ಶ್ಲೋ|| ವರ್ಧಮಾನೋ ಮಹಾನ್‌ಸ್ನೇಹಃ ಪಂಚಾಸ್ಯವೃಷಯೋರ್ವನೇ

ಪಿಶುನೇನಾತಿಲುಬ್ಧೇನ ಜಂಬುಕೇನ ವಿನಾಶಿತಃ  ||೪||

ಟೀ|| ಹಿರಿದಪ್ಪ ಸ್ನೇಹಂ ಸಿಂಹಕ್ಕಂ ವೃಷಭಕ್ಕಂ ಕಾಂತಾರದೊಳಾಗಿರಲತ್ಯಂತ ಪಿಶುನನುಮತಿಲುಬ್ದನುಮಪ್ಪ ನರಿಯಿಂದಂ ಕಿಡಿ ಸಲ್ಪಟ್ಟುದು.

ಆ ಕಥಾಪ್ರಪಂಚಮೆಂತೆಂದೊಂಡೆ,

ನಿತಿಶ್ರಯ ವಸ್ತುಪ್ರರ್ಣಂ
ಧರಾಂಗವನಾವದನ ಮಂಡನ ಶ್ರೀಕಾಂತಂ
ಮರುದಾಂದೋಳಿತ ನಂದನ
ಪರಿವೃತಮುಜ್ಜಯಿನಿಯೆಂಬ ಪೊೞಲುಂಟದಱೊಳ್೭೦(ಅ)

ಪರಮಾನಂದದೊಳಿರ್ಪಂ
ನಿರುಪಮಾ ನಿಜಗುಣರೂಪ ವಿಭವ ಜಿತ ಕಂದರ್ಪಂ
ಪರಿಹೃತ ಸಪ್ತವ್ಯಸನಂ
ನಿರಂತರೋಪಾಸ್ಯಮಾನಶಾಸ್ತ್ರವ್ಯಸನಂ  ೭೧

ಮಾಲಿನಿ || ಅನುಪಮ ನಯಯುಕ್ತಂ  ಧರ್ಮಮಾರ್ಗಾನುರಕ್ತಂ
ಮನುನಿಭ ಸುಚರಿತ್ರಂ ಪೋಷಿತಾಶೇಷಮಿತ್ರಂ
ವಿನಯಗುಣನಿಧಾನಂ ವೈಶ್ಯವಂಶಪ್ರದಾನಂ
ಧನಧನದಸಮಾನಂ ವರ್ಧಮಾನಭಿದಾನಂ  ೭೨

ಶ್ಲೋ|| ಕಾಡಿನಲ್ಲಿ ಸಿಂಹಕ್ಕೂ ವೃಷಭಕ್ಕೂ ಹಿರಿದಾದ ಸ್ನೇಹ ಸಂಭವಿಸಿರಲು ಅತ್ಯಂತ  ಚಾಡಿಕೋರನೂ ಅತಿಲುಬ್ಧನೂ ಅದ ನರಿಯಿಂದ ಅದು ಕೆಟ್ಟು ಹೋಯಿತು. ಆ ಕಥಾ ಪ್ರಪಂಚ ಹೀಗಿದೆ: ೭೦.(ಅ) ಶ್ರೇಷ್ಠವಾದ  ವಸ್ತುಗಳಿಂದ ಸಮೃದ್ಧವು ಭೂದೇವಿಯ ಮುಖಾಭರಣದ ಕಾಂತಿಯಿಂದ ಕೂಡಿದುದೂ ಗಾಳಿಯಿಂದ ಆಂದೋಲಿತವಾದ ನಂದನವನಗಳಿಂದ ಅವರಿಸಿದುದೂ ಅದ ಉಜ್ಜಯಿನಿ ಎಂಬ ಪಟ್ಟಣ ಉಂಟು. ಅದರಲ್ಲಿ ಅಸಾಧಾರಣ ಗುಣರೂಪ ವೈಭವಗಳಿಂದ  ಕೂಡಿದವನೂ, ಮನ್ಮಥನನ್ನು ಗೆದ್ದವನೂ ಸಪ್ತವ್ಯಸಗಳನ್ನು ಪರಿಹರಿಸಿಕೊಂಡವನೂ, ಯಾವಾಗಲೂ ಶಾಸ್ತ್ರಗಳನ್ನು ಅಭ್ಯಾಸ  ಮಾಡುವ ವ್ಯಸನವುಳ್ಳವನೂ ಅಸಾಮಾನ್ಯ ನೀತಿಯಿಂದ ಕೂಡಿದವನೂ ಧರ್ಮಮಾರ್ಗದಲ್ಲಿ ಆಸಕ್ತನೂ ಮನುವಿಗೆ ಸದೃಶವಾದ ಒಳ್ಳೆಯ  ಚರಿತೆವುಳ್ಳವನೂ ಸಮಸ್ತಮಿತ್ರರನೂ ಪೋಷಿಸುವವನೂ ವಿನಯಗುಣಕ್ಕೆ ಅಕರನೂ, ವೈಶ್ಯವಂಶಪ್ರಧಾನನೂ, ಐಶ್ವರ್ಯದಲ್ಲಿ ಕುಬೇರನಿಗೆ ಸಮಾನನೂ ಅದ ವರ್ಧಮಾನನೆಂಬ ಹೆಸರಿನವನು ಪರಮಾನಂದ

ವ|| ಅಂತಾತನತಿ ಪ್ರಬುದ್ಧಂ ಧನಕನಕಸಮೃದ್ಧಿಯೊಳ್ ನೆಱೆದಿಷ್ಟ ಕಾಮಭೋಗಂಗಳನನು ಭವಿಸುತುಂ ನ್ಯಾಯೋಪಾರ್ಜಿತಪಿತ್ತನುಂ  ಧರ್ಮಾಪಾದಿತಂಚಿತ್ತನುಮಾಗಿ ಕೆಲವುಕಾಲಂ ಸುಖಸಂಕತಥಾ ವಿನೋದದಿನಿರ್ದೊಂದು ದಿವಸಂ ಸುಕವಿಯಂತಪೂರ್ವಾರ್ಥಲಬ್ಧಿಗೆ ಚಿಂತೆಗೆಯ್ದು ತನ್ನೊಳಿಂತೆಂದು ಬಗೆದಂ :

