತವೆನಿಸುವುದು. ಒಬ್ಬಳೇ ಹೆಂಡತಿ ಮೂವರು ಪುತ್ರರು ಎರಡು ನೇಗಿಲು ಬೇಸಾಯ, ಹತ್ತು ಹಸುಗಳ  ಕರಾವು, ಮಧ್ಯಪ್ರದೇಶದಲ್ಲಿ ಸುಕ್ಷೇತ್ರವಾದ ಸ್ಥಾನದಲ್ಲಿರುವುದೇ ಸೇವ್ಯವಾದುದು. ಹೀಗೆ ವರರುಚಿ ಭಟ್ಟ ಧರ್ಮವನ್ನು ಹೇಳುವಾಗ  ಪ್ರಾಣಿ ರಕ್ಷಣೆಯೇ ಮುಖ್ಯ ಧರ್ಮವೆಂದು ಹೇಳಿದನು. ಅಲ್ಲದೆ ವ್ಯಾಸಭಟ್ಟನು ಮಹಾಭಾರತಕಥಾ ಪ್ರಪಂಚವನ್ನು ಕಂಡು ಅದನ್ನು ಗ್ರಂಥವಾಗಿ  ರಚಿಸಬೇಕೆಂದು ಬಗೆದು ಮೊದಲು ವಾಲ್ಮೀಕಿ ಮುನಿ ರಾಮಾಯಣ ರಚಿಸುವಾಗ ಇನ್ನು ನಮ್ಮಂತಹ ಕವಿಗಳು ಆಗದಿರಲಿ ಎಂಬ ಆಜ್ಞೆ ಮಾಡಿದ ಕಾರಣ ವ್ಯಾಸಮುನಿ ವಾಲ್ಮೀಕಿಗಳಲ್ಲಿಗೆ ಹೋದನು. ಅಲ್ಲಿ ವಿನಯವಿನಮಿತೋತ್ತಮಾಂಗನಾಗಿ ಕೈಮುಗಿದು ಹೀಗೆಂದನು, ಪೂಜ್ಯರೇ ಧರ್ಮಾರ್ಥಕಾಮಮೋಕ್ಷಸಾಧನೋಪಾಯಸಾಧಕವಾದ ಒಂದು ಕಥೆಯನ್ನು ಕಂಡೆ ಅದನ್ನು  ವಾಕ್ಯವಾಗಿ ಬರೆಯಬೇಕೆಂದಿದ್ದೇನೆ ಅನುಗ್ರಹಿಸಬೇಕು ಅದಕ್ಕೆ  ವಾಲ್ಮೀಕಿ ಮುನಿಗಳು ಹೀಗೆ ಉತ್ತರವಿತ್ತರು: ಹಾಗಾದರೆ ಕೇವಲ ಧರ್ಮವು ಯಾವುದು ಎಂಬುದನ್ನು ಹೇಳಿರಿ ಎನ್ನಲು ವ್ಯಾಸದೇವನು ಅವರಿಗೆ ಹೀಗೆ ಹೇಳಿದನು: ಶ್ಲೋ || ಸರ್ವಧರ್ಮಗಳ  ತಿರುಳನ್ನು ಕೇಳಬೇಕು ಕೇಳಿದಂತೆಯೇ ಲೇಸಾಗಿ ಅವಧರಿಸಬೇಕು. ತನಗೆ ಪ್ರತಿಕೂಲವಾದುದನ್ನು  ಪರರಿಗೆ ಬಗೆಯಬಾರದು. ೧೧೪. ಹೀಗೆ ಸಕಲಧರ್ಮದ ಸಾರವನ್ನು ಸಂಕ್ಷೇಪವಾಗಿ ವ್ಯಾಸಮುನಿ ತಿಳಿಸಿದನು. ಅದರಿಂದ ತನಗೆ ಎಂದೂ ಕೇಡಿಲ್ಲದುದನ್ನೇ ಬಯಸುವ ಮನುಷ್ಯನು ಯಾವ ಜೀವವನ್ನು ತನ್ನನ್ನೇ ಬಗೆಯುವಂತೆ ಎಣಿಸಬೇಕು ಇದೇ ಅತಿಶಯವಾದ ಧರ್ಮ. ಇದು ಮುನಿ ವೇದವ್ಯಾಸನ ಮತ. ವ || ಅದರಿಂದ ಪ್ರಾಣಿವಧೆಯೇ ನೀಚವಾದುದು. ಸಕಲ ಪ್ರಾಣಿಹಿತವೇ  ಧರ್ಮವೆಂದು ಅನೇಕ ಶ್ರುತದೃಷ್ಟಾನುಮಾನಗಳಿಂದ ಸಂಜೀವಕನು ತಿಳಿಸಲು, ಪಿಂಗಳಕನು ಮೃದು ಹೃದಯನಾಗಿ  ಹೀಗೆಂದನು; ೧೧೫. ಎಲೈ ಪರಮಮಿತ್ರ ಪುಂಗವ!  