ಅಕ್ಕರ || ಪಡೆವೆನೆಂಬಂ ಪೊನ್ನನೆ ಪಡೆವುದು ಸರ್ವಪ್ರಕಾರದಿಂದಂ ಪಡೆಯೆ  ಪೊನ್ನಂ ಪಡೆಯಲಾದುವಂತೊಂದು ಪಾಯಂ ಪಳೆವು ಮಾತೇಂ ಚದುರಮಾರ್ತಿವ ಪೆಂಪುಂ ನುಡಿಯ ಬಲ್ಮೆಯುಂ ಕಡುಗಲಿತನಮುಂ ಸೌಭಾಗ್ಯಮುಮೊಂದಿದೊಳ್ಳುಮಾದುನ್ನತಿಯು ಮೊಡವೆಯಾದಂದು ತಮ್ಮಿಂ ತಾವಕ್ಕು ಕಿಡುವುವು ಧನಮಿಲ್ಲದಂದಿವೆಲ್ಲಂ ೭೩

ವ|| ಅದಱ*ನರ್ಥೋಪಾಜನಮೇ ಸಕಲಗುಣೊಪಾರ್ಜನಕ್ಕೆ ಮುಖ್ಯಮಾಗಿರ್ಕುಂ ಉಪಾರ್ಜಿಸಿದ ಧನಮುಪಾಯರಹಿತಮಾಗಿ ಬೀಯಪ್ಪಮಾಂದು ಕೆಲವು ದಿವಸದಿಂ ಕ್ರಮ ಕ್ರಮದೀಂ ನಿಚ್ಚಮೆಚ್ಚುವಂಜನದಂತೆ ತವಿಲನೆಯ್ದುಗುಂ. ಮನುಷ್ಯಂ ಪುರುಷಾರ್ಥ ಸಿದ್ದಿಯಂ ಮಾಡದಂದು ಅಲಬ್ದಲಾಭಂ ಲಬ್ದ ಪರಿರಕ್ಷಣಂ ರಕ್ಷಿತವರ್ಧನಂ ರ್ವತ ತೀರ್ಥಪ್ರತಿಪಾದನಮೆಂಬ ಚತುರ್ವಿಧ ಪುರುಷಾರ್ಥವೃತ್ತಿಯಾ (ಗ)ದೆಂದು ಪರದೇಶಂಬೋಗಲ್ ನಿಶ್ಚೈಸಿ ಮಧುರಾಪುರಕ್ಕಪೂರ್ವಮಪ್ಪ ಸಾರಭಾಂಡಗಳು ತೀವಿಕೊಂಡು, ಯಾತ್ರೋದ್ಯುಕ್ತನಾಗಿ,

ಹೀಗೆ ಅವನು ಅತ್ಯಂತ ಪ್ರಬುದ್ಧನಾಗಿಯೂ, ಧನಕನಕಸಮೃದ್ಧಿಯಿಂದ ಕೂಡಿ ಸಮಸ್ತ  ಸುಖಗಳನ್ನು ಅನುಭವಿಸುತ್ತಲೂ ಧರ್ಮಾಸಕ್ತಚಿತ್ತನಾಗಿಯೂ ಕೆಲವು ಸಮಯ ಸುಖ ಸಂಕಥಾವಿನೋದದಿಂದ ಇದ್ದನು. ಒಂದು ದಿವಸ ಸುಕವಿಯಂತೆ ಅಪೂರ್ವ ಧನ ಸಂಪಾದನೆಗಾಗಿ ಚಿಂತಿಸಿ ತನ್ನಲ್ಲಿ ಹೀಗೆಂದು  ಯೋಚಿಸಿದೆನು; ಪಡೆಯುವೆನೆಂಬವನು ಹೊನ್ನನ್ನೇ ಪಡೆಯಬೇಕು. ಸರ್ವಪ್ರಕಾರಗಳಿಂದಲೂ ಹೊನ್ನನ್ನು ಪಡೆಯಲಿಕ್ಕಾಗಿ ಅಷ್ಟೊಂದು ಉಪಾಯಗಳುಂಟಾದವು. ಹೆಚ್ಚು ಮಾತಿನಿಂದೇನು? ಚಾತುರ್ಯವೂ, ಸಾಮರ್ಥ್ಯದಿಂದ ಕೊಡುವ ಹಿರಿಮೆಯೂ ನುಡಿಯ ಬಲ್ಮೆಯೂ ಕಡುಗಲಿತನವೂ ಸೌಭಾಗ್ಯವೂ ಒಳ್ಳೆಯತನವೂ ಉನ್ನತಿಯೂ ಕೂಡಿದ್ದರೆ ಇವೆಲ್ಲವೂ ಸಂಭವಿಸುವುವು; ಧನವೊಂದಿಲ್ಲದಿದ್ದಲ್ಲಿ ಇವೆಲ್ಲವೂ ನಾಶವಾಗುವವು ಅದರಿಂದ ಧನಸಂಪಾದನೆಯೇ ಸಕಲ ಗುಣ ಸಂಪಾದನೆಗೂ  ಮುಖ್ಯವಾಗಿರುವುದು. ಸಂಪಾ ದಿಸಿದ ಹಣವು ಅಪಾಯವಿಲ್ಲದಂತೆ ವ್ಯಯವಾದಲ್ಲಿ ಕೆಲವು ದಿವಸಗಳಲ್ಲಿ ಕ್ರಮಕ್ರಮವಾಗಿ ನಿತ್ಯವೂ ಹಚ್ಚಿಕೊಳ್ಳುವ  ಕಾಡಿಗೆಯಂತೆ  ಖರ್ಚಾಗುವುದು. ಮನುಷ್ಯನು ಪುರುಷಾರ್ಥ ಸಿದ್ದಿಯನ್ನು ಮಾಡದಿದ್ದಲ್ಲಿ, ಪಡೆಯುವುದನ್ನು ಪಡೆಯುವುದು ಪಡೆದುದುನ್ನು ರಕ್ಷಿಸಿಕೊಳ್ಳುವುದೂ, ರಕ್ಷಿಸಿದುದನ್ನು ವೃದ್ದಿಪಡಿಸುವುದೂ ವೃದ್ಧಿಪಡಿಸಿದುದನ್ನು ಸರಿಯಾಗಿ ವಿನಿಯೋಗಿಸುವದೂ ಎಂಬ ಚತುರ್ವಿಧ ಪುರುಷಾರ್ಥವೃತ್ತಿಯಾಗದು ಎಂದು ಪರದೇಶಕ್ಕೆ ಹೋಗಲು ನಿಶ್ಚಯಿಸಿ ಮಧುರಾ ಪುರಕ್ಕೆ  ಅಪೂರ್ವವಾದ ವಸ್ತು ಸಮೂಹಗಳನ್ನು ತುಂಬಿಕೊಂಡು ಯಾತ್ರೋದ್ಯುಕ್ತನಾದನು.

ಅ ವಿವಿಧ ಪ್ರಭೂತ ಭುವನಸ್ತುತ ಸಾರಸಮಸ್ತು ವಸ್ತುವಂ
ತೀವಿದ ಬಂಡಿಯೊಳ್ ವಿಪುಳ ಸತ್ತ್ವ ಜನವಂಗಳಿನೊಳ್ಪುವೆತ್ತ ಸಂ-
ಜೀವಕ ನಂದಕಾಖ್ಯ ವೃಷಭಂಗಳನಿಂಬೆನೆ ಪೂಡಿ ಕೂರ್ತು ಮಿ-

ತ್ರಾವಳಿ ತನ್ನೊಳೊಂದಿ ಬರೆ ತತ್ಪುರದಿಂ ತಳರ್ದಂ ವಣಿಗ್ವರಂ  ೭೪

ವ|| ಅಂತಾ ವಣಿಗ್ವರಂ ತನ್ನ ಮನಕ್ಕೆ ಶಕುನಮುಂಬಿಡೆ ಬಂಧುಜನಂಗಳ್ರೆಡಂಬಡೆ ಶುಭಮುಹೂರ್ತದೊಳ್ ಪೊಳಲಂ ಪೊಱಮಟ್ಟು ಅನೇಕ ಜನಪದನದೀಪ್ರದೇಶಂಗಳಂ ಕಳಿದು ನಾನಾದ್ರುಮಗುಲ್ಮಲತಾಪ್ರತಾನಸಂಛನ್ನಮುಂ  ಬಹುಪ್ರಕಾರ  ಕ್ರೂರಮೃಗಗಣವಿಸಂಕಟಮುಂ, ಅಭ್ರಂಕಷೊತ್ತುಂಗಶೃಂಗಸಂಗತಗಿರಿವರನಿತಂಬಸಂವಾಸಶಿಬಿರ

ಸಂಕೀರ್ಣಮುಮಪ್ಪುದೊಂದು ಮಹಾಟವಿಯೆನೆಯ್ದಿವರ್ಪುದುಂ ಅದಱೊಳತಿ ಕರ್ಕಶ ಶರ್ಕರಾಪ್ರಚುರಮುಂ ಅತಿಸ್ಥೂಲ ನಿಶಿತ ಪಾಷಾಣ ವಿಷಮಿತಮುಮತಿದುಸ್ತರ ಸ್ಥಾಣುನಿಚಯೊಪಸ್ಥಿತ ಮುಮಾಗಿರ್ದುದೊಂದು ದುರ್ಗಮ ಮಾರ್ಗದೊಳತ್ಯಂತ ಶಕಟಭಾರಾಕ್ರಾಂತಿಯಿಂದೂರುಭಂಗೆಂಗೆಯ್ದು ನಿದಾಘಸಮಯ ಮಧ್ಯಂದಿನಪ್ರಾಪ್ತ ಸಪ್ತಸಪ್ತಿ ಪ್ರತಾಪ ವಿಹ್ವಲೀಭೂತ  ಜೀವಕಂ ಸಂಜೀವಕಂ ನಿಲ್ವುದುಂ ಅದಂ ಕಂಡು ವರ್ಧಮಾನಂ ಸ್ವಾರ್ಥ ಸಮೇತಂ ದಯಾಪರೀತಚೇತಂ ಮೂರುದಿವಸಮಲ್ಲಿ ಉಪ್ಪಯಣಮಗೆಯ್ದು ಎಂತುಂ ಸಂಜೀವಕಂ ಚೇತರಿಸುವುದಂ ಕಾಣದೆ ನಾಲ್ವರ್ ಮನುಷ್ಯರನರ್ದಕ್ಕೆ ಕಾಪುವೇಲ್ದು ಬಹುವಿಧಾಪಾಯಪ್ರಾಯಮಪ್ಪ ಮಹಾರಣ್ಯದಿಂ ತೊಲಗಿ ಪಚಿiಣಂಬೋದಂ. ಇತ್ತಲಾ ಕಾಪಿನವರಗ ಅಲ್ಲಿಯ ವನಚರವ್ಯಾಘ್ರ ಮೃಗಗಣಜನಿತಭೀತಿಯಂ ನಿಲಲಣ್ಮದೆ ಸ್ವಾರ್ಥಪತಿಯನೆಯ್ದೆ ಬಂದು ಸಂಜೀವಕಂ ಸತ್ತುದೆಂದು ಪುಸಿದು ಪೇಳ್ವದುಂ ಸೆಟ್ಟಿ ಮನಃಕ್ಷತಂಬಟ್ಟು ವಿಷಾದ ವಿದುರಂ ಮಧುರೆಗಭಿಮುಖನಾಗಿ ಪಚಿiಣಂಬೋದಂ ಅನ್ನೆಗಮಿತ್ತಲ್.