ವಿಲಸನ್ಮತಿಯಾದ ನೀನು ತಿಳಿಸಿದ  ಧರ್ಮಶ್ರವಣ ನನ್ನ ಮನಸ್ಸಿನಲ್ಲಿ ನೆಲಸಿತು, ಆದರೆ ಒಂದು ಚಿಂತೆ ನನ್ನನ್ನು ಕಾಡುತ್ತಿದೆ. ವ|| ‘ಸ್ವಯಂ ಚತುಷ್ಟಾದಾದಿ ಸೇವ್ಯಃ ಎಂಬ ಅಭಿಧಾನ ಮಾತ್ರವಲ್ಲದೆ ನೀನು ತಿಳಿಸಿದಂತೆ ಆಚರಿಸಿ ಹುಲ್ಲನ್ನು ಮೇಯಲಾರೆ: ಪಿಶಿತಾಹಾರವಿಲ್ಲದೆ ಶರೀರ ಬದುಕದು ಅದಕ್ಕೇನು ಮಾಡಲಿ?  ಸಂಜೀವಕನು ಹೇಳಿದನು ಆದರೆ ನಿಮಗೆ ಹರ್ಷವಾದಾಗ ಅನೇಕ ಮೃಗಗಣವನ್ನು ಕೊಲ್ಲದೆ ಕ್ಷುಧಾನಿವಾರಣಾರ್ಥವಾಗಿ ನಿಮಗೆಷ್ಟು ಬೇಕೋ ಅಷ್ಟನ್ನು  ಮಾತ್ರ ಸ್ವೀಕರಿಸಿ ನಿಶ್ಚಿಂತರಾಗಿರಿ. ಹಾಗೆಯೇ ಆಗಲೆಂದು ಪಿಂಗಳಕನು ಕ್ರೂರಕರ್ಮವನ್ನು ಪರಿತ್ಯಜಿಸಿ ಶುದ್ಧಚಿತ್ತನಾಗಿ ಸ್ವಂತ ಉದರಪುರಾಣ  ಮಾತ್ರಕ್ಕೆ ಬೇಕಾದಷ್ಟನ್ನು ಸ್ವೀಕರಿಸಿ  ನಿಶ್ಚಿಂತನಾಗಿದ್ದನು, ಕರಟಕ ದವನಕ ಪ್ರಮುಖನಿಖಿಲಕ್ರೂರಮೃಗಗಳೆಲ್ಲವೂ ಹಲವು ದಿವಸಗಳವರೆಗೆ ಆಹಾರವಿಲ್ಲದೆ ಮಮ್ಮಲ ಮರುಗಿ ಸಾಯುವ ಅವಸ್ಥೆಗೆ ಬರಲು ಸಹಿಸಲಾರದೆ ಪಿಂಗಳಕನಲ್ಲಿಗೆ ಬಂದು ನಮಸ್ಕರಿಸಿದವು. ಅವುಗಳಲ್ಲಿ ಜಾಮಬವಂತನೆಂಬ ಒಂದು  ಪುರಾಣ ಜಂಬುಕನು ಹೀಗೆಂದಿತು, ೧೧೬. ನಿಮ್ಮ ಅಜ್ಞಾನು ವರ್ತಿಗಳಾದ ನಮ್ಮನ್ನು ತೊರೆದು ನಿಮ್ಮ ಒಡಲನ್ನು ಮಾತ್ರ ಹೊರೆದುಕೊಳ್ಳುವುದು ಗುಣವೆನಿಸುವುದೇ? ಅಲ್ಲದೆ ಎಲ್ಲಿಂದಲೋ ಬಂದ ಧೂರ್ತನಾದ ಎತ್ತಿನ  ಬುದ್ಧಿಯನ್ನು ನಂಬಿ ಅನ್ವಯಾಗತರೂ ಹಿತರೂ ಆದವರ ಪರಿಗ್ರಹಕ್ಕೆ ವಿರಕ್ತರಾಗಿರುವುದು ನ್ಯಾಯವೇ! ಶ್ಲೋ || ‘ರಕ್ತಾದ್ವೃತ್ತಿಂ ಸಮಾಪದ್ಯ ಹ್ಯರಕ್ತಂ ತು ಪರಿತ್ಯಜೇತ್ ವ || ಎಂಬ ಉಕ್ತಿಯುಂಟು. ನೀವಿಂತು ವಿರಕ್ತರಾದುದರಿಂದ ಬೇರೊಬ್ಬ ಅರಸನನ್ನು ಅರಸಿಕೊಂಡು ಹೋಗಬೇಕಾಗುತ್ತದೆ.