೭೪. ಅ ವಿವಿಧ ದೊಡ್ಡ ದೊಡ್ಡ  ಪ್ರಪಂಚ ಪ್ರಖ್ಯಾತವಾದ ಶ್ರೇಷ್ಠವಾದ ಸಮಸ್ತ ವಸ್ತುಗಳನ್ನು ತುಂಬಿದ ಬಂಡಿಗೆ ಬಹಳ ಶಕ್ತಿ ವೇಗಗಳಿಂದ ಒಳ್ಳೆಯದಾಗಿರುವ ಸಂಜೀವಕ ನಂದಕ ಎಂಬ ಹೆಸರಿನ ಎತ್ತಗಳನ್ನು ಮನೋಹರವಾಗುವಂತೆ ಹೂಡಿ ಪ್ರೀತಿಯಿಂದ ಮಿತ್ರರ ಗುಂಪು ತನ್ನೊಡನೆ ಸೇರಿ ಬರಲು ಆ ಶ್ರೇಷ್ಠವ್ಯಾಪಾರಿ  ಅ ಪಟ್ಟಣದಿಂದ ಹೊರಟನು, ವ|| ಹಾಗೆ ಆ ಶ್ರೇಷ್ಠ  ವ್ಯಾಪಾರಿ ತನ್ನ ಮನಸ್ಸಿಗೆ ಶಕುನ ಶುಭವೆಂದು ಕಾಣಲು ಬಂದುಜನಗಳು ಒಡಂಬಡಿಸಲು ಶುಭಮೂಹೂರ್ತದಲ್ಲಿ ನಗರದಿಂದ ಹೊರಟು ಅನೇಕ ಗ್ರಾಮ ನದನದೀ ಪ್ರದೇಶಗಳನ್ನು  ಕಳೆದನು, ಬಗೆಬಗೆಯ ಮರ ಪೊದೆ ಬಳ್ಳಿಗಳ ಗುಂಪಿನಿಂದ ಆವೃತವಾದುದು ಬಹಳ ಬಗೆಯ ಕ್ರೂರಮೃಗಸಮೂಹದಿಂದ ಅಪಾಯಕಾರಿಯಾದುದು ಮಗಿಲುಮುಟ್ಟುವ ಎತ್ತರವಾದ ಶ್ರಂಗಗಳಿಂದ ಕೂಡಿದ ದೊಡ್ಡ ದೊಡ್ಡ ಬೆಟ್ಟಗಳ ತಪ್ಪಲುಗಳಲ್ಲಿ  ವಾಸಮಾಡುವ ಶಬರರ ಶಿಬಿರ ಸಮೂಹಗಳಿಂದಲೂ ಕೂಡಿದ ಒಂದು ಮಹಾ ಅರಣ್ಯವನ್ನು ಸೇರಿದನು., ಅದರಲ್ಲಿ ಅತ್ಯಂತ ಮೊನಚಾದ ಮುಳ್ಳುಗಳಿಂದ ತುಂಬಿ ದೊಡ್ಡ ದೊಡ್ಡ ಹರಿತವಾದ ಬಂಡೆಗಳಿಂದ ಕಷ್ಟವಾದುದು ದಾಟಲು ಕಷ್ಟವಾದ ಮುಂಡುಮರಗಳಿಂದ ಕೂಡಿದುದು ಅದ ಒಂದು ಮಾರ್ಗದಲ್ಲಿ ಗಾಡಿಯ ಮಹಾಬಾರದಿಂದ ತೊಡೆಮುರಿದು ಬೇಸಿಗೆಯ ಸಮಯದ ಮಧ್ಯಾಹ್ನದ ಸೂರ್ಯನ ತಾಪಕ್ಕೆ ಬಸವಳಿದು ಸಂಜೀವಕನು ನಿಂತು ಬಿಟ್ಟನು. ಅದನ್ನು ಕಂಡು ವರ್ಧಮಾನನು ತನ್ನ ವಸ್ತುಗಳೊಡನೆ ದಯೆಯಿಂದ ಕೂಡಿದ ಚೇತನವುಳ್ಳವನಾಗಿ ಮೂರು ದಿನಗಳವರೆಗೆ ಅಲ್ಲಿ ನಿಂತೂ ಹೇಗೂ ಸಂಜೀವಕನೂ ಚೇತರಿಸುವದನ್ನೂ ಕಾಣದೆ ನಾಲ್ವರೂ ಆಳುಗಳನ್ನೂ  ಅದಕ್ಕೆ ರಕ್ಷಣೆಯಾಗಿಟ್ಟು ಬಹು ವಿವಿಧ ಅಪಾಯಗಳಿಂದ ಕೂಡಿದ ಆ ಮಹಾರಣ್ಯದಿಂದ ಪ್ರಯಾಣ ಮಾಡಿದನು. ಇತ್ತ ಆ ಕಾಪಿನ  ಅಳುಗಳು ಅಲ್ಲಿಯ ಮಂಗ ವ್ಯಾಘ್ರ ಮೃಗಸಮೂಹದಿಂದ ಭಯಭೀತರಾಗಿ ಅಲ್ಲಿ ನಿಲ್ಲಲಾರದೆ ತಮ್ಮ ಒಡೆಯನಲ್ಲಿಗೆ ಬಂದು ಸಂಜೀವಕ ಸತ್ತಿತು ಎಂದು ಸುಳ್ಳು ಹೇಳಿದರು. ಸೆಟ್ಟಿಯು ಮನಸ್ಸಿನಲ್ಲಿ ನಂದು ವಿಷಾದದಿಂದ ವಿಧುರನಾಗಿ ಮಧುರೆಯ ಕಡೆಗೆ ಪ್ರಯಾಣ ಮಾಡಿದನು.

ವಿಮಲಾಬ್ಜಾಕರಶೀಕರೋತ್ಕಯುತಂ ವಾನೇಯುಗಂಧದ್ವಿಪೇಂ
ದ್ರಮದಾಮೋದಿ ಕಿರಾತಯೋಷಿದಳಕಶ್ರೇಣೀನಟಂ ಮಾರುತಂ
ಶ್ರಮಮಂ ಪಿಗಿಂಸೆ ಮಂದಮಂದಗತಿಯಿಂ ಸಂಜೀವಕಂ ಸಾರ್ದುದಾ
ಯಮುನಾತೀರಮನಜ್ಜ್ವ ಲಜ್ಜಲಕಣೌಘಾರವಿಸ್ತಾರಮಂ  ೭೫

ಅಂತುಮೆತ್ತಾನುಮಾಪ್ಯಾಯಿತಶರೀರನಾಗಿ ಕಾಳೀಂದೀನದೀಕಚ್ಚದೊಳಾತ್ಮೇಯಿಂ ನಲಿನಲಿದು ರುಚಿರಮರಕತ ಶ್ಯಾಮದೂರ್ವಾಂಕುರ ಗ್ರಾಸದೊಳು ಅತಿಸ್ವಚ್ಚ ಸ್ವಾದು ಸಲಿಲ ಪಾನದೊಳಂ ಮೆಲ್ಲಮೆಲ್ಲನೆ ಮೆಲ್ಕಾಡಿ ಪಥಪರಿಶ್ರಮಮನಾಳಿಸಿಕೊಂಡು ಕೆಲವು ದಿವಸಕ್ಕೆ ಬಾಲೇಂದುಶೇಖರ ಶಕ್ವರಾಕಾರಮುಂ ತಾಳ್ದಿ.

ಸ್ಪುರದಕ್ಷೂಣ ವಿಷಾಣಕೊಟಿ ದಳಿತ ಪ್ರೋತ್ತುಂಗವಲ್ಮೀಕನು
ದ್ದುರ ಗಂಭೀರ ಪಯೋದನಾದತಿಪುಷ್ಟಾಂಗಂ ಬೃಹತ್ಕಂಧರಾಂ
ತರನುದ್ದಾಮಬಳಂ ಮಹಾಗಹನದೊಳ್ ಸಂಜೀವಕಂ ಕೂಡೆ ಸಂ
ಚರಿಸುತ್ತಿರ್ದುದನೂಪೀನಕಕುದಂ ತನ್ವಿಚ್ಚೆಯಿಂ ನಿಚ್ಚಲುಂ  ೭೬

೭೫. ಅಷ್ಟರಲ್ಲಿ ಇತ್ತ ಪರಿಶುದ್ಧವಾದ ಸರೋವರದ ಶೈತ್ಯದಿಂದ ಕೂಡಿದುದೂ ಕಾಡಿನ ಮದ್ದಾನೆಯ ಮದಗಂಧದಿಂದ ಆಮೋದವನ್ನಂಟು ಮಾಡುವುದೂ ಕಿರಾತಯುವತಿಯರ ಮುಂಗುರಳ ಮಾಲೆಯನ್ನು ಕುಣಿಸುವುದೂ ಅದ ಮಂದ ಮಾರುತವೂ ಶ್ರಮವನ್ನು ಪರಿಹರಿಸಲು ಮೆಲ್ಲಮೆಲ್ಲನೆ  ಸಂಜೀವಕನು ಆ ಯಮುನಾತೀರದ ಪರಿಶುದ್ದ ನೀರಿನ ವಿಸ್ತಾರದ ಕಡೆಗೆ ಸಮೀಪಿಸಿತು. ಹಾಗೆ ಹೇಗೋ ಶರೀರಸುಖವನ್ನೂ ಹೊಂದಿ ಯಮುನಾ ನದೀ ತೀರದಲ್ಲಿ ಸ್ವೇಚ್ಛೆಯಿಂದ ನಲಿನಲಿದು ಹೊಳೆ ಹೊಳೆಯುವ ಪಚ್ಚೆ ಬಣ್ಣದ ಹಸುರು ಎಳೆಗರಿಕೆಯ ಅಹಾರದಿಂದಲೂ ಸ್ವಚ್ಚವೂ ರುಚಿಕರವೂ ಅದ ನೀರನ್ನು  ಕುಡಿದೂ ಮೆಲ್ಲಮೆಲ್ಲನೆ  ಮೆಲುಕಾಡಿ ಮಾರ್ಗಾಯಾಸವನ್ನು  ಪರಿಹರಿಸಿಕೊಂಡು ಕೆಲವು ದಿನಗಳಲ್ಲಿ  ಚಂದ್ರಶೇಖರನ ನಂದಿಯ ಅಕಾರವನ್ನು ತಾಳಿ, ೭೬. ಪಳಪಳನೆ ಹೊಳೆಯುವುವೂ ಬಲಿಷ್ಠವೂ  ಅದ ತನ್ನ ಕೊಂಬುಗಳಿಂದ ಎತ್ತರವಾದ ಹುತ್ತಗಳನ್ನು ತಿವಿದು ಸೀಳುತ್ತಲೂ ಗಂಭಿರವಾದ ಗುಡುಗಿನ ಶಬ್ಬವುಳ್ಳದೂ ಚಿನ್ನಾಗಿ ಕೊಬ್ಬಿದ ಅಂಗವುಳ್ಳುದೂ ದಪ್ಪವಾದ ಕುತ್ತಿಗೆಯುಳ್ಳದೂ ಉದ್ದಾಮ ಬಲಶಾಲಿಯೂ ಸುಂದರವಾದ ಎತ್ತರವಾದ ಹಿಣಿಲುಳ್ಳುದೂ  ಅದ ಸಂಜೀವಕನೂ ಆ ಮಹಾರಣ್ಯದಲ್ಲಿ ಸ್ವೇಚ್ಛೆಯಾಗಿ ನಿತ್ಯವೂ ಸಂಚರಿಸುತ್ತಿತ್ತು.

ಅಂತಿರ್ಪುದುಮಾ ವನಾಂತರದೊಳಪ್ರತಿಮಮಪ್ಪ ವಿಕ್ರಮಗುಣಮೇ ತನಗೆ ಸ್ವಾಮಿ ಸಂಪದಮಾಗಿಯಂ ಗೂಢಲಕ್ಷಣ  ಭಿನ್ನಪ್ರತಿಸಂಧಾನ ಸಂದೂಷಣ ಒರಚಿತ್ತಪರೀಕ್ಷಾ ಲಕ್ಷಣಮೆಂಬ ಮಂತ್ರಿ ಗುಣಗಳಿಂ ನೆರೆದ ಜಂಬುಕಂಗಳೇ ಮಂತ್ರಿಗಳಾಗಿಯಂ ಮೃಗಗಣ ನಿಚಿತಮಪ್ಪ ಗಹನಾಂತರಾಳಮೇ ತನಗೆ ಜನಪದಮಾಗಿಯಂ ಅತಿನಿಶಿತಖಕುಲಿಶಮುಖವಿದಾರಿತ ಮದಾಂಧಗಂಧ ಸಿಂಧರುಗಳ ಕಳೇಬರಂಗಳೇ ತನಗೆ ಭಂಡಾರಮಾಗಿಯಂ ಅಖಿಲಶಾರ್ದೂಲಂಗಳೆ ಮುತ್ತಬಲಮಾಗಿಯಂ ನಿಸರ್ಗ ದುರ್ಗಗಿರಿ ಗುಹಾಗಹ್ವರಂಗಳೇ ದುರ್ಗಂಗಳಾಗಿಯೂ ಅಖಿಳವರಕ್ಷ ವರಾಹ ಶ್ವಾಪದಂಗಳೇ ಬಲಂಗಳಾಗಿಯು ವಿಶಾಲಶಿಲಾತಲಂಗಳೇ ಸಿಂಹಾಸನಂಗಳಾಗಿಯೂ ಅತಿ ಸಂಛನ್ನ ಬಹಳ ತರುಶಾಖಾನಿಚಯಚ್ಚಾಯೆಯೇ ಧವಳಚ್ಛತ್ರಮಾಗಿಯಂ ಇಂತು ಮೃಗಾರಾಜ ಪದವಿಯೊಳಾಪತ್ಯಮನಾಸ್ವೀಕೃತಂ ಮಾಡಿ.