ಸ್ಥಿರವಾಗಿರುವುದನ್ನು ಬಿಟ್ಟು ಅಶಾಶ್ವತವಾದುದನ್ನು ಸ್ವೀಕರಿಸುವವನು ಸ್ಥಿರವಾದುದನ್ನು ಕಳೆದುಕೊಳ್ಳುವನು. ಅಸ್ಥಿರವಾದುದು ಎಂತೂ ನಾಶವಾಗತಕ್ಕುದೇ, ಮುಗಿಲ ನೀರನ್ನು ನಂಬಿ ಹೊಂಡದ ನೀರನ್ನು ತುಳುಕಿ ಬಿಟ್ಟ ಕೋಡಗದಂತೆ ನೀನಾಗುವೆ. ಅದರಿಂದ ನಿನ್ನ ಸಂಜೀವಕನ ಬುದ್ಧಿಯನ್ನು ನನ್ನ ಬುದ್ಧಿವಾದವನ್ನು ವಿಚಾರಿಸಿ ನೋಡು ಹೀಗೆ ಹಲವು ರೀತಿಗಳಿಂದ ಬುದ್ಧಿವಾದವನ್ನು ಹೇಳಿದ ಪುರಾಣ ಜಂಬುಕನ ಮಾತನ್ನು ಕೇಳಿ ಪಿಂಗಳಕನು ಈ ಪಾಪಿಗೆ ಉತ್ತರವನ್ನು ಕೊಟ್ಟರೆ ಪಾಪೊದೇಶವನ್ನು ಮಾಡಿಯಾನು. ಅದರಿಂದ ಮೌನಂ ಸರ್ವಾರ್ಥ ಸಾಧನಂ ಎಂದು ಮಾತನಾಡದೆ ಇದ್ದ ಪಿಂಗಳಕನನ್ನು ಕಂಡು ಮೃಗಗಳೆಲ್ಲವೂ ತಮ್ಮ ತಮ್ಮ ಇಚ್ಛೆ ಬಂದ ಕಡೆಗೆ ಚೆದುರಿ ಹೋದವು ಆಗ ದವನಕನು ಕರಟಕನ ಮುಖವನ್ನು ನೋಡಿ ಹೀಗೆಂದಿತು. ೧೧೭. ನನ್ನ ದುರಾಗ್ರಹದಿಂದ ಏನಾದರೂ ಅನ್ಯಾಯವಾದೀತು ಎಂದು ನೀನು ತಿಳಿದು ಆಗ ನನ್ನನ್ನು ನಿವಾರಿಸಿದುದು. ಈಗ ಸನ್ನಿಹಿತವಾಯಿತು. ಇನ್ನು ಇದಕ್ಕೆ ಏನು ಮಾಡಲಿ ಎಂಬುದನ್ನು ತಿಳಿಸು. ೧೧೮. ಮೊದಲು ನೀನು ಬೇಡಬೇಡವೆಂದರೂ ಅನ್ಯಾಯವಾಗುವಂತೆ  ಮಾಡಿದ ನನ್ನ ಹೀನಕಾರ್ಯವನ್ನು ಅನ್ಯಾಯದಲ್ಲಿ ಕೂಡುವಂತೆ ಈಗ ಏನು ಮಾಡೋಣ ಅನಾಗತವೇದೀ   ಹೇಳು ಅದಕ್ಕೆ ಕರಟಕನು ಹೀಗೆಂದನು: ವ|| ನಿನಗಿರುವಷ್ಟು ಅನಾಗತಕಾರ್ಯಸಿದ್ಧಿಯೂ ಅತ್ಯದ್ಭುತ ಬುದ್ಧಿಯೂ ನನಗಿಲ್ಲ ! ಅದಕ್ಕೆ ತಕ್ಕುದನ್ನು ನೀನೇ ಬಲ್ಲವನು ಅದಕ್ಕೆ ದವನಕನು ಹೀಗೆಂದನು: ೧೧೯. ಕರಟಕ ಕೇಳು ಕರಟೀಘಟಕರಟಕನೆಂಬ ಬಿರುದನ್ನು ಹೊತ್ತ ಈ ಪಂಚಾನನನಿಗೂ ಆ ಶಾಕ್ವರಪರಿವೃಢನೆನಿಸಿದ ಸಂಜೀವಕನಿಗೂ ವಿರಸವಾಗುವಂತೆ ಮಾಡುವದೇ ಉಚಿತ  ಉಪಾಯ ವ|| ನೀನು ಹೇಳಿದಂತೆ ಈ ಕಾರ್ಯವು ನಿನ್ನಿಂದಲೇ ಸಾಧ್ಯವಾಗಬೇಕು. ಅದರೆ ಇದೆಲ್ಲ ವಾ|| ‘ತ್ರಯೋನಾರ್ಥಃ ಸ್ವಯಂ ಕೃತಾಃ ಎಂದು ದೇವಶರ್ಮನು ಹೇಳಿದ ಕಥೆಯೇ ನಮಗಾಯಿತು ಎಂದನು. ಆಗ ಕರಟಕನು ಆ ಕಥೆಯೇನೆಂದು ಕೇಳಲು ದವನಕನು ಹೇಳಿದನು: *ಅಭೀಳ ಎಂಬ ನಾಡುಂಟು. ಅಲ್ಲಿ