ಭಂಗುರ ಭೀಷಣ ಭ್ರಕುಟಿ ದಂಷ್ಟ್ರನುದಗ್ರದವಾನಲ ಪ್ರಭಾ
ಭಂಗ ಪಿಶಂಗ ಕೇಸರಟಾವೃತ ರೌದ್ರಮುಖಂ ಮಧಾಂಧಮಾ
ತಂಗಘಟಾನಪಟಿಷ್ಠಕಠೋರನಖಾಳಿ ನಾಮದಿಂ
ಪಿಂಗಳಕಂ ಮೃಗೇಂದ್ರನೊಸೆದಿರ್ಪುದತರ್ಕ್ಯ ಪರಾಕ್ರಮಕ್ರಮಂ  ೭೭

ಅಂತಿರ್ದೊಂದು ದೆವಸಮಾ ಮೃಗಾರಾಜನಜೇಯ ಸಾಮಜಘಟೆಯಂ ಬೆದರಿಬೆಂಕೊಂಡು ನಿಜನಿಶಿತಖಕುಲಿಶಮುಖದಿಂ ಸೀೞ್ದು ಸೀಳುಂಬುಳಾಡಿ ಪರಿಗತಪರಿಶ್ರಮನಾಗಿ ಜಲಗ್ರಹಣಾಭಿಲಾಷೆಯಿಂ ಯಮುನಾತೀರದೊಳ್ ಬರುತಿರ್ದು

ವ|| ಹಾಗಿರಲು ಆ ವನಾಂತರದಲ್ಲಿ ಅಪ್ರತಿಮಾನಾದ ವಿಕ್ರಮಾ ಗುಣವೇ ತನಗೆ ಸ್ವಾಮಿ ಸಂಪದವಾಗಿಯೂ, ಗೂಢ ಲಕ್ಷಣ, ಭಿನ್ನಪ್ರತಿಸಂದಾನ ಸಂ ದೂಷಣ ಪರಚಿತ್ತ ಪರೀಕ್ಷಾ ಲಕ್ಷಣ ಎಂಬ ಮಂತ್ರಿಗಿರಬೇಕಾದ ಗುಣಗಳಿಂದ ಕೂಡಿದ ನರಿಗಳೆ ಮಂತ್ರಿಗಳಾಗಿಯೂ ಮೃಗಸಮೂಹದಿಂದ ಕೂಡಿದ ಕಾಡಿನ ಅಂತರಾಳವೇ ತನಗೆ ಜನಪದವಾಗಿಯೂ ಅತ್ಯಂತ ಹರಿತವಾದ ಉಗುರುಗಳೆಂಬ ವಜ್ರಾಯುಧ ಮುಖದಿಂದ ಸೀಳಿದ ಮದ್ದಾನೆಗಳ ಕಳೇಬರಗಳೇ ತನಗೆ ಭಂಡಾರವಾಗಿಯೂ ಅಖಿಲ ಶಾರ್ದೂಲಗಳೇ  ಮಿತ್ರಬಲವಾಗಿಯೂ ಸಹಜವಾದ ದುರ್ಗಗಿರಿಗುಹಾಕಂದರಗಳೇ ದುರ್ಗಗಳಾಗಿಯೂ ಸಮಸ್ತ ತೋಳ  ಕಾಡು ಹಂದಿ ಹುಲಿಗಳೇ ಸೈನ್ಯಗಳಾಗಿಯೂ ವಿಶಾಲ ಶಿಲಾತಳಗಳೇ ಸಿಂಹಾಸನಗಳಾಗಿಯೂ ಚೆನ್ನಾಗಿ ಅವರಿಸಿದ ದಟ್ಟವಾದ  ಮರಗಳ ಕೊಂಬೆಗಳ ನೇರಳೆ ಬೆಳ್ಗೊಡೆಯಾಗಿಯೂ ಹೀಗೆ ಮೃಗಾರಾಜ ಪದವಿಯಲ್ಲಿ ಅಪತ್ಯವನ್ನು ತಾನಾಗಿ ಸ್ವೀಕರಿಸಿ ೭೭. ಕೋಪದಿಂದ  ಬಾಗಿರುವ ಭಯಂಕರವಾದ ಹುಬ್ಬುಗಳಿಂದ ಕೂಡಿದ ದಾಡೆಯುಳ್ಳದೂ ಅತಿಶಯವಾದ ಕಾಡುಗಿಚ್ಚಿನ ಕಾಂತಿಯನ್ನು ಮೀರಿಸುವ ಹಳದಿ ಕೆಂಪು ಮಿಶ್ರಿತವಾದ ಕೇಸರಗಳಮದದಿಂದ ಕೂಡಿದ ಭಯಂಕರ ಮುಖವುಳ್ಳದೂ ಮದದಿಂದ ಕುರುಡಾದ ಆನೆಗಳ ಸಮೂಹವನ್ನು ಸೀಳುವ ಶಕ್ತಿಯಳ್ಳ ಕಠೋರ ನಖಗಳನ್ನಳ್ಳದೂ ಅದ ಪಿಂಗಳಕನೆಂಬ ಹೆಸರಿನ ಮೃಗೇಂದ್ರನು ಮಾತಿಗೆ ಮೀರದ ಪರಾಕ್ರಮದಿಂದ ಕೂಡಿದ್ದಿತು. ವ|| ಹಾಗೆ ಇದ್ದೊಂದು ದಿವಸ ಆ ಮೃಗಾದಿರಾಜನು ಜಯಿಯಸಲಾರದ ಅನೆಯ ಸಮೂಹವನ್ನೂ ಬೆದರಿಸಿ ಬೆನ್ನಟ್ಟಿ ತನ್ನ ನಿಶಿತನಖ ಕುಲಿಶಮುಖದಿಂದ ಸೀಳಿ ಸೂಸಾಟವಾಡಿ ಪರಿಶ್ರಮವನ್ನು ಹೋಗಲಾಡಿಸಿಕೊಂಡು ನೀರು ಕುಡಿಯಬೇಕೆಂದು ಯಮುನಾ ತೀರದಲ್ಲಿ ಬರುತ್ತಿದ್ದಿತು.

ಘನನಿನದಕ್ಕನುರೂಪಮಿ
ದೆನೆ ಸಂಜೀರ್ವಕನಳುರ್ಕೆಯಿಯಂ ಕೆಲೆಚಿi ಮಹಾ
ಧ್ವನಿಯಂ ತೊಟ್ಟನೆ ಕೇಳ್ದೊಡೆ
ಮನದೊಳ್ ಪುದಿದೊಂದು ಶಂಕೆ ನಿಲೆ ಮೃಗರಾಜಂ  ೭೮

ಇದು ನಿರ್ಘಾತಮೊ ಮೇಣ್ ನೆಲಂ ಮೊೞಗಿತೋ ಮೇಣ್
ಘೋರನಿರ್ಘೋಷಮುಣ್ಮಿದುದೆಂಬಂತೆಸಿಡಿಲ್‌ಸಿಡಿಲ್ದೆಗಿತೋಪೇೞ*ಂತಿದೇನೆಂದುಚಿ
ತ್ತದೊಳಾವರ್ತಿಸಿ ನೋಡೆ ವಿಸ್ಮಯಮದೊಂದಾಗಿರ್ಪಿನಂ ನೀರ್ಗೆ ಪೋ
ಗದೆ ತೃಷ್ಣಾತುರನಾಗಿಯೂಂ ಮಗುದಾ ಸಿಂಹಂ ಭಯ ಬ್ರಾಂತಿಯಿಂ  ೭೯

ಅಂತತಿಕ್ಷುಭಿಹ್ಲದಯನಾಗಿ ತೊಟ್ಟನೆ ಮಗುಛಿಲ್ಲಿಯಂ ನಿಲ್ಲದತಿ ವಿಸ್ತೀರ್ಣಶಾಖಾ ಸಂಕೀರ್ಣವಪ್ಪುದೊಂದು ವಟವಿಟಪಿಯ ಕೆಳಗೆ ತರುಣ ಹರಿಣ ವೃಕ ವರಾಹ ಋಕ್ಷತರಕ್ಷು ಪ್ರಮುಖ ನಿಖಿಲ ಮೃಗಗಣ ಪರಿವೃತನುಮಾಗಿಯಾಕಾರಸಂವರಣೆಯನಚಿಟುಮಾಡಿ ಕೊಂಡಿರ್ಪುದು.

ಆ ಪ್ರಸ್ತಾವದೊಳ್ ಕರಟಕನುಂ ದವನಕಮೆಂಬೆರಡು ನರಿಗಳ್ ಆ ಸಿಂಹಕ್ಕನ್ವಯಯಗುತರುಂ ಹಿತರುಂ ಬುದ್ದಿವೃದ್ದರುಮಪ್ಪ ಮಂತ್ರಸೂನುಗಳ    ಪ್ಪುದಱೆಂ ಪಿಂಗಳಕನಿರವಂ ಕಂಡು ದಮನಕಂ  ಕರಟಕಂಗೆಂಗುಂ* ನಮ್ಮರಸನೀಗಳ್ ತೃಷಾರ್ತನಾಗಿ ಜಗುನೆಗೆ ಪೋಗುತ್ತುಮಾಕಸ್ಮಿಕಂ ಮಗು*ೞೆ ಬಂದು ಅಪಮಾನಂಬಟ್ಟ ಉಪಧಾವಿಧಶದ್ಧನಪ್ಪ ಮಂತ್ರಿಯಂತಾಕಾರ ಸಂವರಣೆಯನುಂಟು ಮಾಡಿಕೊಂಡಿರ್ಪುದಾವ ಕಾರಣಮಾರಯ್ವಂ ಬನ್ನಿಮೆಂಬುದುಂ.

೭೮. ಇದು ಸಿಡಿಲೆರಗಿದ ಶಬ್ದವೋ ನೆಲವು ಮೊಳಗಿತೋ ಘೋರ ನಿರ್ಘೋಷವನ್ನು ಹೊಮ್ಮಿತೆಂಬಂತೆ ಸಿಡಿಲು ಸಿಡಿದು ಎರಗಿತೋ ಹೇಳು ಇದೇ ಎಂದು ಮನಸ್ಸನಲ್ಲಿ ಪುನಃ ಪುನಃ ವಿಚಾರಿಸಲು ವಿಸ್ಮಯವೆಲ್ಲ ಒಂದಾಗಿರಲು ಬಾಯಾರಿಕೆಯಾಗಿದ್ದರೂ ನೀರಗೆ ಹೋಗದೆ ಆ ಸಿಂಹವು ಭಯಭ್ರಾಂತಿಯಿಂದ ಹಿಂದಿರುಗಿತು. ವ|| ಹಾಗೆ ಅತ್ಯಂತ ಹೃದಯಕ್ಷೋಭೆಯಿಂದ ಕೂಡಲೇ ಹಿಂದಿರುಗಿ ಎಲ್ಲಿಯೂ ನಿಲ್ಲದೆ ಅತಿ ವಿಸ್ತೀರ್ಣವಾದ ಕೊಂಬೆಗಳಿಂದ ದಟ್ಟವಾದ ಒಂದು ವಟವೃಕ್ಷದ ಕೆಳಗೆ ತರುಣ ಹರಿಣ ತೋಳ, ಕಾಡು ಹಂದಿ ಕರಡಿ ಹುಲಿ ಮೊದಲಾದ ನಿಖಿಲ ಮೃಗಸಮೂಹದಿಂದ ಪರಿವೃತನಾಗಿ ಆಕಾರವನ್ನು ಮರೆಮಾಡಿಕೊಂಡಿದ್ದಿತು.ಅ ಸಂದರ್ಭದಲ್ಲಿ ಕರಟಕ ದಮನಕ ಎಂಬ ಎರಡು ನರಿಗಳು ಆ ಸಿಂಹಕ್ಕೆ ಅನ್ವಯಾಗತರೂ ಹಿತರೂ ಬುದ್ಧಿವೃದ್ಧರು ಅದ ಮಂತ್ರಿ ಪುತ್ರರಾದುದರಿಂದ ಪಿಂಗಳಕನನ್ನು ನೋಡಿ ದಮನಕನು ಕರಟಕನಿಗೆ ಹೀಗೆ ಹೇಳಿತು: ನಮ್ಮ ಅರಸನು ಈಗ ತೃಷಾರ್ತನಾಗಿ ಯಮುನೆಗೆ ಹೋಗುತ್ತ ಆಕಸ್ಮಿಕವಾಗಿ ಹಿಂದಿರುಗಿ ಬಂದು ಅಪಮಾನಕ್ಕಿಡಾದ ಉಪಧಾವಿಶುದ್ದನಾದ ಮಂತ್ರಿಯಂತೆ ಅಕಾರವನ್ನು  ಮರೆಯಾಗಿಟ್ಟುಕೊಂಡಿರುವುದಕ್ಕೆ ಕಾರಣವೇನು ಎಂದು ವಿಚಾರಿಸೋಣ ಬನ್ನಿರಿ ಎನ್ನಲು ಕರಟಕನೆಂದನು; ನಾವಾದರೋ ಹಳೆಯರ ಮಕ್ಕಳೂ ಅಪ್ತರೂ ಅಲ್ಲದೆ ಯಾವ ಕಾರ್ಯಕ್ಕೂ ಅಲ್ಲ. ನಮ್ಮ ಅರಸನು ಈಗ ಸ್ವಲ್ಪ ವಿರಸನೂ ಅಪಮಾನಿತನೂ ಆಗಿರುವನೂ. ಈ ಸಂದರ್ಭದಲ್ಲಿ ನಾವು ಸ್ವಾಮಿಹಿತಮಹತ್ವವನ್ನು ಕೈಕೊಂಡು ನುಡಿಯುವುದು ನೀತಿಯಲ್ಲ. ಈತನು ಏನನ್ನು ಇಚ್ಚಿಸುತ್ತಿದ್ದಾನೆಂಬುದನ್ನೂ ಅವನು ತಿಳಿಯುವುದು ಸರಿಯಲ್ಲ. ಈತನ ಅವಸ್ಥೆಯನ್ನು ಕಂಡು  ಈ ಹೊಸ ಮಂತ್ರಗಳು ಹೊಸ ಅಕಾರಿಗಳೂ ಏನು ಹೇಳುವರೋ ಅದನ್ನು ಕೇಳುತ್ತರುವುದೇ ಸಾಕು* ಈಗ ಏನಾದರೊಂದನ್ನು ನುಡಿದೆವೆಂದರೆ ದುಷ್ಟಪರಿವಾರಗಳಿಂದ ಆವೃತನಾದ ಅರಸನು ನಮ್ಮನ್ನುಹೇಗೆ ತಿಳಿಯುವನೆಂದು ಅರಿಯುವುದು ಹೇಗೆ? ಅದರಿಂದ ನಾವು ಮೌನವಾಗಿರುವುದೇ ಲೇಸು* ಅಲ್ಲದೆ  ನಮ್ಮಂತ ಆಪ್ತರೂ, ಹಿತರೂ ಬುದ್ದಿವಂತರೂ ಆಗಿರುವವರನ್ನು ನಂಬದೆ ಅನಾಪ್ತರೂ ಅಹಿತರೂ ಅವಿನೀತರೂ ಆದವರನ್ನು ನಂಬಿ ಪ್ರಧಾನರನ್ನಾಗಿ ಮಾಡಿ ನಡೆಯಿಸಿದ ಮೂಢ ಸಿಂಹಕ್ಕೆ ಏನು ಮಾಡಿದರೂ ಕಾರ್ಯಹಾನಿಯಾಗದೆ ಹೋಗದು.

ಕರಟಕನೆಂಗುಂ: ನಾವಪ್ಪೊಡೆ ಪೆಳಯರ ಮಕ್ಕಳುಮಾಪ್ತರುಮೆಂಬನಿತೆಯಲ್ಲದೆ ಅವ ಕಾರ್ಯಕ್ಕುಮಲ್ಲಂ, ನಮ್ಮರಸನೀಗಳ್ ಕರಂ ವಿರಸನುಪಮಾನಿತನುಮಾಗಿರ್ದಪಂ ಈಯವಸರದೊಳ್ ನಾಮ ಸ್ರಾಮಿಹಿತಮಹತ್ವಮಂ ಕೈಕೊಂಡು ನುಡಿಸುವುದು ನಯಮಲ್ಲಂ. ಈತನೇ ತರ್ಕಿಚ್ಪೈಸಿದನೆದನೞೆಯಲ್ ಬಾರದು. ಈತನಿರವಂ ಕಂಡೀಯಭಿನವ ಪ್ರಧಾನರುಂ ಪೊಸಪಸಾಯ್ತರುಂ ತಾವೇನಂ ನುಡಿವರ್ ನಾವದಮ ಕೇಳಿತ್ತಮಿರ್ಪದೆ ಸಾಲ್ಗುಂ ಈಗಳೇನಾನುಮೊಂದು ನುಡಿದೆವಪ್ಪೊಡೆ, ದುಷ್ಟಪರಿವಾರವೇಷ್ಟಿತನಪ್ಪರಸಂ ನಮಗೇನಂ ಬಗೆವನೆಂಬುದನೆಂತವೆವು, ಅದರಂ ನಾಮುಸಿರದಿರ್ದಪುದೇ  ಕಜ್ಜಂ ಅದಯಲ್ಲದೆಯುಂ ನವ್ಮ್ಮಂತಾಪ್ತರಂ ಹಿತರಂ ಬುದ್ದಿವಂತರುಮನ ವಿಶ್ವಾಸಂಗೆಯ್ದು ಅನಾಪ್ತರುಮನಹಿತರುಮನವಿನೀತರುಮಂ ವಿಶ್ವಾಸಂಗೆಯ್ದು ಪ್ರಧಾನರಂ ಮಾಡಿ ನಡಪಿದ ಮೂಢಸಿಂಹಕ್ಕೆ ಏಗೆಯ್ದಂ ಕಾರ‍್ಯ ಹಾನಿಯಾಗದೆ ಪೋಗದು ಅದೆಂತೆನೆ:

ಶ್ಲೋ|| ಅಭ್ಯಂತರಗತಾ ಬಾಹ್ಯಾ  ಬಾಹ್ಯಾಶ್ಚಾಭ್ಯಂತರಂ Uತಾಃ
ಯೈರ್ನರಾ ನಿಧನಂ ಯಾಂತಿ ಯಥಾ ರಾಜಾ ಕಚದ್ರಮಃ       ||೫||

ಟೀ || ಅರಸುಗಳ್ ಒಳಗೆ ನಡೆವವರಂ ಹೊರಗಿಕ್ಕಲಾಗದು ಹೊರಗೆ ನಡೆವರರನೊಳಗಿಕ್ಕಲಾಗದು. ಅಹಗೆ ಮಡಿದವಂ ಕಿಡುವಂ. ಅದು ಎಹಗೆಂದೊಡೆ ಕಚದ್ರುಮದೆಂಬರಸಿನಹಗೆ ಎನೆ ದವನಕನದೆಂತನೆ ಕರಟಕಂ ಪೇೞ್ಗುಂ